ಕೊರಾ ಪೊಲೀಸ್ ಠಾಣೆ ಮೊ.ಸಂ 59/2017 ಕಲಂ :279,304(ಎ ) ಐಪಿಸಿ 134 (ಎ )&(ಬಿ ) ರೆ/ವಿ 187 ಐ.ಎಂ .ವಿ ಆಕ್ಟ್
ದಿನಾಂಕ-19-03-2017 ರಂದು ಸಂಜೆ 06-00 ಗಂಟೆಗೆ ಪಿರ್ಯಾದಿ ಸತೀಶ್.ಜಿ ಬಿನ್ ಲೇ: ಗೋವಿಂದಯ್ಯ, ಎ.ಹೆಚ್.ಸಿ 92 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನಂಶವೇನೆಂದರೆ ನಾನು ಮತ್ತು ಲಕ್ಷ್ಮಿಕಾಂತ.ಜಿ ಎ.ಹೆಚ್.ಸಿ 107 ರವರುಗಳು ಸರದಿ ಪ್ರಕಾರ ಬೆಳಿಗ್ಗೆ ಮತ್ತು ರಾತ್ರಿ ಏಂ 03 ಉ 1429 ನೇ ಇನ್ನೋವಾ ಕೋರ ಹೈವೇ ಮೊಬೈಲ್ ವಾಹನದ ಚಾಲಕರಾಗಿ ತುಮಕೂರು ಜಿಲ್ಲೆಯ ಗಡಿ ನಂದಿಹಳ್ಳಿಯಿಂದ ಎನ್.ಹೆಚ್ 48 ರಸ್ತೆಯಲ್ಲಿ ಕೋರ ಠಾಣಾ ಸರಹದ್ದಿನ ಸೀಬಿ ಗ್ರಾಮದವರಿಗೆ ನೇಮಕದಂತೆ ಗಸ್ತು ಮಾಡುತ್ತಿರುತ್ತೇವೆ. ಈ ದಿನದಂದು ಸದರಿ ವಾಹನಕ್ಕೆ ಹಗಲು ಚಾಲಕನಾಗಿ ನಾನು ನೇಮಕಗೊಂಡಿರುತ್ತೇನೆ. ಈ ವಾಹನದಲ್ಲಿ ಗಸ್ತು ಮಾಡುವಾಗ್ಗೆ ತುಮಕೂರು ನಗರ ಉಪವಿಭಾಗದ ಠಾಣೆಗಳಿಂದ ಮಾನ್ಯ ತುಮಕೂರು ನಗರ ಉಪವಿಭಾಗದ ಉಪಾಧೀಕ್ಷಕರು ನೇಮಕ ಮಾಡಿದಂತೆ ಹಗಲು ಮತ್ತು ರಾತ್ರಿ ಗಸ್ತಿಗೆ ಇಬ್ಬರು ಎ.ಎಸ್.ಐ ಅಧಿಕಾರಿಗಳನ್ನು ನೇಮಕ ಮಾಡುತ್ತಿರುತ್ತಾರೆ. ನೇಮಕದಂತೆ ದಿನಾಂಕ: 19.03.2017 ರಂದು ಬೆಳಿಗ್ಗೆ 8-00 ಗಂಟೆಗೆ ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಎ.ಎಸ್.ಐ ರವರಾದ ವಿಶ್ವೇಶ್ವರಯ್ಯರವರು ತುಮಕೂರು ಕಂಟ್ರೋಲ್ ರೂಂ ಗೆ ಬಂದು ಎನ್.ಹೆಚ್ 48 ರಸ್ತೆಯಲ್ಲಿ ಕರ್ತವ್ಯಕ್ಕೆ ಹೋಗುವುದಾಗಿ ನಮೂದಿಸಿ ಹೈವೇ ಮೊಬೈಲ್ನಲ್ಲಿ ತುಮಕೂರು ಜಿಲ್ಲಾ ಪೊಲೀಸ್ ಕಛೇರಿಯಿಂದ ಹೊರಟು ಎನ್.ಹೆಚ್ 48 ರಸ್ತೆಯಲ್ಲಿ ಕೋರ, ಬೆಳ್ಳಾವಿ ಕ್ರಾಸ್, ಜಾಸ್ ಟೋಲ್, ಮಂಚಕಲ್ಲುಕುಪ್ಪೆ ಗೆ ಹೋಗಿ ಅಲ್ಲಿಂದ ಗಸ್ತು ಮಾಡಿಕೊಂಡು ಪುನಃ ಊರುಕೆರೆ, ಕೋರ, ಬೆಳ್ಳಾವಿ ಕ್ರಾಸ್, ಸೋರೆಕುಂಟೆ ಕ್ರಾಸ್ ಗಳಲ್ಲಿ ಗಸ್ತು ಮಾಡಿಕೊಂಡು ಗಿರೇನಹಳ್ಳಿ ಪೆಟ್ರೋಲ್ ಬಂಕ್ ಹತ್ತಿರ ನೆಲಹಾಳ್ ಕಡೆ ಹೋಗುತ್ತಿರುವಾಗ್ಗೆ, ರಸ್ತೆಯ ಪಕ್ಕದ ಜಮೀನಿನಲ್ಲಿ ಬೆಂಕಿ ಹತ್ತಿಕೊಂಡು ದಟ್ಟವಾದ ಹೊಗೆ ಬರುತ್ತಿತ್ತು. ನೆಲಹಾಳ್ ಉಪ ಠಾಣೆ ಹತ್ತಿರ ಇದ್ದುದರಿಂದ ನಾನು ಮತ್ತು ಎ.ಎಸ್.ಐರವರು ನೆಲಹಾಳ್ ಉಪಠಾಣೆಯ ಮುಂಭಾಗಕ್ಕೆ ಹೋಗಿ ರಸ್ತೆಯ ಎಡ ಭಾಗದಲ್ಲಿ ಹೈವೇ ಮೊಬೈಲ್ ವಾಹನವನ್ನು ನಿಲ್ಲಿಸಿ ನಾನು ಕೆಳಗೆ ಇಳಿದು ವಾಹನದ ಪಕ್ಕದಲ್ಲಿ ನಿಂತುಕೊಂಡೆನು. ಎ.ಎಸ್.ಐ ರವರು ನೀನು ಇಲ್ಲೇ ಇರು ವಿಚಾರವನ್ನು ಉಪಠಾಣೆ ಠಾಣಾಧಿಕಾರಿ ಧಮೇಗೌಡರವರಿಗೆ ತಿಳಿಸಿ ಬರುತ್ತೇನೆಂತ ವಾಹನದಿಂದ ಕೆಳಗೆ ಇಳಿದು ಉಪಠಾಣೆಗೆ ಹೋದರು. ವಿಚಾರವನ್ನು ತಿಳಿಸಿ ಸುಮಾರು 05 ನಿಮಿಷದಲ್ಲಿ ವಾಪಸ್ಸು ವಾಹನದ ಹತ್ತಿರ ಸರ್ವಿಸ್ ರಸ್ತೆಯಲ್ಲಿ ಬರುತ್ತಿದ್ದರು. ಅದೇ ಸಮಯಕ್ಕೆ ನಮ್ಮ ಕಾರಿನ ಹಿಂಭಾಗದಿಂದ ತುಮಕೂರು ಕಡೆಯಿಂದ ಶಿರಾ ಕಡೆಗೆ ಹೋಗಲು ಒಂದು ಸಿಮೆಂಟ್ ಟ್ಯಾಂಕರ್ ಚಾಲಕ ಲಾರಿಯನ್ನು ಅತಿ ವೇಗವಾಗಿ ಹಾಗೂ ನಿರ್ಲಕ್ಷತೆಯಿಂದ ಓಡಿಸಿಕೊಂಡು ನಾವು ನಿಲ್ಲಿಸಿದ್ದ ಕಾರ್ ಕಡೆ ಬರುತ್ತಿತ್ತು. ಅದನ್ನು ನೋಡಿದ ನಾನು ಗಾಬರಿಯಾಗಿ ಸಾರ್, ನೀವು ಕಾರ್ ಹತ್ತಿರ ಬರಬೇಡಿ ಹಿಂದೆ ಸಿಮೆಂಟ್ ಟ್ಯಾಂಕರ್ ಬರುತ್ತಿದೆ ಎಂದು ಹೇಳುವಷ್ಟರಲ್ಲಿ ವಿಶ್ವೇಶ್ವರಯ್ಯ ಎ.ಎಸ್.ಐ ರವರು ಸವರ್ಿಸ್ ರಸ್ತೆಯಿಂದ ಎನ್.ಹೆಚ್ 48 ರಸ್ತೆಗೆ ಒಂದು ಹೆಜ್ಜೆಯನ್ನು ಇಟ್ಟೆ ಬಿಟ್ಟರು. ಆಗ ಅತಿವೇಗವಾಗಿ ಸಿಮೆಂಟ್ ಟ್ಯಾಂಕರ್ ಅನ್ನು ಓಡಿಸಿಕೊಂಡು ಬರುತ್ತಿದ್ದ ಚಾಲಕ ವಿಶ್ವೇಶ್ವರಯ್ಯರವರಿಗೆ ಡಿಕ್ಕಿ ಹೊಡೆದು ಮುಂದೆ ನಿಂತಿದ್ದ ಹೈವೇ ಮೊಬೈಲ್ ವಾಹನಕ್ಕೆ ಡಿಕ್ಕಿ ಹೊಡೆದನು. ಸಿಮೆಂಟ್ ಟ್ಯಾಂಕರ್ ವಿಶ್ವೇಶ್ವರಯ್ಯರವರನ್ನು ಸುಮಾರು 40 ಅಡಿ ದೂರದವರೆಗೆ ರಸ್ತೆಯ ಎಡಪಕ್ಕದಲ್ಲಿನ ಗೋಡೆಗೆ ಸೇರಿ ಉಜ್ಜಿಕೊಂಡು ನಿಂತಿತ್ತು. ಆಗ ಸಿಮೆಂಟ್ ಟ್ಯಾಂಕರ್ ವಾಹನದ ಚಾಲಕ ವಾಹನದಿಂದ ಇಳಿದು ಓಡಿ ಹೋದನು. ಅದೇ ಸಮಯಕ್ಕೆ ಅಲ್ಲೇ ಇದ್ದ ಧರ್ಮೇಗೌಡ ರವರು ಬಂದರು. ನಾನು ಮತ್ತು ಧರ್ಮೇಗೌಡ ರವರು ನೋಡಲಾಗಿ ವಿಶ್ವೇಶ್ವರಯ್ಯರವರು ಮೃತಪಟ್ಟಿದ್ದು, ರಸ್ತೆಯ ತಡೆಗೋಡೆಗು ಸಿಮೆಂಟ್ ಟ್ಯಾಂಕರ್ಗೂ ಮದ್ಯೆ ಮೃತ ದೇಹವು ಸಿಕ್ಕಿಕೊಂಡು ವಿಕಾರವಾಗಿ ಉಜ್ಜಿರುತ್ತೆ. ಅವರು ಹಾಕಿದ್ದ ಶೂಗಳಲ್ಲಿ ಒಂದು ಶೂ ಸವರ್ಿಸ್ ರಸ್ತೆಯಲ್ಲಿ ಬಿದ್ದಿದ್ದು ಇನ್ನೊಂದು ಶೂ ಹೈವೇ ರಸ್ತೆಯಲ್ಲಿ ಬಿದ್ದಿತ್ತು. ಅವರು ಹಾಕಿದ್ದ ಪೊಲೀಸ್ ಸಮವಸ್ತ್ರ ಹರಿದು ಕೆಳಗೆ ಬಿದ್ದಿತ್ತು. ನಮ್ಮ ಹೈವೇ ಮೊಬೈಲ್ ರಸ್ತೆ ಇಳಿಜಾರಾಗಿದ್ದರಿಂದ ಸುಮಾರು 200 ಮೀಟರ್ ಮುಂದೆ ಹೋಗಿ ರಸ್ತೆಯ ಎಡಭಾಗದ ತಡೆಗೋಡೆಗೆ ಉಜ್ಜಿಕೊಂಡು ನಿಂತಿದ್ದು, ಕಾರಿನ ಹಿಂಭಾಗ ಮತ್ತು ಎಡಭಾಗ ಪೂರಾ ಜಖಂಗೊಂಡಿರುತ್ತೆ. ಈ ಅಪಘಾತವಾದಾಗ ಸಾಯಂಕಾಲ ಸುಮಾರು 05-10 ಗಂಟೆ ಸಮಯವಾಗಿರುತ್ತೆ. ನಂತರ ಅಪಘಾತಪಡಿಸಿದ ಸಿಮೆಂಟ್ ಟ್ಯಾಂಕರ್ ನಂಬರ್ ನೋಡಲಾಗಿ KA 01 AG 4690 ಆಗಿರುತ್ತೆ. ಸದರಿ ವಾಹನವನ್ನು ಅದರ ಚಾಲಕನು ಅತಿವೇಗ ಹಾಗೂ ನಿರ್ಲಕ್ಷತೆಯಿಂದ ಚಾಲನೆ ಮಾಡಿ ಅಪಘಾತಪಡಿಸಿ ಕರ್ತವ್ಯನಿರತ ಪೊಲೀಸ್ ಎ.ಎಸ್.ಐ ರವರ ಸಾವಿಗೆ ಕಾರಣನಾಗಿದು,್ದ ಆತನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೇಳಿಕೊಳ್ಳುತ್ತೇನೆ. ಎಂದು ನೀಡಿದ ಪಿಯರ್ಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈ ಗೊಂಡಿರುತ್ತೆ.
ಹೊಸಬಡಾವಣೆ ಪೊಲೀಸ್ ಠಾಣಾ CR 33/2017 u/s 285 R/W 34 IPC ಮತ್ತು 3 & 7 ESSENTIAL COMMODITIES ACT, 1955
ದಿನಾಂಕ 19-03-2017 ರಂದು ಸಂಜೆ 5-30 ಗಂಟೆಗೆ ತಿಲಕ್ ಪಾರ್ಕ್ ವೃತ್ತದ ಮಾನ್ಯ ಸಿಪಿಐ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ಪಿರ್ಯಾದಿರವರು ಈ ದಿವಸ ಹೊಸ ಬಡಾವಣೆ ಠಾಣಾ ಸರಹದ್ದಿನಲ್ಲಿ ಸಂಜೆ ಗಸ್ತು ಕಾರ್ಯ ನಿರ್ವಹಿಸಿಕೊಂಡು ಕುವೆಂಪುನಗರದಿಂದ ಕೋತಿತೋಪು ಸರ್ಕಲ್ ಕಡೆಗೆ ಹೋಗುತ್ತಿರುವಾಗ್ಗೆ ಹೊಸ ಬಡಾವಣೆ ಠಾಣೆಯ ಗುಪ್ತ ಮಾಹಿತಿ ಸಿಬ್ಬಂದಿಯಾದ ಹೆಚ್.ಸಿ 148 ಶ್ರೀ ಸದಾನಂದ ರವರು ಪಿರ್ಯಾದಿಗೆ ಶಾರಾದಾದೇವಿ ನಗರದಲ್ಲಿರುವ ಅಂಗಡಿಯಲ್ಲಿ ಸೈಯದ್ ಫಯಾಜ್ ಎಂಬುವನು ಅಂಗಡಿಯಲ್ಲಿ ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೆ ಗ್ಯಾಸ್ ರೀ-ಫಿಲ್ಲಿಂಗ್ ಮಾಡುತ್ತಿರುವ ಬಗ್ಗೆ ಮಾಹಿತಿ ತಿಳಿಸಿದ್ದರಿಂದ ಪಿರ್ಯಾದಿಯು ಅಲ್ಲಿಗೆ ಹೋಗಿ ನೋಡಲಾಗಿ ಅಂಗಡಿಯಲ್ಲಿ ಇಬ್ಬರು ವ್ಯಕ್ತಿಗಳು ಗೃಹಬಳಕೆಯ ಗ್ಯಾಸ್ ಸಿಲಿಂಡರ್ಗಳನ್ನು ಇಟ್ಟುಕೊಂಡು ಮೋಟಾರ್ ಸಹಾಯದಿಂದ ಗ್ಯಾಸ್ ರೀ-ಪಿಲ್ಲಿಂಗ್ ಮಾಡುತ್ತಿದ್ದು ಕಂಡುಬಂದಿದ್ದರಿಂದ ಅವರುಗಳ ಹೆಸರು ವಿಳಾಸ ಕೇಳಲಾಗಿ 1) ಸೈಯದ್ ಫಯಾಜ್ ಬಿನ್ ಸೈಯದ್ ಸಮೀರ್, 33 ವರ್ಷ, ಮಸೀದಿ ಹತ್ತಿರ, ಕೋತಿತೋಪು, ತುಮಕೂರು, 2) ಸುನಿಲ್ ಬಿನ್ ಕೃಷ್ಣಪ್ಪ, 20 ವರ್ಷ, ಆದಿ ಕರ್ನಾಟಕ ಜನಾಂಗ, 5ನೇ ಕ್ರಾಸ್. ಎನ್.ಆರ್ ಕಾಲೋನಿ, ತುಮಕೂರು ಎಂದು ತಿಳಿಸಿದ್ದು ಅಂಗಡಿಯಲ್ಲಿ ಒಳಗೆ ಪರಿಶೀಲನೆ ಮಾಡಲಾಗಿ ಅಂಗಡಿಯಲ್ಲಿ ಎರಡು ಗೃಹ ಬಳಕೆಯ ಸಿಲಿಂಡರ್ಗಳು ಗ್ಯಾಸ್ ತೂಕ ಮಾಡಲು ಎಲೆಕ್ಟ್ರಾನಿಕ್ ಅಳತೆಯ ಯಂತ್ರ, ಒಂದು ಮೋಟಾರ್ ಇದ್ದು ಮೇಲ್ಕಂಡ ವ್ಯಕ್ತಿಗಳು ಯಾವುದೇ ಪರವಾನಗಿ ಇಲ್ಲದೆ ಅನಧೀಕೃತವಾಗಿ ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ದಿನಬಳಕೆಯ ಗ್ಯಾಸ್ ಸಿಲಿಂಡರ್ಗಳನ್ನು ಆಟೋಗಳಿಗೆ ಅಳವಡಿಸುವ ಚಿಕ್ಕ ಸಿಲಿಂಡರ್ಗಳಿಗೆ ತುಂಬಿ ಹಣ ಗಳಿಸುತ್ತಿರುವುದು ಕಂಡುಬಂದಿರುತ್ತದೆ ಈ ಸ್ಥಳದಲ್ಲಿ ಹೊಸ ಬಡಾವಣೆ ಪೊಲೀಸ್ ಠಾಣೆಯ ಹೆಚ್.ಸಿ 148, ಸದಾನಂದ ರವರ ಜೊತೆಗೆ ಎ.ಎಸ್.ಐ ಕಾಂತರಾಜು, ಪಿಸಿ 827 ರವರನ್ನು ಕರೆಸಿಕೊಂಡು ಸ್ಥಳದಲ್ಲಿ ಕಾವಲು ಹಾಕಿರುತ್ತೇನೆ ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಗ್ಯಾಸ್ ರೀ-ಫಿಲ್ಲಿಂಗ್ ಮಾಡುತ್ತಿದ್ದ ಸೈಯದ್ ಫಯಾಜ್ ಹಾಗೂ 2) ಸುನಿಲ್ ರವರುಗಳ ಎಂಬುವರುಗಳ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಿ ನೀಡಿದ ದೂರನ್ನು ಪಡೆದು ರೀತ್ಯಾ ಪ್ರಕರಣ ದಾಖಲಿಸಿದೆ.
ಹುಲಿಯೂರುದುರ್ಗ ಪೊಲೀಸ್ ಠಾಣಾ ಯು.ಡಿ.ಆರ್ .ನಂ; 09/2017 ಕಲಂ; 174 ಸಿ.ಆರ್.ಪಿಸಿ.
ದಿನಾಂಕ-19-03-2017 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ಪಿರ್ಯಾದಿ ಶಿವರಾಮಯ್ಯ ಬಿನ್ ಲೇಟ್ ನರಸಯ್ಯ, 60 ವರ್ಷ, ವಕ್ಕಲಿಗರು, ಜಿರಾಯ್ತಿ, ಸಂತಮಾವತ್ತೂರು, ಕಸಬಾ ಹೋಬಳಿ, ಕುಣಿಗಲ್ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನಿಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ನಮ್ಮ ವಾಸದ ಮನೆಗೆ ಕಬ್ಬಿಣದ ಪೈಪುಗಳನ್ನು ಹಾಕಿ ಮನೆಯ ಮೇಲ್ಚಾವಣಿಗೆ ಸಿಮೆಂಟ್ ಶೀಟುಗಳನ್ನು ಹಾಕಿರುತ್ತೆ. ಮನೆಯ ಮುಂದೆ ಅಂಗಳದಲ್ಲಿ ಹೊರಕ್ಕೆ ಬಂದಿರುವ ಕಬ್ಬಿಣದ ಪೈಪೊಂದಕ್ಕೆ ತಂತಿಯನ್ನು ಕಟ್ಟಿ ಈ ತಂತಿಗೆ ಕೆಳಭಾಗದಲ್ಲಿ ಚೀಲವನ್ನು ಕಟ್ಟಿ ಚೀಲದೊಳಕ್ಕೆ ಮೇವುಹಾಕಿ ಮೇಕೆಗಳು ತಿನ್ನುವಂತೆ ಮಾಡಿರುತ್ತೆ. ನನ್ನ ಹಿರಿಯ ಮಗನಾದ ಉದಯನಾರಾಯಣ, ಸುಮಾರು 26 ವರ್ಷ, ಈತನು ಬೆಂಗಳೂರಿನ ಖಾಸಗಿ ಪ್ರಗತಿ ಸಂಸ್ಥೆಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದನು. ನಮ್ಮ ಗ್ರಾಮದಲ್ಲಿ ಬಸವೇಶ್ವರ ಜಾತ್ರೆ ಇದ್ದುದ್ದರಿಂದ ಕರ್ತವ್ಯ ಮುಗಿಸಿಕೊಂಡು ದಿನಾಂಕ-18-03-2017 ರಂದು ರಾತ್ರಿ ನಮ್ಮ ಮನೆಗೆ ಬಂದಿದ್ದನು. ದಿನಾಂಕ-19-03-2017 ರಂದು ಬೆಳಿಗ್ಗೆ ಸುಮಾರು 9-35 ಗಂಟೆ ಸಮಯದಲ್ಲಿ ನನ್ನ ಮಗ ನಮ್ಮ ಮನೆಯ ಮುಂದಿನ ಅಂಗಳದಲ್ಲಿ ಮೇಕೆಗಳಿಗೆ ಮೇವುಕಟ್ಟಲು ಹೋಗಿ ಈ ಮೊದಲೇ ಪೈಪಿಗೆ ಕಟ್ಟಿದ್ದ ತಂತಿಯನ್ನು ಹಿಡಿದುಕೊಂಡು ಮೇವಿನ ಚೀಲವನ್ನು ಕಟ್ಟುತ್ತಿರುವಾಗ್ಗೆ ನಾವು ಮನೆಗೆ ಹಾಕಿರುವ ಕಬ್ಬಿಣದ ಪೈಪಿಗೆ ಎಲ್ಲಿಯೋ ವಿಧ್ಯುತ್ ಸರಬರಾಜು ಹಾಗಿ ತಂತಿ ಮುಖಾಂತರ ನನ್ನ ಮಗನಿಗೆ ಆಕಸ್ಮಿಕವಾಗಿ ವಿಧ್ಯುತ್ ಶಾಕ್ ಹೊಡೆದು ಕಿರುಚಿಕೊಳ್ಳುತ್ತಿರುವಾಗ್ಗೆ ನಮ್ಮ ಮನೆಯಲ್ಲಿಯೇ ಇದ್ದ ನನ್ನಹೆಂಡಿ ಯಶೋದಮ್ಮ ಹಾಗೂ ನನ್ನ ಮಗಳು ವರಲಕ್ಷ್ಮೀ ರವರು ನೋಡಿ ಕಿರುಚಿಕೊಂಡಾಗ, ನನ್ನ ಅಣ್ಣ ಕೃಷ್ಣಪ್ಪ ರವರು ಮತ್ತು ಇತರರು ಬಂದು ಮರದ ದೊಣ್ಣೆಯಿಂದ ತಂತಿಗೆ ಹೊಡೆದಾಗ ಉದಯನಾರಾಯಣ ಕೆಳಕ್ಕೆ ಬಿದ್ದು ಹೋದನು. ನಂತರ ಕೂಡಲೇ ನನ್ನ ಮಗನನ್ನು ಆಟೋ ಮೂಲಕವಾಗಿ ಚಿಕಿತ್ಸೆಗಾಗಿ ಕುಣಿಗಲ್ ಎಂ.ಎಂ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ವೈಧ್ಯರು ನೋಡಿ ನನ್ನ ಮಗ ಮೃತಪಟ್ಟಿರುವುದಾಗಿ ತಿಳಿಸಿದರು. ನಂತರ ನನ್ನ ಮಗನ ಮೃತದೇಹವನ್ನು ಆಂಬುಲೆನ್ಸ್ ನಲ್ಲಿ ಹಾಕಿಕೊಂಡು ನಮ್ಮ ಮನೆಯ ಮುಂದೆ ಇಟ್ಟಿರುತ್ತೆ. ನನ್ನ ಮಗನಿಗೆ ಆಕಸ್ಮಿಕವಾಗಿ ವಿಧ್ಯುತ್ ಶಾಕ್ ಹೊಡೆದು ಮೃತಪಟ್ಟಿರುತ್ತಾನೆ. ಆದ್ದರಿಂದ ತಾವುಗಳು ಬಂದು ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ನೀಡಿದ ದೂರಿನ ಅಂಶವಾಗಿರುತ್ತೆ.
|