lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ 16.01.2018 ವೇಶ್ಯಾವಾಟಿಕೆ ದಂಧೆಗೆ ಮಹಿಳೆಯರ ಸಾಗಾಣಿಕೆ... >> :  ಪತ್ರಿಕಾ ಪ್ರಕಟಣೆ  : ತುಮಕೂರು ನಗರದ ದೊಂತಿ ಏಜೇನ್ಸಿಯಲ್ಲಿ ಸಿಗರೇಟ್ ಕಳವು ಮಾಡಿದ... >> ಠಾಣಾ  ದಾಖಲಾತಿಗಳ ನಿರ್ವಹಣೆ ಕಾರ್ಯಗಾರ ದಿನಾಂಕ 13/1/2018           >> -:  ಪತ್ರಿಕಾ ಪ್ರಕಟಣೆ.  :-   ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 301/2017 ಕಲಂ 457, 380... >> >> -: ದಿನಾಂಕ : 19 -12 -17  :- :  ಪತ್ರಿಕಾ ಪ್ರಕಟಣೆ : ಕೋಮು ಪ್ರಚೋದನಕಾರಿ ಹೇಳಿಕೆಗಳ... >> ಪತ್ರಿಕಾ ಪ್ರಕಟಣೆ :: ದಿನಾಂಕ 12-12-2017  :: ತುಮಕೂರು ನಗರದಲ್ಲಿ ಮೂಲ ಆ.ಐ. ಸ್ಮಾಟ್‌ ಕಾರ್ಡಗಳ... >> ಪತ್ರಿಕಾ ಪ್ರಕಟಣೆ : ದಿನಾಂಕ:-05-12-2017 : ಚಾಳಿಬಿದ್ದ ಅಪರಾಧಿಗಳಿಂದ ಸುಮಾರು ಒಟ್ಟು 5, 00, 100/- ರೂ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ   ತುಮಕೂರು ನಗರದಲ್ಲಿ ಒಂಟಿಯಾಗಿ... >>   New BEAT BEST STAFF AND BEST CRIME DETECTION BEST STAFF >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< April 2017 >
Mo Tu We Th Fr Sa Su
          1 2
4 5 6 7 8 9
10 11 12 13 14 15 16
17 18 19 20 21 22 23
24 25 26 27 28 29 30
Monday, 03 April 2017
Crime Incidents 3-04-17

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ-53/2017 ಕಲಂ: 341,323,324,504,506 ರೆ/ವಿ 149 ಐ.ಪಿ.ಸಿ

ದಿನಾಂಕ:02-04-2017 ರಂದು ರಾತ್ರಿ 8-30 ಗಂಟೆಗೆ ಪಿರ್ಯಾಧಿ ಮನೋಜ ಬಿನ್ ನಾಗರಾಜು 22 ವರ್ಷ, ಕೆಂಪಾಂಬನಗರ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ22-03-2017 ರಂದು ಪಿರ್ಯಾಧಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಕೆಂಪಾಂಬನಗರದ ದಾರಿಯಲ್ಲಿರುವ ಟಿ ಎಲ್ ಪಾಳ್ಯ ಯಶೋಧಮ್ಮ ರವರ ಪೆಟ್ಟಿಗೆ ಅಂಗಡಿ ಬಳಿ ರಾತ್ರಿ 8-30 ಗಂಟೆ ಸಮಯದಲ್ಲಿ ಗಾಡಿಯಲ್ಲಿ ಹೋಗುತ್ತಿದ್ದಾಗ ಟಿ ಎಲ್ ಪಾಳ್ಯ ವಾಸಿ ಕರಿಯಪ್ಪ ರವರ ಮಗ ಜಯರಾಮ ಹಿಂದಿನ ದ್ವೇಶದಿಂದ ಪಿರ್ಯಾದಿಯಲ್ಲಿ ರಸ್ತೆಲ್ಲಿ ಅಡ್ಡಗಟ್ಟಿ ಬೈದಿದ್ದು ರಮೇಶ ರವರ ಮಗ ಕಿರಣ್ ಕ್ರಿಕೆಟ್ ಬ್ಯಾಟಿನಿಂದ ಪಿರ್ಯಾಧಿಯ ಎಡಗೈಗೆ ಮತ್ತು ಕಾಲಿಗೆ ಹಾಗೂ ಪಕ್ಕೆ ಹೋಡೆದಿದ್ದು ಅಂಗಡಿಯ ಪಕ್ಕ ಇದ್ದ ಪರಮೇಶ, ರುದ್ರೇಶ, ಕುಮಾರ್, ಯೋಗೀಶ ರವರುಗಳು ಈ ನನ್ನ ಮಗನನ್ನು ಬಿಡಬೇಡಿ ಕೊಲೆ ಮಾಡೋಣವೆಂದು ಹೇಳಿ ಕಾಲಿನಿಂದ ತುಳಿದಿರುತ್ತಾರೆ ಗಲಾಟೆ ಮಾಡಿರುವ ಜಯರಾಮ, ಕಿರಣ್, ಪರಮೇಶ, ರುದ್ರೇಶ, ಕುಮಾರ, ಯೋಗೀಶ ರವರ ಮೇಲೆ ಕ್ರಮ ಜರುಗಿಸಿ ಎಂದು ದಿನಾಂಕ:02-04-2017 ರಂದು ಠಾಣೆಗೆ ಹಾಜರಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೆ.

ಸಿ.ಎಸ್.ಪುರ ಠಾಣಾ ಮೊ.ನಂ:37/2017. ಕಲಂ:279. 337 ಐಪಿಸಿ

ದಿನಾಂಕ:02.04.2017 ರಂದು  ತುಮಕೂರಿನ   ಎಂ.ಸಿ ಆರ್ಥೋಪೆಡಿಕ್  ಆಸ್ಪತ್ರೆಯಲ್ಲಿ  ಚಿಕಿತ್ಸೆ  ಪಡೆಯುತಿದ್ದ   ಕೆ.ಬಸವರಾಜು ಬಿನ್  ಲೇಟ್  ಮಲ್ಲಪ್ಪ, 25  ವರ್ಷ, ಕುರುಬರು,  4 ನೇ ವರ್ಷದ ಬಿ.ಇ ವಿಧ್ಯಾರ್ಥಿ, ಸಿ.ಐ.ಟಿ ಕಾಲೇಜು, ಗುಬ್ಬಿ  ಹಾಸ್ಟಲ್  ನಲ್ಲಿ ವಾಸ , ಸ್ವಂತ ಗ್ರಾಮ: ಸಿರಿಗೊಪ್ಪ, ತಾಲ್ಲೂಕು, ಸಿರಿಗೊಪ್ಪ ಗ್ರಾಮ, ಬಳ್ಳಾರಿ  ಜಿಲ್ಲೆರವರ ಹೇಳಿಕೆ ಪಡೆದುಕೊಂಡಿದ್ದು, ಇವರು ನೀಡಿದ ಹೇಳಿಕೆ ಆಂಶ ವೆಂದರೆ,  ನಾನು ದಿನಾಂಕ:30.03.2017 ರಂದು  ನನ್ನ ಸ್ನೇಹಿತನಾದ  ಎಸ್.ಕೊಡಗೇಹಳ್ಳಿಯ  ಲಕ್ಷ್ಮಿಕಾಂತ ರವರ ಮಗನಾದ  ಕಿರಣ್ ರವರ ಮನೆಗೆ ಊಟಕ್ಕೆಂದು  ನಾನು & ನನ್ನ ಸ್ನೇಹಿತನಾದ  ಸೂರಜ್ ಕುಮಾರ್ .ಎಸ್.ಶಿರಗಾಂವಿರವರು ಬೈಕಿನಲ್ಲಿ  ಹೋಗಬೇಕಾದರೆ, ಸೂರಜ್ ಕುಮಾರ್ .ಎಸ್.ಶಿರಗಾಂವಿರವರು  ಬೈಕನ್ನು  ಅತಿವೇಗ & ಅಜಾಗರುಕತೆಯಿಂದ ಓಡಿಸಿಕೊಂಡು  ಕೆ.ಜಿ ಟೆಂಪಲ್ ಕಡೆಯಿಂದ  ಕರೆ ಕಲ್  ತಿರುವಿನಲ್ಲಿ  ಎಸ್.ಕೊಡಗೇಹಳ್ಳಿ ಕಡೆ ಸಂಜೆ 4.30 ಗಂಟೆ ಸಮಯದಲ್ಲಿ  ಹೋಗಬೇಕಾದರೆ, ತಿರುವಿನಲ್ಲಿ  ವೇಗವಾಗಿ ಚಲಿಸಿದ್ದರಿಂದ  ಹಿಂದೆ ಕುಳಿತಿದ್ದ  ನಾನು ಕೆಳಗೆ ಬಿದ್ದು,  ನನ್ನ ಬಲಭಾಗದ  ಕುತ್ತಿಗೆಯ ಬಳಿ ಕ್ಲಾವಿಕಲ್ ಫ್ರಾಕ್ಚರ್ ಆಗಿರುತ್ತೆ, ಸೂರಜ್ ಕುಮಾರ್ .ಎಸ್.ಶಿರಗಾಂವಿರವರಿಗಾಗಲೀ ಅಥವಾ ಬೈಕಿಗಾಗಲೀ  ಯಾವುದೇ ಪೆಟ್ಟಾಗಿರುವುದಿಲ್ಲಾ, ಬೈಕಿನ  ನಂಬರ್ ನೋಡಲಾಗಿ  ಕೆ.ಎ-06ಇಯು-2487 ಹೊಂಡಾ ಆಕ್ಟಿವಾ  ಗಾಡಿಯಾಗಿದ್ದು, ಕೆಳಗೆ ಬಿದ್ದಿದ್ದ ನನ್ನನ್ನು  ಹಿಂದೆಯೆ ಬೇರೆ ದ್ವಿಚಕ್ರವಾಹನದಲ್ಲಿ ಬರುತಿದ್ದ  ನನ್ನ  ಸ್ನೇಹಿತರಾಧ ಕಿರಣ್ & ಜಗದೀಶ್ ರವರು  ಆಟೋದಲ್ಲಿ ಕರೆದುಕೊಂಡು ಬಂದು ತುಮಕೂರಿನ  ಎಂ.ಸಿ ಆರ್ಥೋಪೆಡಿಕ್  ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆಗೆ ದಾಖಲಿಸಿರುತ್ತಾರೆ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ  ದಾಖಲಿಸಿಕೊಂಡಿರುತ್ತೆ

ಸಿ.ಎಸ್.ಪುರ ಠಾಣಾ ಮೊ.ನಂ:36/2017. ಕಲಂ:279. 337 ಐಪಿಸಿ ಮತ್ತು 134 (ಎ&ಬಿ) ರೆ/ವಿ 187 ಐ.ಎಂ.ವಿ ಆಕ್ಟ್

ದಿನಾಂಕ:02.04.2017 ರಂದು  ತುಮಕೂರಿನ ಆದಿತ್ಯಾ ಆಸ್ಪತ್ರೆಗೆ ಹೋಗಿ ಗಾಯಾಳು ಯೋಗೀಶ ಬಿನ್  ಶಿವಲಿಂಗಯ್ಯ, 30 ವರ್ಷ, ಲಿಂಗಾಯ್ತರು, ದೊಡ್ಡ ಕುನ್ನಾಲ, ಗುಬ್ಬಿ ತಾಲ್ಲೂಕು ರವರು  ನೀಡಿದ ಹೇಳಿಕೆ ಆಂಶವೆಂದರೆ, ದಿನಾಂಕ:01.01.2017 ರಂದು ಕೆಲಸದ ನಿಮಿತ್ತ  ನಾನು & ನಮ್ಮ ಗ್ರಾಮದ ಮಹೇಶ ಬಿನ್  ಸೋಮಣ್ಣ  ಇಬ್ಬರೂ ನನ್ನ  ಬಾಬ್ತು  ಪಲ್ಸರ್ ಬೈಕಿನಲ್ಲಿ ಅಂದರೆ ಬೈಕಿಗೆ ಇನ್ನೂ ತಿಂಗಳಾಗಿದ್ದು, ರಿಜಿಸ್ಟ್ರೇಶನ್  ನಂಬರ್ ಬಂದಿರುವುದಿಲ್ಲಾ,  ಈ ಬೈಕಿನಲ್ಲಿ ಕುಣಿಗಲ್ ಗೆ ಹೋಗಿ  ಕುಣಿಗಲ್ ನಲ್ಲಿ ಕೆಲಸ ಮುಗಿಸಿಕೊಂಡು  ವಾಪಸ್ಸು ಊರಿಗೆ ಬರುವ ಸಲುವಾಗಿ ಮಧ್ಯಾಹ್ನ 1.00 ಗಂಟೆಗೆ ಚಿಕ್ಕಕುನ್ನಾಲದ  ಮುಕ್ತಿಯಾರ್ ರವರ ಬೀಡ ಅಂಗಡಿಯ ತಿರುವಿನಲ್ಲಿ  ಬರುತ್ತಿರ ಬೇಕಾದರೆ,  ದೊಡ್ಡ ಕುನ್ನಾಲ ಕಡೆಯಿದ  ಎದುರುಗಡೆ  ಒಂದು ಟೆಂಪೋ ಟ್ರಾವೆಲರ್ ನಂ.ಕೆ.ಎ-06ಸಿ-1306 ಗೂಡ್ಸ್ ಗಾಡಿಯನ್ನು  ಅದರ ಚಾಲಕ ಅತಿ ವೇಗ & ಅಜಾಗರುಕತೆಯಿಂದ   ಓಡಿಸಿಕೊಂಡು ರಸ್ತೆಯ ಎಡಬದಿಯಲ್ಲಿ ಬರುತಿದ್ದ  ನನ್ನ  ಮೋಟಾರು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಬೈಕು ಸಮೇತ ಕೆಳಗೆ ಬಿದ್ದು,  ಬೈಕ್ ಓಡಿಸುತಿದ್ದ  ನನ್ನ ಬಲಗಾಲಿನ ಮೊಣಕಾಲು  ಮುರಿದು ಬಲಗೈನ ಮೊಣಕೈಗೆ ರಕ್ತಗಾಯವಾಗಿರುತ್ತೆ, ನನ್ನ ಹಿಂದೆ ಕುಳಿತಿದ್ದ ಮಹೇಶನಿಗೆ ಎಡಗಾಲಿನ ಪಾದದ   ಜೈಂಟಿಗೆ ಪೆಟ್ಟಾಗಿರುತ್ತೆ. ಮತ್ತು ಬಲಭಾಗದ ಮುಖ ಹಣೆಗೆ ರಕ್ತಗಾಯವಾಗಿರುತ್ತೆ, ನಂತರ ಚಿಕ್ಕ ಕುನ್ನಾಲ ಗ್ರಾಮದ ರೆಹಮತ್ ಉಲ್ಲಾ & ಸಯ್ಯದ್ ರವರು ಅವರ ಕಾರಿನಲ್ಲಿಯೇ  ನಮ್ಮ ಗಳನ್ನು ತುಮಕೂರು ಆದಿತ್ಯಾ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿರುತ್ತಾರೆ, ಅಪಗಾತ ಪಡಿಸಿದ ವಾಹನ ಚಾಲಕನ ಹೆಸರು & ವಿಳಾಸ ತಿಳಿದಿರುವುದಿಲ್ಲಾ,  ಇತ್ಯಾದಿಯಾಗಿ  ನೀಡಿದ ಹೇಳಿಕೆಯನ್ನು ಪಡೆದುಕೊಂಡು ವಾಪಸ್ಸು ಠಾಣೆಗೆ  ಪ್ರಕರಣ ದಾಖಲಿಸಿರುತ್ತೆ.

ಚೇಳೂರು  ಪೊಲೀಸ್   ಠಾಣಾ  ಯು.ಡಿ.ಆರ್  ನಂ 12/2017  ಕಲಂ 174  ಸಿ.ಆರ್  ಪಿ.ಸಿ

ದಿನಾಂಕ: 02/04/2017 ರಂದು  ಬೆಳಿಗ್ಗೆ 9-15 ಗಂಟೆ ಸಮಯದಲ್ಲಿ ಪಿರ್ಯಾದಿ ಹೆಚ್.  ಆರ್. ಶ್ರೀನಿವಾಸ್ ಬಿನ್ ಹೆಚ್. ಆರ್. ರಾಜಣ್ಣ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ,  ನಮ್ಮ  ತಂದೆ- ತಾಯಿಗೆ  ಒಟ್ಟು 03  ಜನ  ಮಕ್ಕಳಿದ್ದು,  ಮೊದಲನೆಯವರು  ಕೃಷ್ಣ  ಮೂರ್ತಿ,  ಎರಡನೇಯವರು  ಕುಮಾರ್  ಮೂರನೇಯವರು  ನಾನು,    ನನ್ನ  ಅಣ್ಣಂದಿರಾದ    ಕೃಷ್ಣ ಮೂರ್ತಿ  ಮತ್ತು  ಕುಮಾರ್  ರವರಿಗೆ  ಮಧುವೆ  ಮಾಡಿದ್ದು,  ನನಗೆ  ಇನ್ನು  ಮಧುವೆಯಾಗಿರುವುದಿಲ್ಲ.  ನಾವುಗಳು  ಎಲ್ಲಾರೂ  ಒಂದೇ  ಕುಟುಂಬದಲ್ಲಿ   ವಾಸವಾಗಿರುತ್ತೇವೆ.   ನನ್ನ  ತಾಯಿ   ರಾಜಮ್ಮ ನವರ  ಹೆಸರಿನಲ್ಲಿ   ಗುಬ್ಬಿ  ತಾ. ಚೇಳೂರು  ಹೋ,  ನಲ್ಲೂರು  ಗ್ರಾಮದ  ಸರ್ವೆ  ನಂಬರ್  82/1ಪಿ1ರಲ್ಲಿ    7 ½  ಕುಂಟೆ,ಮತ್ತು  ಸರ್ವೆ  ನಂಬರ್ 82/2 ರಲ್ಲಿ 6 ¾ ಗುಂಟೆ ಹಾಗೂ  ಸರ್ವೆ  ನಂಬರ್ 29 ಪಿ1 ರಲ್ಲಿ 3 ಎಕರೆ  ಜಮೀನಿದ್ದು,     ಈ  ಜಮೀನಿನ  ಅಭಿವೃದ್ದಿಗಾಗಿ ಜಮೀನಿನನ್ನು  ಆಧಾರವಾಗಿಟ್ಟು   ಹಾಗಲವಾಡಿ  ಸ್ಟೇಟ್  ಬ್ಯಾಂಕ್  ಆಫ್  ಮೈಸೂರು   ಬ್ಯಾಂಕಿನಲ್ಲಿ  ಒಟ್ಟು 4,00,000  ರೂ  ಸಾಲ  ಪಡೆದು    ಟ್ರಾಕ್ಟರ್  ನನ್ನು   ತಂದು   ಜಮೀನಿನ  ಅಭಿವೃದ್ದಿ   ಮಾಡಿರುತ್ತೆ.    ನಮ್ಮ  ಮನೆಯ   ಸಂಪೂರ್ಣ   ಜವಬ್ದಾರಿಯನ್ನು  ಹಿರಿಯ  ಮಗನಾದ  ನನ್ನ  ಅಣ್ಣ   ಕೃಷ್ಣ ಮೂರ್ತಿಯರು  ನಿಭಾಯಿಸುತ್ತಿದ್ದರು.    ಈಗ್ಗೆ  ಹಲವು  ವರ್ಷಗಳಿಂದ  ಸರಿಯಾಗಿ   ಮಳೆ  ಬೆಳೆಯಾಗದೇ   ನಾವು  ಇಟ್ಟಿದ್ದ    ಬೆಳೆಯು   ನಾಶವಾಗಿ   ಬೆಳೆಗೆ  ಹಾಕಿದ್ದ   ಬಂಡವಾಳವೂ  ಸಹ  ಬರುತ್ತಿರಲಿಲ್ಲ.    ನಾವು    ಜಮೀನಿನ  ಅಭಿವೃದ್ದಿಗಾಗಿ   ಬ್ಯಾಂಕಿನಲ್ಲಿ   ಜಮೀನಿನ   ಆಧಾರದ  ಮೇಲೆ  ಸಾಲ  ತಂದಿದ್ದ   ಸಾಲವನ್ನು  ತೀರಿಸಲಾಗದೇ  ಇದ್ದುದ್ದರಿಂದ   ಬ್ಯಾಂಕಿನವರು   ಸಾಲವನ್ನು  ಕಟ್ಟುವಂತೆ   ಗುಬ್ಬಿ   ಪ್ರಾಧಾನ  ಸೀನಿಯರ್   ಸಿವಿಲ್  ನ್ಯಾಯಾಲಯದಲ್ಲಿ  ದಾವೆ ಹೂಡಿ     ವಿಚಾರಣೆ   ನಡೆದು    ದಿನಾಂಕ 25/02/2017  ರಂದು   ಸಾಲದ  ಮೊತ್ತ  ರೂ 7.20.699=00  ರೂ  ಹಣವನ್ನು  ಸಂಬಂಧಪಟ್ಟ   ಬ್ಯಾಂಕ್  ಗೆ  ಕಟ್ಟುವಂತೆ   ಆದೇಶ  ಮಾಡಿರುತ್ತೆ.   ಈ  ವಿಚಾರವಾಗಿ ನನ್ನ  ಅಣ್ಣ   ಕೃಷ್ಣ ಮೂರ್ತಿ  ರವರು   ಮನೆಯಲ್ಲಿ  ಅವರ  ಹೆಂಡತಿ  ರೇಖಾ ರವರ  ಬಳಿ ಮತ್ತು  ನಮ್ಮ ಗಳ  ಬಳಿ ಯಾವಾಗಲೂ     ಜಮೀನಿನ ಅಭಿವೃದ್ದಿಗೆ    ಬ್ಯಾಂಕಿನಿಂದ  ಸಾಲ  ಮಾಡಿ  ಟ್ರಾಕ್ಟರ್  ತಂದಿದ್ದ  ಈ  ಸಾಲವನ್ನು  ತೀರಿಸಲಾಗುತ್ತಿಲ್ಲ.    ನ್ಯಾಯಾಲಯವು  ಸಹ     7.20.699=00  ರೂ  ಹಣವನ್ನು  ಸಂಬಂಧ ಪಟ್ಟ   ಬ್ಯಾಂಕ್  ಗೆ  ಕಟ್ಟುವಂತೆ   ಆದೇಶ  ಮಾಡಿ  ಎಂದು  ಚಿಂತಿಸುತ್ತಿದ್ದರು, ನಮ್ಮ  ಮನೆಯ  ಮರ್ಯಾದೆ  ಹೋಗುತ್ತಿದೆ.  ಬದುಕಿರುವುದಕ್ಕಿಂತ  ಸಾಯುವುದೇ  ಮೇಲು   ಎಂದು  ಹೇಳಿತ್ತಿದ್ದನು.  ಆಗ ನಾವುಗಳು ಕೃಷ್ಣ ಮೂರ್ತಿಗೆ  ಸಮಾಧಾನ  ಹೇಳುತ್ತಿದ್ದೆವು.   ನನ್ನ ಅಣ್ಣನ   ಹೆಂಡತಿ  ರೇಖಾ ರವರ  ತವರು  ಮನೆ  ಹಾಗಲವಾಡಿಯಾಗಿದ್ದು,  ಅವರು  ಹಬ್ಬಕ್ಕೆ  ಅವರ  ತವರು  ಮನೆಗೆ  ಹೋಗಿದ್ದರು.   ದಿನಾಂಕ;02/04/2017  ರಂದು   ಬೆಳಗ್ಗೆ   5-00  ಗಂಟೆ  ಸಮಯದಲ್ಲಿ  ನನ್ನ  ಅಣ್ಣ  ಕೃಷ್ಣ ಮೂರ್ತಿ ಬೆಳಗ್ಗೆ  ಎದ್ದು,  ನಮ್ಮ ಊರಿನ ಬಸ್ ನಿಲ್ದಾಣಕ್ಕೆ   ಹೋಗಿ  ಟೀ  ಕುಡಿದು  ವಾಪಸ್ಸು  ಮನೆಗೆ   ಬೆಳಗ್ಗೆ  6-00   ಗಂಟೆ  ಸಮಯಕ್ಕೆ  ವಾಪಸ್ಸು  ಮನೆಗೆ  ಬಂದು ಅವನು  ಮಲಗುತ್ತಿದ್ದ   ಕೋಣೆಗೆ   ಹೋದನು.   ಅವನು  ಮನೆ ಒಳಗೆ  ಹೋದ  05   ನಿಮಿಷದಲ್ಲಿ    ಅವನು  ಮಲಗುತ್ತಿದ್ದ  ಕೋಣೆಗೆ  ನನ್ನ ಅಣ್ಣನನ್ನು  ಮಾತನಾಡಿಸಲು   ಹೋದೆನು  ನನ್ನ ಅಣ್ಣ  ಅವನು  ಮಲಗುವ  ಕೋಣೆಯಲ್ಲಿ  ಇರುವ  ತೀರಿಗೆ   ಸೀರೆಯಿಂದ   ನೇಣು  ಜೀರಿಕೊಂಡು  ಒದ್ದಾಡುತ್ತಿದ್ದು,      ಆಗ   ನಾನು    ಕೂಗಿಕೊಂಡಾಗ  ನಮ್ಮ  ಮನೆಯವರು  ಮತ್ತು  ಅಕ್ಕಪಕ್ಕದ   ಮನೆಯವರು  ಬಂದು  ನೋಡಿದರು  ನನ್ನ  ಅಣ್ಣ  ಕೃಷ್ಣ  ಮೂರ್ತಿ   ಇನ್ನೂ  ಒದ್ದಾಡುತ್ತಿದ್ದನು.  ಆಗ   ನಾವುಗಳು  ಸೇರಿಕೊಂಡು  ಸೀರೆಯನ್ನು  ಕುಯ್ದು  ನೇಣಿನಿಂದ  ಇಳಿಸಿ  ಉಪ ಚರಿಸುವಷ್ಟರಲ್ಲಿ  ನನ್ನ  ಅಣ್ಣ  ಕೃಷ್ಣಮೂರ್ತಿ   ಮೃತಪಟ್ಟಿರುತ್ತಾರೆ.   ನನ್ನ ಅಣ್ಣ ಕೃಷ್ಣ  ಮೂರ್ತಿ   ನಾವು  ನಮ್ಮ  ಜಮೀನಿನ  ಅಭಿವೃದ್ದಿಗಾಗಿ   ಜಮೀನಿನ  ಆಧಾರದ  ಮೇಲೆ  ಬ್ಯಾಂಕಿನಿಂದ  ಸಾಲ  ಪಡೆದು  ಟ್ರಾಕ್ಟರ್   ತಂದು  ಜಮೀನಿನ  ಅಭಿವೃದ್ದಿ  ಮಾಡಿದ್ದು,   ವ್ಯವಸಾಯದಲ್ಲಿ   ನಷ್ಟ ಉಂಟಾಗಿ  ಸಾಲವನ್ನು  ಕಟ್ಟಲಾಗದೇ  ಇದ್ದುದ್ದರಿಂದ   ಜೀವನದಲ್ಲಿ      ನೊಂದು    ನೇಣು  ಜೀರಿಕೊಂಡು   ಮೃತಪಟ್ಟಿರುತ್ತಾನೆ.   ಆದ್ದರಿಂದ  ಮುಂದಿನ  ಕಾನೂನು  ರೀತ್ಯ  ಕ್ರಮ  ಜರುಗಿಸಲು  ಕೋರಿ ನೀಡಿದ ದೂರಿನ ಅಂಶವಾಗಿರುತ್ತೆ.

ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 27/2017 ಕಲಂ 379 ಐಪಿಸಿ ಮತ್ತು 42(1) ,44(6)  ಕೆ.ಎಂ.ಎಂ.ಆರ್‌.ಸಿ ಆಕ್ಟ್‌‌ 1994  ಮತ್ತು 4(1),4(ಎ),21(1) ಎಂಎಂಡಿ ಆರ್‌ಆಕ್ಟ್‌.

ದಿನಾಂಕ:-02/04/2017 ರಂದು ಬಡವನಹಳ್ಳಿ ಠಾಣಾ ಗುಪ್ತ ಮಾಹಿತಿ ಸಿಬ್ಬಂದಿ ಪಿ,ಸಿ 949 ರಂಗನಾಥ ರವರು ಮಾಹಿತಿ ಸಂಗ್ರಹಿಸಲು ದಂಡಿನದಿಬ್ಬ, ದೊಡ್ಡೇರಿ, ಕೈಮರ, ಸಂಜೀವಪುರ, ತಿಮ್ಮಲಾಪುರ, ಪೂಜಾರಹಳ್ಳಿ, ಗಟ್ಟೀಮಲ್ಲೇನಹಳ್ಳಿ ಗ್ರಾಮಗಳ ಮೂಲಕ ಬೊಮ್ಮೆತಿಮ್ಮನಹಳ್ಳಿ ಗ್ರಾಮಕ್ಕೆ ಹೋಗುವ ತಿರುವಿನಲ್ಲಿದ್ದಾಗ ಬೆಳಿಗ್ಗೆ 7-30 ಗಂಟೆಗೆ ಪೂಜಾರಹಳ್ಳಿ ಗ್ರಾಮದ ಕಡೆಯಿಂದ ಕವಣದಾಲ ಮಾರ್ಗವಾಗಿ ಹೋಗುವ ರಸ್ತೆಯಲ್ಲಿ 2 ಟ್ರಾಕ್ಟರ್ ಗಳು ವೇಗವಾಗಿ ಬಂದು ನನ್ನನ್ನು ನೋಡಿದ ಟ್ರಾಕ್ಟರ್ ಚಾಲಕರು ಟ್ರಾಕ್ಟರ್ ನಿಲ್ಲಿಸಿ, ಓಡಿ ಹೋದರು. ಎರಡು ಟ್ರಾಕ್ಟರ್ ಗಳ ಹತ್ತಿರ ಹೋಗಿ ನೋಡಲಾಗಿ ಜಲ್ಲಿ ಪುಡಿ ಮೇಲೆ ಹಾಕಿ ಅದರ ಕೆಳಗೆ ಮರಳು ತುಂಬಿಕೊಂಡು ಹೋಗುತ್ತಿದ್ದು, ಎರಡು ಟ್ರಾಕ್ಟರ್ ಗಳ ನಂಬರ್ ನೋಡಲಾಗಿ 1) KA 06 TB 6872 ಆಗಿದ್ದು, ಟ್ರೈಲರ್ ನಂಬರ್ ಇರುವುದಿಲ್ಲ. 2) KA 06 TA 2953 ಟ್ರೈಲರ್ ನಂಬರ್ KA 06 TA 2954 ಆಗಿದ್ದು, ನಂತರ ಟ್ರಾಕ್ಟರ್ ಗಳನ್ನು ಸ್ಥಳದಿಂದ ಪೂಜಾರಹಳ್ಳಿ ಗ್ರಾಮದ ಸತೀಶ ಮತ್ತು ಮಂಜುನಾಥ ರವರ ಸಹಾಯದಿಂದ ಬೆಳಿಗ್ಗೆ 8-30 ಗಂಟೆಗೆ ಠಾಣೆಯ ಮುಂದೆ ತಂದು ನಿಲ್ಲಿಸಿ, ಯಾವುದೇ ಪರವಾನಗಿ ಇಲ್ಲದೆ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದ 2 ಟ್ರಾಕ್ಟರ್ ಗಳ ಚಾಲಕ ಮತ್ತು ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ವರದಿ ಮಾಡಿ, ರಿಪೋರ್ಟ್ ನೀಡಿದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 93 guests online
Content View Hits : 231893