lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ : 17-03-2018 -: ಚೂರಿಯಿಂದ ಇರಿದು ದರೋಡೆ ಮಾಡುತ್ತಿದ್ದ ಆರೋಪಿಗಳ... >> ಪ್ರತಿಕಾ ಪ್ರಕಟಣೆ. ದಿ: 16/03/18 ಮೂವರು ಮನೆ ಕಳ್ಳರ ಬಂಧನ, 5 ಲಕ್ಷ ಮೌಲ್ಯದ... >> ಪತ್ರಿಕಾ ಪ್ರಕಟಣೆ ದಿನಾಂಕ: 15-03-2018 ಎ.ಟಿ.ಎಂ ನಲ್ಲಿ ಹಣ ಡ್ರಾ ಮಾಡಿಕೊಡುವುದಾಗಿ ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ ದಿ: 15-03-2018 ತುಮಕೂರು ಜಿಲ್ಲಾ ಪೊಲೀಸ್... >> ಪತ್ರಿಕಾ ಪ್ರಕಟಣೆ. ದಿನಾಂಕ. 07.03.2018. ಕೊಡಗೇನಹಳ್ಳಿ ಠಾಣಾ ಸರಹದ್ದು ಸಿಂಗನಹಳ್ಳಿ... >> ಪತ್ರಿಕಾ ಪ್ರಕಟಣೆ ದಿನಾಕ : 27/02/2018 ಒಂಟಿ ಮನೆ ಡಕಾಯಿತಿ ಮಾಡುತ್ತಿದ್ದ ಕುಖ್ಯಾತ... >> : ಪತ್ರಿಕಾ ಪ್ರಕಟಣೆ : : ದಿನಾಂಕ: 24-02-2018 :     ದಿನಾಂಕ 19-02-2018 ರಂದು ಪಿರ್ಯಾದಿ ಲೀಲಾವತಿ... >> ಪತ್ರಿಕಾ ಪ್ರಕಟಣೆ ದಿನಾಂಕ:14-02-2018. : : ಇಬ್ಬರು ಬ್ಯಾಂಕ್ ಕಳ್ಳರ ಬಂಧನ : 20,11,950=00 ಮಾಲು ಜಪ್ತು : :... >> ಜಿಲ್ಲಾ ಪೊಲೀಸ್ ಕಛೇರಿ, ತುಮಕೂರು. ದಿ:12.02.2018 :  ಪತ್ರಿಕಾ ಪ್ರಕಟಣೆ  : ದಿನಾಂಕ 12.02.2018... >> ಪತ್ರಿಕಾ ಪ್ರಕಟಣೆ. ದಿನಾಂಕ: 12/02/2018 ರಂದು ತುಮಕೂರು ಜಿಲ್ಲೆ, ತುರುವೇಕೆರೆ ಪೊಲೀಸ್ ಠಾಣೆಯ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< March 2017 >
Mo Tu We Th Fr Sa Su
    1 2 3 4 5
6 7 8 9 10 11 12
14 15 16 17 18 19
20 21 22 23 24 25 26
27 28 29 30 31    
Monday, 13 March 2017
Press Note 13-03-17

 

ಕುಣಿಗಲ್  ಪೊಲೀಸರ ಕಾರ್ಯಾಚರಣೆ.

 

ಕೊಲೆ ಮಾಡಿದ ಆರೋಪಿಗಳ ಬಂಧನ , ಕೊಲೆ ಮಾಡಲು ಬಳಸಿದ ಕಾರು  ಮತ್ತು ಆಯುಧಗಳ ವಶ.

ದಿನಾಂಖ 06-03-17 ರಂದು  ಮೂಲತ:  ಕುಣಿಗಲ್ ತಾಲ್ಲೂಕು ಕಡಸಿಂಗನಹಳ್ಳಿ  ವಾಸಿಯಾದ ಆರೋಪಿ ಕುಮಾರ ಎಂಬುವನು  ತಾನು ಸುರೇಶ ಎಂಬುವರಿಗೆ  ನೀಡಬೇಕಾಗಿದ್ದ  ಸಾಲದ ಹಣ 30,000/ರೂಗಳನ್ನು ನೀಡಲು ತನ್ನ ಬಳಿ ಕೆಲಸ ಮಾಡುತ್ತಿದ್ದ ಶಿವರಾಮ ಎಂಬುವನ ಮುಖಾಂತರ  ಕೊಟ್ಟು ಕಳಿಸಿದ್ದು, ಶಿವರಾಮನು ಹಣವನ್ನು ಸುರೇಶ ರವರಿಗೆ ನೀಡದೆ ಇಸ್ಪೀಟ್ ಆಟ ಆಡಿರುತ್ತಾನೆಂದು ತಿಳಿದು ಕುಮಾರನು ತನ್ನ ಸ್ನೇಹಿತರಾದ ಅಂಜಿತ್ ಕುಮಾರ್, ವಿಜಯಕುಮಾರ ರವರೊಂದಿಗೆ  ಮಂಜುನಾಥನ ಕೆ.ಎ-05-ಎಜಿ-1662 ಕಾರಿನಲ್ಲಿ ಕಡಸಿಂಗನಹಳ್ಳಿಗೆ ಬಂದು ಶಿವರಾಮನಿಗೆ ಕೊಲೆ ಮಾಡುವ ಉದ್ದೇಶದಿದ ಬಿದಿರು ದೊಣ್ಣೆಯಿಂದ ಹೊಡೆದು ತೀರ್ವವಾಗಿ ಗಾಯಗೊಳಿಸಿ   ಕೊಲೆ ಮಾಡಿದ್ದು  ಈ ಬಗ್ಗೆ  ಕುಣಿಗಲ್ ಪೊಲೀಸ್ ಠಾಣೆ ಮೊ.ನಂ. 110/17 ಕಲಂ 302, 363 ರೆ/ವಿ 34 ಐಪಿಸಿ  ರೀತ್ಯಾ ಪ್ರಕರಣ ದಾಖಲಾಗಿರುತ್ತೆ.

ಈ ಪ್ರರಕಣದಲ್ಲಿ ಕೊಲೆ ಆರೋಪಿಗಳ  ಪತ್ತೆ ಬಗ್ಗೆ  ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ  ಶ್ರೀಮತಿ ಇಶಾಪಂತ್ ಮೇಡಂರವರು  ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರ ಹಾಗೂ ಕುಣಿಗಲ್ ಉಪಾಧೀಕ್ಷಕರವರ  ಮಾರ್ಗದರ್ಶನದಲ್ಲಿ   ಕುಣಿಗಲ್ ವೃತ್ತ ನಿರೀಕ್ಷಕರವರ  ನೇತೃತ್ವದಲ್ಲಿ ಒಂದು ವಿಶೇಷ ತಂಡವನ್ನು ರಚಿಸಿದ್ದು  ಈ ತಂಡವು  ದಿನಾಂಕ: 10-03-17   ರಂದು   ಈ ಕೆಳಕಂಡ ಆರೋಪಿತರನ್ನು ಬಂಧಿಸುವಲ್ಲಿ   ಯಶಸ್ವಿಯಾಗಿರುತ್ತಾರೆ.

ಎ1. ಕುಮಾರ ಬಿನ್ ಬೋರಯ್ಯ  35 ವರ್ಷ, ಆರ್.ಟಿ.ಓ. ಕಛೇರಿ(ಮುದ್ದನಪಾಳ್ಯ) ಬೆಂಗಳೂರು,

ಎ2. ಅಂಜಿತ್‌ ಕುಮಾರ್ @ ಅಂಜಿ @ ಅಂಜಿತ್‌ ಬಿನ್ ರಮೇಶ, 21 ವರ್ಷ, ಕೆಬ್ಬೆಹಳ್ಳ,  ಸುಂಕದಕಟ್ಟೆ, ಬೆಂಗಳೂರು,

ಎ3. ಮಂಜುನಾಥ ಬಿನ್ ಗೋಪಾಲ್  ಆರ್. 27 ವರ್ಷ, ಮುದ್ದನಪಾಳ್ಯ, ಬೆಂಗಳೂರು

ಎ-4 ವಿಜಯ್‌ಕುಮಾರ್ @ ವಿಜಿ ಬಿನ್ ನಾರಾಯಣಪ್ಪ, ಮುದ್ದನಪಾಳ್ಯ, ಬೆಂಗಳೂರು.

ತನಿಖಾ   ಸಮಯದಲ್ಲಿ  ಆರೋಪಿಗಳು  ಕೃತ್ಯಕ್ಕೆ ಉಪಯೋಗಿಸಿ  ಕಾರು ಮತ್ತು ಆಯುಧಗಳನ್ನು  ವಶಪಡಿಸಿಕೊಳ್ಳಲಾಗಿದ್ದು  ಆರೋಪಿ  ಕುಮಾರನು  2013 ನೇ ಸಾಲಿನಲ್ಲಿ  ಬೆಂಗಳೂರು ನಗರ ಕಾಟನ್ ಪೇಟೆ ಪೊಲೀಸ್ ಠಾಣೆ ಪ್ರಕರಣದಲ್ಲಿ  ಭಾಗಿಯಾಗಿರುತ್ತಾನೆಂದು ತಿಳಿದು ಬಂದಿರುತ್ತೆ.

ಈ ಕಾರ್ಯಾಚರಣೆಯಲ್ಲಿ  ಕುಣಿಗಲ್ ವೃತ್ತ ನಿರೀಕ್ಷಕರವರಾದ ಶ್ರೀ ಬಾಳೇಗೌಡ, ಕುಣಿಗಲ್ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ಕೇಶವಮೂರ್ತಿ, ದೇವರಾಜು ಹೆಚ್.ಸಿ 124, ಪಿಸಿ. 277. ಚಂದ್ರಶೇಖರ್, ರವಿ. ಪಿ.ಸಿ 199, ಮಲ್ಲಿಕಾರ್ಜುನ  ಪಿಸಿ 222, ಮಲ್ಲೇಶ ಪಿಸಿ 670, ರಂಗೇಗೌಡ ಪಿಸಿ  ಪಿಸಿ 103  ಇವರುಗಳು  ಭಾಗವಹಿಸಿದ್ದರು.


Crime Incidents 13-03-17

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.21/2017,ಕಲಂ:32.34 K.E.Act .

ದಿನಾಂಕ:12/03/2017 ರಂದು ರಾತ್ರಿ 10-00 ಗಂಟೆಗೆ ಠಾಣಾ ಪಿ.ಎಸ್.ಐ.ರವರು ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನದ  ಅಂಶವೇನೆಂದರೆ, ದಿನಾಂಕ:12/03/2017 ರಂದು  ರಾತ್ರಿ 8-10 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಕತ್ತಿರಾಜನಹಳ್ಳಿ ಗ್ರಾಮದಲ್ಲಿ ರಮೇಶ ಎಂಬುವರು ಚಿಲ್ಲರೆ ಅಂಗಡಿಯ ಮುಂಭಾಗ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ  ಮಧ್ಯದ ಪಾಕೇಟುಗಳನ್ನು ಮಾರಾಟ ಮಾಡುತ್ತಿದ್ದಾನೆಂತ ಮಾಹಿತಿ ಬಂದ ಮೇರೆಗೆ ಠಾಣಾ ಎಸ್‌.ಬಿ.ಕರ್ತವ್ಯದ ಸಿಪಿಸಿ-476-ವಿನಯ್ ಕುಮಾರ್  ರವರೊಂದಿಗೆ ಕತ್ತಿರಾಜನಹಳ್ಳಿ ಗ್ರಾಮಕ್ಕೆ ಹೋಗಿ ಪಂಚರನ್ನು ಬರಮಾಡಿಕೊಂಡು ಪಂಚರ ಜೊತೆಯಲ್ಲಿ ರಮೇಶನ ಚಿಲ್ಲರೆ ಅಂಗಡಿ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಸದರಿ ಆಸಾಮಿಯು ತನ್ನ ಅಂಗಡಿ ಮುಂಭಾಗ ಒಂದು ರೊಟ್ಟಿನ ಬಾಕ್ಸ್‌ನಲ್ಲಿ  ಮಧ್ಯದ ಪಾಕೇಟುಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದವನನ್ನು ಹಿಡಿಯಲು ಸುತ್ತುವರೆದಾಗ ಸ್ಥಳದಲ್ಲಿದ್ದ ಸಾರ್ವಜನಿಕರು ಓಡಿಹೋದರು. ನಂತರ ಸದರಿ ಆಸಾಮಿಯನ್ನು ಹಿಡಿದುಕೊಂಡು  ಮಧ್ಯದ ಪಾಕೇಟುಗಳನ್ನು ಮಾರಾಟ ಮಾಡುವ ಬಗ್ಗೆ ನಿನ್ನ ಹತ್ತಿರ ಪರವಾನಿಗೆ ಇದೆಯೇ ಎಂತ ಕೇಳಲಾಗಿ ಆತನು ನನ್ನ ಬಳಿ ಯಾವುದೇ ಪರವಾನಗಿ ಇಲ್ಲ,  ಅಕ್ರಮವಾಗಿ ಮಾರಾಟ ಮಾಡಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ನನಗೆ ಈ ಮಧ್ಯದ ಪಾಕೇಟ್‌‌‌ ಗಳನ್ನು ಮಿಡಿಗೇಶಿ  ಗ್ರಾಮದ ತಿರುಮಲ ವೈನ್ಸ್‌‌‌‌‌ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುವ ಪಾತರಾಜು  ಎಂಬುವರು ತಂದು ಕೊಟ್ಟಿರುತ್ತಾರೆಂತ  ತಿಳಿಸಿದನು. ನಂತರ ಸದರಿ ಆಸಾಮಿಯ ಬಳಿಯಲ್ಲಿದ್ದ ರೊಟ್ಟಿನ ಬಾಕ್ಸ್‌ನ್ನು ಪರಿಶೀಲಿಸಲಾಗಿ ಸದರಿ ಬಾಕ್ಸ್‌ನಲ್ಲಿ 1) 90 ಎಂ.ಎಲ್. ಸಾಮರ್ಥ್ಯವುಳ್ಳ ಓರಿಜಿನಲ್ ಚಾಯ್ಸ್‌ ನ ಒಟ್ಟು-13 ಟೆಟ್ರಾ ಪ್ಯಾಕೇಟುಗಳು, 2) 90 ಎಂ.ಎಲ್.ಸಾಮರ್ಥ್ಯವುಳ್ಳ ರಾಜ ವಿಸ್ಕಿಯ ಒಟ್ಟು-18 ಟೆಟ್ರಾ ಪ್ಯಾಕೇಟುಗಳು,3) 650 ಎಂ.ಎಲ್.ಸಾಮರ್ಥ್ಯವುಳ್ಳ ಕಿಂಗ್ ಪಿಶರ್ ಪ್ರಿಮಿಯಂ ಲೆಜರ್ ಬಿಯರ್ ಒಟ್ಟು-05 ಬಾಟೆಲ್‌ಗಳು, 4) 330 ಎಂ.ಎಲ್.ಸಾಮರ್ಥ್ಯವುಳ್ಳ ನಾಕ್ ಔಟ್‌ನ  ಒಟ್ಟು-05 ಬಾಟೆಲ್‌ಗಳು ಇದ್ದು ಇವುಗಳ ಒಟ್ಟು ಬೆಲೆ 1722=74 ರೂ ಆಗಿದ್ದು  ಸದರಿ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ರಮೇಶ ಬಿನ್ ಲೇ|| ಪುಟ್ಟಲಿಂಗಯ್ಯ, 43 ವರ್ಷ, ವಕ್ಕಲಿಗರ ಜನಾಂಗ,  ಚಿಲ್ಲರೆ ಅಂಗಡಿ,ಚಿಲ್ಲರೆ ಅಂಗಡಿ ವ್ಯಾಪಾರ, ಕತ್ತಿರಾಜನಹಳ್ಳಿ ಗ್ರಾಮ, ಮಿಡಿಗೇಶಿ ಹೋಬಳಿ,  ಮಧುಗಿರಿ ತಾಲ್ಲೋಕು  ಎಂತ ತಿಳಿಸಿದನು. ನಂತರ ಆಸಾಮಿ ರಮೇಶನ  ವಶದಲ್ಲಿ  ಒಂದು ರೊಟ್ಟಿನ ಬಾಕ್ಸ್‌ನಲ್ಲಿದ್ದ ಮೇಲ್ಕಂಡ ಮಧ್ಯದ ಪಾಕೇಟುಗಳನ್ನು ಹಾಗೂ ಬಿಯರ್ ಬಾಟೆಲ್‌ಗಳನ್ನು ಹಾಗೂ ಸದರಿ ರೊಟ್ಟಿನ ಬಾಕ್ಸ್‌ನ್ನು  ಪಂಚಾಯ್ತುದಾರರ ಸಮಕ್ಷಮ ರಾತ್ರಿ 8-30 ಗಂಟೆಯಿಂದ 9-30 ಗಂಟೆಯವರೆಗೆ ಪಂಚನಾಮೆ ಮುಖಾಂತರ ಅಮಾನತ್ತು ಪಡಿಸಿಕೊಂಡಿರುತ್ತೆ.  ಪಂಚನಾಮೆ ಕಾಲದಲ್ಲಿ ಅಮಾನತ್ತು  ಪಡಿಸಿಕೊಂಡ  ಮಧ್ಯದ  ಪಾಕೇಟುಗಳಲ್ಲಿ  ಮತ್ತು  ಬಿಯರ್‌  ಬಾಟೆಲ್‌ಗಳಲ್ಲಿ  ರಾಸಾಯನಿಕ ಪರೀಕ್ಷೆಗಾಗಿ F.S.L.ಗೆ  ಕಳುಹಿಸಿಕೊಡುವ ಸಲುವಾಗಿ 1) 90 ಎಂ.ಎಲ್. ಸಾಮರ್ಥ್ಯವುಳ್ಳ ಓರಿಜಿನಲ್ ಚಾಯ್ಸ್‌ನ 01 ಮಧ್ಯದ ಟೆಟ್ರಾ ಪಾಕೇಟನ್ನು  2) 90 ಎಂ.ಎಲ್.ಸಾಮರ್ಥ್ಯವುಳ್ಳ ರಾಜ ವಿಸ್ಕಿಯ 01 ಮಧ್ಯದ  ಟೆಟ್ರಾ ಪಾಕೇಟನ್ನು 3) 650 ಎಂ.ಎಲ್. ಸಾಮರ್ಥ್ಯವುಳ್ಳ  ಕಿಂಗ್  ಪಿಶರ್  ಪ್ರಿಮಿಯಂ  ಲೆಜರ್  ಬಿಯರ್‌ನ-01 ಬಿಯರ್‌ ಬಾಟೆಲ್ಲನ್ನು 4) 330 ಎಂ.ಎಲ್.ಸಾಮರ್ಥ್ಯವುಳ್ಳ ನಾಕ್ ಔಟ್‌ನ-01 ಬಿಯರ್‌ ಬಾಟೆಲ್ಲನ್ನು ಸ್ಯಾಂಪಲ್‌‌ಗಾಗಿ ತೆಗೆದುಕೊಂಡು ಪ್ರತ್ಯೇಕವಾಗಿ ಬಿಳಿ ಬಟ್ಟೆ ಚೀಲದಲ್ಲಿ ಹಾಕಿ ಬಾಯಿ ಕಟ್ಟಿ “ A ” ಎಂಬ ಇಂಗ್ಲೀಷ್‌ ಅಕ್ಷರದಿಂದ ಸೀಲು ಮಾಡಲಾಯಿತು.ಆದ್ದರಿಂದ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಮಧ್ಯದ ಪಾಕೆಟುಗಳನ್ನು ಮಾರಾಟ ಮಾಡುತ್ತಿರುವ  ಮೇಲ್ಕಂಡ ಆಸಾಮಿಗಳ ಮೇಲೆ ಕಾನೂನು ರೀತ್ಯ ಕಾನೂನು ಕ್ರಮ ಜರುಗಿಸಲು ಈ ಮೂಲಕ ನಿಮಗೆ ಸೂಚಿಸಿ, ಇದರೊಂದಿಗೆ ಸ್ಥಳ ಪಂಚನಾಮೆ ಮತ್ತು ಪಂಚನಾಮೆ ಕಾಲದಲ್ಲಿ ವಶಪಡಿಸಿಕೊಂಡ ಮಾಲನ್ನು ಹಾಗೂ ರಮೇಶ  ಎಂಬ ಆಸಾಮಿಯನ್ನು ನಿಮ್ಮ ವಶಕ್ಕೆ ನೀಡಿರುತ್ತೇನೆಂತ  ಸೂಚಿಸಿ ನೀಡಿದ ಜ್ಞಾಪನದ ಅಂಶವಾಗಿರುತ್ತೆ..

 

ಕಳ್ಳಂಬೆಳ್ಳ ಪೊಲೀಸ್ ಠಾಣಾ ಯು.ಡಿ.ಆರ್.ನಂ.08/2017  ಕಲಂ: 174 CRPC

ದಿನಾಂಕ:12/03/2017 ರಂದು ಸಂಜೆ 4-00 ಗಂಟೆಯಲ್ಲಿ ಪಿರ್ಯಾದುದಾರರಾದ ಶ್ರೀಕಂಠಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ,  ನಮ್ಮ ತಂದೆ ತಾಯಿಗೆ 4 ಜನ ಗಂಡು ಮಕ್ಕಳು ಹಾಗೂ ಒಬ್ಬಳು ಮಗಳಿದ್ದು 3 ಜನ ಗಂಡುಮಕ್ಕಳಿಗೆ ಹಾಗೂ ನನ್ನ ತಂಗಿಗೆ ಮದುವೆಯಾಗಿದ್ದು ನನ್ನ ಚಿಕ್ಕ ತಮ್ಮ ಸತೀಶ ಸುಮಾರು 30 ವರ್ಷ, ಈತನಿಗೆ ಇನ್ನೂ ಮದುವೆಯಾಗಿರುವುದಿಲ್ಲ. ನಾವುಗಳೆಲ್ಲಾ ಬೇರೆವಾಸವಾಗಿದ್ದು ನಮ್ಮ ತಂದೆ ಮೃತಪಟ್ಟಿದ್ದು ನಮ್ಮ ತಾಯಿ ಗಂಗಮ್ಮ ಮತ್ತು ನನ್ನ ತಮ್ಮ ಸತೀಶ ಪ್ರತ್ಯೇಕವಾಗಿ ವಾಸವಾಗಿರುತ್ತಾರೆ.  ನನ್ಮ ತಮ್ಮ ಸತೀಶ ಚಾಲಕ ವೃತ್ತಿ ಮಾಡಿಕೊಂಡಿದ್ದು ಆತನಿಗೆ ಮದುವೆ ಮಾಡಲು ಎಲ್ಲೂ ಹೆಣ್ಣು ಸೆಟ್ ಆಗದೇ ಇದ್ದಿದ್ದರಿಂದ ಆತನು ಇತ್ತೀಚೆಗೆ ಅತಿಯಾಗಿ ಮದ್ಯಪಾನ ಮಾಡುವ ಚಟವನ್ನು ರೂಡಿಸಿಕೊಂಡಿದ್ದ.  ದಿನಾಂಕ: 12/03/2017 ರಂದು ಬೆಳಿಗ್ಗೆ 11-00 ಗಂಟೆಗೆ ಮನೆಯಿಂದ ಹೊರಗೆ ಹೋದವನು ನಂತರ ಸಂಜೆ 3-00 ಗಂಟೆಗೆ ಗ್ರಾಮದವರು ಯಾರೋ ಸತೀಶ ಜೋಡಿದೇವರಹಳ್ಳಿ ಗ್ರಾಮದ ಪೆದ್ದರಾಜು ರವರ ನಿರ್ಮಾಣದ ಹಂತದಲ್ಲಿರುವ ಸಂಪಿಗೆ ಬಿದ್ದು ಮೃತಪಟ್ಟಿರುವುದಾಗಿ ತಿಳಿಸಿದರು.  ತಕ್ಷಣ ನಾನು ನನ್ನ ತಾಯಿ ಗಂಗಮ್ಮ ಹೋಗಿ ನೋಡಲಾಗಿ ನನ್ನ ತಮ್ಮ ಸತೀಶನ ಶವ ಸಂಪಿನಲ್ಲಿ ಕಂಡುಬಂದಿತು.  ನನ್ನ ತಮ್ಮ ಸತೀಶ ಕುಡಿದ ಮತ್ತಿನಲ್ಲಿ ಆಕಸ್ಮಿಕವಾಗಿ ಕಾಲು ಜಾರಿಯೋ ಅಥವಾ ತನಗೆ ಮದುವೆಯಾಗದೇ ಇದ್ದುದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಕುಡಿದ ಮತ್ತಿನಲ್ಲಿ ದೊಡ್ಡಾಲದಮರ ಸರ್ವೆ ನಂ. 225 ರ ಜಮೀನಿನಲ್ಲಿರುವ ಪೆದ್ದರಾಜುರವರ ನಿರ್ಮಾಣದ ಹಂತದಲ್ಲಿರುವ ಮನೆಯ ನೀರಿನ ಸಂಪಿಗೆ ಬಿದ್ದು ಮೃತಪಟ್ಟಿರುತ್ತಾನೆ.  ಮೃತನ ಸಾವಿನ ಬಗ್ಗೆ ಬೇರೆ ಯಾವುದೇ ಅನುಮಾನಗಳು ಇರುವುದಿಲ್ಲ.  ಮುಂದಿನ ಕ್ರಮ ಜರುಗಿಸಿಕೊಡಬೇಕೆಂದು ಕೇಳಿಕೊಳ್ಳುತ್ತೇನೆ.  ನಮ್ಮ ಸಂಬಂದಿಕರಿಗೆಲ್ಲಾ ವಿಚಾರ ತಿಳಿಸಿ ಈಗ ತಡವಾಗಿ ಬಂದು ದೂರು ನೀಡಿರುತ್ತೇನೆ.  ನಮ್ಮ ತಮ್ಮನಿಗೆ ಜಾಂಡೀಸ್ ಕಾಯಿಲೆ ಇದ್ದು ಈ ಹಿಂದೆಯೂ ಆತ್ಮಹತ್ಯೆಗೆ ಪ್ರಯತ್ನಪಟ್ಟಿದ್ದ ಎಂದು ನೀಡಿದ ಪಿರ್ಯದು ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 45/2017 ಕಲಂ 279.337 ಐಪಿಸಿ ರೆ/ವಿ 134(ಎ&ಬಿ), 187 ಐಎಂವಿ ಆಕ್ಟ್

ದಿನಾಂಕ:12-03-2017 ರಂದು ರಾತ್ರಿ 07-15 ಗಂಟೆಗೆ ಪಿರ್ಯಾದುದಾರರಾದ ಬಿ,ಜಿ,ಅನಂತಮೂರ್ತಿ ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್‌ ಮಾಡಿಸಿದ ಲಿಖಿತ ದೂರಿನ ಅಂಶವೇನೆಂದರೆ, ದಿನಾಂಕ:17-02-2017 ರಂದು ನಾನು ತುಮಕೂರಿಗೆ ನನ್ನ ಸ್ವಂತ ಕೆಲಸದ ಮೇಲೆ ಹೋಗಿದ್ದು, ವಾಪಸ್‌ ನಮ್ಮ ಗ್ರಾಮವಾದ ಬೈಚೇನಹಳ್ಳಿಗೆ ಬರಲೆಂದು ತುಮಕೂರಿನಿಂದ ಹೆಬ್ಬೂರಿಗೆ ಬಂದು ರಾತ್ರಿ ಸುಮಾರು 11-30 ಗಂಟೆ ಸಮಯದಲ್ಲಿ ಹೆಬ್ಬೂರಿನ ರಾಘವೇಂದ್ರ ಮೆಡಿಕಲ್‌ ಸ್ಟೋರ್ಸ್‌ ಮುಂಭಾಗದ ತುಮಕೂರು-ಕುಣಿಗಲ್‌ ಟಾರ್‌ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ್ಗೆ, ನನ್ನ ಹಿಂಬದಿಯಿಂದ ಅಂದರೆ ತುಮಕೂರು ಕಡೆಯಿಂದ ಕುಣಿಗಲ್ ಕಡೆಗೆ ಹೋಗಲು ಬಂದ ಒಂದು ದ್ವಿಚಕ್ರ ವಾಹನದ ಸವಾರನು ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದ ನನಗೆ ಹಿಂದಿನಿಂದ ಡಿಕ್ಕಿ ಹೊಡೆಸಿ ಅಪಘಾತಪಡಿಸಿದನು. ಪರಿಣಾಮವಾಗಿ ನನಗೆ ತಲೆಗೆ, ಗದ್ದಕ್ಕೆ ಮತ್ತು ಹಲ್ಲುಗಳಿಗೆ ತೀವ್ರತರವಾದ ಪೆಟ್ಟು ಬಿದ್ದು, ಮೂಗು ಮತ್ತು ಕಿವಿಯಲ್ಲಿ ರಕ್ತ ಬಂದಿತು. ಆಗ ಅಲ್ಲಿಯೇ ಸ್ಥಳದಲ್ಲಿದ್ದ ಹೆಬ್ಬೂರಿನ ಗಾಂಧಿ ನಗರದ ವಾಸಿಯಾದ ಶ್ರೀನಿವಾಸ ಮೂರ್ತಿ ರವರು ನನ್ನನ್ನು ಉಪಚರಿಸಿದರು. ಅಫಘಾತಪಡಿಸಿದ ದ್ವಿಚಕ್ರ ವಾಹನದ ಸವಾರನು ತನ್ನ ದ್ವಿಚಕ್ರ ವಾಹನವನ್ನು ಸ್ಥಳದಲ್ಲಿ ನಿಲ್ಲಿಸಿದ್ದು, ನಂಬರ್‌ ನೋಡಲಾಗಿ ಕೆಎ-06-ಇ.ಆರ್‌-1420 ನೇ ದ್ವಿಚಕ್ರ ವಾಹನವಾಗಿತ್ತು. ನಂತರ ಅಫಘಾತಪಡಿಸಿದ ದ್ವಿಚಕ್ರ ವಾಹನದ ಸವಾರನು ತನ್ನ ದ್ವಿಚಕ್ರ ವಾಹನವನ್ನು ಸ್ಥಳದಿಂದ ತೆಗೆದುಕೊಂಡು ಹೊರಟು ಹೋದನು. ನಂತರ ಸದರಿ ಅಫಘಾತದ ವಿಚಾರವನ್ನು ಶ್ರೀನಿವಾಸ ಮೂರ್ತಿ ರವರು ನನ್ನ ಅಣ್ಣನಾದ ರವಿಕುಮಾರ್ ರವರಿಗೆ ಪೋನ್‌ ಮಾಡಿ ತಿಳಿಸಿದ್ದು, ವಿಚಾರ ತಿಳಿದು ಸ್ಥಳಕ್ಕೆ ಬಂದ ನನ್ನ ಅಣ್ಣ ರವಿಕುಮಾರ್‌ ರವರು ನನ್ನನ್ನು ಯಾವುದೋ ಒಂದು ವಾಹನದಲ್ಲಿ ತುಮಕೂರಿನ ಟಿ,ಹೆಚ್,ಎಸ್‌‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದರು. ಆದ್ದರಿಂದ ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿ ಈ ಅಪಘಾತಕ್ಕೆ ಕಾರಣನಾದ ಕೆಎ-06-ಇ.ಆರ್‌-1420 ನೇ ದ್ವಿಚಕ್ರ ವಾಹನದ ಸವಾರನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಿಂದ ಈ ದಿವಸ ತಡವಾಗಿ ಬಂದು ದೂರು ನೀಡುತ್ತಿದ್ದೇನೆ ಎಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹೊಸಬಡಾವಣೆ ಪೊಲೀಸ್ ಠಾಣಾ  ಮೊ.ಸಂ 26/2017 u/s 379  IPC

ದಿನಾಂಕ: 12-03-2017 ರಂದು ಮಧ್ಯಾಹ್ನ 12-15 ಗಂಟೆಗೆ ಪಿರ್ಯಾದಿ ಶ್ರೀ ಜಿ.ವಿ. ನಾಗರಾಜು ಬಿನ್ ವೀರಹನುಮಂತರಾಯ 37 ವರ್ಷ, ಬೆಂಗಳೂರಿನ ಜಲ ಸಂಪನ್ಮೂಲ ಇಲಾಖೆಯಲ್ಲಿ ಕೆಲಸ, ವಾಸ 2ನೇ ಕ್ರಾಸ್, ನವಗ್ರಹ ಪಾರ್ಕ್‌ ಹತ್ತಿರ, ಶಿರಾಗೇಟ್, ತುಮಕೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿ: 06-03-2017 ರಂದು ಬೆಳಗ್ಗೆ 8-00 ಗಂಟೆ ಸಮಯದಲ್ಲಿ ಪಿರ್ಯಾದಿಯು ಎಂದಿನಂತೆ ಪ್ರವಾಸಿ ಮಂದಿರದ ಆವರಣದಲ್ಲಿ ತಮ್ಮ ಬಾಬ್ತು 20,000/-ರೂ ಬೆಲೆ ಬಾಳುವ KA 06 EG 7122  ಹಿರೋಹೊಂಡಾ ಫ್ಯಾಷನ್ ದ್ವಿ ಚಕ್ರ ವಾಹನವನ್ನು ನಿಲ್ಲಿಸಿ ಬೆಂಗಳೂರಿಗೆ ಕೆಲಸಕ್ಕೆ ಹೋಗಿ ರಾತ್ರಿ 8-20 ಗಂಟೆಗೆ ವಾಪಸ್ ಬಂದು ನೋಡಲಾಗಿ ದ್ವಿ ಚಕ್ರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕ್ರಮ ಕೋರಿ ನೀಡಿದ ದೂರು


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 29 guests online
Content View Hits : 258543