lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ 16.01.2018 ವೇಶ್ಯಾವಾಟಿಕೆ ದಂಧೆಗೆ ಮಹಿಳೆಯರ ಸಾಗಾಣಿಕೆ... >> :  ಪತ್ರಿಕಾ ಪ್ರಕಟಣೆ  : ತುಮಕೂರು ನಗರದ ದೊಂತಿ ಏಜೇನ್ಸಿಯಲ್ಲಿ ಸಿಗರೇಟ್ ಕಳವು ಮಾಡಿದ... >> ಠಾಣಾ  ದಾಖಲಾತಿಗಳ ನಿರ್ವಹಣೆ ಕಾರ್ಯಗಾರ ದಿನಾಂಕ 13/1/2018           >> -:  ಪತ್ರಿಕಾ ಪ್ರಕಟಣೆ.  :-   ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 301/2017 ಕಲಂ 457, 380... >> >> -: ದಿನಾಂಕ : 19 -12 -17  :- :  ಪತ್ರಿಕಾ ಪ್ರಕಟಣೆ : ಕೋಮು ಪ್ರಚೋದನಕಾರಿ ಹೇಳಿಕೆಗಳ... >> ಪತ್ರಿಕಾ ಪ್ರಕಟಣೆ :: ದಿನಾಂಕ 12-12-2017  :: ತುಮಕೂರು ನಗರದಲ್ಲಿ ಮೂಲ ಆ.ಐ. ಸ್ಮಾಟ್‌ ಕಾರ್ಡಗಳ... >> ಪತ್ರಿಕಾ ಪ್ರಕಟಣೆ : ದಿನಾಂಕ:-05-12-2017 : ಚಾಳಿಬಿದ್ದ ಅಪರಾಧಿಗಳಿಂದ ಸುಮಾರು ಒಟ್ಟು 5, 00, 100/- ರೂ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ   ತುಮಕೂರು ನಗರದಲ್ಲಿ ಒಂಟಿಯಾಗಿ... >>   New BEAT BEST STAFF AND BEST CRIME DETECTION BEST STAFF >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< July 2017 >
Mo Tu We Th Fr Sa Su
          1 2
3 4 5 6 7 8 9
10 11 12 14 15 16
17 18 19 20 21 22 23
24 25 26 27 28 29 30
31            
Thursday, 13 July 2017
FINAL SELECTION LIST FOR THE POST OF CIVIL POLICE CONSTABLE PART-1


Crime Incidents 13-07-17

ಸಂಚಾರಿ ಪೂರ್ವ ಪೊಲೀಸ್ ಠಾಣೆ ಮೊ.ನಂ:133/2017, ಕಲಂ:279, 304(A) ಐಪಿಸಿ

ದಿನಾಂಕ 12/07/2017 ರಂದು ಈ ಕೇಸಿನ ಪಿರ್ಯಾದಿ ಶಂಕರಪ್ಪ ಸಿಪಿಸಿ-174 ಕ್ಯಾತ್ಸಂದ್ರ ಠಾಣೆಯವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ:12/07/2017 ರಂದು  ನಾನು ಠಾಣೆಯಲ್ಲಿರುವಾಗ್ಗೆ ನಮ್ಮ ಠಾಣಾ ಎ.ಎಸ್.ಐ ಸಾಹೇಬರವರಾದ ಟಿ.ಪಿ.ಲಕ್ಷ್ಮೀನಾರಾಯಣ ರವರು ಮದ್ಯಾಹ್ನ 3-15 ಗಂಟೆಯಲ್ಲಿ ಕಂಟ್ರೋಲ್ ರೂಮ್ ನಿಂದ ಕ್ಯಾತ್ಸಂದ್ರ ಸರ್ಕಲ್ ನಲ್ಲಿ ಅಪಘಾತವಾಗಿ ರಸ್ತೆ ಮಧ್ಯೆದಲ್ಲಿ ಮೃತಪಟ್ಟಿರುತ್ತಾನೆ ತಕ್ಷಣ ಬಾ ಎಂದು ನನ್ನನ್ನು ಜೊತೆಯಲ್ಲಿ ಕರೆದುಕೊಂಡು ನಾನು ಮತ್ತು ಎ.ಎಸ್.ಐ ಟಿ.ಪಿ.ಲಕ್ಷ್ಮೀನಾರಾಯಣ ರವರು ಕ್ಯಾತ್ಸಂದ್ರ ಸರ್ಕಲ್ ಗೆ ಬಂದು ಸ್ಥಳದಲ್ಲಿ ನೋಡಲಾಗಿ ಸುಮಾರು 30 ವರ್ಷದ ಒಬ್ಬ ವ್ಯಕ್ತಿ ರಸ್ತೆ ಮಧ್ಯೆದಲ್ಲಿ ಅಪಘಾತವಾಗಿ ತೀವ್ರವಾಗಿ ರಕ್ತ ಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವುದು ಕಂಡು ಬಂತು ಹಾಗೂ ಈತನ ತಲೆಗೆ, ಮುಖಕ್ಕೆ ಹಾಗೂ ಮೈ ಕೈ ಗೆ ತೀವ್ರವಾಗಿ ಪೆಟ್ಟುಬಿದ್ದು ರಕ್ತಗಾಯಗಳಾಗಿರುವುದು ಕಂಡು ಬಂತು & ಈತನ ಎಡ ಗೈನಲ್ಲಿ ಪೊಲೀಸ್ ಇಲಾಖೆಯ ಹ್ಯಾಂಡ್ ಕಫ್ ಇರುವುದು ಕಂಡು ಬಂದಿರುತ್ತೆ. ನಂತರ ಅಲ್ಲಿಯೇ ಇದ್ದ ಸಾರ್ವಜನಿಕರಿಂದ  ವಿಚಾರ ತಿಳಿಯಲಾಗಿ ಮೃತ ಪಟ್ಟಿರುವ ವ್ಯಕ್ತಿ ಈಗ ಸುಮಾರು 3-00 ಗಂಟೆ ಸಮಯದಲ್ಲಿ ಸಿದ್ದಗಂಗಾ ಮಠದ  ರಸ್ತೆ ಕಡೆಯಿಂದ ಎನ್.ಹೆಚ್ 48 ರಸ್ತೆ  ಕ್ಯಾತ್ಸಂದ್ರ ಸರ್ಕಲ್ ಕಡೆಗೆ ಓಡಿ ಬಂದಾಗ ಅದೇ ಸಮಯಕ್ಕೆ ತುಮಕೂರು ಕಡೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಅಲ್ಲೇ ಮುಂದೆ ರಸ್ತೆ ಎಡಭಾಗದಲ್ಲಿ ನಿಲ್ಲಿಸಿದ್ದ  ಕೆ.ಎಸ್.ಆರ್.ಟಿ.ಸಿ ಬಸ್ ನ್ನು ತೋರಿಸಿ ಇದೇ ಬಸ್ಸಿನಿಂದ ಅಪಘಾತವಾಗಿ ವ್ಯಕ್ತಿ ಮೃತಪಟ್ಟಿರುತ್ತಾನೆಂದು ತಿಳಿಸಿದ್ದು ಸದರಿ ಬಸ್ ನಂಬರ್ ನೋಡಲಾಗಿ ಕೆಎ-06-ಎಫ್-975 ನೇ ಬಸ್ ಆಗಿತ್ತು. ಸದರಿ ಬಸ್ ವೇಗವಾಗಿ ಬರುತ್ತಿದ್ದು ಮೃತಪಟ್ಟಿರುವ ವ್ಯಕ್ತಿ ಬಸ್ಸಿನ  ಹಿಂಭಾಗಕ್ಕೆ ಡಿಕ್ಕಿ ಹೊಡೆಸಿಕೊಂಡು ಕೆಳಕ್ಕೆ ಬಿದ್ದು ತೀವ್ರವಾಗಿ ರಕ್ತ ಸ್ರಾವವಾಗಿ ಮೃತಪಟ್ಟಿರುತ್ತಾನೆಂತ ವಿಷಯ ತಿಳಿಯಿತು. ಅಪಘಾತದಿಂದ ಮೃತಪಟ್ಟಿರುವ ವ್ಯಕ್ತಿಯ ಹೆಸರು ವಿಳಾಸ ತಿಳಿದುಬಂದಿರುವುದಿಲ್ಲ. ಸದರಿ ಘಟನೆಯ ಬಗ್ಗೆ ನಮ್ಮ ಮೇಲಾಧಿಕಾರಿಗಳಿಗೆ  ವಿಷಯ ತಿಳಿಸಿದ ತಕ್ಷಣ ಸ್ಥಳಕ್ಕೆ ಎಲ್ಲರೂ  ಬಂದರು ನಂತರ ಮೃತ ದೇಹವನ್ನು ಯಾವುದೋ ವಾಹನದಲ್ಲಿ  ಜಿಲ್ಲಾ ಸರ್ಕಾರಿ ಆಸ್ಫತ್ರೆಗೆ ಕಳುಹಿಸಿಕೊಟ್ಟೆವು ನಾನು ಸಹ ಜಿಲ್ಲಾ ಆಸ್ಫತ್ರೆಗೆ ಬಂದು ಮೃತ ದೇಹವನ್ನು ಆಸ್ಫತ್ರೆಯ ಶವಾಗಾರಕ್ಕೆ ಹಾಕಿಸಿ ನಂತರ ಠಾಣೆಗೆ ಬಂದು ಈ ದೂರನ್ನು ನೀಡಿರುತ್ತೇನೆ. ಈ ಅಪಘಾತದ  ಬಗ್ಗೆ  ತನಿಖೆ ಕೈಗೊಳ್ಳಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಮಧುಗಿರಿ ಪೊಲೀಸ್ ಠಾಣಾ ಮೊ.ನಂ: 136/2017 u/s : 279,337 IPC.

ಪಿರ್ಯಾದಿ ಜೂಫಿಷ ಕೋಂ ಮಹಮದ್ ಯಾಕೂಬ್, 34 ವರ್ಷ, ಮನೆ ಕೆಲಸ, ಎಲ್.ಐ.ಸಿ ಆಪೀಸ್ ಹತ್ತಿರ, ಮಧುಗಿರಿ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಪಿರ್ಯಾದಿಯ ಗಂಡ ಮಹಮದ್‌ ಯಾಕೂಬ್ ಬಿನ್ ಜಿ.ಎಂ ಇಲಿಯಾಸ್ ರವರು ದಿನಾಂಕ: 25-06-2017 ರಂದು KA-L-2982 ನೇ ದ್ವಿಚಕ್ರವಾಹನದಲ್ಲಿ ಕಾರ್ಯನಿಮಿತ್ತ ಮಧುಗಿರಿಯಿಂದ ಗೌರಿಬಿದನೂರಿಗೆ ಹೋಗಿದ್ದು,  ಗೌರಿಬಿದನೂರಿನಲ್ಲಿ ಕೆಲಸ ಮುಗಿಸಿಕೊಂಡು ವಾಪಸ್ ಮಧುಗಿರಿಗೆ ಬರುತ್ತಿರುವಾಗ್ಗೆ, ಮಾರ್ಗಮದ್ಯೆ ಮಧುಗಿರಿ ತಾಲ್ಲೂಕು, ಶೆಟ್ಟಿಹಳ್ಳಿ ಗ್ರಾಮದ ಸಮೀಪ ಮಧುಗಿರಿ-ಗೌರಿಬಿದನೂರು ಮುಖ್ಯರಸ್ತೆಯಲ್ಲಿ ಸದರಿ ದ್ವಿಚಕ್ರ ವಾಹನವನ್ನು ಚಾಲನೆ ಮಾಡುತ್ತಿದ್ದ ಪಿರ್ಯಾದಿಯ ಮೈದುನ ಮಹಮದ್ ರಿಹಾನ್ ರವರು ದ್ವಿಚಕ್ರವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ, ದ್ವಿಚಕ್ರವಾಹನದ ನಿಯಂತ್ರಣ ತಪ್ಪಿ ದ್ವಿಚಕ್ರವಾಹನವನ್ನು ರಸ್ತೆಯ ಮೇಲೆ ಬಿಳಿಸಿದ್ದರಿಂದ ಸದರಿ ದ್ವಿಚಕ್ರವಾಹನದಲ್ಲಿ ಹಿಂಬದಿ ಕುಳಿತಿದ್ದ ಪಿರ್ಯಾದಿಯ ಗಂಡನ ಮುಖಕ್ಕೆ, ಎಡ ಕಾಲಿಗೆ ಗಾಯಗಳಾಗಿದ್ದು, ಅದೇ ರಸ್ತೆಯಲ್ಲಿ ಬರುತ್ತಿದ್ದ ಆಟೋ ಚಾಲಕ ಅಬೀಬ್ ಸಾಬ್ ಹಾಗೂ ಪಿರ್ಯಾದಿಯ ಮೈದುನರವರು ಗಾಯಾಳುವನ್ನು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಲು ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಲು ಹೋದಾಗ ಮಧುಗಿರಿ ಸರ್ಕಾರಿ ಆಸ್ಪತ್ರೆಯ ವೈದ್ಯರ ಬಳಿ ಗಾಬರಿಯಲ್ಲಿ ದ್ವಿಚಕ್ರ ವಾಹನದಲ್ಲಿ ಸ್ವತಃ ಬಿದ್ದಿದ್ದು ಎಂತಾ ಹೇಳಿದ್ದು, ನಂತರ ಪ್ರಥಮ ಚಿಕಿತ್ಸೆ ನಂತರ ತುಮಕೂರು ಆದಿತ್ಯ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಪಡೆದಿರುತ್ತೆ. ಅಪಘಾತ ಮಾಡಿದ KA-L-2982 ನೇ ದ್ವಿಚಕ್ರ ವಾಹನದ ಚಾಲಕನಾದ ಮಹಮದ್ ರಿಹಾನ್ ರವರ ಮೇಲೆ ಕಾನೂನು ರಿತ್ಯಾ ಕ್ರಮ ಜರುಗಿಸಬೇಕೆಂದು ಕೋರುತ್ತೇನೆಂತಾ ನೀಡಿದ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ; 152/2017 ಕಲಂ; IPC 1860 (U/s-324,353); SC AND THE ST (PREVENTION OF ATTROCITIES) ACT, 1989 (U/s-3(1) (c),3(1)(r),3(1)(s),3(2)(v-a)).

ದಿನಾಂಕ-12-07-2017 ರಂದು ಮಧ್ಯಾಹ್ನ 2-10 ಗಂಟೆ ಸಮಯದಲ್ಲಿ ಪಿರ್ಯಾದಿ ಕುಮಾರ ಎಸ್‌.ಎಸ್‌ ಬಿನ್‌ ಶಿವಣ್ಣ, 25 ವರ್ಷ, ಆದಿ ಕರ್ನಾಟಕ ಜನಾಂಗ, ಸಂತೆಮಾವತ್ತೂರು ಗ್ರಾಮ, ಹುಲಿಯೂರುದುರ್ಗ ಹೋಬಳಿ, ಕುಣಿಗಲ್‌ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ನಮ್ಮ ತಂದೆಯವರು ಸಂತೆಮಾವತ್ತೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನೀರು ಗಂಟೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ-09-07-2017 ರಂದು ರಾತ್ರಿ 8-00 ಗಂಟೆಯ ಸಮಯದಲ್ಲಿ ಸಂತೆಮಾವತ್ತೂರು ಗ್ರಾಮದ ಮಸೀದಿಯ ಹತ್ತಿರವಿರುವ ಪಂಪ್‌ ಹೌಸ್‌ ಬಳಿಯಲ್ಲಿ ಕರ್ತವ್ಯ ನಿರ್ವಹಿಸುವಾಗ್ಗೆ ಧನಂಜೇಯ ಬಿನ್‌ ಎಸ್‌.ಎನ್‌ ಕೃಷ್ಣ ಎಂಬುವವನು ಏಕಾಏಕಿ ನಮ್ಮ ತಂದೆಯವರ ಬಳಿಗೆ ಹೋಗಿ ನೀರು ಬಿಡೋ ವಲಯ, ಮಾದಿಗ ನನ್ನ ಮಗನೆ ಎಂದು ಜಾತಿನಿಂದನೆಯನ್ನು ಮಾಡಿ ಅಲ್ಲೇ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ನಮ್ಮ ತಂದೆಯವರ ಬಲಕಣ್ಣಿಗೆ ಮತ್ತು ತಲೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾರೆ. ನಂತರ ಅದೇ ಸಮಯಕ್ಕೆ ನಮ್ಮ ಗ್ರಾಮದ ತೇಜ ಬಿನ್‌ ಚಿಕ್ಕರಂಗಯ್ಯ, ನಾಗರಾಜ ಬಿನ್‌ ಹೊಸಮಾಗಡಯ್ಯ ರವರು ಜಗಳವನ್ನು ಬಿಡಿಸಿ ಸಮಾದಾನಪಡಿಸಿರುತ್ತಾರೆ. ನಮ್ಮ ತಂದೆಯವರಿಗೆ ತಲೆಗೆ ಮತ್ತು ಕಣ್ಣಿಗೆ ಭಲವಾದ ಪೆಟ್ಟುಬಿದ್ದಿದ್ದರಿಂದ ಅವರು ಸಂತೆಮಾವತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ನಂತರ ಕುಣಿಗಲ್‌ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದು, ಸದರಿ ವಿಚಾರ ದೂರವಾಣಿಯ ಮೂಲಕವಾಗಿ ನನಗೆ ತಿಳಿದು, ನಾನು ಕೂಡಲೇ ಬೆಂಗಳೂರಿನಿಂದ ಬಂದು ನಮ್ಮ ತಂದೆಯವರಿಗೆ ಚಿಕಿತ್ಸೆಯನ್ನು ಕೊಡಿಸಿ ಈ ದಿನ ತಡವಾಗಿ ಬಂದು ದೂರುನೀಡುತ್ತಿದ್ದು, ಈ ಮೇಲ್ಕಂಡವರ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ನೀಡಿದ ದೂರಿನ ಅಂಶವಾಗಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 65 guests online
Content View Hits : 230075