lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ 16.01.2018 ವೇಶ್ಯಾವಾಟಿಕೆ ದಂಧೆಗೆ ಮಹಿಳೆಯರ ಸಾಗಾಣಿಕೆ... >> :  ಪತ್ರಿಕಾ ಪ್ರಕಟಣೆ  : ತುಮಕೂರು ನಗರದ ದೊಂತಿ ಏಜೇನ್ಸಿಯಲ್ಲಿ ಸಿಗರೇಟ್ ಕಳವು ಮಾಡಿದ... >> ಠಾಣಾ  ದಾಖಲಾತಿಗಳ ನಿರ್ವಹಣೆ ಕಾರ್ಯಗಾರ ದಿನಾಂಕ 13/1/2018           >> -:  ಪತ್ರಿಕಾ ಪ್ರಕಟಣೆ.  :-   ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 301/2017 ಕಲಂ 457, 380... >> >> -: ದಿನಾಂಕ : 19 -12 -17  :- :  ಪತ್ರಿಕಾ ಪ್ರಕಟಣೆ : ಕೋಮು ಪ್ರಚೋದನಕಾರಿ ಹೇಳಿಕೆಗಳ... >> ಪತ್ರಿಕಾ ಪ್ರಕಟಣೆ :: ದಿನಾಂಕ 12-12-2017  :: ತುಮಕೂರು ನಗರದಲ್ಲಿ ಮೂಲ ಆ.ಐ. ಸ್ಮಾಟ್‌ ಕಾರ್ಡಗಳ... >> ಪತ್ರಿಕಾ ಪ್ರಕಟಣೆ : ದಿನಾಂಕ:-05-12-2017 : ಚಾಳಿಬಿದ್ದ ಅಪರಾಧಿಗಳಿಂದ ಸುಮಾರು ಒಟ್ಟು 5, 00, 100/- ರೂ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ   ತುಮಕೂರು ನಗರದಲ್ಲಿ ಒಂಟಿಯಾಗಿ... >>   New BEAT BEST STAFF AND BEST CRIME DETECTION BEST STAFF >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< April 2017 >
Mo Tu We Th Fr Sa Su
          1 2
3 4 5 6 7 8 9
10 12 13 14 15 16
17 18 19 20 21 22 23
24 25 26 27 28 29 30
Tuesday, 11 April 2017
Crime Incidents 11-04-17

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ. 46/2017 ಕಲಂ 323, 324, 504, 506 ರೆ/ವಿ 149 ಐಪಿಸಿ.

ದಿನಾಂಕ:11/04/2017 ರಂದು 00-45 ರಿಂದ 1-15 ಗಂಟೆಯವರೆಗೆ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಪಿರ್ಯಾದಿ ದಾಕ್ಷಾಯಿಣಿ ಕೋಂ ಪ್ರದೀಪ, 24ವರ್ಷ, ಲಿಂಗಾಯ್ತರು, ಗೃಹಿಣಿ, ಬನ್ನಿಹಳ್ಳಿ ಕಸಬಾ ಹೋಬಳಿ, ತಿಪಟೂರು ತಾಲ್ಲೋಕ್ ರವರು ನೀಡಿದ ಹೇಳಿಕೆಯ ಅಂಶವೇನೆಂದರೆ   ದಿನಾಂಕ:10/04/2017 ರಂದು ರಾತ್ರಿ 10-30 ಗಂಟೆಗೆ ನಾನು ನಮ್ಮ ಮನೆಯ ಹತ್ತಿರ ಇರುವಾಗ  ರಾಮಚಂದ್ರಪುರ ಗ್ರಾಮದ ಬನ್ನಿ ಮಹಾಂಕಾಳಿ ಎಂಬ ಗ್ರಾಮ ದೇವತೆ ಗ್ರಾಮಕ್ಕೆ ಮೆರವಣಿಗೆ ಬಂದಿದ್ದು ನಮ್ಮ ಮನೆಯ ಮುಂದೆ ದೇವರು ಹೋಗಿದ್ದು ಆ ಸಮಯದಲ್ಲಿ ನಮ್ಮ ಯಜಮಾನರನ್ನು ಜಾತ್ರೆಗೆ ಹಣ ಕೊಟ್ಟಿಲ್ಲ ಎಂದು ಯಾರೋ ಗಲಾಟೆ ಮಾಡಿಕೊಂಡ ವಿಚಾರಕ್ಕೆ ನಮ್ಮ ಮನೆಯ ಬಳಿ ನಮ್ಮ ಗ್ರಾಮದ ಬಸವಲಿಂಗಪ್ಪ, ಮೆಂಬರ್ ಷಡಾಕ್ಷರಿ, ವಾಟರ್ ಮೆನ್ ಸುಧಾಕರ ಹಾಗೂ ಷಣ್ಮುಖಪ್ಪ, ಎಂಬುವರು ಬಂದು ಜಗಳ ಮಾಡಿಕೊಳ್ಳುತ್ತಿದ್ದು ನಮ್ಮ ಯಜಮಾನರನ್ನು ಬಾಯಿಗೆ ಬಂದಂತೆ ಸದರಿ ವಿಚಾರದಲ್ಲಿ ಬೈದು ಕೆಳಕ್ಕೆ ಕೆಡವಿ ಹೊಡೆಯುತ್ತಿರುವಾಗ ಅಲ್ಲೆ ಇದ್ದ ನಾನು ಬಿಡಿಸಕೊಳ್ಳಲು ಹೋದಾಗ ಸುಧಾಕರನ ಅಕ್ಕ ಗಂಗಾಮಣಿ ಎಂಬುವರು ನನ್ನನ್ನು ಹಿಡಿದುಕೊಂಡು ತಲೆಗೆ ಬಲವಾದ ಏಟನ್ನು ಸ್ಟೀಲಿನ ಬ್ಯಾಟರಿಯಿಂದ ಹೊಡೆದಳು ನಾನು ಕೆಳಕ್ಕೆ ಬಿದ್ದಾಗ ಗಂಗಾಮಣಿ ಮತ್ತು ರಾಧ ಕೋಂ ಸುಧಾಕರ ಎಂಬುವರು ಕಾಲಿನಿಂದ ಒದ್ದು ಗಂಗಾಮಣಿ ನನ್ನ ಬಲಗೈನ ಮುಂಗೈ ಹತ್ತಿರ ಚಾಕುವಿನಿಂದ ಗೀರಿ ನಾನು ಕಿರುಚಾಡಿದೆ. ಆಗ ನಮ್ಮ ಗ್ರಾಮದ ಮಧು ಬಿನ್ ಕಾಳಪ್ಪ, ಮತ್ತು ಶಶಿಧರ ಬಿನ್ ಉಮಾಪತಿರವರು ಜಗಳ ಬಿಡಿಸಿ ಸಮಾಧಾನ ಪಡಿಸಿದರು, ನಂತರ  ಒಂದು ಗತಿ ಕಾಣಿಸುತ್ತೇನೆಂದು ಬೆದರಿಕೆ ಹಾಕಿ ಚಾಕುವನ್ನು ಕತ್ತಲಿನಲ್ಲಿ ಅಲ್ಲೆ ಎಲ್ಲೊ ಎಸೆದು ಹೊರಟು ಹೋದರು, ನಂತರ ನನ್ನನ್ನು ಮತ್ತು ನನ್ನ ಗಂಡ ಪ್ರದೀಪನನ್ನು ಮಧು ಮತ್ತು ಶಶಿದರರವರು ಚಿಕಿತ್ಸೆಗಾಗಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿರುತ್ತಾರೆಂತ ಇತ್ಯಾದಿಯಾಗಿ ನೀಡಿದ ಹೇಳಿಕೆಯ ದೂರು ಪಡೆದು ಕೇಸು ದಾಖಲಿಸಿರುತ್ತೆ.

 

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ. 47/2017 ಕಲಂ 323, 354ಬಿ, 504, 506 ರೆ/ವಿ 34 ಐಪಿಸಿ.

ದಿನಾಂಕ:11/04/2017 ರಂದು ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಲಲಿತಮ್ಮ ಕೋಂ ಕಾಳಪ್ಪ, 65 ವರ್ಷ, ಲಿಂಗಾಯ್ತಿರು, ಗೃಹಿಣಿ, ಬನ್ನಿಹಳ್ಳಿ, ಕಸಬಾ ಹೋ. ತಿಪಟೂರು ತಾ|| ರವರು ನೀಡಿದ ಹೇಳಿಕೆ ಅಂಶವೇನೆಂದರೆ ದಿನಾಂಕ:10-04-2017 ರಂದು ರಾತ್ರಿ 10-30 ಗಂಟೆ ಸಮಯದಲ್ಲಿ ನಮ್ಮ ಮನೆ ಹತ್ತಿರ ಇರುವಾಗ, ರಾಮಚಂದ್ರಪುರದ ಬನ್ನಿಮಹಾಂಕಾಳಿ ಎಂಬ ಗ್ರಾಮ ದೇವತೆ  ಗ್ರಾಮಕ್ಕೆ ಮೆರವಣಿಗೆ ಬಂದಿದ್ದು ನಮ್ಮ ಮನೆಯ ಮುಂದೆ ದೇವರು ಹೋಗಿದ್ದು ಜಾತ್ರೆಗೆ ಹಣ ಕೊಟ್ಟಿಲ್ಲ ಎಂಬ ವಿಚಾರಕ್ಕೆ ನಮ್ಮ ಗ್ರಾಮದ ಪ್ರದೀಪ, ಇವರ ಹೆಂಡತಿ ದಾಕ್ಷಿಯಾಣಿ, ಮಧು ಬಿನ್ ಕಾಳಪ್ಪ, ಶಶಿಧರ ಬಿನ್ ಉಮಾಪತಿರವರುಗಳು ಬಸವಲಿಂಗಪ್ಪ, ಸುಧಾಕರ, ಷಣ್ಮುಕಪ್ಪ ರವರೊಂದಿಗೆ ಹಣಕಾಸಿನ ವಿಚಾರವಾಗಿ ಗಲಾಟೆ ಮಾಡುತ್ತಿದ್ದರು, ಅದೇ ಸಮಯಕ್ಕೆ ನಾನು ಹೋಗಿ ಏಕರಪ್ಪ ವರ್ಷಕ್ಕೊಂದು ಜಾತ್ರೆಯಲ್ಲಿ ಗಲಾಟೆ ಮಾಡಿಕೊಳ್ಳುತ್ತಿರ ಎಂತಾ ಸಮಾದಾನ ಮಾಡಲು ಹೋದಾಗ ಏಕಾಏಕಿ ನನ್ನ ಮೇಲೆ  ಪ್ರದೀಪ್, ದಾಕ್ಷಾಯಿಣಿ, ಮಧು, ಶಶಿಧರ ರವರು ನನಗೆ ಕುತ್ತಿಗೆಗೆ ಕೈನಿಂದ ಹೊಡೆದು, ತಲೆಯ ಜುಟ್ಟು ಹಿಡಿದು ಎಳೆದಾಡಿ ಹಾಗೂ ನನ್ನ ಸೀರೆಯ ಸೆರಗನ್ನು ಎಳೆದಾಡಿದರು. ಈ ವೇಳೆಗೆ ನನ್ನ ಮಗ ಸುಧಾಕರ ಮತ್ತು ಗಂಗಾಮಣಿ ರವರು ಬಂದು ಗಲಾಟೆ ಬಿಡಿಸಲು ಬಂದಾಗ ಅವರಿಗೆ ಅವಾಚ್ಚ ಶಬ್ದಗಳಿಂದ ಬೈದು ಇವತ್ತು ನೀನು ಬದುಕಿದೆ ನೀನು ನಮಗೆ ಬುದ್ದಿವಾದ ಹೇಳಕ್ಕೆ ಬರುತ್ತಿಯ ಇವರು ಇಲ್ಲದಿದ್ದರೆ ನೀನ್ನನ್ನು ಒಂದು ಗತಿ ಕಾಣಿಸುತ್ತಿದ್ದೆವು ಎಂತಾ ಪ್ರಾಣ ಬೆದರಿಕೆ ಹಾಕಿ ಹೋದರು. ನನಗೆ ಕುತ್ತಿಗೆ ಹತ್ತಿರ ನೊವು ಹೆಚ್ಚಾಗಿದ್ದರಿಂದ ನನ್ನ ಮಗ ಸುದಾಕರರವರು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆಗೆ ದಾಖಲು ಮಾಡಿರುತ್ತಾರೆ. ನನ್ನ ಮೇಲೆ ಹಲ್ಲೆ ಮಾಡಿ ಸೀರೆ ಎಳೆದ ಪ್ರದೀಪ , ದಾಕ್ಷಾಯಿಣಿ, ಮಧು, ಶಶಿಧರ ರವರ ಮೇಲೆ ಕಾನೂನು ರೀತ್ಯಾ ಕ್ರಮ ತೆಗೆದುಕೊಂಡು ನನಗೆ ನ್ಯಾಯಾ ದೊರಕಿಸಿಕೊಡಬೇಕೆಂದು ಇತ್ಯಾದಿಯಾಗಿ ನೀಡಿದ ಹೇಳಿಕೆ ಪಡೆದು ಪ್ರಕರಣ ದಾಖಲಿಸಿರುತ್ತೆ

 

ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ. 78/2017 ಕಲಂ 379, 420, 34 ಐಪಿಸಿ

ದಿನಾಂಕ:10/04/2017 ರಂದು ಸಂಜೆ 4-30 ಗಂಟೆಗೆ ತುಮಕೂರು ತಾಲ್ಲೋಕ್ ಕಸಬಾ ಹೋಬಳಿ ಹಬ್ಬತ್ತನಹಳ್ಳಿ ಗ್ರಾಮದ ವಾಸಿ ನಿಂಗಮ್ಮ ಕೋಂ ಗಂಗರಂಗಯ್ಯ,ಸುಮಾರು 55ವರ್ಷ, ಗೃಹಿಣಿ, ನಾಯಕ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರಿ ರವರು ನೀಡಿದ ದೂರಿನ ಅಂಶವೇನೆಂದರೆ, ನನಗೆ ಕೆಂಪರಾಜು, ರಂಗಸ್ವಾಮಿ, ಶಿವಕುಮಾರ ಎಂಬ ಮೂರು ಜನ ಮಕ್ಕಳಿದ್ದು ನಾನು ಮತ್ತು ನನ್ನ ಗಂಡ ಗಂಗರಂಗಯ್ಯ ಹಬ್ಬತ್ತನಹಳ್ಳಿಯಲ್ಲಿ ನನ್ನ ಮಕ್ಕಳಾದ ಕೆಂಪರಾಜು ಮತ್ತು ರಂಗಸ್ವಾಮಿ ರವರ ಜೊತೆಯಲ್ಲಿ ವಾಸ ಇರುತ್ತೇವೆ. ನನ್ನ ಕಿರಿಯ ಮಗ ಚೇಳೂರಿನಲ್ಲಿ ನಂದಿನಿ ಪಾರ್ಲರ್ ಮಾಡಿಕೊಂಡಿದ್ದು ಅಲ್ಲಿಯೇ ವಾಸ ಇರುತ್ತಾರೆ. ನನ್ನ ಮಕ್ಕಳು ಈಗ್ಗೆ ಸುಮಾರು ಒಂದುವರೆ ವರ್ಷದ ಹಿಂದ ನನಗೆ 30ಗ್ರಾಂ ತೂಕದ ಚಿನ್ನದ ಒಂದು ಎಳೆಯ ಮಾಂಗಲ್ಯ ಸರವನ್ನು ಮಡಿಸಿಕೊಟ್ಟಿದ್ದರು. ಆ ಚಿನ್ನದ ಸರವನ್ನು ನನ್ನ ಕೊರಳಿನಲ್ಲಿ ಹಾಕಿಕೊಂಡಿರುತ್ತೇನೆ ಮತ್ತು ಈ ಮೊದಲೇ ಮಾಡಿಸಿದ್ದ 6ಗ್ರಾಂನ ಪಿಂಕ್ ಮತ್ತು ಬಿಳೀ ಹರಳಿನ ಚಿನ್ನದ ಓಲೆ ಹಾಗೂ 4ಗ್ರಾಂ ತೂಕದ ಚಿನ್ನದ ಮಾಟಿಯನ್ನು ಕಿವಿಯಲ್ಲಿ ಹಾಕಿಕೊಂಡಿರುತ್ತೇನೆ. ದಿನಾಂಕ:08/04/2017 ರಂದು ನನ್ನ ಕಿರಿಯ ಮಗನನ್ನು ನೋಡಿಕೊಂಡು ಬರಲು ಚೇಳೂರಿಗೆ ಹೋಗಿ ಎರಡು ದಿನ ಅಲ್ಲಿಯೇ ಉಳಿದುಕೊಂಡು ಈ ದಿನ ದಿನಾಂಕ:10/04/2017 ರಂದು ಮದ್ಯಾಹ್ನ 12-30 ಗಂಟೆ ಸಮಯದಲ್ಲಿ ನಾನು ಬಸ್ಸಿನಲ್ಲಿ ಚೇಳೂರಿನಿಂದ ಬಂದು ಮಲ್ಲಸಂದ್ರ ಹಾಲಿನ ಡೈರಿ ಹತ್ತಿರ ಬಸ್ಸಿಳಿದು ರೈಲ್ವೇ ಟ್ರ್ಯಾಕ್ ದಾಟಿಕೊಂಡು ನಮ್ಮೂರಿಗೆ ಹೋಗಲು ಕಾಲು ದಾರಿಯಲ್ಲಿ ರಾಜಣ್ಣರವರ ತೋಟದ ಹತ್ತಿರ ಹೋಗುತ್ತಿರುವಾಗ್ಗೆ ಅಲ್ಲೇ ಸುಮಾರು 35ವರ್ಷ ವಯಸ್ಸಿನ ನೀಲಿ ಬಣ್ಣದ ಚೂಡಿದಾರ ಧರಿಸಿದ್ದ ಹೆಂಗಸು ನಿಂತಿದ್ದಳು ನಾನು ಅಲ್ಲಿಗೆ ಹೋಗುತ್ತಿದ್ದಂತೆ ಆಕೆಯು ನನ್ನನ್ನು ಎಲ್ಲಿಗೆ ಹೋಗಬೇಕೆಂಧು ಕೇಳಿದಳು ನಾನು ಹಬ್ಬತ್ತನಹಳ್ಳಿಗೆ ಹೋಗಬೇಕು ನೀನು ಎಲ್ಲಿಗೆ ಹೋಗಬೇಕು ಎಂದು ಕೇಳಿದ್ದಕ್ಕೆ ಆಕೆಯು ನಾನು ಹಬ್ಬತ್ತನಹಳ್ಳಿ ಗ್ರಾಮದ ರಾಮಯ್ಯ ರವರ ಮನೆಗೆ ಹೋಗಬೇಕು ಎಂದು ಹೇಳಿ ಇದ್ದಕ್ಕಿದ್ದಂತೆ ಆಕೆಯು ತನ್ನ ಕೈಯಲ್ಲಿದ್ದ ಒಂದು ಪಾಕೆಟ್‌ನ್ನು ನನ್ನ ಮುಂದೆ ಹಾಕಿ ಅಲ್ಲಿ ಯಾವುದೋ ಪಾಕೆಟ್ ಬಿದ್ದಿದೆ ತಗೋಳಜ್ಜಿ ಎಂತ ಹೇಳಿದಳು ಅದಕ್ಕೆ ನಾನು ಅದು ನನ್ನದಲ್ಲ ಎಂದು ಹೇಳಿದಾಗ ಆಕೆ ಪಾಕೆಟ್‌ನ್ನು ತೆಗೆದುಕೊಂಡಳು ಆಗ ನಾನು ನನ್ನ ಪಾಡಿಗೆ ಊರಿಗೆ ಹೋಗಲು ಮುಂದಾದಾಗ ಆಕೆಯು ಪುನಃ ನನ್ನನ್ನು ಕರೆದು ಅಜ್ಜಿ ಇದರಲ್ಲಿ ಹಣ ಇದೆ ನಿನೇ ತೆಗೆದುಕೊಂಡು ಹೋಗಲು ಎಂದಳು ನನಗೆ ಬೇಡ ಎಂದು ಹೇಳಿದರೂ ಬಲವಂತ ಮಾಡಿ ಇಬ್ಬರು ಭಾಗ ಮಾಡಿಕೊಳ್ಳೋಣ ಎಂತಾ ಹೇಳಿ ನನ್ನನ್ನು ನಿಲ್ಲಿಸಿಕೊಂಡಳು ಆ ಸಮಯಕ್ಕೆ ರೈಲ್ವೇ ಟ್ರ್ಯಾಕ್‌ನ ನೀಲಗಿರಿ ತೋಪು ಕಡೆಯಿಂದ ಸುಮಾರು ಅದೇ ವಯಸ್ಸಿನ ಮತ್ತೊಬ್ಬ ಹೆಂಗಸು ಬಂದು ಆ ಪಾಕೇಟ್ ನನ್ನದು ಅದರಲ್ಲಿ ದುಡ್ಡಿದೆ ನೀವು ತೆಗೆದುಕೊಂಡಿದ್ದೀರಾ ಎಂದು ಕೇಳಿದಳು ನಾವು ತೆಗೆದುಕೊಂಡಿಲ್ಲ ಎಂದು ಹೇಳಿದರೂ ಬಿಡದೇ ಮಾಂಗಲ್ಯವನ್ನು ತಲೆಮೇಲೆ ಹೊತ್ತು ಪ್ರಮಾಣ ಮಾಡುವಂತೆ ಹೇಳಿದಳು ಆಗ ನನ್ನ ಪಕ್ಕದಲ್ಲಿ ಇದ್ದ ಹೆಂಗಸು ತನ್ನ ಸರವನ್ನು ಬಿಚ್ಚಿ ಆಣೇ ಮಾಡದಳು. ನನಗೂ ಸಹ ಆಣೆ ಮಾಡುವಂತೆ ನನ್ನ ಕೊರಳಿನಲ್ಲಿದ್ದ ಚಿನ್ನದ ಮಾಂಗಲ್ಯದ ಸರವನ್ನು ಬಿಚ್ಚಿಸಿ ನನ್ನಿಂದ ತೆಗೆದುಕೊಂಡು ನನಗೆ ತಿಳಿಯದಂತೆ ಒಂದು ಕವರಿಗೆ ಸುತ್ತಿ ತನ್ನ ಬಳಿ ಇಟ್ಟುಕೊಂಡಳು. ನನಗೆ ಗಾಬರಿಯಾಗಿ ಜೋರಾಗಿ ಕೂಗಿಕೊಂಡೆನು ಆಗ ಇಬ್ಬರು ಓಡಲು ಪ್ರಯತ್ನಿಸಿದರು ಆಗ ನನ್ನ ವಡವೆಯನ್ನು ಇಟ್ಟುಕೊಂಡಿದ್ದ ಹೆಂಗಸನ್ನು ಹಿಡಿದುಕೊಂಡೆನು ಅಷ್ಟರಲ್ಲಿ ನಮ್ಮ ಪರಿಚಯಸ್ಥರಾದ ನಮ್ಮ ಪಕ್ಕದ ಮನೆಯ ಮಾರಪ್ಪ ರವರ ಮಗ ಮಹೇಶ್ ಎಂಬುವರು ಬರುತ್ತಿದ್ದುದನ್ನು ಕಂಡು ಆಕೆ ಕಳ್ಳಿ ಹಿಡಿದುಕೋ ಎಂದು ಕೂಗಿಕೊಂಡೆ ಅವನು ಆಕೆಯನ್ನು ಹಿಡಿಯಲು ಪ್ರಯತ್ನಪಟ್ಟಾಗ ಆಕೆಯು ಅಲ್ಲಿಗೆ ಬಂದ ಯಾವುದೋ ಒಂದು ಕಾರನ್ನು ಹತ್ತಿಕೊಂಡು ಹೊರಟು ಹೋದಳು ನಂತರ ನಾನು ಮತ್ತು ಮಹೇಶ ಇಬ್ಬರು ಸೇರಿ ನಾನು ಹಿಡಿದುಕೊಂಡಿದ್ದ ಹೆಂಗಸಿನ ಹೆಸರು ಕೇಳಲಾಗಿ ಶಶಿ ಎಂದು ತಿಳಿಸಿದಳು. ಶಶಿಯನ್ನು ಠಾಣೆಗೆ ಕರೆದುಕೊಂಡು ಬಂದೆವು ಮೇಲ್ಕಂಡ ಇಬ್ಬರು ಹೆಂಗಸರು ವಡವೆಯನ್ನು ಕಳ್ಳತನ ಮಾಡಿ ನನಗೆ ಮೋಸ ಮಾಡುವ ಉದ್ದೇಶದಿಂದ ನನ್ನ ಗಮನವನ್ನು ಬೇರೆಡೆಗೆ ಸೆಳೆದು ಸುಮಾರು 75 ಸಾವಿರ ರೂ ಬೆಲೆ ಬಾಳುವ ನನ್ನ ಕೊರಳಿನಲ್ಲಿದ್ದ ಚಿನ್ನದ ಸರವನ್ನು  ಬಿಚ್ಚಿಸಿಕೊಂಡು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ ಮೇಲ್ಕಂಡವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿದೆ.

ಹೆಬ್ಬೂರು  ಪೊಲೀಸ್ ಠಾಣಾ ಯು ಡಿ ಆರ್ ನಂ 07/2017 ಕಲಂ 174 ಸಿಆರ್‌ಪಿಸಿ

ಧಿನಾಂಕ-10/04/2017 ರಂದು ಮಧ್ಯಾಹ್ನ 03-00 ಗಂಟೆಗೆ ಪಿರ್ಯಾದಿಯಾದ ಪ್ರೀತಿ ಕೋಂ ಹನುಮಂತರಾಯ, 23 ವರ್ಷ, ಆದಿ ಕರ್ನಾಟಕ ಜನಾಂಗ, ಗಾರ್ಮೆಂಟ್ಸ್‌‌ನಲ್ಲಿ ಕೆಲಸ, ಮಸ್ಕಲ್‌, ಗೂಳೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ಟೈಪ್ ಮಾಡಿಸಿದ ಲಿಖಿತ ದೂರಿನ ಅಂಶವೇನೆಂದರೆ ನಾನು ಈಗ್ಗೆ ಸುಮಾರು 03 ವರ್ಷಗಳ ಹಿಂದೆ ಮಸ್ಕಲ್‌ ಗ್ರಾಮದ ಹನುಮಂತರಾಯ ರವರನ್ನು ವಿವಾಹವಾಗಿದ್ದು, ನಾನು ಮತ್ತು ನನ್ನ ಗಂಡ ದಾಬಸ್‌ ಪೇಟೆಯಲ್ಲಿ ಕೆಲಸ ಮಾಡಿಕೊಂಡು ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದೆವು. ನನ್ನ ಗಂಡನಿಗೆ ಈಗ್ಗೆ ಸುಮಾರು ಎರಡು ವರ್ಷಗಳಿಂದ ಹೊಟ್ಟೆ ನೋವು ಬರುತ್ತಿದ್ದು, ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದರೂ ಸಹ ಹೊಟ್ಟೆ ನೋವು ವಾಸಿಯಾಗಿರಲಿಲ್ಲ. ದಿನಾಂಕ: 09-04-2017 ರಂದು ನನ್ನ ಗಂಡ ಹನುಮಂತರಾಯ ರವರು ದಾಬಸ್‌ಪೇಟೆಯಿಂದ ನಮ್ಮ ಗ್ರಾಮವಾದ ಮಸ್ಕಲ್‌ ಗ್ರಾಮಕ್ಕೆ ಬಂದಿದ್ದು, ರಾತ್ರಿ ಸುಮಾರು 08-00 ಗಂಟೆ ಸಮಯದಲ್ಲಿ ನಮ್ಮ ಮಾವನಾದ ಆಂಜಿನಪ್ಪ ರವರ ಜೊತೆಯಲ್ಲಿ ಊಟ ಮಾಡಿ ನಂತರ ನಮ್ಮ ತೋಟಕ್ಕೆ ನೀರು ಬಿಡುವುದಾಗಿ ಹೇಳಿ ಹೋಗಿದ್ದು, ರಾತ್ರಿ ಯಾವುದೋ ವೇಳೆಯಲ್ಲಿ ಯಾವುದೋ ಕಳೆನಾಶಕ ವಿಷವನ್ನು ಸೇವಿಸಿದ್ದು, ನಂತರ ದಿನಾಂಕ:10-04-2017 ರಂದು ನಮ್ಮ ಗ್ರಾಮದ ವಾಸಿಯಾದ ತಿಮ್ಮರಾಯಪ್ಪ ರವರು ತಮ್ಮ ಹೊಲದ ಬಳಿ ಹೋಗಿದ್ದಾಗ ಹನುಮಂತರಾಯ ರವರು ತಮ್ಮ ಜಮೀನಿನಲ್ಲಿ ಬಿದ್ದಿರುವುದನ್ನು ಕಂಡು ವಾಪಸ್‌ ಊರಿಗೆ ಬಂದು ಆಂಜಿನಪ್ಪ ರವರಿಗೆ ತಿಳಿಸಿದ್ದು, ನಂತರ ಆಂಜಿನಪ್ಪ ರವರು ಸ್ಥಳಕ್ಕೆ ಹೋಗಿ ನೋಡಿ ಹನುಮಂತರಾಯ ರವರನ್ನು 108 ಆಂಬುಲೆನ್ಸ್‌ನಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿ ನನಗೆ ಪೋನ್‌ ಮಾಡಿ ವಿಚಾರ ತಿಳಿಸಿದರು. ನಂತರ ನಾನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ನನ್ನ ಗಂಡ ವಿಷ ಕುಡಿದಿರುವುದು ನಿಜವಾಗಿತ್ತು. ನಾನು ನನ್ನ ಗಂಡನನ್ನು ಯಾಕೆ ಈ ರೀತಿ ಮಾಡಿಕೊಂಡೆ ಎಂದು ಕೇಳಲಾಗಿ, ನಾನು ಹೊಟ್ಟೆ ನೋವು ತಡೆಯಲಾಗದೇ ಕಳೆನಾಶಕ ವಿಷವನ್ನು ಕುಡಿದಿದ್ದಾಗಿ ತಿಳಿಸಿದರು. ನಂತರ ಇದೇ ದಿವಸ ಬೆಳಿಗ್ಗೆ ಸುಮಾರು 11-30 ಗಂಟೆ ಸಮಯದಲ್ಲಿ ನನ್ನ ಗಂಡ ಹನುಮಂತರಾಯ ರವರು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ. ನನ್ನ ಗಂಡ ಹನುಮಂತರಾಯ ರವರು ತನಗೆ ಬರುತ್ತಿದ್ದ ಹೊಟ್ಟೆ ನೋವಿನ ಬಾಧೇ ತಾಳಲಾರದೇ ಜೀವನದಲ್ಲಿ ಜಿಗುಪ್ಸೆಗೊಂಡು ತನ್ನಷ್ಟಕ್ಕೆ ತಾನೇ ಯಾವುದೋ ಕಳೆನಾಶಕ ವಿಷ ಸೇವಿಸಿ ಮೃತಪಟ್ಟಿರುತ್ತಾರೆಯೇ ವಿನಃ ಅವರ ಸಾವಿನಲ್ಲಿ ಬೇರೆ ಯಾವುದೇ ಅನಮಾನವಿರುವುದಿಲ್ಲ. ಆದ್ದರಿಂದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನನ್ನ ಗಂಡ ಹನುಮಂತರಾಯ ರವರ ಮೃತ ದೇಹವು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರುತ್ತದೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 73 guests online
Content View Hits : 231885