lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ 16.01.2018 ವೇಶ್ಯಾವಾಟಿಕೆ ದಂಧೆಗೆ ಮಹಿಳೆಯರ ಸಾಗಾಣಿಕೆ... >> :  ಪತ್ರಿಕಾ ಪ್ರಕಟಣೆ  : ತುಮಕೂರು ನಗರದ ದೊಂತಿ ಏಜೇನ್ಸಿಯಲ್ಲಿ ಸಿಗರೇಟ್ ಕಳವು ಮಾಡಿದ... >> ಠಾಣಾ  ದಾಖಲಾತಿಗಳ ನಿರ್ವಹಣೆ ಕಾರ್ಯಗಾರ ದಿನಾಂಕ 13/1/2018           >> -:  ಪತ್ರಿಕಾ ಪ್ರಕಟಣೆ.  :-   ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 301/2017 ಕಲಂ 457, 380... >> >> -: ದಿನಾಂಕ : 19 -12 -17  :- :  ಪತ್ರಿಕಾ ಪ್ರಕಟಣೆ : ಕೋಮು ಪ್ರಚೋದನಕಾರಿ ಹೇಳಿಕೆಗಳ... >> ಪತ್ರಿಕಾ ಪ್ರಕಟಣೆ :: ದಿನಾಂಕ 12-12-2017  :: ತುಮಕೂರು ನಗರದಲ್ಲಿ ಮೂಲ ಆ.ಐ. ಸ್ಮಾಟ್‌ ಕಾರ್ಡಗಳ... >> ಪತ್ರಿಕಾ ಪ್ರಕಟಣೆ : ದಿನಾಂಕ:-05-12-2017 : ಚಾಳಿಬಿದ್ದ ಅಪರಾಧಿಗಳಿಂದ ಸುಮಾರು ಒಟ್ಟು 5, 00, 100/- ರೂ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ   ತುಮಕೂರು ನಗರದಲ್ಲಿ ಒಂಟಿಯಾಗಿ... >>   New BEAT BEST STAFF AND BEST CRIME DETECTION BEST STAFF >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< April 2017 >
Mo Tu We Th Fr Sa Su
          1 2
3 4 5 6 7 8 9
10 11 12 13 14 15 16
17 18 19 20 22 23
24 25 26 27 28 29 30
Friday, 21 April 2017
Crime Incidents 21-04-17

ಚೇಳೂರು  ಪೊಲೀಸ್  ಠಾಣಾ  ಯು.ಡಿ.ಆರ್  ನಂ 13/2017  ಕಲಂ 174  ಸಿ.ಆರ್.ಪಿ.ಸಿ

ದಿನಾಂಕ; 20/04/2017 ರಂದು  ರಾತ್ರಿ 8-15 ಗಂಟೆಗೆ  ಪಿರ್ಯಾದಿ ಶಿವರತ್ನಮ್ಮ  ನವರು  ಠಾಣೆಗೆ  ಹಾಜರಾಗಿ  ನೀಡಿದ  ಪಿರ್ಯಾದು ಅಂಶವೇನಂದರೆ, ನನ್ನ  ತವರು  ಮನೆ ಗುಬ್ಬಿ  ತಾ,  ವರ್ತೆಕಟ್ಟೆ  ಗ್ರಾಮವಾಗಿದ್ದು,  ನನ್ನನ್ನು ಈಗ್ಗೆ  ಸುಮಾರು 1 ½  ವರ್ಷದ  ಹಿಂದೆ  ಪಾವಗಡದ ಲೇ ರಾಮಪ್ಪರವರ  ಮಗ ಜಯಸಿಂಹರವರಿಗೆ  ಕೊಟ್ಟು  ಮದುವೆ  ಮಾಡಿರುತ್ತಾರೆ.  ಹಾಲಿ  ನಮಗೆ 16 ದಿವಸದ  ಗಂಡು  ಪಾಪು  ಇರುತ್ತೆ.  ದಿನಾಂಕ; 20/04/2017  ರಂದು  ಬೆಳಗ್ಗೆ 8-00  ಗಂಟೆಗೆ  ನಾನು  ನನ್ನ  ತಂಗಿ  ಶೋಬಾ  ನನ್ನ  ಗಂಡ ಜಯಸಿಂಹ ನನ್ನ  ಗಂಡನ  ಸ್ನೇಹಿತ  ಅನಿಲ್  ಕುಮಾರ್  ಹಾಗೂ  ಪಾಪುವಿನೊಂದಿಗೆ  ನನ್ನ  ಗಂಡನ ಸ್ನೇಹಿನ  ಕೆಎ-50 ಎಂ-0460 ನೇ  ಮಾರುತಿ  ಕಾರಿನಲ್ಲಿ  ಹೊರಟು ಗುಬ್ಬಿಯಲ್ಲಿ  ಇರುವ   ನನ್ನ  ಗಂಡನ  ಅಕ್ಕ  ನಾಗಜ್ಯೋತಿ  ಕೋಂ ಬಾಸ್ಕರ್  ರವರು  ಮನೆಗೆ  ಬಂದೆವು  ಅಲ್ಲಿ.  ನಾಗ ಜ್ಯೋತಿ ರವರನ್ನು  ಮಾತನಾಡಿಸಿಕೊಂಡು  ನಮ್ಮ  ಊರಾದ  ವರ್ತೆಕಟ್ಟೆ ಗ್ರಾಮಕ್ಕೆ  ಹೋಗಲು  ಗುಬ್ಬಿ  ಎಂ.ಎನ್  ಕೋಟೆ  ಮಾರ್ಗವಾಗಿ  ಬರುತ್ತಿದ್ದೆವು.  ಕಾರನ್ನು  ನನ್ನ  ಗಂಡ ಚಾಲನೆ  ಮಾಡುತ್ತಿದ್ದರು.  ಇವರ ಪಕ್ಕದ ಸೀಟು  ಮುಂಭಾಗದಲ್ಲಿ  ಇವರ  ಸ್ನೇಹಿತ ಅನಿಲ್  ಕುಮಾರ್ ಕುಳಿತಿದ್ದರು,  ಹಿಂದಿನ ಸೀಟಿನಲ್ಲಿ  ನಾನು  ನನ್ನ  ತಂಗಿ ಶೋಬಾ ಮಗುವನ್ನು  ಎತ್ತಿಕೊಂಡು  ಕುಳಿತಿದ್ದೆವು.  ಮಾರ್ಗ  ಬೆಟ್ದದಹಳ್ಳಿ  ಗೇಟ್  ಹತ್ತಿರ  ಬಂದಾಗ  ಮದ್ಯಾಹ್ನ 2-00  ಗಂಟೆನಲ್ಲಿ  ರಸ್ತೆ  ಪಕ್ಕದ  ದೊಡ್ಡ ಆಲದ ಮರವೊಂದು ಗಾಳಿಯ ರಭಸಕ್ಕೆ  ಬುಡ  ಸಮೇತ ಉರುಳಿಕೊಂಡು  ಕಾರಿನ ಮೇಲೆ ಬಿದ್ದಿತು.  ಕಾರಿನ  ಮುಂಭಾಗ  ಜಖಂಗೊಂಡು  ಮುಂದಿನ ಸೀಟಿನಲ್ಲಿ ಕುಳಿತಿದ್ದ  ನನ್ನ  ಗಂಡ ಹಾಗೂ  ಅನಿಲ್  ಕುಮಾರ್  ಮೇಲೆ  ಕಾರಿನ ಮುಂಭಾಗ  ಜಜ್ಜಿ  ತಲೆಗೆ  ಮೈಕೈಗೆ ರಕ್ತ ಗಾಯಗಳಾಗಿ  ಸ್ಥಳದಲ್ಲಿ ಮೃತ ಪಟ್ಟರು.  ಹಿಂಬದಿಯಲ್ಲಿ ಕುಳಿತಿದ್ದ  ನಮಗೆ ಯಾವುದೇ ಪೆಟ್ಟುಗಳು  ಆಗಲಿಲ್ಲ ಆಗ  ರಸ್ತೆಯಲ್ಲಿ  ಹೋಗುತ್ತಿದ್ದ  ಸಾರ್ವನಿಕರು  ಬಂದು ನಮ್ಮನ್ನು  ಕಾರಿನಿಂದ  ಹೊರಗೆ ಎಳೆದುಕೊಂಡರು.  ಈ  ಘಟನೆಯು  ಹವಮಾನ  ವೈಪರೀತ್ಯದಿಂದ  ಜೋರಾಗಿ  ಗಾಳಿ ಬೀಸಿ ಆಗ ರಸ್ತೆ ಪಕ್ಕದ ದೊಡ್ಡ ಆಲದ  ಮರ ಉರುಳಿ ಕಾರಿನ  ಮೇಲೆ  ಬಿದ್ದು,  ಸಂಭವಿಸಿರುತ್ತವೆ.  ಆದ್ದರಿಂದ  ತಾವುಗಳು  ಮುಂದಿನ  ಕ್ರಮ  ಜರುಗಿಸಲು ಕೋರಿ  ಇತ್ಯಾದಿಯಾದ  ಪಿರ್ಯಾದು ಅಂಶ.

ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ .ನಂ. 81/2017 ಕಲಂ 279, 337 ಪಿಸಿ

ದಿನಾಂಕ:20/04/2017 ರಂದು ತುಮಕೂರು ನಗರದ SMS ಆಸ್ಪತ್ರೆಯಲ್ಲಿ ಇರ್ಫಾನ್ ಸಾಬ್ ಬಿನ್ ಮಹಮ್ಮದ್ ಸಾಬ್ ರವರ ನೀಡಿದ ಹೇಳಿಕೆಯ ಅಂಶವೇನೆಂದರೆ, ಈ ದಿನ ದಿನಾಂಕ:20/04/2017 ರಂದು ನಾನು, ನನ್ನ ಹೆಂಡತಿ ಬಿಬಿ ಆಯಿಷಾ, ನನ್ನ ಮಗ ಮಹಮ್ಮದ್ ರಿಯಾನ್ ಹಾಗೂ ನನ್ನ ತಮ್ಮನ ಮಗಳು ಜಾಕಿರುನ್‌ಬಿ ರವರೊಂದಿಗೆ ತುರುವೆಕೆರೆಗೆ ಹೋಗಲು KA-06-E-1524ನೇ ದ್ವಿಚಕ್ರ ವಾಹನದಲ್ಲಿ ತುಮಕೂರಿನಿಂದ ಹೆಗ್ಗೆರೆ ಮಾರ್ಗವಾಗಿ ಆಲ್ ಕರ್ನಾಟಕ ಇಂಜಿನಿಯರಿಂಗ್ ವರ್ಕ್‌ ಶಾಪ್ ಮುಂಭಾಗ ಹೋಗುತ್ತಿರುವಾಗ್ಗೆ ತುಮಕೂರು ಕಡೆಯಿಂದ ಬಂದ KA-06-M-4850ನೇ ಕಾರಿನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ನನ್ನ ಪಕ್ಕಕ್ಕೆ ಬಂದು ಏಕಾಏಕಿ ಬ್ರೇಕ್ ಹಾಕಿ ನನ್ನ ವಾನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಾಡಿ ಸಮೇತ ಕೆಳಕ್ಕೆ ಬಿದ್ದೆವು. ನನ್ನ ವಾಹನವು ಜಖಂಗೊಂಡು ನನಗೆ ಬಲಗಾಲಿಗೆ, ಬಲಗೈಗೆ, ನನ್ನ ಹಿಂಬದಿಯಲ್ಲಿ ಕುಳಿತಿದ್ದ ನನ್ನ ಹೆಂಡತಿಗೆ ತಲೆಗೆ, ಮೈಕೈಗೆ, ಮಗನಿಗೆ ಬಲಕಣ್ಣಿನ ಹತ್ತಿರ, ಬಲಕೆನ್ನೆಗೆ, ಬಲಗಾಲಿಗೆ ರಕ್ತಗಾಯವಾಗಿರುತ್ತೆ. ಜಾಕಿರುನ್‌ಬಿಗೆ ತಲೆಗೆ, ಬಲಕೈಗೆ, ಮುಖಕ್ಕೆ ತೀವ್ರಸ್ವರೂಪದ ರಕ್ತಗಾಯವಾಗಿರುತ್ತೆ. ಅಷ್ಟರಲ್ಲಿ ಅಲ್ಲಿಗೆ ಬಂದ ಇಮ್ರಾನ್ ರವರು ನಮ್ಮಗಳನ್ನು ಪ್ರಥಮ ಚಿಕಿತ್ಸೆಗಾಗಿ ತುಮಕೂರಿನ ಬಿ ಹೆಚ್ ರಸ್ತೆಯಲ್ಲಿರುವ SMS ಆಸ್ಪತ್ರೆಗೆ ಯಾವುದೋ ಒಂದು ಆಟೋದಲ್ಲಿ ಕರೆದುಕೊಂಡು ಬಂದು ಸೇರಿಸಿದರು ನಾವುಗಳೆಲ್ಲರು ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುತ್ತೇವೆ. ಆದ್ದರಿಂದ ಮೇಲ್ಕಂಡ ಕಾರಿ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ನೀಡಿದ ಹೇಳೀಕೆಯನ್ನು ಪಡೆದುಕೊಂಡು ವಾಪಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಿದೆ.

ಹೆಬ್ಬೂರು ಪೊಲೀಸ್ ಠಾಣಾ ಮೊ.ನಂ.66/2017 ಕಲಂ 392 ಐಪಿಸಿ

ದಿನಾಂಕ:20-04-2017 ರಂದು ಮಧ್ಯಾಹ್ನ 3-30 ಗಂಟೆಗೆ ಪಿರ್ಯಾದಿಯಾದ ಮಂಗಳಗೌರಮ್ಮ ಕೋಂ ಹೆಚ್,ಆರ್‌,ರೇಣುಕಪ್ಪ, 63 ವರ್ಷ, ಲಿಂಗಾಯಿತರು, ಗೃಹಿಣಿ, ಎಸ್,ಎನ್‌,ಪಾಳ್ಯ, ಹೆಬ್ಬೂರು, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿ ನೀಡಿದ ಟೈಪ್ ಮಾಡಿಸಿದ ದೂರಿನ ಅಂಶವೇನೆಂಧರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ಹೆಬ್ಬೂರಿನ ಬಸ್‌ ನಿಲ್ದಾಣದಲ್ಲಿ ನಮ್ಮ ಬಾಬ್ತು ಪ್ರಾವಿಜನ್‌ ಸ್ಟೋರ್ಸ್‌‌ ಇರುತ್ತೆ. ದಿನಾಂಕ:20-04-2017 ರಂದು ಅಂದರೆ ಇದೇ ದಿವಸ ನಾನು ಮದ್ಯಾಹ್ನ ಸುಮಾರು 12-30 ಗಂಟೆ ಸಮಯದಲ್ಲಿ ನಾನು ಎಸ್,ಎನ್‌,ಪಾಳ್ಯದಿಂದ ಹೆಬ್ಬೂರಿನಲ್ಲಿರುವ ಶ್ರೀ ವೀರಭದ್ರಸ್ವಾಮಿ ದೇವಸ್ಥಾನಕ್ಕೆ ಹೋಗಲೆಂದು ಎಸ್,ಎನ್‌,ಪಾಳ್ಯದಿಂದ ಹೆಬ್ಬೂರಿಗೆ ನಡೆದುಕೊಂಡು ಬರುತ್ತಿರುವಾಗ್ಗೆ, ಕುಣಿಗಲ್‌ ಕಡೆಯಿಂದ ತುಮಕೂರು ಕಡೆಗೆ ಹೋಗಲು ಬಂದು ಒಂದು ಕಾರಿನ ಚಾಲಕ ತನ್ನ ಕಾರನ್ನು ನನ್ನ ಬಳಿ ನಿಲ್ಲಿಸಿ, ನನ್ನನ್ನು ಪರಿಚಯಸ್ಥರಂತೆ ಮಾತನಾಡಿಸಿ ನೀವು ಎಲ್ಲಿಗೆ ಹೋಗಬೇಕು ಎಂತಾ ಕೇಳಿದನು. ಆಗ ನಾನು ಬಸ್‌ಸ್ಟ್ಯಾಂಡ್‌ಗೆ ಹೋಗಬೇಕು ಎಂತಾ ಹೇಳಿದ್ದಕ್ಕೆ, ನಿಮ್ಮನ್ನು ಬಸ್‌‌ಸ್ಟ್ಯಾಂಡ್‌ಗೆ ಬಿಡುವುದಾಗಿ ಹೇಳಿದನು. ನಂತರ ನಾನು ಸದರಿ ಕಾರನ್ನು ಹತ್ತಿಕೊಂಡು ಹೆಬ್ಬೂರಿನ ಬಸ್‌‌ಸ್ಟ್ಯಾಂಡ್‌‌ನಲ್ಲಿರುವ ನಮ್ಮ ಅಂಗಡಿಯ ಬಳಿ ಬಂದಾಗ ಇದೇ ನಮ್ಮ ಪ್ರಾವಿಜನ್‌ ಸ್ಟೋರ್‌, ಇಲ್ಲೇ ನನ್ನನ್ನು ಇಳಿಸಿ ಎಂತಾ ಕೇಳಲಾಗಿ ಸದರಿ ಕಾರಿನ ಚಾಲಕನು ತನ್ನ ಕಾರನ್ನು ಜೋರಾಗಿ ಚಾಲನೆ ಮಾಡಿಕೊಂಡು ಮುಂದೆ ಹೋಗುತ್ತಿದ್ದಂತೆ ನಿಮ್ಮ ತಂದೆಯವರು ನನಗೆ ತುಂಬಾ ಪರಿಚಯಸ್ಥರು, ನೀವು ನನ್ನನ್ನು ನೋಡಿಲ್ಲವೇ ಎಂತಾ ನನ್ನನ್ನು ಮಾತನಾಡಿಸಿ, ನನ್ನ ಕುಟುಂಬಸ್ಥರು ನಿಮಗೆ ತುಂಬಾ ಪರಿಚಯ, ನಿಮ್ಮನ್ನು ನಮ್ಮ ಕುಟುಂಬದವರ ಜೊತೆಯಲ್ಲಿ ನಾನು ದೇವಸ್ಥಾನಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿ ನನ್ನನ್ನು ನಿಡುವಳಲು ಗ್ರಾಮದಿಂದ ಮುಂದೆ ಕರೆದುಕೊಂಡು ಹೋಗಿ ಚಿಕ್ಕಹಳ್ಳಿ ಕ್ರಾಸ್‌ ಬಳಿ ಇರುವ ಮಾವಿನ ತೋಟದೊಳಗೆ ನನ್ನನ್ನು ಕಾರಿನಿಂದ ಕೆಳಗೆ ಇಳಿಸಿ ಮದ್ಯಾಹ್ನ ಸುಮಾರು 01-10 ಗಂಟೆ ಸಮಯದಲ್ಲಿ ನನ್ನ ಕತ್ತಿನಲ್ಲಿದ್ದ ಸುಮಾರು 40 ಗ್ರಾಂ ತೂಕದ ಮಾಂಗಲ್ಯ ಚೈನ್‌ ಅನ್ನು ಕಿತ್ತುಕೊಂಡಿದ್ದು, ಆಗ ನನ್ನ ಎಡಬಾಗದ ಕತ್ತಿನ ಹತ್ತಿರ ಚೈನ್‌ ಎಳೆದಾಗ ಗಾಯವಾಯಿತು. ನಂತರ ಸದರಿ ಆಸಾಮಿ ನನ್ನ ತಲೆಯ ಜುಟ್ಟನ್ನು ಹಿಡಿದು ತಿರುಗಿಸಿ ಕೆಳಗೆ ಬೀಳಿಸಿ ನಂತರ ಸದರಿ ಆಸಾಮಿಯು ತನ್ನ ಕಾರನ್ನು ಸ್ಥಳದಿಂದ ತೆಗೆದುಕೊಂಡು ಹೊರಟು ಹೋದನು. ನಂತರ ನಾನು ಕೂಗಾಡಿಕೊಂಡು ಸುಮಾರು 100 ಮೀಟರ್‌ ಅಂತರದಲ್ಲಿದ್ದ ಚಿಕ್ಕಹಳ್ಳಿ-ನಿಡುವಳಲು ರಸ್ತೆಗೆ ಬಂದು ಅಲ್ಲಿಗೆ ಬಂದ ಯಾವುದೋ ಒಂದು ಆಟೋದಲ್ಲಿ ಹೆಬ್ಬೂರಿಗೆ ಬಂದು ಸದರಿ ವಿಚಾರವನ್ನು ಅಂಗಡಿಯಲ್ಲಿದ್ದ ನನ್ನ ಗಂಡನಾದ ರೇಣುಕಪ್ಪ ರವರಿಗೆ ತಿಳಿಸಿದ್ದು, ಆಗ ಅಂಗಡಿಗೆ ಬಂದ ನನ್ನ ಮಗನಿಗೂ ಸಹ ವಿಚಾರ ತಿಳಿಸಿದ್ದು, ನಂತರ ನನ್ನ ಮಗ ನಾಗರಾಜು ರವರು ನನ್ನನ್ನು ಹೆಬ್ಬೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದನು.  ಆದ್ದರಿಂದ ನನ್ನ ಮಾಂಗಲ್ಯ ಸರವನ್ನು ಸುಲಿಗೆ ಮಾಡಿ ಕಿತ್ತುಕೊಂಡು ಹೋದ ಸದರಿ ಆಸಾಮಿಯ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಸಿ ಎಸ್ ಪುರ ಪೊಲೀಸ್‌ ಠಾಣೆ  ಠಾಣಾ ಮೊನಂ 46/2017 ಕಲಂ  279 ಐ.ಪಿಸಿ

ದಿನಾಂಕ=20/04/2017 ರಂದು ಸಂಜೆ 6-45 ಗಂಟೆಗೆ  ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ  ಅಂಶವೇನೆಂದರೆ , ಗುಬ್ಬಿ ತಾ. ಹಿಂಡಿಸ್ಕೆರೆ ಗ್ರಾಮದ  ಸಾರ್ವಜನಿಕ ರಸ್ತೆಯಲ್ಲಿ  ದಿನಾಂಕ=19/4/17 ರಂದು ರಾತ್ರಿ  8-30 ಗಂಟೆಗೆ  ಪಿರ್ಯಾದಿ ಬಾಬ್ತು  ಕೆ.ಎ 06 ಡಿ 9474 ನೇ ಕಾರನಲ್ಲಿ  ಕೆ,ಹರಿವೇಸಂದ್ರದಿಂದ  ಸಿ ಎಸ್ ಪುರಕ್ಕೆ  ಕಾರನ್ನು ರಘುರವರು ಚಾಲನೆಮಾಡಿಕೊಂಡು  ಪಿರ್ಯಾದಿ & ಮಾದೇಶ ಎಂಬುವರೊಂದಿಗೆ ಬರುತ್ತಿರುವಾಗ್ಗೆ  ಚಾಲಕ ರಘು ಕಾರನ್ನು ಅತಿವೇಗ & ಅಜಾಗರೂಕತೆ ಯಿಂದ  ಚಾಲನೆಮಾಡಿದ್ದು , ಕಾರು ಪಲ್ಟಿಯಾಗಿ ಜಖಂ ಆಗಿರುತ್ತೆ, ಯರಿಗೂ ಪೆಟ್ಟಾಗಿರುವುದಿಲ್ಲವೆಂತಾ  ಇತ್ಯಾದಿ

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ-62/2017 ಕಲಂ: 279,304 (ಎ) ಐ.ಪಿ.ಸಿ

ದಿನಾಂಕ; 20/04/2017 ರಂದು ಸಂಜೆ 04-45 ಗಂಟೆಗೆ ಪಿರ್ಯಾದಿ ಬಸವಾರಾಜು ಬಿ.ಎನ್ ಬಿನ್  ಲೇಟ್ ನರಸಯ್ಯ, 52 ವರ್ಷ, ಪರಿಶಿಷ್ಟ ಜಾತಿ, ಎಲ್.ಐ.ಸಿ ಏಜೆಂಟ್, ನಂ-1751/1 5ನೇ ಕ್ರಾಸ್, ಭೋವಿ ಕಾಲೋನಿ, ಗಾಂಧಿನಗರ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ: 17/04/2017 ರಂದು ನಮ್ಮ ಚಿಕ್ಕಪ್ಪನಾದ ಶಿವರಾಮಯ್ಯನವರು ನಮ್ಮ ಸ್ವಂತ ಊರಿನಲ್ಲಿ ಜಾತ್ರೆ ಇದ್ದುದರಿಂದ ದೇವಸ್ಥಾನಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ರಾತ್ರಿ 8-00 ಗಂಟೆಯ ಸಮಯದಲ್ಲಿ ವಾಪಸ್ ತಿಪಟೂರಿಗೆ ಬರಲು ತಿಪಟೂರು ಟೌನ್ ರೇಣುಕಾ ಡಾಬಾ ಸಮೀಪ ಎನ್.ಹೆಚ್ -206 ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ ಕೆ.ಎ-44 ಕ್ಯೂ-7099 ನೇ ವಾಹನದ ಚಾಲಕ ತನ್ನ ಬೈಕನ್ನು ಅತಿಜೋರಾಗಿ ಚಲಾಯಿಸಿಕೊಂಡು ಬಂದು ನನ್ನ ಚಿಕ್ಕಪ್ಪನವರಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದು, ಕಣ್ಣಾರೆ ಕಂಡ ಕೋಟನಾಯಕನಹಳ್ಳಿ ಭಾಸ್ಕರ್ ಮತ್ತು ಬೆನ್ನಾಯಕನಹಳ್ಳಿ ಸದಾಶಿವಯ್ಯನವರು 108 ಆಂಬುಲೆನ್ಸ್ ನಲ್ಲಿ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿರುವುದಾಗಿ ವಿಚಾರವನ್ನು ತಿಳಿಸಿದ್ದು, ನಾವು ಕೂಡಲೇ ಹೋಗಿ ನೋಡಲಾಗಿ ನಮ್ಮ ಚಿಕ್ಕಪ್ಪನವರಿಗೆ ತಲೆಗೆ, ಕೈಕಾಲುಗಳಿಗೆ ಪೆಟ್ಟು ಬಿದ್ದು ರಕ್ತಗಾಯವಾಗಿತ್ತು. ನಮ್ಮ ಚಿಕ್ಕಪ್ಪನವರಿಗೆ ಚಿಕಿತ್ಸೆ ಕೊಡಿಸುವ ತರಾತುರಿಯಲ್ಲಿ ಠಾಣೆಗೆ ದೂರು ನೀಡಿರುವುದಿಲ್ಲ. ಚಿಕಿತ್ಸೆ ಪಡೆಯುತ್ತಿದ್ದ ನಮ್ಮ ಚಿಕ್ಕಪ್ಪ ಶಿವರಾಮಯ್ಯನವರಿಗೆ ಚಿಕಿತ್ಸೆ ಫಲಕಾರಿಯಾಗದೇ ಈ ದಿನ ದಿನಾಂಕ: 20/04/2017 ರಂದು ಮಧ್ಯಾಹ್ನ 3-00 ಗಂಟೆಯ ಸಮಯದಲ್ಲಿ ಮೃತಪಟ್ಟಿರುತ್ತಾರೆ. ಆದ್ದರಿಂದ ಅಪಘಾತ ಮಾಡಿ ನಮ್ಮ ಚಿಕ್ಕಪ್ಪನ ಸಾವಿಗೆ ಕಾರಣನಾದ ಕೆ.ಎ-44 ಕ್ಯೂ-7099 ನೇ ವಾಹನದ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಈ ದಿನ ತಡವಾಗಿ ಬಂದು ದೂರು ನೀಡಿದ್ದು, ಪ್ರಕರಣ ದಾಖಲಿಸಿರುತ್ತೆ.

ಸಿ ಎಸ್ ಪುರ ಠಾಣಾ ಮೊನಂ 45/2017 ಕಲಂ  324  504 327 355    ರೆ/ವಿ  34 ಐ.ಪಿಸಿ

ದಿನಾಂಕ=20/04/2017 ರಂದು ಸಂಜೆ 6-00 ಗಂಟೆಗೆ  ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ  ಅಂಶವೇನೆಂದರೆ , ಗುಬ್ಬಿ ತಾ. ಬಿಟ್ಟಗೊಂಡನಹಳ್ಳಿಯಲ್ಲಿ  ದಿನಾಂಕ=18/4/2017 ರಂದು ರಾತ್ರಿ ಸುಮಾರು 11-30 ಗಂಟೆಗೆ ಗ್ರಾಮದಲ್ಲಿನ ಹಬ್ಬದ ಪ್ರಯುಕ್ತ ದೇವಸ್ಥಾನಕ್ಕೆ  ಪಿರ್ಯಾದುದಾರರು ಹೋಗಿದ್ದು ,ಆಗ ಆರೋಪಿ ಮಧು ಬಿನ್ ಬಿ.ಎಲ್  ನರಸಿಂಹಮೂರ್ತಿ ಇವರು ಏಕಾ-ಏಕಾ ಅವಾಚ್ಯಾಗಿ ನಿಂದಿಸಿ ಕಲ್ಲಿನಿಂದ ಎಡಕಣ್ಣಿಗೆ ಹೊಡೆದು , ನಂತರ ದೊಣ್ಣೆಯಿಂದ ಹೊಡೆದಿರುತ್ತಾರೆ, ಪಿರ್ಯಾದಿ ಬಳಿ ಇದ್ದ 50000 ರೂ ಗಳನ್ನು ಮಧು & ಆತನ ತಂದೆ ನರಸಿಂಹಮೂರ್ತಿ ದೋಚಿರುತ್ತಾರೆ, ಶೂ ಕಾಲಿನಿಂದ ಪಿರ್ಯಾದಿಗೆ ವದ್ದಿರುತ್ತಾರೆ , ಶ್ರೀಧರ್ & ಮಂಜುಳಾದೇವಿ , ವೆಂಕಟೇಗೌಡ ರವರು ಪಿರ್ಯಾದಿಯನ್ನು ಆಸ್ಪತ್ರೆಗೆ ಸೇರಿಸಿರುತ್ತಾರೆ. ಈ ಘಟನೆಗೆ ಕಾರಣ  ಬಿ.ಎಲ್ ನರಸಿಂಹಮೂರ್ತಿಯ  ಚೀಟಿ & ಬಡ್ಡಿ ವ್ಯವಹಾರವೇ ಕಾರಣವಾಗಿರುತ್ತೆ,  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಂದು ದೂರು ನೀಡಿರುತ್ತಾರೆಂತಾ ಇತ್ಯಾದಿ

ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ .ನಂ. 80/2017 ಕಲಂ 279, 337 ಪಿಸಿ

ದಿನಾಂಕ:20/04/2017 ರಂದು ಮದ್ಯಾಹ್ನ 3-00 ಗಂಟೆಗೆ ತುಮಕೂರು ತಾ ಕಸಬಾ ಹೋಬಳಿ, ಅಂತರಸನಹಳ್ಳಿ ಗ್ರಾಮದ ವಾಸಿ ವೈ.ಮಹದೇವ ಬಿನ್ ಯಲ್ಲಯ್ಯ ರವರು ನೀಡಿದ ದೂರಿನ ಅಂಶವೇನೆಂದರೆ ದಿನಾಂಕ;16-04-2017 ರಂದು ರಾತ್ರಿ ಸುಮಾರು 7-45 ಗಂಟೆಯಲ್ಲಿ ಯಲ್ಲಮ್ಮ ದೇವಸ್ಥಾನಕ್ಕೆ ಹೋಗಲು ಅಂತರಸನಹಳ್ಳಿಯ ಬಿಸ್ಮಿಲ್ಲಾ ಎಂಟರ್ ಪ್ರೈಸಸ್ ಮುಂಭಾಗ ರಸ್ತೆಯ ಎಡ ಭಾಗದಲ್ಲಿ ರಸ್ತೆ ದಾಟಲು ನಾನು ನನ್ನ ಮಗ ಸಂದೀಪ್ ಹಾಗೂ ನಮ್ಮ ತಾಯಿ ಪೆದ್ದಕ್ಕ ನಿಂತಿದ್ದಾಗ ಯಲ್ಲಾಪುರದ ಕಡೆಯಿಂದ KA-06-EV-2569 ನೇ ಪಲ್ಸರ್ ದ್ವಿಚಕ್ರ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ರಸ್ತೆ ಎಡ ಬದಿಯಲ್ಲಿ ನಿಂತಿದ್ದ ನಮ್ಮ ತಾಯಿ ಪೆದ್ದಕ್ಕನಿಗೆ ಅಪಘಾತ ಉಂಟು ಮಾಡಿದ ಪರಿಣಾಮ ನಮ್ಮ ತಾಯಿ ಪೆದ್ದಕ್ಕನಿಗೆ ಬಲ ತಲೆಗೆ, ಬಲ ಮಂಡಿಗೆ ಹಾಗೂ ಬಲ ಬೆನ್ನಿಗೆ ಪೆಟ್ಟು ಬಿದ್ದು ರಕ್ತಗಾಯವಾಯಿತು ತಕ್ಷಣ ಅಲ್ಲೇ ಇದ್ದ ನಾನು ಮತ್ತು ಸಂದೀಪ ನಮ್ಮ ತಾಯಿ ಪೆದ್ದಕ್ಕ ಕೋಂ ಯಲ್ಲಯ್ಯ, 65ವರ್ಷ, ಭೋವಿ ಜನಾಂಗ, ಅಂತರಸನಹಳ್ಳಿ ರವರನ್ನು ಯಾವುದೋ ಆಟೋದಲ್ಲಿ ಕರೆದುಕೊಂಡು ಶ್ರೀದೇವಿ ಆಸ್ಪತ್ರೆಗೆ ಬಂದು ಚಿಕಿತ್ಸೆ ದಾಖಲಿಸಿ ನಮ್ಮ ತಾಯಿಯನ್ನು ಯಾರು ನೋಡಿಕೊಳ್ಳಲು ಇಲ್ಲದ ಕಾರಣ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದೇನೆ ಸದರಿ ಅಪಘಾತಕ್ಕೆ ಕಾರಣನಾದ KA-06-EV-2569 ನೇ ಪಲ್ಸರ್ ದ್ವಿಚಕ್ರ  ವಾಹನದ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿದೆ


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 92 guests online
Content View Hits : 231893