lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >> ತುಮಕೂರು ಜಿಲ್ಲೆಯಲ್ಲಿ 2018 ನೇ ಮೇ ಮಾಹೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳ... >> ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< May 2017 >
Mo Tu We Th Fr Sa Su
1 2 3 4 5 6 7
8 9 10 11 12 13 14
15 16 17 19 20 21
22 23 24 25 26 27 28
29 30 31        
Thursday, 18 May 2017
Crime Incidents 18-05-17

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 85/2017 ಕಲಂ 465,468,471,472,473, ರೆ/ವಿ 420 ಐಪಿಸಿ

ದಿನಾಂಕ-17/05/2017 ರಂದು ಸಂಜೆ 4-45 ಗಂಟೆಗೆ ಪಿರ್ಯಾದಿಯಾದ ಕೆ.ಸೋಮಶಂಕರ್, (ಗಗನಗ ರೆಡ್ಡಿ ತಂದೆ) ಬಿನ್ ಕೆ.ಕೃಷ್ನಮೂರ್ತಿ, ಜನತಾ ಕಾಲೋನಿ,ಹೆಬ್ಬೂರು, ತುಮಕೂರು ಜಿಲ್ಲೆ ಮತ್ತು ಆರ್.ಟಿ.ಐ. ಕಾರ್ಯಕರ್ತರು ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್ ಮಾಡಿಸಿ ದೂರಿನ ಅಂಶವೇನೆಂಧರೆ ಇದೇ ಹೆಬ್ಬೂರು ಗ್ರಾಮದ ಖಾನೆಷುಮಾರಿ ನಂ.644(40*34 ಗಜ) ರ ಸ್ವತ್ತು ತಮ್ಮ ಪೊಲೀಸ್ ಇಲಾಖೆಗೆ ಸೇರಿದ ಸ್ವತ್ತು ಆಗಿದ್ದು, ಸದರಿ ಸ್ವತ್ತಿನ ಇದೇ ಹೆಬ್ಬೂರು ಗ್ರಾಮದ ಹೆಚ್ ವಿ ಪಾಂಡುರಂಗಶೆಟ್ಟಿ ಬಿನ್ ವೆಂಕಟನರಸಯ್ಯಶೆಟ್ಟಿ (ಆಡಳಿತಾಧಿಕಾರಿ ಶ್ರೀ ಗಣಪತಿ ವಿಧ್ಯಾ ಸಂಸ್ಥೆ ಹಾಗೂ ಶ್ರೀ ಗಣಪತಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಹಾಗೂ ಪಾಲುದಾರ ) ಎಂಬುವವನು ಫೋರ್ಜರಿ ದಾಖಲೆಗಳನ್ನು ಸೃಷ್ಠಿ ಮಾಡಿಕೊಂಡು ಸುಮಾರು 10 ಕೋಟಿ ಬೆಲೆ ಬಾಳುವ ಪೊಲೀಸ್ ಇಲಾಖೆಯ ಸ್ವತ್ತನ್ನು ಅಕ್ರಮವಾಗಿ ಕಬಳಿಸಿರುತ್ತಾನೆ, ಈ ನನ್ನ ದೂರಿಗೆ ಸಂಬಂಧಿಸಿದಂತೆ ಈ ಕೆಳಕಂಡ ಪೂರಕ ದಾಖಲೆಗಳಾದ 1) ಖಾನೆಷುಮಾರಿ ನಂ.644 ರ 1949 ರ ಹೌಸ್ ಲಿಸ್ಟ್‌ ನಕಲು, 2) ಖಾನೆಷುಮಾರಿ ನಂ.644 ರ 1964 ರ ಹೌಸ್ ಲಿಸ್ಟ್ ನಕಲು, 3) ಫೋರ್ಜರಿ ಮುಟೇಷನ್ ನಕಲು, 4) ಅಕ್ರಮ ಕ್ರಯ ಪತ್ರದ ನಕಲು-(ತನಗೆ ತಾನೆ ಮಾರಾಟ ಮಾಡಿಕೊಂಡಂತೆ ಸೃಷ್ಠಿಸಿಕೊಂಡಿರುವ) , 5) ದಿ.15-05-2017 ರಂದು ತುಮಕೂರು ಎಸ್ ಪಿ ಕಛೇರಿಗೆ ನೀಡಿರುವ ನನ್ನ ದೂರಿನ ನಕಲು, ಮತ್ತು 6) ದಿ-03-03-2017 ರಂದು ತುಮಕೂರು ಎ.ಸಿ.ಬಿ ಠಾಣೆಯು ಕ್ಯಾತ್ಸಂದ್ರ ಸಿ.ಪಿ.ಐ.ಗೆ ನೀಡಿರುವ ನಿರ್ದೇಶನದ ಪ್ರತಿ, ಆಗಿರುತ್ತವೆ. ಅತಿ ಮುಖ್ಯವಾದ ಫೋರ್ಜರಿ ಮುಟೇಷನ್‌ನಲ್ಲಿ 15-08-1991 ರ ಸಬ್ ರಿಜಿಸ್ಟಾರ್ ಕಛೇರಿ ನೊಂದಣೀ ಸಂಖ್ಯೆ 3687 ರಂತೆ ಖಾತೆ ಮಾಡಲಾಗಿದೆ ಎಂದು ಷರಾ ಬರೆದಿರುತ್ತಾರೆ. ಆದರೆ ಸದರಿ ದಿನಾಂಕವು ಸ್ವಾತಂತ್ರ್ಯ ದಿನಾಚರಣೆಯ ದಿನಾಂಕವಾಗಿದ್ದು, ಆ ದಿನ ಸರ್ಕಾರಿ ಕಛೇರಿಗಳು ರಜಾದಿನವಾಗಿರುತ್ತದೆ, ಮತ್ತು ನೊಂದಣಿ ಸಂ.3687 ರ ನೊಂದಣಿಯು ಗುಳೂರು ಹೋಬಳಿ ಸಂಕಾಪುರಕ್ಕೆ ಸೇರಿದೆ ಎಂದು ಹಿಂಬರಹ ನೀಡಿರುತ್ತಾರೆ. ಆದ್ದರಿಂದ ಇದು ಫೋರ್ಜರಿಯ ಪರಮಾವಧಿ ಪ್ರಕರಣವಾಗಿರುವುದರಿಂದ ಮೇಲ್ಕಂಡ ಆರೋಪಿಯ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ವಿನಂತಿಸಿ ಕೊಳ್ಳುತ್ತಾ ಈ ದೂರಿನೊಂದಿಗೆ ಮೇಲ್ಕಂಡ 6 ದಾಖಲೆಗಳನ್ನು ಲಗತ್ತಿಸಿರುತ್ತೇನೆ, ಎಂದು ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೆ

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ.95/2017 ಕಲಂ   324, 504  ರೆ/ವಿ 34 ಐಪಿಸಿ.

 

ದಿನಾಂಕ: 17-05-2017 ರಂದು ಮಧ್ಯಾಹ್ನ 02-30 ಗಂಟೆಗೆ ಕುಣಿಗಲ್ ತಾಲ್ಲೋಕು ಅಮೃತೂರು ಹೋಬಳಿ ಬ್ಯಾಡಗೆರೆ ಗ್ರಾಮದ ವಾಸಿಯಾದ ಶ್ರೀಮತಿ ಗುಂಡಮ್ಮ ಕೋಂ ಲೇ.ಕರಿಯಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ದಿನಾಂಕ: 13-05-2017 ರಂದು ರಾತ್ರಿ 10-30 ಗಂಟೆ ಸಮಯದಲ್ಲಿ ಪಿರ್ಯಾದಿಯು ಅವರ ಗ್ರಾಮದವರ ಮದುವೆ ಮುಗಿಸಿಕೊಂಡು ಬಂದು ಮನೆಯಲ್ಲಿದ್ದಾಗ ಅದೇ ಗ್ರಾಮದ ವಾಸಿಯಾದ ಕುಂಟಪ್ಪನ ಮಕ್ಕಳಾದ 1ನೇ ಹಮುನಂತಯ್ಯ, 2ನೇ ಶಕುಂತಲಾ, ಇವನ ಮಗಳು ಮತ್ತು ಇವಳ ತಾಯಿಯಾದ ನಂಜಮ್ಮ ರವರುಗಳು ಸೇರಿಕೊಂಡು ಹಳೇ ದ್ವೇಷದಿಂದ  ಪಿರ್ಯಾದಿಗೆ ಹೀನಾಮಾನವಾಗಿ ಬೈದಿದ್ದು, ಈ ವಿಷಯವಾಗಿ ಪಿರ್ಯಾದಿ ಕೇಳಲು ಹೋದಾಗ ಹನುಮಂತ, ನಂಜಮ್ಮ ಮತ್ತು ಶಕುಂತಲಾ ರವರುಗಳು ಸೇರಿಕೊಂಡು ಕಲ್ಲಿನಿಂದ ಹೊಡೆದು, ಪಿರ್ಯಾದಿಯ ಬಲಕಾಲು ಮತ್ತು ಕಣ್ಣಿನ ರೆಪ್ಪೆಯ ಪಕ್ಕಕ್ಕೆ ಹೊಡೆದು ರಕ್ತಗಾಯಪಡಿಸಿರುತ್ತಾರೆ. ಆಗ ಇದೇ ಗ್ರಾಮದ ಈರಣ್ಣ ರವರ ತಿಮ್ಮಮ್ಮ ಮತ್ತು ಬೋರಪ್ಪ ರವರ ಗಂಗಯ್ಯನ ಮಗ ಅನಿಲ ಎಂಬುವವರು ಬಂದು ಗಲಾಟೆ ಬಿಡಿಸಿರುತ್ತಾರೆ. ನಂತರ ಮಾರನೇ ದಿನ ಪಿರ್ಯಾದಿಯ ಮಗನಾದ ಜವರಯ್ಯ ಎಂಬುವವರಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ಪಿರ್ಯಾದಿಯ ಮಗ ಬಂದು ಪಿರ್ಯಾದಿಗೆ ಹುಲಿಯೂರುದುರ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು, ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು  ಪ್ರಕರಣ ದಾಖಲು ಮಾಡಿರುತ್ತೆ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 68/2017 ಕಲಂ 87 ಕೆ.ಪಿ.ಆಕ್ಟ್

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಕಾಂತ್ ಎಸ್  ಆದ ನಾನು   ಠಾಣಾ ಸರಹದ್ದಿನ ಮಾದಿಹಳ್ಳಿಯಲ್ಲಿ ಗಸ್ತಿನಲ್ಲಿರುವಾಗ್ಗೆ ,  ಅಯ್ಯನಬಾವಿ ಗ್ರಾಮದ ಗೋಶಾಲೆ ಹಿಂಭಾಗದ ಹಳ್ಳದಲ್ಲಿ ಯಾರೋ ಕೆಲವು ಆಸಾಮಿಗಳು ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುತ್ತಾರೆ ಎಂತಾ ನನಗೆ ಸಂಜೆ 06-00 ಗಂಟೆಗೆ ಖಚಿತ ಮಾಹಿತಿ ಬಂದಿರುತ್ತೆ. ನಾನು ಕೂಡಲೆ ಠಾಣೆ ಬಳಿ ಬಂದು,  ಇಸ್ಪೀಟ್ ಜೂಜಾಟದ ಮೇಲೆ ದಾಳಿ ಮಾಡಲು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು, ಠಾಣಾ ಬಳಿ ಪಂಚರನ್ನು ಬರ ಮಾಡಿಕೊಂಡು,ಪಂಚರೊಂದಿಗೆ ಹಾಗೂ ಸಿಬ್ಬಂದಿಯವರೊಂದಿಗೆ KA 06 G 347 ನೇ ಪೊಲೀಸ್ ಜೀಪಿನಲ್ಲಿ ಅಯ್ಯನಬಾವಿ ಗ್ರಾಮದ ಗೋಶಾಲೆ ಹಿಂಭಾಗದ ಹಳ್ಳದ  ಸಮೀಪಕ್ಕೆ ಬಂದು ಜೀಪನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ಎಲ್ಲರೂ ಜೀಪಿನಿಂದ ಕೆಳಗಿಳಿದು ಮರೆಮಾಚಿ ನೋಡಲಾಗಿ ಹಳ್ಳದಲ್ಲಿ  ಕೆಲವು ಜನರು ವೃತ್ತಾಕಾರವಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್ ಬಾಹರ್ ಎಂದು ಮಾತನಾಡುತ್ತಾ ಹಣವನ್ನು ಮತ್ತು ಬೈಕ್ ಗಳನ್ನು  ಪಣವಾಗಿಟ್ಟುಕೊಂಡು ಇಸ್ಪೀಟ್ ಜೂಜಾಟ ಆಡುತ್ತಿದ್ದುಖಚಿತವಾಗುತ್ತಿದಂತೆ ನಾವುಗಳು ಸುತ್ತುವರಿದು ದಾಳಿ ಮಾಡಿದಾಗ ಆಸಾಮಿಗಳು ಓಡಿಹೋಗುಲು ಪ್ರಯತ್ನಸಿದರು ಆಗ ಪೊಲೀಸ್ ರವರು ಕೆಲವರನ್ನು ಬೆನ್ನಟ್ಟಿ  ಹಿಡಿದು ಪಂಚರ ಸಮಕ್ಷಮ ಅವರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ಯೊಗೀಶ ಚಾರ್ ಬಿನ್ ಲೇ||ಪುಟ್ಟ ಚಾರ್, ಸುಮಾರು 49 ವರ್ಷ, ವಿಶ್ವಕರ್ಮ, ಬಡಗಿ ಕೆಲಸ, ಹೋನ್ನೇನಹಳ್ಳಿ,ಕಸಬಾ ಹೋ||, ತಿಪಟೂರು ತಾ||. 2) ಮಂಜುನಾಥ  ಬಿನ್ ಲಕ್ಷ್ಮಯ್ಯ , ಸುಮಾರು 34 ವರ್ಷ, ಆಧಿ ಕರ್ನಾಟಕ, ಪೈಟಿಂಗ್ ಕೆಲಸ,  ಮಡೆನೂರು, ಕಸಬಾ ಹೋ||, ತಿಪಟೂರು ತಾ|| 3) ಯಲ್ಲಪ್ಪ ಬಿನ್ ಲೇ|| ಚಿನ್ನಯ್ಯ, ಸುಮಾರು 55 ವರ್ಷ, ಬೋವಿ ಜನಾಂಗ, ವ್ಯವಸಾಯ,ಅಯ್ಯನಬಾವಿ, ಕಸಬಾ ಹೋ ||, ತಿಪಟೂರು ತಾ|| 4) ವೆಂಕಟೇಶ್ ಬಿನ್ ಬುಡ್ಡಯ್ಯ,  ಸುಮಾರು 42 ವರ್ಷ, ಬೋವಿ ಜನಾಂಗ, ಅಯ್ಯನಬಾವಿ ಪೈಟಿಂಗ್ ಕೆಲಸ, ಕಸಬಾ ಹೋ||, ತಿಪಟೂರು ತಾ||. 5) ಪಾಪಣ್ಣ ಬಿನ್ ಅಣ್ಣಯ್ಯ,ಸುಮಾರು 45 ವರ್ಷ, ಬೋವಿ ಜನಾಂಗ್,ಕೂಲಿ ಕೆಲಸ,  ಅಯ್ಯನಬಾವಿ ಕಸಬಾ ಹೋ||, ತಿಪಟೂರು ತಾ||.  6) ದಾಸಪ್ಪ ಬಿನ್ ಲೇ|| ತಿಮ್ಮಯ್ಯ, ಸುಮಾರು 65 ವರ್ಷ, ಬೋವಿ ಜನಾಂಗ, ವ್ಯವಸಾಯ, ಅಯ್ಯನಬಾವಿ, ಕಸಬಾ ಹೋ||, ತಿಪಟೂರು ತಾ||.7) ಆನಂದಮೂರ್ತಿ ಬಿನ್ ದೊಡ್ಡೇಗೌಡ, ಸುಮಾರು 47 ವರ್ಷ, ಲಿಂಗಾಯ್ತಿರು, ವ್ಯವಸಾಯ, ಮಡೆನೂರು, ಕಸಬಾ ಹೋ||, ತಿಪಟೂರು ತಾ||.8) ಶರತ್ ಬಿನ್ ಹೇಮಚಂದ್ರ,19 ವರ್ಷ ,ಲಿಂಗಾಯ್ತಿರು, ಜಿರಾಯ್ತಿ, ಕೋಡಿಹಳ್ಳಿ, ಕಸಬಾ ಹೋ||, ತಿಪಟೂರು ತಾ|| ಎಂದು ತಿಳಿಸಿದ್ದು, ಇವರಿಂದ ಸ್ಥಳದಲ್ಲಿ ಜೂಜಾಟ ಆಡಿ ಓಡಿಹೋದವರ ಹೆಸರು ವಿಳಾಸವನ್ನು ಕೇಳಲಾಗಿ 9) ಕೋಟೆ ರಾಕೇಶ್,10) ಮಡೆನೂರು ಸ್ವಾಮಿ, 11) ಅಯ್ಯನ ಬಾವಿ ಸಿದ್ದ,12) ಮಾದಿಹಳ್ಳಿ ಮಲ್ಲಿಕಾ  ಹಾಗೂ 13)  KA-44 K-6008 ನೇ  ಟಿವಿಎಸ್  ಸ್ಟಾರ್ ಸಿಟಿ ಬೈಕ್ ರ ಚಾಲಕ  ಎಂತ ತಿಳಿಸಿದರು. ನಂತರ ಸ್ಥಳವನ್ನು ಪರಿಶೀಲಿಸಲಾಗಿ ಒಂದು ಪ್ಲಾಸ್ಟಿಕ್ ಚೀಲದ ಮೇಲೆ ಆಸಾಮಿಗಳು ಪಣಕ್ಕೆ ಇಟ್ಟಿದ್ದ ಹಣ ಮತ್ತು ಇಸ್ಪೀಟ್ ಎಲೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಹಣವನ್ನು ಎಣಿಸಲಾಗಿ ಒಟ್ಟು  5170/- ರೂಗಳಿದ್ದು, ಇಸ್ಪೀಟ್ ಎಲೆಗಳು ಒಟ್ಟು 52 ಇರುತ್ತವೆ. ಸ್ಥಳದಲ್ಲಿಯೇ ಅಖಾಡದಲ್ಲಿ ಪಣಕ್ಕಿಟ್ಟಿದ್ದ ಬೈಕ್ ಗಳನ್ನು ಪರಿಶೀಲಿಸಲಾಗಿ 1) KA-44 K-855 ನೇ ಡಿಸ್ಕವರ್ ಬೈಕ್, 2) KA-44 K-6008 ನೇ  ಟಿವಿಎಸ್  ಸ್ಟಾರ್ ಸಿಟಿ ಬೈಕ್ 3) KA-51 J-4112 ನೇ ಡಿಸ್ಕವರ್ ಬೈಕ್ 4) KA-44 R-5376 ಪಲ್ಸರ್  ಬೈಕ್ 5) KA-44 E-3481 ಟಿ ವಿ ಎಸ್ ವಿಕ್ಟರ್  ಬೈಕ್ ಗಳನ್ನು ಮತ್ತು ಮೇಲ್ಕಂಡ 1) 5170/ ರೂ ನಗದು ಹಣ. 2) 52 ಇಸ್ಪೀಟ್ ಎಲೆಗಳು 3)  ಒಂದು ಪ್ಲಾಸ್ಟಿಕ್ ಚೀಲವನ್ನು ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ 08 ಜನ ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಈ ದಿವಸ ಸಂಜೆ 06-15. ಗಂಟೆಯಿಂದ 07-00..ಗಂಟೆಯವರೆಗೆ ಬರೆದ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ವಾಪಸ್ 07-35 ಗಂಟೆಗೆ ಬಂದು ಪ್ರಕರಣ ದಾಖಲಿಸಿರುತ್ತೆ.

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 99 guests online
Content View Hits : 289610