lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

:: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< April 2017 >
Mo Tu We Th Fr Sa Su
          1 2
3 4 5 6 7 8 9
10 11 12 13 14 15 16
17 18 19 20 21 22 23
25 26 27 28 29 30
Monday, 24 April 2017
Crime Incidents 24-04-17

ತಾವರೇಕೆರೆ ಪೊಲೀಸ್‌ ಠಾಣೆ ಮೊ.ಸಂ . 62/2017 ಕಲಂ 279, 337,304() ಐಪಿಸಿ

ದಿನಾಂಕ: 24-04-2017 ರಂದು 03-30 ಗಂಟೆಯಲ್ಲಿ ಪಿರ್ಯಾಧುದಾರರಾದ ಶ್ರೀನಿವಾಸ್‌‌‌‌‌ ರವರು ಕೃತ್ಯ ನಡೆದ ಸ್ಥಳದಲ್ಲಿ ನೀಡಿದ ಹೇಳಿಕೆಯ ಪಿರ್ಯಾಧಿನ ಸಾರಾಂಶವೇನೆಂದರೆ,  ನಾನು ದಿನಾಂಕ: 22-04-2017 ರಂದು ಬೆಂಗಳೂರಿನಿಂದ ನಮ್ಮ ಸಂಬಂದಿಕರ ಮದುವೆಗಾಗಿ ದಾವಣಗೆರೆಗೆ ಹೋಗಿದ್ದೆನು.  ಅಲ್ಲಿ ಮದುವೆ ಮುಗಿಸಿಕೊಂಡು ದಿನಾಂಕ: 23-04-2017 ರಂದು ರಾತ್ರಿ 11-45 ಗಂಟೆಗೆ ಬೆಂಗಳೂರಿಗೆ ಹೋಗಲು ಮಹದೇವಿ ಬಸ್‌‌‌ ನಂ. ಕೆಎ-01, ಎಎ-5514ನೇ ಬಸ್‌‌‌‌ ಹತ್ತಿದೆನು.  ಈ ಬಸ್‌‌ನಲ್ಲಿ ಸುಮಾರು 45 ರಿಂದ 50 ಜನ ಪ್ರಯಾಣಿಸುತ್ತಿದ್ದರು.  ಈ ಬಸ್‌‌‌‌ ಚಿತ್ರದುರ್ಗ, ಹಿರಿಯೂರು ಮುಖಾಂತರ ಬೆಂಗಳೂರು ಕಡೆಗೆ ಹೋಗುತ್ತಿತ್ತು.  ದಿನಾಂಕ: 24-04-2017 ರಂದು ಮುಂಜಾನೆ 02-45 ಗಂಟೆಯಲ್ಲಿ ನಾವು ಪ್ರಯಾಣಿಸುತ್ತಿದ್ದ ಬಸ್ಸಿನ ಚಾಲಕ ಬಸ್ಸನ್ನು ಶಿರಾ ತಾಲ್ಲೂಕ್‌‌‌‌‌‌, ತಾವರೇಕೆರೆ ಗ್ರಾಮದ ಬಳಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮುಂದೆ ಹೋಗುತ್ತಿದ್ದ ಒಂದು ಲಾರಿಗೆ ಡಿಕ್ಕಿ ಹೊಡೆಸಿದ ಇದರಿಂದಾಗಿ ಬಸ್‌‌‌‌‌‌ ಮತ್ತು ಲಾರಿ ಜಕಂಗೊಂಡು ಬಸ್‌‌ ನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 25 ರಿಂದ 30 ವರ್ಷ ವಯಸ್ಸಿನ ಒಬ್ಬ ಗಂಡಸು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.  ಬಸ್‌‌‌‌‌ ಚಾಲಕನಿಗೂ ಸಹ ತೀವ್ರ ಸ್ವರೂಪದ ಗಾಯಗಳಾಗಿರುತ್ತವೆ.  ಬಸ್‌‌‌ ನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 12 ರಿಂದ 15 ಜನ ಪ್ರಯಾಣಿಕರಿಗೆ ಗಾಯಗಳಾಗಿರುತ್ತವೆ.  ನನಗೆ ಬಲಕೈಗೆ, ಮುಖಕ್ಕೆ ಏಟುಗಳಾಗಿರುತ್ತವೆ.  ನಂತರ ಲಾರಿಯ ನಂಬರ್‌‌‌ ನೋಡಲಾಗಿ ಟಿಎನ್‌‌‌‌‌-36, ಎಯು-5431 ಆಗಿರುತ್ತೆ.  ಈ ಅಪಘಾತಕ್ಕೆ ಕಾರಣನಾದ ಕೆಎ-01, ಎಎ-5514ನೇ ಬಸ್‌‌‌‌ ಚಾಲಕನ ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕೆಂತಾ ಕೋರಿಕೊಳ್ಳುತ್ತೇನೆಂತಾ ಇತ್ಯಾಧಿಯಾಗಿ ನೀಡಿದ ಪಿರ್ಯಾಧಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ ತನಿಖೆ ಕೈಗೊಂಡಿರುತ್ತೆ.

 

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ-63/2017 ಕಲಂ: 324,307,327 ರೆ/ವಿ 34 ಐ.ಪಿ.ಸಿ

ದಿನಾಂಕ:23-04-2017 ರಂದು ಸಂಜೆ 6-30 ಗಂಟೆಗೆ ಪಿರ್ಯಾಧಿ ಶಶಿಧರ್ ಬಿನ್ ಸಿದ್ದಯ್ಯ ಜಿ 40 ವರ್ಷ, ಶಾರದಾನಗರ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನಂದರೆ ದಿನಾಂಕ:22-04-2017 ರಂದು ತನ್ನ ಸ್ನೇಹಿತ ಗೊರಗೊಂಡನಹಳ್ಳಿ ನಿರಂಜನಸ್ವಾಮಿ ಇಬ್ಬರು ರಾತ್ರಿ ತಿಪಟೂರು ನಗರ ಹಿಡೇನಹಳ್ಳಿ ಗೇಟ್ ಬಳಿ ಇರುವ ನಕ್ಷತ್ರ ಬಾರ್ ಅಂಡ್ ರೆಸ್ಟೋರೆಂಟ್ ಹತ್ತಿರ ಇರುವ ಬೀಡಾ ಸ್ಟಾಲ್ ಹತ್ತಿರ ಹೋಗಿ ಬೀಡ ತೆಗೆದುಕೊಳ್ಳುತ್ತಿರುವಾಗ ಅಲ್ಲಿಯೇ ಇದ್ದ ಗೊರಗೊಂಡನಹಳ್ಳಿಯ ವಾಸಿ ಶಿವಶಂಕರ ರವರು ನನ್ನ ಸ್ನೇಹಿತ ನಿರಂಜನಸ್ವಾಮಿ ಗೆ ಪರಿಚಯವಿದ್ದುದರಿಂದ ಅವರ ಜೊತೆಯಲ್ಲಿದ್ದ ಶಿವಶಂಕರ್ ರವರನ್ನು ಮಾತನಾಡಿಸುತ್ತಿದ್ದಾಗ ಶಿವಶಂಕರ ನೊಂದಿಗೆ ಇದ್ದ ಸ್ಟುಡಿಯೋ ರಮೇಶ ಮಾರನಗೆರೆ ವಾಸಿ ಮತ್ತು ಮಾದಿಹಳ್ಳಿ ಮೀಸೆ ಕುಮಾರ್ ಇಬ್ಬರು ಆಯಿತು ಕಳಚಿಕೋ ಎಂದು ಏರುಧ್ವನಿಯಲ್ಲಿ ಮಾತನಾಡಿದಾಗ ನಾನು ಹೋಗಿ ಆಯಿತು ಬಿಡಿ ಹೋಗುತ್ತೇವೆ ಎಂದು ಹೇಳಿ ಹೊರಡುತ್ತಿರುವಾಗ ರಾತ್ರಿ ಸುಮಾರು 11-00 ಗಂಟೆ ಸಮಯದಲ್ಲಿ ನನ್ನ ಮೇಲೆ ಗಲಾಟೆ ಮಾಢುವ ಉದ್ದೇಶದಿಂಧ ನಿರಂಜನಸ್ವಾಮಿಯನ್ನು ಬಾರೋ ಇಲ್ಲಿ ಎಲ್ಲಿಗೆ ಹೋಗುತ್ತೀಯ ಎಂದು ಗಲಾಟೆ ಮಾಡಲು ಬಂದರು, ಆಗ ನಾನು ಗಲಾಟೆ ಮಾಡಬೇಡಿ ಎಂದು ಹೇಳಿದಾಗ ಸ್ಟುಡಿಯೋ ರಮೇಶ ತನ್ನ ಬೈಕ್ ನಲ್ಲಿದ್ದ ಸೈಕಲ್ ಚೈನ್ ನ್ನು ತಂದು ನನ್ನ ಕುತ್ತಿಗೆಗೆ ಹಾಕಿ ಸಾಯಿಸಲು ಬಂದನು ಆಗ ನಾನು ತಪ್ಪಿಸಿಕೊಳ್ಳಲು ಹೋದರು ಸಹ ಬಿಡದೆ ಕುತ್ತಿಗೆಗೆ ಚೈನ್ ನ್ನು ಹಾಕಿ ಕೆಳಕ್ಕೆ ಕೆಡವಿ ಹೊಡೆದರು. ಅಷ್ಟರಲ್ಲಿ ಮೀಸೆ ಕುಮಾರ್ ಅಲ್ಲಿಯೇ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ನನ್ನ ಹೊಟ್ಟೆಯ ಎಡಭಾಗಕ್ಕೆ ಹೊಡೆದು ನೋವುಂಟು ಮಾಡಿದನು. ನಂತರ ಸ್ಟುಡಿಯೋ ರಮೇಶ ಅದೇ ಬೈಕ್ ನಿಂದ ನನ್ನ ತಲೆಯ ಎಡಭಾಗಕ್ಕೆ ಹೊಡೆದು ಗಾಯಮಾಡಿದನು ನನ್ನ ಕುತ್ತಿಗೆಯಲ್ಲಿದ್ದ ಸುಮಾರು 50 ಗ್ರಾಂ ತೂಕದ ಚಿನ್ನದ ಸರವು ನನಗೆ ಹೊಡೆಯುವ ಸಂದರ್ಭದಲ್ಲಿ ಬಿದ್ದು ಹೋಗಿರುತ್ತದೆ. ನಂತರ ಅಷ್ಟರಲ್ಲಿ ನನ್ನ ಸ್ನೇಹಿತ ನಿರಂಜನಸ್ವಾಮಿ ಮತ್ತು ಶಿವಕುಮಾರ್ ಜಗಳವನ್ನು ಬಿಡಿಸಿ ಕಳುಹಿಸಿಕೊಟ್ಟಿರುತ್ತಾರೆ. ಈ ವಿಚಾರವನ್ನು ಮನೆಗೆ ತಿಳಿಸಿ ದಿನಾಂಕ:23-04-2017 ರಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ.

 

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.38/2017, ಕಲಂ:323. 324. 341. 504. 34 ಐಪಿಸಿ.

ದಿನಾಂಕ:23/04/2017 ರಂದು ರಾತ್ರಿ 08-15 ಗಂಟೆಗೆ ಪಿರ್ಯಾದಿ ಬೆಳಗೆರಪ್ಪ ಬಿನ್‌ ಕೋನಪ್ಪ  ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ದಿ:23/04/2017 ರಂದು ಮದ್ಯಾಹ್ನ 01-10 ಗಂಟೆ ಸುಮಾರಿನಲ್ಲಿ ನನ್ನ ತಮ್ಮ ರಾಜಣ್ಣ ಬ್ರಹ್ಮಸಮುದ್ರ  ಹಳೇ ಗೊಲ್ಲರಹಟ್ಟಿ ಯಿಂದ ಹೋಗಿ ಬ್ರಹ್ಮಸಮುದ್ರ ಗೇಟಿನಲ್ಲಿ ಈರಣ್ಣ  ಎಂಬುವವರ ಸೈಟಿನ ವಿಚಾರವಾಗಿ ನೀನು ಯಾಕೆ ಅವರ ಪರವಾಗಿ ಬರುವುದು ಎಂದು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ನಮ್ಮ ಗ್ರಾಮದ ತಮ್ಮಣ್ಣ ಬಿನ್‌ ಚಿತ್ತಯ್ಯ , ಶಿವಲಿಂಗಯ್ಯ ಬಿನ್‌ ಚಿತ್ತಯ್ಯ ಇವರುಗಳು ಜಗಳ ತೆಗೆದು ಕಲ್ಲಿನಿಂದ ನನ್ನ ತಮ್ಮ ರಾಜಣ್ಣನ ತಲೆಗೆ ಗುದ್ದಿರುತ್ತಾರೆ ತಮ್ಮಣ್ಣ ನು ಕಾಲಿನಿಂದ ಒದ್ದು ಕೈಯಿಂದ ಗುದ್ದಿರುತ್ತಾರೆ ಅಲ್ಲೇ ಇದ್ದ ಗೋವಿಂದರಾಜು ಎಂಬುವವರು ಜಗಳ ಬಿಡಿಸಿ ನಮಗೆ ವಿಚಾರ ತಿಳಿಸಿರುತ್ತಾರೆ ನಾನು ಬ್ರಹ್ಮಸಮುದ್ರ ಗೇಟಿಗೆ ಬಂದು ನನ್ನ ತಮ್ಮನನ್ನು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿ ನಂತರ ವೈದ್ಯಾದಿಕಾರಿಗಳು ತುಮಕೂರಿನ ಆಸ್ಪತ್ರೆಗೆ ಕಳಿಸಿಕೊಟ್ಟಿರುತ್ತಾರೆ ಗಲಾಟೆಮಾಡಿ ನನ್ನ ತಮ್ಮ ನನ್ನು ಹೊಡೆದಿರುವ ತಮ್ಮಣ್ಣ ಹಾಗೂ ಶಿವಲಿಂಗಯ್ಯ ರವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳ ಬೇಕೆಂದು ನೀಡಿದ ಫಿರ್ಯಾದುವಿನ ಅಂಶವಾಗಿರುತ್ತೆ.

ಜಯನಗರ ಪೊಲೀಸ್ ಠಾಣಾ ಮೊ.ನಂ. 60/2017 ಕಲಂ 448, 435, 427 ರೆ/ವಿ 34 ಐಪಿಸಿ

ದಿನಾಂಕ: 23-04-2017 ರಂದು ಬೆಳಿಗ್ಗೆ 7-30 ಗಂಟೆಗೆ ತುಮಕೂರು ಟೌನ್ ಸಿದ್ದರಾಮೇಶ್ವರ ಬಡಾವಣೆ ವಾಸಿ ಪುಷ್ಪ ಡಿ ಕೋಂ ರಾಜಣ್ಣ.ಡಿ ಎಂಬುವರು ಠಾಣೆಗೆ ಹಾಜರಾಗಿ ದಿನಾಂಕ: 23-04-2017 ರಂದು ಬೆಳಗಿನ ಜಾವ ಸುಮಾರು 1-45 ಗಂಟೆ ಸಮಯದಲ್ಲಿ ಕೆಲ ದುಷ್ಕರ್ಮಿಗಳಾದ ಮುನಿಯಪ್ಪ, ಭೂತರಾಜ್‌, ಮಂಜುಯಾದವ್ ಮತ್ತು ಮಧು ಎಂಬುವರು ನಮ್ಮ ಮನೆಯ ಕಾಂಪೌಂಡ್‌ ನಲ್ಲಿ ನಿಲ್ಲಿಸಿದ್ದ ನಮ್ಮ ಬಾಬ್ತು ಇನೋವಾ ಕಾರ್ ನಂಬರ್ ಕೆಎ-06 ಪಿ-3708 ರನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹೋಗಿರುತ್ತಾರೆ.  ನಾನು ನನ್ನ ಪತಿ ಮನೆಯಲ್ಲಿ ಮೇಲಿನ ಕೋಣೆಯಲ್ಲಿ ಮಲಗಿದ್ದು ಶಬ್ದ ಕೇಳಿ ಓಡಿ ಬಂದು ನೋಡಿದಾಗ ನಮ್ಮ ಕಾರ್ ಪೂರ್ತಿಯಾಗಿ ಹತ್ತಿ ಉರಿಯುತ್ತಿತ್ತು.  ನನ್ನ ಪತಿ ಕೂಗಿಕೊಂಡ ಶಬ್ದ ಕೇಳಿ ಆ ವ್ಯಕ್ತಿ ಓಡಿ ಹೋದನು.  ಅವನು ಮುಸುಕು ಧರಿಸಿ 2 ಲೀಟರ್‌ ನ 2 ಪೆಟ್ರೋಲ್ ಬಾಟಲ್ ಹಿಡಿದು ಬಂದಿರುವ ದೃಷ್ಯ ನಮ್ಮ ಸಿಸಿ ಕ್ಯಾಮೇರಾದಲ್ಲಿ ಸೆರೆಯಾಗಿದೆ.  ನಾನು ನನ್ನ ಮೈದುನನಿಗೆ ಕರೆ ಮಾಡಿದಾಗ ಅವರು ಬಂದು ಬೆಂಕಿಯನ್ನು ನೀರು ಹಾಕಿ ನಂದಿಸಿದರು. ಮೇಲ್ಕಂಡ ಎಲ್ಲರೂ ಸೇರಿ ಈ ಕೃತ್ಯವೆಸಗಿರುತ್ತಾರೆ.  ಈ ಕೃತ್ಯದಿಂದ ನಮಗೆ ಸುಮಾರು 22 ಲಕ್ಷ ರೂಪಾಯಿ ನಷ್ಟ ಉಂಟಾಗಿರುತ್ತೆ.  ಆದ್ದರಿಂದ ತಾವು ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಪಿರ್ಯಾದು ಅಂಶವಾಗಿರುತ್ತೆ.

ಹೊನ್ನವಳ್ಳಿ ಪೊಲೀಸ್‌ ಠಾಣೆ ಮೊನಂ-47/2017 ಕಲಂ 324, 506, ರೆ,ವಿ 34 ಐಪಿಸಿ

ದಿನಾಂಕ:23/04/2017 ರಂದು ಸಂಜೆ 04-45 ಗಂಟೆಗೆ ಪಿರ್ಯಾದಿ ಶ್ರೀಮತಿ ಜಯಮ್ಮ ಕೊಂ ಲೇಟ್ ಪುಟ್ಟಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ಪಿರ್ಯಾದಿಗೆ ಇಬ್ಬರು ಗಂಡು ಮಕ್ಕಳಿದ್ದು ಮೊದಲನೇ ಮಗನಾದ ಪ್ರಭುಸ್ವಾಮಿಗೆ ಮದುವೆಯಾಗಿ ಮನೆಯ ಪಕ್ಕದಲ್ಲಿ ವಾಸವಾಗಿದ್ದು ಈ ದಿನ ದಿನಾಂಕ-23/04/2017 ರಂದು ಮಧ್ಯಾಹ್ನ ಸುಮಾರು 02-00 ಗಂಟೆ ಸಮಯದಲ್ಲಿ ಮಕ್ಕಳಿಗೆ ಆಸ್ತಿ ಪಾಲು ಮಾಡಿಕೊಡಲು ಪಿರ್ಯಾದಿ ಹೆಣ್ಣುಮಕ್ಕಳನ್ನು ಮತ್ತು ಸಂಬಂದಿಕರನ್ನು ಮನೆಗೆ ಕರೆಯಿಸಿ ಮಾತುಕತೆ ಮಾಡುವಾಗ ಪಿರ್ಯಾದಿಯು ಪ್ರಭುಸ್ವಾಮಿಗೆ ನಮ್ಮ ಜೀವನಾಂಶಕ್ಕೆ ಜಮೀನು ಬಿಡುವಂತೆ ಕೇಳಿದ್ದಕ್ಕೆ ಪ್ರಭುಸ್ವಾಮಿ ಯಾರಿಗೂ ಜಮೀನು ಬಿಡುವುದಿಲ್ಲವೆಂದು ಏಕಾಏಕಿ ಜಗಳ ತೆಗೆದು ಪಿರ್ಯಾದಿಯ ಕೈ ನುಲುಚಿದ್ದು ಈತನ ಜೊತೆ ಆತನ ಹೆಂಡತಿ ಕಲಾವತಿ ಮತ್ತು ಅವರ ತಂದೆ ಸಿದ್ದರಾಮಯ್ಯ ಸೇರಿಕೊಂಡು ಪಿರ್ಯಾದಿಯ ಮೈದುನ ಶ್ರೀನಿವಾಸನ ಬಲಗೈಗೆ ಪ್ರಭುಸ್ವಾಮಿ ಹಲ್ಲಿನಿಂದ ಕಚ್ಚಿ ಗಾಯಪಡಿಸಿದ್ದು ಬಿಡಿಸಲು ಹೋದ ಲೋಕಾಕ್ಷಿಗೂ ಕೂಡ ಪ್ರಭುಸ್ವಾಮಿ ಎಡಗೈಗೆ ಕಚ್ಚಿ ಗಾಯಪಡಿಸಿದ್ದು ಅಲ್ಲದೆ ಮೇಲ್ಕಂಡ ಮೂವರು ಕೂಡ ಪಾಲು ಕೊಡದಿದ್ದರೆ ನಿಮ್ಮಗಳನ್ನು ಜೀವಂತವಾಗಿ ಬಿಡುವುದಿಲ್ಲವೆಂದು ಕೊಲೆ ಬೆದರಿಕೆ ಹಾಕುತ್ತಿರುವಾಗ ಕಲ್ಕೆರೆ ಗ್ರಾಮದ ಜಯರಾಜ್‌ ಸಿಂಗ್ ನಟರಾಜ್ ಹಾಗು ಲಕ್ಷ್ಮಯ್ಯ ರವರು ಬಂದು ಜಗಳ ಬಿಡಿಸಿದ್ದು ಮೇಲ್ಕಂಡವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಲು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 54 guests online
Content View Hits : 321499