lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >> ತುಮಕೂರು ಜಿಲ್ಲೆಯಲ್ಲಿ 2018 ನೇ ಮೇ ಮಾಹೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳ... >> ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< July 2017 >
Mo Tu We Th Fr Sa Su
          1 2
3 5 6 7 8 9
10 11 12 13 14 15 16
17 18 19 20 21 22 23
24 25 26 27 28 29 30
31            
Tuesday, 04 July 2017
Crime Incidents 04-07-17

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ;129/2017 ಕಲಂ: 279,337 ಐ.ಪಿ.ಸಿ

ದಿನಾಂಕ: 03/07/2017 ರಂದು ಸಂಜೆ 07-00 ಗಂಟೆಗೆ ಪಿರ್ಯಾದಿ ಅಹಮದ್ ಪಾಷಾ ಬಿನ್ ಬಾಷಾ ಸಾಬ್, 26 ವರ್ಷ, ಮುಸ್ಲೀಂ, ಕೂಲಿಕೆಲಸ, ಕಾರೇಹಳ್ಳಿ, ಚಂದ್ರಪಟ್ಟಣ ತಾಲ್ಲೋಕ್ ಹಾಸನ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಮ್ಮ ತಂದೆಯವರಾದ ಬಾಷಾ ಸಾಬ್ ಹಾಗೂ ಅಕ್ಕ ಜಬೀನಾ ಇವರುಗಳು  ದಿನಾಂಕ: 02/07/2017 ರಂದು ಮಧ್ಯಾಹ್ನ 01-30 ಗಂಟೆಯ ಸಮಯದಲ್ಲಿ ತಿಪಟೂರಿನಲ್ಲಿರುವ ನೆಂಟರ ಮನೆಗೆ ಬಂದಿದ್ದು, ಮನೆಗೆ ಗೃಹ ಉಪಯೋಗಿ ಸಾಮಾನುಗಳನ್ನು ಖರೀದಿಸಲೆಂದು ತಿಪಟೂರು ಟೌನ್ ರಂಗಾಪುರ ರಸ್ತೆ ಪುರಿ ಭಟ್ಟಿ ಮುಂಭಾಗ ರಸ್ತೆಯ ಎಡಬದಿಯಲ್ಲಿ ತಮ್ಮ ಬಾಬ್ತು ಕೆ.ಎ-13 -9184 ನೇ ಟಿ.ವಿ.ಎಸ್ ಎಕ್ಸ್  ವಾಹನದಲ್ಲಿ ಹೋಗುತ್ತಿದ್ದಾಗ ಅವರ ಹಿಂಬದಿಯಿಂದ ಬಂದ ನಂ-ಕೆ.ಎ-44 ಎಸ್-6642 ನೇ ಸ್ಪ್ಲೆಂಡರ್ ದ್ವಿಚಕ್ರ ವಾಹನದ ಚಾಲಕನು ಅತಿವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಮ್ಮ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ನಮ್ಮ ತಂದೆಯವರಿಗೆ ಎಡಗಾಲು ಮತ್ತು ಸೊಂಟಕ್ಕೆ ಪೆಟ್ಟಾಗಿದ್ದು, ನಮ್ಮ ಅಕ್ಕನಿಗೆ ತಲೆ,ಕೈ ಹಾಗೂ ಸೊಂಟಕ್ಕೆ ಗಾಯವಾಗಿದ್ದು, ಸ್ಥಳೀಯರು ಅವರನ್ನು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿದ್ದು, ನಮ್ಮ ದ್ವಿಚಕ್ರ ವಾಹನವು ಜಖಂಗೊಂಡಿರುತ್ತೆ. ಆದ್ದರಿಂದ ಈ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ನಂ-ಕೆ.ಎ-44 ಎಸ್-6642 ನೇ ಸ್ಪ್ಲೆಂಡರ್ ದ್ವಿಚಕ್ರ ವಾಹನದ ಚಾಲಕನ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಕೋರಿರುವ ದೂರಿನ ಅಂಶವಾಗಿರುತ್ತೆ.

 

ತುಮಕೂರು ನಗರ ಠಾಣೆ ಪೊಲೀಸ್‌ ಠಾಣೆ ಮೊ.ಸಂ 118/2017 ಕಲಂ 379 ಐಪಿಸಿ

ದಿನಾಂಕ 03-07-2017 ರಂದು ಮಧ್ಯಾಹ್ನ 03-00 ಗಂಟೆಗೆ ಪಿರ್ಯಾದಿ ಕೆ.ಹೆಚ್.ಗಂಗಾಧರಯ್ಯ ಬಿನ್ ಸಿ.ಹನುಮಂತಯ್ಯ, ಟೂಡಾ ಲೇಔಟ್, ತುಮಕೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದು ಅಂಶವೇನೆಂದರೆ, ದಿನಾಂಕ 03-07-2017 ರಂದು ಬೆಳಗ್ಗೆ 11-30 ರಿಂದ 12-00 ಗಂಟೆಗೆ ಕೆನರಾ ಬ್ಯಾಂಕ್ ಮುಖ್ಯ ಶಾಖೆಯಿಂದ ಎರಡು ಲಕ್ಷ ರೂ ಗಳನ್ನು ಡ್ರಾ ಮಾಡಿ ನನ್ನ ಬಾಬ್ತು ಕೆಎ06-ಎಲ್-1198 ರ ವೆಸ್ಪ ದ್ವಿಚಕ್ರವಾಹನದ ಮುಂದಿನ ಡಿಕ್ಕಿಯಲ್ಲಿ ಹಣವನ್ನು ಇಟ್ಟುಕೊಂಡು ಬ್ಯಾಂಕಿನಿಂದ ಹೊರಟು ಹಳೇ ಡಿ.ಸಿ.ಕಾಂಪೌಂಡ್ ನಲ್ಲಿರುವ ಆಹಾರ ಇಲಾಖೆಯ ರೇಷನ್ ಕಾರ್ಡನ್ನು ವಿಚಾರಿಸಲು 12-00 ರಿಂದ 12-30 ಗಂಟೆ ಸಮಯದಲ್ಲಿ ಒಳಗೆ ಹೋಗಿ ಹೊರಗೆ ಬಂದು ನೋಡಿದಾಗ ಯಾರೋ ಕಳ್ಳರು ನನ್ನ ವಾಹನದ ಡಿಕ್ಕಿಯನ್ನು ಮೀಟಿ ಎರಡು ಲಕ್ಷ ರೂಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಅಲ್ಲಿದ್ದ ಸಾರ್ವಜನಿಕರನ್ನು ವಿಚಾರಿಸಿದಾಗ ಕಳ್ಳರ ಬೈಕ್ ನಂ.ಕೆಎ.....9177 ಎಂದು ತಿಳಿಸಿದ್ದು ಸದರಿ ಕಳ್ಳರನ್ನು ಪತ್ತೆ ಮಾಡಿ ನನ್ನ ಹಣವನ್ನು ದೊರಸಿಕೊಡಲು ಕೋರುತ್ತೇನೆ ಇತ್ಯಾದಿಇದ್ದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ.146/2017  ಕಲಂ. 279, 337 ಐಪಿಸಿ

ದಿನಾಂಕ-03-07-2017 ರಂದು ಸಂಜೆ 6-10 ಗಂಟೆ ಸಮಯದಲ್ಲಿ ಪಿರ್ಯಾದಿ ಬಸವರಾಜು ಬಿನ್‌ ಲೇಟ್‌ ಯಡಿಯೂರಪ್ಪ, 48 ವರ್ಷ, ಲಿಂಗಾಯಿತರು, ಜಿರಾಯ್ತಿ, ಇಪ್ಪಾಡಿ ಗ್ರಾಮ, ಹುತ್ರೀದುರ್ಗ ಹೋಬಳಿ, ಕುಣಿಗಲ್‌ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ-01-07-2017 ರಂದು ಭಾನುವಾರ ಬೆಳಿಗ್ಗೆ 3-00 ಗಂಟೆ ಸಮಯದಲ್ಲಿ ನನ್ನ ಮಗ ಸುಮಂತ್‌ ನ ಮೊಬೈಲ್‌ ನಿಂದ ಯಾರೋ ಕರೆಮಾಡಿ, ನಿಮ್ಮ ಮಗನಿಗೆ ಮತ್ತು ಕಾರಿನ ಚಾಲಕ ಕಾಂತರಾಜು.ಎಸ್‌ ಬಿನ್‌ ಸಜ್ಜನ್‌ ಕುಮಾರ್‌ ರವರಿಗೆ ಏರೋಹಳ್ಳಿ ಗ್ರಾಮದ ಬಳಿ ಬೆಳಿಗ್ಗೆ 2-30 ಗಂಟೆಯ ಸಮಯದಲ್ಲಿ ಅಪಘಾತವಾಗಿದೆ ಎಂದು ತಿಳಿಸಿದರು. ತಕ್ಷಣ ನಾನು ಇಪ್ಪಾಡಿ ಗ್ರಾಮದಿಂದ ಬಂದು ನೋಡಲಾಗಿ ಘಟನೆ ನಿಜವಾಗಿತ್ತು. ನಂತರ ನನ್ನ ಮಗನನ್ನು ವಿಚಾರಮಾಡಲಾಗಿ ಚೌಡನಕುಪ್ಪೆ ಗ್ರಾಮದಲ್ಲಿ ಎಸ್‌ ಕಾಂತರಾಜು ರವರ ಸಂಭಂದಿಕರು ತೀರಿಹೋಗಿದ್ದು, ನಾನು ಮತ್ತು ಕಾತರಾಜು ಅಂತ್ಯಕ್ರಿಯೆಗೆ ಹೋಗಿ ನಂತರ ಭಾನುವಾರ ಬೆಳಗಿನ ಜಾವ ಚೌಡನಕುಪ್ಪೆಯಿಂದ ವಾಪಾಸ್‌ ಬರುವಾಗ್ಗೆ ಕಾಂತರಾಜು ತನ್ನ ಬಾಬ್ತು ಕೆಎ-06-ಡಿ-9294 ನೇ ಟಯೋಟಾ ಇಟಿಯಾಜ್‌ ಕಾರನ್ನು ಚಾಲನೆ ಮಾಡುತ್ತಿದ್ದು ನಾನು ಪಕ್ಕದ ಸೀಟಿನಲ್ಲಿ ಕುಳಿತಿದ್ದೆನು. ನಂತರ ಬೆಳಿಗ್ಗೆ 2-30 ಗಂಟೆ ಸಮಯದಲ್ಲಿ ಕಾಂತರಾಜು ತಾನು ಚಾಲನೆ ಮಾಡುತ್ತಿದ್ದ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ಏರೋಹಳ್ಳಿ ಸರ್ಕಾರಿ ಶಾಲೆಯ ಮುಂಭಾಗದ ರಸ್ತೆಯ ಬದಿಯ ಚರಂಡಿಗೆ ಚಾಲನೆ ಮಾಡಿದ್ದರಿಂದ ಕಾರು ಮೋರಿಗೆ ಬಿದ್ದು ಅಪಘಾತವಾಗಿರುತ್ತೆ ಎಂದು ತಿಳಿಸಿದನು. ನಂತರ ನನ್ನ ಮಗನನ್ನು ಉಪಚರಿಸಿ ನೋಡಲಾಗಿ ಆತನಿಗೆ ಎಡಗಾಲಿಗೆ ಹಾಗೂ ತಲೆಗೆ ಮತ್ತು ದೇಹದ ಇತರ ಭಾಗಗಳಿಗೆ ರಕ್ತಗಾಯವಾಗಿದ್ದವು. ನಂತರ ಕಾರಿನ ಚಾಲಕನನ್ನು ನೋಡಲಾಗಿ ಆತನಿಗೆ ಮಂಡಿಗೆ ಮತ್ತು ಎಡಗೈಗೆ ರಕ್ತಗಾಯವಾಗಿದ್ದವು. ತಕ್ಷಣ ನಾನು ಸಾರ್ವಜನಿಕರ ಸಹಾಯದಿಂದ ಅವರನ್ನು ಯಾವುದೋ ಆಟೋದಲ್ಲಿ ಕರೆದುಕೊಂಡು ಹೋಗಿ ಮಾಗಡಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿ ನಂತರ ವೈಧ್ಯರ ಸಲಹೆಯ ಮೇರೆಗೆ 108 ಆಂಬುಲೆನ್ಸ್‌ ನಲ್ಲಿ ಕೆರೆದುಕೊಂಡು ಹೋಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲುಪಡಿಸಿದೆವು. ಆದ್ದರಿಂದ ಈ ಅಪಘಾತಕ್ಕೆ ಕಾರಣನಾದ ಕೆಎ-06-ಡಿ-9294 ನೇ ಟಯೋಟಾ ಇಟಿಯಾಜ್‌ ಕಾರಿನ ಚಾಲಕ ಕಾಂತರಾಜು.ಎಸ್‌ ರವರ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ನೀಡಿದ ದೂರಿನ ಅಂಶವಾಗಿರುತ್ತೆ.

ಮಧುಗಿರಿ ಪೊಲೀಸ್ ಠಾಣಾ ಮೊ.ನಂ: 125/2017 u/s : 279,337 IPC

ಪಿರ್ಯಾದಿ ಹನುಮಂತರಾಯಪ್ಪ ಬಿನ್ ಹನುಮಂತರಾಜು, 35 ವರ್ಷ, ಭೋವಿ ಜನಾಂಗ, ಕೂಲಿಕೆಲಸ, ಡಿ.ವಿಹಳ್ಳಿ ಕಸಬಾ ಹೋಬಳಿ, ಮಧುಗಿರಿ ತಾಲ್ಲೂಕು ರವರು ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ ಪಿರ್ಯಾದಿಯು ಮಧುಗಿರಿಗೆ ಬರಲು R.N ರೊಪ್ಪ ಗ್ರಾಮದ ವಾಸಿ ಇಸ್ಮಾಯಿಲ್ ಜಬೀವುಲ್ಲಾರವರ KA-06-C-5828 ನೇ ಆಟೋದಲ್ಲಿ ಕುಳಿತುಕೊಂಡು, ಪಿರ್ಯಾದಿಯೊಂದಿಗೆ ರಮೇಶ, ನಯಾಜ್ ರವರೆಲ್ಲರೂ ಮಧುಗಿರಿ ಕಡೆಗೆ ಆಟೋದಲ್ಲಿ ಹೋಗುತ್ತಿದ್ದಾಗ, ಗುಂಡ್ಲಹಳ್ಳಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಪ್ಯಾಸೆಂಜರ್ ಹತ್ತಿಸಿಕೊಳ್ಳಲು ಆಟೋ ನಿಲ್ಲಿಸಿ, ಗುಂಡ್ಲಹಳ್ಳಿ ವಾಸಿ ರಂಗಯ್ಯನವರನ್ನು ಹತ್ತಿಸಿಕೊಳ್ಳುತ್ತಿರುವಾಗ್ಗೆ, ಹಿಂಬದಿಯಿಂದ ಬಂದ KA-64-0724 Tata Indica ಕಾರಿನ ಚಾಲಕ   ಕಾರನ್ನು ಓಡಿಸಿಕೊಂಡು ಡಿಕ್ಕಿ ಹೊಡೆಸಿದ ಪರಿಣಾಮ, ಪಿರ್ಯಾದಿ ಹಾಗೂ ಇತರರಿಗೆ ಜ್ಞಾನ ತಪ್ಪಿದಂತಾಗಿರುತ್ತದೆ. ನಂತರ ಸಾರ್ವಜನಿಕರು ಯಾವುದೋ ಆಟೋದಲ್ಲಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ.  ನಂತರ ಪಿರ್ಯಾದಿಯು ವಿಷಯ ತಿಳಿಯಲಾಗಿ ಕಾರಿನಲ್ಲಿದ್ದವರಿಗೂ & ಆಟೋ ಚಾಲಕನಿಗೂ ಸಹ ಪೆಟ್ಟಾಗಿರುತ್ತದೆ. ಪಿರ್ಯಾದಿಯು ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಈ ದಿನ ಠಾಣೆಗೆ ಹಾಜರಾಗಿ KA-64-0724 Tata Indica ಕಾರು ಮತ್ತು ಚಾಲಕನ ವಿರುದ್ದ ಕಾನೂನು ರಿತ್ಯಾ ಕ್ರಮ ಜರುಗಿಸಬೇಕೆಂದು ಕೊರುತ್ತೇನೆಂತಾ ನೀಡಿದ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಮಧುಗಿರಿ ಪೊಲೀಸ್ ಠಾಣಾ ಯು.ಡಿ.ಆರ್ ಸಂಖ್ಯೆ 21/2017 ಕಲಂ 174 ಸಿ.ಆರ್ ಪಿ.ಸಿ

ಈ ಕೇಸಿನ ಪಿರ್ಯಾದಿ ಅಶ್ವತ್ಥಪ್ಪ ಬಿನ್ ಪುಟ್ಟರಂಗಪ್ಪ, 35 ವರ್ಷ, ವ್ಯವಸಾಯ, ಗಾರೆ ಕೆಲಸ, ಚಿಕ್ಕಣ್ಣನಪಾಳ್ಯ, ಮಧುಗಿರಿ ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ ಪಿರ್ಯಾದಿಯ ದೊಡ್ಡಪ್ಪನ ಮಗನಾದ ಪ್ರಕಾಶ ಬಿನ್ ರಂಗಪ್ಪನವರು ದಿನಾಂಕ: 18-06-2017 ರಂದು ಮದ್ಯಾಹ್ನ 03.00 ಗಂಟೆಯ ಸಮಯದಲ್ಲಿ ತನ್ನ ಹೊಲದ ಪಕ್ಕದಲ್ಲಿರುವ ಗುಟ್ಟೆಯಲ್ಲಿ ಯಾವುದೋ ವಿಷವನ್ನು ಕುಡಿದಿದ್ದರಿಂದ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ ನಂತರ ವೈದ್ಯರ ಸಲಹೆ ಮೇರೆಗೆ ತುಮಕೂರು ಜಿಲ್ಲಾಸ್ಪತ್ರೆಗೆ ಸೇರಿಸಿ, ಅಲ್ಲಿಂದ ಬೆಂಗಳೂರು ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಿ ಅಂದಿನಿಂದ ಚಿಕಿತ್ಸೆ ಕೊಡಿಸುತ್ತಿದ್ದರು. ದಿನಾಂಕ: 03-07-2017 ರಂದು ಬೆಳಿಗ್ಗೆ 06.00 ಗಂಟೆಯ ಸಮಯದಲ್ಲಿ ಪ್ರಕಾಶ್ ರವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ. ಪ್ರಕಾಶ ರವರು ಕೆಲವು ಕಡೆ ಸಾಲ ಮಾಡಿಕೊಂಡಿದ್ದು, ಜೀವನದಲ್ಲಿ ಜಿಗುಪ್ಸೆ ಹೊಂದಿ ವಿಷ ಕುಡಿದು ಸಾವನಪ್ಪಿರುತ್ತಾರೆಯೇ ವಿನಃ ಆತನ ಸಾವಿನಲ್ಲಿ ಮತ್ಯಾವುದೇ ಕಾರಣವಿರುವುದಿಲ್ಲ, ಈ ಬಗ್ಗೆ ಮುಂದಿನ ಕಾನೂನು ರಿತ್ಯಾ ಕ್ರಮ ಜರುಗಿಸಬೇಕೆಂತಾ ಕೋರುತ್ತೇನೆಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ.ನಂ: 122/2017 ಕಲಂ-143,147,148, 323, 324,504 ರೆ/ವಿ 149 ಐಪಿಸಿ

ದಿನಾಂಕ-03/07/2017 ರಂದು ಮದ್ಯಾಹ್ನ 2-10  ಗಂಟೆಗೆ ಪಿರ್ಯಾದಿಯಾದ  ಅಜೀಮಾ ಬೀ ಕೋಂ ಲೇಟ್‌ ಅಧಮ್‌ ಸಾಬ್‌, ಎಂ.ಎಸ್‌.ಪಾಳ್ಯ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೊಕು ರವರು ಠಾಣೆಗೆ ಹಾಜರಾಗಿ ಬರೆಯಿಸಿ  ಕೊಟ್ಟ ದೂರಿನ ಅಂಶವೇನೆಂದರೆ ನನ್ನ ಗಂಡನ ಮರಣದ ನಂತರ ನನ್ನ ಮಕ್ಕಳನ್ನು ನಾನೇ ಕೂಲಿ ನಾಲಿ ಮಾಡಿಕೊಂಡು ಜೀವನ ನಡೆಸುತ್ತಾ ನನ್ನ ಮಗಳಿಗೆ ಮದುವೆ ಮಾಡಿ ಕಳುಹಿಸಿರುವುದು ಸರಿಯಷ್ಟೇ. ಇತ್ತೀಚೇಗೆ ನನ್ನ ಮಗಳು ತವರು ಮನೆಯಾದ ನನ್ನ ಮನೆಗೆ ಬಂದಿದ್ದಳು. ಈ ದಿನವನ್ನೇ ಕಾಯುತ್ತಿದ್ದ ಇದೇ ಊರಿನ ವಾಸಿಗಳಾದ 1] ಅಪ್ರೋಜ್‌ ಪಾಷ ಮತ್ತು ಆತನ ತಂದೆ 2] ಮುಸ್ತಾಫಾ ಮತ್ತು 3] ಉಭೇದುಲ್ಲಾ 4] ಜಬೀವುಲ್ಲಾ 5] ಸರದಾರ್‌ ಬಿನ್‌ ಪಾಚಾಸಾಬ್‌ ಇವರುಗಳು ಸೇರಿಕೊಂಡು ನಮಗೂ ಮತ್ತು ಮದುವೆಗೆ ಮುಂಚೆ ನನ್ನ ಮಗಳಿಗೂ ವಿನಾಃ ಕಾರಣ ಕಿರುಕುಳ ನೀಡುತ್ತಿದ್ದರು. ಅದೇ ರೀತಿ ದಿನಾಂಕ:03/07/2017 ರಂದು ಬೆಳಿಗ್ಗೆ 7-30 ಗಂಟೆಯಲ್ಲಿ ಇವರೆಲ್ಲಾ ಸೇರಿಕೊಂಡು ಹಳೆಯ ದ್ವೇಷದ ಹಿನ್ನೇಲೆಯಲ್ಲಿ ಇವರದೊಂದಿಗೆ ಚೋಟು ಎಂಬುವನು ಸೇರಿಕೊಂಡು ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಾ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಗಲಾಟೆಗೆ ಬಂದು ನಮ್ಮ ಮನೆ ಮುಂದೆ ನಮ್ಮನ್ನು ಹೊಡೆದು ಬಡಿದು ನೋವುಂಟು ಮಾಡಿದರು. ಆಗ ನನ್ನ ಮಗನಾದ ಇಂಬ್ರಾನ್‌, 14 ವರ್ಷ ಎಂಬುವನು ಜಗಳ ಬಿಡಿಸಲು ಬಂದಾಗ ಅಪ್ರೋಜ್‌ ಪಾಷ ಎಂಬುವನು ಕಿಟಕಿ ಕಂಬಿಗಳಿಗೆ ನನ್ನ ಮಗನ ತಲೆ ಹಿಡಿದುಕೊಂಡು ಬಲವಾಗಿ ಗುದ್ದಿಸಿ, ತೀವ್ರವಾದ ರಕ್ತಗಾಯಪಡಿಸಿದನು. ನಂತರ ನನ್ನನ್ನು ಮತ್ತು ನನ್ನ ಮಗಳನ್ನು ಮನ ಬಂದಂತೆ ಕೈ ಕಾಲುಗಳಿಂದ ಹೊಡೆದು ಬಡಿದು ತೊಂದರೆ ನೀಡಿ ನೋವುಂಟು ಮಾಡಿದರು. ನಂತರ ನಾವು ಅಕ್ಕಪಕ್ಕದ ನಿವಾಸಿಯಾದ ಕಲೀಂ ಉಲ್ಲಾ ಮತ್ತು ಇಂತಿಯಾಜ್‌ ರವರ ಸಹಾಯ ಪಡೆದುಕೊಂಡು ಹೆಬ್ಬೂರಿಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿಕೊಂಡು ಗಾಯಕ್ಕೆ ಹೊಲಿಗೆ ಹಾಕಿಸಿಕೊಂಡು, ಬ್ಯಾಂಡೀಜ್‌ ಮಾಡಿಸಿಕೊಂಡು ನಂತರ ಠಾಣೆಗೆ ಬಂದು ಮೇಲ್ಕಂಡವರ ವಿರುದ್ದ  ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 109 guests online
Content View Hits : 289615