lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >> ತುಮಕೂರು ಜಿಲ್ಲೆಯಲ್ಲಿ 2018 ನೇ ಮೇ ಮಾಹೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳ... >> ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< July 2017 >
Mo Tu We Th Fr Sa Su
          2
3 4 5 6 7 8 9
10 11 12 13 14 15 16
17 18 19 20 21 22 23
24 25 26 27 28 29 30
31            
Saturday, 01 July 2017
Crime Incidents 01-07-17

ಪಾವಗಡ ಪೊಲೀಸ್ ಠಾಣೆಯ ಠಾಣಾ ಮೊ,ನಂ 159/2017 ಕಲಂ 143, 290, 341, 353, 504 R/w 149 IPC

ದಿನಾಂಕ:30/06/2017 ರಂದು ಸಂಜೆ 19-00 ಗಂಟೆ ಸಮಯದಲ್ಲಿ ಪಾವಗಡ ಪೊಲೀಸ್ ಠಾಣೆಯ ಪಿ,ಎಸ್,ಐ ರವರಾದ ಮಂಜುನಾಥ್ ಎಸ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿ:29/06/2017 ರಂದು ಬೆಳಿಗ್ಗೆ ಪಾವಗಡ ಪೊಲೀಸ್ ಠಾಣಾ ಮೊ.ಸಂ:128/2017, ಕಲಂ:302, 447, 504, 506 ರೆ:ವಿ 34 ಐ.ಪಿ.ಸಿ ಪ್ರಕರಣದಲ್ಲಿ ಮೃತ ರಾಮಾಂಜಿನಪ್ಪರವರ ಶವದ ಮೇಲೆ ಶವ ತನಿಖೆಯನ್ನು ಮುಗಿಸಿಕೊಂಡು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರಿಂದ ಶವ ಪರೀಕ್ಷೆ ಮಾಡಿಸಿ ಶವವನ್ನು ಗಂಗವರದ ವಾಸಿ ಮೃತನ ಮಗನಾದ ಅಂಜನಪ್ಪನಿಗೆ ನೀಡಿ ಸ್ವೀಕೃತಿ ಪಡೆದುಕೊಂಡು ಸಂಜೆ 4-30 ಗಂಟೆಗೆ ಸಿಬ್ಬಂದಿಯ ಜೊತೆಯಲ್ಲಿ ವಾಪಸ್ ಪಾವಗಡ ಪೊಲೀಸ್ ಠಾಣೆಗೆ ಬಂದಿರುತ್ತೇನೆ. ಇದೇ ಸಮಯಕ್ಕೆ ಮೇಲ್ಕಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಾವಗಡ ತಾ. ಗುಮ್ಮಘಟ್ಟ ಗ್ರಾಮದ ವಾಸಿ ಬಸವರಾಜು ಮತ್ತು ಇತರರು ಮೃತನ ಸಂಬಂಧಿಕರನ್ನು ಪುಸಲಾಯಿಸಿ ಮೃತ ರಾಮಾಂಜಿನಪ್ಪ ರವರ ಮೃತ ದೇಹವನ್ನು ಅಂತ್ಯ ಸಂಸ್ಕಾರ ಮಾಡಲು ಬಿಡದೇ, ಪೊಲೀಸ್ ಠಾಣೆಯ ಬಳಿ ತರುತ್ತಿರುತ್ತಾರೆಂದು ಮಾಹಿತಿ ತಿಳಿದುಬಂದಿದ್ದು, ಕೂಡಲೇ ನಾನು ಈ ಬಗ್ಗೆ ಸಿಪಿಐ ಮತ್ತು ಡಿ.ವೈ.ಎಸ್.ಪಿ. ಮತ್ತು ಎಸ್.ಪಿ.ಸಾಹೇಬರವರಿಗೆ ತಿಳಿಸಿರುತ್ತೇನೆ. ಈ ಸಂಬಂಧವಾಗಿ ಮಧುಗಿರಿಯಲ್ಲಿ ಬಂದೋಬಸ್ತ್ನಲ್ಲಿದ್ದ ಮಾನ್ಯ ಸಿಪಿಐ ಪಾವಗಡ, ತಿರುಮಣಿ, ಪಿ.ಎಸ್.ಐ. ಅರಸೀಕೆರೆ ಠಾಣೆ ರವರನ್ನು  ಮಾನ್ಯ ಡಿ.ವೈ.ಎಸ್.ಪಿ. ರವರು ಪಾವಗಡಕ್ಕೆ ಕಳುಹಿಸಿಕೊಟ್ಟಿರುತ್ತಾರೆ. ಮೇಲ್ಕಂಡ ಗುಮ್ಮಘಟ್ಟ ಗ್ರಾಮದ ಬಸವರಾಜು, ಅದೇ ಗ್ರಾಮದ ಈಶ್ವರ, ಗಂಗವರದ ರಾಮಾಂಜಿನಪ್ಪ, ಅಶ್ವಥಪ್ಪ, ನಾಗಲಾಪುರದ ಶಿವಪ್ಪ ಹಾಗೂ 30 ಜನರು ಅಕ್ರಮ ಗುಂಪು ಸೇರಿಕೊಂಡು ರಾಮಾಂಜಿನಪ್ಪ ರವರ ಮೃತ ದೇಹವನ್ನು ಮತ್ತು ಅವರ ಸಂಬಂಧಿಕರನ್ನು ಸಂಜೆ 5-30ಗಂಟೆ ಸುಮಾರಿಗೆ ಪಾವಗಡ ಪೊಲೀಸ್ ಠಾಣೆ ಮುಂದಿನ ಕುವೆಂಪು ರಸ್ತೆಯ ಬಳಿಗೆ ಕರೆದುಕೊಂಡು ಬಂದು, ರಸ್ತೆಯಲ್ಲಿ ಮೃತ ದೇಹವನ್ನು ಇಟ್ಟು, ನಂತರ ರಸ್ತೆಯಲ್ಲಿ ವಾಹನಗಳು ಮತ್ತು ಸಾರ್ವಜನಿಕರು ಸಂಚಾರ ಮಾಡದಂತೆ ಅಡ್ಡಲಾಗಿ ಮಲಗಿಕೊಂಡು ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದು, ನಂತರ ಸ್ಥಳದಲ್ಲಿದ್ದ ನಾನು ಮತ್ತು ಸಿಪಿಐ ಪಾವಗಡ, ಸಿಪಿಐ ತಿರುಮಣಿ ಮತ್ತು ಅರಸೀಕೆರೆ ಠಾಣೆ ಪಿ.ಎಸ್.ಐ. ಹಾಗೂ ಸಿಬ್ಬಂದಿಗಳೊಂದಿಗೆ ಈ ರೀತಿ ಸಾರ್ವಜನಿಕರಿಗೆ ತೊಂದರೆ ಮಾಡುವುದು ಸರಿಯಲ್ಲವೆಂದು ತಿಳಿಸಿ ಹೇಳಿದರೂ ಸಹ ನಮ್ಮ ಸೂಚನೆಗಳನ್ನು ನಿರ್ಲಕ್ಷಿಸಿ ನಮಗೆ ನ್ಯಾಯ ಸಿಗುವವರೆಗೂ ನಾವು ಮೃತ ದೇಹವನ್ನು ತೆರವುಗೊಳಿಸುವುದಿಲ್ಲವೆಂದು ಮತ್ತು ವಾಹನಗಳನ್ನು ಬಿಡುವುದಿಲ್ಲವೆಂದು ಮಲಗಿಕೊಂಡಿದ್ದು, ಇವರುಗಳ ಪೈಕಿ ಬಸವರಾಜು, ಈಶ್ವರ್, ರಾಮಾಂಜಿನಪ್ಪ, ಶಿವಪ್ಪ, ಅಶ್ವಥಪ್ಪ ಇವರುಗಳು ಅಲ್ಲಿ ಸೇರಿದ್ದವರಿಗೆ ಯಾವುದೇ ಕಾರಣಕ್ಕೂ ಪೊಲೀಸರ ಮಾತು ಕೇಳಬೇಡಿ, ರಸ್ತೆ ತೆರವುಗೊಳಿಸಬೇಡಿ ಎಂತಾ ಅವರುಗಳಿಗೆ ಪ್ರಚೋದಿಸುತ್ತಾ, ಪೊಲೀಸರನ್ನು ಕುರಿತು ಪೊಲೀಸರು ಹುಚ್ಚ ನನ್ನ ಮಕ್ಕಳು, ಲೋಪರ್ ನನ್ನ ಮಕ್ಕಳು ಎಂತಾ ಇತ್ಯದಿಯಗಿ ಕೆಟ್ಟ ಮಾತುಗಳಿಂದ ಬೈದಿರುತ್ತಾರೆ. ಈ ಸಮಯದಲ್ಲಿ ನಾವುಗಳು ಅಲ್ಲಿದ್ದವರ ಮನವೊಲಿಸಿ ರಸ್ತೆ ತೆರವುಗೊಳಿಸಲು ಯತ್ನಿಸಿದಾಗ ಮೇಲ್ಕಂಡವರು ಪುನಃ ಅವರಿಗೆ ರಸ್ತೆಯಲ್ಲಿ ಬರುವ ವಾಹನಗಳಿಗೆ ಅಡ್ಡಲಾಗಿ ಮಲಗುವಂತೆ ಪ್ರಚೋದಿಸಿರುತ್ತಾರೆ. ಇದರಿಂದ ಪಾವಗಡ-ಕಲ್ಯಾಣದುರ್ಗ ರಸ್ತೆಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆವುಂಟಾಗಿ ವಾಹಗಳಿಗೆ ಮತ್ತು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿರುತ್ತದೆ. ನಂತರ ಸಂಜೆ 6-45ಗಂಟೆ ಸಮುಮಾರಿಗೆ ಮಾನ್ಯ ಮಧುಗಿರಿ ಡಿ.ವೈ.ಎಸ್.ಪಿ. ಸಾಹೇಬರು ಸ್ಥಳಕ್ಕೆ ಆಗಮಿಸಿ ಕಾನೂನು ವಿರುದ್ದವಾಗಿ ರಸ್ತೆ ತಡೆ ನಡೆಸಬಾರದೆಂದು ಎಚ್ಚರಿಕೆ ನೀಡಿ, ರಸ್ತೆಯನ್ನು ತೆರವುಗೊಳಿಸದೇ ಇದ್ದಲ್ಲಿ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಲಾಗುವುದಾಗಿ ತಿಳಿಸಿದಾಗ, ಮೇಲ್ಕಂಡ ಆಸಾಮಿಗಳು ರಾಮಾಂಜಿನಪ್ಪ ರವರ ಮೃತ ದೇಹದೊಂದಿಗೆ ವಾಪಸ್ ಗ್ರಾಮಕ್ಕೆ ಹೋಗಿರುತ್ತಾರೆ.  ಮೇಲ್ಕಂಡ ಬಸವರಾಜು, ಈಶ್ವರ್, ರಾಮಾಂಜಿನಪ್ಪ, ಶಿವಪ್ಪ, ಅಶ್ವಥಪ್ಪ ಹಾಗೂ ಇತರೇ ಸುಮಾರು 30 ಜನರು ಅಕ್ರಮ ಗುಂಪುಕಟ್ಟಿಕೊಂಡು ಬಂದು, ಯಾವುದೇ ಪೂವರ್ಾನುಮತಿ ಪಡೆಯದೇ ಏಕಾಏಕಿಯಾಗಿ ಪಾವಗಡ ಮುಖ್ಯ ರಸ್ತೆಯಲ್ಲಿ ಮೃತದೇಹವನ್ನು ಇಟ್ಟುಕೊಂಡು ಮತ್ತು ರಸ್ತೆಗೆ ಅಡ್ಡಲಾಗಿ ಮಲಗಿ ಸಾರ್ವಜನಿಕರು ಮತ್ತು ವಾಹನಗಳ ಸಂಚಾರಕ್ಕೆ ಅಡ್ಡಿಯುಂಟುಮಾಡಿದ್ದಲ್ಲದೇ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತೆ ನಡೆದುಕೊಂಡು ಈ ವೇಳೆಯಲ್ಲಿ ನಮ್ಮ ಕರ್ತವ್ಯ ನಿರ್ವಹಿಸಲು ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಗೆ ಬೈದು, ಅವರುಗಳ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿರುವ ಮೇಲ್ಕಂಡ ಅಸಾಮಿಗಳ ವಿರುದ್ದ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ಕೋರಿದೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ.ನಂ: 120/2017 ಕಲಂ 279, 337 ಐ,ಪಿ,ಸಿ ರೆ/ವಿ 134(ಎ)&(ಬಿ), 187 ಐ,ಎಂ,ವಿ ಆಕ್ಟ್‌

ದಿನಾಂಕ:30-06-2017 ರಂದು ಮದ್ಯಾಹ್ನ 02-00 ಗಂಟೆಗೆ ಪಿರ್ಯಾದುದಾರರಾದ ಚಿಕ್ಕಗಂಗಯ್ಯ ಬಿನ್ ಲೇ|| ಕುಣಿಗಲ್‌ ಚಿಕ್ಕಣ್ಣ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ದಿನಾಂಕ: 18-06-2017 ರಂದು ನಾನು ಮತ್ತು ನನ್ನ ತಾಯಿ ತಿಮ್ಮಕ್ಕ ಇಬ್ಬರೂ ನಮ್ಮ ಗ್ರಾಮದಿಂದ ಹೆಬ್ಬೂರು ಹೋಬಳಿ ಸಂಗಲಾಪುರ ಗ್ರಾಮಕ್ಕೆ ನಮ್ಮ ಸಂಬಂಧಿಕರ ತಿಥಿ ಕಾರ್ಯಕ್ಕೆಂದು ಬಂದಿದ್ದು, ಹೆಬ್ಬೂರಿನಿಂದ ಒಂದು ಆಟೋದಲ್ಲಿ ನರಸಾಪುರ ಗೇಟ್‌ಗೆ ಹೋಗಿ ನಂತರ ನಾನು ಮತ್ತು ನನ್ನ ತಾಯಿ ನರಸಾಪುರ ಗೇಟ್‌ನಿಂದ ಸಂಗಲಾಪುರಕ್ಕೆ ಹೋಗಲೆಂದು ಬೆಳಿಗ್ಗೆ ಸುಮಾರು 11-30 ಗಂಟೆ ಸಮಯದಲ್ಲಿ ಮೊರಾರ್ಜಿ ದೇಸಾಯಿ ಶಾಲೆಯ ಬಳಿ ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಹೋಗುತ್ತಿರುವಾಗ್ಗೆ, ನಮ್ಮ ಹಿಂಭಾಗದಿಂದ ಕೆಎ-06-ಇ.ವೈ-4988 ನೇ ದ್ವಿಚಕ್ರ ವಾಹನದ ಸವಾರ ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ನನ್ನ ತಾಯಿ ತಿಮ್ಮಕ್ಕ ರವರಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ನನ್ನ ತಾಯಿ ತಿಮ್ಮಕ್ಕ ರವರು ಕೆಳಗೆ ಬಿದ್ದರು. ನಂತರ ನಾನು ಹಾಗೂ ಸ್ಥಳದಲ್ಲಿಯೇ ಇದ್ದ ಹೆಬ್ಬೂರಿನ ವಾಸಿಯಾದ ಗೌತಮ್‌ ಇಬ್ಬರೂ ಸೇರಿಕೊಂಡು ನನ್ನ ತಾಯಿ ತಿಮ್ಮಕ್ಕ ರವರನ್ನು ಮೇಲಕ್ಕೆ ಎತ್ತಿ ಉಪಚರಿಸಿ ನೋಡಲಾಗಿ ನನ್ನ ತಾಯಿ ತಿಮ್ಮಕ್ಕ ರವರಿಗೆ ಬಲಗಾಲಿಗೆ ಏಟು ಬಿದ್ದಿತ್ತು. ಅಪಘಾತಪಡಿಸಿದ ದ್ವಿಚಕ್ರ ವಾಹನದ ಸವಾರನು ತನ್ನ ದ್ವಿಚಕ್ರ ವಾಹನವನ್ನು ಸ್ಥಳದಿಂದ ತೆಗೆದುಕೊಂಡು ಹೊರಟು ಹೋದನು. ನಂತರ ನಾನು ಗಾಯಗೊಂಡಿದ್ದ ನನ್ನ ತಾಯಿ ತಿಮ್ಮಕ್ಕ ರವರನ್ನು ಸ್ಥಳಕ್ಕೆ ಬಂದ 108 ಆಂಬುಲೆನ್ಸ್ ವಾಹನದಲ್ಲಿ ತುಮಕೂರಿನ ಆದಿತ್ಯ ನರ್ಸಿಂಗ್‌ ಹೋಮ್‌ಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದೆನು. ನಾನು ನನ್ನ ತಾಯಿ ತಿಮ್ಮಕ್ಕ ರವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿವಸ ತಡವಾಗಿ ಬಂದು ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿ ಈ ಅಪಘಾತಕ್ಕೆ ಕಾರಣನಾದ ಕೆಎ-06-ಇ.ವೈ-4988 ನೇ ದ್ವಿಚಕ್ರ ವಾಹನದ ಸವಾರನ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂತಾ ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೆ.

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 101 guests online
Content View Hits : 289610