lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >> ತುಮಕೂರು ಜಿಲ್ಲೆಯಲ್ಲಿ 2018 ನೇ ಮೇ ಮಾಹೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳ... >> ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< May 2017 >
Mo Tu We Th Fr Sa Su
1 2 3 4 5 6 7
8 9 10 11 12 13 14
15 17 18 19 20 21
22 23 24 25 26 27 28
29 30 31        
Tuesday, 16 May 2017
Crime Incidents 16-05-17

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ-105/2017 ಕಲಂ: 457,380 ಐ.ಪಿ.ಸಿ.

ದಿನಾಂಕ:15-05-2017 ರಂದು ರಾತ್ರಿ 9-45 ಗಂಟೆಗೆ ಪಿರ್ಯಾಧಿ ಮಂಜುನಾಥ್ ಎಂ.ಆರ್ ಬಿನ್ ರುದ್ರಪ್ಪ ಎಂ.ಸಿ, 35 ವರ್ಷ, 2ನೇ ಕ್ರಾಸ್, ಸಿದ್ದರಾಮೇಶ್ವರನಗರ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ಸ್ವಂತ ಕೆಲಸದ ನಿಮಿತ್ತ ತನ್ನ ತಾಯಿಯ ಊರಾದ ತುರುವೇಕರೆ ತಾಲ್ಲೋಕು ಹಟ್ಟಹಳ್ಳಿಗೆ ದಿನಾಂಕ:14-05-2017 ರಂದು ಬೆಳಿಗ್ಗೆ 11-00 ಗಂಟೆಗೆ ಮನೆಗೆ ಬೀಗ ಹಾಕಿಕೊಂಡು ಹೋಗಿ ವಾಪಸ್ಸು ದಿನಾಂಕ:15-05-2017 ರಂದು ಸಂಜೆ 7-00 ಗಂಟೆ ಮನೆಗೆ ಬಂದು ನೋಡಲಾಗಿ ಮನೆಯ ಗ್ರಿಲ್ ಗೆ ಹಾಕಿದ್ದ ಬೀಗವನ್ನು ಮುರಿದು ಮನೆಯ ಬಾಗಿಲ ಡೋರ್ ಲಾಕ್ ನ್ನು ಯಾವುದೋ ಆಯುಧದಿಂದ ಮೀಟಿ ಮನೆಯ ಒಳಗೆ ಪ್ರವೇಶ ಮಾಡಿ ಮನೆಯ ಒಳಗಡೆ ಬೆಡ್ ರೂಂ ನಲ್ಲಿದ್ದ ಕಬ್ಬಿಣದ 2 ಬೀರುಗಳನ್ನು ಯಾವುದೋ ಆಯುಧದಿಂದ ಮೀಟಿ ಸೇಫ್ ಲಾಕರ್ ನಲ್ಲಿ ಇಟ್ಟಿದ್ದ ಚಿನ್ನದ ಎರಡು ಎಳೆಯ ಸುಮಾರು 40 ಗ್ರಾಂ ತೂಕದ ವಡವೆ, ಸುಮಾರು 40 ಗ್ರಾಂ ತೂಕದ ಚಿನ್ನದ ಲಾಂಗ್ ಚೈನ್, ಸುಮಾರು 6 ಗ್ರಾಂ ತೂಕದ ಚಿನ್ನದ ಒಂದು ಜೊತೆ ಹ್ಯಾಂಗೀಸ್, ಸುಮಾರು 50 ಗ್ರಾಂ ತೂಕದ ಒಂದು ಬೆಳ್ಳಿಯ ಉಡುದಾರ ಮಕ್ಕಳ 2 ಚಿನ್ನದ ಉಂಗುರ, 2 ಚಿನ್ನದ ಉಂಗುರ ಸುಮಾರು 10 ಗ್ರಾಂ, ನಗದು 50,000-00 ಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಮೇಲ್ಕಂಡ ವಡವೆಗಳ ಒಟ್ಟು ಬೆಲೆ 1,95,000-00 ರೂ ಗಳಾಗುತ್ತದೆ.  ಪತ್ತೆ ಮಾಡಿಕೊಡಿ ಎಂದು ನೀಡಿ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 80/2017 ಕಲಂ 323,324,447,506, ಐಪಿಸಿ

ದಿನಾಂಕ-15/05/2017 ರಂದು ರಾತ್ರಿ 9-00 ಗಂಟೆಗೆ ಪಿರ್ಯಾದಿಯಾದ ಲಕ್ಷ್ಮಮ್ಮ ಕೋಂ ರಂಗಸ್ವಾಮಯ್ಯ, ಬೊಮ್ಮನಹಳ್ಳಿ, ಸಿರಿವಾರ ಅಂಚೆ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೋಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂಧರೆ ಬೊಮ್ಮನಹಳ್ಳಿ ಗ್ರಾಮದ ನಮ್ಮ ಜಮೀನಿನಲ್ಲಿ ನನ್ನ ಮತ್ತು ನನ್ನ ಗಂಡ ಹಾಗೂ ನನ್ನ ಮಾವನವರ ಮೇಲೆ ಇದೇ ಬೊಮ್ಮನಹಳ್ಳಿ ವಾಸಿ ರಂಗಸ್ವಾಮಯ್ಯ ಬಿನ್ ಲೇಟ್ ಸಿದ್ದಯ್ಯ ರವರು ಮಾರಾಣಾಂತಿಕ ಹಲ್ಲೆಯನ್ನು ನೆಡೆದಿರುತ್ತಾರೆ, ದಿನಾಂಕ-14/05/2017 ರ ಬಾನುವಾರದಂದು ಸಂಜೆ ಸುಮಾರು 5-00 ಗಂಟೆ ಸಮಯದಲ್ಲಿ ನನ್ನ ಜಮೀನಿನಲ್ಲಿ ನಾನು ಮತ್ತು ನನ್ನ ಪತಿಯವರಾದ  ರಂಗಸ್ವಾಮಯ್ಯ ಹಾಗೂ ಮಾವನವರಾದ ಬೈರಪ್ಪ ಉರುಫ್ ಬಾಗಪ್ಪನವರುಗಳು ನಮ್ಮ ತೋಟದ ತೆಂಗಿನ ಮರದಲ್ಲಿ ತೆಂಗಿನ ಕಾಯಿಗಳನ್ನು ಕೀಳಲು ಹೋಗಿದ್ದು ನಮ್ಮ ಮಾವನವರು ತೆಂಗಿನ ಕಾಯಿಗಳನ್ನು ಕೀಳುತ್ತಿರುವಾಗ ರಂಗಸ್ವಾಮಯ್ಯ ಬಿನ್ ಲೇಟ್ ಸಿದ್ದಯ್ಯ ರವರು ಏಕಾ ಏಕಿ ನಮ್ಮ ಜಮೀನಿನ ತೋಟಕ್ಕೆ ನುಗ್ಗಿ ನಮ್ಮ ಮಾವನವರಿಗೆ ದೊಣ್ಣೆಯಿಂದ ಹೊಡೆದರು, ನಂತರ ಅದನ್ನು ಕೇಳಲು ನನ್ನ ಯಜಮಾನರು ಹೋದಾಗ ರಂಗಸ್ವಾಮಯ್ಯನವರು ನನ್ನ ಯಜಮಾನರನ್ನು ಕೆಳಗೆ ತಳ್ಳಿ ಅವರ ಎದೆ ಮೇಲೆ ಕುಳಿತುಕೊಂಡು ಅವರ ಎದೆಯನ್ನು ಗುದ್ದಿ, ನಂತರ ಅವರ ಕತ್ತಿನ ಮೇಲೆ ಕುಳಿತು ನೀನು ಸಾಯಿ ಎಂದು ಹೇಳುತ್ತಿದ್ದರು, ಆದ್ದರಿಂದ ನಮ್ಮ ಯಜಮಾನರಿಗೆ ಉಸಿರಾಡಲು ತುಂಬ ತೊಂದರೆಯಾಗುತಿತ್ತು, ಆಗ ನಮ್ಮ ಯಜಮಾನರು ರಂಗಸ್ವಾಮಯ್ಯರವರನ್ನು ತಳ್ಳಿ ಅಲ್ಲಿಂದ ನಾವುಗಳು ಮನೆಯ ಕಡೆಗೆ ಓಡಿಹೋದೆವು, ನಮ್ಮ ಗ್ರಾಮದವಾರ ಗಂಗಬೈರಯ್ಯ ಬಿನ್ ಬೈರಪ್ಪ, ನಂಜಮ್ಮ ಕೋಂ ಬೈರಪ್ಪ ಉರುಫ್ ಬಾಗಪ್ಪನವರುಗಳು ಈ ಜಗಳವನ್ನು ನೋಡಿರುತ್ತಾರೆ, ನಂತರ ನಮ್ಮ ಗ್ರಾಮಸ್ಥರ ಸಲಹೆ ಮೇರೆಗೆ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದೇನೆ, ಇದೇ ರೀತಿ ಹಿಂದೆ ನಮ್ಮ ಜಮೀನಿಗೆ ಬಂದು ಗಲಾಟೆ ಮಾಡಿರುತ್ತಾರೆ, ದಿನಾಂಕ-21/02/2017 ರಂದು ನಾವು ನಿಮ್ಮ ಠಾಣೆಗೆ ಬಂದು ದೂರನ್ನು ಸಹ ನೀಡಿರುತ್ತೇವೆ, ಉಲ್ಲೇಖ ಸಂಖ್ಯೆ-38/2017 ರಲ್ಲಿ ನೊಂದಣಿಯಾಗಿರುತ್ತದೆ, ಅದರಂತೆ ಇದು ನಮಗೆ ಸಿವಿಲ್ ವಿಷಯವಾದ್ದರಿಂದ ನ್ಯಾಯಾಲಯದಲ್ಲಿ ಹೋಗಿ ಇಥ್ಯರ್ತ ಪಡಿಸಿಕೊಳ್ಳಿ ಎಂದು ಸಲಹೆ ನೀಡಿರುವ ಮೇರೆಗೆ ನಾನು ತುಮಕೂರಿನ ಸಿವಿಲ್ ನ್ಯಾಯಾಲಯದಲ್ಲಿ ದಾವೆಯನ್ನು ಊಡಿದ್ದು, ದಾವಾ ಸಂಖ್ಯೆ ಓಎಸ್ ನಂ-194/2017 ಆಗಿದ್ದು, ನ್ಯಾಯಾಲಯದಲ್ಲಿ ಪ್ರಕರಣವು ವಿಚಾರಣೆಯ ಹಂತದಲ್ಲಿ ಇರುತ್ತದೆ, ಆದರೂ ಸಹ ರಂಗಸ್ವಾಮಯ್ಯನವರು ಪದೇ ಪದೇ ಬಂದು ಈರೀತಿ ಗಲಾಟೆ ಮಾಡುತ್ತಿರುತ್ತಾರೆ, ಆದರೆ ಅವರು ನಮ್ಮನ್ನು ಮರಾಣಾಂತಿಕ ಹಲ್ಲೆ ಮಾಡಿ ಸಾಯಿಸುವ ಉದ್ದೇಶದಿಂದ ಬಂದಿರುತ್ತಾರೆ, ಆದ್ದರಿಂದ ರಂಗಸ್ವಾಮಯ್ಯ ರವರು ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕಾಗಿ ತಮ್ಮಲ್ಲಿ ಕೋರಿಕೊಳ್ಳುತ್ತೇನೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

.ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 81/2017 ಕಲಂ 354,504,ರೆ/ವಿ 34 ಐಪಿಸಿ

ದಿನಾಂಕ-15/05/2017 ರಂದು ರಾತ್ರಿ 9-45 ಗಂಟೆಗೆ ಪಿರ್ಯಾದಿಯಾದ ವೆಂಕಟಮ್ಮ ಕೋಂ ಲೇಟ್ ಸಿದ್ದಯ್ಯ, ಬೊಮ್ಮನಹಳ್ಳಿ, ಸಿರಿವಾರ ಅಂಚೆ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೊಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೇಂದರೆ ದಿನಾಂಕ-15/05/2017 ರಂದು ಸಂಜೆ 6-30 ರ ಸಮಯದಲ್ಲಿ ನಾನು ಮನೆಯ ಹತ್ತಿರ ಇದ್ದಾಗ ಬೈರಪ್ಪ @ ಬಾಗಪ್ಪನವರನ್ನು ಟೇಷನ್‌ ನಿಂದ ನಿಂಗೇಗೌಡ ಬಿನ್ ಲೇಟ್ ಬೈರಪ್ಪ ಮತ್ತು ಗಂಗಬೈರಯ್ಯ (ಗೌಡ) ಬಿನ್ ಬೈರಪ್ಪನವರು ಕರೆ ತಂದು ನನ್ನ ಮೇಲೆ ಅವ್ಯಾಚ್ಯಶಬ್ದಗಳಿಂದ ಸೂಳೆ ಮುಂಡೆ ಎಂದು ಬೈಯುತ್ತಾ ಇದ್ದರು, ನಾನು ಕೇಳಲು ಮುಂದದಾಗ ನನ್ನ ತಲೆ ಕೂದಲನ್ನು ಹಿಡಿದು, ನನಗೆ ಹೊಡೆದು, ನನ್ನ ಬಟ್ಟೆಯನ್ನು ಹರಿದು, ನನ್ನ ಹತ್ತಿರ ಏನನ್ನು ಕಿತ್ತುಕೊಳ್ಳಲು ಹಾಗುವುದಿಲ್ಲ ಎಂದು ಹೇಳುತ್ತಾ ಬಾಗಪ್ಪ ಅವನ ನಿಕ್ಕರ್‌ನ್ನು ಬಿಚ್ಚಿ ತೋರಿಸಲು ಮುಂದದಾಗ ಅಲ್ಲಿರುವ ಅಕ್ಕ-ಪಕ್ಕದ ಮಹಿಳೆರು ಬಂದು ನನ್ನನ್ನು ಅವರಿಂದ ರಕ್ಷಣೆ ಮಾಡಿ ಠಾಣೆಗೆ ಕರೆ ತಂದಿರುತ್ತಾರೆ, ಮತ್ತು ಎಲ್ಲಾ ಗಲಾಟೆಗೆ ಮುಖ್ಯ ಕಾರಣ ನಿಂಗೇಗೌಡ ಎಂದುವವನು ಮುಖ್ಯ ಕಾರಣವಾಗಿರುತ್ತಾನೆ, ಆದ್ದರಿಂದ ಈ ಮೂರು ಜನರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹಂದನಕೆರೆ ಪೊಲೀಸ್ ಠಾಣಾ ಯುಡಿಆರ್ ನಂ-06/2017 ಕಲಂ-174 ಸಿಆರ್‌ಪಿಸಿ

ದಿನಾಂಕ:15/05/2017 ರಂದು ಸಂಜೆ 7-00 ಗಂಟೆಗೆ ಪಿರ್ಯಾದಿ ರಾಜಶೇಖರಯ್ಯ ಬಿನ್ ಮುನಿಯಪ್ಪ, 50 ವರ್ಷ, ಲಿಂಗಾಯಿತರು, ಅಬೂಜಿಹಳ್ಳಿ, ಹಂದನಕೆರೆ ಹೋ ಚಿ ನಾ ಹಳ್ಳಿ ತಾ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೆನೆಂದರೆ, ಪಿರ್ಯಾದಿಗೆ ರಮ್ಮ ಮತ್ತು ಪೂಜಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದು ಮೊದಲನೇ ಮಗಳು ರಮ್ಯ ರವರು ಅರಳಿಕೆರೆ ಹುಡುಗನನ್ನು ಪ್ರೀತಿಸಿ ಮದುವೆಯಾಗಿದ್ದರಿಂದ ಅವಳಿಗೂ ಪಿರ್ಯಾದಿಗೂ ಒಡನಾಟ ಇರುವುದಿಲ್ಲ. ಎರಡನೇ ಮಗಳನ್ನು ಈಗ್ಗೆ 9 ತಿಂಗಳ ಹಿಂದೆ ತಿಪಟೂರು ತಾಲ್ಲೋಕಿನ ರಟ್ಟೇನಹಳ್ಳಿಯ ಶೇಖರಪ್ಪ ರವರ ಮಗನಾದ ಮನು  ಎಂಬುವನಿಗೆ ಕೊಟ್ಟು ಮದುವೆ ಮಾಡಿದ್ದು ಅನ್ಯೋನ್ಯವಾಗಿ ಸಂಸಾರ ಮಾಡಿಕೊಂಡಿದ್ದರು. ಈಗಿರುವಾಗ ದಿ:01/05/2017 ರಂದು ಬೇವಿನಹಳ್ಳಿಯಲ್ಲಿ  ಸಂಬಂಧಿಕರ ನಿಶ್ವಾತಾರ್ಥ ಕಾರ್ಯಕ್ಕೆ ಪಿರ್ಯಾದಿ ಮಗಳು ಗಂಡನ ಕುಟುಂಬ ಸಮೇತವಾಗಿ ಬಂದು ಕಾರ್ಯಕ್ರಮ ಮುಗಿದ ಮೇಲೆ ಪೂಜಾ ರವರು ತವರು ಮನೆಯಾದ ಪಿರ್ಯಾದಿ ಮನೆಯಲ್ಲಿ ಸ್ಪಲ್ಪ ದಿನ ಉಳಿದುಕೊಂಡಿದ್ದು ಮನೆಯಲ್ಲಿ ಚೆನ್ನಾಗಿ ಇದ್ದಳು. ದಿ:14/05/2017 ರಂದು ಸಂಜೆ ಮನು ರವರ ಅಕ್ಕ ನಳಿನ ರವರು ಪೋನ್ ಮಾಡಿ  ಮನೆಯಲ್ಲಿ ನಡೆಯುವ ದೇವರ ಕಾರ್ಯಕ್ಕೆ ಬಾ ಎಂತ ಕರೆದಿದ್ದಕ್ಕೆ ಒಪ್ಪಿಕೊಂಡು ದಿ:15/05/2017 ರಂದು ಪೂಜಾ ನಳಿನಾ ರವರ ಮನೆಯ ಕಾರ್ಯಕ್ಕೆ  ಹೋಗುವುದಿಲ್ಲವೆಂತ ಮನೆಯಲ್ಲಿ ಮದ್ಯಾಹ್ನ ಸುಮಾರು 12 ಗಂಟೆಯಲ್ಲಿ ಸ್ನಾನ ಮಾಡಿ ಮನೆಯಲ್ಲಿರುವ ರೂಂ ಗೆ ಹೋಗಿ ಬೋಲ್ಟ್ ಹಾಕಿಕೊಂಡು ಮಲಗಿದ್ದು ಮದ್ಯಾಹ್ನ ಸುಮಾರು 1-30 ಗಂಟೆ ಸಮಯದಲ್ಲಿ ಪಿರ್ಯಾದಿ ಹೆಂಡತಿ ಊಟಕ್ಕೆ ಎಬ್ಬಿಸಲು ಹೋದಾಗ ಪೂಜಾ ರೂಂ ಬಾಗಿಲು ತೆಗೆಯದೇ ಇದ್ದು ಬಾಗಿಲ ಸಂದಿಯಲ್ಲಿ ನೋಡಿದಾಗ ಪೂಜಾ ನೇಣು ಹಾಕಿಕೊಂಡಂತೆ ಕಂಡು ಬಂದಿದ್ದನ್ನು ಪಿರ್ಯಾದಿಗೆ ತಿಳಿಸಿದ್ದರಿಂದ ಪಿರ್ಯಾದಿ ಮತ್ತು ಇತರರು ಬಾಗಿಲನ್ನು ಹಾರೆಯಿಂದ ಮೀಟಿದರೂ ರೂಂ ಬಾಗಿಲು ತೆಗೆಯದ ಕಾರಣ ಹೆಂಚು ತೆಗೆದು ಒಳಗೆ ಇಳಿದು ನೋಡಲಾಗಿ ಪೂಜಾ ಸೀರೆಯಿಂದ ರೂಂ ನ ತೀರಿಗೆ ಸೀರೆಯಿಂದ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿದ್ದು ನಂತರ ಸೀರೆಯನ್ನು ಕೊಯ್ದು ಕೆಳಗೆ ಇಳಿಸಿ ನೋಡಲಾಗಿ ಮೃತಪಟ್ಟಿರುತ್ತಾಳೆಂತ ಇತ್ಯಾದಿಯಾಗಿ ಕೊಟ್ಟ ದೂರಿನ ಮೇರಗೆ ಪ್ರಕರಣ ದಾಖಲಿಸಿರುತ್ತೆ.

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 98 guests online
Content View Hits : 289610