lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

  ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >> ತುಮಕೂರು ಜಿಲ್ಲೆಯಲ್ಲಿ 2018 ನೇ ಮೇ ಮಾಹೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳ... >> ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< July 2017 >
Mo Tu We Th Fr Sa Su
          1 2
4 5 6 7 8 9
10 11 12 13 14 15 16
17 18 19 20 21 22 23
24 25 26 27 28 29 30
31            
Monday, 03 July 2017
Crime Incidents 03-07-17

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ.145/2017  ಕಲಂ. 324, 504, 506 ರೆ/ವಿ 34 ಐಪಿಸಿ

ದಿನಾಂಕ-02-07-2017 ರಂದು ರಾತ್ರಿ 8-30 ಗಂಟೆ ಸಮಯದಲ್ಲಿ ಪಿರ್ಯಾದಿ ಬಸವಯ್ಯ ಬಿನ್‌ ಲೇಟ್‌ ಮಲ್ಲಯ್ಯ, 65 ವರ್ಷ, ವಕ್ಕಲಿಗರು, ಜಿರಾಯ್ತಿ, ಕಾಚಿಹಳ್ಳಿ ಗ್ರಾಮ, ಉಜ್ಜಿನಿ ದಾಖಲೆ, ಹುಲಿಯೂರುದುರ್ಗ ಹೋಬಳಿ, ಕುಣಿಗಲ್‌ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ-02-07-2017 ರಂದು ಸಂಜೆ 6-00 ಗಂಟೆ ಸಮಯದಲ್ಲಿ ನಾನು ನಮ್ಮ ಜಮೀನನ್ನು ಉಳುಮೆ ಮಾಡಿ ನಂತರ ವಾಪಾಸ್‌ ಮನೆಗೆ ಬರುವಾಗ್ಗೆ ನಮ್ಮ ಗ್ರಾಮದ ರಾಜಣ್ಣ ಮತ್ತು ಈತನ ಹೆಂಡತಿಯಾದ ಭಾಗ್ಯಮ್ಮ ಇಬ್ಬರೂ ನನ್ನನ್ನು ಅಡ್ಡಗಟ್ಟಿ ಹೀನಾಯಮಾನವಾಗಿ ಬೈದು ನಿಂದಿಸಿದ್ದಲ್ಲದೆ, ಹಳೇಯ ದ್ವೇಶದ ಹಿನ್ನೆಲೆಯಲ್ಲಿ ರಾಜಣ್ಣ ಆತನ ಕೈಯಲ್ಲಿದ್ದ ಮಚ್ಚಿನಿಂದ ನನ್ನ ತಲೆಯ ಎಡಭಾಗಕ್ಕೆ ಹೊಡೆದು ರಕ್ತಗಾಯಪಡಿಸಿದನು. ಇವನು ಹೊಡೆದ ರಭಸಕ್ಕೆ ನಾನು ಕೆಳಗೆ ಬಿದ್ದೆನು. ನಂತರ ಕೆ.ಬ್ಯಾಡರಹಳ್ಳಿ ಗ್ರಾಮದ ಟ್ರಾಕ್ಟರ್‌ ಡ್ರೈವರ್‌ ಚಂದ್ರ ಎಂಬುವವರು ಓಡಿಬಂದು ಜಗಳವನ್ನು ಬಿಡಿಸಿ ನನ್ನನ್ನು ಎತ್ತಿ ಕೂರಿಸಿದರು. ನಂತರ ನನ್ನ ಅಳಿಯನಾದ ಗಂಗತಿಮ್ಮಯ್ಯ ರವರಿಗೆ ದೂರವಾಣಿಯ ಮೂಲಕವಾಗಿ ವಿಚಾರ ತಿಳಿಸಿದ್ದು, ನನ್ನ ಅಳಿಯ ಕೂಡಲೇ ಬಂದು ನನ್ನನ್ನು ತನ್ನ ವಾಹನದಲ್ಲಿ ಹುಲಿಯೂರುದುರ್ಗ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ದಾಖಲಿಸಿದರು. ಆದ್ದರಿಂದ ನನ್ನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿ ಗಲಾಟೆ ಮಾಡಿರುವ ಮೇಲ್ಕಂಡ ಆರೋಪಿತರ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ನೀಡಿದ ದೂರಿನ ಅಂಶವಾಗಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ.ನಂ: 121/2017 ಕಲಂ 279, 337 ಐ,ಪಿ,ಸಿ ರೆ/ವಿ 134(ಎ)&(ಬಿ), 187 ಐ,ಎಂ,ವಿ ಆಕ್ಟ್‌

ದಿನಾಂಕ-02/07/2017 ರಂದು ಮಧ್ಯಾಹ್ನ 12-00 ಗಂಟೆಗೆ ಪಿರ್ಯಾದಿಯಾದ ವೀರಭದ್ರಪ್ಪ ಬಿನ್ ಪುಟ್ಟರುದ್ರಪ್ಪ, 38 ವರ್ಷ, ಪುಟ್ಟಸ್ವಾಮಯ್ಯನಪಾಳ್ಯ, ಶೀರಾ ಗೇಟ್, ತುಮಕೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೇಂದರೆ ನಾನು ದಿನಾಂಕ-01/07/2017 ರಂದು ಬೆಳಿಗ್ಗೆ ಸ್ವಂತ ಕೆಲಸದ ನಿಮಿತ್ತ ನಾಗವಲ್ಲಿಗೆ ಬಂದು ಕೆಲಸ ಮುಗಿಸಿ, ನಂತರ ತುಮಕೂರಿಗೆ ಹೋಗಲು ಸುಮಾರು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ನಾಗವಲ್ಲಿಯ ಬಸ್ ನಿಲ್ದಾಣದಲ್ಲಿ ನಿಂತಿರುವಾಗ ಹೆಬ್ಬೂರು ಕಡೆಯಿಂದ ತುಮಕೂರು ಕಡೆಗೆ ಹೋಗಲು ಕೆಎ-34-ಆರ್-7489 ನೇ ಯಮಹ ಲಿಬ್ರೋ ದ್ವಿಚಕ್ರವಾಹನದಲ್ಲಿ ಒಬ್ಬ ಸವಾರ ಹೋಗುತ್ತಿದ್ದು, ಕುಣಿಗಲ್ ಕಡೆಯಿಂದ ತುಮಕೂರಿಗೆ ಹೋಗಲು ಒಂದು ಬೈಕ್ ನ್ನು ಅದರ ಚಾಲಕ ಅತೀವೇಗ, ಅಜಾಗರೂಕತೆಯಿಂದ ಓಡಿಸಿಕೊಂಡು ಮುಂದೆ ಹೋಗುತ್ತಿದ್ದ ಕೆಎ-34-ಆರ್-7489 ನೇ ದ್ವಿಚಕ್ರ ವಾಹನಕ್ಕೆ ಅಪಘಾತ ಮಾಡಿದ್ದರಿಂದ ಬೈಕ್ ಸಮೇತ ಅದರಲ್ಲಿದ್ದ ವ್ಯಕ್ತಿ ನೆಲದ ಮೇಲೆ ಬಿದ್ದರು. ನಾನು ಮತ್ತು ಸಾರ್ವಜನಿಕರು ಕೂಡಲೆ ಅಪಘಾತವಾದ ಸ್ಥಳಕ್ಕೆ ಹೋಗಿ ನೋಡಲಾಗಿ ನನಗೆ ಪರಿಚಯವಿರುವ ವ್ಯಕ್ತಿಯಾದ ಶ್ರೀಧರ್ ಎಂ ರವರು ಆಗಿದ್ದು, ಅವರಿಗೆ ಬಲಗಾಲಿಗೆ, ಅಣೆಗೆ, ರಕ್ತಗಾಯಳಾಗಿದ್ದು, ಕೂಡಲೆ ಅಪಘಾತ ಪಡಿಸಿದ ದ್ವಿಚಕ್ರ ವಾಹನವನ್ನು ನೋಡಲಾಗಿ ಕೆಎ-01-ಇಎಕ್ಷ್-6251 ಆಗಿದ್ದು, ಅದರಲ್ಲಿದ್ದವರಿಗೆ ಯಾವುದೇ ರಕ್ತ ಗಾಯಗಳಾಗಿರುವುದಿಲ್ಲ. ನಂತರ 108 ನೇ ಅಂಬ್ಯುಲೆನ್ಸ್‌ಗೆ ಕರೆ ಮಾಡಿ ಗಯಾಳುವನ್ನು ನಾನು ಮತ್ತು ಅವರ ತಂದೆ ಮುನಿಸ್ವಾಮಪ್ಪ  ಅಂಬ್ಯುಲೆನ್ಸ್‌ ನಲ್ಲಿ ತುಮಕೂರು ಆದಿತ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಈ ದಿವಸ  ಠಾಣೆಗೆ ಬಂದು ಅಪಘಾತ ಪಡಿಸಿ ನಿಲ್ಲಿಸದೇ ಹೊರಟು ಹೋದ ಕೆಎ-01-ಇಎಕ್ಷ್-6251 ನೇ ದ್ವಿಚಕ್ರ ವಾಹನದ ಚಾಲಕನ ವಿರುಧ್ದ ಕಾನೂಕು ರೀತ್ಯಾ ಕ್ರಮ ಜರುಗಿಸಬೇಕಂಧು ನೀಡಿದ ದೂರನ್ನು ಪಡೆದು ಠಾಣಾ ಮೊ ನಂ 121/2017 ಕಲಂ 279,337 ಐಪಿಸಿ ರೆ/ವಿ 134(ಎ&ಬಿ), 187 ಐಎಂವಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಯು.ಡಿ.ಆರ್.ನಂ.12/2017, ಕಲಂ:174 ಸಿ.ಆರ್.ಪಿ.ಸಿ.

ದಿನಾಂಕ:02/07/2017 ರಂದು ಬೆಳಿಗ್ಗೆ 09:30 ಗಂಟೆಗೆ ಪಿರ್ಯಾದಿ ಮಿಥುಬೈನ್ ಬಿನ್ ಘಾಜಿಬೈನ್, 31 ವರ್ಷ, ಬೈನ್ ಜನಾಂಗ, ಬೆಂಗಳೂರಿನ ಕೂಲಿ ಕೆಲಸ, Uttar Gobindakati Paschim Para, Shridhar Kati, Hingalganj, North-24, Parganas-743439, West Bengal State ರವರು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿ ನೀಡಿದ ದೂರಿನ ಅಂಶವೇನೆಂದರೆ, ನಮ್ಮೂರಿನ ಇಬ್ರಾಹಿಂ ಘಾಜಿ, ಗೌರಂಗ್ ಬಸಾಟ್,ಋಕ್‌ ಕುಮಾರ್ ಮತ್ತು ಜಮಾಲ್ ರವರುಗಳು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲುಕು, ಐ.ಡಿ.ಹಳ್ಳಿ ಹೋಬಳಿ, ಜನಕಲೋಟಿ ಗ್ರಾಮದ ಬಳಿ ಇರುವ ಎಸ್.ಎಲ್.ಎನ್. ವಿದ್ಯುತ್‌ ಕಂಬ ತಯಾರಿಕ ಕಂಪನಿಯಲ್ಲಿ ಹೊಟ್ಟೆಪಾಡಿಗಾಗಿ ಕೆಲಸ ಮಾಡಲು ಈಗ್ಗೆ    ಸುಮಾರು 01 ತಿಂಗಳ ಹಿಂದೆ ಬಂದಿದ್ದರು ಇವರನ್ನು ನೋಡಿಕೊಂಡು ಬರಲು ಮತ್ತು ಅಲ್ಲಿಯೇ ಏನಾದರು ಕೆಲಸ ಇದ್ದರೆ ಮಾಡುತ್ತೇನೆಂದು ನನ್ನ ಅಕ್ಕನ ಗಂಡನಾದ ದಿಲೀಪ್ ಅಲ್ದಾರ್ ರವರು ಸಹ ಐ.ಡಿ.ಹಳ್ಳಿ ಸಮೀಪದ ಜನಕಲೋಟಿ ಹತ್ತಿರದ ವಿದ್ಯುತ್‌ ತಯಾರಿಕ ಕಂಪನಿಗೆ ಹೋಗಿದ್ದು ಅಲ್ಲಿ ಈಗಾಗಲೇ ಕೆಲಸ ಮಾಡುತ್ತಿದ್ದವರ ಜೊತೆಗೆ ಸೇರಿಕೊಂಡು ಒಂದು ಕಂಬಕ್ಕೆ 210/- ರೂಪಾಯಿಯಂತೆ ಕೆಲಸ ಮಾಡಿಕೊಡಲು ಒಪ್ಪಿಕೊಂಡು ಎಸ್.ಎಲ್.ಎನ್. ವಿದ್ಯುತ್‌ ಕಂಪನಿ ನಡೆಸುತ್ತಿದ್ದ ರಾಜಗೋಪಾಲರೆಡ್ಡಿ ರವರ ಬಳಿ ಕೆಲಸ ಮಾಡುತ್ತಿದ್ದರು. ಈಗಿರುವಾಗ್ಗೆ ದಿನಾಂಕ:01/07/2017 ರಂದು ಬೆಳಿಗ್ಗೆ ಸುಮಾರು 10:40 ಗಂಟೆ ಸಮಯದಲ್ಲಿ ಎಸ್.ಎಲ್.ಎನ್. ವಿದ್ಯುತ್ ಕಂಬ ತಯಾರಿಸುವ ಕಂಪನಿಯಲ್ಲಿ ನನ್ನ ಅಕ್ಕನ ಗಂಡನಾದ ಸುಮಾರು 40 ವರ್ಷ ವಯಸುಳ್ಳ ದಿಲೀಪ್ ಅಲ್ದಾರ್ ಬಿನ್ ಗೋಪಾಲ್ ಅಲ್ದಾರ್ ರವರು ವಿದ್ಯುತ್ ಕಂಬವನ್ನು ಕ್ಯೂರಿಂಗ್ ಸಂಪಿನಿಂದ ಕ್ಯೂರಿಂಗ್ ಆದ ಕಂಬಗಳನ್ನು ಮತ್ತೊಂದು ಕಡೆ ಲಾಟ್‌ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕಂಬವು ಜಾರಿ ದಿಲೀಪ್ ಅಲ್ದಾರ್ ಮೇಲೆ ಬಿದ್ದಿದ್ದರಿಂದ ಆತನ ಎದೆಗೆ ಮೈಕೈಗೆ ಹಾಗೂ ಮುಖಕ್ಕೆ ತೀವ್ರತರದ ರಕ್ತಗಾಯವಾಗಿದ್ದು ಕೂಡಲೇ ಅಲ್ಲಿಯೇ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ರಾಹಿಂ ಘಾಜಿ ಹಾಗೂ ಗೌರಂಗ್ ಬಸಾಟ್ ರವರುಗಳು ಮತ್ತು ಇತರರು ಕೂಡಲೇ ಗಾಯಾಳುವನ್ನು ಉಪಚರಿಸಿ ರಸ್ತೆಯಲ್ಲಿ ಬರುತ್ತಿದ್ದ ಯಾವುದೋ ಒಂದು ವಾಹನವನ್ನು ತೆಗೆದುಕೊಂಡು ಆಸ್ಪತ್ರೆಗೆ ಬರುತ್ತಿರುವಾಗ ಹೊಸಕೆರೆ ಹತ್ತಿರ 108 ಅಂಬುಲೆನ್ಸ್ ಬಂದಿದ್ದು ಅದರಲ್ಲಿ ಗಾಯಾಳುವನ್ನು ಚಿಕಿತ್ಸೆಗಾಗಿ ಮಧುಗಿರಿ ಸಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಅಲ್ಲಿ ಪ್ರಥಮ ಚಿಕಿತ್ಸೆ ನೀಡುತ್ತಿದ್ದಾಗ ಸದರಿ ನನ್ನ ಭಾವನಾದ ದಿಲೀಪ್ ಅಲ್ದಾರ್ ರವರು ದಿನಾಂಕ:01/07/2017 ರಂದು ಮದ್ಯಾಹ್ನ ಸುಮಾರು 12:00 ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾರೆಂದು ಅವರ ಜೊತೆಯಲ್ಲಿ ಹೋಗಿದ್ದವರು ನನಗೆ ಪೋನ್ ಮುಖಾಂತರ ವಿಚಾರವನ್ನು ತಿಳಿಸಲಾಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ನಾನು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಿದಾಗ ವಿಚಾರ ನಿಜವಾಗಿತ್ತು. ನಂತರ ನಾನು ವಿಷಯವನ್ನು ನನ್ನ ಅಕ್ಕನಿಗೆ ಫೋನ್ ಮಾಡಿ ತಿಳಿಸಿದೆನು. ನನ್ನ ಭಾವ ಈ ದಿನ ಬೆಳಿಗ್ಗೆ ವಿದ್ಯುತ್‌ ಕಂಬ ಕ್ಯೂರಿಂಗ್ ಮಾಡಿ ಬೇರೆ ಕಡೆ ಇಡುತ್ತಿದ್ದಾಗ ಅದು ಆಕಸ್ಮಿಕವಾಗಿ ಆತನ ಮೇಲೆ ಬಿದ್ದುದ್ದರಿಂದ ಉಂಟಾದ ತೀವ್ರ ಗಾಯಗಳಿಂದಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ನನ್ನ ಅಕ್ಕನ ಗಂಡನಾದ ದಿಲೀಪ್ ಅಲ್ದಾರ್ ರವರ ಸಾವಿನಲ್ಲಿ ಬೇರೆ ಯಾವುದೇ ಅನುಮಾನ ಇರುವುದಿಲ್ಲ ಈ ಸಾವು ಆಕಸ್ಮಿಕವಾಗಿ ಆಗಿದ್ದು ಯಾವುದೇ ವ್ಯಕ್ತಿಯಿಂದ ಆಗಿರುವುದಿಲ್ಲ. ನಾನು ಈ ದೂರನ್ನು ಹಿಂದಿ ಬರುವ ಕಂಪ್ಯೂಟರ್‌ ಬರುವ ಬಳಿ ಹೋಗಿ ಕನ್ನಡಕ್ಕೆ ಅನುವಾದ ಮಾಡಿಸಿ ಬೆರಳಚ್ಚು ಮಾಡಿಸಿರುತ್ತೇನೆ. ಈ ವಿಚಾರವನ್ನು ನಮ್ಮ ಸಂಬಧಿಕರಿಗೆ ತಿಳಿಸಿದ ನಂತರ ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ. ಆದ್ದರಿಂದ ಖಾವಂದಿರಾದ ತಾವುಗಳು ಕೂಡಲೇ ಈ ಬಗ್ಗೆ ಮುಂದಿನ ಕ್ರಮ ಜರುಗಿಸಿ ನನ್ನ ಭಾವನಾದ ದಿಲೀಪ್ ಅಲ್ದಾರ್ ರವರ ಶವ ಪರೀಕ್ಷೆ ಮಾಡಿಸಿ ಶವವನ್ನು ನಮ್ಮ ವಶಕ್ಕೆ ನೀಡಿ ಶವವನ್ನು ನಮ್ಮ ಗ್ರಾಮಕ್ಕೆ ತೆಗೆದುಕೊಂಡು ಹೋಗಲು ಅನುಮತಿ ಕೋಡಿಸಿಕೊಡಬೇಕೆಂದು ನೀಡಿದ ಪಿರ್ಯಾದು ಅಂಶವಾಗಿರುತ್ತೆ.

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 64 guests online
Content View Hits : 287584