lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >> ತುಮಕೂರು ಜಿಲ್ಲೆಯಲ್ಲಿ 2018 ನೇ ಮೇ ಮಾಹೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳ... >> ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< May 2017 >
Mo Tu We Th Fr Sa Su
1 3 4 5 6 7
8 9 10 11 12 13 14
15 16 17 18 19 20 21
22 23 24 25 26 27 28
29 30 31        
Tuesday, 02 May 2017
ಅಡಿಷನಲ್ ಎಸ್.ಪಿ. ಶ್ರೀ ಜಿ.ಬಿ.ಮಂಜುನಾಥ ರವರು ಬೀಳ್ಕೂಡುಗೆ ಸಮಾರಂಭ

ದಿನಾಂಕ 30/4/17 ರಂದು ಸಂಜೆ 6:00 ಗಂಟೆಗೆ  ನೆಡೆದ ಸಮಾರಂಭದಲ್ಲಿ ಅಡಿಷನಲ್ ಎಸ್.ಪಿ. ಶ್ರೀ ಜಿ.ಬಿ.ಮಂಜುನಾಥ ರವರು ನವೃತ್ತಿ ಆದ್ದರಿಂದ ಅವರಿಗೆ ಮಾನ್ಯ ಎಸ್.ಪಿ. ಶ್ರೀ ಬಿ.ಎಸ್.ಲೋಕೇಶ್ ಕುಮಾರ್, IPS ಹಾಗು ಚಿಕ್ಕಬಳ್ಳಾಪುರ ಎಸ್.ಪಿ. ಶ್ರೀ ಕಾರ್ತೀಕ್‌ ರೆಡ್ಡಿ IPS ಮತ್ತು ಜಿಲ್ಲೆಯ ಎಲ್ಲಾ ಅಧಿಕಾರಿ ವರ್ಗದವರಿಂದ ಸುಂದರ ಬೀಳ್ಕೂಡುಗೆ ಸಮಾರಂಭ

Crime Incidents 02-05-17

ಜಯನಗರ ಪೊಲೀಸ್ ಠಾಣಾ ಮೊ.ನಂ. 65/2017 ಕಲಂ 454, 457, 380 ಐಪಿಸಿ

ದಿನಾಂಕ: 01-05-2017 ರಂದು ಸಂಜೆ 4-45 ಗಂಟೆಯಲ್ಲಿ ವಿಶ್ವಣ್ಣ ಲೇಔಟ್‌, ಶಾಂತಿನಗರ ವಾಸಿ ರಾಜಕುಮಾರ ಎಂ.ಸಿ ಬಿನ್ ಚಿಕ್ಕಣ್ಣ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನನ್ನ ಸ್ವಂತ ಊರಿನಲ್ಲಿ ದೇವರ ಕಾರ್ಯವಿದ್ದುದ್ದರಿಂದ ದಿನಾಂಕ: 29-04-2017 ರಂದು ಮದ್ಯಾಹ್ನ ಸುಮಾರು 1-30 ಗಂಟೆಯಲ್ಲಿ ನನ್ನ ಕುಟುಂಬ ಸಮೇತ ಊರಿಗೆ ಹೋಗಿದ್ದು ದಿನಾಂಕ: 30-04-2017 ರಂದು ಬೆಳಿಗ್ಗೆ ಸುಮಾರು 8-45 ನಿಮಿಷದಲ್ಲಿ ನನ್ನ ವಾಸದ ಮನೆಯ ಮಾಲೀಕರ ಶ್ರೀಮತಿಯವರು ನಿಮ್ಮ ಮನೆಯಲ್ಲಿ ಕಳ್ಳತನವಾಗಿದೆಯೆಂದು ದೂರವಾಣಿ ಮೂಲಕ ತಿಳಿಸಿರುತ್ತಾರೆ.  ತಿಳಿದ ತಕ್ಷಣ ನನ್ನ ಕುಟುಂಬ ಸಮೇತ ಬಂದು ಮನೆಯ ಬಾಗಿಲನ್ನು ನೋಡಲಾಗಿ ಚಿಲಕದ ಸ್ಕ್ರೂ ಗಳನ್ನು ಬಿಚ್ಚಿ ಒಳಗೆ ಕಳ್ಳರು ಪ್ರವೇಶ ಮಾಡಿರುತ್ತಾರೆ.  ಮತ್ತು ಮಲಗುವ ಹಾಸಿಗೆಯ ಕೆಳಗಡೆ ಬೀರಿವಿನ ಕೀಯನ್ನು ನೋಡಲಾಗಿ ಕಳ್ಳರು ಬೀರುವಿನ ಕೀಯನ್ನು ತೆಗೆದುಕೊಂಡು ಬೀರುವಿನ ಬಾಗಿಲನ್ನು ತೆಗೆದು ಬೀರುವಿನಲ್ಲಿ ಮಡಗಿದ್ದ ಒಡವೆಗಳಾದ 1] ಸುಮಾರು 25 ಗ್ರಾಂ ನ ಬ್ರಾಸ್ ಚೈನ್‌ 2] ಸುಮಾರು 10 ಗ್ರಾಂ ನ ಬ್ರಾಸ್ ಚೈನ್‌ ಇವುಗಳು ಕಳ್ಳತನವಾಗಿರುವುದು ಕಂಡು ಬಂದಿರುತ್ತದೆ.  ಇವುಗಳ ಒಟ್ಟು ಮೌಲ್ಯ ಸುಮಾರು 24 ಸಾವಿರ ರೂ ಆಗಿರುತ್ತದೆ.  ಇದರ ಜೊತೆಯಲ್ಲಿ ಇನ್ನು ಕೆಲವು ಒಡವೆಗಳು ಕಳುವಾಗಿರುವ ಸಾಧ್ಯತೆಯಿರುತ್ತದೆ.  ಯಾವ ಒಡವೆಗಳು ಕಳುವು ಆಗಿರುತ್ತದೆ ಎಂಬುದನ್ನು ಪರಿಶೀಲಿಸಿಕೊಳ್ಳಬೇಕಾಗಿರುತ್ತದೆ.  ನಾನು ಕಳುವಾಗಿರುವ ವಿಷಯ ಬಗ್ಗೆ ನನ್ನ ಕುಟುಂಬದಲ್ಲಿ ಚರ್ಚಿಸಿ ಯಾವ ಒಡವೆಗಳು ಎಂಬುದನ್ನು ತಿಳಿದು ಈಗ ಬಂದು ಕಳುವಾಗಿರುವ ಬಗ್ಗೆ ದೂರನ್ನು ಸಲ್ಲಿಸಿಕೊಂಡಿದ್ದು, ಕಳುವಾಗಿರುವ ಬಗ್ಗೆ ಸೂಕ್ತ ಕ್ರಮಕೈಗೊಂಡು ಒಡವೆಗಳನ್ನು ಪತ್ತೆ ಮಾಡಿಕೊಡಬೇಕೆಂಧು ಕೋರಿ ನೀಡಿರುವ ಪಿರ್ಯಾದು ಅಂಶವಾಗಿರುತ್ತೆ.

ಜಯನಗರ ಪೊಲೀಸ್ ಠಾಣಾ ಮೊ.ನಂ. 66/2017 ಕಲಂ 420  ಐಪಿಸಿ

ದಿನಾಂಕ: 01-05-2017 ರಂದು ಸಂಜೆ 5-30 ಗಂಟೆಗೆ ತುಮಕೂರು ಟೌನ್‌, ಗೋಕುಲ ಬಡಾವಣೆ, 1 ನೇ ಮೇನ್, ಮಲ್ಲಿಗೆ ರಸ್ತೆ ರಲ್ಲಿ ವಾಸವಾಗಿರುವ ಶ್ರೀಮತಿ ಟಿ.ಎನ್ ಯಶೋಧ ಕೋಂ ಲೇಟ್‌ ಎಸ್‌. ನಾಗೇಂದ್ರಪ್ರಸಾದ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ,  ಅಮೀನಾ ಕೌಸರ್ @ ಮೀನಾ ಪ್ರಕಾಶ್‌ ಮತ್ತು ಅವರ ಮಗಳು ಸೋನು @ ಶರಣ್ಯ ಪ್ರಕಾಶ್‌ ರವರು ಗೋಕುಲ ಬಡಾವಣೆಯ 4 ನೇ ಕ್ರಾಸ್ ನಲ್ಲಿ ಹೆಚ್‌.ಎಮ್‌.ಟಿ ಗೋಪಾಲ್ ರವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದು ಗೋಕುಲದಲ್ಲಿಯೇ ಸ್ಪೂರ್ತಿ ಹರ್ಬಲ್‌ ಬ್ಯೂಟಿ ಪಾರ್ಲರ್‌ ಶಾಪ್ ನ್ನು ಸುಮಾರು 3-4 ವರ್ಷಗಳಿಂದ ಇಟ್ಟಿದ್ದು ಇವರು ಹ್ಯಾಂಡ್ ಲೋನ್ಸ್‌,  ಸಂಘಗಳು, ಫೈನಾನ್ಸ್, ಚಿಟ್ಸ್‌ಗಳಲ್ಲಿ ಹಣವನ್ನು ಪಡೆದು ಸದರಿಯವರುಗಳಿಗೆ ಕೊಡಬೇಕಾಗಿರುವ ಹಣವನ್ನು ವಾಪಾಸ್ ನೀಡಿರುವುದಿಲ್ಲ.  ಈಗ್ಗೆ ಸುಮಾರು 6 ತಿಂಗಳಿನಿಂದ ಈಚೆಗೆ ಅಮಿನಾ ಕೌಸರ್‌ ರವರು ವಾಸದ ಮನೆಯನ್ನು ಮುಚ್ಚಿರುತ್ತಾರೆ. ಮತ್ತು ಬ್ಯೂಟಿ ಪಾರ್ಲರ್‌ ಅನ್ನು ಸಹ ಮುಚ್ಚಿರುತ್ತಾರೆ.  ಮತ್ತು ಪೋನ್ ಕಾಲ್ ಅನ್ನು ಸಹ ಸಹಕರಿಸುತ್ತಿಲ್ಲ.  ಅಲ್ಲದೆ 6 ತಿಂಗಳ ಹಿಂದೆ ಬ್ಯೂಟಿ ಪಾರ್ಲ್‌ರ್ ಟ್ರೈನಿಂಗ್ ಕ್ಲಾಸ್ ಅನ್ನು ತುರುವೆಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ, ಕೊರಟಗೆರೆ ಕಡೆ ಸ್ಪೂರ್ತಿ ಟ್ರೈನಿಂಗ್ ರೂರಲ್ ಡೆವಲಪ್‌ಮೆಂಟ್‌ ಸೊಸೈಟಿ ನಡೆಸಿ ಸುಮಾರು 15 ಲಕ್ಷಕ್ಕಿಂತಲೂ ಹೆಚ್ಚು ವ್ಯವಹಾರ ನಡೆಸಿರುತ್ತಾರೆ.  ಅಲ್ಲದೆ ಅಮಿನ್ ಕೌಸರ್‌ ಗಂಡ ರಫಿಕ್ ರವರು ಕೆ.ಎಸ್‌.ಆರ್‌.ಟಿ.ಸಿ ಡಿಪೋ ದಲ್ಲಿ ಕೆಲಸ ಮಾಡುತ್ತಿದ್ದು, ಸಸ್ಪೆಂಡ್ ಆಗಿರುತ್ತಾರೆ.  ಅವರು ಇತ್ತೀಚೆಗೆ ದುಬೈ ಮತ್ತು ಕೆಲವು ರಾಜ್ಯಗಳಿಗೆ ಹೋಗಿದ್ದಾರೆ.  ಸದರಿಯವರು ತಲೆ ಮರೆಸಿಕೊಂಡು ದುಬೈ  ಅಥವಾ ಇತರೆ ಸ್ಥಳಗಳಿಗೆ ಹೋಗುವ  ಅನುಮಾನವಿದೆ  ಹಾಗೂ 10-12 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಮೋಸ ಮಾಡಿ ತಲೆಮರೆಸಿಕೊಂಡು ಸಕಲೇಶಪುರದ ಮಾಜಿ ಗಂಡ ಪ್ರಕಾಶ್‌ ರವರ ಊರಿಗೆ ಹೋಗಿ ನೆಲಸಿರುತ್ತಾರೆ.  ಆಗಾಗಿ ದಯವಿಟ್ಟು ಮೇಲ್ಕಂಡವರುಗಳು ಬಡವರ ಹತ್ತಿರ ಪೆಟ್ಟಿಶಾಪ್‌ ಮಾಲೀಕರ ಹತ್ತಿರ ಹಣ ಪಡೆದು ಮೋಸ ಮಾಡಿರುತ್ತಾರೆ.  ಆಗಾಗಿ ಸದರಿಯವರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಇತ್ಯಾದಿ ಅಂಶವಾಗಿರುತ್ತೆ.

ಕುಣಿಗಲ್ ಪೊಲೀಸ್ ಠಾಣಾ ಮೊ.ನಂ234/2017, ಕಲಂ; 279,,304(ಎ)  ಐಪಿಸಿ

ದಿನಾಂಕ;01/05/2017 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ಈ ಕೇಸಿನ ಪಿರ್ಯಾದಿ ಕುರುಡಿಹಳ್ಳಿ ಗ್ರಾಮದ ವಾಸಿಯಾದ ರವಿಕುಮಾರ್ ಕೆ ಟಿ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನಂಶವೇನೆಂದರೆ ದಿನಾಂಕ;01/05/2017 ರಂದು ಪಿರ್ಯಾದಿ ಮತ್ತು ಪಿರ್ಯಾದಿ ಸಂಬಂಧಿಯಾದ ಶ್ರೀನಿವಾಸ್ ಬಿನ್ ತಿಮ್ಮಪ್ಪ , 25ವರ್ಷ, ರಾಮನಪಾಳ್ಯ ವಾಸಿ ಇಬ್ಬರು ದೇವರ ಕಾರ್ಯಕ್ಕೆಂದು ವಡ್ಡರಕುಪ್ಪೆ ಗೇಟ್ ಗೆ ಹೋಗಿದ್ದು, ನಂತರ ವಾಪಸ್ ಕುರುಡಿಹಳ್ಳಿ ಗ್ರಾಮಕ್ಕೆ ಬರಲೆಂದು ಕುರುಡಿಹಳ್ಳಿ ಗ್ರಾಮದ ವಿಶ್ವರವರ ಮನೆಯ ಮುಂಭಾಗ ತುಮಕೂರು-ಕುಣಿಗಲ್ ಮುಖ್ಯ ರಸ್ತೆಯ ಪುಟ್‍ ಪಾತ್ ನಲ್ಲಿ ಬರುತ್ತಿರಬೇಕಾದರೆ ಅದೇ ಸಮಯಕ್ಕೆ ತುಮಕೂರು ಕಡೆಯಿಂದ ಕುಣಿಗಲ್ ಕಡೆಗೆ  ಹೋಗಲು ಬಂದ ಒಬ್ಬ ಕಾರ್ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ಸದರಿ ರಸ್ತೆಯಲ್ಲಿ ಪಿರ್ಯಾದಿ ಬಲಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಶ್ರೀನಿವಾಸ್ ರವರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದು, ಸದರಿ ಅಪಘಾತದಿಂದ ಶ್ರೀನಿವಾಸನಿಗೆ ತಲೆಗೆ, ಮೈಕೈಗೆ ಕಾಲುಗಳಿಗೆ ತೀವ್ರ ತರಹದ ಪೆಟ್ಟುಗಳು ಬಿದ್ದಿದ್ದು, ನಂತರ ಅಪಘಾತಪಡಿಸಿದ ಕಾರಿನ ನಂಬರ್ ನೋಡಲಾಗಿ ಕೆಎ-01-ಎಇ-4153  ನೇ ನಂಬರಿನದಾಗಿದ್ದು ಪಿರ್ಯಾದ ಮತ್ತು ಅಲ್ಲಿಯೇ ಇದ್ದ ಪಿರ್ಯಾದಿ ಗ್ರಾಮದ ವಾಸಿ ಸಿದ್ದಗಂಗಯ್ಯರವರುಗಳು ಯಾವುದೋ ಒಂದು ವಾಹನದಲ್ಲಿ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ವೈದ್ಯರು ಪರೀಕ್ಷಿಸಿ ಗಾಯಾಳು ಶ್ರೀನಿವಾಸ್ ರವರು ಮೃತಪಟ್ಟಿರುವುದಾಗಿ ತಿಳಿಸಿದ್ದು, ನಂತರ ಪಿರ್ಯಾದಿಯು ಮೃತ ಶ್ರೀನಿವಾಸ್ ರವರ ಶವವನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ ಠಾಣೆಗೆ ಹಾಜರಾಗಿ ಮೇಲ್ಕಂಡ ಕಾರಿನ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕಂತ ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತೆ,

ಬಡವನಹಳ್ಳಿ ಪೊಲೀಸ್ ಠಾಣೆ ಮೊ.ಸಂ 36/2017 ಕಲಂ 304()ಐಪಿಸಿ

ದಿನಾಂಕ:01/05/2017 ರಂದು ಮದ್ಯಾಹ್ನ  12-30 ಗಂಟೆಗೆ ಪಿರ್ಯಾದಿ ನಿರ್ಮಲಾ ಕೊಂ ಸೋಮಶೇಖರ  ಬಡವನಹಳ್ಳಿ ಗ್ರಾಮದ ವಾಸಿ ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ,  ನಾನು ಮೇಲ್ಕಂಡ ವಿಳಾಸದ ವಾಸಿಯಾಗಿದ್ದು, ಈಗ್ಗೆ 9 ವರ್ಷಗಳ ಹಿಂದೆ ನನ್ನನ್ನು ಬಡವನಹಳ್ಳಿ ವಾಸಿ , ಸೋಮಶೇಖರ್ ರವರಿಗೆ ಕೊಟ್ಟು ಮದುವೆ ಮಾಡಿದ್ದು, ನಮಗೆ 8 ವರ್ಷದ ದೀಪು ಮತ್ತು 5 ವರ್ಷದ ವೇದ ಎಂಬ 2 ಹೆಣ್ಣು ಮಕ್ಕಳಿರುತ್ತವೆ. ನನ್ನ ಗಂಡ ಸೋಮಶೇಖರ್ ಪ್ರತಿದಿನ ಕೂಲಿ ಕೆಲಸ ಮಾಡುತ್ತಿದ್ದು,  ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದೆವು.  ನಾನು ಈಗ್ಗೆ ನಾಲ್ಕು ದಿನಗಳ ಹಿಂದೆ  ಹಬ್ಬಕ್ಕಾಗಿ ನನ್ನ ತವರು ಮನೆ ಚಿತ್ರದುರ್ಗಕ್ಕೆ ಹೋಗಿ ಅಲ್ಲೆ ಇದ್ದೆನು. ಈ ದಿನ ದಿನಾಂಕ:01/05/2017 ರಂದು ಬೆಳಗ್ಗೆ 9-30 ಗಂಟೆ ಸಮಯದಲ್ಲಿ ನಾನು ನನ್ನ ತಂದೆಯ ಮನೆಯಲ್ಲಿ ಇರುವಾಗ್ಗೆ  ನನ್ನ ಮೈದ  ಮಂಜುನಾಥ ಪೋನ್ ಮಾಡಿ,  ಈ ದಿನ ಅಣ್ಣ ಸೋಮಶೇಖರ್ ಬಡವನಹಳ್ಳಿಯ ವಾಸಿ ಮುದ್ದರಾಜು ರವರ  ಟ್ರಾಕ್ಟರ್ ಗೆ ಮರಳು ತುಂಬಲು ಕೂಲಿ ಕೆಲಸಕ್ಕೆ ಹೋಗಿದ್ದಾಗ , ನಾಗೇನಹಳ್ಳಿ ಸಮೀಪ ಸರ್ಕಾರಿ ಹಳ್ಳದಲ್ಲಿ ಮರಳು ತುಂಬುವಾಗ ಅಣ್ಣನ ಮೇಲೆ ಮರಳು ಗುಡ್ಡೆ ಕುಸಿದು ಬಿದ್ದು, ಮೃತನಾಗಿರುತ್ತಾನೆಂದು ತಿಳಿಸಿದರು . ಕೂಡಲೇ ನಾನು ನಮ್ಮ ಸಂಬಂದಿಕರೊಂದಿಗೆ ಬಡವನಹಳ್ಳಿಗೆ ಬಂದು ನಾಗೇನಹಳ್ಳಿಯ ಸಮೀಪ ಇರುವ ಸುವರ್ಣಮುಖಿ ಹಳ್ಳದ ಹತ್ತಿರ ಹೋಗಿ ನೋಡಿದಾಗ  ಸುಮಾರು 10 ಅಡಿ ಆಳವಿರುವ ಗುಂಡಿಯಲ್ಲಿ ನನ್ನ ಗಂಡನ ಶವ ಇದ್ದು, ಅವರ ಮೇಲೆ ಮರಳು ಗುಡ್ಡೆ ಬಿದ್ದಿದ್ದು,  ನನ್ನ ಗಂಡ ಮೃತರಾದ್ದರು. ಈ ದಿನ ಮುದ್ದರಾಜು ರವರು ಅವರ ಬಾಬ್ತು ಕೆಎ-64-ಟಿ-1340-41 ರ ಟ್ರಾಕ್ಟರ್ ಗೆ ಮರಳು ತುಂಬಲು ನನ್ನ ಗಂಡನನ್ನು ಹಾಗೂ ಇತರರನ್ನು  ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗಿ ಸುವರ್ಣಮುಖಿ ಹಳ್ಳದಲ್ಲಿ ಬೆಳಗ್ಗೆ 8-30 ಗಂಟೆ ಸಮಯದಲ್ಲಿ ಮರಳು ತುಂಬುವಾಗ ಮೇಲಿನಿಂದ ಮರಳು ಗುಡ್ಡೆ ಕುಸಿದು ನನ್ನ ಗಂಡನ ಮೇಲೆ ಬಿದ್ದಿದ್ದರಿಂದ ನನ್ನ ಗಂಡ ಉಸಿರುಗಟ್ಟಿ ಮೃತರಾಗಿರುವುದು ಕಂಡು ಬಂತು , ಮುದ್ದುರಾಜು ರವರು ಯಾವುದೆ ಮುಂಜಾಗ್ರತಾ ಕ್ರಮ ಕೈಗೊಳ್ಳದೆ 10 ಅಡಿ ಆಳದ ಗುಂಡಿಯಲ್ಲಿ ಮರಳನ್ನು ತುಂಬಿಸುತ್ತಿದ್ದರಿಂದ  ಈ ಅವವಡ ಸಂಭವಿಸಿರುತ್ತೆ. ಈ ಅಪಘಾತ ಮುದ್ದರಾಜು ರವರ ಅಜಾಗರೂಕತೆಯಿಂದ ಉಂಟಾಗಿರುತ್ತೆ. ಆದ್ದರಿಂದ     ಕೆಎ-64-ಟಿ-1340-41 ರ ಟ್ರಾಕ್ಟರ್ ಮಾಲೀಕರಾದ ಮುದ್ದರಾಜು ರವರ ಮೇಲೆ ಕಾನೂನು ಕ್ರಮ ಜರುಗಿಸಿ ನಮಗೆ ಅನುಕೂಲ ಮಾಡಿಕೊಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆಂತಾ ಟೈಪ್‌ ಮಾಡಿಸಿ ಕೊಟ್ಟ ಪಿರ್ಯಾದು ಅಂಶ .

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ. 57/2017 ಕಲಂ 323, 324, 504, 506  ಐಪಿಸಿ.

ದಿನಾಂಕ: 01/05/2017 ರಂದು ಪಿರ್ಯಾಧಿ ರಾಧ ಎಂ ಕೋಂ ಲೇಟ್ ಚಿಕ್ಕಣ್ಣ,  29 ವರ್ಷ , ಆದಿಕರ್ನಾಟಕ ಜನಾಂಗ, ಮೆಡಿಕಲ್ ವರ್ಕರ್ ನಲ್ಲಿ ಕೆಲಸ, ಮಾದಿಹಳ್ಳಿ, ತಿಪಟೂರು ತಾಲ್ಲೋಕ್  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ 30-4-2017 ರ ರಾತ್ರಿ ಸುಮಾರು 8.30 ರ ಸಮಯದಲ್ಲಿ ನನ್ನ ತಾಯಿಯವರಾದ ಲಕ್ಷೀದೇವಮ್ಮ ಅವರು ತನ್ನ ಹಿರಿಯ ಅಳಿಯನಾದ ಬಸವರಾಜು ರವರನ್ನು ಕರೆಯಲೆಂದು ಶಿವಲಿಂಗಯ್ಯ ಮಗ ನಾಗರಾಜು ಎಂಬುವರ ಮನೆಯ ಹತ್ತಿರ ಹೋದಾಗ ನನ್ನ ತಾಯಿಯೊಂದಿಗೆ ಆಸ್ತಿವಿಚಾರವಾಗಿ ಜಗಳ ತಗೆದು ನಿಮ್ಮ ಅಳಿಯನನ್ನು ನಿಮ್ಮ ಮನೆಯಲ್ಲಿಯೇ ಇಟ್ಟುಕೊಂಡು ಸುಮ್ಮನೇ ಕರೆಯಲು ಬಂದಿರಿವೆಯಾ ಎಂದು ನಾಗರಾಜನು ನನ್ನ ತಾಯಿಯ ಕೆನ್ನೆಗೆ ಕೈಯಿಂದ ಕಪಾಳಕ್ಕೆ ಹೊಡೆದು ನನ್ನ ಭಾವನವರಾದ ಲಕ್ಷೀಪ್ರಸಾದ್ ಬಿಡಿಸಿಕೊಳ್ಳಲು ಹೋದಾಗ ನಾಗರಾಜನು ಅಲ್ಲಿಯೇ ಇದ್ದ ರಿಪೀಸ್ ಪಟ್ಟಿಯನ್ನು ತೆಗೆದುಕೊಂಡು ನನ್ನ ತಾಯಿಯ ತಲೆಗೆ ರಕ್ತಸ್ರಾವವಾಗುವವರೆಗೂ ಹೊಡೆದು ಬಿಡಿಸಿಕೊಳ್ಳಲು ಹೋದ ನನ್ನ ಭಾವನವರಿಗೂ ಅದೇ ಪಟ್ಟಿಯಿಂದ ತಲೆಗೆ  ಹೊಡೆದಿರುತ್ತಾನೆ. ಆದೇ ವೇಳೆಗೆ ನನ್ನ ಅಕ್ಕ ಪ್ರತಿಭಾ ಮತ್ತು ಮತ್ತೊಬ್ಬ ಭಾವ ಬಸವರಾಜು ಬಿಡಿಸಿಕೊಂಡು ಇವರು ಬಂದಿರುವುದಕ್ಕೆ ನೀವು ಉಳಿಯುತ್ತೀರಾ ಇಲ್ಲಂದರೆ ನಿಮಗೊಂದು ಗತಿ ಕಾಣೆಸುತ್ತೆನೆಂದು ಪ್ರಾಣ ಬೆದರಿಕೆ  ಹಾಕಿ ಅವ್ಯಾಚ ಶಬ್ದಗಳಿಂದ ಬೈದು ಹೋಗಿದ್ದು ಗಾಯಗೊಂಡ ನನ್ನ ತಾಯಿ ಲಕ್ಷೀದೇವಮ್ಮ ಮತ್ತು ಭಾವ ಲಕ್ಷೀಪ್ರಸಾದ್ ಇವರಿಬ್ಬರನ್ನು ಸರ್ಕಾರಿ ಆಸ್ಪತ್ರೆಗೆ ಸುಮಾರು 10.30 ಕ್ಕೆ ರಾತ್ರಿ ದಾಖಲು ಪಡಿಸಿ ಚಿಕ್ಸಿತೆಗೆ ಸೇರಿಸಿರುತ್ತೇನೆ. ಇವರ ಆರೈಕೆಯಲ್ಲಿದ್ದು ದಿನಾಂಕ 1-5-2017 ರಂದು ಠಾಣೆಗೆ ಬಂದು ದೂರನ್ನು ತಡವಾಗಿ ನೀಡಿರುತ್ತೇನೆ.  ನಾಗರಾಜು ರವರ ಮೇಲೆ ಕ್ರಮ ತಗೆದುಕೊಂಡು ರಕ್ಷಣೆ ನೀಡಬೇಕೆಂದು ಕೋರುತ್ತೇನೆ ಎಂತ ಇತ್ಯಾದಿ

ತಿಪಟೂರು ನಗರ ಪೊಲೀಸ್ ಠಾಣಾ ಮೊ.ಆರ್ .ನಂ-69/2017 ಕಲಂ: 318 ಐ.ಪಿ.ಸಿ.

ದಿನಾಂಕ: 01/05/2017 ರಂದು ಬೆಳಿಗ್ಗೆ 11-15 ಗಂಟೆಗೆ ಪಿರ್ಯಾದುದಾರರಾದ ಬಿ.ಎಸ್ ಚಿದಾನಂದ ಮುರ್ತಿ ಬಿನ್ ಲೇಟ್ ಶಂಕರಲಿಂಗಯ್ಯ, 44 ವರ್ಷ, ಪ್ರಥಮ ದರ್ಜೆ ಸಹಾಯಕರು, ಶಿಶು ಅಭಿವೃದ್ದಿ ಯೋಜನೆ, ತಿಪಟೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ: 01/05/2017 ರಂದು ಬೆಳಿಗ್ಗೆ 10-00 ಗಂಟೆಗೆ ನಮ್ಮ ಹಿರಿಯ ಅಧಿಕಾರಿಗಳಾದ ಸಿ.ಡಿ.ಪಿ.ಓ ರವರು ಫೊನ್ ಮೂಲಕ ತಿಪಟೂರು ಟೌನ್ ಎ.ಪಿ.ಎಂ,ಸಿ ಯಾರ್ಡ್ ಭರತ್ ಟ್ರೇಡರ್ಸ್ ಅಂಗಡಿಪಕ್ಕದ ಜಾಗದಲ್ಲಿ ಯಾವುದೋ ಆಗತಾನೇ ಹುಟ್ಟಿ ಮೃತಪಟ್ಟಿರುವ ನವಜಾತ ಗಂಡು ಮಗುವಿನ ಶವವು ಬಿದ್ದಿರುವ ಬಗ್ಗೆ ಮಾಹಿತಿ ಬಂದಿದ್ದು ಪರಿಶೀಲಿಸಲು ತಿಳಿಸಿದ್ದ ಮೇರೆಗೆ, ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ, ಅಲ್ಲಿ ಸಾರ್ವಜನಿಕರು ಗುಂಪಾಗಿ ನಿಂತಿದ್ದು, ಒಂದು ಮೃತಪಟ್ಟಿರುವ ನವಜಾತ ಗಂಡು ಮಗು  ಬರಿ ಮೈಯಲ್ಲಿದ್ದು,  ತಲೆಯಲ್ಲಿ ಕಪ್ಪು ಕೂದಲು , ಕಣ್ಣುಗಳು ಮುಚ್ಚಿದ್ದು, ಒಕ್ಕಳಲ್ಲಿ ಬಳ್ಳಿ ಹಾಗೇಯೇ ಇರುತ್ತದೆ. ಕೈಕಾಲುಗಳು ಚನ್ನಾಗಿರುತ್ತವೆ. ಈ ಮಗುವನ್ನು ಪೋಷಕರು ತಮಗೆ ಇಷ್ಟವಿಲ್ಲದೆ ಹುಟ್ಟಿದ್ದರಿಂದಲೋ ಅಥವಾ ಅನಧಿಕೃತ ಗರ್ಭದಿಂದ  ಹುಟ್ಟಿದರಿಂದಲೋ ಅಥವಾ ಹುಟ್ಟಿ ಮೃತಪಟ್ಟಿರುವುದರಿಂದಲೋ ನವಜಾತ ಶಿಶುವಿನ ಶವವನ್ನು ಮರೆ ಮಾಚುವ ಉದ್ದೇಶದಿಂದ ಎಸೆದು ಹೋಗಿರುತ್ತಾರೆ. ಈ ಮಗುವಿನ ಪೋಷಕರು ಯಾರು ಎಂಬುದು ತಿಳಿದಿರುವುದಿಲ್ಲ. ಈ ಮಗುವಿನ ಬಗ್ಗೆ ಸ್ಥಳದಲ್ಲಿದ್ದ ಮೊದಲು ನೋಡಿದ ಸೋಮಶೇಖರ್ ಮತ್ತು ಪ್ರಶಾಂತ್ ರವರನ್ನು ಕೇಳಲಾಗಿ ನಾವು ಈ ದಿನ ಬೆಳಿಗ್ಗೆ 9-00 ಗಂಟೆಗೆ ಬಹಿರ್ದೆಸೆಗೆ ಬಂದ ಸಮಯದಲ್ಲಿ ಈ ಮೃತ ನವಾಜಾತ ಶಿಶುವನ್ನು ನೋಡಿರುವುದಾಗಿ ತಿಳಿಸಿದ್ದು, ಈ ಮಗುವನ್ನು ನೆನ್ನೆ ದಿನ ರಾತ್ರಿ ಯಾವುದೋ ವೇಳೆಯಲ್ಲಿ ಎಸೆದು ಹೋಗಿದ್ದು, ಈ ಅನಾಥ ಗಂಡು ನವಜಾತ ಶಿಶುವಿನ ಪೋಷಕರನ್ನು ಪತ್ತೆ ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿರುವ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹೊಸಬಡಾವಣೆ ಪೊಲೀಸ್ ಠಾಣಾ ಮೊ.ಸಂ 48/2017 u/s 406, 408, 420, R/W 34 IPC And 4, 6, 22, 64, 71, 11, 80 Chits Fund Act-1982

ದಿನಾಂಕ : 01-05-2017 ರಂದು ಬೆಳಗ್ಗೆ 10-30 ಗಂಟೆಗೆ ಸಿಪಿಐ ತಿಲಕ್ ಪಾರ್ಕ್‌ ವೃತ್ತ ಕಚೇರಿಯಿಂದ ಬಂದ No TCC/52/2017 ರ ಜ್ಞಾಪನವನ್ನು ಸ್ವೀಕರಿಸಿ ನೋಡಲಾಗಿ ಪಿರ್ಯಾದುದಾರರಾದ ಶ್ರೀ ಎಸ್.ಆರ್. ಸ್ವಾಮಿ ಬಿನ್ ಲೇಟ್ ರಾಜಶೇಖರಪ್ಪ, 52 ವರ್ಷ, ಲಿಂಗಾಯಿತ ಜನಾಂಗ, ವಾಸ 2ನೇ ಕ್ರಾಸ್ವಿನಾಯಕ ನಗರ, ಗುಬ್ಬಿ ಟೌನ್ ರವರು ಹಾಗೂ ಇತರೆ ಸಾರ್ವಜನಿಕರು  ತುಮಕೂರು ನಗರ ಎಸ್.ಎಸ್. ವೃತ್ತದಲ್ಲಿನ ಶ್ರೀನಿವಾಸ ನರ್ಸಿಂಗ್ ಹೋಂ ರಸ್ತೆ, ಶೈನಿ ಟವರ್ಸ್‌ ನೇ ಮಹಡಿಯಲ್ಲಿ ನಡೆಸುತ್ತಿದ್ದ Vishwa Vijetha Chits (K) Pvt LTD  ನಲ್ಲಿ ಚೀಟಿಯನ್ನು ಹಾಕಿದ್ದು ಚೀಟಿ ಅವಧಿಯಾದ 20 ತಿಂಗಳು ಮುಗಿದರೂ ಸಹಾ Vishwa Vijetha Chits ಸಂಸ್ಥೆಯವರು ಪಿರ್ಯಾದುದಾರರಿಗೆ ಹಾಗೂ ಇತರೆ ಸಾರ್ವಜನಿಕರಿಗೆ ಚೀಟಿ ಹಣವನ್ನು ನೀಡದೆ ಆಗ ಕೊಡುತ್ತೇವೆ, ಈಗ ಕೊಡುತ್ತೇವೆಂದು ನಂಬಿಸಿ ಕಚೇರಿಯ ಬಾಗಿಲು ತೆರೆಯದೆ ತಲೆಮರೆಸಿಕೊಂಡು ಓಡಾಡುತ್ತಿದ್ದು ಸಂಸ್ಥೆಯ ಪಾಲುದಾರರಾದ ಡಿಸಿ ಮೋಹನ್ ಕುಮಾರ್, ಸೋಮಣ್ಣ ಎನ್.ಎ. ಪ್ರಸಾದ್, ಲೇಟ್ ಕುಮಾರ್, ಮುನಿರಾಜು ರವರುಗಳ ವಿರುದ್ಧ ಸೂಕ್ತ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಮಾನ್ಯ ಪೊಲೀಸ್ ಮಹಾನಿರ್ದೇಶಕರಿಗೆ ಹಾಗೂ ಮಾನ್ಯ ಪೊಲೀಸ್ ಅಧೀಕ್ಷಕರವರಿಗೆ ದೂರು ಸಲ್ಲಿಸಿಕೊಂಡಿದ್ದು ಸದರಿ ದೂರುಗಳ ಮೇಲೆ ಕಾನೂನು ಕ್ರಮ ಜರುಗಿಸಲು ಸಿಪಿಐ ತಿಲಕ್ ಪಾರ್ಕ್‌ ರವರು ಸೂಚಿಸಿ ನೀಡಿದ ಜ್ಞಾಪನ ಪತ್ರವನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿದೆ.

ಜಯನಗರ ಪೊಲೀಸ್ ಠಾಣಾ ಮೊ.ನಂ. 64/2017 ಕಲಂ 454, 380 ಐಪಿಸಿ

ದಿನಾಂಕ: 30-04-2017 ರಂದು ಮದ್ಯಾಹ್ನ 2-00 ಗಂಟೆಗೆ ತುಮಕೂರು ಟೌನ್‌, ಗೋಕುಲ ಬಡಾವಣೆ 2 ನೇ ಹಂತದಲ್ಲಿ ವಾಸವಾಗಿರುವ ರವಿ ಬಿನ್ ಮುತ್ತುಸ್ವಾಮಿ ಯವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ,  ದಿನಾಂಕ: 28-04-2017 ರಂದು ಸುಮಾರು 1-00 ಗಂಟೆ ಸಮಯದಲ್ಲಿ ನಮ್ಮ ಅಜ್ಜಿಯವ ಅನಾರೋಗ್ಯದ ಕಾರಣ ಕುಟುಂಬ ಸಮೇತ ಊರಿಗೆ ಹೋಗಿದ್ದೆನು.  ದಿನಾಂಕ: 29-04-2017 ರಂದು ರಾತ್ರಿ ಸುಮಾರು 9-00 ಗಂಟೆ ಸಮಯದಲ್ಲಿ ರಾಜಶೇಖರ್‌ ರವರು ನನ್ನ ಮೊಬೈಲ್ ಗೆ ಪೋನ್ ಮಾಡಿ ಈ ದಿನ ಬೆಳಿಗ್ಗೆ ಸುಮಾರು 11-00 ಗಂಟೆ ಸಮಯದಲ್ಲಿ ಬಸವಜಯಂತಿ ಕಾರ್ಯಕ್ರಮಕ್ಕೆ ಗೋಕುಲ ಬಡಾವಣೆ 60 ಅಡಿ ರಸ್ತೆಯ ಸರ್ಕಲ್ ಬಳಿ ಹೋಗಿದ್ದು ಆ ಸಮಯದಲ್ಲಿ ಯಥಾ ಸ್ಥಿತಿಯಲ್ಲಿ ರವಿಯವರ ಮನೆಯ ಬಾಗಿಲು ಯಥಾಸ್ಥಿತಿಯಲ್ಲಿ ಇತ್ತು.  ಕಾರ್ಯಕ್ರಮ ಮುಗಿಸಿಕೊಂಡು ಮದ್ಯಾಹ್ನ 1 ಗಂಟೆ ಸಮಯದಲ್ಲಿ ಬಂದು ನೋಡಿದಾಗ ಸ್ವಲ್ಪ ತೆರೆದಿತ್ತು.  ಬಹುಶಃ ಸ್ನೇಹಿತರು ಯಾರೋ ಬಂದಿರಬಹುದು ಎಂದು ತಿಳಿದಿದ್ದೆ.  ರಾತ್ರಿ ಸುಮಾರು 8-30 ರ ಸಮಯದಲ್ಲೂ ಸಹ ಬಾಗಿಲು ಹಾಗೆಯೇ ಇತ್ತು.  ಅನುಮಾನ ಬಂದು ನೋಡಿದಾಗ ಬಾಗಿಲು ಡೋರ್ ಲಾಕ್‌ ಮೀಟಿ ತೆಗೆದಿರುವುದಾಗಿ ಕಂಡು ಬಂದಿರುತ್ತೆ ಎಂಬುದಾಗಿ ತಿಳಿಸಿದರು.  ನಾನು ತಮಿಳುನಾಡಿನ ಕರೂರಿನಿಂದ ಹೊರಟು ಬಂದು ಈ ದಿನ ಮನೆಯಲ್ಲಿ ನೋಡಲಾಗಿ ಮನೆಯ ರೂಂ ನಲ್ಲಿದ್ದ ಬೀರುವನ್ನು ಮೀಟಿ ಬೀರುವಿನಲ್ಲಿದ್ದ 1] ಸುಮಾರು 15 ಗ್ರಾಂ ಚಿನ್ನದ ಕೊರಳು ಚೈನು 2] ಸುಮಾರು 11 ಗ್ರಾಂ 4 ಸೆಟ್ ಓಲೆಗಳು 3] ಸುಮಾರು 11 ಗ್ರಾಂ ನ ನಾಲ್ಕು ಉಂಗುರಗಳು ಕಳುವಾಗಿರುವುದು ಕಂಡು ಬಂತು.  ಈ ಒಡವೆಗಳು ತುಂಬಾ ಹಳೇಯ ಒಡವೆಗಳಾಗಿದ್ದು ಸುಮಾರು 23,500 ರೂ ಬೆಲೆ ಬಾಳಬಹುದಾಗಿರುತ್ತದೆ.  ಈ ಒಡವೆಗಳನ್ನು ಯಾರೋ ಕಳ್ಳರು ನಾವು ಮನೆಯಲ್ಲಿಇಲ್ಲದ ವೇಳೆಯಲ್ಲಿ ಡೋರ್‌ಲಾಕ್‌ ಮೀಟಿ ಒಳಗೆ ಪ್ರವೇಶಿಸಿ ಬೀರು ಬಾಗಿಲನ್ನು ಮೀಟಿ ಅದರಲ್ಲಿದ್ದ ಮೇಲ್ಕಂಡ ಒಡವೆಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ.  ಆದ್ದರಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ನಮ್ಮ ಒಡವೆಗಳನ್ನು ಪತ್ತೆ ಮಾಡಿಕೊಡಬೇಕೆಂದು ಕೋರಿ ನೀಡಿರುವ ಪಿರ್ಯಾದು ಅಂಶವಾಗಿರುತ್ತೆ.

ವೈ.ಎನ್ ಹೊಸಕೋಟೆ ಪೊಲೀಸ್ ಠಾಣೆ ಮೊ.ಸಂ 49/17 ಕಲಂ 279, 337, 304(ಎ) ಐಪಿಸಿ

ದಿನಾಂಕ:30/04/2017 ರಂದು ಬೆಳಿಗ್ಗೆ 10:00 ಗಂಟೆಗೆ ಪಿರ್ಯಾದಿ  ಚೋಟಾ ರಹೀಂ ಸಾಬ್  ಬಿನ್ ಸಿದ್ದಿಕ್ ಸಾಬ್, 34 ವರ್ಷ, ಪಿಂಜಾರ ಜನಾಂಗ , ಕೂಲಿಕೆಲಸ, ಚಿಕ್ಕಹಳ್ಳಿ ಗ್ರಾಮ, ಪಾವಗಡ ತಾ|| ರವರು ನೀಡಿದ ಲಿಖಿತ ದೂರಿನ ಅಂಶವೇನೆಂದರೆ   ನಮ್ಮ ತಂದೆಗೆ ನಾವು ಇಬ್ಬರು ಗಂಡು ಮಕ್ಕಳಿದ್ದು ನಾನು ಬೆಂಗಳೂರಿನಲ್ಲಿ ಕೂಲಿಕೆಲಸ ಮಾಡಿಕೊಂಡಿದ್ದು ನನ್ನ ಅಣ್ಣ ರಹೀಂ ಸಾಬ್ ,38 ವರ್ಷ ಇವರು ಚಿಕ್ಕಹಳ್ಳಿ ಗ್ರಾಮದಲ್ಲಿ ಕೂಲಿಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು , ನಾನು ನನ್ನ ಅಣ್ಣ ಇಬ್ಬರೂ ಒಂದೆ ಮನೆಯಲ್ಲಿ ನಮ್ಮ ಕುಟುಂಬದೊಂದಿಗೆ ವಾಸವಾಗಿರುತ್ತೇವೆ,  ನನ್ನ ಅಣ್ಣ ರಹೀಂಸಾಬ್ ರವರಿಗೆ ಈಗ್ಗೆ 10 ವರ್ಷಗಳ ಹಿಂದೆ  ಗೌಸಿಯಾ ಎಂಬುವವರೊಂದಿಗೆ ಮದುವೆಯಾಗಿದ್ದು ಇವರಿಗೆ ಹರ್ಷಾದ್ 07 ವರ್ಷ ಮತ್ತು ಇರ್ಷಾದ್ 04 ವರ್ಷ ಎಂಬ ಇಬ್ಬರು ಗಂಡು ಮಕ್ಕಳಿರುತ್ತಾರೆ. ನಮ್ಮ ಸಂಬಂದಿಕರ ಮದುವೆ ಇದ್ದುದ್ದರಿಂದ ನಾನು ದಿನಾಂಕ:29/04/2017 ರಂದು ಚಿಕ್ಕಹಳ್ಳಿಗೆ ಬಂದಿದ್ದೆನು. ನನ್ನ ಅಣ್ಣ ದಿನಾಂಕ:29/04/2017 ರಂದು ಸಂಜೆ 4:00 ಗಂಟೆಗೆ ಕೆಲಸದ ನಿಮಿತ್ತ ತನ್ನ ಬಾಬ್ತು ಕೆ.ಎ-06 ಈ.ಡಿ 136 ನೇ ಟಿ.ವಿ.ಎಸ್ ಸ್ಟಾರ್ ಸಿಟಿ ಬೈಕ್ ನಲ್ಲಿ ನಾಗಲಾಪುರಕ್ಕೆ ಹೋಗಿ ಬರುತ್ತೇನೆಂದ ಹೇಳಿ ಹೋದನು , ಸಂಜೆ 5:30 ಗಂಟೆಗೆ ನಮ್ಮ ಗ್ರಾಮದ ಬಾಬುಜಿ ಬಿನ್ ಆದಪ್ಪ ರವರು ನನಗೆ ಪೋನ್ ಮಾಡಿ ನಿಮ್ಮ ಅಣ್ಣ ಮತ್ತು ದಳವಾಯಿಹಳ್ಳಿ ಗ್ರಾಮದ ನರಸಿಂಹ ಎಂಬುವವರು ನಾಗಲಾಪುರ ಕಡೆಯಿಂದ ಚಿಕ್ಕಹಳ್ಳಿಗೆ ಬರಲು ತನ್ನ  ಬಾಬ್ತು ಕೆ.ಎ-06 ಈ.ಡಿ 136 ನೇ ಟಿ.ವಿ.ಎಸ್ ಸ್ಟಾರ್ ಸಿಟಿ ಬೈಕ್ ನಲ್ಲಿ ಬರುತ್ತಿರುವಾಗ್ಗೆ  ಚಿಕ್ಕಹಳ್ಳಿ ಕಡೆಯಿಂದ ನಾಗಲಾಪುರ ಕಡೆಗೆ ಹೋಗಲು ಬರುತ್ತಿದ್ದ  ನಮ್ಮ ಗ್ರಾಮದ ವಾಸಿ ನಬೀ ರಸೂಲ್ ರವರು ತನ್ನ ಬಾಬ್ತು ಪ್ಯಾಷನ್ ಪ್ರೋ ಬೈಕ್ ನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಿಮ್ಮ ಅಣ್ಣ ಚಾಲನೆ ಮಾಡುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆಸಿ ಅಪಘಾತ ಉಂಟು ಮಾಡಿದ ಪರಿಣಾಮ ಬೈಕ್ ಜಖಂ ಗೊಂಡಿದ್ದು ,ರಹೀಂ ಸಾಬ್ ತಲೆಗೆ ಹಾಗೂ ಮೊಣಕಾಲಿಗೆ ಹಾಗೂ ಇತರೆ ಕಡೆಗಳಲ್ಲಿ ಪೆಟ್ಟು ಬಿದ್ದು ರಕ್ತಗಾಯವಾಗಿರುತ್ತೇಂತ , ಸದರಿ ಬೈಕ್ ನ  ಹಿಂಬದಿಯಲ್ಲಿ ಕುಳಿತ್ತಿದ್ದ ದಳವಾಯಿಹಳ್ಳಿ ಗ್ರಾಮದ ನರಸಿಂಹ ರವರ ಕಾಲಿಗೆ ಹಾಗೂ ಇತರೆ ಕಡೆಗಳಿಗೆ  ಪೆಟ್ಟು  ಬಿದ್ದುರಕ್ತ ಗಾಯವಾಗಿರುತ್ತದೆ  ಅಪಘಾತ ಉಂಟು ಮಾಡಿದ ಬೈಕ್ ಸಹ ಸ್ಥಳದಲ್ಲಿಯೇ ಬಿದ್ದಿರುತ್ತದೆ  ಸದರಿ ಬೈಕ್ ಗೆ ನೊಂದಣಿ ಸಂಖ್ಯೆ ಬರೆಸಿರುವುದಿಲ್ಲ, ಸದರಿ ಬೈಕ್ ನ್ನು ನಮ್ಮ ಗ್ರಾಮದ ನಬೀರಸೂಲ್ ಬಿನ್ ಲೇ|| ಫಕೃದ್ದೀನ್ ಸಾಬ್ ಚಾಲನೆ ಮಾಡಿಕೊಂಡು  ಬಂದು ಅಪಘಾತ ಪಡಿಸಿದ್ದು ಸದರಿ ಬೈಕ್ ನ ಹಿಂಬದಿಯಲ್ಲಿ ಕುಳಿತ್ತಿದ್ದ ನಮ್ಮ ಗ್ರಾಮದ ಯಲ್ಲಪ್ಪ  ರವರು ಸಹ ರಸ್ತೆಯಲ್ಲಿ ಬಿದ್ದುದ್ದು ಯಲ್ಲಪ್ಪ ರವರಿಗೂ ಸಹ ತಲೆಗೆ ಹಾಗೂ ಇತರೆ ಕಡೆಗಾಯಗಳಾಗಿರುತ್ತದೆ, ನಬೀ ರಸೂಲ್ಗೂ ಸಹ ತರಚಿದ ಗಾಯಗಳಾಗಿರುತ್ತದೆಂತ ನೀನು ತಕ್ಷಣ ಬಾ ಎಂತ ತಿಳಿಸಿದ್ದು  ನಾನು ಹೋಗಿ ನೋಡಲಾಗಿ ಮೇಲ್ಕಂಡ ವಿಚಾರ ಸತ್ಯವಾಗಿತ್ತು , ಈ ಅಪಘಾತದಿಂದ ಗಾಯಗಳಾಗಿದ್ದ ನನ್ನ ಅಣ್ಣ ರಹೀಂ ಸಾಬ್ ಹಾಗೂ ದಳವಾಯಿಹಳ್ಳಿ ನರಸಿಂಹ ಹಾಗೂ ನಮ್ಮ ಗ್ರಾಮದ ಯಲ್ಲಪ್ಪ  ರವರನ್ನು ಸ್ಥಳಕ್ಕೆ 108 ಆಂಬ್ಯೂಲನ್ಸ್ ಕರೆಸಿಕೊಂಡು ನಾನು ಮತ್ತು ಬಾಬುಜಿ ಹಾಗೂ ನಮ್ಮ ಗ್ರಾಮದ ಇನ್ನು ಕೆಲವರು ಚಿಕಿತ್ಸೆ ಬಗ್ಗೆ ಪಾವಗಡ ಸರ್ಕಾರಿ  ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡೆಸಿದ್ದು ವೈದ್ಯರ ಸಲಹೆ ಮೇರೆಗೆ ನನ್ನ ಅಣ್ಣ ರಹೀಂಸಾಬ್ ನನ್ನು ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ನಾವು ಬೆಂಗಳೂರಿಗೆ ಕರೆದುಕೊಂಡು ಹೋಗುವಾಗ್ಗೆ ರಾತ್ರಿ 9:30 ಗಂಟೆ ಸಮಯದಲ್ಲಿ ಮಾರ್ಗಮದ್ಯೆ ಮೃತಪಟ್ಟಿದ್ದು ನನ್ನ ಅಣ್ಣ ರಹೀಂಸಾಬ್ ರವರ ಶವವನ್ನು ವಾಪಸ್ ಪಾವಗಡ ಸರ್ಕಾರಿ ಆಸ್ಪತ್ರೆ ಶವಾಗಾರದಲ್ಲಿಟ್ಟಿರುತ್ತೇವೆ ,  ಈ ಅಪಘಾತ ಉಂಟು ಮಾಡಿದ ಪ್ಯಾಷನ್ ಪ್ರೋ ಬೈಕ್ ಚಾಲಕ ನಬೀರಸೂಲ್ ಬಿನ್ ಫಕೃದೀನ್ ಸಾಬ್, 36 ವರ್ಷ ಪಿಂಜಾರ ಜನಾಂಗ , ಚಿಕ್ಕಹಳ್ಳಿ ಗ್ರಾಮ ರವರ ಮೇಲೆ ಸೂಕ್ತ ಕಾನೂನು ರೀತ್ಯಾ ಕ್ರಮ ಕೈಗೊಳ್ಳ ಬೇಕೆಂತ ಬಸ್ ಸೌಕರ್ಯ ಇಲ್ಲದ್ದರಿಂದ  ಈ ದಿನ ತಡವಾಗಿ ಬಂದು ಈ ದೂರು ನೀಡಿರುತ್ತೇನೆಂತ , ಈ ಅಪಘಾತವು ನಮ್ಮ ಗ್ರಾಮದ ಆದಪ್ಪ ರವರ ಜಮೀನಿನ ಬಳಿ ರಸ್ತೆಯಲ್ಲಿ ನಡೆದಿರುತ್ತದೆಂತ ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ

Crime Incidents 01-05-17

ಅಪರಾಧ ವರದಿ ಮಾಡಿ

ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954

Today's Weather

We have 97 guests online
Content View Hits : 289610