lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< May 2017 >
Mo Tu We Th Fr Sa Su
1 2 4 5 6 7
8 9 10 11 12 13 14
15 16 17 18 19 20 21
22 23 24 25 26 27 28
29 30 31        
Wednesday, 03 May 2017
Crime Incidents 03-05-17

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 72/2017 ಕಲಂ 143,147,148,323,324,504,506,ರೆ/ವಿ 149 ಐಪಿಸಿ

ದಿನಾಂಕ-02/05/2017 ರಂದು ರಾತ್ರಿ 8-00 ಗಂಟೆಗೆ ಪಿರ್ಯಾದಿಯಾದ ಸತೀಶ್ ಬಿನ್ ಮಹದೇವಯ್ಯ, 46 ವರ್ಷ, ಲಿಗಾಯಿತರು, ಜಿರಾಯ್ತಿ, ಹೊನಸಿಗೆರೆ, ಹೆಬ್ಬೂರು ಹೋಬಳಿ, ತುಮಕೂರು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನಮಗೂ ನಮ್ಮ ಗ್ರಾಮದ ಗುರುಲಿಂಗಯ್ಯ ಮತ್ತು ಆತನ ಮಕ್ಕಳಿಗೂ ಜಮೀನು ವಿಚಾರವಾಗಿ ಸುಮಾರು 5 ವರ್ಷಗಳಿಂದ ಸಣ್ಣಪುಟ್ಟ ಗಲಾಟೆಗಳು ನೆಡೆಯುತ್ತಿದ್ದು, ದಿನಾಂಕ-02/05/2017 ರಂದು ಸಂಜೆ ಸುಮಾರು 5-00 ಗಂಟೆಯಲ್ಲಿ ನನ್ನ ಪತ್ನಿಯಾದ ಸಿದ್ದಗಂಗಮ್ಮ ಮನೆಯ ಬಳಿ ಎಮ್ಮೆಯಲ್ಲಿ ಹಾಲು ಕರೆಯುತ್ತಿದ್ದಾಗ ಎಮ್ಮೆಯ ಕರು ಗುರುಲಿಂಗಯ್ಯರವರ ಜಮೀನಗೆ ಹೋದ ವಿಚಾರದಲ್ಲಿ ಜಗಳ ತೆಗೆದು ಸತೀಶ ಎಂಬುವನು ನನ್ನ ಹೆಂಡತಿಯನ್ನು ಅವ್ಯಾಚ್ಯಶಬ್ದಗಳಿಂದ ಬಾಯಿಗೆ ಬಂದಂತೆ ಬೈಯುತ್ತಿದ್ದ ಆಗ ನಾನು ಮತ್ತು ಮಹದೇವಯ್ಯ ಏಕೆ ಹೀಗೆ ಬೈಯುತ್ತೀರಾ ಎಂದು ಕೇಳೀದಕ್ಕೆ ಭೋಜರಾಜ, ನಂಜುಂಡಪ್ಪ, ಶಿವಕುಮಾರ , ಚಿಕ್ಕಣ್ಣಯ್ಯ, ಗುರುಲಿಂಗಯ್ಯ ಎಲ್ಲರೂ ಏಕಾ ಏಕಾ ಮನೆಯ ಹತ್ತಿರ ಬಂದು ಅವರು ತಂದಿದ್ದ ದೊಣ್ಣೆ ಮತ್ತು ಇಟ್ಟಿಗೆಯಿಂದ ಜಯಶಂಕನಿಗೆ ಶಿವು ಮತ್ತು ಭೋಜ ಎಂಬುವವರು ತಲೆಗೆ ಹೊಡೆದು ರಕ್ತಗಾಯ ಪಡಿಸಿದರು, ಗುರುಲಿಂಗಯ್ಯ ಮತ್ತು ಚಿಕ್ಕಣ್ಣಯ್ಯ ನನ್ನ ತೆಲೆಗೆ, ಬಲಗಾಲಿಗೆ, ಬಲಕೈಗೆ ಹೊಡೆದು ರಕ್ತಗಾಯ ಪಡಿಸಿದರು, ನಂತರ ಬೋಜರಾಜನು ದೊಣ್ಣೆಯಿಂದ ನನಗೆ ಮತ್ತು ಜಯಶಂಕರನಿಗೆ ಮತ್ತು ಮಹದೇವಯ್ಯನಿಗೆ ಬಲಗೈಗೆ ಹೊಡೆದು ರಕ್ತಗಾಯ ಉಂಟುಮಾಡಿರುತ್ತಾನೆ, ಅದೇ ಸಮಯಕ್ಕೆ ನಮ್ಮ ಗ್ರಾಮದ ರುದ್ರಪ್ಪ ಮತ್ತು ಶಿವಕುಮಾರಯ್ಯ ಬಂದು ಜಗಳ ಬಿಡಿಸಿ ಯಾವುದೋ ವಾಹನದಲ್ಲಿ ನಮ್ಮಗಳನ್ನು ಆಸ್ಪತ್ರೆಗೆ ಕಳುಹಿಸಿತ್ತಿರುವಾಗ್ಗೆ ಆಸಮಯದಲ್ಲಿ ಆರೋಪಿಗಳಲ್ಲೆರೂ ನಿಮ್ಮಗಳನ್ನು  ಒಂದಲ್ಲ ಒಂದು ದಿನ ಕೊಲೆ ಮಾಡಿ ಸಾಯಿಸದೇ ಬಿಡುವುದಿಲ್ಲ ಎಂದು ಕೂಗಿಕೊಂಡು ಅವರ ಕೈಯಲ್ಲಿದ್ದ ದೊಣ್ಣೆ ಮತ್ತು ಇಟ್ಟಿಗೆಗಳನ್ನು ಅಲ್ಲಿಯೇ ಬಿಸಾಡಿ ಹೋದರು, ನಾನು ಹೆಬ್ಬೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಠಾಣೆಗೆ ಬಂದು ನಮ್ಮಗಳ ಮೇಲೆ ಗಲಾಟೆ ಮಾಡಿ, ನೋವುಂಟು ಮಾಡಿದ, ಬೈದು ಬೆದರಿಕೆ ಹಾಕಿದ ಮೇಲ್ಕಂಡ ಆಸಾಮಿಗಳ ಮೇಲೆ ಕಾನೂನು ರಿತ್ಯಾ ಕ್ರಮ ಜರೂಗಿಸಿಬೇಕೆಂಧು ಕೋರಿಕೊಳ್ಳುತ್ತೇನೆ, ಜಯಶಂಕರ್ ಮತ್ತು ಮಹದೇವಪ್ಪ ತುಮಕೂರು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿರುತ್ತಾರೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.45/2017, ಕಲಂ: 279, 337 ಐ.ಪಿ.ಸಿ.

ದಿನಾಂಕ:02/05/2017 ರಂದು ಮದ್ಯಾಹ್ನ 12:30 ಗಂಟೆಗೆ ಪಿರ್ಯಾದಿ ಓಬಳಯ್ಯ ಬಿನ್ ಓಬಯ್ಯ, 68 ವರ್ಷ, ನಾಯಕ ಜನಾಂಗ, ಅವರಗಲ್ಲು ಗ್ರಾಮ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ಪಾವಗಡ ತಾಲೋಕು ನಿಡಗಲ್ಲು ಹೋಬಳಿ, ಶೈಲಾಪುರ ಗ್ರಾಮದ ನಮ್ಮ ಸಂಬಂಧಿ ಎಸ್.ಎಸ್.ಮಂಜುನಾಥ ಬಿನ್ ಲೇ||ಸಣ್ಣಲಿಂಗಪ್ಪ, 32 ವರ್ಷ ರವರು ಈಗ್ಗೆ ಒಂದು ವಾರದ ಹಿಂದೆ(ಘಟನೆ ನಡೆದ ದಿನಕ್ಕೆ) ನಮ್ಮ ಮನೆಗೆ ಬಂದಿದ್ದು ದಿನಾಂಕ:29/04/2017 ರಂದು ನಮ್ಮ ಜಮೀನಿನ ಹತ್ತಿರ ಹೋಗಿ ರಾತ್ರಿ ಸುಮಾರು 07:30 ಗಂಟೆಯ ಸಮಯದಲ್ಲಿ ವಾಪಸ್ಸ್ ಮನೆಗೆ ಬರಲು ನಮ್ಮ ಗ್ರಾಮದ ಸ್ಕೂಲ್ ಹತ್ತಿರ ಊರಿನೊಳಗೆ ಬರುವಾಗ ಮಧುಗಿರಿ ಕಡೆಯಿಂದ ಬಂದಂತಹ ಕೆಎ-53-ಇ.ಕೆ-8807 ನೇ ದ್ವಿ ಚಕ್ರ ವಾಹನ ಚಾಲಕ ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಜಾಗರುಕತೆಯಿಂದ ಓಡಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ಎಸ್.ಎಸ್.ಮಂಜುನಾಥನಿಗೆ ಹಿಂಬದಿಯಿಂದ ಡಿಕ್ಕಿ ಹೊಡೆಸಿ ಅಪಘಾತ ಉಂಟುಮಾಡಿದ್ದರಿಂದ ಮಂಜುನಾಥನ ಎರಡು ಕಾಲುಗಳಿಗೆ ಪೆಟ್ಟು ಬಿದ್ದು ಮುರಿದು ಹೋಗಿ ರಕ್ತಗಾಯವಾಗಿದ್ದು ಹಾಗೂ ಬಲಗಡೆ ರೊಂಡಿಗೆ ತರಚಿದ ಗಾಯವಾಗಿರುತ್ತೆ. ಅಷ್ಟರಲ್ಲಿ ಅಲ್ಲಿಯೇ ಇದ್ದ ನಾನು ಮತ್ತು ಈರಣ್ಣಗೌಡ ಇಬ್ಬರು ಮಂಜುನಾಥನನ್ನು ಉಪಚರಿಸಿ ನಂತರ ಆಂಬುಲೆನ್ಸ್ ನಲ್ಲಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ತುಮಕೂರಿನ ಆದಿತ್ಯ ಕೀಲು ಮತ್ತು ಮೂಳೆ ಆಸ್ಪತ್ರೆಗೆ ದಾಖಲು ಮಾಡಿ ಸದರಿ ಮಂಜುನಾಥನ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದರಿಂದ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ಈ ಅಪಘಾತಕ್ಕೆ ಕಾರಣನಾದ ದ್ವಿ ಚಕ್ರ ವಾಹನದ ಸವಾರನ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕೆಂದು ಇತ್ಯಾದಿ ದೂರಿನ ಅಂಶವಾಗಿರುತ್ತೆ.

ಪಾವಗಡ ಪೊಲೀಸ್ ಠಾಣಾ ಮೊ,ನಂ 91/2017 ಕಲಂ 279,304(ಎ) ಐ,ಪಿ,ಸಿ

ದಿನಾಂಕ:02/05/2017 ರಂದು ಬೆಳಿಗ್ಗೆ 7-30 ಗಂಟೆಗೆ ಪಿರ್ಯಾದುದಾರರಾದ ಪಾವಗಡ ತಾಲ್ಲೂಕ್, ಕೊಡಮಡುಗು ಗ್ರಾಮದ ವಾಸಿಯಾದ ಚಾಂಪ್ಲಾನಾಯ್ಕ ಬಿನ್ ಲೇಟ್, ಭೀಮಾನಾಯ್ಕರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನನ್ನ ಮಗನಾದ 39 ವರ್ಷ ವಯಸ್ಸಿನ ಕೃಷ್ಣಾನಾಯ್ಕರವರು ಪಾವಗಡ ಟೌನ್ ನ ಎ,ಎನ್ ದೇವರಾಜುರವರ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಪ್ರತಿ ನಿತ್ಯ ನಮ್ಮ ಊರಿನಿಂದ ಪಾವಗಡಕ್ಕೆ ಹೋಗಿ ಬರುತ್ತಿದ್ದರು. ಪ್ರತಿನಿತ್ಯದಂತೆ ದಿ:01/05/2017 ರಂದು ಬೆಳಿಗ್ಗೆ ನಮ್ಮ ಊರಿನಿಂದ ಪಾವಗಡಕ್ಕೆ ಕೆಲಸಕ್ಕೆ ಹೋದರು. ಅದೇ ದಿನ ಸಂಜೆ 7-30 ಗಂಟೆಯಲ್ಲಿ ನಮ್ಮ ಗ್ರಾಮದ ನರಸಿಂಹಪ್ಪ ಬಿನ್ ನರಸಯ್ಯರವರು ನನಗೆ ಪೋನ್ ಮಾಡಿ ನಿನ್ನ ಮಗ ಕೃಷ್ಣಾನಾಯ್ಕನು ಪಾವಗಡದಿಂದ ನಮ್ಮ ಗ್ರಾಮದ ಅನಿಲ್ ರವರ ಆಟೋದಲ್ಲಿ ಬರುತ್ತಿದ್ದಾಗ ಸಂಜೆ 07-15 ಗಂಟೆಯಲ್ಲಿ ಕಡಮಲಕುಂಟೆ ಕೊಡಮಡುಗು ಮಧ್ಯೆ ಚೆನ್ನಪ್ಪರವರ ಜಮೀನಿನ ಬಳಿ ರಸ್ತೆಯ ಎಡಬದಿಯಲ್ಲಿ ಆಟೋ ಚಾಲಕನು ಆಟೋವನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಕೊಡಮಡುಗು ಕಡೆಯಿಂದ AP07-AH-2908  ನೇ ಟ್ರಾಕ್ಟರ್ ಚಾಲಕನು ಟ್ರಾಕ್ಟರನ್ನು ರಸ್ತೆಯಲ್ಲಿ ಅತಿವೇಗವಾಗಿ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಆಟೋಗೆ ಡಿಕ್ಕಿ ಹೊಡೆಸಿದ್ದರಿಂದ ಆಟೋದ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಕೃಷ್ಣಾನಾಯ್ಕನು ಆಟೋದಿಂದ ರಸ್ತೆಯ ಮೇಲೆ ಬಿದ್ದಿದ್ದು, ಚಾಲನೆಯಲ್ಲಿದ್ದ ಟ್ರಾಕ್ಟರ್ ನ ಹಿಂಭಾಗದ ಕಲ್ಟಿವೇಟರ್ ಕೃಷ್ಣಾನಾಯ್ಕನ ಬಲಗಾಲಿಗೆ ತಗುಲಿ ರಕ್ತಗಾಯವಾಗಿರುತ್ತೆ ಎಂತ ತಿಳಿಸಿದನು. ನಾನು ಕೂಡಲೇ ಅಪಘಾತ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಮಗನ ಕಾಲಿಗೆ ತುಂಬಾ ಪೆಟ್ಟು ಬಿದ್ದು, ನರಳಾಡುತ್ತಿದ್ದು, ಸ್ಥಳಕ್ಕೆ ಆಂಬ್ಯುಲೆನ್ಸ್ ನ್ನು ಕರೆಸಿಕೊಂಡು ಪಾವಗಡ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲು ಮಾಡಿದೆವು. ನಂತರ ವೈದ್ಯರ ಸಲಹೆಯಂತೆ ಬೆಂಗಳೂರಿನ ಸಂಜಯಗಾಂಧಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿರುವಾಗ ದಿನಾಂಕ:02/05/2017 ರಂದು ಮುಂಜಾನೆ 4-00 ಗಂಟೆ ಸಮಯದಲ್ಲಿ ಚಿಕತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆ. ನನ್ನ ಮಗನ ಶವವು ಸಂಜಯಗಾಂಧಿ ಆಸ್ಪತ್ರೆಯಲ್ಲಿರುತ್ತೆ. ಮೇಲ್ಕಂಡ ಅಪಘಾತ ಮಾಡಿ ನನ್ನ ಮಗನ ಸಾವಿಗೆ ಕಾರಣರಾದ AP07-AH-2908  ನೇ ಟ್ರಾಕ್ಟರ್ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 75 guests online
Content View Hits : 274884