lowborn Tumakuru District Police | Tumkur Police | Karnataka Police | Tumakuru District Police | Tumkur Police | Karnataka Police

Dr. Divya V. Gopinath IPS,
Superintendent of Police,
Tumakuru Dt., Karnataka.

Message from SP

ಪತ್ರಿಕಾ ಪ್ರಕಟಣೆ :: ದಿನಾಂಕ 12-12-2017  :: ತುಮಕೂರು ನಗರದಲ್ಲಿ ಮೂಲ ಆ.ಐ. ಸ್ಮಾಟ್‌ ಕಾರ್ಡಗಳ... >> ಪತ್ರಿಕಾ ಪ್ರಕಟಣೆ : ದಿನಾಂಕ:-05-12-2017 : ಚಾಳಿಬಿದ್ದ ಅಪರಾಧಿಗಳಿಂದ ಸುಮಾರು ಒಟ್ಟು 5, 00, 100/- ರೂ... >> ಜಯನಗರ ಪೊಲೀಸ್ ಠಾಣಾ ಮೊ.ನಂ. 156/2017 ಕಲಂ 20 (ಬಿ) ಎನ್‌.ಡಿ.ಪಿ.ಎಸ್ ಆಕ್ಟ್‌ ದಿನಾಂಕ: 25-11-2017 ರಂದು... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ   ತುಮಕೂರು ನಗರದಲ್ಲಿ ಒಂಟಿಯಾಗಿ... >>   New BEAT BEST STAFF AND BEST CRIME DETECTION BEST STAFF >> NEW BEAT BEST STAFF AND BEST CRIME DETECTION STAFF >> ಶಿರಾ ಗೇಟ್ ರಸ್ತೆಯ ಆಗಲೀಕರಣ ಹಿನ್ನಲೆ ಸಂಚಾರ ಮಾರ್ಗದಲ್ಲಿ ಬದಲಾವಣೆ. >> ಪತ್ರಿಕಾ ಪ್ರಕಟಣೆ ದಿನಾಂಕ:19-11-2017. ಅಕ್ರಮವಾಗಿ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದ... >> ಪತ್ರಿಕಾ ಪ್ರಕಟಣೆ ದಿನಾಂಕ:17-11-2017. ಮೂರು ಜನ ಅಂತರ ರಾಜ್ಯ ಕಳ್ಳರ ಬಂಧನ : 8 ಲಕ್ಷದ 50 ಸಾವಿರ... >> ದಿನಾಂಕ.17.11.2017. ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲೆ ಕಳ್ಳಂಬೆಳ್ಳ ಪೊಲೀಸ್... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ
Friday, 10 March 2017
Crime Incidents 10-03-17

ಹುಳಿಯಾರು ಪೊಲೀಸ್ ಠಾಣಾ ಮೊ.ನಂ. 35/2017, ಕಲಂ 304(ಎ) ಐ.ಪಿ.ಸಿ.

ದಿನಾಂಕ 09-03-2017 ರಂದು ಬೆಳಿಗ್ಗೆ 07-00 ಗಂಟೆಗೆ ಚಿಕ್ಕನಾಯಕನಹಳ್ಳಿ ತಾ. ಕಂದಿಕೆರೆ ಹೋಬಳಿ, ಚಿಕ್ಕವೆಳವಾಡಿ ಗ್ರಾಮದ ವಾಸಿಯಾದ ಪ್ರಭಾಕರ ಬಿನ್ ಹನುಮಂತರಾಯಪ್ಪ, ಸುಮಾರು 38 ವರ್ಷ, ವಕ್ಕಲಿಗ ಜನಾಂಗ, ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ಚಿಕ್ಕನಾಯಕನಹಳ್ಳಿ ತಾ. ಹುಳಿಯಾರು ಟೌನ್, ಬಳ್ಳೇಕಟ್ಟೆಯಲ್ಲಿರುವ ವಿದ್ಯಾವಾರಧಿ ಇಂಟರ್ ನ್ಯಾಷನಲ್ ಸ್ಕೂಲ್ ಮತ್ತು ವಸತಿ ಶಾಲೆಯಿದ್ದು, ಈ ಶಾಲೆಯಲ್ಲಿ ನನ್ನ ಮಗನಾದ ವಿಕಾಸ್. ಪಿ.ಟಿ. ಈತನು 6 ನೇ ತರಗತಿಯಲ್ಲಿ ಓದುತ್ತಿರುತ್ತಾನೆ, ಹಾಗೂ ನನ್ನ ಭಾಮೈದ ತೋಂಟರಾಧ್ಯ, ಗಿರೇನಹಳ್ಳಿ ವಾಸಿ ಈತನ ಮಗನಾದ ಪವನ್ ಇದೇ ವಸತಿಶಾಲೆಯಲ್ಲಿ ವಾಸವಿದ್ದು, ಎರಡನೇ ತರಗತಿಯಲ್ಲಿ ಓದುತ್ತಿರುತ್ತಾನೆ. ನಮ್ಮ ಇಬ್ಬರು ಮಕ್ಕಳು ಈ ಶಾಲೆಯಲ್ಲಿ ಓದುತ್ತಿರುವುದರಿಂದ ನಾನು ಆಗಿಂದಾಗ್ಯೆ ಶಾಲೆಯ ಹತ್ತಿರ ಬಂದು ಮಕ್ಕಳ ಬಗ್ಗೆ ವಿಚಾರ ಮಾಡಿಕೊಂಡು  ಹೋಗಿ ಬರುತ್ತಿದ್ದೆ, ದಿನಾಂಕ 08-03-2017 ರಂದು ರಾತ್ರಿ 09-30 ಗಂಟೆ ಸಮಯದಲ್ಲಿ ವಸತಿ ಶಾಲೆಯಲ್ಲಿ ಮಕ್ಕಳಿಗೆ ಊಟ ಬಡಿಸಿದ್ದು, ಸದರಿ ಊಟ ಅಳಸಿದ್ದು ತಿನ್ನಲು ಯೋಗ್ಯವಿಲ್ಲವೆಂದು ಗೊತ್ತಿದ್ದರು ಅದೇ ಊಟವನ್ನು ಮಕ್ಕಳಿಗೆ ನೀಡಿದ್ದು, ಮೊದಲು 8 ನೇ ತರಗತಿಯ ಶ್ರೇಯಸ್, 10 ನೇ ತರಗತಿಯ ಅಕಾಂಕ್ಷ್  ಪಲ್ಲಕ್ಕಿ  , 10 ನೇ ತರಗತಿಯ ಶಾಂತಮೂರ್ತಿ, 8 ನೇ ತರಗತಿಯ ಸುದರ್ಶನ್  ಮತ್ತು ಸೆಕ್ಯೂರಿಟಿ ಗಾರ್ಡ ರಮೇಶ್ ರವರು ಊಟ ಮಾಡಿದ್ದು, ತಕ್ಷಣ ಅವರುಗಳು ವಾಂತಿ ಮಾಡಿದ್ದು, ಆಗಲೇ ಐದು ಜನರನ್ನು ಹುಳಿಯಾರಿನ ಸಿದ್ದಶ್ರೀ ಆಸ್ಪತ್ರೆಗೆ ತೊರಿಸಿ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ಶಿಕ್ಷಕರಾದ ಷಣ್ಮುಖ, ಅಟೆಂಡರ್ ಆದ ಜಗದೀಶ್ ಒಂದು ವಾಹನದಲ್ಲಿ ಕರೆದುಕೊಂಡು ಹೋಗಿದ್ದು, ಅಲ್ಲಿ ಚಿಕಿತ್ಸೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು ಗುಣವಾಗದೆ ಶ್ರೇಯಸ್, ಆಕಾಂಕ್ಷ್ ಪಲ್ಲಕ್ಕಿ, ಶಾಂತಮೂರ್ತಿ, ಇವರುಗಳು  ಮೃತಪಟ್ಟಿರುತ್ತಾರೆ ಹಾಗೂ ಸುದರ್ಶನ್ , ಮತ್ತು ಸೆಕ್ಯೂರಿಟಿ ಗಾರ್ಡ ರಮೇಶ್ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದು ಬಂದಿರುತ್ತದೆ, ವಿದ್ಯಾವಾರಧಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಅಚ್ಚುಕಟ್ಟಾದ ಮತ್ತು ಗುಣ ಮಟ್ಟದ ಊಟ ನೀಡದೆ, ಹಳಸಿದ ತಿನ್ನಲು ಯೋಗ್ಯವಲ್ಲದ ಆಹಾರ ಎಂದು ತಿಳಿದಿದ್ದರು ಸಹ  ಅಳಸಿದ ಅಥವಾ ತಿನ್ನಲು ಯೋಗ್ಯವಲ್ಲದ ಊಟವನ್ನು ನಿರ್ಲಕ್ಯತೆಯಿಂದ ಮತ್ತು ಬೇಜವಾಬ್ದರಿತನದಿಂದ ಮಕ್ಕಳಿಗೆ ತಿನ್ನಲು ನೀಡಿ ಮೇಲ್ಕಂಡ ವಿದ್ಯಾರ್ಥಿಗಳ ಸಾವಿಗೆ ಕಾರಣರಾದ ವಿದ್ಯಾವಾರಧಿ ಇಂಟರ್ ನ್ಯಾಷನಲ್ ವಸತಿ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ, ಕಿರಣ್ ಕುಮಾರ್. ಕಾರ್ಯದರ್ಶಿಗಳಾದ ಶ್ರೀಮತಿ ಕವಿತಾ ಕಿರಣ್ ಕುಮಾರ್ ಹಾಗೂ ಊಟದ ಮೇಲ್ವಿಚಾರಕರಾದ ಸುಹಾಸ್, ದಿನಾಂಕ 08-03-2017 ರಂದು ವಸತಿ ಶಾಲೆಯ ಉಸ್ತುವಾರಿ ಇದ್ದ ಅಟೆಂಡರ್ ಜಗದೀಶ್ , ಅಡುಗೆ ಭಟ್ಟರಾದ  ಶಿವಣ್ಣ, ರಂಗಮ್ಮ ಹಾಗೂ ಇತರರು ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ನೀಡಿದ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಕಳ್ಳಂಬೆಳ್ಳ ಪೊಲೀಸ್ ಠಾಣಾ ಮೊ.ನಂ.6/2017 ಕಲಂ: 174 CRPC

ದಿನಾಂಕ: 09/03/2017 ರಂದು ರಾತ್ರಿ 8-30 ಗಂಟೆಯಲ್ಲಿ ಪಿರ್ಯಾದಿ ಹನುಮಂತಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನನ್ನ ಮಗ ಖಾದ್ರಿ ನರಸಿಂಹಮೂರ್ತಿ ಈಗ್ಗೆ ಹನ್ನೆರಡು ವರ್ಷದ ಹಿಂದೆ ಹಿರಿಯೂರು ತಾಲ್ಲೂಕ್ ದೊಡ್ಡಕಟ್ಟೆ ಗ್ರಾಮದ ವಾಸಿ ಸಿದ್ದಪ್ಪ ರವರ ಮಗಳು ರಾಜಮ್ಮ ರವರನ್ನು ಮದುವೆಮಾಡಿಕೊಂಡಿದ್ದು, ಇವರಿಗೆ 10 ವರ್ಷದ ಧನುಷ್ ಹಾಗೂ ಮೂರು ವರ್ಷದ ಮನು ಎಂಬ ಇಬ್ಬರು ಗಂಡುಮಕ್ಕಳಿದ್ದು ಎಲ್ಲರೂ ಒಟ್ಟಿಗೆ ವಾಸವಿರುತ್ತೇವೆ.  ನನಗೆ ವಯಸ್ಸಾಗಿದ್ದು ನಮ್ಮ ಸಂಸಾರದ ಜವಾಬ್ದಾರಿಯಲ್ಲ ನನ್ನ ಮಗ ಖಾದ್ರಿನರಸಿಂಹಮೂರ್ತಿ ರವರದ್ದೆ ಆಗಿರುತ್ತದೆ.  ನಮ್ಮ ಸಂಸಾರದ ನಿರ್ವಹಣೆಗಾಗಿ ವ್ಯವಸಾಯದ ಕೆಲಸಗಳಿಗೆ ಅನೇಕ ಕಡೆ ಸಾಲಮಾಡಿದ್ದು, ಈಗ್ಗೆ ಐದು ವರ್ಷಗಳಿಂದ ನಮ್ಮ ಅಡಿಕೆ ಮತ್ತು ತೆಂಗಿನ ತೋಟ ಉಳಿಸಿಕೊಳ್ಳಲು ನೀರಿಗಾಗಿ ಮೂರು ಬೋರ್ವೆಲ್ ಗಳನ್ನು ಕೊರೆಸಿದ್ದು ಒಂದು ಬೋರ್ವೆಲ್ ನಲ್ಲಿ ಮಾತ್ರ ನೀರು ಬರುತ್ತಿದ್ದು ಈ ಮೂರು ಬೋರುಗಳನ್ನು ಕೊರೆಸಲು ಹಾಗೂ ವ್ಯವಸಾಯ ಮಾಡಲು ಕಳ್ಳಂಬೆಳ್ಳ ಕೆನರಾ ಬ್ಯಾಂಕ್ ನಲ್ಲಿ ಸುಮಾರು ಒಂದವರೆ ಲಕ್ಷ ರೂ.ಗಳನ್ನು ಹಾಗೂ ಇತರೆ ಸಂಘಗಳಿಂದ ಮತ್ತು ಕೈಸಾಲವಾಗಿ ಕೆಲವು ಪರಿಚಯಸ್ಥರಿಂದ ಸುಮಾರು ಒಂದು ಲಕ್ಷ ಸಾಲಮಾಡಿದ್ದು ಮಳೆ ಸರಿಯಾಗಿ ಬಾರದಿದ್ದರಿಂದ ತೋಟದಲ್ಲಿ ಬೆಳೆ ಸರಿಯಾಗಿ ಆಗದೇ ತಾನು ಮಾಡಿದ ಸಾಲವನ್ನು ಹೇಗೆ ತೀರಿಸುವುದೆಂದು ಖಾದ್ರಿ ನರಸಿಂಹಮೂರ್ತಿ ರವರು ನನ್ನ ಬಳಿ ನಮ್ಮ ಕುಟುಂಬದವರ ಬಳಿ ಹಾಗೂ ನನ್ನ ಸ್ನೇಹಿತರಲ್ಲಿ ಹೇಳಿಕೊಂಡು ಮನಸ್ಸಿಗೆ ಬೇಜಾರು ಮಾಡಿಕೊಂಡು ಕೊರಗುತ್ತಿದ್ದನು.  ನಾವುಗಳು ನನ್ನ ಮಗನಿಗೆ ಅನೇಕ ಸಾರಿ ಬುದ್ದಿಹೇಳಿ ಸಾಲ ತೀರಿಸಿದರೆ  ಆಯಿತು.  ಈ ವರ್ಷವಲ್ಲದೆ ಮುಂದಿನ ವರ್ಷವಾದರೂ ಮಳೆ ಸರಿಯಾಗಿ ಬಂದಾಗ ತೀರಿಸಬಹುದೆಂದು ಸಮಾಧಾನ ಮಾಡಿದ್ದೆವು.  ಆದರೂ ಸಹ ನನ್ನ ಮಗ ತಾನು ಮಾಡಿರುವ ಸಾಲವನ್ನು ಹೇಗೆ ತೀರಿಸುವುದೆಂದು ತನ್ನ ಮನಸ್ಸಿಗೆ ಬೇಜಾರುಮಾಡಿಕೊಂಡು ಮನೆಯಿಂದ ಈದಿನ ಸುಮಾರು 5-30 ರಲ್ಲಿ ತೋಟಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದನು.  ನಂತರ ಸುಮಾರು 6-45 ಗಂಟೆಯಲ್ಲಿ ಶಿವಕುಮಾರ ಪಕ್ಕದ ಜಮೀನಿನವರು ನಮ್ಮ ಮನೆ ಬಳಿ ಬಂದು ನಿಮ್ಮ ಮಗ ಕರೆಂಟ್ ರೂಂ ನಲ್ಲಿ ಕರೆಂಟನ್ನು ಹಿಡಿದುಕೊಂಡು ವಿದ್ಯುತ್ ಶಾಖ್ ಆಗಿ ಬಿದ್ದಿರುತ್ತಾನೆಂದು ತಿಳಿಸಿದಾಗ ನಾನು ನಮ್ಮ ಊರಿನ ಶ್ರೀಧರ್, ನಟರಾಜು ಹಾಗೂ ಶಿವಕುಮಾರ್ ನಮ್ಮ ಕರೆಂಟ್ ರೂಂ ನ ಹತ್ತಿರ ಹೋಗಿ ನೋಡಲಾಗಿ ನನ್ನ ಮಗ ಪ್ರಜ್ಞೆ ತಪ್ಪಿ ಬಿದ್ದಿದ್ದು ನೋಡಲಾಗಿ ಎಡಗೈನ ಬೆರಳುಗಳು ಸುಟ್ಟಂತೆ ಕಪ್ಪಗಿದ್ದು ದೇಹ ಬಿಸಿಯಾಗಿದ್ದರಿಂದ ಜೀವ ಇರುವುದೆಂದು ತಿಳಿದು ನನ್ನ ಮಗನನ್ನು ನಟರಾಜು ರವರ ಮೋಟರ್ ಸೈಕಲ್ ನಲ್ಲಿ ನಟರಾಜು ಮತ್ತು ಶ್ರೀ ಧರ್ ಸೇರಿ ಕಳ್ಳಂಬೆಳ್ಳ ಆಸ್ಪತ್ರೆಗೆ ಹೋಗೋಣವೆಂದು ಕರೆದುಕೊಂಡು ಹೊರಟರು.  ನಾನು ಮತ್ತು ಶಿವಕುಮಾರ ಮತ್ತೊಂದು ಮೋಟರ್ ಸೈಕಲ್ ನಲ್ಲಿ ಸಂಜೆ ಸುಮಾರು 7-20 ಗಂಟೆಗೆ ಆಸ್ಪತ್ರೆ ಬಳಿ ಬಂದಾಗ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದಿದ್ದರಿಂದ ಸಿರಾಕ್ಕೆ ಕರೆದುಕೊಂಡು ಹೋಗಿ ಎಂದು ಹೇಳಿ ಹೋಗುತ್ತಿದ್ದಾಗ ದಾರಿ ಮದ್ಯೆ ಬರುವಷ್ಟರಲ್ಲಿ ನನ್ನ ಮಗ ಮೃತಪಟ್ಟಿದ್ದು ದೇಹ ತಣ್ಣಗಾಗಿದ್ದು ನನ್ನ ಮಗನನ್ನು ಸಿರಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆಗಲೇ ಮೃತಪಟ್ಟಿದ್ದರಿಂದ ಸಿರಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಶವ ಇಟ್ಟು ಮಗ ಮೃತಪಟ್ಟ ವಿಚಾರವನ್ನು ಸಂಬಂದಿಕರಿಗೆ ತಿಳಿಸಿ ತಡವಾಗಿ ಠಾಣೆಗೆ ಬಂದು ಮುಂದಿನ ಕ್ರಮ ಜರುಗಿಸಬೇಕೆಂದು  ನೀಡಿದ ದೂರಿನ ಮೇರೆಗೆ ಪ್ರಕರಣದಾಖಲಿಸಿಕೊಂಡಿರುತ್ತೆ.

ವೈ ಎನ್ ಹೊಸಕೋಟೆ  ಪೊಲೀಸ್ ಠಾಣಾ ಯು.ಡಿ.ಆರ್. ನಂ:04/2017  .ಕಲಂ:174  ಸಿ.ಆರ್.ಪಿ.ಸಿ

ದಿನಾಂಕ:09/03/2017 ರಂದು ಬೆಳಿಗ್ಗೆ 10:30 ಗಂಟೆಗೆ ಪಿರ್ಯಾದಿ ನಾಗಭೂಷಣ ಬಿನ್ ಕೊಲ್ಲಪ್ಪ, 40ವರ್ಷ, ಪ.ಜಾತಿ .ಬಿ ಹೊಸಹಳ್ಳಿ ಗ್ರಾಮ,ಪಾವಗಡ ತಾ|| ರವರು ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನಮ್ಮ ತಂದೆ ಕೊಲ್ಲಪ್ಪ ನಮ್ಮ ತಾಯಿ ಗೌರಮ್ಮ ಹೆಸರಿಗೆ ಈಗ್ಗೆ ಸುಮಾರು 3-4 ವರ್ಷಗಳ ಹಿಂದೆ ಕೋಟಗುಡ್ಡ ಎಸ್ ಬಿ ಎಂ ಬ್ಯಾಂಕ್ ನಲ್ಲಿ ಎರಡು ಲಕ್ಷ 30.000=00 ರೂ ಬೆಳೆ ಸಾಲ ಹಾಗೂ ಕುರಿ ಸಾಲ ತೆಗೆದು ಕೊಂಡಿದ್ದು ಹಾಗೂ ಈಗ್ಗೆ ಸುಮಾರು ಒಂದು ವರ್ಷದ ಹಿಂದೆ ಸ.ನಂ:120/2ರಲ್ಲಿ ಕೊಳವೆ ಬಾವಿ ಕೊರೆಸಿದ್ದು ನೀರು ಸಿಕ್ಕಿರಲಿಲ್ಲ, ಆದ್ದರಿಂದ ಬೆಳೆ ಸಾಲ ಹಾಗೂ ಕುರಿ ಸಾಲ ಹಾಗೂ ಕೈ ಸಾಲ ತೀರಿಸಲಾಗದೇ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದು ಈ ದಿನ ಬೆಳಿಗ್ಗೆ ಸುಮಾರು 5:30 ಗಂಟೆ ಸಮಯದಲ್ಲಿ ಮನೆಯಿಂದ ಬಹಿರ್ದೆಸೆ ಗೆಂದು ಹೇಳಿ ಹೋಗಿದ್ದು ಎಷ್ಟು ಹೊತ್ತಾದರೂ ಮನೆಗೆ ಮರಳಿ ಬಾರದ ಕಾರಣ ನಾವು ಮತ್ತು  ನಮ್ಮ ಸಂಬಂದಿಕರು ಹುಡುಕಾಡುತ್ತಿರುವಾಗ್ಗೆ ಬೆಳಿಗ್ಗೆ ಸುಮಾರು 9:30 ಗಂಟೆ ಸಮಯದಲ್ಲಿ ನಮ್ಮ ಗ್ರಾಮದ ಏಸು ಬಿನ್ ಪಾತನ್ನ,ಎಂಬುವವರು ನಮ್ಮ ಮನೆ ಬಳಿ ಬಂದು ನಿಮ್ಮ ತಂದೆ ಗುಣಿ ಅಚ್ಚಮ್ಮರವರ ಜಮೀನಿನ ಹಳ್ಳದಲ್ಲಿ ತುಗ್ಗಲಿ ಮರಕ್ಕೆ ನೇಣು ಹಾಕಿಕೊಂಡು ಸತ್ತು ಹೋಗಿದ್ದಾರೆ, ಎಂದು ತಿಳಿಸಿದರು ,ನಾವುಗಳು ಬಂದು ನೋಡಿರುತ್ತೇವೆ ನಮ್ಮ ತಂದೆ ಸತ್ತು ಹೋಗಿದ್ದು ನಮ್ಮ ತಂದೆ ರೈತರಾಗಿದ್ದು ಎಸ್.ಬಿ.ಎಂ ಬ್ಯಾಂಕ್ ನಲ್ಲಿ ಬೆಳೆಸಾಲ ಹಾಗೂ ಕುರಿಸಾಲ ಹಾಗೂ ಕೈ ಸಾಲ ತೀರಿಸಲಾಗದೇ ಜೀವನದಲ್ಲಿ ಜಿಗುಪ್ಸೆ ಹೊಂದಿ ನೇಣು ಹಾಕಿಕೊಂಡು ಮೃತಪಟ್ಟಿದ್ದು ತಾವು ಸ್ಥಳಕ್ಕೆ ಬಂದು ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕೆಂತ ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತದೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ; 45/2017 ಕಲಂ 379, 188, ಐಪಿಸಿ, 4(1), 4(1ಎ), 21(1) ಎಂ.ಎಂ.ಆರ್‌.ಡಿ ಆಕ್ಟ್‌-1957 ಮತ್ತು 44(1), ಕೆ.ಎಂ.ಎಂ.ಸಿ.ಆರ್‌ ಆಕ್ಟ್‌-1994.

ದಿನಾಂಕ:09-03-2017 ರಂದು ಬೆಳಿಗ್ಗೆ 8-40 ಗಂಟೆಗೆ ಹುಲಿಯೂರುದುರ್ಗ ಪೊಲೀಸ್‌ ಠಾಣಾ ಪಿಎಸ್‌ಐ ರವರಾದ  ಶ್ರೀ ಎಂ.ಎಸ್.ಅನಿಲ್‌ಕುಮಾರ್‌ ರವರು ಠಾಣಾ ಸಿಬ್ಬಂದಿಯಾದ ಪಿಸಿ-426 ರಂಗಸ್ವಾಮಿ ರವರ ಮುಖೇನ ಕಳುಹಿಸಿಕೊಟ್ಟ ದೂರಿನ ಅಂಶವೇನೆಂದರೆ, ದಿನಾಂಕ:09-03-2017 ರಂದು ಬೆಳಿಗ್ಗೆ 7-10 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿ ಇರುವಾಗ್ಗೆ ನನಗೆ ಬಂದ ಮಾಹಿತಿ ಏನೆಂದರೆ ತೊರೆಬೊಮ್ಮನಹಳ್ಳಿ ಗ್ರಾಮದ ವಾಸಿಯಾದ ಮಲ್ಲೇಶ ಬಿನ್ ಲೇಟ್‌ ಮಲ್ಲಯ್ಯ ಉರುಫ್‌ ಗದ್ದೇಕರಿಗೌಡ ಎಂಬುವರು ಅಕ್ರಮವಾಗಿ ಹಣ ಸಂಪಾದನೆ ಮಾಡುವ ಸಲುವಾಗಿ ಸರ್ಕಾರದಿಂದ ಯಾವುದೇ ಪರವಾನಗಿಯನ್ನು ಪಡೆಯದೇ, ತೊರೆಬೊಮ್ಮನಹಳ್ಳಿ ಗ್ರಾಮದ ಹತ್ತಿರ ಹರಿಯುವ ಶಿಂಷಾ ನದಿಯನ್ನು ಸರ್ಕಾರ ಸಂರಕ್ಷಿತ ವಲಯವೆಂದು ಘೋಷಣೆ ಮಾಡಿದ್ದರು ಸಹ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಶಿಂಷಾನದಿಯಲ್ಲಿ ನೈಸರ್ಗಿಕ ಖನಿಜ ಸಂಪತ್ತಾದ ಮರಳನ್ನು  ಕಳ್ಳತನದಿಂದ ತೆಗೆಸಿ ಟ್ರಾಕ್ಟರ್‌ ಟ್ರೈಲರ್‌ಗೆ ತುಂಬಿಸಿ ಮಾರಾಟ ಮಾಡಲು ಸಾಗಾಣೆ ಮಾಡುತ್ತಿದ್ದಾರೆಂದು ಮಾಹಿತಿ ಬಂದಿದ್ದು ಅವರುಗಳ ಮೇಲೆ ಕಾನೂನು ಕ್ರಮವನ್ನು ಜರುಗಿಸುವ ಸಲುವಾಗಿ ಠಾಣಾ ಸಿಬ್ಬಂದಿಯವರಾದ ಪಿಸಿ-426 ರಂಗಸ್ವಾಮಿ ಮತ್ತು ಜೀಪ್‌ ಚಾಲಕ ಎಪಿಸಿ-211 ಪರಮೇಶ ಮತ್ತು ವೆಂಕಟೇಶಮೂರ್ತಿ ಸಿಹೆಚ್‌ಸಿ-240 ರವರೊಂದಿಗೆ  ಇಲಾಖಾ ಜೀಪ್‌ನಲ್ಲಿ ಬೆಳಿಗ್ಗೆ 7-15 ಗಂಟೆಗೆ ಠಾಣೆಯನ್ನು ಬಿಟ್ಟು ಸುಗ್ಗನಹಳ್ಳಿ ಮಾರ್ಗವಾಗಿ ತೊರೆಬೊಮ್ಮನಹಳ್ಳಿ ಗ್ರಾಮದ ಕಡೆಗೆ ಹೋಗುತ್ತಿರುವಾಗ ಮಾರ್ಗ ಮಧ್ಯೆ ಯಡವಾಣಿ-ಹುಲಿಯೂರುದುರ್ಗ ರಸ್ತೆಯಲ್ಲಿರುವ ತೊರೆಬೊಮ್ಮನಹಳ್ಳಿ ಕ್ರಾಸ್‌ನಲ್ಲಿ ರಸ್ತೆಯಲ್ಲಿ ಬೆಳಿಗ್ಗೆ 7-35 ಗಂಟೆಯಲ್ಲಿ ಟ್ರಾಕ್ಟರ್‌,ಟ್ರೈಲರ್‌ನಲ್ಲಿ ಮರಳನ್ನು ತುಂಬಿಕೊಂಡು ಟ್ರಾಕ್ಟರ್‌ನಲ್ಲಿ ಇಬ್ಬರು ಆಸಾಮಿಗಳು ಬರುತ್ತಿದ್ದು ಪೊಲೀಸ್ ಜೀಪ್‌ ನೋಡಿ ಟ್ರಾಕ್ಟರ್‌ನಲ್ಲಿದ್ದ ಇಬ್ಬರು ಆಸಾಮಿಗಳು ಮರಳು ತುಂಬಿದ ಟ್ರಾಕ್ಟರ್‌ ಮತ್ತು ಟ್ರೈಲರ್‌ನ್ನು ರಸ್ತೆಯಲ್ಲಿಯೇ ನಿಲ್ಲಿಸಿ ಟ್ರಾಕ್ಟರ್‌ನಿಂದ ಇಳಿದು ಓಡಿ ಹೋಗಿ ತಪ್ಪಿಸಿಕೊಂಡಿರುತ್ತಾರೆ. ನಂತರ ಮರಳು ತುಂಬಿದ ಟ್ರಾಕ್ಟರ್‌ ಮತ್ತು ಟ್ರೈಲರ್‌ನ್ನು ಪರಿಶೀಲನೆ ಮಾಡಲಾಗಿ ಟ್ರಾಕ್ಟರ್‌ಗೆ   ಮತ್ತು ಟ್ರೈಲರ್‌ಗೆ ನೋಂದಣಿ ನಂಬರ್‌ ಇರುವುದಿಲ್ಲ. ಟ್ರಾಕ್ಟರ್‌ Mahindra 475 DI ಕಂಪನಿಯದಾಗಿದ್ದು  ಟ್ರಾಕ್ಟರ್‌ ಇಂಜಿನ್‌ ಸೀರಿಯಲ್ ನಂಬರ್‌ ZJJS00938 ಆಗಿರುತ್ತೆ.  ಟ್ರಾಕ್ಟರ್‌ಟ್ರೈಲರ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ಮರಳನ್ನು ತುಂಬಿರುತ್ತೆ. ಆರೋಪಿಗಳಾದ ಮಲ್ಲೇಶ ಬಿನ್ ಲೇಟ್‌ ಮಲ್ಲಯ್ಯ ಉರುಫ್‌ ಗದ್ದೇಕರಿಗೌಡ, ಮೇಲ್ಕಂಡ  ಟ್ರಾಕ್ಟರ್‌,ಟ್ರೈಲರ್‌ ಚಾಲಕ ಮತ್ತು ಮಾಲೀಕರು ಸೇರಿಕೊಂಡು ಅಕ್ರಮವಾಗಿ ಹಣ ಸಂಪಾದನೆ ಮಾಡುವ ಸಲುವಾಗಿ ಸರ್ಕಾರದಿಂದ ಯಾವುದೇ ಪರವಾನಗಿಯನ್ನು ಪಡೆಯದೇ, ತೊರೆಬೊಮ್ಮನಹಳ್ಳಿ ಗ್ರಾಮದ ಹತ್ತಿರ ಹರಿಯುವ ಶಿಂಷಾ ನದಿಯನ್ನು ಸರ್ಕಾರ ಸಂರಕ್ಷಿತ ವಲಯವೆಂದು ಘೋಷಣೆ ಮಾಡಿದ್ದರು ಸಹ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಶಿಂಷಾನದಿಯಲ್ಲಿ ನೈಸರ್ಗಿಕ ಖನಿಜ ಸಂಪತ್ತಾದ ಮರಳನ್ನು  ಕಳ್ಳತನದಿಂದ ತೆಗೆಸಿ ಟ್ರಾಕ್ಟರ್‌ ಟ್ರೈಲರ್‌ಗೆ ತುಂಬಿಕೊಂಡು  ಮಾರಾಟ ಮಾಡಲು ಸಾಗಾಣೆ ಮಾಡಿರುತ್ತಾರೆ.  ಆದ್ದರಿಂದ ಈ ಮೇಲ್ಕಂಡ  ಮೂರು ಜನರ  ಮೇಲೆ ಪ್ರಕರಣ ದಾಖಲಿಸುವಂತೆ ನೀಡಿದ ಮೇರೆಗೆ  ಪ್ರಕರಣ ದಾಖಲಿಸಿರುತ್ತೆ .

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ; 46/2017 ಕಲಂ; 504, 506, ಐಪಿಸಿ

ದಿನಾಂಕ-08-03-2017 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಪಿರ್ಯಾದಿ ಹರೀಶ್‌ ಬಿನ್‌ ಲೇಟ್‌ ಸಿ.ವಿ ವರದರಾಜು, 37 ವರ್ಷ, ಬಲಜಿಗ ಜನಾಂಗ, ಉಂಗ್ರ ಗ್ರಾಮ, ಅಮೃತೂರು ಹೋಬಳಿ, ಕುಣಿಗಲ್‌ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ-16-03-2017 ರಂದು ಇದೇ ಉಂಗ್ರ ಗ್ರಾಮದ ವಾಸಿಯಾದ ಅಂಬರೀಷ್‌ ಎಂಬುವವರ ವಿರುದ್ದ ಪ್ರಕರಣ ದಾಖಲಾಗಿದ್ದು ಇತ್ತೀಚಿನ ದಿನಗಳಲ್ಲಿ ಸದರಿ ಅಂಬರೀಷ್‌ ಎಂಬುವವನು ಜಾಮೀನನ್ನು ತೆಗೆದುಕೊಂಡು ಬಂದು ದಿನಾಂಕ-07-03-2017 ರಂದು ರಾತ್ರಿ 11-00 ಗಂಟೆಯ ಸಮಯದಲ್ಲಿ ಕಂಠಪೂರ್ತಿ ಮಧ್ಯಾಪಾನಮಾಡಿ ನಮ್ಮ ಮನೆಯ ಹತ್ತಿರ ಬಂದು ಈ ಹಿಂದೆ ದೂರು ನೀಡಿದ್ದ ವಿಚಾರವಾಗಿಯೇ ನನ್ನನ್ನು ಬಾಯಿಗೆ ಬಂದಂತೆ ಸೂಳೇ ಮಗನೆ, ಬೋಳಿ ಮಗನೆ ಎಂದು ಅವಾಚ್ಯಶಬ್ದಗಳಿಂದ ನಿಂಧಿಸಿದ್ದಲ್ಲದೆ ನನ್ನ ಮೇಲೆ ಕೇಸುದಾಖಲುಮಾಡಿ ಏನು ಕಿತ್ತುಕೊಂಡೆ, ನಾನು ಈಗ ಜಾಮೀನು ತೆಗೆದುಕೊಂಡು ಬಂದಿರುತ್ತೇನೆ. ಮುಂದಿನ ದಿನಗಳಲ್ಲಿ ನನ್ನ ತಂಟೆಗೆ ಬಂದರೆ ಯಾರನ್ನೂ ಬಿಡುವುದಿಲ್ಲ. ಕೊಲೆ ಮಾಡಿಯೇ ಜೈಲಿಗೆ ಹೋಗುತ್ತೇನೆ. ಎಂದು ಬೆದರಿಕೆ ಹಾಕಿದನು. ಈ ಹಿಂದೆ ಆತನ ಮೇಲೆ ಕೇಸು ದಾಖಲು ಮಾಡಿದ ಸಮಯದಲ್ಲಿ ನಮಗೆ ಸಹಾಯಮಾಡಿದ್ದ ಪಿ.ಕುಮಾರಸ್ವಾಮಿ ಬಿನ್‌ ಲೇಟ್‌ ಪುಟ್ಟಸ್ವಾಮಯ್ಯ, ಎನ್‌.ಸಾಗರ್‌ ಬಿನ್‌ ಪಿ.ನಾಗರಾಜು, ಲೊಕೇಶ್‌ ಬಿನ್‌ ಜಯರಾಮಯ್ಯ ಎಂಬುವವರ ಮೇಲೂ ಕೊಲೆ ಬೆದರಿಕೆ ಹಾಕಿರುತ್ತಾನೆ. ನಂತರ ಇದೇ ದಿನ ನಮ್ಮ ಅಣ್ಣ ಹೆಂಡತಿ ಲಕ್ಷ್ಮಮ್ಮ ರವರು ತಾಯಿ ಮಗ ಎತ್ತಿನ ಗಾಡಿಯಲ್ಲಿ ಬರುತ್ತಿರುವಾಗ್ಗೆ ಅವರನ್ನೂ ಬೈದು, ನಿಂದಿಸಿ ಕಳುಹಿಸಿರುತ್ತಾನೆ. ಆದುದ್ದರಿಂದ ಸದರಿ ಅಂಬರೀಷ್‌ ಎಂಬುವವನು ಹಳೇ ದ್ವೇಶದಿಂದ ಈ ಕೃತ್ಯವನ್ನು ಎಸಗಿದ್ದು ಈತನ ಮೇಲೆ ಸೂಕ್ತ ಕಾನೂನು ಕ್ರಮವನ್ನು ಕೈಗೊಂಡು, ನಮಗೆ ರಕ್ಷಣೆಯನ್ನು ಒದಗಿಸುವಂತೆ ನೀಡಿದ ಅರ್ಜಿಯನ್ನು ಸ್ವೀಕರಿಸಿ ಠಾಣಾ ದಿನಾಂಕ-08/03/2017 ರಂದು, ಎನ್‌.ಸಿ.ಆರ್‌ ನಂ; 49/2017 ರಲ್ಲಿ ಪ್ರಕರಣ ದಾಖಲಿಸಿ ನಂತರ ಈ ದೂರು ಅಸಂಜ್ಞೆಯ ದೂರು ಆಗಿದ್ದು ಆರೋಪಿತನ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಳ್ಳಲು ಅನುಮತಿಯನ್ನು ನೀಡಬೇಕೆಂದು ಘನ ನ್ಯಾಯಾಲಯದಲ್ಲಿ ದಿನಾಂಕ:09-03-2017 ಮನವಿಯನ್ನು ಮಾಡಿಕೊಂಡಿದ್ದು ಘನ ನ್ಯಾಯಾಲಯವು ಅನುಮತಿಯನ್ನು ನೀಡಿದ್ದು ದಿನಾಂಕ; 09-03-2017 ರಂದು 5-00 ಗಂಟೆಗೆ ಪ್ರಕರಣ ದಾಖಲು ಮಾಡಿರುತ್ತೆ

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ-33/2017 ಕಲಂ: 379 ಐ.ಪಿ.ಸಿ

ದಿನಾಂಕ: 09/03/2017 ರಂದು ಬೆಳಿಗ್ಗೆ 11-40 ಗಂಟೆಗೆ ಪಿರ್ಯಾದಿ ದಿವಾಕರ್ ಬಿನ್ ಲೇಟ್ ದಾಸಪ್ಪ, ಹೊಸಪಾಳ್ಯ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ: 02/03/2017 ರಂದು ರಾತ್ರಿ ಸುಮಾರು 09-00 ಗಂಟೆಯಲ್ಲಿ ನನ್ನ ಬಾಬ್ತು ಕೆ.ಎ-44 ಕ್ಯೂ- 1818 ನೇ ಟಿ.ವಿ.ಎಸ್ ಎಕ್ಸೆಲ್ ಹೆವಿಡ್ಯೂಟಿ ದ್ವಿಚಕ್ರ ವಾಹನವನ್ನು ನಮ್ಮ ಮನೆಯ ಮುಂದೆ ನಿಲ್ಲಿಸಿ ಊಟ ಮಾಡಿ ಮಲಗಿದ್ದು, ಮರುದಿನ ದಿನಾಂಕ: 03/03/2017 ರಂದು ಬೆಳಿಗ್ಗೆ 06-00 ಗಂಟೆಗೆ ಎದ್ದು ನೋಡಲಾಗಿ ಮನೆಯ ಮುಂದೆ ನಿಲ್ಲಿಸಿದ್ದ  ಟಿ.ವಿ.ಎಸ್ ಕಾಣಲಿಲ್ಲ. ನಂತರ ನಾನು ಮತ್ತು ನನ್ನ ಮಗ ಹಾಗೂ ಸ್ನೇಹಿತರು ಇದುವರೆವಿಗೂ ಎಲ್ಲಾ ಕಡೆ ಹುಡುಕಿದರೂ ಸಹ ಪತ್ತೆಯಾಗಿರುವುದಿಲ್ಲ. ಅದರ ಬೆಲೆ ಸುಮಾರು 25.000/- ರೂಗಳಾಗಿದ್ದು, ನನ್ನ ಟಿ.ವಿ.ಎಸ್ ನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳ್ಳತನವಾಗಿರುವ ನನ್ನ ಬಾಬ್ತು ಕೆ.ಎ-44 ಕ್ಯೂ- 1818 ನೇ ಟಿ.ವಿ.ಎಸ್ ಎಕ್ಸೆಲ್ ಹೆವಿಡ್ಯೂಟಿ ದ್ವಿಚಕ್ರ ವಾಹನವನ್ನು ಪತ್ತೆ ಮಾಡಿಕೊಡಿ ಎಂದು ಈ ದಿನ ತಡವಾಗಿ ಬಂದು ದೂರು ನೀಡಿದ್ದು, ಪ್ರಕರಣ ದಾಖಲಿಸಿರುತ್ತೆ.


Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 74 guests online
Content View Hits : 212378