lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >> ತುಮಕೂರು ಜಿಲ್ಲೆಯಲ್ಲಿ 2018 ನೇ ಮೇ ಮಾಹೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳ... >> ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< July 2017 >
Mo Tu We Th Fr Sa Su
          1 2
3 4 5 6 7 8 9
10 12 13 14 15 16
17 18 19 20 21 22 23
24 25 26 27 28 29 30
31            
Tuesday, 11 July 2017
Crime Incidents 11-07-17

ಅಮೃತೂರು ಪೊಲೀಸ್‌ ಠಾಣಾ ಮೊನಂ-147/2017, ಕಲಂ- 279, 304(ಎ) ಐಪಿಸಿ 134 (ಎ & ಬಿ), 187 ಐ.ಎಂ.ವಿ ಆಕ್ಟ್

ದಿನಾಂಕ: 10-07-2017 ರಂದು ಬೆಳಿಗ್ಗೆ 10-00 ಗಂಟೆಗೆ ಈ ಕೇಸಿನ ಪಿರ್ಯಾದಿ ಚಂದ್ರ ಕೆ. ಬಿನ್ ಕೃಷ್ಣಪ್ಪ.ಕೆ, 35 ವರ್ಷ, ವಕ್ಕಲಿಗರು, ಎಸ್.ಎಸ್ ನಗರ, ಎಡೆಯೂರು ಟೌನ್, ಎಡೆಯೂರು ಹೋಬಳಿ, ಕುಣಿಗಲ್ ತಾಲ್ಲೂಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ದಿ: 09-07-2017 ರಂದು ರಾತ್ರಿ ಸ್ವಂತ ಕೆಲಸದ ನಿಮಿತ್ತ ಬಿಳಗುಂದ ಗ್ರಾಮಕ್ಕೆ ಹೋಗಿದ್ದು, ಕೆಲಸ ಮುಗಿಸಿಕೊಂಡು ರಾತ್ರಿ ಸುಮಾರು 12-45 ಗಂಟೆ ಸಮಯದಲ್ಲಿ ಬಿಳಗುಂದ ಗ್ರಾಮದಿಂದ ಎಡೆಯೂರಿಗೆ ಹಾಸನ-ಬೆಂಗಳೂರು ಎನ್.ಹೆಚ್-75 ರಸ್ತೆಯ ಸರ್ವಿಸ್ ರಸ್ತೆಯಲ್ಲಿ ನನ್ನ ಬಾಬ್ತು ಆಟೋದಲ್ಲಿ ಬರುತ್ತಿದ್ದಾಗ, ಅದೇ ಸಮಯಕ್ಕೆ ಕೇರಳಾಪುರ ಹಿಂದೂ ಮಿಲ್ಟ್ರಿ ಹೋಟೆಲ್ ಮುಂಭಾಗದಲ್ಲಿ ಹಾಸನ-ಬೆಂಗಳೂರು ಎನ್.ಹೆಚ್-75 ರಸ್ತೆಯ ಎಡಬದಿಯಲ್ಲಿ ರಸ್ತೆ ದಾಟಲು ನಿಂತಿದ್ದ ಒಬ್ಬ ವ್ಯಕ್ತಿಗೆ ಹಾಸನ ಕಡೆಯಿಂದ ಅತಿವೇಗವಾಗಿ ಅಜಾಗರೂಕತೆಯಿಂದ ಬಂದ ಒಂದು ಕಾರಿನ ಚಾಲಕ ಡಿಕ್ಕಿ ಹೊಡೆದು ಅಪಘಾತಪಡಿಸಿ ಕಾರನ್ನು ನಿಲ್ಲಿಸದೇ ಬೆಂಗಳೂರು ಕಡೆಯ ರಸ್ತೆಯಲ್ಲಿ ಹೊರಟು ಹೋದನು. ನಾನು ತಕ್ಷಣ ನನ್ನ ಆಟೋವನ್ನು ನಿಲ್ಲಿಸಿ ಹೋಗಿ ನೋಡಲಾಗಿ ಸುಮಾರು 60 ವರ್ಷದ ಅಪರಿಚಿತ ಗಂಡಸಾಗಿದ್ದು, ಸದರಿಯವರಿಗೆ ತಲೆಗೆ, ಕೈಗೆ, ಕಾಲುಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅವರ ಹೆಸರು, ವಿಳಾಸ ಗೊತ್ತಿರುವುದಿಲ್ಲ. ನಂತರ ಸ್ಥಳದಲ್ಲಿ ನೋಡಲಾಗಿ ಅಪಘಾತ ಪಡಿಸಿದ ಕಾರಿನ ನಂಬರ್ ಪ್ಲೇಟ್ ಚೂರಾಗಿ ಬಿದ್ದಿದ್ದು ಒಟ್ಟುಗೂಡಿಸಿ ನೋಡಲಾಗಿ ಕೆಎ-19 ಎನ್-8763 ಆಗಿತ್ತು. ನಂತರ ಸದರಿ ಶವವನ್ನು ನನ್ನ ಆಟೋದಲ್ಲಿಯೇ ಕುಣಿಗಲ್ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ ಮೃತನ ಪೋಟೋ ತೆಗೆದುಕೊಂಡು ಹೆಸರು, ವಿಳಾಸ ತಿಳಿಯಲು ಎಡೆಯೂರು, ಬೀರಗಾನಹಳ್ಳಿ, ಜಲಧಿಗೆರೆ ಕಡೆಗಳಲ್ಲಿ ಪೋಟೋ ತೋರಿಸಿದರೂ ಯಾರು ಎಂದು ತಿಳಿದಿರುವುದಿಲ್ಲ. ಆದ್ದರಿಂದ ಈಗ ತಡವಾಗಿ ಬಂದು ಅಪಘಾತಪಡಿಸಿ ಕಾರನ್ನು ನಿಲ್ಲಿಸದೇ ಹೊರಟು ಹೋಗಿರುವ ಕೆಎ-19 ಎನ್-8763 ರ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಿ ಎಂತ ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ತುಮಕೂರು ಗ್ರಾಮಾಂತರ ಠಾಣಾ ಮೊನಂ 144/2017 ಕಲಂ 279,337,304(ಎ) ಐ.ಪಿ.ಸಿ ರೆ/ವಿ 134(ಎ)&(ಬಿ) 187 ಐ.ಎಂ.ವಿ ಆಕ್ಟ್

ದಿನಾಂಕ;-10/07/2017 ರಂದು ಮದ್ಯಾಹ್ನ 03-30 ಗಂಟೆಗೆ ಪಿರ್ಯಾದುದರರಾದ ಸಿದ್ದರಾಜು ಬಿನ್ ಲೇಟ್ ದೊಡ್ಡಯ್ಯ ಸುಮಾರು 32 ವರ್ಷ, ವಕ್ಕಲಿಗರು, ಸಮಾಜ ಸೇವೆ ಯಲ್ಲಾಪುರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂಧರೆ  ದಿನಾಂಕ;-10-07-2017 ರಂದು ಮದ್ಯಾಹ್ನ ಸುಮಾರು 01.30 ಗಂಟೆಯಲ್ಲಿ ಜಿ ನಾಗಮ್ಮ ಕೋಂ ಲೇಟ್ ಆರ್ ಗಂಗಾಧರಯ್ಯ ಸುಮಾರು 50 ವರ್ಷ,ಅಂಗನವಾಡಿ ಮೇಲ್ವಿಚಾರಕಿ,ವಕ್ಕಲಿಗರು ಯಲ್ಲಾಪುರ ರವರನ್ನು ಸುಮ ಹೆಚ್ ಆರ್ ಕೋಂ ಲೇಟ್ ಶಿವಣ್ಣ 28 ವರ್ಷ ರವರು ಕೆ.ಎ.06.ಇಟಿ.5990 ನೇ ಟಿ ವಿ ಎಸ್ ಎಕ್ಸ್ ಎಲ್ ಹೆವಿ ಡ್ಯೂಟಿ  ದ್ವಿ ಚಕ್ರ ವಾಹನದಲ್ಲಿ ಕೂರಿಸಿಕೊಂಡು ಮಧುಗಿರಿ-ತುಮಕೂರು ರಸ್ತೆಯಲ್ಲಿ ಮುದ್ದರಾಮಯ್ಯನ ಪಾಳ್ಯದ ಗೇಟ್ ನಲ್ಲಿ ಮುದ್ದರಾಮಯ್ಯನ ಪಾಳ್ಯ ಗೇಟ್ ಕಡೆ ಹೋಗಲು ರಸ್ತೆಯನ್ನು  ದಾಟಿಕೊಂಡು ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ್ಗೆ ಕೆ.ಎ.06.ಡಿ.7789 ನೇ ಟಿಪ್ಪರ್ ಲಾರಿಯ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಹೋಗಿ ರಸ್ತೆ ದಾಟುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದ  ಪರಿಣಾಮ ಬೈಕ್ ಜಖಂ   ಗೊಂಡು ಜಿ.ನಾಗಮ್ಮ ರವರ ತಲೆಗೆ ಹಾಗೂ ಇತರೆ ಕಡೆ ಬಲವಾದ ಪೆಟ್ಟು ಬಿದ್ದು ರಕ್ತಗಾಯಾವಾಗಿ ಸ್ಥಳದಲ್ಲಿಯೆ ಮೃತ ಪಟ್ಟಿದ್ದು  ಅವರ ಸಾವಿಗೆ ಹಾಗೂ ಹೆಚ್ ಆರ್ ಸುಮಾ ರವರಿಗೆ ತಲೆಗೆ ಹಾಗೂ ಇತರೆ ಕಡೆ ಪೆಟ್ಟು ಬಿದ್ದಿದ್ದು ಸುಮ ರವರನ್ನು ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಿರುತ್ತೆ. ಆದ್ದರಿಂದ  ಮೇಲ್ಕಂಢ ಲಾರಿ ಮತ್ತು ಚಾಲಕನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ .

ಸಂಚಾರಿ ಪೂರ್ವ ಪೊಲೀಸ್ ಠಾಣೆ ಮೊ.ನಂ:129/2017, ಕಲಂ:279, 337 ಐಪಿಸಿ

ದಿನಾಂಕ 10/07/2017 ರಂದು ಈ ಕೇಸಿನ ಪಿರ್ಯಾದಿ ಗಿರಿಜಮ್ಮ ಕೋಂ ಅಜಯ್ ಕುಮಾರ್ , ಬಬ್ಬೂರು, ಭೋವಿ ಕಾಲೋನಿ, ಹಿರಿಯೂರು ತಾ,, ಚಿತ್ರದುರ್ಗ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ:07/07/2017 ರಂದು ಬೆಳಗ್ಗೆ 08-00 ಗಂಟೆಯಲ್ಲಿ ನಾನು ಮನೆಯಲ್ಲಿರುವಾಗ್ಗೆ ನನ್ನ ಯಜಮಾನರಾದ ಅಜಯ್ ಕುಮಾರ್ ರವರು ನನಗೆ ಪೋನ್ ಮಾಡಿ ರಾತ್ರಿ ನಾನು ಬೆಂಗಳೂರಿನಿಂದ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಊರಿಗೆ ಬರಲು ತುಮಕೂರು ಎಸ್.ಪಿ.ಕಛೇರಿ ಮುಂದೆ ಅಪಘಾತವಾಗಿ ಕಾಲಿಗೆ ಏಟಾಗಿದೆ, ಬಸ್ಸಿನವರೇ ಚಿತ್ರದುರ್ಗಕ್ಕೆ ಕರೆದುಕೊಂಡು ಬಂದು ಸರ್ಕಾರಿ ಆಸ್ಫತ್ರೆಗೆ ಸೇರಿಸಿರುತ್ತಾರೆ ಬೇಗ ಬನ್ನಿ ಎಂದು ತಿಳಿಸಿದರು ಆಗ ತಕ್ಷಣ ನಾನು ನನ್ನ ಸಂಬಂಧಿಕರು ಚಿತ್ರದುರ್ಗ ಸರ್ಕಾರಿ ಆಸ್ಫತ್ರೆಗೆ ಹೋಗಿ ನೋಡಲಾಗಿ ನನ್ನ ಯಜಮಾನರಿಗೆ ಎರಡೂ ಕಾಲುಗಳಿಗೆ ಪೆಟ್ಟುಬಿದ್ದು ರಕ್ತಗಾಯಗಳಾಗಿದ್ದವು ನಂತರ ಅಪಘಾತದ ಬಗ್ಗೆ ವಿಚಾರ ಮಾಡಲಾಗಿ ನನ್ನ ಯಜಮಾನರು ನಿನ್ನೆ ರಾತ್ರಿ ದಿನಾಂಕ:06/07/2017 ರಂದು ರಾತ್ರಿ 11-30 ಗಂಟೆಯಲ್ಲಿ ಬೆಂಗಳೂರಿನಿಂದ ಕೆಎ-27-ಎಫ್-660 ನೇ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಕುಳಿತು ಊರಿಗೆ ಬರಲೆಂದು ಬರುತ್ತಿರುವಾಗ ದಿನಾಂಕ:07/07/2017 ರಂದು ರಾತ್ರಿ 01-00 ಎಎಂ ಗಂಟೆಯಲ್ಲಿ ತುಮಕೂರಿನ ಎಸ್.ಪಿ.ಕಛೇರಿ ಮುಂದಿನ ಎನ್,ಹೆಚ್-206 ರಸ್ತೆಯಲ್ಲಿ ಬಸ್ ಸ್ಟಾಂಡ್ ಕಡೆಗೆ ಬರುತ್ತಿರುವಾಗ್ಗೆ ಬಸ್ಸಿನ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸುತ್ತಿದ್ದರಿಂದ ರಸ್ತೆ ಮಧ್ಯೆ ಇದ್ದ ಹಂಪ್ಸ್ ನ್ನು  ನೋಡದೇ ವೇಗವಾಗಿ ಬಂದು ಹಂಪ್ಸ್ ಆರಿಸಿದ್ದರಿಂದ ಬಸ್ಸಿನಲ್ಲಿದ್ದ ನಾನು ಮತ್ತು ಸೀಟ್ ನಲ್ಲಿ ಕುಳಿತಿದ್ದ ಇತರೆ ಪ್ರಯಾಣಿಕರು ಆರಿ ಟಾಪ್ ಹೊಡೆದುಕೊಂಡು ಬಸ್ಸಿನ ಒಳಗೆ ಬಿದ್ದಾಗ ನನಗೆ ಎರಡೂ ಕಾಲುಗಳಿಗೆ ತಲೆಗೆ, ಹಾಗೂ ಮೈ ಕೈ ಗಳಿಗೆ ಪೆಟ್ಟುಬಿದ್ದು ರಕ್ತಗಾಯಗಳಾದವು, ಬಸ್ಸ್ ನ್ನು ಅದರ ಚಾಲಕ ಸ್ವಲ್ಫ ಹೊತ್ತು ಅಲ್ಲೇ ನಿಲ್ಲಿಸಿ ನಂತರ ನಮ್ಮಗಳನ್ನು ತುಮಕೂರಿನ ಸರ್ಕಾರಿ ಆಸ್ಫತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಅದೇ ಬಸ್ಸಿನಲ್ಲಿ ಬಸ್ ಡ್ರೈವರ್ ರವರು ಚಿತ್ರದುರ್ಗಕ್ಕೆ ಕರೆದುಕೊಂಡು ಬಂದು ಸರ್ಕಾರಿ ಆಸ್ಫತ್ರೆಗೆ ಸೇರಿಸಿ ನಾನು ಹಾವೇರಿಗೆ ಹೋಗಬೇಕು ನೀವು ಕೇಸ್ ಕೊಡುವುದಾದರೇ ಕೊಡಿ ಎಂದು ಹೇಳಿ ಹೊರಟು ಹೋದರು ಎಂದು ನನ್ನ ಯಜಮಾನರು ತಿಳಿಸಿದರು ನಾವು ಒಬ್ಬೊಂಟಿಗರು ಆಗಿದ್ದು ನಮ್ಮ ಯಜಮಾನರ ಆರೈಕೆ ಮಾಡುತ್ತಿದ್ದರಿಂದ ಈ ದಿನ ದಿನಾಂಕ:10/07/2017 ರಂದು ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ, ಈ ಅಪಘಾತಕ್ಕೆ ಮೇಲ್ಕಂಡ  ಕೆಎ-27-ಎಫ್-660 ನೇ ಕೆ.ಎಸ್.ಆರ್.ಟಿ.ಸಿ ಬಸ್ಸಿನ ಚಾಲಕನ ಮೇಲೆ  ಕಾನೂನು ರೀತ್ಯಾ ಕ್ರಮ ಜರುಗಿಸಿ ಎಂದು ಕೋರಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೇನೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 127/2017 ಕಲಂ 279,337 ಐಪಿಸಿ ರೆ/ವಿ 134(&ಬಿ), 187 ಐಎಂವಿ ಆಕ್ಟ್

ದಿನಾಂಕ-10/07/2017 ರಂದು ಮಧ್ಯಾಹ್ನ 12-30 ಗಂಟೆಗೆ ಪಿರ್ಯಾದಿಯಾದ ಎನ್‌,ಶಿವಲಿಂಗಯ್ಯ ಬಿನ್ ನರಸಿಂಹೇಗೌಡ, 73 ವರ್ಷ, ಲಿಂಗಾಯಿತರು, ಜಿರಾಯ್ತಿ, ಕಡಬ, ಗುಬ್ಬಿ ತಾಲ್ಲೂಕು, ತುಮಕೂರು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್ ಮಾಡಿಸಿದ ದೂರಿನ ಅಂಶವೇನಂಧರೆ ದಿನಾಂಕ:09-07-2017 ರಂದು ನನ್ನ ಮಗನಾದ ಕೆ,ಎಸ್,ಯತೀಶ್‌ ಬಾಬು ರವರು ನನ್ನ ಬಾಬ್ತು ಕೆಎ-06-ಎನ್‌-0452 ನೇ ಕಾರಿನಲ್ಲಿ ನನ್ನ ಮೊಮ್ಮಕ್ಕಳಿಗೆ ಹುಷಾರಿಲ್ಲದ ಪ್ರಯುಕ್ತ ಹೆಬ್ಬೂರಿಗೆ ಆಸ್ಪತ್ರೆಗೆ ತೋರಿಸಲೆಂದು ತನ್ನ ಹೆಂಡತಿ ಮಕ್ಕಳೊಂದಿಗೆ ಕಡಬದಿಂದ ಬೆಳಿಗ್ಗೆ ಸುಮಾರು 10-00 ಗಂಟೆಗೆ ಹೊರಟು ಹೆಬ್ಬೂರಿನ ವಿಧಾತ್ರಿ ಕ್ಲಿನಿಕ್‌ನಲ್ಲಿ ತೋರಿಸಿ, ನಂತರ ವಾಪಸ್‌ ಊರಿಗೆ ಬರಲೆಂದು ಬೆಳಿಗ್ಗೆ ಸುಮಾರು 11-30 ಗಂಟೆ ಸಮಯದಲ್ಲಿ ವಿಧಾತ್ರಿ ಕ್ಲಿನಿಕ್‌ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರಿನ ಹತ್ತಿರ ನನ್ನ ಮಗ ಬಂದು ಕಾರಿನ ಡೋರ್‌ ಅನ್ನು ತೆಗೆಯುತ್ತಿರುವಾಗ್ಗೆ, ಸದರಿ ನಮ್ಮ ಬಾಬ್ತು ಕಾರಿಗೆ ಹಿಂಭಾಗದಿಂದ ಅಂದರೆ ಕುಣಿಗಲ್ ಕಡೆಯಿಂದ ತುಮಕೂರು ಕಡೆಗೆ ಹೋಗಲು ಬಂದ ಕೆಎ-04-ಎಂ.ಆರ್‌-7539 ನೇ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಮ್ಮ ಕೆಎ-06-ಎನ್‌-0452 ನೇ ಕಾರಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ನನ್ನ ಮಗ ಕೆ,ಎಸ್,ಯತೀಶ್‌ ಬಾಬು ರವರಿಗೆ ಬಲ ಭುಜದ ಬಳಿ, ಬಲ ಭಾಗದ ತಲೆಗೆ, ಬಲಭಾಗದ ಮಂಡಿಗೆ ರಕ್ತಗಾಯವಾಗಿದ್ದು, ದೇಹದ ಇತರೆ ಭಾಗಗಳಿಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತೆಂತಾ, ಅಫಘಾತಪಡಿಸಿದ ಕಾರಿನ ಚಾಲಕ ತನ್ನ ಕಾರನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋದನೆಂತಾ ಸದರಿ ಅಪಘಾತದ ವಿಚಾರವನ್ನು ನನ್ನ ಸೊಸೆ ಕೆ,ಯು,ನಾಗರತ್ನ ರವರು ಪೋನ್‌ ಮಾಡಿ ತಿಳಿಸಿದ್ದು ಕೆ,ಎಸ್,ಯತೀಶ್‌ ಬಾಬು ರವರನ್ನು ನಾನು ಹಾಗೂ ಸ್ಥಳದಲ್ಲಿಯೇ ಇದ್ದ ದಂಡಿನಶಿವರ ಹೋಬಳಿ, ಬೊಮ್ಮೇನಹಳ್ಳಿ ಗ್ರಾಮದ ವಾಸಿಯಾದ ಕೆಂಪಣ್ಣ ಇಬ್ಬರೂ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ 108 ಆಂಬುಲೆನ್ಸ್‌ ವಾಹನದಲ್ಲಿ ಕರೆದುಕೊಂಡು ಹೋಗುತ್ತಿರುವುದಾಗಿ ನನ್ನ ಸೊಸೆ ನನಗೆ ವಿಚಾರ ತಿಳಿಸಿದರು. ನಂತರ ನಾನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ನನ್ನ ಮಗ ಅಪಘಾತದಿಂದ ಗಾಯಗೊಂಡಿರುವುದು ನಿಜವಾಗಿತ್ತು. ಆದ್ದರಿಂದ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಈ ಅಪಘಾತಕ್ಕೆ ಕಾರಣನಾದ ಕೆಎ-04-ಎಂ.ಆರ್‌-7539 ನೇ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ನಾನು ನನ್ನ ಮಗನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿವಸ ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ಅಫಘಾತಪಡಿಸಿದ ಹಾಗೂ ಅಪಘಾತಕ್ಕೊಳಗಾದ ಎರಡೂ ಕಾರುಗಳು ಸ್ಥಳದಲ್ಲೇ ಇರುತ್ತವೆ, ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 110 guests online
Content View Hits : 289616