lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >> ತುಮಕೂರು ಜಿಲ್ಲೆಯಲ್ಲಿ 2018 ನೇ ಮೇ ಮಾಹೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳ... >> ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< July 2017 >
Mo Tu We Th Fr Sa Su
          1 2
3 4 5 6 7 8 9
10 11 12 13 14 15
17 18 19 20 21 22 23
24 25 26 27 28 29 30
31            
Sunday, 16 July 2017
Crime Incidents 16-07-17

ಪಾವಗಡ ಪೊಲೀಸ್ ಠಾಣಾ ಮೊ,ನಂ 174/2017 ಕಲಂ 279, 337 IPC & 187 IMV Act.

ದಿನಾಂಕ:15/07/2017 ರಂದು 17-45 ಗಂಟೆಗೆ ಪಿರ್ಯಾದುದಾರರಾದ ಎಸ್,ಆರ್ ಶ್ರೀನಿವಾಸ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನನ್ನ ದೊಡ್ಡಪ್ಪನ ಮಗನಾದ S V ಪರಮೇಶ ಬಿನ್ ಹೆಚ್, ವೆಂಕಟೇಶಪ್ಪ ರವರು ಅವರ ಅಕ್ಕನಮಗಳಾದ ಚೂಡಾಮಣಿ  T S ರವರನ್ನು ಮುರಾರ್ಜಿ ದೇಸಾಯಿ ಶಾಲೆಯಿಂದ ಕರೆದುಕೊಂಡು ಜೆ ಅಚ್ಚಮ್ಮನಹಳ್ಳಿ ಗ್ರಾಮಕ್ಕೆ ಹೋಗಲು KA06-EC-778 ಬೈಕ್ ನಲ್ಲಿ ಮಧ್ಯಾಹ್ನ 12-45 ಗಂಟೆಯಲ್ಲಿ ಪಾವಗಡ ಕಲ್ಯಾಣದುರ್ಗ ರಸ್ತೆಯಲ್ಲಿನ ಪಳವಳ್ಳಿ ಕೆರೆಯ ಏರಿಯ ಮೇಲಿನ ರಸ್ತೆಯಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ( ಪಾವಗಡದ ಕಡೆಯಿಂದ ) ಬಂದ KA03-MT-6302 ಕೆಂಪು ಬಣ್ಣದ ಮಾರುತಿ ಶಿಫ್ಟ್ ವಾಹನದ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪರಮೇಶ ಓಡಿಸುತ್ತಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದು, ಇದರ ಪರಿಣಾಮವಾಗಿ ಪರಮೇಶ ಮತ್ತು ಹಿಂದೆ ಕುಳಿತಿದ್ದ S V ಚೂಡಾಮಣಿ ಇಬ್ಬರೂ ಕೆಳಗೆ ಬಿದ್ದು ಚೂಡಾಮಣಿಗೆ ಕುತ್ತಿಗೆ ಮೂಳೆ, ಬಲಗಾಲಿನ ಮೊಣಕಾಲಿಗೆ, ಹಾಗೂ ಮೂಗಿನ ಕೆಳಭಾಗ, ಬಾಯಿಗೆ ಮತ್ತು ಎಡಗೈಗೆ  ಬಲವಾಗಿ ಪೆಟ್ಟು ಬಿದ್ದಿರುತ್ತೆ. ಹಾಗೂ ಪರಮೇಶನಿಗೆ ಬಲಭಾಗದ ಭುಜದ ಮೂಳೆ ಮುರಿದು ಮೈ,ಕೈ ಗೆ ಇತರೆ ಕಡೆಗಳಲ್ಲಿ ಪೆಟ್ಟು ಬಿದ್ದು ರಕ್ತಗಾಯಗಳಾಗಿರುತ್ತೆ. ಅಪಘಾತಪಡಿಸಿದ ಕಾರಿನ ಚಾಲಕ ಕಾರನ್ನು ನಿಲ್ಲಿಸದೇ ಕಾರನ್ನು ತೆಗೆದುಕೊಂಡು ಹೊರಟು ಹೋಗಿರುತ್ತಾನೆ. ಮೇಲ್ಕಂಡ ಅಪಘಾತಪಡಿಸಿದ KA03-MT-6302 ವಾಹನದ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂತ ನೀಡಿದ ದೂರು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಯು.ಡಿ.ಆರ್. ನಂ: 19/2017 ಕಲಂ 174 ಸಿ.ಆರ್.ಪಿ.ಸಿ.

ದಿನಾಂಕ:15/07/2017 ರಂದು ಬೆಳಿಗ್ಗೆ 9-00 ಗಂಟೆಗೆ ಪಿರ್ಯಾದಿಯಾದ ರಂಗನಾಥ ಕೆ. ಬಿನ್ ಸಿ.ಎಸ್.ಕುಮಾರ್, 31 ವರ್ಷ, ವಕ್ಕಲಿಗರು ಜನಾಂಗ, ಎ.ಕೆ.ಕಾವಲ್ (ವಡ್ಡರಹಳ್ಳಿ), ಗುಳೂರು ಹೋಬಳಿ, ತುಮಕೂರು ತಾಲ್ಲೋಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ  ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ನನ್ನ ಅಜ್ಜಿಯಾದ ಶ್ರೀಮತಿ ಪುಟ್ಟಮಾಯಮ್ಮ ಕೊಂ ಲೇಟ್ ಸಿದ್ದಗಂಗಯ್ಯ ರವರು ತನ್ನ ಮಗನಾದ ಸಿ.ಎಸ್.ಕುಮಾರ್ ಬಿನ್ ಲೇಟ್ ಸಿದ್ದಗಂಗಯ್ಯರವರು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ಇವರ ತಾಯಿಗೆ ಸುಮಾರು 90 ವರ್ಷ, ವಯಸ್ಸಾಗಿದ್ದು, ಇವರಿಗೆ ಹೊಟ್ಟೆಯಲ್ಲಿ ಆಗಾಗ್ಗೆ ನೋವು ಕಾಣಿಸಿಕೊಳ್ಳುತ್ತಿದ್ದು, ಇವರಿಗೆ ಎಲ್ಲಾ ಆಸ್ಪತ್ರೆಗಳಲ್ಲಿ ತೋರಿಸಿದ್ದರೂ ಸಹ ಗುಣವಾಗಿರುವುದಿಲ್ಲ. ದಿನಾಂಕ-14/07/2017 ರಂದು ಸಂಜೆ ಸುಮಾರು 6-00 ಗಂಟೆ ಸಮಯದಲ್ಲಿ ಹೊಟ್ಟೆ ನೋವು ಬಂದು ಆ ನೋವನ್ನು ತಾಳಲಾರದೆ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ನಮ್ಮ ಮನೆಯಲ್ಲಿ ಯಾವುದೋ ಒಂದು ಹಗ್ಗದಿಂದ ಮೇಲ್ಛವಾಣೆಯ ಕಬ್ಬಿಣದ ಹುಕ್ಕಿಗೆ ಕಟ್ಟಿ, ಕುತ್ತಿಗೆಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿದ್ದು, ಇದನ್ನು ನನ್ನ ಮಾವನಾದ ಡಿ.ಎಲ್.ರವಿ ಎಂಬುವವರು ನೋಡಿರುತ್ತಾರೆ, ಆಗ ಸಮಯ ಸಂಜೆ ಸುಮಾರು 6-30 ಆಗಿದ್ದು, ನಂತರ ರವಿರವರು ನನಗೆ ಫೋನ್ ಮುಖಾಂತರ ತಿಳಿಸಿದ್ದು ನಾನು ಸದರಿ ಸ್ಥಳಕ್ಕೆ ಹೋಗಿ ನನ್ನ ಅಜ್ಜಿಯನ್ನು ನೋಡಲಾಗಿ ನೇಣು ಬಿಗಿದುಕೊಂಡಿದ್ದ ಸ್ಥತಿಯಲ್ಲಿರುವುದನ್ನ ಕಂಡು ಜೀವವಿರಬಹುದೆಂದು ನೇಣಿನಿಂದ ಕೆಳಗೆ ಇಳಿಸಿ  ಯಾವುದೋ ಒಂದು ವಾಹನದಲ್ಲಿ ತುಮಕೂರಿಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ತುಮಕೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವೈಧ್ಯಾಧಿಕಾರಿಗಳು ನನ್ನ ಅಜ್ಜಿ ಪುಟ್ಟಮಾಯಮ್ಮರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ, ನನ್ನ ಅಜ್ಜಿಯು ಅವರ ಹೊಟ್ಟೆನೋವನ್ನು ತಾಳಲಾರದೆ ತಮ್ಮಷ್ಟಕ್ಕೆ ತಾವೇ ನೇಣುಬಿಗಿದುಕೊಂಡು ಮೃತಪಟ್ಟಿರುತ್ತಾರೆ ವಿನಹಾ ಅವರ ಸಾವಿನಲ್ಲಿ ಯಾವುದೇ ಅನುಮಾನ ಇರುವುದಿಲ್ಲ, ಈ ವಿಚಾರವನ್ನು ನಮ್ಮ ಸಂಬಂಧಿಕರಿಗೆಲ್ಲಾ ತಿಳಿಸಿ  ತಡವಾಗಿ ಠಾಣೆಗೆ ಬಂದು ಮುಂದಿನ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಎಂದು ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಯು.ಡಿ.ಆರ್.ನಂ.13/2017, ಕಲಂ: 174 ಸಿ.ಆರ್.ಪಿ.ಸಿ.

ದಿನಾಂಕ:15/07/2017 ರಂದು ಬೆಳಿಗ್ಗೆ 09:10 ಗಂಟೆಗೆ ಪಿರ್ಯಾದಿ  ಉಮಾದೇವಿ ಕೋಂ ರಾಜಾನಾಯ್ಕ  30 ವರ್ಷ ಕೂಲಿ ಕೆಲಸ ಲಂಬಾಣಿ ಜನಾಂಗ ದಾದಗೊಂಡನಹಳ್ಳಿ ಗ್ರಾಮ ಐ.ಡಿ.ಹಳ್ಳಿ  ಹೋಬಳಿ ಮಧುಗಿರಿ ತಾಲ್ಲೋಕ್, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ಈಗ್ಗೆ ಸುಮಾರು 18 ವರ್ಷದ ಹಿಂದೆ ನನ್ನನ್ನು ದಾದಗೊಂಡನಹಳ್ಳಿ ಗ್ರಾಮದ ರಾಜಾನಾಯ್ಕ ಎಂಬುವರಿಗೆ ಕೊಟ್ಟು ಮದುವೆ ಮಾಡಿದ್ದು ನಮಗೆ ಇಬ್ಬರೂ ಗಂಡು ಮಕ್ಕಳು ಹಾಗೂ ಇಬ್ಬರೂ ಹೆಣ್ಣು ಮಕ್ಕಳಿರುತ್ತಾರೆ. ನಾನು ಮತ್ತು ನನ್ನ ಗಂಡ ರಾಜಾನಾಯ್ಕರವರು ಕೂಲಿ ನಾಲಿ ಮಾಡಿಕೊಂಡು ಮಕ್ಕಳೊಂದಿಗೆ ಅನ್ಯೋನ್ಯವಾಗಿ ಸಂಸಾರ ಮಾಡಿಕೊಂಡಿದ್ದೆವು. ಈಗಿರುವಾಗ ಇತ್ತಿಚೇಗೆ ನಮ್ಮ ಊರಿನಲ್ಲಿ ಮಳೆ ಬೆಳೆ ಇಲ್ಲದೇ ಕೂಲಿ ಕೆಲಸ ಹೆಚ್ಚಾಗಿ ಸಿಗುತ್ತಿರಲಿಲ್ಲ ಹಾಗಾಗಿ ಸಂಸಾರ ನಡೆಸಲು ತೊಂದರೆಯಾಗಿದ್ದರಿಂದ ಬೇರೆ ಎಲ್ಲಿಯಾದರೂ ಹೋಗಿ ಜೀವನ ಮಾಡೋಣವೆಂತ ನಾನು ಮತ್ತು ನನ್ನ ಗಂಡ ನಿರ್ದರಿಸಿ ಈಗ್ಗೆ ಎರಡು ತಿಂಗಳ ಹಿಣದೆ ನಾನು, ನನ್ನ ಗಂಡ ರಾಜಾನಾಯ್ಕ ಹಾಗೂ ನಮ್ಮ ನಾಲ್ವರು ಮಕ್ಕಳೊಂದಿಗೆ ಬೆಂಗಳೂರಿನ ಲೊಟ್ಟೆಗೊಲ್ಲಹಳ್ಳಿಗೆ ಹೋಗಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದು ನಾನು ಮತ್ತು ನನ್ನ ಗಂಡ ಇಬ್ಬರೂ ಸಣ್ಣ ಪುಟ್ಟ ಕೂಲಿ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವು. ಈ ಬಗ್ಗೆ  ನನ್ನ ಗಂಡ ರಾಜನಾಯ್ಕ ಊರನ್ನು ಬಿಟ್ಟು ಬೆಂಗಳೂರಿಗೆ ಬರುವಂತಾಯಿತಲ್ಲ ಎಂತಾ ಆಗಾಗ್ಗೆ ಮನಸ್ಸಿಗೆ ಬೇಜಾರು ಮಾಡಿಕೊಳ್ಳುತ್ತಿದ್ದರು ಆ ಸಮಯದಲ್ಲಿ ನಾನು ನನ್ನ ಗಂಡ ರಾಜನಾಯ್ಕನಿಗೆ ಸಮಧಾನ ಹೇಳಿತ್ತಿದ್ದೆನು.ನಮ್ಮ ಮಕ್ಕಳನ್ನು ಶಾಲೆಗೆ ಸೇರಿಸಬೇಕಾಗಿದ್ದರಿಂದ ಊರಿನಲ್ಲಿ ಬಿಟ್ಟಿದ್ದ ನಮ್ಮ ಬಾಬ್ತು ಆಧಾರ್ ಕಾರ್ಡ್ ಮತ್ತು ಐ.ಡಿ.ಕಾರ್ಡ್‌ಗಳನ್ನು ತೆಗೆದುಕೊಂಡು ಬರುತ್ತಿನೆಂತಾ ದಿನಾಂಕ:10/07/17 ರಂದು ಬೆಳಿಗ್ಗೆ ಬೆಂಗಳೂರಿನಿಂದ ದಾದಗೊಂಡನಹಳ್ಳಿಗೆ ಬಂದಿದ್ದರು.ಎರಡು ಮೂರು ದಿನಗಳು ಕಳೇದರು ನನ್ನ ಗಂಡ ವಾಪಸ್ಸು ಬೆಂಗಳೂರಿಗೆ ಬರಲಿಲ್ಲಬ ಆಗ ನಾನು ನಮ್ಮ ಸಂಭಂದಿ ನಾಗನಾಯ್ಕರವರಿಗೆ ಫೋನ್ ಮಾಡಿ ನನ್ನ ಗಂಡ ರಾಜನಾಯ್ಕ ಊರಿಗೆ ಬಂದಿದ್ದಾರೆಯೇ ಎಂತಾ ಕೇಳಿದೆ ಆಗ ಅವರು ನಿನ್ನ ಗಂಡ ಊರಿಗೆ ಬಂದು ಪುನಃ ವಾಪಸ್ಸು ಬೆಂಗಳೂರಿಗೆ ಬಂದನೆಂತಾ ತಿಳಿಸಿದರು. ಆಗ ನಾನು ಇವತ್ತೋ ನಾಳೆಯೋ ಬರಬಹುದೆಂತಾ ಸುಮ್ಮನಾದೇನು ಈಗಿರುವಾಗ ದಿನಾಂಕ:14/07/2017 ರಂದು ಸಂಜೆ ಸುಮಾರು 06-00 ಗಂಟೆ ಸಮಯದಲ್ಲಿ ದಾದಗೊಂಡನಹಳ್ಳಿಯಿಂದ ಯಾರೋ ನಮ್ಮ ಸಂಬಂಧಿಕರು ನನಗೆ ಫೋನ್ ಮಾಡಿ ನಿನ್ನ ಗಂಡ ರಾಜನಾಯ್ಕನು ನಿಮ್ಮ ಮನೆಯಲ್ಲಿ ಮನೆಯ ಮುಂದಿನ ಬಾಗಿಲನ್ನು ಹಾಕಿಕೊಂಡು ಮನೆಯ ಓಳಗಡೆ ನೇಣು ಹಾಕಿಕೊಂಡು ಮೃತಪಟ್ಟಿದ್ದು ತುಂಬ ವಾಸನೆ ಬರುತ್ತಿದೆ ನೀವು ಊರಿಗೆ ಬನ್ನಿ ಎಂತಾ ತಿಳಿಸಿದರು. ಆಗ ನಾನು ಕೂಡಲೇ ನನ್ನ ಮಕ್ಕಳೊಂದಿಗೆ ದಾದಗೊಂಡನಹಳ್ಳಿಗೆ ಬಂದು ನಮ್ಮ ಮನೆಯ ಕಿಟಕಿ ಮುಖಾಂತರ ನೋಡಲಾಗಿ ವಿಚಾರ ನಿಜವಾಗಿದ್ದು ನನ್ನ ಗಂಡ ನಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದು ತುಂಬಾ ವಾಸನೆ ಬರುತ್ತಿರುತ್ತೆ. ನನ್ನ ಗಂಡ ರಾಜನಾಯ್ಕನು ತನ್ನ ಸಂಸಾರ ಸಮೇತ ಊರನ್ನು ಬಿಟ್ಟು ಬೆಂಗಳೂರಿಗೆ ಹೋಗಿ ಜೀವನ ಮಾಡುವಂತಾಯಿತಲ್ಲಾ ಎಂತಾ ಮನಸ್ಸಿಗೆ ಬೇಜಾರು ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ:10/07/2017 ರಂದು ಊರಿಗೆ ಬಂದವರು ಯಾವುದೋ ಸಮಯದಲ್ಲಿ ತನ್ನ ಮೂಲಕ ತಾನೇ ನನ್ನ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ ಅವರ ಸಾವಿನಲ್ಲಿ ಬೇರೆ ಯಾವುದೇ ಅನುಮಾನವಿರುವುದಿಲ್ಲ. ಸ್ಥಳಕ್ಕೆ ಬಂದು ಸೂಕ್ತ ಕಾನೂನು ರೀತ್ಯಾ ಕ್ರಮ ಕೈಗೊಳ್ಳ ಬೇಕೆಂದು ನೀಡಿದ ದೂರಿನ ಅಂಶವಾಗಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 132/2017 ಕಲಂ 279,337 ಐಪಿಸಿ ರೆ/ವಿ 134(&ಬಿ), 187 ಐಎಂವಿ ಆಕ್ಟ್

ದಿನಾಂಕ-15-07-2017 ರಂದು ಮಧ್ಯಾಹ್ನ 3-00 ಗಂಟೆಗೆ ಪಿರ್ಯಾದಿಯಾದ ಹರೀಶ್ ಹೆಚ್ ಜಿ ಬಿನ್ ಗಂಗವೆಂಕಟಯ್ಯ, 22 ವರ್ಷ, ಆದಿ ಕರ್ನಾಟಕ, ಬಾರ್ ಬೆಂಡಿಂಗ್ ಕೆಲಸ, ಬಂಗಾರಪ್ಪ ಕಾಲೋನಿ, ಹೆಬ್ಬೂರು, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್ ಮಾಡಿಸಿ ದೂರಿನ ಅಂಶವೇನೆಂಧರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸಿವಾಗಿರುತ್ತೇನೆ, ಕುಣಿಗಲ್ ತಾಲ್ಲೋಕು, ಕಾಮನಹಳ್ಳಿ ವಾಸಿ ರವೀಶ್ ರವರ  ಬಾಬ್ತು ಕೆಎ-06-ಇಕ್ಯೂ-5433 ನೇ ಟಿ ಎಸ್ ಎಕ್ಷ್‌ ಎಲ್  ದ್ವಿಚಕ್ರ ವಾಹನದಲ್ಲಿ ದಿನಾಂಕ-11/07/2017 ರಂದು ಭೆಳಿಗ್ಗೆ ಸುಮಾರು 8-15 ಗಂಟೆ ಸಮಯದಲ್ಲಿ ನನ್ನ ಚಿಕ್ಕಪ್ಪನಾದ ಜನಾರ್ಧನಸ್ವಾಮಿರವರನ್ನು ಸದರಿ ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ತುಮಕೂರು –ಕುಣಿಗಲ್ ರಸ್ತೆಯ ಹೆಬ್ಬೂರಿನ ಬೋರೇಗೌಡ ಪೆಂಟ್ರೋಲ್ ಬಂಕ್ ಹತ್ತಿರ ಸದರಿ ವಾಹನಕ್ಕೆ ಪೆಟ್ರೋಲ್ ಅನ್ನು ಹಾಕಿಸಲು ಸದರಿ ನನ್ನ ದ್ವಿಚಕ್ರ ವಾಹನಕ್ಕೆ ಇಂಡಿಕೇಟ್ ಅನ್ನು ಹಾಕಿಕೊಂಡು ಬಲಭಾಗಕ್ಕೆ ತಿರುಗಿಸಿದಾಗ ನಮ್ಮ ಹಿಂದಿನಿಂದ ಅಂದರೆ ಹೆಬ್ಬೂರು ಕಡೆಯಿಂದ ಕುಣಿಗಲ್ ಕಡೆಗೆ ಹೋಗಲು ಬಂದ ಕಾರಿನ ಚಾಲಕನು ತನ್ನ ವಾಹನಕ್ಕೆ ಯಾವುದೇ ಮುನ್ಸೂಚನೆ ನೀಡದೆ ರಸ್ತೆಯ ಎಡಪಕ್ಕದಿಂದ ಬಲಬಾಗಕ್ಕೆ ಅತಿವೇಗ ಮತ್ತು ಅಜಾಗರೂಕತೆಯಿಂದ ತನ್ನ ಕಾರನ್ನು ಓಡಿಸಿಕೊಂಡು ಡಿಕ್ಕಿ ಹೊಡೆಸಿ ಅಘಫಾತಪಡಿಸಿದ ಪರಿಣಾಮ ದ್ವಿಚಕ್ರ ವಾಹನದ ಸಮೇತ ಇಬ್ಬರು ಸಹ ರಸ್ತೆಯ ಮೇಲೆ ಬಿದ್ದೆವು, ನನ್ನ ಹಿಂಬದಿಯಲ್ಲಿ ಕುಳಿತಿದ್ದ ಜನಾರ್ಧನಸ್ವಾಮಿಯವರಿಗೆ ಬಲಗಾಲಿಗೆ  ಮತ್ತು ತಲೆಯ ಹಿಂಬಾಗಕ್ಕೆ ತೀವ್ರರಕ್ತಗಾಯವಾಗಿದ್ದು, ನನಗೆ ಯಾವುದೇ ಗಾಯಗಳಾಗಿರುವುದಿಲ್ಲ, ನಮಗೆ ಅಪಘಾತ ಪಡಿಸಿದ ಕಾರು ರಸ್ತೆಯ ಎಡ ಬಾಗದ ಚರಂಡಿ ಕಟ್ಟೆಗೆ ಗುದ್ದಿ ಬಿದ್ದಿರುತ್ತೆ, ಅದನ್ನು ನೋಡಲಾಗಿ ಕೆಎ-06-ಎನ್-2017 ನೇ ಕಾರಾಗಿದ್ದು, ಅದರ ಚಾಲಕನು ತನ್ನ ಕಾರಿನ್ನು ಅಲ್ಲೇ ಬಿಟ್ಟು ಓಡಿ ಹೋಗಿರುತ್ತಾನೆ, ನಂತರ ಅಲ್ಲೇ ಇದ್ದ ಪ್ರದೀಪ ಮತ್ತು ಕೃಷ್ಣಮೂರ್ತಿ ಹಾಗೂ ಸಾರ್ವಜನಿಕರ ಸಹಾಯದಿಂದ 108 ನೇ ಆಂಬುಲೆನ್ಸ್ ನಲ್ಲಿ ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ನಂತರ ವೈಧ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿರುತ್ತಾರೆ, ನಮಗೆ ಅಪಘಾತ ಮಾಡಿದ ಕೆಎ-06-ಎನ್-2017 ನೇ ಕಾರಿನ ಚಾಲಕನ ಹೆಸರು ವಿಳಾಸ ತಿಳಿದಿರುವುದಿಲ್ಲ,  ನಮ್ಮ ಚಿಕ್ಕಪ್ಪನಿಗೆ ಚಿಕಿತ್ಸೆ ಕೊಡಿಸಿ ನೋಡಿಕೊಳ್ಳಲು ಯಾರೂ ಇಲ್ಲದ್ದರಿಂದ ಈ ದಿನ ತಡವಾಗಿ ಬಂದು ಈ ಅಪಘಾತ ಪಡಿಸಿದ ಸದರಿ ಕಾರಿನ ಚಾಲಕನ ವಿರುದ್ದ ಕಾನೂನು ಕ್ರಮಜರುಗಿಸಬೇಕೆಂದು ದೂರು ನೀಡಿರುತ್ತೇನೆ ಮತ್ತು ಅಫಘಾತಪಡಿಸಿದ ಹಾಗೂ ಅಪಘಾತಕ್ಕೊಳಗಾದ ಎರಡೂ ವಾಹಗಳು  ಬೋರೇಗೌಡ  ಪೆಂಟ್ರೋಲ್ ಬಂಕ್ ಹತ್ತಿರ ರಸ್ತೆಯ ಪಕ್ಕ ನಿಲ್ಲಿಸಿರುತ್ತೆ. ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 113 guests online
Content View Hits : 289618