ಹುಲಿಯೂರುದುರ್ಗ ಪೊಲೀಸ್ ಠಾಣಾ ಮೊ.ನಂ.147/2017 ಕಲಂ. 309 IPC
ದಿನಾಂಕ-06-07-2017 ರಂದು ಬೆಳಿಗ್ಗೆ 10-15 ಗಂಟೆ ಸಮಯದಲ್ಲಿ ಪಿರ್ಯಾದಿ ಆರ್.ಮಂಜುಳಾ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಚೌಡನಕುಪ್ಪೆ, ಹುಲಿಯೂರುದುರ್ಗ ಹೋಬಳಿ, ಕುಣಿಗಲ್ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ನಾನು ಚೌಡನಕುಪ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುಮಾರು 30 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದು, ಅಲ್ಲೇ ವಸತಿ ಗೃಹದಲ್ಲಿ ವಾಸವಿರುತ್ತೇನೆ. ಈಗಿರುವಾಗ್ಗೆ ದಿನಾಂಕ-05-07-2017 ರಂದು ಸಂಜೆ 5-30 ಗಂಟೆ ಸಮಯದಲ್ಲಿ ನಾನು ರೋಗಿಯೊಬ್ಬರನ್ನು ಚಿಕಿತ್ಸೆಗಾಗಿ ವೈಧ್ಯಾದಿಕಾರಿಗಳ ಬಳಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವಾಗ್ಗೆ, ಆಸ್ಪತ್ರೆಯ ಒಳಗೆ ಹಾಲಿನಲ್ಲಿ ವೈಧ್ಯಾದಿಕಾರಿಗಳು ತೀವ್ರ ರಕ್ತಸ್ರಾವವಾಗಿ ಪ್ರಜ್ಞೆತಪ್ಪಿ ನೆಲದಲ್ಲಿ ಬಿದ್ದಿದ್ದರು. ಅವರ ಟೇಬಲ್ ಮೇಲೆ ಸರ್ಜಿಕಲ್ ಬ್ಲೇಡ್ ಇದ್ದು ಅವರು ಆ ಬ್ಲೇಡಿನಲ್ಲಿ ರಕ್ತನಾಳಗಳನ್ನು ಕತ್ತರಿಸಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿರಬಹುದು. ನಂತರ ನಾನು ತಕ್ಷಣ ಗ್ರಾಮಸ್ತರನ್ನು ಕರೆದು ವಿಚಾರವನ್ನು ತಿಳಿಸಿ, ನಂತರ ವೈಧ್ಯರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕವಾಗಿ ಮಾಗಡಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಯಿತು. ನಂತರ ಅಲ್ಲಿದ ಸುಂಕದಕಟ್ಟೆಯ ಲಕ್ಷ್ಮೀ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆ. ತಾವು ಈ ಬಗ್ಗೆ ತನಿಖೆಯನ್ನು ನಡೆಸಿ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ನೀಡಿದ ದೂರಿನ ಅಂಶವಾಗಿರುತ್ತೆ.
ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 66/2017 - ಕಲಂ 279-337 ಐಪಿಸಿ ರೆ/ವಿ 134(ಎ)&(ಬಿ) ಐ ಎಂ ವಿ ಆಕ್ಟ್
ದಿನಾಂಕ:-06/07/2017 ರಂದು ಸಂಜೆ 4-15 ಗಂಟೆಗೆ ಮಲ್ಲೇನಹಳ್ಳಿ ಗ್ರಾಮದ ನಾಗಣ್ಣ ಬಿನ್ ನರಸಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ:02/06/2017 ರಂದು ನಾನು ಮತ್ತು ನನ್ನ ಹೆಂಡತಿ ದಂಡಿನದಿಬ್ಬದಿಂದ ಒಂದು ಆಟೋದಲ್ಲಿ ನಮ್ಮೂರಿಗೆ ಬಂದು ನಡೆದುಕೊಂಡು ನಮ್ಮ ಮನೆಯ ಹತ್ತಿರ ಹೋದಾಗ , ಎದುರುಗಡೆಯಿಂದ ಕೆಎ-64-ಕೆ-6919 ನಂಬರಿನ ಟಿ ವಿ ಎಸ್ ಹೆವಿಡ್ಯೂಟಿ ವಾಹನವನ್ನು ಚಾಲಕ ಪರಶುರಾಮ ಬಿನ್ ಈರಣ್ಣ ಮಲ್ಲೇನಹಳ್ಳಿ ಗೊಲ್ಲರಹಟ್ಟಿ ರವರು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನನ್ನ ಹೆಂಡತಿಗೆ ಡಿಕ್ಕಿ ಹೊಡೆಸಿದ್ದರಿಂದ ನನ್ನ ಹೆಂಡತಿ ಕೆಳಕ್ಕೆ ಬಿದ್ದು, ಸೊಂಟಕ್ಕೆ ಬಾರಿ ಪೆಟ್ಟು ಬಿದ್ದಿದ್ದು, ಆಕೆಯನ್ನು ಒಂದು ಆಟೋ ದಲ್ಲಿ ಮಧುಗಿರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆ ಯಂತೆ ತುಮಕೂರು ಸಿದ್ದಾರ್ಥ ಮೆಡಿಕಲ್ ಕಾಲೇಜಿಗೆ ಚಿಕಿತ್ಸೆ ಗೆ ಸೇರಿಸಿರುತ್ತೆ. ಆಸ್ಪತ್ರೆಯ ಬಳಿ ನನ್ನ ಹೆಂಡತಿಯನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ನಾನು ಅಲ್ಲೇ ಇದ್ದು ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು ಚಾಲಕನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.
ಕಳ್ಳಂಬೆಳ್ಳ ಪೊಲೀಸ್ ಠಾಣಾ ಮೊ.ನಂ. 152/2017 ಕಲಂ: 394, 342 ಐ.ಪಿ.ಸಿ ರೆ.ವಿ 25 ಆಮ್ಸ್ ಆಕ್ಟ್
ದಿನಾಂಕ:06/07/2017 ರಂದು ಬೆಳಗ್ಗೆ 9-30 ಗಂಟೆಗೆ ಪಿರ್ಯಾದಿ ಡಿ.ಎಂ ರಂಗನಾಥಪ್ಪರವರು ತನ್ನ ವಾಸದ ಮನೆಯ ಬಳಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನಾನು ದೇವರಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದು, ಜಮೀನಿನ ಹತ್ತಿರ ಚಿಕ್ಕನಹಳ್ಳಿ ಗ್ರಾಮದ ಸರ್ವೆ ನಂ 157 ರಲ್ಲಿ ಮೈಸೂರು ರಸ್ತೆ ಪಕ್ಕ ಮನೆ ಕಟ್ಟಿಕೊಂಡು, ನಾನು ಮತ್ತು ನನ್ನ ಹೆಂಡತಿ ರತ್ನಮ್ಮ ವಾಸವಾಗಿರುತ್ತೇವೆ. ನನ್ನ ಮಕ್ಕಳಾದ ಡಿ.ಆರ್ ಸುರೇಶ್ ಮತ್ತು ಡಿ.ಆರ್ ಗಿರೀಶ್ ರವರು ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ನಾನು ಮತ್ತು ನನ್ನ ಹೆಂಡತಿ ವ್ಯವಸಾಯ ಮಾಡಿಕೊಂಡಿರುತ್ತೇವೆ. ದಿನಾಂಕ:05/07/2017 ರಂದು ರಾತ್ರಿ 8-45 ಗಂಟೆ ಸಮಯದಲ್ಲಿ ನಾನು ನನ್ನ ಹೆಂಡತಿ ರತ್ನಮ್ಮ ಊಟ ಮಾಡಿ ಬಾಗಿಲು ತೆಗೆದಿಟ್ಟುಕೊಂಡು ಮನೆಯ ಹಾಲ್ ನಲ್ಲಿ ಟಿ.ವಿ ನೋಡುತ್ತಾ ಕುಳಿತಿರುವಾಗ, ಇದ್ದಕ್ಕಿದ್ದಂತೆ 3 ಜನ ಅಪರಿಚಿತ ವ್ಯಕ್ತಿಗಳು ಮನೆಯೊಳಗೆ ನುಗ್ಗಿದರು. ಅದರಲ್ಲಿ ಇಬ್ಬರ ಹತ್ತಿರ ಚಾಕು ಮತ್ತು ಪಿಸ್ತೂಲ್ ಇದ್ದವು. ಅವರುಗಳು ಚಾಕು ಮತ್ತು ಪಿಸ್ತೂಲನ್ನು ನನಗೂ ನನ್ನ ಹೆಂಡತಿಗೂ ತೋರಿಸಿ ಹೆದರಿಸಿ ಹಿಂದಿ ಬಾಷೆಯಲ್ಲಿ ಮಾತನಾಡುತ್ತಾ, ನನ್ನನ್ನು ನನ್ನ ಹೆಂಡತಿಯ ಬಾಯನ್ನು ಮುಚ್ಚಿ ನಮ್ಮನ್ನು ರೂಮ್ ನೊಳಗೆ ಎಳೆದುಕೊಂಡು ಹೋಗಿ ಇನ್ನೊಬ್ಬ ವ್ಯಕ್ತಿ ನಮ್ಮ ಮನೆಯಲ್ಲಿದ್ದ ಪ್ಲಾಸ್ಟಿಕ್ ದಾರವನ್ನು ತೆಗೆದುಕೊಂಡು ನಮ್ಮಿಬ್ಬರುಗಳನ್ನು ಕೈ ಕಾಲುಗಳನ್ನು ಕಟ್ಟಿ ಹಾಕಿದರು. ನಾನು ಜೋರಾಗಿ ಕೂಗಿಕೊಂಡಾಗ ಇನ್ನೊಬ್ಬ ವ್ಯಕ್ತಿ ನನ್ನ ಬಾಯನ್ನು ಮುಚ್ಚಲು ಬಂದಾಗ ನಾನು ಅವನ ಕೈಯನ್ನು ಕಚ್ಚಿದಾಗ, ಅವನ ಕೈಯಿಂದ ರಕ್ತ ಬಂತು. ಆಗ ಅವನು ಅವನ ಕೈಲಿದ್ದ ರಾಡಿನಿಂದ ನನ್ನ ಬೆನ್ನಿಗೆ ಹೊಡೆದನು. ನನ್ನ ಬೆನ್ನಿಗೆ ಗಾಯವಾಯಿತು. ನಂತರ 3 ಜನರು ಗಾಡ್ರೇಜ್ ಬೀರನ್ನು ಹೊಡೆದು ಹಣ ಮತ್ತು ಒಡವೆ ಎಲ್ಲಿದೆ ಅಂತ ಕೂಗಾಡಿದರು ಗಾಡ್ರೇಜ್ ಬೀರುವಿನಲ್ಲಿ ಏನೂ ಸಿಗದೆ ಇದ್ದುದರಿಂದ ಮನೆಯಲ್ಲಿ ಎಲ್ಲ ಕಡೆ ಹುಡುಕಾಡಿದರು. ನಂತರ ನಮ್ಮನ್ನು ಕಟ್ಟಿಹಾಕಿ ಕೂರಿಸಿದ್ದ ಪಕ್ಕದಲ್ಲಿ ರಾಗಿ ಮತ್ತು ಶೇಂಗಾ ಚೀಲಗಳನ್ನು ಇಟ್ಟಿದ್ದು ಅದರಲ್ಲಿ ರಾಗಿ ಚೀಲವನ್ನು ಹುಡುಕಾಡಿ ಆ ಚೀಲದಲ್ಲಿ ಇಟ್ಟಿದ್ದ 1] 40 ಗ್ರಾಂ ನ ಒಂದು ಕಾಸಿನ ಸರ 2] 40 ಗ್ರಾಂ ನ 2 ಎಳೆ ಸರ 3] 40 ಗ್ರಾಂ ನ ಹರಳಿನ ಬಿಲ್ಲೆ 4] ತಲಾ 5 ಗ್ರಾಂನ 2 ಕಪಾಲಿ ಉಂಗುರ 5] 5 ಗ್ರಾಂ ನ ಒಂದು ಜೊತೆ ಜುಮಕಿ 6] 5 ಗ್ರಾಂ ನ ಒಂದು ಜೊತೆ ಓಲೆ ಇವುಗಳನ್ನು ತೆಗೆದುಕೊಂಡು ನಂತರ ನನ್ನ ಹೆಂಡತಿಯ ಕಿವಿಯಲ್ಲಿದ್ದ ಕಿವಿಯೋಲೆ 5 ಗ್ರಾಂ ಮತ್ತು ನನ್ನ ಹೆಂಡತಿಯ ಕುತ್ತಿಗೆಯಲ್ಲಿದ್ದ 10 ಗ್ರಾಂ ನ ಚಿನ್ನದ ತಾಳಿ ಇವುಗಳನ್ನು ಕಿತ್ತುಕೊಂಡು ನಂತರ ನಮ್ಮಿಬ್ಬರನ್ನು ರೂಂ ನಲ್ಲಿ ಕೂಡಿಹಾಕಿ ಹೊರಟು ಹೋದರು. ರಾತ್ರಿಯೆಲ್ಲಾ ಕೂಗಾಡಿದರೂ ಕೂಡ ಮನೆಯ ಹತ್ತಿರ ಯಾರೂ ಬರದೇ ಇದ್ದುದರಿಂದ ಬೆಳಗಿನ ವರೆಗೂ ಹಾಗೆಯೇ ಇದ್ದೆವು. ಬೆಳಗ್ಗೆ 7-30 ಗಂಟೆ ಸಮಯದಲ್ಲಿ ನಮ್ಮ ಊರಿನ ಬೊಮ್ಮಣ್ಣನ ಮಗ ವೀರೇಶ ಜಮೀನಿಗೆ ಹೋಗಲು ನಮ್ಮ ಮನೆಯ ಹಿಂಭಾಗಕ್ಕೆ ಬಂದಾಗ ನಾನು ಹಗ್ಗ ಬಿಚ್ಚಿಕೊಂಡು ನಂತರ ನನ್ನ ಹೆಂಡತಿಯ ಹಗ್ಗ ಬಿಚ್ಚಿ ಕೂಗಿಕೊಂಡಿದ್ದು, ಆಗ ವೀರೇಶ ಬಂದು ಬಾಗಿಲು ತೆಗೆದು ನನ್ನನ್ನು ನನ್ನ ಹೆಂಡತಿಯನ್ನು ಮನೆಯಿಂದ ಹೊರಗೆ ಕರೆದುಕೊಂಡು ಬಂದರು. ಅಪರಿಚಿತ ವ್ಯಕ್ತಿಗಳು ಬಂದವರು ಹಿಂದಿಯಲ್ಲಿ ಮಾತನಾಡುತ್ತಿದ್ದರು, ಸುಮಾರು 25 ರಿಂದ 30 ವರ್ಷ ವಯಸ್ಸಿನವರಾಗಿರುತ್ತಾರೆ. ನಮ್ಮಿಂದ ಕಿತ್ತುಕೊಂಡು ಹೋದ ವಡವೆಗಳ ಮೌಲ್ಯ ಸುಮಾರು 3 ಲಕ್ಷ ಆಗಿರುತ್ತದೆ. ನಮ್ಮನ್ನು ಬೆದರಿಸಿ ಹೊಡೆದು ಕೂಡಿಹಾಕಿ ವಡವೆ ಕಿತ್ತುಕೊಂಡು ಹೋದ ಆರೋಪಿಗಳನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕೆಂದು ನೀಡಿದ ಪಿರ್ಯಾದನ್ನು ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.
|