lowborn Tumakuru District Police | Tumkur Police | Karnataka Police | Tumakuru District Police | Tumkur Police | Karnataka Police

Dr. Divya V. Gopinath IPS,
Superintendent of Police,
Tumakuru Dt., Karnataka.

Message from SP

ಪತ್ರಿಕಾ ಪ್ರಕಟಣೆ ದಿನಾಂಕ:19-11-2017. ಅಕ್ರಮವಾಗಿ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದ... >> ಪತ್ರಿಕಾ ಪ್ರಕಟಣೆ ದಿನಾಂಕ:17-11-2017. ಮೂರು ಜನ ಅಂತರ ರಾಜ್ಯ ಕಳ್ಳರ ಬಂಧನ : 8 ಲಕ್ಷದ 50 ಸಾವಿರ... >> ದಿನಾಂಕ.17.11.2017. ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲೆ ಕಳ್ಳಂಬೆಳ್ಳ ಪೊಲೀಸ್... >> ಪತ್ರಿಕಾ ಪ್ರಕಟಣೆ. ದಿನಾಂಕ:16-11-2017 ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 261 /2017... >> ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಪತ್ರಿಕಾ ಪ್ರಕಟಣೆ. ದಿನಾಂಕ : 07/11/2017 ದಿನಾಂಕ:05-11-2017... >> ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಪತ್ರಿಕಾ ಪ್ರಕಟಣೆ. ದಿನಾಂಕ : 07/11/2017 ದಿನಾಂಕ :... >>   Date: 03-11-2017       ದಿನಾಂಕ : 03-11-2017 ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪತ್ತೆಯಾದ ಎರಡು... >>   ಪತ್ರಿಕಾ ಪ್ರಕಟಣೆ. DATE: 02-11-17 ವೃದ್ದೆಯರಿಂದ ಚಿನ್ನದ ಸರವನ್ನು ಕಳವು ಮಾಡಿದ ಆರೋಪಿ... >> ಪತ್ರಿಕಾ ಪ್ರಕಟಣೆ ದಿನಾಂಕ: 30/10/2017 ದಿನಾಂಕ/30/10/17 ರಂದು ತುಮಕೂರು ಜಿಲ್ಲಾ ಪೊಲೀಸ್ ಇಲಾಖಾ... >> ಪತ್ರಿಕಾ ಪ್ರಕಟಣೆ ದಿನಾಂಕ : 25/10/2017 ತುಮಕೂರು ನಗರದಲ್ಲಿ ಕೆ.ಎಸ್.ಅರ್.ಟಿ.ಸಿ.... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Report Archive

< April 2017 >
Mo Tu We Th Fr Sa Su
          1 2
3 4 5 6 7 9
10 11 12 13 14 15 16
17 18 19 20 21 22 23
24 25 26 27 28 29 30
Saturday, 08 April 2017
Crime Incidents 8-04-17

ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ. 76/2017 ಕಲಂ 279, 337 ಐಪಿಸಿ

ದಿನಾಂಕ:07/04/2017 ರಂದು ರಾತ್ರಿ 8-00 ಗಂಟೆಗೆ ಕೊರಟಗೆರೆ ತಾಲ್ಲೋಕ್, ಸಿ.ಎನ್ ದುರ್ಗ ಹೋಬಳಿ, ವಿರೋಬನಹಳ್ಳಿ ಗ್ರಾಮದ ರಂಗನಾಥ ಬಿನ್ ರಂಗೇಗೌಡ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ:07/04/2017 ರಂದು KA-06-TB-2668/2669 ನೇ ಟ್ರಾಕ್ಟರ್ & ಟ್ರೈಲರ್‌ನಲ್ಲಿ ಕೊಬ್ಬರಿ ಮಟ್ಟೆಯನ್ನು ಸಿದ್ದಗಂಗಪ್ಪ ರವರೊಂದಿಗೆ ತುಮಕೂರು ತಾಲ್ಲೋಕ್ ಹೆಬ್ಬೂರಿನಲ್ಲಿ ತುಂಬಿಕೊಂಡು ಕುಣಿಗಲ್ ತುಮಕೂರು ರಸ್ತೆಯಲ್ಲಿ ಮದ್ಯಾಹ್ನ 2-30 ಗಂಟೆ ಸಮಯದಲ್ಲಿ ಗೂಳೂರು ಸಮೀಪ ಸೂಫಾ ಕಾಲೇಜು ಮುಂಭಾಗ ಬರುತ್ತಿರುವಾಗ್ಗೆ ಕುಣಿಗಲ್ ಕಡೆಯಿಂದ KA-22-B-2429ನೇ ಬಸ್ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಟ್ರಾಕ್ಟರ್ ಟ್ರೈಲರ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆಸಿ ಅಪಘಾತ ಉಂಟುಮಾಡಿದ್ದರಿಂದ ಟ್ರೈಲರ್ ಪಲ್ಟಿಯಾಗಿ ಇಂಜಿನ್ ಬಲಭಾಗಕ್ಕೆ ತಿರುಗಿಕೊಂಡು ನಿಂತಿದ್ದು ಟ್ರೈಲರ್‌ನಲ್ಲಿ ಕುಳಿತಿದ್ದ ನನಗೆ ಯಾವುದೇ ಚಿಕಿತ್ಸೆ ಪಡೆಯುವಂತಹ ಗಾಯಗಳಾಗಿಲ್ಲ ಮತ್ತು ನನ್ನ ಜೊತೆಯಲ್ಲಿದ್ದ ಸಿದ್ದಗಂಗಪ್ಪ ರವರಿಗೆ ಸೊಂಟಕ್ಕ, ಬೆನ್ನಿಗೆ, ಕುಂಡಿಗೆ, ತಲೆಗೆ ಏಟಾಗಿ ರಕ್ತಗಾಯಗಳಾಗಿದ್ದು ಇವರನ್ನು ಯಾವುದೋ ಒಂದು ಆಟೋದಲ್ಲಿ ತುಮಕೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿರುತ್ತೆ ಮತ್ತು ಬಸ್ಸಿನಲ್ಲಿದ್ದ ಕೆಲವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು ಈ ಅಪಘಾತಕ್ಕೆ ಕಾರಣನಾದ KA-22-B-2429ನೇ ಬಸ್ ಚಾಲಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿದೆ.

ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ. 77/2017 ಕಲಂ 143, 147, 148, 323, 324, 447, 504, 506, 149 ಐಪಿಸಿ

ದಿನಾಂಕ:07/04/2017 ರಂದು ರಾತ್ರಿ 9-00 ಗಂಟೆಗೆ ತುಮಕೂರು ತಾಲ್ಲೋಕ್, ಕಸಬಾ ಹೋಬಳಿ, ಹಬ್ಬತ್ತನಹಳ್ಳಿ ಗ್ರಾಮದ ಲಕ್ಷ್ಮಣ ಬಿನ್ ವೆಂಕಟಾಚಲಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ಹಬ್ಬತ್ತನಹಳ್ಳಿ ಗ್ರಾಮದ ಸ.ನಂ 4/1ಎ2 ರಲ್ಲಿ ಜಮೀನಿನ ಬಗ್ಗೆ ನಮಗೂ ಮತ್ತು ನಮ್ಮ ಗ್ರಾಮದ ವೆಂಕಟಯ್ಯ ರವರಿಗೆ ಸಿವಿಲ್ ನ್ಯಾಯಾಲಯದಲ್ಲಿ ಓ ಎಸ್ ನಂ 210/16 ರಲ್ಲಿ ವಿಚಾರಣೆಯಾಗಿ ಜಮೀನು ನಮ್ಮ ಅನುಭವಕ್ಕೆ ಆದೇಶವಾಗಿದ್ದು, ಗೋವಿಂದರಾಜು ಹಾಗೂ ಅವರ ಕಡೆಯವರು ನಮ್ಮ ಸ್ವಾಧೀನಕ್ಕೆ ಅಡ್ಡಿಪಡಿಸದಂತೆ ಆದೇಶವಾಗಿದ್ದು, ಆದರೂ ಸಹ ದಿನಾಂಕ:07/04/2017 ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ನಾನು ಮತ್ತು ನಮ್ಮ ತಂದೆ ವೆಂಕಟಾಚಲಯ್ಯ ರವರು ನಮ್ಮ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾಗ ನಮ್ಮೂರಿನ ವಾಸಿಗಳಾದ ಕೃಷ್ಣಮೂರ್ತಿ, ಶಿವರಾಜು, ರಾಮ, ಗೋವಿಂದರಾಜು, ಗಂಗಮ್ಮ ರವರು ಅಕ್ರಮ ಗುಂಪು ಕಟ್ಟಿಕೊಡು ಮಚ್ಚು, ದೊಣ್ಣೆ ಹಿಡಿದುಕೊಂಡು, ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಈ ಜಮೀನು ನಮ್ಮದು ಎಂದು ಏಕಾಏಕಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈಯ್ದು, ನನಗೆ ಬಲಬುಜಕ್ಕೆ, ತುಟಿಗೆ ಹಾಗೂ ತಲೆಯ ಹತ್ತಿರ ಕೃಷ್ಣಮೂರ್ತಿ ಮಚ್ಚಿನ ಹಿಂಬದಿಯಿಂದ ಹೊಡೆದಿದ್ದು, ನನ್ನ ತಂದೆಗೆ ಶಿವರಾಜು ಬಲಕಿವಿಯ ಹತ್ತಿರ ಮಚ್ಚಿನ ಹಿಂಬದಿಯಿಂದ ಹೊಡೆದಿದ್ದು, ರಾಮು ರವರು ದೊಣ್ಣೆಯಿಂದ ನನಗೆ ಹಾಗೂ ನಮ್ಮ ತಂದೆಗೆ ಮೈಕೈಗೆ ಹೊಡೆದು ನೋವುಂಟು ಮಾಡಿರುತ್ತಾರೆ ಹಾಗೂ ಗೋವಿಂದರಾಜು & ಗಂಗಮ್ಮ ರವರು ನಮ್ಮ ತಂದೆಯನ್ನು ನೆಲಕ್ಕೆ ಕೆಡವಿಕೊಂಡು ಮೈಕೈಗೆ ಇತರೆ ಕಡೆ ಒದ್ದು ನೋವುಂಟು ಮಾಡಿದರು. ಇವರು ತಮ್ಮ ಕೈಯಲ್ಲಿದ್ದ ಮಚ್ಚು ಹಾಊ ದೊಣ್ಣೆಯನ್ನು ಬಿಸಾಕಿ ನಿಮ್ಮನ್ನು ಇಷ್ಟಕ್ಕೆ ಬಿಡುವುದಿಲ್ಲ, ಒಂದು ಗತಿ ಕಾಣಿಸುತ್ತೇವೆ ಎಂತಾ ಪ್ರಾಣ ಭಯ ಉಂಟು ಮಾಡಿರುತ್ತಾರೆ. ನಮ್ಮ ತಂದೆಯವರನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ಸೇರಿಸಿ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿದೆ.

ಚೇಳೂರು  ಪೊಲೀಸ್   ಠಾಣಾ  ಮೊ.ನಂ.59/2017  ಕಲಂ 430 ರೆ/ವಿ 34  ಐ.ಪಿ.ಸಿ

ಗುಬ್ಬಿ ತಾಲೋಕ್ ಅದಲಗೆರೆ ಗ್ರಾಮವು ತ್ಯಾಗಟೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುತ್ತದೆ.   ಅದಲಗೆರೆ ಗ್ರಾಮದಲ್ಲಿ ಸುಮಾರು 2000 ಜನಸಂಖ್ಯೆ  ಇದ್ದು ಜನಗಳಿಗೆ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಜಿಲ್ಲಾ ಪಂಚಾಯಿತಿ ವತಿಯಿಂದ ಮೇಲ್ಮಟ್ಟದ 1 ಲಕ್ಷ ಲೀಟರ್ ನ  ಜಲ  ಸಂಗ್ರಹಗಾರ  ನಿರ್ಮಿಸಿ ನೀರು ಸರಬರಾಜು ಮಾಡಲಾಗುತ್ತದೆ.   ದಿನಾಂಕ:30-03-2017 ರಿಂದ ಈ  ಜಲ ಸಂಗ್ರಹಾಗಾರ ದಿಂದ ನೀರು ಸಂಪರ್ಕದಿಂದ  ಹಾಲಿ ತ್ಯಾಗಟೂರು ಗ್ರಾಮ ಪಂಚಾಯ್ತಿ ಸದಸ್ಯರಾದ  ಎ.ಎಸ್.ಸತೀಶ್ ರವರು ಮತ್ತು ನೀರು ವಿತರಕ ನಾಗರಾಜು ಇವರಿಬ್ಬರು ಸೇರಿ ಸಾರ್ವಜನಿಕ  ಕುಡಿಯುವ ನೀರನ್ನು  ಸತೀಶ್ ರವರ ದಾಳಿಂಬೆ ತೋಟಕ್ಕೆ ನೀರು ಹರಿಯುವಂತೆ ಸಂಪರ್ಕ  ಕಲ್ಪಿಸಿಕೊಂಡಿರುತ್ತಾರೆಂದು ಸಾರ್ವಜನಿಕರು ದೂರಿದ ಮೇರೆಗೆ ದಿನಾಂಕ:06-04-2017 ರಂದು ಸಂಜೆ 3-00 ಗಂಟೆ ಸಮಯದಲ್ಲಿ  ತ್ಯಾಗಟೂರು ಗ್ರಾಮ ಪಂಚಾಯ್ತಿ  ಪಿ.ಡಿ.ಒ  ಕೆ.ಶಿವಸ್ವಾಮಿ,ಗ್ರಾ.ಪಂ.ಅಧ್ಯಕ್ಷರಾದ ಮಲ್ಲಿಕಾರ್ಜುನಯ್ಯ, ಕಾರ್ಯದರ್ಶಿಗಳಾದ  ಎಸ್.ವೀರಪ್ಪ, ಸದಸ್ಯರಾದ ಪರಮೇಶ್, ಗ್ರಾಮಸ್ಥರಾದ ನಟೇಶ್,  ಜ್ಯೋತಿ ಪ್ರಸಾದ್,  ಪಂಚಾಕ್ಷರಯ್ಯ ರವರು ಮತ್ತು ತಾಲೋಕ್ ಪಂಚಾಯ್ತಿ ಸದಸ್ಯರಾದ ಶೆಟ್ಟಳಯ್ಯ ರವರು ಹೋಗಿ ಪರಿಶೀಲಿ ಸಲಾಗಿ ಓವರ್ ಹೆಡ್ ಟ್ಯಾಂಕ್ (ಓ.ಹೆಚ್.ಟಿ) ನಿಂದ  ಕಲ್ಪಿಸಿಕೊಂಡಿದ್ದ 2 ½ ಇಂಚಿನ ಪೈಪಿನ ಸಂಪರ್ಕವನ್ನು  ಸತೀಶ್ ರವರ ಧಾಳಿಂಬೆ  ತೋಟಕ್ಕೆ ಹೋಗುವ  3” ಇಂಚಿನ ಪೈಪಿನಿಂದ ಮಾಡಿರುವ  ಸಂಪರ್ಕವನ್ನು  ಎಂಡ್ ಕ್ಯಾಂಪಿನಿಂದ ಖಡಿತ ಮಾಡಿಕೊಂಡಿದ್ದು ಕಂಡು ಬಂದಿರುತ್ತದೆ.  ಸಾರ್ವಜನಿಕ ಕುಡಿಯುವ ನೀರನ್ನು ತೋಟಕ್ಕೆ ಹಾಯಿಸಿಕೊಂಡು ತೊಂದರೆ ಮಾಡಿರುತ್ತಾರೆಂದು  ಸಾರ್ವಜನಿಕರು ದೂರಿರುತ್ತಾರೆ.  ಆದ್ದರಿಂದ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೋರುತ್ತೇನೆ ಇತ್ಯಾದಿ ಪಿರ್ಯಾದು ಅಂಶವಾಗಿದೆ.

ಬಡವನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ 31/2017   ಕಲಂ 87 ಕೆ ಪಿ ಆಕ್ಟ್‌

ದಿ;07/04/2017 ರಂದು ಸಂಜೆ 4-00 ಗಂಟೆಗೆ  ಪಿ ಐ ರವರು ಠಾಣೆಗೆ ಬಂದು  ವರದಿ ನೀಡಿದ ಅಂಶವೆನೆಂದರೆ  ಮದ್ಯಾಹ್ನ 3-00 ಗಂಟೆಯಲ್ಲಿ  ಕಚೇರಿಯಲ್ಲಿದ್ದಾಗ, ಠಾಣಾ ಸರಹದ್ದು ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿಗೆ ಸೇರಿದ ಲಕ್ಷ್ಮೀಪುರ ಗ್ರಾಮದ ಕೆರೆ ಅಂಗಳದ  ಸಾರ್ವಜನಿಕ ಸ್ಥಳದಲ್ಲಿ  ಇಸ್ಟೀಟ್‌ ಜೂಜಾಟ ಆಡುತ್ತಿರುವ ಬಗ್ಗೆ ಮಾಹಿತಿ ಮೇರೆಗೆ  ನಾನು ನಮ್ಮ  ಸಿಬ್ಬಂದಿಯವರಾದ ಎ ಎಸ್ ಐ  ರಾಮಕೃಷ್ಣಯ್ಯ, ಪಿಸಿ 949 ರಂಗನಾಥ . ಪಿ.ಸಿ. 286 ಶ್ರೀನಿವಾಸ,  ಎ.ಹೆಚ್.ಸಿ 104 ಲಕ್ಷ್ಮೀಕಾಂತ್ ರವರುಗಳೊಂದಿಗೆ, ಮದ್ಯಾಹ್ನ 3.30 ಗಂಟೆಯಲ್ಲಿ ಜೂಜುಕಟ್ಟೆಯ ಸಮೀಪ ಹೋಗಿ ನೋಡಲಾಗಿ, ಸುಮಾರು 7 ಜನರು ದುಂಡಾಕಾರವಾಗಿ ಕುಳಿತುಕೊಂಡು ಒಳಗೆ – ಹೊರಗೆ ಎಂದು ಹೇಳುತ್ತಾ ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಟೀಟ್‌ ಎಲೆಗಳಿಂದ ಜೂಜಾಟ ಆಡುತ್ತಿದ್ದವರನ್ನು, ಹಿಡಿಯಲು ಹೋದಾಗ  ಇಬ್ಬರು ಆಸಾಮಿಗಳು ಮಾತ್ರ ಸಿಕ್ಕಿದ್ದು, ಉಳಿದ 5 ಜನರು  ಓಡಿ ಹೋದರು, ಸಿಕ್ಕಿದವರ ಹೆಸರು ವಿಳಾಸ ಕೇಳಲಾಗಿ 1] ಆನಂದ ಬಿನ್‌ ಕಾಡಪ್ಪ, 28 ವರ್ಷ, ಬಲಜಿಗರು, ಜಿರಾಯ್ತಿ, 2]  ಜಯರಾಮು ಬಿನ್ ರಂಗನಾಥಪ್ಪ ,30  ವರ್ಷ, ಬಲಜಿಗರು, ಜಿರಾಯ್ತಿ, ಲಕ್ಷೀಪುರ  , ದೊಡ್ಡೇರಿ ಹೋಬಳಿ, ಮಧುಗಿರಿ ತಾಲ್ಲೂಕು   ಎಂದು ತಿಳಿಸಿದರು.  ಹಾಗು  ಮೇಲೆ ತಿಳಿಸಿದಂತೆ ಓಡಿಹೋದವರ ಹೆಸರು ವಿಳಾಸವನ್ನು ಆನಂದರವರನ್ನು ಕೇಳಿ ತಿಳಿಯಲಾಗಿ 3]  ರಂಗನಾಥ ಬಿನ್‌ ಲೇಟ್‌ ತಿಮ್ಮಣ್ಣ , 28 ವರ್ಷ, ಬಲಜಿಗರು , ಜಿರಾಯ್ತಿ 4]  ಯತೀಶ್‌ ಬಿನ್‌ ರಂಗನಾಥಪ್ಪ, 30 ವರ್ಷ, ಬಲಜಿಗರು, ಜಿರಾಯ್ತಿ, 5] ವೆಂಕಟೇಶ್‌ ಬಿನ್ ತಿಮ್ಮಣ್ಣ, 28 ವರ್ಷ, ಬಲಜಿಗರು, ಜಿರಾಯ್ತಿ, 6] ದೇವರಾಜು ಬಿನ್‌ ನಾರಾಯಣಪ್ಪ, 30 ವರ್ಷ, ಬಲಜಿಗರು, ಜಿರಾಯ್ತಿ, ಮತ್ತು 7] ಗುರು ಬಿನ್‌‌ ಕದರಪ್ಪ , 20 ವರ್ಷ, ಆದಿ ದ್ರಾವಿಡ , ಗಾರೆಕೆಲಸ ಎಲ್ಲರೂ ಲಕ್ಷ್ಮೀಪುರ ಗ್ರಾಮ, ದೊಡ್ಡೇರಿ ಹೋಬಳಿ, ಮಧುಗಿರಿ ತಾಲ್ಲೂಕು  ಎಂತಾ  ತಿಳಿಸಿದ್ದು, ಜೂಜಾಟಕ್ಕೆ ಪಣವಾಗಿ ಕಟ್ಟಿ ಅಖಾಡದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದದ್ದ ಹಣವನ್ನು ಸಂಗ್ರಹಿಸಿ ಎಣಿಸಿ ನೋಡಲಾಗಿ 1.520/- ರೂಗಳು, 52 ಇಸ್ಟೀಟ್‌ ಎಲೆಗಳು ಹಾಗೂ ಒಂದು ಹಳೆಯ ನ್ಯೂಸ್ ಪೇಪರ್‌ ರನ್ನು ವಶಕ್ಕೆ ಪಡೆದು, ಸದರಿ ಮಾಲು ಮತ್ತು ಆರೋಪಿಗಳೊಂದಿಗೆ ಠಾಣೆಗೆ ಬಂದು,  ನ್ಯಾಯಾಲಯದ ಅನುಮತಿ ಪಡೆದು ಮುಂದಿನ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿ ನೀಡಿದ ವರದಿಯನ್ನು ಪಡೆದು , ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ-55/2017 ಕಲಂ: 87 ಕೆ.ಪಿ ಆಕ್ಟ್

ದಿನಾಂಕ:06-04-2017 ರಂದು ಮಾನ್ಯ ಪಿ ಐ ಸಾಹೇಬರವರು ನೀಡಿದ ಜ್ಞಾಪನದ ಅಂಶವೇನೆಂದರೆ ದಿನಾಂಕ:06-04-2017 ರಂದು ರಾತ್ರಿ 9-15 ಗಂಟೆ ಸಮಯದಲ್ಲಿ ಹಾಲ್ಕುರಿಕೆ ರಸ್ತೆಯ ಅಣ್ಣಾಪುರ ಗೇಟ್ ಬಳಿ ಇರುವ  ಶ್ರೀ ಶನಿಮಹಾತ್ಮ ದೇವಸ್ಥಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ 1) ವಸಂತಕುಮಾರ 2) ರಂಗನಾಥ 3) ರಂಗಧಾಮ 4) ಸುರೇಶ 5) ಯತೀಶ 6) ನಂದೀಶ 7) ಕೃಷ್ಣಮೂರ್ತಿ ರವರುಗಳು 9200-00 ರೂ ಹಣವನ್ನು ಪಣವಾಗಿ ಕಟ್ಟಿಕೊಂಡು 52 ಇಸ್ವೀಟ್ ಎಲೆಗಳ ಸಹಾಯದಿಂದ ನೆಲಕ್ಕೆ ಒಂದು ಪ್ಲಾಸ್ಟಿಕ್ ಚೀಲವನ್ನು ಹಾಕಿಕೊಂಡು ಕಾನೂನು ಬಾಹಿರವಾದ ಅಂದರ್ ಬಾಹರ್ ಎಂಬ ಜೂಜಾಟವಾಡುತ್ತಿದ್ದು. ಇವರನ್ನು ವಶಕ್ಕೆ ಪಡೆದಿದ್ದು ಪ್ರಕರಣ ದಾಖಲಿಸುವಂತೆ ಜ್ಞಾಪನಾದಲ್ಲಿ ಇದ್ದ ವರದಿಯ ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೆ.


Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 41 guests online
Content View Hits : 194446
Hackguard Security Enabled