ಮಿಡಿಗೇಶಿ ಪೊಲೀಸ್ ಠಾಣಾ ಯು.ಡಿ.ಆರ್.ನಂ.03/2017, ಕಲಂ: 174(ಸಿ) ಸಿ.ಆರ್.ಪಿ.ಸಿ.
ದಿನಾಂಕ:11/04/2017 ರಂದು ರಾತ್ರಿ ಸುಮಾರು 07:45 ಗಂಟೆಗೆ ಪಿರ್ಯಾದಿ ಗೋವಿಂದಪ್ಪ ಬಿನ್ ವೆಂಕಟರವಣಪ್ಪ, 50 ವರ್ಷ, ಭೋವಿ ಜನಾಂಗ, ಜಿರಾಯ್ತಿ, ಶ್ರೀನಿವಾಸಪುರ ಗ್ರಾಮ, ಐ.ಡಿ.ಹಳ್ಳಿ ಹೋಬಳಿ, ಮಧುಗಿರಿ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆಯ ಅಂಶವೇನೆಂದರೆ, ನಮ್ಮ ತಂದೆಯವರಿಗೆ ನಾವು 05 ಜನ ಮಕ್ಕಳಿದ್ದು ಅದರಲ್ಲಿ 03 ಜನ ಗಂಡು ಮಕ್ಕಳು, ಇಬ್ಬರು ಹೆಣ್ಣುಮಕ್ಕಳಿದ್ದು, ಅದರಲ್ಲಿ ನಾನು ಹಿರಿಯ ಮಗನಾಗಿದ್ದು, ನಮ್ಮ ತಂದೆಯವರಿಗೆ ಒಬ್ಬ ಅಣ್ಣನಿದ್ದು ಅವರ ಹೆಸರು ವೆಂಕಟಪತಿಯಾಗಿದ್ದು, ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಇಬ್ಬರಿಗೂ ಮದುವೆಯಾಗಿದ್ದು, ದೊಡ್ಡಮಗಳಾದ ವೆಂಕಟಲಕ್ಷ್ಮಮ್ಮ ಎಂಬುವರ ಗಂಡ ಸುಮಾರು ವರ್ಷಗಳ ಹಿಂದೆ ಸಹಜವಾಗಿ ಮೃತಪಟ್ಟಿದ್ದು, ಅಂದಿನಿಂದಲೂ ವೆಂಕಟಲಕ್ಷ್ಮಮ್ಮ ಗಂಡ-ಮಕ್ಕಳಿಲ್ಲದೆ, ನಮ್ಮ ಗ್ರಾಮದಲ್ಲಿಯೇ ವಾಸವಾಗಿದ್ದಳು. ಆ ಸಮಯದಲ್ಲಿ ವೆಂಕಟಲಕ್ಷ್ಮಮ್ಮನ ತಂಗಿ ಹಾಗೂ ತಂಗಿಯ ಗಂಡನಾದ ತಿಮ್ಮಣ್ಣ ಮಕ್ಕಳೊಂದಿಗೆ ಆಗಾಗ ನಮ್ಮ ಗ್ರಾಮಕ್ಕೆ ಬಂದು ಹೋಗುತ್ತಿದ್ದಾಗ ತಂಗಿಯ ಗಂಡನಾದ ತಿಮ್ಮಣ್ಣನ ಜೊತೆಯಲ್ಲಿಯೇ ನಮ್ಮ ಗ್ರಾಮದಲ್ಲಿ ಇದ್ದಳು. ದಿನಾಂಕ:10/04/2017 ರಂದು ವೆಂಕಟಲಕ್ಷ್ಮಮ್ಮನಿಗೆ ವಾಂತಿ-ಬೇದಿಯಾಗಿ ಸುಸ್ತಾಗಿದ್ದಳು, ಮನೆಯಲ್ಲಿಯೇ ಮಲಗಿದ್ದಳು. ಆ ಸಮಯದಲ್ಲಿ ತಂಗಿಯ ಗಂಡನಾದ ತಿಮ್ಮಣ್ಣನು ಆಗಾಗ್ಗೆ ಮನೆಯ ಒಳಕ್ಕೆ ಹೋಗಿ ಬರುತ್ತಿದ್ದನು. ದಿನಾಂಕ:11/04/2017 ರಂದು ಸುಮಾರು 12:00 ಗಂಟೆಯ ಸಮಯದಲ್ಲಿ ತಿಮ್ಮಣ್ಣನು ತನ್ನ ಹೆಂಡತಿ ಮಕ್ಕಳಿಗೆ ಪೋನ್ ಮಾಡಿ ವೆಂಕಟಲಕ್ಷ್ಮಮ್ಮ ಹುಷಾರಿಲ್ಲದೆ ಸತ್ತು ಹೋಗಿರುತ್ತಾಳೆ ಬನ್ನಿ ಎಂದು ಪೋನ್ ಮಾಡುತ್ತಿರುವಾಗ್ಗೆ ನಾನು ಕೇಳಿಸಿಕೊಂಡು ಹೋಗಿ ನೋಡಿದಾಗ ನನ್ನ ದೊಡ್ಡಪ್ಪನ ಮಗಳಾದ ವೆಂಕಟಲಕ್ಷ್ಮಮ್ಮ ಸತ್ತು ಹೋಗಿದ್ದಳು. ಬಾಯಿಯಲ್ಲಿ ರಕ್ತ ಬರುವ ಹಾಗೆ ಕಾಣಿಸುತ್ತಿತ್ತು. ವೆಂಕಟಲಕ್ಷ್ಮಮ್ಮ ಹುಷಾರಿಲ್ಲದಾಗ ತಿಮ್ಮಣ್ಣನು ಆಸ್ಪತ್ರೆಗೆ ಕರೆದುಕೊಂಡು ಹೋಗದೆ, ಆಗಾಗ ಮನೆಯ ಒಳಗಡೆ ಹೋಗಿ ಬರುತ್ತಿದ್ದರಿಂದ ನಮ್ಮ ದೊಡ್ಡಮ್ಮನ ಮಗಳಾದ ವೆಂಕಟಲಕ್ಷ್ಮಮ್ಮಳ ಸಾವಿನ ಬಗ್ಗೆ ಅನುಮಾನವಿರುವುದರಿಂದ ತಾವುಗಳು ಸ್ಥಳಕ್ಕೆ ಬಂದು ಪರಿಶೀಲಿಸಿ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ಹೇಳಿಕೆಯ ಅಂಶವಾಗಿರುತ್ತೆ. ನನ್ನ ಅಕ್ಕ ವೆಂಕಟಲಕ್ಷ್ಮಮ್ಮನಿಗೆ ಸುಮಾರು 60 ವರ್ಷ ವಯಸ್ಸಾಗಿರುತ್ತೆ.
ವೈ ಎನ್ ಹೊಸಕೋಟೆ ಪೊಲೀಸ್ ಠಾಣಾ ಮೊ. ನಂ- 42/2017 ಕಲಂ: 4(1)4(1A) 21 MMDR ACT rW 379IPC
ದಿನಾಂಕ:11/04/2017 ರಂದು ಮದ್ಯಾಹ್ನ 1:00 ಗಂಟೆಗೆ ತಿರುಮಣಿ ವೃತ್ತದಲ್ಲಿ ವೃತ್ತ ನಿರೀಕ್ಷಕರಾದ ಜಿ.ಟಿ ಶ್ರೀಶೈಲಮೂರ್ತಿ ರವರು ನೀಡಿದ ವರದಿ ಅಂಶವೇನೆಂದರೆ ದಿನಾಂಕ:-11/04/2017 ರಂದು ಮದ್ಯಾಹ್ನ 12:30 ಗಂಟೆ ಸಮಯದಲ್ಲಿ ವೈ ಎನ್ ಹೊಸಕೋಟೆ ಪೋಲಿಸ್ ಠಾಣಾ ಸರಹದ್ದು ಗ್ರಾಮ ಭೇಟಿ ಕುರಿತು ಸಿದ್ದಾಪುರ ರಸ್ತೆಯಲ್ಲಿ ಹೋಗುತ್ತಿರುವಾಗ್ಗೆ ಒಬ್ಬ ಆಸಾಮಿ ಟ್ರಾಕ್ಟರ್ ನಲ್ಲಿ ಮರಳುತುಂಬಿಕೊಂಡು ಟ್ರಾಕ್ಟರ್ ಚಲಾಯಿಸಿಕೊಂಡು ಬರುತ್ತಿದ್ದು ನಾವು ಅಲ್ಲಿಗೆ ಹೋದಾಗ ಸಮಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಮರಳು ತುಂಬಿದ ಟ್ರ್ಯಾಕ್ಟರ್ ಅನ್ನು ರಸ್ತೆಯಲ್ಲಿ ಬಿಟ್ಟು ಟ್ರಾಕ್ಟರ್ ಚಾಲಕ ಓಡಿ ಹೋಗಿದ್ದು ನಂತರ ನಾನು ಟ್ರ್ಯಾಕ್ಟರ್ ಅನ್ನು ಪರಿಶೀಲಿಸಲಾಗಿ ಕೆಂಪು ಬಣ್ಣದ ಮಹೀಂದ್ರ ಟ್ರ್ಯಾಕ್ಟರ್ ಆಗಿದ್ದು , ನೊಂದಣಿ ಸಂಖ್ಯೆ ಇರುವುದಿಲ್ಲ ಇದರ ಇಂಜಿನ್ ಕೆಂಪು ಬಣ್ಣದ್ದಾಗಿದ್ದು ಹಿಂಭಾಗದ ಟ್ರಾಲಿ ನೀಲಿ ಬಣ್ಣದ್ದಾಗಿರುತ್ತೆ. ಇದರ ಇಂಜಿನ್ ಮುಂಭಾಗ ಮತ್ತು ಟ್ರಾಲಿ ಹಿಂಭಾಗ ನಂಬರ್ ಬರೆಸಿರುವುದಿಲ್ಲ . ಯಾವುದೇ ರಿಜಿಸ್ಟರ್ ನಂಬರ್ ಬರೆಸಿರುವುದಿಲ್ಲ ಟ್ರ್ಯಾಕ್ಟರ್ ಇಂಜಿನ್ ಮೇಲೆ ZKBT00349 ಎಂತ ಚಾರ್ಸಿ . ನಂ MEWCO3044047RS ಎಂದು ಬರೆದಿರುತ್ತೆ. ಟ್ರಾಕ್ಟರ್ ಮಾಲೀಕನ ಹೆಸರುವಿಳಾಸ ತಿಳಿಯಲಾಗಿ ಮಹಾಪಾಲ ವೈ ಎನ್ ಹೊಸಕೋಟೆ ಟೌನ್ ಎಂತ ತಿಳಿದು ಬಂದಿರುತ್ತದೆ . ಟ್ರಾಕ್ಟರ್ ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ . ಯಾವುದೇ ಪರವಾನಿಗೆ ಇಲ್ಲದೆ ಕಳ್ಳತನದಿಂದ ಮರಳು ತುಂಬಿಕೊಂಡು ಹೋಗುತಿದ್ದ ಟ್ರ್ಯಾಕ್ಟರ್ ಅನ್ನು ವಶಕ್ಕೆ ಪಡೆದುಕೊಂಡು ಪಿ.ಸಿ: 307 ಬಸವರಾಜು ಸಜ್ಜನ್ ರವರ ಮುಖಾಂತರ ವೈ ಎನ್ ಹೊಸಕೋಟೆ ಪೋಲಿಸ್ ಠಾಣೆಯ ಬಳಿ ತೆಗೆದುಕೊಂಡು ಬಂದು ನಿಮ್ಮ ಮುಂದೆ ಹಾಜರುಪಡಿಸಿದ್ದು ಮೇಲ್ಕಂಡ ಚಾಲಕ ಮತ್ತು ಟ್ರ್ಯಾಕ್ಟರ್ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಿ ನೀಡಿದ ವರದಿಯನ್ನು ಪಡೆದು ಕೇಸು ದಾಖಲಿಸಿರುತ್ತದೆ.
|