lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ. ದಿನಾಂಕ : 10-07-2018   ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< April 2017 >
Mo Tu We Th Fr Sa Su
          1 2
3 4 5 6 7 8 9
11 12 13 14 15 16
17 18 19 20 21 22 23
24 25 26 27 28 29 30
Monday, 10 April 2017
Crime Incidents 10-04-17

ಚೇಳೂರು ಪೊಲೀಸ್ ಠಾಣಾ  ಮೊ.ನಂ 60 /2017, ಕಲಂ 447.323.504.506. 379 ರೆ/ವಿ 34  IPC  ಮತ್ತು  ಕಲಂ CL (3)(R)(S) SC/ST (POA)  -  AMENDMENT ACT 2015

ದಿನಾಂಕ; 09/04/2017  ರಂದು   ಸಂಜೆ  6-50  ಗಂಟೆ   ಸಮಯದಲ್ಲಿ ಪಿರ್ಯಾದಿ ಹನುಮಂತರಾಯಪ್ಪ  ಬಿನ್  ಹನುಮಂತಯ್ಯ, 55 ವರ್ಷ,  ಆದಿ ಕರ್ನಾಟಕ  ಜನಾಂಗ,   ವ್ಯವಸಾಯ  ಕೆಲಸ,  ಗೌರಿಪುರ  ಗ್ರಾಮ,  ಚೇಳೂರು  ಹೋ,  ಗುಬ್ಬಿ  ತಾ.   ಠಾಣೆಗೆ  ಹಾಜರಾಗಿ   ನೀಡಿದ  ಪಿರ್ಯಾದು ಅಂಶವೇನೆಂದರೆ, ಹನುಮಂತರಾಯಪ್ಪ  ಪಿರ್ಯಾದಿ  ಹನುಮಂತರಾಯಪ್ಪ ರವರ ಬಾಬ್ತು  ಗೌರಿಪುರ ಗ್ರಾಮ ಸ.ನಂ.113/1ಎ ರಲ್ಲಿ 4 ಎಕರೆ 20 ಗುಂಟೆ ಜಮೀನಿದ್ದು ಈ ಜಮೀನಿನಲ್ಲಿ ಮಾವಿನ  ಗಿಡಗಳನ್ನು ಬೆಳೆದಿರುತ್ತಾರೆ.   ದಿನಾಂಕ:09-04-2017 ರಂದು ಮಧ್ಯಾಹ್ನ 1-30 ಗಂಟೆ ಸಮಯದಲ್ಲಿ ಪಕ್ಕದ ಜಮೀನಿನವರಾದ ಮೇಲು ಸಕ್ಕರೆ ಪಾಳ್ಯ ಗ್ರಾಮದ ಪುಟ್ಟಯ್ಯನ ಮಕ್ಕಳಾದ 1ನೇ ಪ್ರಸನ್ನಕುಮಾರ, 2ನೇ ಕೃಷ್ಣ  3ನೇ ಸಂತೋಷ ಇವರುಗಳು ಅಕ್ರಮವಾಗಿ ಪಿರ್ಯಾದಿಯವರ ಜಮೀನಿಗೆ ಪ್ರವೇಶ ಮಾಡಿ ಕಳ್ಳತನದಿಂದ ಮಾವಿನ ಫಸಲನ್ನು  ಕೀಳುತ್ತಿದ್ದರು.  ಅಷ್ಟರಲ್ಲಿ ಪಿರ್ಯಾದಿ ಮತ್ತು ಅವರ ಮಗ ಧನಂಜಯ, ಪಿರ್ಯಾದಿ ಅಣ್ಣನ ಮಕ್ಕಳಾದ ಶೇಖರಯ್ಯ ಇವರುಗಳು ಹೋಗಿ  ನೋಡಿ “ ಏಕೆ ನಮ್ಮ ತೋಟದಲ್ಲಿ ಅಕ್ರಮವಾಗಿ ಕಳ್ಳತನದಿಂದ ಮಾವಿನ  ಫಸಲನ್ನು  ಕೀಳುತ್ತಿದ್ದೀರಾ” ಅಂತಾ ಕೇಳಿದ್ದಕ್ಕೆ ಸದರಿಯವರು ಏಕಾ ಏಕಿ  ಪಿರ್ಯಾದಿಯವರನ್ನು ಲೇ ಸೂಳೆ ಮಕ್ಕಳಾ, ಹಲ್ಕಾ  ಮಕ್ಕಲಾ, ಲೇ. ಮಾದಿಗ ನನ್ನ ಮಕ್ಕಳಾ, ನಿಮ್ಮನ್ನು ಕೊಲೆ ಮಾಡುತ್ತೇವೆ, ನೀವು ಏನು ಬೇಕಾದರೂ ಮಾಡಿಕೊಳ್ಳಿ ಅಂತಾ ಅವ್ಯಾಚ್ಯ ಶಬ್ಧಗಳಿಂದ  ಬೈದು ಜಾತಿ ನಿಂದನೆ ಮಾಡಿ ಕೈ, ಕಾಲುಗಳಿಂದ ಹೊಡೆದು ಒದ್ದು ತುಂಬಾ ನೋವುಂಟು ಮಾಡಿರುತ್ತಾರೆ.  ಜಗಳ ಬಿಡಿಸಲು ಬಂದ ಪಿರ್ಯಾದಿ ಮಗ ಮತ್ತು  ಅವರ ಅಣ್ಣನ ಮಗ  ಇವರುಗಳ ಮೇಲೆ ಹೊಡೆದು ಒದ್ದು ನೋವುಂಟು ಮಾಡಿ  ನಿಮ್ಮ ಪ್ರಾಣ ತೆಗೆಯುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾರೆಂತಾ  ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಿ ಎಂತಾ  ಇತ್ಯಾದಿಯಾಗಿ ಇದ್ದ ಪಿರ್ಯಾದು  ಮೇರೆಗೆ  ರೀತ್ಯ  ಪ್ರಕರಣ  ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

 

ಹೆಬ್ಬೂರು  ಪೊಲೀಸ್ ಠಾಣಾ ಯು ಡಿ ಆರ್ ನಂ 06/2017 ಕಲಂ 174 ಸಿಆರ್‌ಪಿಸಿ

ದಿನಾಂಕ-09/04/2017 ರಂದು ಸಂಜೆ 6-30 ಗಂಟೆಗೆ ಪಿರ್ಯಾದಿಯಾದ ಗಂಗದೊಡ್ಡಯ್ಯ ಬಿನ್ ಲೇ|| ರಂಗಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್ ಮಾಡಿಸಿದ ಲಿಖಿತ ದೂರಿನ ಅಂಶವೇನೆಂದರೆ  ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ದಿನಾಂಕ-09/04/2017 ರಂದು ನನ್ನ ಮಗನಾದ ಸುಮಾರು 29 ವರ್ಷ ವಯಸ್ಸಿನ ಕೃಷ್ಣ ರವರು ತನ್ನ ಸ್ನೇಹಿತರಾದ ಹರೀಶ್, ಶೇಖರ್, ಮೋಹನ್ ಕುಮಾರ್ ರವರೊಂದಿಗೆ ಕೆರೆಯಲ್ಲಿ ಈಜಾಡಬೇಕೆಂದು ನಮ್ಮ ಗ್ರಾಮವಾದ ಬಾಣವಾರದಿಂದ ಬೆಳಿಗ್ಗೆ ಸುಮಾರು 8-00 ಗಂಟೆಗೆ ದ್ವಿಚಕ್ರ ವಾಹನಗಳಲ್ಲಿ ಹೊರಟಿದ್ದು, ನಂತರ ಈ ದಿನ ಬೆಳಿಗ್ಗೆ ಸುಮಾರು 11-30 ಗಂಟೆ ಸಮಯದಲ್ಲಿ ಪುಲ್ಲಸಂದ್ರ ಗ್ರಾಮದ ಅಮಾನಿಕೆರೆಯಲ್ಲಿ ಈಜಾಡಲು ಹೋಗಿದ್ದು, ನನ್ನ ಮಗ ಕೃಷ್ಣ ರವರು ಈಜಾಡಲು ಬರುತ್ತಿರಲಿಲ್ಲವಾದ್ದರಿಂದ ಈಜು ಬಾರದೇ ನೀರಿನಲ್ಲಿ ಮುಳುಗಿದ್ದು, ನಂತರ ನನ್ನ ಮಗನನ್ನು ಸ್ಥಳದಲ್ಲಿಯೇ ಇದ್ದ ಹರೀಶ್, ಶೇಖರ್, ಮೋಹನ್ ಕುಮಾರ್ ರವರುಗಳ ಸಹಾಯದಿಂದ ನೀರಿನಿಂದ ಮೇಲಕ್ಕೆ ಎತ್ತಿ, ಹೊನ್ನುಡಿಕೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರಿಶೀಲಿಸಿದ ವೈದ್ಯಾಧಿಕಾರಿಗಳು ತುಮಕೂರಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂತಾ ತಿಳಿಸಿದ್ದು, ನಂತರ ನಾವುಗಳು ಕೃಷ್ಣನನ್ನು ತುಮಕೂರಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರಿಶೀಲಿಸಿದ ವೈದ್ಯಾಧಿಕಾರಿಗಳು ಮದ್ಯಾಹ್ನ 01-30 ಗಂಟೆಗೆ ಕೃಷ್ಣ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂತಾ ಸದರಿ ವಿಚಾರವನ್ನು ನನಗೆ ಹರೀಶನು ತಿಳಿಸಿದ್ದು, ನಂತರ ನಾವು ತುಮಕೂರು ಸರ್ಕಾರಿ ಆಸ್ಪತ್ರೆಯ ಬಳಿ ಬಂದು ನೋಡಲಾಗಿ ನನ್ನ ಮಗ ಕೃಷ್ಣ ರವರು ಮೃತಪಟ್ಟಿರುವುದು ನಿಜವಾಗಿತ್ತು. ನನ್ನ ಮಗ ಕೃಷ್ಣ ರವರು ದೇವರ ಅಮಾನಿಕೆರೆಯಲ್ಲಿ ಈಜಾಡಲು ಹೋಗಿದ್ದು, ಈಜು ಬಾರದೇ ಇರುವುದರಿಂದ ನೀರಿನಲ್ಲಿ ಮುಳುಗಿ ನೀರು ಕುಡಿದು ಮೃತಪಟ್ಟಿರುತ್ತಾನೆಯೇ ವಿನಃ ಆತನ ಸಾವಿನಲ್ಲಿ ಬೇರೆ ಯಾವುದೇ ಅನುಮಾನವಿರುವುದಿಲ್ಲ. ಆದ್ದರಿಂದ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನನ್ನ ಮಗ ಕೃಷ್ಣ ರವರ ಮೃತ ದೇಹವು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರುತ್ತೆ. ಈ ವಿಚಾರವನ್ನು ಸಂಬಂಧಿಕರಿಗೆ ತಿಳಿಸಿ ತಡವಾಗಿ ಬಂದು ದೂರು ನೀಡಿರುತ್ತೇನೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಯು.ಡಿ.ಆರ್‌ ನಂ; 12/2017 ಕಲಂ; 174 (ಸಿ) ಸಿಆರ್‌ಪಿಸಿ.

ದಿನಾಂಕ-09-04-2017 ರಂದು ಮಧ್ಯಾಹ್ನ 2-00 ಗಂಟೆ ಸಮಯದಲ್ಲಿ ಪಿರ್ಯಾದಿ ಡಿ.ಕೆ.ಶಿವಲಿಂಗಯ್ಯ ಬಿನ್‌ ಲೇಟ್ ಕರಿಯಪ್ಪ, 33 ವರ್ಷ, ಬೆಸ್ತರ ಜನಾಂಗ, ಹಾಲಿವಾಸ ನಂ;18, ಮಂಜುನಾಥ ನಗರ, ಇಟ್ಟಮಡಗು, ಬಿ.ಎಸ್‌.ಕೆ  3ನೇ ಮುಖ್ಯ ರಸ್ತೆ, ಬೆಂಗಳೂರು-85, ಸ್ವಂತ ಊರು ದೊಡ್ಡಮಾವತ್ತೂರು, ಹುಲಿಯೂರುದುರ್ಗ ಹೋಬಳಿ, ಕುಣಿಗಲ್‌ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ-09-04-2017 ರಂದು ನಾನು ಬೆಂಗಲೂರಿನಲ್ಲಿ ಕೆಲಸದಲ್ಲಿ ಇರುವ ಸಮಯದಲ್ಲಿ ನನಗೆ ನನ್ನ ಬಾಮೈದ ರವಿ ರವರು ಕರೆಮಾಡಿ, ನಿನ್ನ ತಮ್ಮ ಡಿ.ಕೆ ಕುಮಾರ ಹುಲಿಯೂರುದುರ್ಗ ಕುಂಬಿ ಬೆಟ್ಟದ ತಪ್ಪಲಿನಲ್ಲಿ ಒಂದು ಮರಕ್ಕೆ ಅಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಮೃತಪಟ್ಟಿರುತ್ತಾರೆ ಎಂದು ತಿಳಿಸಿದ್ದು ತಕ್ಷಣ ನಾನು ಬೆಂಗಳೂರಿನಿಂದ ಬಂದು ನನ್ನ ತಮ್ಮ ಡಿ.ಕೆ ಕುಮಾರ ನೇಣು ಹಾಕಿಕೊಂಡಿರುವ ಸ್ಥಳಕ್ಕೆ ಹೋಗಿ ನೋಡಿದಾಗ ನನಗೆ ನನ್ನ ತಮ್ಮ ಕುತ್ತಿಗೆಗೆ ಅಗ್ಗದಿಂದ ನೇಣುಹಾಕಿಕೊಂಡು ಕಳ್ಳಿಗಿಡದಲ್ಲಿ ಜೋತುಬಿದ್ದು ಮೃತಪಟ್ಟಿರುವುದು ಮಧ್ಯಾಹ್ನ ಸುಮಾರು 1-30 ಗಂಟೆ ಸಮಯದಲ್ಲಿ ಕಂಡುಬಂದಿರುತ್ತೆ. ನನ್ನ ತಮ್ಮನ ಸಾವಿನ ಬಗ್ಗೆ ಅನುಮಾನವಿದ್ದು ತಾವು ಸ್ಥಳಕ್ಕೆ ಬಂದು ಪರಿಶೀಲಿಸಿ ಮುಂದಿನ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ನೀಡಿದ ದೂರಿನ ಅಂಶವಾಗಿರುತ್ತೆ.

ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 32/2017  -  ಕಲಂ 279-337 ಐಪಿಸಿ ರೆ/ವಿ  134(ಎ)(ಬಿ)  ಐ ಎಂ ವಿ ಆಕ್ಟ್‌. .

ದಿನಾಂಕ:09/08/2017 ರಂದು ಮದ್ಯಾಹ್ನ 3-00 ಗಂಟೆಗೆ ಪಿರ್ಯಾದಿ ನಟೇಶ್ ಬಿನ್ ನಾಗೇಂದ್ರಪ್ಪ, 24 ವರ್ಷ, ಪರಿಶಿಷ್ಟ ಜಾತಿ, ಕೆ.ಆರ್ ಬಡಾವಣೆ, ಮಧುಗಿರಿ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಮ್ಮ ತಂದೆಯವರಾದ ನಾಗೇಂದ್ರಪ್ಪ ರವರು ಸುಮಾರು ಮೂರು ವರ್ಷಗಳಿಂದ ದೊಡ್ಡೇರಿ ಹೋಬಳಿ ಹೊನ್ನಾಪುರ ಗ್ರಾಮದಲ್ಲಿನ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ಇವರು ಪ್ರತಿದಿನ KA 06 EP 7559 ರ ಬೈಕಿನಲ್ಲಿ ಶಾಲೆಗೆ ಹೋಗಿ ಬರುತ್ತಿದ್ದರು. ದಿನಾಂಕ 28/03/2017 ರಂದು ಬೆಳಿಗ್ಗೆ ನನ್ನ ತಂದೆ ಶಾಲೆಗೆ ಹೋಗಿ ಕರ್ತವ್ಯ ಮುಗಿಸಿಕೊಂಡು ವಾಪಸ್ ಮನೆಗೆ ಬರಲು  KA 06 EP 7559 ರ ಬೈಕಿನಲ್ಲಿ ತೊಣಚಗೊಂಡನಹಳ್ಳಿ ಗ್ರಾಮದಲ್ಲಿ ರಸ್ತೆಯ ಎಡಬದಿಯಲ್ಲಿ ಮದ್ಯಾಹ್ನ 2-30 ಗಂಟೆ ಸಮಯದಲ್ಲಿ ಬರುತ್ತಿರುವಾಗ ಎದರುಗಡೆಯಿಂದ ಬಂದ KA 01 AB 9374 ನೇ ಕ್ಯಾಂಟರ್ ಅನ್ನು ಚಾಲಕ ಅತಿವೇಗವಾಗಿ ಓಡಿಸಿಕೊಂಡು ನಮ್ಮ ತಂದೆ ಓಡಿಸುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆಸಿದ್ದರಿಂದ ನಮ್ಮ ತಂದೆಯವರ ಬೆನ್ನಿಗೆ ಮತ್ತು ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಈ ವಿಚಾರವನ್ನು ನಮ್ಮ ತಂದೆ ಸಹಪಾಟಿ ಶಿಕ್ಷಕರಾದ ಸಿರಾಜ್ ಉನ್ನಿಸಾ ಎಂಬುವರು ನನಗೆ ಪೋನ್ ಮೂಲಕ ತಿಳಿಸಿದರು. ಕೂಡಲೇ ನಾನು ನನ್ನ ಸ್ನೇಹಿತ ಹತಿಕ್ ಎಂಬುವರರೊಂದಿಗೆ ಕೈಮರಕ್ಕೆ ಹೋದಾಗ ಗಾಯಾಳು ನನ್ನ ತಂದೆಯನ್ನು ಬಿಟ್ಟನಕುರಿಕೆ ನಾಗರಾಜು ಎಂಬುವರು ಒಂದು ಆಟೋದಲ್ಲಿ ಕರೆದುಕೊಂಡು ಬಂದರು. ಅದೇ ಆಟೋದಲ್ಲಿ ನಾವು ನಮ್ಮ ತಂದೆಯನ್ನು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ, ನಂತರ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿರುತ್ತೆ. ಅಪಘಾತ ಪಡಿಸಿದ ಕ್ಯಾಂಟರ್ ಚಾಲಕ ಕ್ಯಾಂಟರ್ ಸಮೇತ ಪರಾರಿಯಾಗಿದ್ದು, ಆತನ ಹೆಸರು ವಿಳಾಸ ತಿಳಿಯಲಾಗಿ ಶ್ರೀನಿವಾಸ ಬಿನ್ ತಿಮ್ಮಣ್ಣ, ಕಂಭತ್ತನಹಳ್ಳಿ ಗ್ರಾಮ, ಮಧುಗಿರಿ ತಾ ಎಂದು ತಿಳಿದಿದ್ದು, ನಾವು ಒಬ್ಬಂಟಿಗರಾಗಿದ್ದು ನಮ್ಮ ತಂದೆಗೆ ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ಅಪಘಾತ ಪಡಿಸಿದ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಅಂಶವಾಗಿರುತ್ತೆ.

ಹುಳಿಯಾರು ಪೊಲೀಸ್ ಠಾಣಾ ಮೊ.ನಂ. 49/2017 ಕಲಂ 279, 304(ಎ) ಐ.ಪಿ.ಸಿ ಆಕ್ಟ್

ದಿನಾಂಕ:-09-04-2017 ರಂದು ಬೆಳಗ್ಗೆ 11.00 ಗಂಟೆಗೆ ಪಿರ್ಯಾದಿ ಗೌಸ್ ಖಾನ್ ಬಿನ್ ಲೇಟ್ ಮೈದೀನ್ ಸಾಬ್ 65 ವರ್ಷ, ಕೂಲಿ, ಮುಸ್ಲಿಂ ಜನಾಂಗ, ಬಳ್ಳೆಕಟ್ಟೆ ಹುಳಿಯಾರು ಹೋಬಳಿ, ಚಿ. ನಾ ಹಳ್ಳಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:08-04-2017 ರಂದು ರಾತ್ರಿ ನನ್ನ ತಮ್ಮ ಸೈಫುಲ್ಲಾ ಖಾನ್ ಮತ್ತು ಬಳ್ಳೇಕಟ್ಟೆ ಗ್ರಾಮದ ಸುಲೇಮಾನ್ ಷರೀಫ್ ರವರ ಮಗ ಫೈಜಾನ್ ಸುಮಾರ 16 ವರ್ಷ, ಇವರಿಬ್ಬರು ಸುಲೇಮಾನ್ ಷರೀಫ್ ರವರ ಬೈಕಿನಲ್ಲಿ ಅಂದರೆ ಬೈಕ್ ನಂಬರ್ ಕೆಎ-44-ಕೆ-1554 ಟಿ ವಿ ಎಸ್ ಸ್ಪೋರ್ಟ್ ಬೈಕಿನಲ್ಲಿ ಬರಗೀಹಳ್ಳಿ ಗ್ರಾಮದಲ್ಲಿ ಇದ್ದ ಖವಾಲಿ ನೋಡಿಕೊಂಡು ಬರಲು ಹೋಗಿದ್ದು, ಮದ್ಯರಾತ್ರಿ ಸುಮಾರು 2.30 ಗಂಟೆಯಲ್ಲಿ ಬೈಕನ್ನು ಸೈಫುಲ್ಲ ಖಾನ್ ರವರು ಚಲಾಯಿಸಿಕೊಂಡು ಬಳ್ಳೇಕಟ್ಟೆಗೆ ಬರುವಾಗ (ಶಿರಾ ಗೇಟ್ ) ಕೈಮರದ ಹತ್ತಿರ ಚಿಕ್ಕನಾಯ್ಕನಹಳ್ಳಿ ಕಡೆಯಿಂದ ಬಂದ ಮಾರುತಿ ವ್ಯಾನ್ ನಂಬರ್ ಕೆಎ-50-ಎಂ-2957 ನೇ ನಂಬರಿನ ವ್ಯಾನಿನ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹವನ್ನು ಓಡಿಸಿಕೊಂಡು ಬಂದ್ದಿದ್ದರಿಂದ ಬೈಕ್ ಗೆ ಗುದ್ದಿದ ಪರಿಣಾಮ ನನ್ನ ತಮ್ಮನ ಕಾಲಿಗೆ ಮತ್ತು ತಲೆಗೆ ಪೆಟ್ಟುಬಿದ್ದಿದ್ದು ನಂತರ ಇದೇ ವ್ಯಾನಿನಲ್ಲಿ ಹುಳಿಯಾರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತಾರೆಂದು ನನಗೆ ಸುಲೇಮಾನ್ ಷರೀಫ್ ರವರು ಫೊನ್ ಮಾಡಿ ತಿಳಿಸಿದಾಗ ನಾನು ಮತ್ತು ಮಕ್ಕಳು ರಾತ್ರಿ ಸುಮಾರು 03.00 ಗಂಟೆಗೆ ಆಸ್ಪತ್ರೆ ಬಳಿ ಹೋದಾಗ ಇಲ್ಲಿ ವೈದ್ಯರು ಮತ್ತು ಆಂಬುಲೆನ್ಸ್ ಇಲ್ಲದ ಕಾರಣ ನಾವುಗಳು ಸೈಫುಲ್ಲಾ ಖಾನ್ ರವರನ್ನು ಖಾಸಗಿ ಆಂಬುಲೆನ್ಸ್ ನಲ್ಲಿ ತುಮಕೂರಿಗೆ ಕರೆದುಕೊಂಡು ಹೋಗುತ್ತಿದ್ದಾಗ ಕೆ ಬಿ ಕ್ರಾಸ್ ಬಳಿ ಸೈಫುಲ್ಲ ಖಾನ್ ಮೃತಪಟ್ಟರು, ಆದ್ದರಿಂದ ಪುನಃ ಅಲ್ಲಿಂದ ಹುಳಿಯಾರು ಸರ್ಕಾರಿ ಆಸ್ಪತ್ರೆಗೆ ವಾಪಸ್ಸು ಬಂದು ಮೃತದೇಹವನ್ನು ಹುಳಿಯಾರು ಶವಾಗಾರದಲ್ಲಿ ಇಟ್ಟಿರುತ್ತೇವೆ, ತಾವುಗಳು ಅಪಘಾತಪಡಿಸಿದ ವ್ಯಾನ್ ನಂ-ಕೆಎ-50-ಎಂ-2957 ನೇ ಚಾಲಕನ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಕೋರುತ್ತೇನೆ,  ಎಂತ ನೀಡಿದ ದೂರನ್ನು ಪಡೆದು ಪ್ರಕರಣ  ದಾಖಲಿಸಿ ತನಿಖೆ ಕೈಗೊಂಡಿರುತ್ತೆ. ಇದು ತಮ್ಮ ಅವಗಾಹನೆಗಾಗಿ,

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 89 guests online
Content View Hits : 302230