lowborn Tumakuru District Police | Tumkur Police | Karnataka Police | Tumakuru District Police | Tumkur Police | Karnataka Police

Dr. Divya V. Gopinath IPS,
Superintendent of Police,
Tumakuru Dt., Karnataka.

Message from SP

    >> ಮಾನ್ಯರೆ, ದಿನಾಂಕ: 21-10-2017 ರ ಶನಿವಾರ ದಂದು ಬೆಳಗ್ಗೆ 8:00 ಗಂಟೆ ಗೆ  ಹುತಾತ್ಮ ರ ದಿನಾಚರಣೆ... >> ದಿನಾಂಕ: 16-10-2017 :: ಪತ್ರಿಕಾ ಪ್ರಕಟಣೆ. :: -: ತಿಲಕ್ ಪಾರ್ಕ್‌  ಪೊಲೀಸರ ಕಾರ್ಯಾಚರಣೆ :- ಮನೆ... >> ಪತ್ರಿಕಾ ಪ್ರಕಟಣೆ   ತಿಪಟೂರು ನಗರದಲ್ಲಿ ಅಪ್ರಾಪ್ತ ವಯಸ್ಸಿನ ಹುಡುಗಿಯನ್ನು ಲೈಂಗಿಯ... >> ನಿರ್ಗಮನ ಪಥ ಸಂಚಲನ 2017 >> ತುಮಕೂರು ಜಿಲ್ಲಾ ಪೊಲೀಸ್ ವತಿಯಿಂದ ತುಮಕೂರು ನಗರದಲ್ಲಿ ಸಂಚಾರಿ ನಿಯಮಗಳನ್ನು... >>   -:  ದಿನಾಂಕ: 03/10/2017  :- ::   ಪತ್ರಿಕಾ ಪ್ರಕಟಣೆ     :: ತುಮಕೂರು ಜಿಲ್ಲಾ ಪೊಲೀಸ್ ವತಿಯಿಂದ... >>   : : ಪತ್ರಿಕಾ ಪ್ರಕಟಣೆ : : ::   ದಿನಾಂಕ: 21-09-2017 : : ದಿನಾಂಕ: 20-09-2017 ರಂದು ಕಳವು ಪ್ರಕರಣಗಳಲ್ಲಿ... >> ಜಿಲ್ಲಾ ಪೊಲೀಸ್ ಕಛೇರಿ, ತುಮಕೂರು ಜಿಲ್ಲೆ, ಅಡಿಕೆ ತೋಟದ ಹರಾಜು ಪ್ರಕ್ರಿಯೆ ಪತ್ರಿಕಾ... >> :- ಪತ್ರಿಕಾ ಪ್ರಕಟಣೆ   :- ದಿನಾಂಕ: 19-09-2017.   ದಿನಾಂಕ:19-09-2017 ರಂದು ಬೆಳಿಗಿನ ಜಾವ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Report Archive

< March 2017 >
Mo Tu We Th Fr Sa Su
    1 2 3 4 5
6 7 8 9 10 11 12
13 14 16 17 18 19
20 21 22 23 24 25 26
27 28 29 30 31    
Wednesday, 15 March 2017
Press Note 15-03-17

Date: 15-03-17

ಪತ್ರಿಕಾ ಪ್ರಕಟಣೆ

 

ತ್ತೀಚೆಗೆ ತುಮಕೂರು ಜಿಲ್ಲೆಯಲ್ಲಿ ಅನಧಿಕೃತವಾಗಿ ಬಹಳಷ್ಟು ಚೀಟಿ ವ್ಯವಹಾರಗಳು ನಡೆಯುತ್ತಿದ್ದು, ಇಂತಹ ಚೀಟಿ ವ್ಯವಹಾರಗಳಲ್ಲಿ ಸಾರ್ವಜನಿಕರು ತಮ್ಮ ಸಾವಿರಾರು/ಲಕ್ಷಾಂತರ ರೂಪಾಯಿ ಹಣವನ್ನು ತೊಡಗಿಸಿ ಮೋಸ ಹೋಗುತ್ತಿರುತ್ತಾರೆ. ಪ್ರಕರಣ ದಾಖಲಿಸಿಕೊಂಡ ತರುವಾಯ ತಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಮೇಲಾಧಿಕಾರಿಗಳ ಮೊರೆ ಹೋಗುತ್ತಿರುವುದು ಸಾಮಾನ್ಯ ವಿಷಯವಾಗಿರುತ್ತದೆ.

ಜಿಲ್ಲೆಯಲ್ಲಿ ಅನಧಿಕೃತವಾಗಿ ಚೀಟಿ ವ್ಯವಹಾರ, ಲೈಸೆನ್ಸ್ ಇಲ್ಲದೇ ಫೈನಾನ್ಸ್ ಕಂಪನಿಗಳನ್ನು ನಡೆಸುತ್ತಿರುವುದು, ಲೈಸೆನ್ಸ್ ಇದ್ದರೂ ನಿಯಮಗಳನ್ನು ಉಲ್ಲಂಘಿಸಿ ಲೇವಾದೇವಿ ಮಾಡುತ್ತಿರುವುದು ಕಂಡುಬಂದಿದ್ದು, ಅಮಾಯಕ ಜನರು/ ಸಾರ್ವಜನಿಕರು ಮೋಸಕ್ಕೊಳಗಾಗದಂತೆ ಎಚ್ಚರ ವಹಿಸುವುದು.


Crime Incidents 15-03-17

ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 18/2017 ಕಲಂ 379 ಐಪಿಸಿ ಮತ್ತು 42(1) ,44(6)  ಕೆ.ಎಂ.ಎಂ.ಆರ್‌.ಸಿ ಆಕ್ಟ್‌‌ 1994  ಮತ್ತು 4(1),4(ಎ),21(1) ಎಂಎಂಡಿ ಆರ್‌ಆಕ್ಟ್‌.

ದಿನಾಂಕ:14/03/2017 ರಂದು ರಾತ್ರಿ 08-15 ಗಂಟೆಗೆ ಠಾಣಾ ಪಿ.ಐ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಅಂಶವೇನೆಂದರೆ, ನಾನು ದಿನಾಂಕ 14/03/2017 ರಂದು ಸಂಜೆ ಗ್ರಾಮಗಸ್ತಿಗಾಗಿ ಕವಣದಾಲ, ಬೇವಿನಮರದಪಾಳ್ಯ, ಶೀಬಿನಯ್ಯನಪಾಳ್ಳ, ಹನುಮನಹಳ್ಳಿ ಗೇಟ್, ಗೂಬಲಗುಟ್ಟೆ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ ಸುಮಾರು 7-15 ಗಂಟೆ ಸಮಯದಲ್ಲಿ ಕೆ.ಟಿ ಹಳ್ಳಿ ಕ್ರಾಸ್ ಹತ್ತಿರ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಒಂದು ಟ್ರಾಕ್ಟರ್ ಅನ್ನು ಅದರ ಚಾಲಕ ವೇಗವಾಗಿ ಓಡಿಸಿಕೊಂಡು ಬರುವುದನ್ನು ನಿಲ್ಲಿಸಿ, ನೋಡಲಾಗಿ ಟ್ರಾಕ್ಟರ್ ಟ್ರೈಲರ್ ನಲ್ಲಿ ಮರಳು ತುಂಬಿರುವುದು ಕಂಡು ಬಂತು. ಸದರಿ ಚಾಲಕನನ್ನು ಮರಳು ತುಂಬಿ ಸಾಗಾಣಿಕೆ ಮಾಡಲು ಪರವಾನಿಗೆ ಇದೆಯೆ ಎಂದು ಕೇಳಲಾಗಿ ಯಾವುದೇ ಪರವಾನಿಗೆ ಇರುವುದಿಲ್ಲ ಎಂತಾ ತಿಳಿಸಿದ್ದು, ಆತನ ಹೆಸರು ವಿಳಾಸ ಕೇಳಲಾಗಿ ನಾಗರಾಜು ಬಿನ್ ರಂಗಪ್ಪ, 35 ವರ್ಷ, ಕುರುಬರು, ವೆಂಕಟರಮಣನಹಳ್ಳಿ, ಕೊರಟಗೆರೆ ತಾ ಎಂತ ತಿಳಿಸಿದ. ಡಿ.ಎಲ್ ಕೇಳಲಾಗಿ ಇದೆ ಎಂದು ಹೇಳಿ ಟ್ರಾಕ್ಟರ್ ಹತ್ತಿ ಇನ್ನೊಂದು ಬದಿಯಿಂದ ಜಂಪ್ ಮಾಡಿ ಕತ್ತಲಲ್ಲಿ ಓಡಿಹೋದನು. ಟ್ರಾಕ್ಟರ್ ನಂ ನೋಡಲಾಗಿ ಕೆಎ 06 ಟಿಸಿ 0253-0254 ಆಗಿರುತ್ತೆ. ನಂತರ ಟ್ರಾಕ್ಟರ್ ಅನ್ನು ಸದರಿ ಸ್ಥಳದಿಂದ ಬಡವನಹಳ್ಳಿಯ ರಮೇಶ ಬಿನ್ ರಂಗಪ್ಪ ಎಂಬ ಚಾಲಕನ ಸಹಾಯದಿಂದ ರಾತ್ರಿ 08-15 ಗಂಟೆಗೆ ಠಾಣೆಯ ಮುಂದೆ ಟ್ರಾಕ್ಟರ್ ಅನ್ನು ತಂದು ನಿಲ್ಲಿಸಿ, ಯಾವುದೇ ಪರವಾನಗಿ ಇಲ್ಲದೆ ಟ್ರಾಕ್ಟರ್ ನಲ್ಲಿ ಮರಳನ್ನು ಸಾಗಿಸುತ್ತಿದ್ದ ಕೆಎ 06 ಟಿಸಿ 0253- 0254 ನೇ ಟ್ರಾಕ್ಟರ್ ಚಾಲಕ ನಾಗರಾಜು ಮತ್ತು ಮಾಲೀಕರ ವಿರುದ್ದ ಮುಂದಿನ ಕ್ರಮ ಜರುಗಿಸಿ ಎಂತಾ ನೀಡಿದ ವರದಿಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಮೊ ನಂ 37/17 ಕಲಂ 379 ಐಪಿಸಿ ಮತ್ತು 136 ಐ ಇ ಆಕ್ಟ್

ದಿನಾಂಕ:14-03-17 ರಂದು ಸಂಜೆ 05:45 ಗಂಟೆಗೆ  ಪಿರ್ಯಾದಿ  ಕೆ.ಆರ್ ಗೋಪಿನಾಯ್ಡು ,ಸಿನಿಯರ್ ಮ್ಯಾನೇಜರ್, ಕೆ.ಇ.ಸಿ ನ್ಯಾಷನಲ್ ಲಿಮಿಟೆಡ್,ಬೆಂಗಳೂರು  ರವರು ಠಾಣೆಗೆ ಹಾಜರಾಗಿ ನೀಡಿದ  ದೂರಿನ ಸಾರಾಂಶವೇನೆಂಧರೆ,  ಪಿರ್ಯಾದಿ ರವರು ಕೆಇಸಿ ಇಂಟರ್ ನ್ಯಾಷನಲ್ ಲಿಮಿಟೆಡ್. ಕಂಪನಿಯಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದು. ಪಿರ್ಯಾದಿ  ಕಂಪನಿಯ ವತಿಯಿಂದ ಕೆ.ಪಿ.ಟಿ.ಸಿ.ಎಲ್ ನ  400 ಕೆ.ವಿ ಡಿ.ಸಿ ವಿದ್ಯುತ್ ಲೈನ್ ಕಾಮಗಾರಿಯಲ್ಲಿ ತುಮಕೂರು ಜಿಲ್ಲೆ ವಸಂತ ನರಸಾಪುರ ದಿಂದ ಚಿತ್ರದುರ್ಗ ಜಿಲ್ಲೆಯ ಕೆಳಗಿನ ಕಣಿವೆ ವರೆಗೆ ಲೈನ್ ಎಳೆಯುವ ಕೆಲಸ ಮಾಡುತ್ತಿದ್ದು ದಿನಾಂಕ; 06/03/2017 ರಂದು ರಾತ್ರಿ ಯಾವುದೋ ವೇಳೆಯಲ್ಲಿ ಗೋಪಿಕುಂಟೆ ಗೇಟ್ ಬಳಿ ಇರುವ  ವಿದ್ಯುತ್ ಟವರ್ ನಂ: 81/1 ,81/2 ಮತ್ತು 81/3 ರಲ್ಲಿನ ವಿದ್ಯುತ್  ಟವರ್ ನಲ್ಲಿನ  ಕಂಡಕ್ಟರ್ ಗಳಲ್ಲಿ ಅಳವಡಿಸಿದ್ದ ಅಲ್ಯುಮಿನಿಯಂ ವೈರ್ ನ್ನು ಯಾರೋ ಕಳ್ಳರು ಕತ್ತರಿಸಿಕೊಂಡು ಕಳ್ಳತನ ಮಾಡಿಕೊಂಡು ಹೋಗಿದ್ದು ನಮಗೆ ದಿನಾಂಕ;07/03/2017 ರಂದು ಬೆಳಗ್ಗೆ  ಸುಮಾರು 07.00 ಗಂಟೆಯಲ್ಲಿ ತಮ್ಮ ಕೆಲಸಗಾರರಿಂದ ಪಿರ್ಯಾದಿರವರಿಗೆ  ವಿಚಾರ ತಿಳಿದಿದ್ದು ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ಕಳ್ಳತನವಾಗಿರುವುದು ನಿಜವಾಗಿತ್ತು. ಈ ಸ್ಥಳದಲ್ಲಿ ಸುಮಾರು 2920 ಮೀಟರ್ ಉದ್ದದ ಅಲ್ಯುಮಿನಿಯಂ ತಂತಿ ಕಳ್ಳತನವಾಗಿರುತ್ತದೆ. ಪಿರ್ಯಾದಿರವರು ತಮ್ಮ ಕಂಪನಿಯ ಮೇಲಾಧಿಕಾರಿಗಳಿಗೆ ಈ ವಿಚಾರವನ್ನು ತಿಳಿಸಿ ಅವರೊಂದಗೆ ಚರ್ಚಿಸಿ ದೂರು ಕೊಡಲು ತೀರ್ಮಾನಿಸಿದ್ದು ತುರ್ತು ಕಾಮಗಾರಿ ಕೈಗೊಳ್ಳಬೇಕಾಗಿದ್ದರಿಂದ ಠಾಣೆಗೆ ಬಂದು ದೂರು ಕೊಡಲು ಸಾಧ್ಯವಾಗಿರಲಿಲ್ಲ, ಹೀಗಿರುವಾಗ್ಗೆ  ದಿನಾಂಕ:13/03/2017 ರಂದು ರಾತ್ರಿ ಯಾವುದೋ ವೇಳೆಯಲ್ಲಿ ಮತ್ತೊಮ್ಮೆ ವೀರಬೊಮ್ಮನಹಳ್ಳಿ ಗೇಟ್ ಬಳಿ ಇರುವ ಟವರ್ ನಂ:79/0 ಮತ್ತು 79/1 ರಲ್ಲಿನ ವಿದ್ಯುತ್ ಟವರ್ ಗಳಲ್ಲಿ ಅಳವಡಿಸಿದ್ದ ಅಲ್ಯುಮಿನಿಯಂ ವೈರ್ ಅನ್ನು ಯಾರೋ ಕಳ್ಳರು ಕಟ್ ಮಾಡಿಕೊಂಡು ಹೋಗಿರುತ್ತಾರೆ. ಈ ಸ್ಥಳದಲ್ಲಿ ಸುಮಾರು 1170 ಮೀಟರ್ ಅಲ್ಯುಮಿನಿಯಂ ತಂತಿ ಕಳ್ಳತನವಾಗಿರುತ್ತದೆ.  ಈ ಎರಡೂ ಕಡೆಗಳಲ್ಲಿ ಕಳ್ಳತನವಾಗಿರುವ ಅಲ್ಯುಮಿನಿಯಂ ವೈರ್ ನ ಒಟ್ಟು ಅಂದಾಜು ಬೆಲೆ ಸುಮಾರು 14,50,000 ರೂಗಳಾಗಿರುತ್ತದೆ.ಪಿರ್ಯಾದಿರವರು ವಿಚಾರ ತಿಳಿದು ಬೆಂಗಳೂರಿನಿಂದ ಬಂದು ಸ್ಥಳ ಪರಿಶೀಲನೆ ಮಾಡಿ ತಮ್ಮ ಕಂಪನಿಯ ಮೇಲಾಧಿಕಾರಿಗಳಿಗೆ ತಿಳಿಸಿ ಈ ದಿನ ಠಾಣೆಗೆ ತಡವಾಗಿ ಬಂದು ದೂರು ನೀಡಿರುತ್ತಾರೆ ಆದ್ದರಿಂದ ತಾವುಗಳು ಸ್ಥಳಪರಿಶೀಲನೆ ಮಾಡಿ ಕಾನೂನು ರೀತ್ಯಾ ಕ್ರಮಜರುಗಿಸಿ ಕಳ್ಳತನವಾಗಿರುವ ಮಾಲು ಮತ್ತು ಕಳ್ಳರನ್ನು ಪತ್ತೆ ಮಾಡಬೇಕೆಂದು ನೀಡಿದ  ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ- 25/2017   ಕಲಂ: 279.337.IPC

ದಿನಾಂಕ:14/03/2017 ರಂದು ಬೆಳಿಗ್ಗೆ 10:30 ಗಂಟೆಗೆ  ಪಿರ್ಯಾದಿ ರಮೇಶ.ಪಿ. ಬಿನ್ ಪಲ್ಲಣ್ಣ, 39 ವರ್ಷ, ನಾಯಕ ಜನಾಂಗ, ಗ್ರಾ|| ಪಂ|| ಸದಸ್ಯ ಕೆ ರಾಂಪುರ ಗ್ರಾಮ ಪಾವಗಡ ತಾ|| ರವರು  ನೀಡಿದ ಲಿಖೀತ ದೂರಿನ ದಿನಾಂಕ:13/03/2017 ರಂದು   ನಾನು   ಬೆಳಿಗ್ಗೆ ಸುಮಾರು 11:30 ಗಂಟೆಯಲ್ಲಿ ಕೆ ರಾಂಪುರ ದಿಂದ ದೊಡ್ಡಹಳ್ಳಿಕಡೆಗೆ  ರಸ್ತೆ ಬದಿ ನಡೆದು ಕೊಂಡು ಹೋಗುತ್ತಿರುವಾಗ್ಗೆ ನಮ್ಮ ಗ್ರಾಮದ ರಂಗಪ್ಪ ಬಿನ್ ರಾಮಪ್ಪ,  ಮತ್ತು ನರಸಿಂಹಮೂರ್ತಿ ಬಿನ್ ಲೇ|| ಅಂಜಿನಪ್ಪ ರವರು  ಕೆ.ಎ-64- ಕೆ 8109 ನೇ ಹೀರೋ ಹೆಚ್ಎಫ್, ಡಿಲಕ್ಸ್ ಬೈಕ್ ನಲ್ಲಿ   ವೈ ಎನ್ ಹೊಸಕೋಟೆ ಕಡೆಗೆ   ಹೋಗುತ್ತಿರುವಾಗ್ಗೆ ಪಾವಗಡ ಕಡೆಯಿಂದ ದೊಡ್ಡಹಳ್ಳಿ ಕಡೆಗೆ ಹೋಗಲು ಕೆ.ಎ-02 -ಎಂ.ಕೆ. 6538 ನೇ ಡಸ್ಟರ್ ವಾಹನದ ಚಾಲಕ ತನ್ನ ಕಾರನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಡು ಬಂದಿದ್ದು ಸದರಿ ವಾಹನದ ಮುಂಭಾಗದ ಎಡ ಚಕ್ರ ಬರೆಸ್ಟ್ ಆಗಿದ್ದು ಸದರಿ ವಾಹನದ ಚಾಲಕ ವಾಹನವನ್ನು ರಸ್ತೆಯಲ್ಲಿ ಮುಂದೆ ಹೋಗುತ್ತಿದ್ದ ನಮ್ಮ ಗ್ರಾಮದ ರಂಗಪ್ಪ ಚಾಲನೆ ಮಾಡುತ್ತಿದ್ದ ಕೆ.ಎ-64- ಕೆ 8109 ನೇ ಹೀರೋ ಬೈಕ್ ಗೆ   ಹಿಂದಿನಿಂದ  ಡಿಕ್ಕಿ ಹೊಡೆಸಿ ಅಪಘಾತ ಉಂಟು ಮಾಡಿದ ಪರಿಣಾಮ ಬೈಕ್ ಚಾಲನೆ ಮಾಡುತ್ತಿದ್ದ ರಂಗಪ್ಪ ಮತ್ತು ನರಸಿಂಹಮೂರ್ತಿ ರಸ್ತೆಯ ಎಡ ಭಾಗಕ್ಕೆ ಬಿದ್ದಿದ್ದು ಇಬ್ಬರಿಗೂ ರಕ್ತಗಾಯವಾಗಿದ್ದು  ಸ್ಥಳಕ್ಕೆ 108 ಆಂಬ್ಯೂಲನ್ಸ್ ಬರಮಾಡಿಕೊಂಡು ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ   ಪಾವಗಡ ಸರ್ಕಾರಿ ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು ,  ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆ ಬಗ್ಗೆ ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು ಬೆಂಗಳೂರು  ಬ್ಯಾಟರಾಯನಪುರದ ಬಳಿ ಇರುವ ಪ್ರೋಲೈಫ್ ಆಸ್ಪತ್ರೆಗೆ ದಾಖಲಿಸಿರುತ್ತೇವೆ,   ಕಾರಿನ ಚಾಲಕನ ಹೆಸರು ವಿಳಾಸ ತಿಳಿಯಲಾಗಿ ಆಂಜನೇಯಲು ಬಿನ್ ಬಾಲರಾಜು,20 ವರ್ಷ,ತೊಗಟ ಜನಾಂಗ, ಮಲ್ಲಾಪುರಂ, ಕಲ್ಯಾಣದುರ್ಗ .ಎ.ಪಿ,. ಎಂತ ತಿಳಿದು ಬಂದಿರುತ್ತದೆ .   ಈ ಅಪಘಾತ ದಿ:13/03/2017 ರಂದು ಬೆಳಿಗ್ಗೆ 11:45 ಗಂಟೆ ಸಮಯದಲ್ಲಿ ಸಂಭವಿಸಿರುತ್ತದೆ. ಈ ಅಪಘಾತ ಉಂಟು ಮಾಡಿದ  ಕೆ.ಎ-02.ಎಂ.ಕೆ.6538 ನೇ ಡಸ್ಟರ್ ವಾಹನದ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂತ  ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತದೆ.

 

ಕಳ್ಳಂಬೆಳ್ಳ ಪೊಲೀಸ್ ಠಾಣಾ ಮೊ.ನಂ. 61/2017 ಕಲಂ: 279, 337 IPC

ದಿನಾಂಕ: 14/03/2017 ರಂದು ಬೆಳಿಗ್ಗೆ 10-15 ಗಂಟೆಗೆ ಹೆಚ್.ಸಿ.85 ಮಂಜುನಾಥ ರವರು ತುಮಕೂರು ಸರ್ಕಾರಿ ಆಸ್ಪತ್ರೆಯಿಂದ ಗಾಯಾಳು ಜೈಭೀಮ್ ಬಿನ್ ಸೈದಪ್ಪ, 28 ವರ್ಷ, ರಾಜೋಳ, ರಾಜೇಶ್ವರಿ ಹೋಬಳಿ, ಬಸವಕಲ್ಯಾಣ, ಬೀದರ ಜಿಲ್ಲೆ  ರವರ ಹೇಳಿಕೆ ಪಡೆದುಕೊಂಡು ಬಂದು ಕೊಟ್ಟ ಹೇಳಿಕೆಯ ಅಂಶವೇನೆಂದರೆ, ನಾನು ಮತ್ತು ನಮ್ಮ ಗ್ರಾಮದ ಕೆಲವರು ಬೆಂಗಳೂರು ಅಕ್ಕ-ಪಕ್ಕ ಕೂಲಿಕೆಲಸ ಮಾಡಿಕೊಂಡು ಜೀವನ ಮಾಡುತ್ತಿರುತ್ತೇವೆ.  ದಿನಾಂಕ: 13/03/2017 ರಂದು ಸಂಜೆ ನಮ್ಮ ಗ್ರಾಮದ ನಮ್ಮ ಸ್ನೇಹಿತ ಸಂತೋಷ ಎಂಬುವನು ಮೃತಪಟ್ಟಿರುವುದಾಗಿ ನಮ್ಮ ಗ್ರಾಮದವರು ತಿಳಿಸಿದ್ದು, ನಾವು ಮೃತದ ಶವಸಂಸ್ಕಾರಕ್ಕೆ ಹೋಗಲು ನಾನು ಮತ್ತು ನಮ್ಮ ಸ್ನೇಹಿತರಾದ ರಾಜಕುಮಾರ, ಮಂಜುನಾಥ, ವೆಂಕಟೇಶ, ಪರಮೇಶ ರವರುಗಳು ಬೆಂಗಳೂರಿನಲ್ಲಿ KA-51-C-7403 ನೇ ಟಾಟಾ ಸುಮೋ ಬಾಡಿಗೆ ಮಾತನಾಡಿಕೊಂಡು ಜೊತೆಯಲ್ಲಿ ಚಿದಾನಂದ ಬಿನ್ ನಾಗರಾಜು, ಹೆಬ್ಬುಗೋಡಿ ಎಂಬುವವರನ್ನು ಚಾಲಕರನ್ನಾಗಿ ಕರೆದುಕೊಂಡು ರಾತ್ರಿ 10-30 ಗಂಟೆಗೆ ಬೆಂಗಳೂರು ಹೆಬ್ಬುಗೋಡಿ ಬಿಟ್ಟು ತುಮಕೂರು-ಸಿರಾ ಎನ್.ಹೆಚ್.48 ರಸ್ತೆಯಲ್ಲಿ ಹೋಗುತ್ತಿರುವಾಗ್ಗೆ ಸೀಬಿ ಪಾರೆಸ್ಟ್ ಹತ್ತಿರ KA-51-C-7403 ನೇ ಟಾಟಾ ಸುಮೋ ಚಾಲಕ ಚಿದಾನಂದ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಹೋಗಿ ರಸ್ತೆಪಕ್ಕ ಚರಂಡಿಗೆ ಕೆಡವಿದ.  ಆಗ ನನಗೆ ಸೊಂಟದ ಹತ್ತಿರ, ಕುಂಡಿ ಹತ್ತಿರ, ಬಲಗಾಲು ಪಾದಕ್ಕೆ ರಕ್ತಗಾಯಗಳಾದವು. ರಾಜಕುಮಾರ ಬಿನ್ ವೀರಪ್ಪ ಎಂಬುವನಿಗೆ ಕತ್ತಿನ ಹತ್ತಿರ ಪೆಟ್ಟುಬಿದ್ದಿತ್ತು.  ಚಾಲಕ ಚಿದಾನಂದ ಬಿನ್ ನಾಗರಾಜು ರವರಿಗೆ ಎಡಭಾಗ ಭುಜದ ಹತ್ತಿರ ಪೆಟ್ಟಾಗಿತ್ತು. ವೆಂಕಟೇಶ ಬಿನ್ ವಿಶ್ವನಾಥ ರವರಿಗೆ ಬಲಕಣ್ಣು ಹುಬ್ಬಿನಹತ್ತಿರ, ಎಡಭುಜ, ಎಡಗಾಲು ಮಂಡಿ ಹತ್ತಿರ ರಕ್ತಗಾಯವಾಗಿದ್ದು, ಮಂಜುನಾಥ ಬಿನ್ ರಾಮಣ್ಣ ಎಂಬುವರಿಗೆ ಎಡಗಾಲು ಮಂಡಿ, ಎಡಗಾಲು ಪಾದಕ್ಕೆ ರಕ್ತಗಾಯವಾಗಿತ್ತು, ಪರಮೇಶ್ ಬಿನ್ ಬಸಪ್ಪ ಎಂಬುವವರಿಗೆ ತಲೆಗೆ, ಎಡಕಣ್ಣು ಹುಬ್ಬಿನ ಹತ್ತಿರ, ಎಡಗೈಗೆ ಏಟುಬಿದ್ದು ರಕ್ತಗಾಯವಾಗಿರುತ್ತೆ.  ನಂತರ ಅಲ್ಲಿಗೆ ಬಂದ ಆಂಬ್ಯುಲೆನ್ಸ್ ನಲ್ಲಿ ನಮ್ಮಗಳನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿರುತ್ತಾರೆ. ಈ ಅಪಘಾತವು ದಿನಾಂಕ: 13/03/2017 ರಂದು ರಾತ್ರಿ 12-30 ಗಂಟೆ ಸಮಯದಲ್ಲಿ  ನಡೆದಿರುತ್ತೆ.  ಸದರಿ ಅಪಘಾತಕ್ಕೆ KA-51-C-7403 ನೇ ಟಾಟಾ ಸುಮೋ ಚಾಲಕ ಚಿದಾನಂದ ರವರ ಅತಿವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಕಾರಣ ವಾಗಿರುತ್ತೆ.  ಸದರಿ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ನೀಡಿದ ಗಾಯಾಳು ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 47/2017 ಕಲಂ 279 ಐಪಿಸಿ

ದಿನಾಂಕ:14-03-2017 ರಂದು ಮದ್ಯಾಹ್ನ 01-30 ಗಂಟೆಗೆ ಪಿರ್ಯಾದುದಾರರಾದ ಶಿವಸಾಗರ್‌ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್‌ ಮಾಡಿಸಿದ ಲಿಖಿತ ದೂರಿನ ಅಂಶವೇನೆಂದರೆ,  ದಿನಾಂಕ: 08-03-2017 ರಂದು ನಾನು ನನ್ನ ಚಿಕ್ಕಪ್ಪನ ಮಗನಾದ ನಿತಿನ್‌ ರವರೊಂದಿಗೆ ಕೆಎ-06-ಎನ್‌-0595 ನೇ ಇನ್ನೋವಾ ಕಾರಿನಲ್ಲಿ ಹೆಬ್ಬೂರಿನ ಹೊನಸಿಗೆರೆ ಗ್ರಾಮದ ನಿತಿನ್‌ ರವರ ತೋಟದಿಂದ ಶಿವಗಂಗೆಗೆ ಹೋಗಿದ್ದು, ನಂತರ ಶಿವಗಂಗೆಯಿಂದ ಹೊನಸಿಗೆರೆಗೆ ವಾಪಸ್‌ ಬರಲೆಂದು ಡಿ,ಕೊರಟಗೆರೆಯಿಂದ ಮುಂದೆ ಬೊಮ್ಮನಹಳ್ಳಿ ಗೇಟ್‌ ಹತ್ತಿರ ರಸ್ತೆಯ ತಿರುವಿನಲ್ಲಿ ಸಂಜೆ ಸುಮಾರು 06-45 ಗಂಟೆಗೆ ಬರುತ್ತಿರುವಾಗ್ಗೆ, ಕೆಎ-06-ಎನ್‌-0595 ನೇ ಇನ್ನೋವಾ ಕಾರನ್ನು ಚಾಲನೆ ಮಾಡುತ್ತಿದ್ದ ನಿತಿನ್‌ ರವರು ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬೊಮ್ಮನಹಳ್ಳಿ ಗೇಟ್‌ನ ರಸ್ತೆಯ ತಿರುವಿನಲ್ಲಿರುವ ಒಂದು ಗುಂಡಿಗೆ ಕಾರನ್ನು ಬೀಳಿಸಿ ಅಪಘಾತಪಡಿಸಿದರು. ಸದರಿ ಅಪಘಾತದಿಂದ ಕಾರಿನಲ್ಲಿದ್ದ ನನಗಾಗಲೀ, ನಿತಿನ್‌ ರವರಿಗಾಗಲೀ ಯಾವುದೇ ರೀತಿಯ ಗಾಯಗಳಾಗಲಿಲ್ಲ. ಸದರಿ ಅಪಘಾತದಿಂದ ಕಾರಿನ ಮುಂಭಾಗದ ಗ್ಲಾಸ್, ಹಿಂಭಾಗದ ಗ್ಲಾಸ್‌, ಮುಂದಿನ ಎರಡೂ ಡೋರ್‌ಗಳು, ಮುಂಭಾಗದ ಬಾಡಿ ಡ್ಯಾಮೇಜ್‌ ಆಗಿರುತ್ತೆ. ಆದ್ದರಿಂದ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಈ ಅಪಘಾತಕ್ಕೆ ಕಾರಣನಾದ ನಿತಿನ್‌ ರವರ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ನಾನು ನಮ್ಮ ಮನೆಯಲ್ಲಿ ಹಿರಿಯರ ಪೂಜೆ ಇದ್ದುದ್ದರಿಂದ ಈ ದಿವಸ ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ಅಫಘಾತಕ್ಕೊಳಗಾದ ಕಾರು ಮಸ್ಕಲ್‌ ಗ್ರಾಮದ ಮರಿಗಂಗಯ್ಯ ರವರ ಮನೆಯ ಬಳಿ ನಿಲ್ಲಿಸಿರುತ್ತೆ ಎಂತಾ ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 46/2017 ಕಲಂ 279 ಐಪಿಸಿ

ದಿನಾಂಕ:14-03-2017 ರಂದು ಬೆಳಿಗ್ಗೆ 10-00 ಗಂಟೆಗೆ ಚೇತನ್‌,ಟಿ,ಆರ್ ಬಿನ್ ಟಿ,ಕೆ,ರಂಗನಾಥ್‌ ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್‌ ಮಾಡಿಸಿದ ಲಿಖಿತ ದೂರಿನ ಅಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ಕೆಎ-42-ಎ-7138 ನೇ ಎಕ್ಸೆಂಟ್‌ ಕಾರಿನ ಆರ್/ಸಿ ಮಾಲೀಕನಾಗಿದ್ದು, ಸದರಿ ಕಾರಿಗೆ ಸ್ವತಃ ನಾನೇ ಚಾಲಕನಾಗಿದ್ದು, ದಿನಾಂಕ:05-03-2017 ರಂದು ನಾನು ಬಾಡಿಗೆಗೆಂದು ಬೆಂಗಳೂರಿನಿಂದ ಹೊನ್ನುಡಿಕೆಗೆ ಬಂದು, ಹೊನ್ನುಡಿಕೆಯಿಂದ ಹೊನಸಿಗೆರೆ ಬಳ್ಳಗೆರೆ ಮಾರ್ಗವಾಗಿ ಹೆಬ್ಬೂರಿಗೆ ಹೋಗಲೆಂದು ಮದ್ಯಾಹ್ನ ಸುಮಾರು 03-30 ಗಂಟೆ ಸಮಯದಲ್ಲಿ ದಾಸೇಗೌಡನಪಾಳ್ಯದ ನರಸಿಂಹಮೂರ್ತಿ ರವರ ಜಮೀನಿನ ಮುಂಭಾಗದ ಹೊನಸಿಗೆರೆ ಬಳ್ಳಗೆರೆ ಟಾರ್‌ ರಸ್ತೆಯ ಎಡಬಾಗದಲ್ಲಿ ಹೋಗುತ್ತಿರುವಾಗ್ಗೆ, ಎದುರಿಗೆ ಬಳ್ಳಗೆರೆ ಕಡೆಯಿಂದ ಹೊನಸಿಗೆರೆ ಕಡೆಗೆ ಹೋಗಲು ಬಂದ ಕೆಎ-06-ಡಿ-1060 ನೇ ಲಗೇಜು ಆಟೋ ವಾಹನದ ಚಾಲಕನು ತನ್ನ ಆಟೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ರಸ್ತೆಯ ಎಡಭಾಗದಿಂದ ಬಲಭಾಗಕ್ಕೆ ಬಂದು ನನ್ನ ಬಾಬ್ತು ಕೆಎ-42-ಎ-7138 ನೇ ಎಕ್ಸೆಂಟ್‌ ಕಾರಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದನು. ಸದರಿ ಅಫಘಾತದಿಂದ ಕಾರಿನಲ್ಲಿದ್ದ ನನಗಾಗಲೀ, ಹರ್ಷ,ಆರ್‌ ರವರಿಗಾಗಲೀ ಯಾವುದೇ ರೀತಿಯ ಗಾಯಗಳಾಗಲಿಲ್ಲ. ಅಪಘಾತಪಡಿಸಿದ ಲಗೇಜು ಆಟೋದ ಚಾಲಕನಾದ ತಿಮ್ಮಯ್ಯ ರವರಿಗೂ ಸಹ ಯಾವುದೇ ರೀತಿಯ ಗಾಯಗಳಾಗಲಿಲ್ಲ. ನಂತರ ಅಫಘಾತಪಡಿಸಿದ ಲಗೇಜು ಆಟೋ ವಾಹನದ ಚಾಲಕನಾದ ತಿಮ್ಮಯ್ಯ ರವರು ನನ್ನ ಕಾರನ್ನು ರಿಪೇರಿ ಮಾಡಿಸಿಕೊಡುವುದಾಗಿ ಹೇಳಿ ಹೋದರು. ಆದರೆ ಇಲ್ಲಿಯವರೆವಿಗೂ ತಿಮ್ಮಯ್ಯ ರವರು ನನ್ನ ಕಾರನ್ನು ರಿಪೇರಿ ಮಾಡಿಸಿಕೊಡಲಿಲ್ಲವಾದ್ದರಿಂದ ಈ ದಿವಸ ತಡವಾಗಿ ಬಂದು ಅಪಘಾತಪಡಿಸಿದ ಕೆಎ-06-ಡಿ-1060 ನೇ ಲಗೇಜು ಆಟೋ ವಾಹನದ ಚಾಲಕನಾದ ತಿಮ್ಮಯ್ಯ ರವರ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ಈ ದಿವಸ ತಡವಾಗಿ ಬಂದು ದೂರು ನೀಡುತ್ತಿದ್ದೇನೆ ಎಂತಾ ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೆ.


Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 115 guests online
Content View Hits : 180127