lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< May 2017 >
Mo Tu We Th Fr Sa Su
1 2 3 4 5 6 7
8 9 11 12 13 14
15 16 17 18 19 20 21
22 23 24 25 26 27 28
29 30 31        
Wednesday, 10 May 2017
Crime Incidents 10-05-17

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ: 51/2017. ಕಲಂ: 143.147.323.324.506 RW 149 IPC

ದಿನಾಂಕ:09/05/2017 ರಂದು ಮದ್ಯಾಹ್ನ 12:30 ಗಂಟೆಗೆ ಪಿರ್ಯಾಧಿ ಅಲ್ಕೂರಪ್ಪ ಬಿನ್ ಲೇ|| ಅಂಜಿನಪ್ಪ, 33 ವರ್ಷ, ನಾಯಕ ಜನಾಂಗ, ಕೆ.ರಾಂಪುರ ಗ್ರಾಮ ರವರು  ನೀಡಿದ ದೂರಿನ ಅಂಶವೇನೆಂದರೆ  ಕೆ ರಾಂಪುರ ಗ್ರಾಮದ  ಖಾತೆ ನಂ:140  ರಲ್ಲಿ ನನ್ನ ಹೆಸರಿನಲ್ಲಿ 27*18 ಅಡಿಗಳ ಅಳತೆಯುಳ್ಳ ನಿವೇಶನ ಸದರಿ ಗ್ರಾಮದಲ್ಲಿ ಇದ್ದು ಈ ನಿವೇಶನಕ್ಕೆ  ನನ್ನ ಪತ್ನಿಯಾದ ಸಂಧ್ಯ ಆರ್ ರವರಿಗೆ ಸರ್ಕಾರದಿಂದ  ಮನೆ   ದಿನಾಂಕ:09/05/2017 ರಂದು ಸಮಯ 10:30 ಗಂಟೆ ಸಮಯದಲ್ಲಿ ನಾವು ಮನೆ ಕಟ್ಟುತ್ತಿದ್ದಾಗ ನಮ್ಮ ಗ್ರಾಮದ 1] ಅಲುವೇಲಮ್ಮ ರವರು ಈ ಜಾಗ ನನಗೆ ಸೇರಿದ್ದು ಎಂತ ಅಲುವೇಲಮ್ಮ ಅವರ ಮಕ್ಕಳಾದ  2] ಪರಮೇಶ 3] ಗಜೇಂದ್ರ ಹಾಗೂ ದಳವಾಯಿಹಳ್ಳಿ ಗ್ರಾಮದ ಅಲುವೇಲಮ್ಮನ  ತಂಗಿ ಗಂಡ ಮತ್ತು ಅಲುವೇಲಮ್ಮನ   ಇವರೆಲ್ಲರೂ ಕೆಲಸ ಮಾಡುತ್ತಿದ್ದ ನಮ್ಮ ಅತ್ತೆಯಾದ ಸರೋಜಮ್ಮ ಮಾವ ಮಾರುತಿ, ನನ್ನ ಹೆಂಡತಿ ಸಂಧ್ಯ ಮತ್ತು ನನ್ನ ಮೇಲೆ ಅಕ್ರಮ ಗುಂಪು ಕಟ್ಟಿಕೊಂಡು ಬಂದು ನನ್ನ ಅತ್ತೆ ಸರೋಜಮ್ಮನಿಗೆ ಪರಮೇಶ & ಗಜೇಂದ್ರ ಕಟ್ಟಿಗೆ ಯಿಂದ ಎಡಕೈಗೆ , ಮಂಡಿ ಮತ್ತು ಬೆನ್ನಿಗೆ ಹೊಡೆದಿರುತ್ತಾರೆ, ನನ್ನ ಮಾವ ಮಾರುತಿಗೆ ಅಲುವೇಲಮ್ಮ ಹಾಗೂ ಗಜೇಂದ್ರ ಗಡಪಾರ( ಹಾರೆ ಕೋಲು) ನಿಂದ ಎಡ ಕಾಲು & ಎಡ ಕೈಗೆ ಹೊಡೆದಿರುತ್ತಾರೆ, ದಳವಾಯಿಹಳ್ಳಿ ಗ್ರಾಮದ ಅಲುವೇಲಮ್ಮನ ತಂಗಿ ಗಂಡ ಹಾಗೂ ಅಲುವೇಲಮ್ಮನ ತಮ್ಮ & ಅಲುವೇಲಮ್ಮ ರವರು ನನಗೂ ನನ್ನ ಹೆಂಡತಿ ಸಂಧ್ಯ ಗೆ ಕೊಡಲಿಯಿಂದ & ಇಟ್ಟಿಗೆಯಿಂದ ಹೊಡೆದು ಹಲ್ಲೆ ಮಾಡಿರುತ್ತಾರೆ.ನನಗೆ ಕಾಲಿಗೆ ಬಲಗೈಗೆ & ಎದೆಗೆ ನನ್ನ ಹೆಂಡತಿ ಸಂಧ್ಯಳಿಗೆ ಇಟ್ಟಿಗೆಯಿಂದ ಬೆನ್ನಿಗೆ ಹೊಡೆದಿರುತ್ತಾರೆ, ಹಾಗೂ ನಾವು ಯಾರಾದರೂ ನಮ್ಮನ್ನು ಕಾಪಾಡಿ ನಮ್ಮನ್ನು ಸಾಯಿಸಿ ಬಿಡುತ್ತಾರೆ ಎಂದು ಕೂಗಿ ಕೊಂಡಾಗ ನಮ್ಮ ಗ್ರಾಮದ ಶ್ರೀರಾಮಪ್ಪನ ಮಗ ಶಂಕರ, ಕೃಷ್ಣಪ್ಪ, ,ರಾಮಾಂಜಿನಪ್ಪ, ರವರುಗಳು ಬಂದು ಜಗಳ ಬಿಡಿಸಿ ನಮ್ಮನ್ನು ಆಸ್ಪತ್ರೆಗೆ ಕಳುಹಿಸಿರುತ್ತಾರೆ, ಮೇಲ್ಕಂಡವರು ಇಲ್ಲಿಗೆ ನಿಮ್ಮನ್ನು ಬಿಡುವುದಿಲ್ಲ ಎಂತ ಪ್ರಾಣ ಬೆದರಿಕೆ ಹಾಕಿರುತ್ತಾರೆ, ನಾವುಗಳು ಆಸ್ಪತ್ರೆಯಲ್ಲಿ ತೋರಿಸಿ ಠಾಣೆಗೆ ಬಂದು ದೂರು ನೀಡಿರುತ್ತೇವೆ, ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಿ ನ್ಯಾಯ ದೊರಕಿಸಿ ಕೊಡಬೇಕೆಂತ ಇತ್ಯಾದಿಯಾಗಿ ನೀಡಿದ   ದೂರನ್ನು ಪಡೆದು  ಪ್ರಕರಣ ದಾಖಲಿಸಿರುತ್ತದೆ.

 


Crime Incidents 09-05-17

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 77/2017 ಕಲಂ 279,337 ಐಪಿಸಿ ರೆ/ವಿ 134(ಎ&ಬಿ), 187 ಐಎಂವಿ ಆಕ್ಟ್.

ದಿನಾಂಕ-08/05/2017 ರಂದು ಸಂಜೆ 6-30 ಗಂಟೆಗೆ ಪಿರ್ಯಾದಿಯಾದ ರಂಜಿತ್ ಕುಮಾರ್ ಕೆ.ಜಿ ಬಿನ್ ಗುರುಮಂಜಯ್ಯ ಕೆ.ಜಿ, 20 ವರ್ಷ, ಕೊರಮರು, ಜಿರಾಯ್ತಿ, ಕಳ್ಳಿಪಾಳ್ಯ, ಗುಳೂರು ಹೋಬಳಿ, ತುಮಕೂರು ತಾಲ್ಲೋಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ದಿನಾಂಕ:08-05-2017 ರಂದು ನನಗೆ ಆರೋಗ್ಯ ಸರಿಇಲ್ಲದ ಪ್ರಯುಕ್ತ ಹೊನ್ನುಡಿಕೆ ಆಸ್ಪತ್ರೆಗೆ ಹೋಗಿ ವೈಧ್ಯರಲ್ಲಿ ತೋರಿಸಿಕೊಂಡು ಬರುವುದಕ್ಕಾಗಿ ನನ್ನ ಬೈಕಿನಲ್ಲಿ ಶಿವಗಂಗೆ ಕಡೆಯಿಂದ ಹೊನ್ನುಡಿಕೆ ಕಡೆಗೆ ಬರುತ್ತಿರುವಾಗ ಬಿದರಕಟ್ಟೆ ಗೀಟ್ ನ ಬಳಿ ನನ್ನ ಮುಂಭಾಗ ಒಂದು ಟಿಪ್ಪರ್ ಲಾರಿ ಹೊನ್ನುಡಿಕೆ ಕಡೆಗೆ ಹೋಗುತ್ತಿದ್ದು, ಹೊನ್ನುಡಿಕೆ ಕಡೆಯಿಂದ ಒಂದು ದ್ವಿಚಕ್ರ ವಾಹನದಲ್ಲಿ ಶಿವಗಂಗೆ ಕಡೆಗೆ ಹೋಗಲು ಮೂರು ಜನರು ಬರುತ್ತಿದ್ದು, ಗೇಟ್ ನ ಬಳಿ ನನ್ನ ಮುಂದೆ ಹೋಗುತ್ತಿದ್ದ ಒಂದು ಟಿಪ್ಪರ್ ಲಾರಿಯನ್ನು ಅದರ ಚಾಲಕ ಅತೀವೇಗ, ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಸಿದ್ದಾಪುರ ಕಡೆಗೆ ಹೋಗಲು ಯಾವುದೇ ಮುನ್ಸೂಚನೆಯನ್ನು ನೀಡದೇ ಬಲ ಭಾಗಕ್ಕೆ ತಿರುಗಿಸಿ, ಎದುರಿಗೆ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯಿಸಿದ್ದರಿಂದ ಅದರಲ್ಲಿದ್ದ ಮೂರು ಜನರು ದ್ವಿಚಕ್ರ ವಾಹನದ ಸಮೇತ ರಸ್ತೆಯ ಮೇಲೆ ಬಿದ್ದರು, ಆಗ ನಾನು ಟಿಪ್ಪರ್ ಲಾರಿ ನಂಬರ್ ನೋಡಲಾಗಿ ಕೆಎ-41-1270 ಆಗಿದ್ದು, ಸ್ಥಳದಲ್ಲಿ ನಿಲ್ಲಿಸದೇ ಹೋರಟು ಹೋದನು. ಮಧ್ಯಾಹ್ನ ಸುಮಾರು 3-15 ಗಂಟೆ ಸಮಯ ಆಗಿತ್ತು, ಆಗ ನಾನು ನನ್ನ ಬೈಕನ್ನು ರಸ್ತೆಯ ಪಕ್ಕ ನಿಲ್ಲಿಸಿ ನಾನು ಮತ್ತು ಬಿದರಕಟ್ಟೆ ಗೇಟ್‌ನ ಬಳಿ ಇದ್ದ ನಮ್ಮ ಗ್ರಾಮದ ನಾಗರಾಜು ಹಾಗೂ ಸಾರ್ವಜನಿಕರು ಹೋಗಿ ಎತ್ತಿ ಉಪಚರಿಸಿ ನೋಡಲಾಗಿ ಬೈಕಿನ ಸವಾರ ನನಗೆ ಪರಿಚಯವಿರುವ ರಮೇಶನಾಗಿದ್ದು, ಈತನಿಗೆ ಎಡಗೈಗೆ ರಕ್ತಗಾಯವಾಗಿದ್ದು, ಮತ್ತೊಬ್ಬ ಶ್ರೀನಿವಾಸ ನಮ್ಮ ಗ್ರಾಮದವಾನಾಗಿದ್ದು ಈತನಿಗೆ ತಲೆಗೆ ಮತ್ತು ಎಡಗಾಲಿಗೆ ರಕ್ತಗಾಯಗಳಾಗಿದ್ದು, ಮತ್ತು ಇನ್ನೋಬ್ಬನಿಗೆ ಎಡಭಾಗದ ಮುಖಕ್ಕೆ ರಕ್ತಗಾಯವಾಗಿರುತ್ತೆ. ಆಪಘಾತಕ್ಕೋಳಗಾದ ಬೈಕನ್ನು ನೋಡಲಾಗಿ ಕೆಎ-02-ಇಟಿ-1479 ಹಿರೋ ಹೊಂಡಾ ಗ್ಲಾಮರ್ ಆಗಿರುತ್ತೆ. ನಂತರ ನಾನು ನಾಗರಾಜು ಮತ್ತು ಸಾರ್ವಜನಿಕರು ಸೇರಿ ಮೂರು ಜನರನ್ನು ಯಾವುದೋ ಒಂದು ಆಟೋದಲ್ಲಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿ ನಾನು ಠಾಣೆಗೆ ಬಂದು ಯಾವುದೇ ಮುನ್ಸೂಚನೆಯನ್ನು ನೀಡದೇ ಟಿಪ್ಪರ್ ಲಾರಿಯನ್ನು ಅದರ ಚಾಲಕ ಅತೀವೇಗ, ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಆಪಘಾತ ಪಡಿಸಿ, ನಿಲ್ಲಿಸದೇ ಹೊರಟು ಹೋದ ಕೆಎ-41-1270 ಟಿಪ್ಪರ್ ಲಾರಿಯ ಚಾಕನ ಮೇಲೆ ಕಾನೂನು ರೀತ್ಯಾ  ಕ್ರಮ ತೆಗೆದುಕೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ-76/2017 ಕಲಂ: 363 ಐ.ಪಿ.ಸಿ

ದಿನಾಂಕ; 08/05/2017 ರಂದು ಮಧ್ಯಾಹ್ನ 04-00 ಗಂಟೆಗೆ ಪಿರ್ಯಾದಿ ಮಹಮದ್ ಶಬ್ಬೀರ್ ಬಿನ್ ಲತೀಫ್ ಸಾಬ್, 3ನೇ ಕ್ರಾಸ್ ಚಾಮುಮಡೇಶ್ವರಿ ಬಡಾವಣೆ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನನಗೆ 3ಜನ ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗನಿದ್ದು, ಮೂರು ಜನ ಹೆಣ್ಣು ಮಕ್ಕಳಲ್ಲಿ ಮೂರನೆಯ ಮಗಳು ಶಾಹಿಸ್ತಾ ಮೆಹರ್ (15ವರ್ಷ) ಈಕೆಯು ತಿಪಟೂರಿನ ಅಲ್-ಅಮೀನ್ ಸ್ಕೂಲ್ ನಲ್ಲಿ 9ನೇಯ ತರಗತಿ ವ್ಯಾಸಂಗ ಮಾಡುತ್ತಿದ್ದು, ಈಗ್ಗೆ ಸುಮಾರು 3 ತಿಂಗಳಿಂದ ಶಾಲೆಯನ್ನು ಬಿಡಿಸಿ ಮದರಸಾಕ್ಕೆ ಕಳುಹಿಸುತ್ತಿದ್ದು, ಪ್ರತಿದಿನ ಬೆಳಿಗ್ಗೆ 10-30 ಗಂಟೆಗೆ ಹೋಗಿ, ಮಧ್ಯಾಹ್ನ 01-30 ಗಂಟೆಗೆ ವಾಪಸ್ ಬರುತ್ತಿದ್ದಳು. ದಿನಾಂಕ:06/05/2017 ರಂದು ಎಂದಿನಂತೆ ಮದರಸಾಕ್ಕೆ ಹೋಗಲು ಮನೆಯಿಂದ ಹೋದವಳು ಮಧ್ಯಾಹ್ನ 02-00 ಗಂಟೆಯಾದರು ವಾಪಸ್ ಮನೆಗೆ ಬರಲಿಲ್ಲ. ನಾವು ಎಲ್ಲಾ ಕಡೆ ಹುಡುಕಿದರೂ ಸಹ ನನ್ನ ಮಗಳಾದ ಶಾಹಿಸ್ತಾ ಮೆಹರ್ ಪತ್ತೆಯಾಗಿರುವುದಿಲ್ಲ. ನನ್ನ ಮಗಳು ಅಪ್ರಾಪ್ತ ವಯಸ್ಕಳಾಗಿದ್ದು, ಕನ್ನಡ ಮತ್ತು ಉರ್ದು ಭಾಷೆಯನ್ನು ಮಾತನಾಡುತ್ತಿದ್ದು, ನೀಲಿ ಬಣ್ಣದ ಚೂಡಿದಾರ್ ತೊಟ್ಟು ಅದರ ಮೇಲೆ ಬುರ್ಕಾ ಧರಿಸಿದ್ದಳು. ಈಕೆಯನ್ನು ಗಾಂಧಿನಗರದ ಭೋವಿ ಕಾಲೋನಿಯ ವಾಸಿ ಸೈಯದ್ ಗೌಸ್ ಬಿನ್ ಸೈಯದ್ ವಜೀರ್ ಈತನು ಯಾವ ಕಾರಣಕ್ಕಾಗಿಯೋ ಅಪಹರಿಸಿಕೊಂಡು ಹೋಗಿರುವ ಸಾಧ್ಯತೆ ಇರುವುದರಿಂದ ನನ್ನ ಮಗಳನ್ನು ಮತ್ತು ಆತನನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಕೋರಿ ಈ ದಿನ ತಡವಾಗಿ ಬಂದು ದೂರು ನೀಡಿದ್ದು, ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ-77/2017 ಕಲಂ: 279,337 ಐ.ಪಿ.ಸಿ.

ದಿನಾಂಕ; 08/05/2017 ರಂದು ಸಂಜೆ 04-15 ರಿಂದ 04-45 ಗಂಟೆಯವರೆಗೆ ತಿಪಟೂರು ಟೌನ್ ಕುಮಾರ್ ಆಸ್ಪತ್ರೆಯಲ್ಲಿ ಗಾಯಾಳು ಹಿಂದೂಶೇಖರ್ ಟಿ.ಕೆ ಬಿನ್ ಕೃಷ್ಣಪ್ಪ, 50ವರ್ಷ, ಟಿ.ಎಂ ಮಂಜುನಾಥನಗರ ತಿಪಟೂರು ಟೌನ್ ರವರಿಂದ ಪಡೆದ ಹೇಳಿಕೆಯ ಅಂಶವೇನೆಂದರೆ, ನಾನು ದಿನಾಂಕ:07/05/2017 ರಂದು ನನ್ನ ಬಾಬ್ತು ಕೆ.ಎ-06 ಎ-1529 ನೇ ಆಟೋರಿಕ್ಷಾದಲ್ಲಿ ನನ್ನ ಪತ್ನಿ ಶೋಭಾ, ಮಗಳು ಅಶ್ವಿನಿ ಮತ್ತು ಪರಿಚಯಸ್ಥರಾದ ಲತಾ ಕೋಂ ಶಂಕರಯ್ಯ ಎಂಬುವರನ್ನು ಕೂರಿಸಿಕೊಂಡು ಸಂಜೆ 04-15 ಗಂಟೆಯಲ್ಲಿ ಕಲ್ಲೇಗೌಡನಪಾಳ್ಯಕ್ಕೆ ಹೋಗಲು ಬೆಂಗಳೂರು ಕಡೆ ಎನ್.ಹೆಚ್-206 ರಸ್ತೆಯಲ್ಲಿ ಗಣೇಶ ಟ್ಯಾಕೀಸ್ ಬಿಟ್ಟು ಮುಂದೆ ಅಲ್ಲೇ ಪಕ್ಕದಲ್ಲಿ ಇರುವ ರೇಷನ್ ಅಂಗಡಿಗೆ ಹೋಗಲು ಮುಂದೆ ಇರುವ "ಯು" ಟರ್ನ್ ನಲ್ಲಿ  ತಿರುಗಿಸಿದಾಗ ಇದೇ ವೇಳೆಗೆ ಒಂದು ದ್ವಿಚಕ್ರ ವಾಹನದ ಸವಾರ ಎದುರಿಗೆ ಬಂದಾಗ ನಾನು ನನ್ನ ಆಟೋರಿಕ್ಷಾವನ್ನು ಪಕ್ಕಕ್ಕೆ ತೆಗೆದು ಕೋಡಿ ಸರ್ಕಲ್ ಕಡೆ ಬರಲು ತಿರುಗಿಸಿದಾಗ ಇದೇ ಸಮಯಕ್ಕೆ ಬಂಡಿಹಳ್ಳಿ ಗೇಟ್ ಕಡೆಯಿಂದ ತಿಪಟೂರು ಟೌನ್ ಒಳಗೆ ಬರಲು ಕೆ.ಎ-44 -1970 ನೇ ಒಂದು ಟಾಟಾ ಸುಮೋ ಚಾಲಕ ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನನ್ನ ಆಟೋರಿಕ್ಷಾಗೆ ಡಿಕ್ಕಿ ಹೊಡೆಸಿದ ಪರಿಣಾಮ ನನ್ನ ಆಟೋರಿಕ್ಷಾ ಆಯತಪ್ಪಿ ನೆಲಕ್ಕೆ ಬಿದ್ದಾಗ ಆಟೋ ಚಾಲನೆ ಮಾಡುತ್ತಿದ್ದ ನನಗೆ, ನನ್ನ ಪತ್ನಿ ಶೋಭಾಗೆ  ಮತ್ತು ಮಗಳು ಅಶ್ವಿನಿಗೆ ಹಾಗೂ ಪರಿಚಯಸ್ಥರಾದ ಲತಾ ಕೋಂ ಶಂಕರಯ್ಯ ರವರಿಗೆ ಪೆಟ್ಟು ಬಿದ್ದಿದ್ದು, ನನ್ನ ಆಟೋರಿಕ್ಷಾ ಜಖಂಗೊಂಡಿರುತ್ತೆ. ನಂತರ ಅಲ್ಲಿಗೆ ಬಂದ ಬೇರೆ ಆಟೋರಿಕ್ಷಾದವರು ನಮ್ಮೆಲ್ಲರನ್ನು ಚಿಕಿತ್ಸೆಗಾಗಿ ತಿಪಟೂರು ಕುಮಾರ್ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿರುತ್ತಾರೆ. ಆದ್ದರಿಂದ ನಮಗೆ ಅಪಘಾತಪಡಿಸಿದ ಮೇಲ್ಕಂಡ ಟಾಟಾ ಸುಮೋ ವಾಹನದ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿರುವ ಹೇಳಿಕೆಯನ್ನು ಪಡೆದು ಸಂಜೆ 05-00 ಗಂಟೆಗೆ ಠಾಣೆಗೆ ಬಂದು ಪ್ರಕರಣ ದಾಖಲಿಸಿರುತ್ತೆ.

ಪಾವಗಡ ಪೊಲೀಸ್ ಠಾಣಾ ಮೊ,ನಂ 99/2017 ಕಲಂ 498(A), 304 (B) R/w 34 IPC ಮತ್ತು 3 & 4 D,P Act

 

ದಿನಾಂಕ:08/05/2017 ರಂದು ಮಧ್ಯಾಹ್ನ 01-00 ಗಂಟೆಗೆ ಪಿರ್ಯಾದುದಾರರಾದ ಇಂದಿರಮ್ಮ @ ಇಂದ್ರಮ್ಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನನ್ನ ಮಗಳಾದ ನಂದಿನಿರವರನ್ನು ಈಗ್ಗೆ 4 ವರ್ಷಗಳ ಹಿಂದೆ ಪಾವಗಡ ಟೌನ್ ಶಾಂತಿನಗರದ ವಾಸಿಯಾದ ನಮ್ಮ ಜನಾಂಗದ ಹನುಮಂತರಾಯಪ್ಪ ಮತ್ತು ಪಾರಿಜಾತಮ್ಮನ ಮಗನಾದ ಮೋಹನ ರವರಿಗೆ ಮದುವೆ ಮಾಡಿಕೊಟ್ಟಿದ್ದೆವು. ಮದುವೆಯಾದಾಗಿನಿಂದ ಗಂಡ-ಹೆಂಡತಿ ಬಗ್ಗೆ ಹಲವು ಬಾರಿ ಗಲಾಟೆ ನೆಡೆಯುತ್ತಿದ್ದುದ್ದರ ಬಗ್ಗೆ ನನ್ನ ಮಗಳು ಅನೇಕ ಬಾರಿ ನನ್ನ ಬಳಿ ಹೇಳುತ್ತಿದ್ದಳು. ನಾನು ಕೂಡ ಪಾವಗಡಕ್ಕೆ ನನ್ನ ಅಳಿಯನ ಮನೆಗೆ ಬಂದಾಗ ಇವರಿಬ್ಬರ ಗಲಾಟೆಯನ್ನು ಖುದ್ದಾಗಿ ನೋಡಿರುತ್ತೇನೆ. ನನ್ನ ಮಗಳನ್ನು ಮೋಹನ ಪದೇ-ಪದೇ ನಿನ್ನ ತವರು ಮನೆಯಿಂದ ಹಣ, ವಡವೆ ತರುವಂತೆ ಒತ್ತಾಯಿಸುತ್ತಿದ್ದ. ಮದುವೆ ಕಾಲದಲ್ಲಿ ಹಣ ಮತ್ತು ಬಂಗಾರ ಕೊಟ್ಟಿದ್ದಲ್ಲದೆ ಈತ್ತೀಚೆಗೆ ಹಣಕ್ಕೆ ಪೀಡಿಸುತ್ತಿದ್ದರಿಂದ ನಾವು 50,000/- ಸಾವಿರ ರೂ ಕೊಟ್ಟಿದ್ದೆನು. ಆದರೂ ಮೋಹನ ಪ್ರತಿ ನಿತ್ಯ ಪಾನ ಕುಡಿದು ಮನೆಗೆ ಬಂದು ಆತನ ಹೆಂಡತಿ ನಂದಿನಿಯನ್ನು ಹೊಡೆದು-ಬಡಿದು ಚಿತ್ರ ಹಿಂಸೆ ಕೊಡುತ್ತಿದ್ದ. ನನ್ನ ಮಗಳು ಅಮರಾಪುರಕ್ಕೆ ಬಂದಾಗಲೂ ಅಲ್ಲಿಗೂ ಬಂದು ಹಿಂಸೆ ನೀಡುತ್ತಿದ್ದನು. ಈತನಿಗೆ ಬೇರೆ ಮಹಿಳೆಯ ಜೊತೆ ಅಕ್ರಮ ಸಂಬಂಧವಿದ್ದು, ಇದಕ್ಕೆ ನನ್ನ ಮಗಳು ಅಡ್ಡಿಯಾಗುತ್ತಾಳೆಂತ ಈತನ ತಂದೆ-ತಾಯಿ ಎಲ್ಲರೂ ಸೇರಿಕೊಂಡು ದಿನಾಂಕ:07/05/2017 ರಂದು ಸಾಯಂಕಾಲ 6-00 ಗಂಟೆಯಲ್ಲಿ ಹೊಡೆದು ಸಾಯಿಸಿ ನೇಣು ಹಾಕಿಕೊಂಡಂತೆ ಕಲ್ಪಿಸಿರುತ್ತಾರೆ. ನಮಗೆ 9-00 ಗಂಟೆಗೆ ರಾತ್ರಿ ಪೋನಿನಲ್ಲಿ ತಿಳಿಸಿರುತ್ತಾರೆ. ನಾವು ಬಂದು ನೊಡುವುದಕ್ಕಿಂತ ಮುಂಚಿತವಾಗಿಯೇ ಆಸ್ಪತ್ರೆಗೆ ಸಾಗಿಸಿರುತ್ತಾರೆ. ಶವ ನೋಡಲಾಗಿ ಆಕೆಯ ಹಲ್ಲು ಉದುರಿದಂತೆ ಕಾಣುತ್ತದೆ. ಆದ್ದರಿಂದ ನನ್ನ ಮಗಳ ಸಾವಿಗೆ ಕಾರಣರಾದ ಮೇಲ್ಕಂಡ ಮೂರು ಜನರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 64/2017 ಕಲಂ 279, 304(ಎ)  ಐಪಿಸಿ

ದಿನಾಂಕ:08/05/2017 ರಂದು ಬೆಳಗ್ಗೆ 10-15 ಗಂಟೆಗೆ ಈ ಕೇಸಿನ ಪಿರ್ಯಾದಿ ಶಂಕರ್ ಕುಮಾರ್  ಬಿನ್ ರಾಮಯ್ಯ, 43ವರ್ಷ, ಶಿಳ್ಳೆಕ್ಯಾತ ಜನಾಂಗ, ಕೂಲಿಕೆಲಸ, ಪೆದ್ದಿಹಳ್ಳಿ, ಕಸಬಾ ಹೋ, ತಿಪಟೂರು ತಾ. ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ದಿನಾಂಕ:08/05/2017 ರಂದು ಬೆಳಗ್ಗೆ 8-30 ಗಂಟೆ ಸಮಯದಲ್ಲಿ ಕರಡಿ ಕೋಡಿಯ ಹೋಟಲಿನಲ್ಲಿ ನಾನು, ನನ್ನ ಬಾಮೈದ ಸುರೇಶ, ಮಂಜುನಾಥ ತಿಂಡಿ ತಿಂದು ಪೆದ್ದಿಹಳ್ಳಿಗೆ ಹೊರಡಲು ನಾನು ಮತ್ತು ಮಂಜುನಾಥ ಒಂದು ಬೈಕಿನಲ್ಲಿ ಹಾಗೂ ಸುರೇಶನು ಕೆ.ಎ44-ಎಸ್-6763 ನೇ ಬೈಕಿನಲ್ಲಿ ಕರಡಿ ಕೋಡಿಯಿಂದ ಎನ್.ಹೆಚ್.206 ರಸ್ತೆಯಲ್ಲಿ ಹೋಗುತ್ತಿರುವಾಗ ನಮ್ಮ ಮುಂದೆ ಸುರೇಶನು ರಸ್ತೆಯ ಎಡಬದಿಯಲ್ಲಿ ಹೋಗುತ್ತಿರುವಾಗ ತಿಪಟೂರು ಕಡೆಯಿಂದ ಒಂದು ಕಾರು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಬಂದು  ಮುಂದೆ ಹೋಗುತ್ತಿದ್ದ ಸುರೇಶರವರ ಬೈಕಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಬೈಕು ಸಂಪೂರ್ಣ ಜಖಂ ಆಗಿ ಸುರೇಶನಿಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ. ಈ ಅಪಘಾತಪಡಿಸಿದ ಕಾರಿನ ನಂಬರ್ ನೋಡಲಾಗಿ ಕೆ.ಎ02-ಎ.ಇ.-7398 ಆಗಿದೆ. ಈ ಅಪಘಾತಕ್ಕೆ ಕಾರಣನಾದ ಕಾರಿನ ಚಾಲಕ ವಿನೋದ್ ಕುಮಾರ್ ರವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲು ಕೋರಿದೆ. ಸುರೇಶನ ಶವವು ಸರ್ಕಾರಿ ಆಸ್ಪತ್ರೆ ತಿಪಟೂರಿನ ಶವಾಗಾರದಲ್ಲಿರುತ್ತದೆ. ಮುಂದಿನ ಕ್ರಮಕ್ಕಾಗಿ ಕೋರಿದೆ ಎಂತ ಇತ್ಯಾದಿ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 68 guests online
Content View Hits : 274879