lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< May 2017 >
Mo Tu We Th Fr Sa Su
1 2 3 4 6 7
8 9 10 11 12 13 14
15 16 17 18 19 20 21
22 23 24 25 26 27 28
29 30 31        
Friday, 05 May 2017
Crime Incidents 05-05-17

ಸಂಚಾರಿ ಪೊಲೀಸ್ ಠಾಣಾ ಮೊ.ನಂ: 81/2017 ಕಲಂ 279,304() ಐಪಿಸಿ & 134(&ಬಿ) 187 ಐಎಂವಿ ಆಕ್ಟ್.

ದಿನಾಂಕ 04.01.2017 ರಂದು  ಬೆಳಿಗ್ಗೆ 9-30  ಗಂಟೆಗೆ  ಪಿರ್ಯಾದಿ  ಕಾಂತರಾಜು ಬಿನ್ ಲಿಂಗಪ್ಪ, 45ವರ್ಷ, ಹಾರೋನಹಳ್ಳಿ, ತುಮಕೂರು  ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ 03-05-2017 ರಂದು   ರಾತ್ರಿ 8-20 ಗಂಟೆಯಲ್ಲಿ ತುಮಕೂರು ಎಸ್ ಐ ಟಿ ಮುಖ್ಯ ರಸ್ತೆಯ ಅಪೋಲೋ ಮೆಡಿಕಲ್   ಮುಂಭಾಗ  KA-06-EW-9938 ನೇ  ಬೈಕ್ ಸವಾರ ಬೈಕನ್ನು  ಅತೀ ವೇಗ  ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಎಸ್ಐಟಿ ಮುಖ್ಯ ರಸ್ತೆ    ದಾಟುತ್ತಿದ್ದ   ಪಿರ್ಯಾದಿ ಅಣ್ಣ ಶಿವರುದ್ರಪ್ಪ ಬಿನ್ ಲಿಂಗಪ್ಪ, 60ವರ್ಷ, ನೀವೃತ್ತ ಹೆಚ್.ಎಂ.ಟಿ. ನೌಕರ, ಸಿದ್ದರಾಮೆಶ್ವರ ಬಡಾವಣೆ, ತುಮಕೂರು ರವರಿಗೆ    ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದರಿಂದ   ತಲೆಗೆ ಹಾಗೂ ಮೈ ಕೈ ಗೆ  ತೀವ್ರವಾಗಿ ಪೆಟ್ಟುಗಳಾಗಿ,     ಬೆಂಗಳೂರಿನ  ಎಂ ಎಸ್ ರಾಮಯ್ಯ  ಆಸ್ವತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ  ಚಿಕಿತ್ಸೆ ಕೊಡಿಸುತ್ತಿರುವಾಗ     ದಿನಾಂಕ 04-05-2017 ರಂದು ಬೆಳಗಿನ ಜಾವ  5-30 ಗಂಟೆ ಸಮಯದಲ್ಲಿ    ಚಿಕಿತ್ಸೆಯಿಂದ ಗುಣಮುಖವಾಗದೆ  ಎಂ.ಎಸ್ ಆರಾಮಯ್ಯ ಅಸ್ವತ್ರೆಯಲ್ಲಿ ಮೃತಪಟ್ಟಿರುತ್ತಾರೆಂತ ಪಿರ್ಯಾದು.

ಸಂಚಾರಿ ಪೊಲೀಸ್ ಠಾಣಾ ಮೊ.ನಂ: 84/2017 ಕಲಂ 279,304() ಐಪಿಸಿ

ದಿನಾಂಕ 04.01.2017 ರಂದು  ಸಂಜೆ 5-45  ಗಂಟೆಗೆ  ಪಿರ್ಯಾದಿ  ಯತೀಶಾರಾಧ್ಯ ಬಿನ್ ಲೇ.ಶಿವಪ್ಪ, 49ವರ್ಷ, ಲಿಂಗಾಯಿತರು, ಕುವೆಂಪುನಗರ, ತುಮಕೂರು ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ 04-05-2017 ರಂದು ಸಾಯಂಕಾಲ 4-45 ಗಂಟೆಯಲ್ಲಿ ತುಮಕೂರು  ಯೂನಿರ್ವಸಿಟಿ   ಮುಂಭಾಗ   ಎನ್.ಹೆಚ್.206 ರಸ್ತೆಯಲ್ಲಿ  ಕೆಎ.52.ಎ.1176 ನೇ ಬಸ್ಸಿನ ಚಾಲಕ ಬಸ್ಸನ್ನು ಅತೀವೇಗ  ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿ ಪತ್ನಿ ಕಲಾವತಿ ಕೋಂ ಯತೀಶಾರಾಧ್ಯ, 38ವರ್ಷ, ಕುವೆಂಪುನಗರ, ತುಮಕೂರು   ಇವರು ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಕೆಎ.06.ಇಆರ್.1286 ನೇ ಸ್ಕೂಟಿಗೆ   ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದರಿಂದ   ತಲೆಗೆ ಹಾಗೂ ಮೈ ಕೈ ಗೆ  ತೀವ್ರವಾಗಿ ಪೆಟ್ಟುಗಳಾಗಿ,   ವಿನಾಯಕ  ಆಸ್ವತ್ರೆಗೆ ಕರೆದುಕೊಂಡು ಬಂದು  ಚಿಕಿತ್ಸೆ ಕೊಡಿಸುತ್ತಿರುವಾಗ ಸಾಯಂಕಾಲ 4-55 ಗಂಟೆ ಸಮಯದಲ್ಲಿ    ಚಿಕಿತ್ಸೆಯಿಂದ ಗುಣಮುಖವಾಗದೆ  ಮೃತಪಟ್ಟಿರುತ್ತಾರೆಂತ ಪಿರ್ಯಾದು.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ; 88/2017 ಕಲಂ; 379 ಐಪಿಸಿ ಮತ್ತು ಕಲಂ  4(1), 4(1ಎ), 21(1) ಎಂ.ಎಂ.ಆರ್‌.ಡಿ ಆಕ್ಟ್‌-1957 ಮತ್ತು ಕಲಂ 44(1), ಕೆ.ಎಂ.ಎಂ.ಸಿ.ಆರ್‌ ಆಕ್ಟ್‌-1994.

ದಿನಾಂಕ:04-05-2017 ರಂದು ಬೆಳಿಗ್ಗೆ 7-40 ಗಂಟೆಗೆ ಹುಲಿಯೂರುದುರ್ಗ ಪೊಲೀಸ್‌ ಠಾಣಾ ಪಿಎಸ್‌ಐ ರವರಾದ  ಶ್ರೀ ಎಂ.ಎಸ್.ಅನಿಲ್‌ಕುಮಾರ್‌ ರವರು ಠಾಣಾ ಸಿಬ್ಬಂದಿಯಾದ ರಂಗಸ್ವಾಮಿ ಪಿಸಿ-426 ರವರ ಮುಖೇನ ಕಳುಹಿಸಿಕೊಟ್ಟ ದೂರಿನ ಅಂಶವೇನೆಂದರೆ, ದಿನಾಂಕ:04-05-2017 ರಂದು ಬೆಳಿಗ್ಗೆ 5-20 ಗಂಟೆ ಸಮಯದಲ್ಲಿ ನನಗೆ ಬಂದ ಮಾಹಿತಿ ಏನೆಂದರೆ ಮೋದೂರು  ಗ್ರಾಮದ ವಾಸಿಯಾದ ರಾಜಣ್ಣ ಉರುಫ್‌ ಛೆರ್ಮನ್‌ ರಾಜಣ್ಣ  ಎಂಬುವರು ಅಕ್ರಮವಾಗಿ ಹಣ ಸಂಪಾದನೆ ಮಾಡುವ ಸಲುವಾಗಿ ಸರ್ಕಾರದಿಂದ ಯಾವುದೇ ಪರವಾನಗಿಯನ್ನು ಪಡೆಯದೆ ಸರ್ಕಾರದ ನೈಸರ್ಗಿಕ ಖನಿಜ ಸಂಪತ್ತಾದ ಮರಳನ್ನು  ಕಳ್ಳತನದಿಂದ ತೆಗೆಸಿ ಟ್ರಾಕ್ಟರ್‌ ಟ್ರೈಲರ್‌ಗೆ ತುಂಬಿಸಿ ಮಾರಾಟ ಮಾಡಲು ಹೆಗ್ಗಡತಿಹಳ್ಳಿ-ಮೋದೂರು ರಸ್ತೆಯಲ್ಲಿ ಸಾಗಾಣೆ ಮಾಡುತ್ತಿದ್ದಾರೆಂದು ಮಾಹಿತಿ ಬಂದಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸುವ ಸಲುವಾಗಿ ಠಾಣಾ ಸಿಬ್ಬಂದಿಯವರಾದ ರಂಗಸ್ವಾಮಿ ಪಿಸಿ-426, ಶರತ್‌ ಪಿಸಿ-479 ರವರೊಂದಿಗೆ  ಇಲಾಖಾ ಜೀಪ್‌ನಲ್ಲಿ ಬೆಳಿಗ್ಗೆ 5-30  ಗಂಟೆಗೆ ಠಾಣೆಯನ್ನು ಬಿಟ್ಟು ಸಂತೇಮಾವತ್ತೂರು ಗ್ರಾಮದ ಹತ್ತಿರ ಹೆಗ್ಗಡತಿಹಳ್ಳಿ ಕ್ರಾಸ್‌ನಲ್ಲಿ ಸ್ವಲ್ಪ ದೂರದಲ್ಲಿರುವ ಬಸವಣ್ಣನ ಗೋರಿಯ ಹತ್ತಿರ   ರಸ್ತೆಯಲ್ಲಿ ಬೆಳಿಗ್ಗೆ 6-05 ಗಂಟೆಯಲ್ಲಿ ಹೋಗುತ್ತಿದ್ದಾಗ  ಅದೇ ಸಮಯಕ್ಕೆ ಹೆಗ್ಗಡತಿಹಳ್ಳಿ-ಮೋದೂರು ರಸ್ತೆಯಲ್ಲಿ  ಮೋದೂರು ರಾಜಣ್ಣನು  ಟ್ರಾಕ್ಟರ್‌ಟ್ರೈಲರ್‌ನಲ್ಲಿ ಮರಳನ್ನು ತುಂಬಿಕೊಂಡು ಟ್ರಾಕ್ಟರ್‌ ಚಾಲನೆ ಮಾಡಿಕೊಂಡು  ಬರುತ್ತಿದ್ದು,  ರಸ್ತೆಯಲ್ಲಿ ಪೊಲೀಸ್ ಜೀಪ್‌ ನೋಡಿ ಟ್ರಾಕ್ಟರ್‌ ಚಾಲಕ ಮೋದೂರು ರಾಜಣ್ಣ ಮರಳು ತುಂಬಿದ ಟ್ರಾಕ್ಟರ್‌,ಟ್ರೈಲರ್‌ನ್ನು ರಸ್ತೆಯಲ್ಲಿಯೇ ನಿಲ್ಲಿಸಿ ಟ್ರಾಕ್ಟರ್‌ನಿಂದ ಇಳಿದು ಓಡಿ ಹೋಗಿದ್ದು ಆತನನ್ನು ಹಿಡಿಯಲು ನಮ್ಮ ಸಿಬ್ಬಂದಿಯವರು ಪ್ರಯತ್ನ ಪಟ್ಟರು ಆತನು ಸಿಕ್ಕಿರುವುದಿಲ್ಲ. ನಂತರ ಮರಳು ತುಂಬಿದ ಟ್ರಾಕ್ಟರ್‌ ಮತ್ತು ಟ್ರೈಲರ್‌ನ್ನು ಪರಿಶೀಲನೆ ಮಾಡಲಾಗಿ ಟ್ರಾಕ್ಟರ್‌ಗೆ ಮತ್ತು ಟ್ರೈಲರ್‌ಗೆ ನೋಂದಣಿ ನಂಬರ್‌ ಇರುವುದಿಲ್ಲ. ಟ್ರಾಕ್ಟರ್‌ TAFE MASSEY FERGUSON 1035 DI  ಕಂಪನಿಯದಾಗಿರುತ್ತೆ.   ಟ್ರಾಕ್ಟರ್‌ ಇಂಜಿನ್‌ ನಂಬರ್‌ S337 21626,  ಚಾರ್ಸಿ ನಂಬರ್‌ 353265 KFZV  ಆಗಿರುತ್ತೆ.  ಟ್ರಾಕ್ಟರ್‌ಟ್ರೈಲರ್‌ನಲ್ಲಿ  ಬಾಡಿ ಮಟ್ಟಕ್ಕೆ ಮರಳನ್ನು ತುಂಬಿರುತ್ತೆ. ಆರೋಪಿಗಳಾದ ರಾಜಣ್ಣ ಉರುಫ್‌ ಛೆರ್ಮನ್‌ ರಾಜಣ್ಣ  ಮತ್ತು ಟ್ರಾಕ್ಟರ್‌ಟ್ರೈಲರ್‌ ಮಾಲೀಕರು ಸೇರಿಕೊಂಡು ಅಕ್ರಮವಾಗಿ ಹಣ ಸಂಪಾದನೆ ಮಾಡುವ ಸಲುವಾಗಿ ಸರ್ಕಾರದಿಂದ ಯಾವುದೇ ಪರವಾನಗಿಯನ್ನು ಪಡೆಯದೆ ಸರ್ಕಾರದ ನೈಸರ್ಗಿಕ ಖನಿಜ ಸಂಪತ್ತಾದ ಮರಳನ್ನು  ಕಳ್ಳತನದಿಂದ ತೆಗೆಸಿ ಟ್ರಾಕ್ಟರ್‌ ಟ್ರೈಲರ್‌ಗೆ ತುಂಬಿಕೊಂಡು  ಮಾರಾಟ ಮಾಡಲು ಸಾಗಾಣೆಯಲ್ಲಿ  ತೊಡಗಿರುತ್ತಾರೆ. ಆದ್ದರಿಂದ ರಾಜಣ್ಣ ಉರುಫ್‌ ಛೆರ್ಮನ್‌ ರಾಜಣ್ಣ ಮೋದೂರು ಗ್ರಾಮ ಮತ್ತು ಟ್ರಾಕ್ಟರ್‌ಟ್ರೈಲರ್‌ ಮಾಲೀಕರ ಮೇಲೆ ಕಲಂ 379 ಐಪಿಸಿ ಮತ್ತು ಕಲಂ  4(1), 4(1ಎ), 21(1) ಎಂ.ಎಂ.ಆರ್‌.ಡಿ ಆಕ್ಟ್‌-1957 ಮತ್ತು ಕಲಂ 44(1), ಕೆ.ಎಂ.ಎಂ.ಸಿ.ಆರ್‌ ಆಕ್ಟ್‌-1994 ರೀತ್ಯ ಪ್ರಕರಣ ದಾಖಲಿಸುವಂತೆ ಇತ್ಯಾದಿ ದೂರಿನ ಅಂಶವಾಗಿರುತ್ತೆ.

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ- 50/2017   ಕಲಂ: 136  ಇಂಡಿಯನ್ ಎಲೆಕ್ಟ್ರಿಸಿಟಿ ಆಕ್ಟ್-2003 RW 379 IPC

ದಿನಾಂಕ:04/05/2017 ರಂದು ಮದ್ಯಾಹ್ನ 3:00 ಗಂಟೆಗೆ ಪಿರ್ಯಾದಿ ರಾಮಲಿಂಗಪ್ಪ  ಸಹಾಯಕ ಇಂಜಿನಿಯರ್ ಬೆಂ.ವಿ.ಕಂ ವೈ.ಎನ್ ಹೊಸಕೋಟೆ ರವರು ನೀಡಿದ ದೂರಿನ ಅಂಶವೇನೆಂದರೆ   ನಮ್ಮ ಶಾಖಾ ವ್ಯಾಪ್ತಿಯ ವೈ.ಎನ್ ಹೊಸಕೋಟೆ ಗ್ರಾಮದಲ್ಲಿರುವ ಬೆಟ್ಟದ ದಕ್ಷಿಣ ದಿಕ್ಕಿನಲ್ಲಿ ಬೆಟ್ಟದ ಬುಡದಿಂದ ಬೆಟ್ಟದ ತುದಿಯಲ್ಲಿರುವ ಶ್ರೀ ಚೆನ್ನಕೇಶವ ದೇವಸ್ಥಾನವರೆವಿಗೆ ಈಗ್ಗೆ ಸುಮಾರು 30 ವರ್ಷಗಳ ಹಿಂದೆ ವಿದ್ಯುತ್ ಸಂಪರ್ಕ ಕಲ್ಪಿಸಲು 16 ಕಬ್ಬಿಣದ ಕಂಬಗಳನ್ನು ಅಳವಡಿಸಿ ಅವುಗಳಿಗೆ ವಿದ್ಯುತ್ ದೀಪಗಳನ್ನು ಅಳವಡಿಸಿದ್ದರಂತೆ. ದಿ:02/05/2017 ರಂದು ವೈ.ಎನ್ ಹೊಸಕೋಟೆ ಗ್ರಾಮ ಪಂಚಾಯ್ತಿಯವರು ಬೆಸ್ಕಾಂ ಶಾಖೆಗೆ ಬಂದು ಬೆಟ್ಟದ  ಬುಡದಿಂದ ಬೆಟ್ಟಕ್ಕೆ ಎಳೆದಿದ್ದ ಅಲ್ಯೂಮೀನಿಯಂ ವೈರ್ ಸುಮಾರು 2900 ಮೀಟರ್, ಬೆಲೆ ಸುಮಾರು 24.000=00 ರೂಗಳಾಗ ಬಹುದಾಗಿರುತ್ತದೆ ವೈರ್ ನ್ನು ಯಾರೋ ಯಾವಗಲೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ತಿಳಿಸಿದರು.  ಈ ವಿಚಾರ  ನಮ್ಮ ಮೇಲಾಧಿಕಾರಿಗಳಿಗೆ ತಿಳಿಸಿ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ಅಲ್ಯೂಮಿನಿಯಂ ವಿದ್ಯುತ್ ವೈರ್ ಅನ್ನು  ಮತ್ತು ಕಳ್ಳತನ ಮಾಡಿರುವವರನ್ನು  ಪತ್ತೆ ಮಾಡಿಕೊಡಬೇಕೆಂತ ಇತ್ಯಾದಿಯಾಗಿ ನೀಡಿದ ಲಿಖಿತ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತದೆ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ.  59/2017 ಕಲಂ 279 ಐಪಿಸಿ

ದಿನಾಂಕ:03/05/2017 ರಂದು ಮದ್ಯಾಹ್ನ 3-30 ಗಂಟೆಗೆ  ಜೆ.ಸಿ. ಅಶೋಕ್, ಸಹಾಯಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಉಪವಿಭಾಗ, ತುಮಕೂರು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ರಾ.ಹೆ. 206 ರ 67 ನೇ ಕಿ.ಮೀ. ನಲ್ಲಿ ದಿನಾಂಕ:03/05/2017 ರಂದು ಸ್ಥಳ ಪರಿಶೀಲನೆ ಸಮಯದಲ್ಲಿ ವಿಚಾರ ತಿಳಿಯಲಾಗಿ ದಿನಾಂಕ:-02/05/2017 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಲಾರಿ ಸಂಖ್ಯೆ ಎಪಿ02-ಟಿಎ-4699 ನೇ ಲಾರಿ ಚಾಲಕನು ಅಜಾಗರೂಕತೆ ಮತ್ತು ಅತಿವೇಗದಿಂದ ಚಾಲನೆ ಮಾಡಿಕೊಂಡು ಬಂದು ರಾ.ಹೆ. 206 ಕ್ಕೆ  ಸರ 67 ನೇ ಕಿ.ಮೀ ಎಡಭಾಗದ ಸೇತುವೆ (ಪ್ಯಾರಾಪೆಟ್) ಮತ್ತು ಕ್ರಾಶ್ ಬ್ಯಾರಿಯರ್ (ತಡೆಗೋಡೆ) ಗಳನ್ನ ಗುದ್ದಿ ಅಂದಾಜು 100 ಮೀ.ಗಳಷ್ಟು ಹಾಳಾಗಿದ್ದು, ಈ ವಸ್ತುಗಳ ಅಂದಾಜು ಸುಮಾರು 4.0 ಲಕ್ಷ ಗಳಷ್ಟು ನಷ್ಟ ಉಂಟಾಗಿರುತ್ತೆ ಈ ಅಪಘಾತ ಪಡಿಸಿದ ಲಾರಿಯ ಹಿಂದಿನ ಎರಡು ಆಕ್ಸಲ್ ತುಂಡಾಗಿ ಲಾರಿಯು ಸಂಪೂರ್ಣ ಜಖಂ ಗೊಂಡಿರುತ್ತದೆ. ಲಾರಿ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಿ ಇತ್ಯಾದಿ


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 68 guests online
Content View Hits : 274877