lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >> ಪತ್ರಿಕಾ ಪ್ರಕಟಣೆ ದಿನಾಂಕ: 25-03-2018. ಮೊಬೈಲ್‌‌ ಪೋನ್‌‌ಗಳನ್ನು ಕಳವು ಮಾಡುತ್ತಿದ್ದ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ ದಿನಾಂಕ. 20.03.2018. ಯುಗಾದಿ ಹಬ್ಬದ ಪ್ರಯುಕ್ತ... >> ಪತ್ರಿಕಾ ಪ್ರಕಟಣೆ ದಿನಾಂಕ : 17-03-2018 -: ಚೂರಿಯಿಂದ ಇರಿದು ದರೋಡೆ ಮಾಡುತ್ತಿದ್ದ ಆರೋಪಿಗಳ... >> ಪ್ರತಿಕಾ ಪ್ರಕಟಣೆ. ದಿ: 16/03/18 ಮೂವರು ಮನೆ ಕಳ್ಳರ ಬಂಧನ, 5 ಲಕ್ಷ ಮೌಲ್ಯದ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< April 2017 >
Mo Tu We Th Fr Sa Su
          1 2
3 4 5 7 8 9
10 11 12 13 14 15 16
17 18 19 20 21 22 23
24 25 26 27 28 29 30
Thursday, 06 April 2017
Crime Incidents 06-04-17

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ-  39/2017   ಕಲಂ: 323.324.504.506 RW 34 IPC

ದಿನಾಂಕ:05/04/2017 ರಂದು ಸಂಜೆ 4:30 ಗಂಟೆಗೆ ಪಿರ್ಯಾದಿ ಅನಿಲ್ ಕುಮಾರ್ ಬಿನ್ ರಾಮಚಂದ್ರಪ್ಪ ರವರು ನೀಡಿದ ಲಿಖಿತ ದೂರಿನ ಅಂಶವೇನೆಂದರೆ ದಿನಾಂಕ:01/04/2017 ರಂದು ಮದ್ಯಾಹ್ನ 1:00 ಗಂಟೆ ಸಮಯದಲ್ಲಿ ನಾನು ನಮ್ಮ ಸ್ನೇಹಿತರೊಂದಿಗೆ ನಮ್ಮೂರಿನ ಅಚ್ಚಮ್ಮನಹಳ್ಳಿ ರಸ್ತೆ ಯಲ್ಲಿರುವ ಮದರ್ ಸಾಬ್ ಮಿಲ್ಲಿನ ಮುಂಭಾಗದ ಮೈದಾನಕ್ಕೆ ಕ್ರಿಕೇಟ್ ಆಡಲು ಹೋಗಿದ್ದು ಅಲ್ಲಿಗೆ ನಮ್ಮೂರಿನ 1] ರವಿ.ಜಿ ಬಿನ್ ಲೇ|| ಗೋಪಾಲಪ್ಪ, 2] ದಿವಾಕರ ಬಿನ್ ಆರ್ ಅಂಜಯ್ಯ 3] ಪ್ರಭಾಕರ ಬಿನ್ ಅಂಜಯ್ಯ ರವರುಗಳು ಸಹ ಅಲ್ಲಿಗೆ ಆಟವಾಡಲು ಬಂದಿದ್ದು ಇವರು ವಿನಾ ಕಾರಣ ಹಳೇ ದ್ವೇಷದಿಂದ ನನ್ನ ಮೇಲೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈಯ್ದು ರವಿ ಎಂಬುವವನು ದೊಣ್ಣೆಯಿಂದ ನನ್ನ ಮೈ ಕೈಗೆ ಹೊಡೆದು ನೋವುಂಟು ಮಾಡಿದ ನಂತರ ಎಲ್ಲರೂ ನನ್ನನ್ನು ಸೂಳೆ ಮಗನೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಒಂದು ಗತಿ ಕಾಣಿಸುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಿ ಹೊರಟು ಹೋದರು , ನಾನು ನಮ್ಮ ಮನೆಯವರಿಗೆ ವಿಚಾರ ತಿಳಿಸಲಾಗಿ ಆಯ್ತು ಬಿಡು ಇಬ್ಬರನ್ನು ಕರೆದು ನ್ಯಾಯ ಪಂಚಾಯ್ತಿ ಮಾಡಿಸೋಣ ಅಂತ ಹೇಳಿದ್ದು ಅವರು ನ್ಯಾಯ ಪಂಚಾಯ್ತಿಗೆ ಬಾರದಿದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂತ ಈ ಗಳವನ್ನು ರಮೇಶ ಮತ್ತು ಇತರರು ನೋಡಿರುತ್ತಾರೆಂತ ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತದೆ.

ಹುಳಿಯಾರು ಪೊಲೀಸ್ ಠಾಣಾ ಮೊ.ನಂ. 47/2017, ಕಲಂ 279, 337 ಐ.ಪಿ.ಸಿ.

ದಿನಾಂಕ 05/04/2017 ರಂದು ಬೆಳಿಗ್ಗೆ 10-30 ಗಂಟೆಗೆ ಚಿಕ್ಕನಾಯಕನಹಳ್ಳಿ ತಾಲ್ಲೂಕು, ಹುಳಿಯಾರು ಹೋಬಳಿ, ನುಲೇನೂರು ಗ್ರಾಮದ ವಾಸಿ  ಹನುಮಂತಯ್ಯ ಬಿನ್ ಲೇಟ್ ಕರಿಯಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 18/03/2017 ರಂದು ಮಧ್ಯಾಹ್ನ 01-30 ಗಂಟೆ ಸಮಯದಲ್ಲಿ ನನ್ನ ತಾಯಿ ತೊಳಸಮ್ಮ ಮತ್ತು ನನ್ನ ಮಗಳಾದ ಕಾವ್ಯ ಪ್ಲಾಸ್ಟಿಕ್ ಕವರ್ ಫ್ಯಾಕ್ಟರಿಯಲ್ಲಿ ಕೆಲಸ ಮತ್ತು ನಮ್ಮೂರಿನ ಗಿರಿಜಮ್ಮ ಈ ಮೂರು ಜನರು ನುಲೇನೂರಿನಿಂದ ಹೊಯ್ಸಳಕಟ್ಟೆಗೆ ನಂ ಕೆ.ಎ 44 - 7936 ನೇ ಆಟೋದಲ್ಲಿ ಹೋಗುತ್ತಿದ್ದಾಗ, ಚಾಲಕನ ಅಜಾಗರೂಕತೆಯಿಂದ ಕಲ್ಲೆನಹಳ್ಳಿಯ ಇಳಿಜಾರಿನಲ್ಲಿ ರಸ್ತೆಯ ಪಕ್ಕದಲ್ಲಿ ಇದ್ದ ಲೈಟ್ ಕಂಬಕ್ಕೆ ಗುದ್ದಿ ಅಪಘಾತಗೊಳಿಸಿರುತ್ತಾನೆ. ಆಟೋ ಚಾಲಕ & ಮಾಲೀಕ ಭರತ್ ಬಿನ್ ಭೂತಯ್ಯ ಎಂದು ತಿಳಿದು ಬಂದಿರುತ್ತೆ. ತೊಳಸಮ್ಮನಿಗೆ ಬಲಗೈ, ಮೂಳೆ ಮುರಿದಿದ್ದು 2 ಕಡೆ ಬಲಗಾಲು ತೊಡೆಯ ಹಿಂಬಾಗ ತರಚಿರುತ್ತೆ. ಕಾವ್ಯಾಳ ಗುದದ್ವಾರ, ಬಲಕಾಲು ಮಂಡಿಯ ಮೇಲೆ ರಕ್ತಗಾಯಗಳಾಗಿರುತ್ತೆ. ಹಾಗೂ ಗಿರಿಜಮ್ಮನವರಿಗೆ ಎಡ ಕಣ್ಣಿನ ಮೇಲ್ಬಾಗ ಮತ್ತು ಎಡಕಾಲಿಗೆ ತರಚಿದ ಗಾಯಗಳಾಗಿರುತ್ತವೆ. ಅಪಘಾತವಾದ ನಂತರ 108 ಆಂಬುಲೆನ್ಸ್ ವಾಹನಕ್ಕೆ ಕರೆಮಾಡಿ ನಮ್ಮ ಗ್ರಾಮದ ಭೂತೇಶ್, ಲಕ್ಷಮ್ಮ ಇವರುಗಳು ಹುಳಿಯಾರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿರುತ್ತಾರೆ. ಗಾಯಾಳುಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ಸಲಹೆ ಮೇರೆಗೆ ತುಮಕೂರು ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ನಂತರ ಸ್ವಗ್ರಾಮಕ್ಕೆ ಕರೆತಂದಿರುತ್ತೆ. ಗಾಯಗಳು ಮಾದ ನಂತರ ಕಬ್ಬಿನದ ರಾಡುಗಳನ್ನು ಹಾಕಬೇಕು ಎಂದು ಹೇಳಿರುತ್ತಾರೆ. ಆದ್ದರಿಂದ ಮೇಲ್ಕಂಡ ಆಟೋ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.33/2017, ಕಲಂ: 87 ಕೆ.ಪಿ.ಆಕ್ಟ್.

ದಿನಾಂಕ:04/04/2017 ರಂದು ಸಂಜೆ ಠಾಣಾ ಪಿ.ಎಸ್.ಐ-ಹನುಮಂತರಾಯಪ್ಪ.ಹೆಚ್‌.ಜಿ. ರವರು ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನದ ಸಾರಾಂಶವೇನೆಂದರೆ, ನಾನು ದಿನಾಂಕ:04/04/2017 ರಂದು ಸಾಯಂಕಾಲ 03:30 ಗಂಟೆಯಲ್ಲಿ ಠಾಣೆಯಲ್ಲಿರುವಾಗ್ಗೆ ಮಿಡಿಗೇಶಿ ಪೊಲೀಸ್ ಠಾಣಾ ಸರಹದ್ದು ಐಡಿ ಹಳ್ಳಿ ಹೋಬಳಿ, ಗರಣಿ ಗ್ರಾಮದ ಮಾರಮ್ಮನ ಗುಡಿಯ  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಎಂತ ಬಂದ ಖಚಿತ ವರ್ತಮಾನದ ಮೇರೆಗೆ ನಾನು ಸಿಬ್ಬಂದಿಯೊಂದಿಗೆ ಗರಣಿ ಗ್ರಾಮಕ್ಕೆ ಹೋಗಿ ಅಲ್ಲಿಂದ ಪಂಚಾಯ್ತುದಾರರನ್ನು ಜೊತೆಯಲ್ಲಿ ಕರೆದುಕೊಂಡು ಮೇಲ್ಕಂಡ ಸ್ಥಳಕ್ಕೆ ಹೋಗಿ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಜನರು ಗುಂಡಾಕಾರವಾಗಿ ಕುಳಿತು ಒಳಗೆ-ಹೊರಗೆ ಎಂತ ಜೋರಾಗಿ ಹೇಳುತ್ತಾ ಅಂದರ್-ಬಾಹರ್ ಇಸ್ಪಿಟ್ ಜೂಜಾಟ ಆಡುತ್ತಿದ್ದುದ್ದನ್ನು ಖಚಿತ ಪಡಿಸಿಕೊಂಡು ಜೂಜಾಟವಾಡುತ್ತಿದ್ದ ಆಸಾಮಿಗಳ ಮೇಲೆ ಸಿಬ್ಬಂದಿಯೊಂದಿಗೆ ದಾಳಿಮಾಡಿ ಜೂಜಾಟದಲ್ಲಿ ತೊಡಗಿದ್ದ ಆಸಾಮಿಗಳನ್ನು ಹಿಡಿದುಕೊಂಡು ವಿಚಾರ ಮಾಡಿ ಹೆಸರು ವಿಳಾಸ ತಿಳಿಯಲಾಗಿ 1)ಚಿಕ್ಕ ನರಸಿಂಹಯ್ಯ ಬಿನ್ ಲೇ||ನರಸಪ್ಪ, 30 ವರ್ಷ, ವ್ಯಾಪಾರ, ಎಕೆ ಜನಾಂಗ, ಗರಣಿ ಗ್ರಾಮ, ಐ.ಡಿ.ಹಳ್ಳಿ ಹೋಬಳಿ, ಮಧುಗಿರಿ ತಾಲ್ಲೋಕು, 2)ಮಂಜುನಾಥ ಬಿನ್ ಮುದ್ದಪ್ಪ, 28 ವರ್ಷ, ಕೂಲಿ ಕೆಲಸ, ಬುಡುಬುಡುಕೆ ಜನಾಂಗ, ಗರಣಿ ಗ್ರಾಮ, ಐ.ಡಿ.ಹಳ್ಳಿ ಹೋಬಳಿ, ಮಧುಗಿರಿ ತಾಲ್ಲೋಕು, 3)ನವೀನ್ ಕುಮಾರ್‌ ಬಿನ್ ಮಹಾಲಿಂಗಪ್ಪ, 26 ವರ್ಷ, ಕೂಲಿ ಕೆಲಸ, ಎ.ಕೆ.ಜನಾಂಗ, ಗರಣಿ ಗ್ರಾಮ, ಐ.ಡಿ.ಹಳ್ಳಿ ಹೋಬಳಿ, ಮಧುಗಿರಿ ತಾಲ್ಲೋಕು, 4)ಶ್ರೀನಿವಾಸ ಬಿನ್ ಲೇ||ಮಚ್ಚಪ್ಪ, 30 ವರ್ಷ, ಕೂಲಿ ಕೆಲಸ, ಎ.ಕೆ.ಜನಾಂಗ, ಗರಣಿ ಗ್ರಾಮ, ಐ.ಡಿ.ಹಳ್ಳಿ ಹೋಬಳಿ, ಮಧುಗಿರಿ ತಾಲ್ಲೋಕು, 5)ಮಂಜುನಾಥ ಬಿನ್ ಲಿಂಗಪ್ಪ, 28 ವರ್ಷ, ಎ.ಕೆ.ಜನಾಂಗ, ಗರಣಿ ಗ್ರಾಮ, ಐ.ಡಿ.ಹಳ್ಳಿ ಹೋಬಳಿ, ಮಧುಗಿರಿ ತಾಲ್ಲೋಕು ಎಂತ ತಿಳಿಸಿರುತ್ತಾರೆ

ನಂತರ ಅಖಾಡದಲ್ಲಿ ಜೂಜಾಟಕ್ಕೆ ಪಣವಾಗಿ ಕಟ್ಟಿಕೊಂಡು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ 1)780/-ರೂ ನಗದು ಹಣ,  2)52 ಇಸ್ಪೀಟ್ ಎಲೆಗಳು, 3)ಎರಡು ಹಳೆಯ ನ್ಯೂಸ್ ಪೇಪರ್ ಇವುಗಳನ್ನು ಪಂಚರ ಸಮಕ್ಷಮ ಸಂಜೆ 04:15 ಗಂಟೆಯಿಂದ 05:00 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ವಶಕ್ಕೆ ತೆಗೆದುಕೊಳ್ಳಲಾಯಿತು. ನಂತರ ಜೂಜಾಟದಲ್ಲಿ ತೊಡಗಿ ಸ್ಥಳದಲ್ಲಿ ಸಿಕ್ಕಿಬಿದ್ದ ಆಸಾಮಿಗಳಿಗೆ ಕರೆ ಮಾಡಿದಾಗ ಠಾಣೆಗಾಗಲಿ ಅಥವಾ ನ್ಯಾಯಾಲಯಕ್ಕಾಗಲಿ ಹಾಜರಾಗುವಂತೆ ಸೂಕ್ತ ತಿಳುವಳಿಕೆ ನೀಡಿ ಸ್ಥಳದಿಂದ ಕಳುಹಿಸಿಕೊಟ್ಟಿರುತ್ತೆ. .

ಆದ್ದರಿಂದ ಸಾರ್ವಜನಿಕ ಸ್ಥಳದಲ್ಲಿ ಇಸ್ಟೀಟ್ ಜೂಜಾಟದಲ್ಲಿ ತೊಡಗಿದ್ದ ಮೇಲ್ಕಂಡವರ ಮೇಲೆ ಕಾನೂನು ರೀತ್ಯ   ಕ್ರಮ ಜರುಗಿಸಲು ಈ ಮೂಲಕ ನಿಮಗೆ ಸೂಚಿಸಿ, ಇದರೊಂದಿಗೆ ಸ್ಥಳ ಪಂಚನಾಮೆ ಮತ್ತು ಕೃತ್ಯ ನಡೆದ ಸ್ಥಳದಲ್ಲಿ ವಶಪಡಿಸಿಕೊಂಡ ಮೇಲ್ಕಂಡ ಮಾಲುಗಳನ್ನು ನಿಮ್ಮ ವಶಕ್ಕೆ ನೀಡಿರುತ್ತೇನೆಂತ ನೀಡಿದ ಜ್ಞಾಪನದ ಮೇರೆಗೆ ಠಾಣಾ NCR.GSC. No.PO1657170600050/2017 ರಲ್ಲಿ ನೊಂದಾಯಿಸಿಕೊಂಡಿರುತ್ತೆ.

ಸದರಿ NCR ವಿಷಯವು ಅಸಂಜ್ಞೇಯ ಅಪರಾಧವಾಗಿರುವುದರಿಂದ ಮುಂದಿನ ಕ್ರಮ ಜರುಗಿಸಲು  ಘನ ನ್ಯಾಯಾಲಯವು ಸದರಿ ಅಪರಾಧವನ್ನು ಸಂಜ್ಞೇಯ ಅಪರಾಧವಾಗಿ ಪರಿಗಣಿಸಿ ಕಲಂ:87 ಕೆ.ಪಿ.ಆಕ್ಟ್ ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಅನುಮತಿ ನೀಡಬೇಕೆಂದು ಘನ ನ್ಯಾಯಾಲಯದಲ್ಲಿ ಕೋರಿ ಮನವಿಯನ್ನು ಸಲ್ಲಿಸಿಕೊಂಡಿದ್ದು, ಮಧುಗಿರಿ ಘನ ಎ.ಸಿ.ಜೆ.(ಜೆ.ಡಿ) & ಜೆ.ಎಂ.ಎಫ್‌.ಸಿ. ನ್ಯಾಯಾಲಯವು ಮೇಲ್ಕಂಡ ಎನ್‌.ಸಿ.ಆರ್. ವಿಷಯನ್ನು ಸಂಜ್ಞೆಯ ಅಪರಾಧವಾಗಿ ಪರಿಗಣಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಅನುಮತಿ ನೀಡಿದ್ದನ್ನು ಠಾಣಾ    ಹೆಚ್.ಸಿ-79 ರವರು ಪಡೆದುಕೊಂಡು ದಿನಾಂಕ:05/04/2017 ರಂದು ಮದ್ಯಾಹ್ನ 12:15 ಗಂಟೆಗೆ ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಪಡೆದುಕೊಂಡು ಪ್ರಕರಣ ದಾಖಲಿಸಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 56 guests online
Content View Hits : 261495