lowborn Tumakuru District Police | Tumkur Police | Karnataka Police | Tumakuru District Police | Tumkur Police | Karnataka Police

Dr. Divya V. Gopinath IPS,
Superintendent of Police,
Tumakuru Dt., Karnataka.

Message from SP

ಪತ್ರಿಕಾ ಪ್ರಕಟಣೆ ದಿನಾಂಕ:19-11-2017. ಅಕ್ರಮವಾಗಿ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದ... >> ಪತ್ರಿಕಾ ಪ್ರಕಟಣೆ ದಿನಾಂಕ:17-11-2017. ಮೂರು ಜನ ಅಂತರ ರಾಜ್ಯ ಕಳ್ಳರ ಬಂಧನ : 8 ಲಕ್ಷದ 50 ಸಾವಿರ... >> ದಿನಾಂಕ.17.11.2017. ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲೆ ಕಳ್ಳಂಬೆಳ್ಳ ಪೊಲೀಸ್... >> ಪತ್ರಿಕಾ ಪ್ರಕಟಣೆ. ದಿನಾಂಕ:16-11-2017 ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 261 /2017... >> ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಪತ್ರಿಕಾ ಪ್ರಕಟಣೆ. ದಿನಾಂಕ : 07/11/2017 ದಿನಾಂಕ:05-11-2017... >> ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಪತ್ರಿಕಾ ಪ್ರಕಟಣೆ. ದಿನಾಂಕ : 07/11/2017 ದಿನಾಂಕ :... >>   Date: 03-11-2017       ದಿನಾಂಕ : 03-11-2017 ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪತ್ತೆಯಾದ ಎರಡು... >>   ಪತ್ರಿಕಾ ಪ್ರಕಟಣೆ. DATE: 02-11-17 ವೃದ್ದೆಯರಿಂದ ಚಿನ್ನದ ಸರವನ್ನು ಕಳವು ಮಾಡಿದ ಆರೋಪಿ... >> ಪತ್ರಿಕಾ ಪ್ರಕಟಣೆ ದಿನಾಂಕ: 30/10/2017 ದಿನಾಂಕ/30/10/17 ರಂದು ತುಮಕೂರು ಜಿಲ್ಲಾ ಪೊಲೀಸ್ ಇಲಾಖಾ... >> ಪತ್ರಿಕಾ ಪ್ರಕಟಣೆ ದಿನಾಂಕ : 25/10/2017 ತುಮಕೂರು ನಗರದಲ್ಲಿ ಕೆ.ಎಸ್.ಅರ್.ಟಿ.ಸಿ.... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Report Archive

< March 2017 >
Mo Tu We Th Fr Sa Su
    1 2 3 4 5
6 7 8 10 11 12
13 14 15 16 17 18 19
20 21 22 23 24 25 26
27 28 29 30 31    
Thursday, 09 March 2017
Crime Incidents 09-03-17

 

ಕುಣಿಗಲ್ ಪೊಲೀಸ್ ಠಾಣಾ ಮೊ.ನಂ;110/2017, ಕಲಂ; 363.302 ರೆ/ವಿತ್ 34  ಐಪಿಸಿ

ದಿನಾಂಕ;08/0/3017 ರಂದು ಬೆಳಿಗ್ಗೆ 10-30 ಗಂಟೆಗೆ ಈಕೇಸಿನ ಪಿರ್ಯಾದಿ ಲಕ್ಕಮ್ಮರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನಂಶವೇನೆಂದರೆ ದಿನಾಂಕ;06/03/2017 ರಂದು ರಾತ್ರಿ ಸುಮಾರು 1-00 ಗಂಟೆ ಸಮಯದಲ್ಲಿ ಪಿರ್ಯಾದಿ ಗ್ರಾಮದವರಾದ ಗುಜ್ಜೇನಹಳ್ಳಿ ಬೋರಯ್ಯನ ಮಗ ಕುಮಾರ್ ಮತ್ತು ನಮ್ಮ ಗ್ರಾಮದ ಅಂಜಿ ಎಂಬುವವರು ನಮ್ಮ ಮನೆ ಬಳಿ ಕಾರಿನಲ್ಲಿ ಬಂದು ಪಿರ್ಯಾದಿಗೆ ನಿನ್ನ ಮಗನಾದ ಶಿವರಾಮ, ಎಂಬುವವನು ನಮ್ಮ ತಾಯಿಯಾದ ಜಯಮ್ಮ ಕೋಂ ಬೋರಯ್ಯ  ಎಂಬುವವರು ಸುಮಾರು 35.000/- ರೂಗಳನ್ನು ಕೊಟ್ಟು ಕಣಿವೆಪಾಳ್ಯದವರಿಗೆ ಕೊಟ್ಟು ಕಳುಹಿಸಿದ್ದು, ಆದರೆ ನಿಮ್ಮ ಮಗನು  ಇಸ್ಪೀಟ್ ಆಟವಾಡಿ ಸುಮಾರು 24.000/- ರೂಗಳನ್ನು ಕಳೆದಿದ್ದು, 9000/- ರೂಗಳನ್ನು ಪಡೆದುಕೊಂಡಿದ್ದೇವೆ, ಉಳಿದ 21.000/- ರೂ ಸಾವಿರ ರೂಗಳನ್ನು ಕೊಡು ಇಲ್ಲವಾದರೆ ನಿನ್ನ ಮಗನ ಕಿಡ್ನಿ ಮಾರಿ ಬೀಡುತ್ತೇವೆಂದು ಹೇಳಿದರು, ಆ ಸಮಯದಲ್ಲಿ ಪಿರ್ಯಾದಿ  ಮಗ ಬಿಳಿ ಬಣ್ಣದ ಕಾರಿನ್ಲಲಿ ಇದ್ದನ್ನು ಅದಕ್ಕೆ ಪಿರ್ಯಾದಿಯು  ಉಳಿದ 21.000/- ರೂಗಳನ್ನು ಕೊಡುತ್ತೇನೆ, ನನ್ನ ಮಗನನ್ನು ಬಿಟ್ಟು ಬಿಡಿ ಎಂದು ಉಳಿದ 21.000/- ರೂ ಗಳನ್ನು ಪಿರ್ಯಾದಿಯು ಅವರಿಗೆ ಕೊಟ್ಟು ನನ್ನ ಮಗನನ್ನು ಕಾರಿನಿಂದ ಕೆಳಕ್ಕೆ ಇಳಿಸಿ ಎಂದು ಕೇಳಿ ಕೊಂಡಾಗ ,  ಪಿರ್ಯಾದಿ ಗ್ರಾಮದವನೇ ಆದ ಗುಜ್ಜೇನಹಳ್ಳೀ ಬೋರಲಿಂಗಯ್ಯನವರ ಮಗ ಕುಮಾರ್  ನಿಮ್ಮ ಮಗನಿಗೆ ಸ್ವಲ್ಪ ಏಟಾಗಿದೆ ಆಸ್ಪತ್ರೆಗೆ ತೋರಿಸಿ ಕಳುಹಿಸುತ್ತೇವೆಂದು ಕಾರಿನಲ್ಲಿ ಅಪಹರಣ ಮಾಡಿಕೊಂಡು ಹೊರಟು ಹೋದರು, ಆದರೆ ದಿನಾಂಕ;07/03/2017 ರಂದು ಮದ್ಯಾಹ್ನ 1-00 ಗಂಟೆ ಸಮಯದಲ್ಲಿ ಪಿರ್ಯಾದಿ ಪಕ್ಕದ ಮನೆಯ ಬೋರೇಗೌಡನ ಮಗಳು ಆಶಾ ಎಂಬುವವರಿಗೆ ಪೋನ್ ಮಾಡಿ ನಿಮ್ಮ ಮಗನಿಗೆ ಸಿರಿಯಸ್ ಆಗಿದೆ ಆದಷ್ಟು ಬೇಗ ಸುಂಕದಕಟ್ಟೆ ಆಸ್ಪತ್ರೆಗೆ ಬನ್ನಿ, ಅಥವಾ ಸುಂಕದಕಟ್ಟೆ ಬನ್ನಿ ನಾನು ಕರೆದುಕೊಂಡು ಹೋಗುತ್ತೇನೆ, ಅಂದ ಸದರಿ ಕುಮಾರನ  ಅಕ್ಕನಾದ ಬೆಂಗಳೂರು ವಾಸಿ ಶಿವಮ್ಮ ಎಂಬುವವಳು ಪೋನ್ ಮಾಡಿದ್ದಳು  ಪಿರ್ಯಾದಿಗೆ ಬೆಂಗಳೂರು ವಿಳಾಸ ತಿಳಿಯುವುದಿಲ್ಲ ಆಗಾಗಿ ನಾನು ಬರುವುದಿಲ್ಲವೆಂದು ಹೇಳಿದಾಗ ಅದಾದ ನಂತರ ಸುಮಾರು 2-00 ಗಂಟೆ ಸಮಯದಲ್ಲಿ ಕುಮಾರನ ಇನ್ನೊಬ್ಬ ಅಕ್ಕಳಾದ ಬೆಂಗಳೂರು ವಾಸಿ ನಾಗಮ್ಮ ಎಂಬುವವರು ಸದರಿ ಪಕ್ಕದ ಮನೆಗೆ  ಪೋನ್ ಮಾಡಿ ನಿಮ್ಮ ಮಗ ಸತ್ತು ಹೋಗಿದ್ದಾನೆಂತ ಪೋನ್ ಮಾಡಿದ್ದಾಳೆ  ನಂತರ ಪಿರ್ಯಾದಿಯ 2 ನೇ ಮಗನಾದ ಗಂಗಾಧರ ಎಂಬುವವನಿಗೆ ಪೋನ್ ಮಾಡಿ ಹೋಗಿ ನೋಡಿಕೊಂಡು ಬರುವಂತೆ ಪಿರ್ಯಾದಿ ಹೇಳಲಾಗಿ ಪಿರ್ಯಾದಿ ಮಗನು ಹೋಗಿನೋಡಲಾಗಿ ಶಿವರಾಮನು ಸತ್ತು ಹೋಗಿದ್ದಾನೆಂದು ತಿಳಿಸಿರುತ್ತಾನೆ, ಪಿರ್ಯಾದಿಯ ಮಗನ ಸಾವಿನ ವಿಚಾರವನ್ನು ಪಿರ್ಯಾದಿ ತಮ್ಮ ಸಂಬಂಧಿಕರಿಗೆ ತಿಳಿಸಿ ದಿನಾಂಕ;08/03/2017 ರಂದು ಕುಣಿಗಲ್  ಪೊಲೀಸ್ ಠಾಣೆಗೆ ಬಂದು ತನ್ನ ಮಗನನ್ನು ಅಪಹರಣ ಮಾಡಿಕೊಲೆ ಮಾಡಿರುವ ಗುಜ್ಜೇನಹಳ್ಳಿ ಬೋರಯ್ಯನ ಮಗ ಕುಮಾರ, ಅಂಜಿ ಮತ್ತು ಇತರೆ ಇಬ್ಬರ ಮೇಲೆ ಕಾನೂನು ಕ್ರಮ ಜರುಗಿಸಬೇಕಂತ ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತೆ

ಕಳ್ಳಂಬೆಳ್ಳ ಪೊಲೀಸ್ ಠಾಣಾ ಮೊ.ನಂ.56/2017 ಕಲಂ: 419, 420, 465, 468, 471 r/w 149 IPC

ದಿನಾಂಕ: 08/03/2017 ರಂದು ಸಂಜೆ 4-30 ಗಂಟೆಯಲ್ಲಿ ಪಿರ್ಯಾದಿ ಶಿವಣ್ಣ ಬಿನ್ ದೊಡ್ಡನಾಗಯ್ಯ, 52 ವರ್ಷ, ಗೊಲ್ಲರ ಜನಾಂಗ, ಹೆತ್ತಪ್ಪನಹಟ್ಟಿ ಗ್ರಾಮ, ಕಳ್ಳಂಬೆಳ್ಳ ಹೋಬಳಿ. ಸಿರಾ ತಾಲ್ಲೂಕ್  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ಸಿರಾ ತಾಲ್ಲೂಕ್, ಕಳ್ಳಂಬೆಳ್ಳ ಹೋಬಳಿ, ಸೀಬಿ ಗ್ರಾಮಕ್ಕೆ ಸೇರಿದ ರಿ.ಸ.ನಂ. 137/1 ರ ವಿಸ್ತೀರ್ಣ 8-02 ಗುಂಟೆ, ಒಟ್ಟು ವಿಸ್ತೀರ್ಣ 9-07 ಗುಂಟೆ ಜಮೀನು ಮೂಲತಃ ನಮ್ಮ ಮೃತ ತಾತ ಮುದ್ದಯ್ಯ ಬಿನ್ ಬುಡ್ಡನಾಗಪ್ಪನವರಿಗೆ ಸೇರಿದ್ದು, ನನ್ನ ತಾತನ ಹೆಸರು ಮೇಲ್ಕಂಡ ರಿ.ಸ.ನಂ. ಪಹಣೆ ಕಾಲಂ: 12(2) ರಲ್ಲಿ ನಮೂದಾಗಿರುತ್ತದೆ.  ನನ್ನ ಮೃತ ತಾತ ಮತ್ತು ನನ್ನ ಮೃತ ತಂದೆ ದೊಡ್ಡನಾಗಪ್ಪ ನವರು ಅವರುಗಳ ಜೀವಿತಾವದಿಯಲ್ಲಿ ಮೇಲ್ಕಂಡ ಜಮೀನನ್ನು ಅನುಭವಿಸಿಕೊಂಡು ಬಂದಿರುತ್ತಾರೆ.  ಈ ಮೇಲ್ಕಂಡ ರಿ.ಸ.ನಂ ಮತ್ತು ಇತರ ಸ್ವತ್ತುಗಳಿಗೆ ಸಂಬಂದಿಸಿದಂತೆ ನಮ್ಮ ಮತ್ತು ಕಾಳಯ್ಯ, ಮುದ್ದಯ್ಯ,  ನಾಗಯ್ಯ ಬಿನ್ ಹಾವಿನ ಮುದ್ದಯ್ಯ ನವರ ಮದ್ಯೆ ಶಿರಾ ಘನ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದಲ್ಲಿ ಮೂಲವಾದ 132/2015 ರಂತೆ ವಿಭಾಗಕ್ಕಾಗಿ ದಾವೆ ವಿಚಾರಣೆಯ ಹಂತದಲ್ಲಿರುತ್ತದೆ. ತುಮಕೂರು ಜಿಲ್ಲೆ ತುಮಕೂರು ತಾಲ್ಲೂಕ್, ಕಸಬಾ ಹೋಬಳಿ, ಕೋಟ್ಲಹಳ್ಳಿ ಗ್ರಾಮದ ವಾಸಿಯಾದ ಸುಮಾರು 62 ವರ್ಷ ವಯಸ್ಸಿನ ಮುದ್ದಯ್ಯ ಬಿನ್  ಬುಡ್ಡನಾಗಪ್ಪ ಎನ್ನುವವರು ನಮ್ಮ ಕುಟುಂಬಕ್ಕಾಗಲಿ, ಮೇಲ್ಕಂಡ ರಿ.ಸ.ನಂ. 137/1 ರ ಜಮೀನಿಗಾಗಲಿ ಯಾವುದೇ ರೀತಿಯ ಹಕ್ಕು, ಅಧಿಕಾರ ಮತ್ತು ಸ್ವಾಧೀನ ಇಲ್ಲದಿದ್ದರು ಕೆಲವೊಂದು ದಾಖಲೆಗಳನ್ನು ಸೃಷ್ಟಿಸಿಕೊಂಡು ಮೇಲ್ಕಂಡ ರಿ.ಸ.ನಂ. 137/1 ರ ಮೂಲ ಮಾಲೀಕನಾದ ನಮ್ಮ ತಾತನ ಹೆಸರು ಹಾಗೂ ಇವರ ಹೆಸರು ಒಂದೇ ಇರುವುದನ್ನು ದುರುಪಯೋಗಪಡಿಸಿಕೊಂಡು ನಾಟಕೀಯವಾಗಿ ( Impresonate ) ಸಿರಾ ಉಪ-ನೊಂದಣಾಧಿಕಾರಿಗಳ ಕಛೇರಿಯಲ್ಲಿ ದಿ: 24-12-2016 ರಂದು ನಾನೇ ಸದರಿ ಸ.ನಂ. ಮೂಲ ಮಾಲೀಕನೆಂದು ಬಿಂಬಿಸಿ ತುಮಕುರು ಜಿಲ್ಲೆ, ತುಮಕೂರು ಟೌನ್, ಸದಾಶಿವನಗರ ಕಾವೇರಿ ಗ್ರಾಮೀಣ ಬ್ಯಾಂಕ್ ನ ಹತ್ತಿರ ವಾಸವಿರುವ ಹೀನಾ ಕೌಸರ್ ( ಪಾನ.ನಂ. AKRPHO181J ) ಕೋಂ ಸಯ್ಯದ್ ಅಪ್ಸರ್ ಆಲಿ ರವರಿಗೆ ಕಾನೂನು ಬಾಹಿರವಾಗಿ ಮೇಲ್ಕಂಡ ಸೃಷ್ಟಿತ ಕ್ರಯಪತ್ರಕ್ಕೆ ಸಾಕ್ಷಿ ಹಾಕಿರುವ ಶೌಕತ್ ಆಲಿ ಬಿನ್ ಬಿ.ಆರ್.ಅಬ್ದುಲ್ ಖಲೀಲ್, ಸದಾಶಿವನಗರ, ತುಮಕೂರು ಮತ್ತು ಶಶಿಧರ್ ಬಿನ್ ನಾಗರಾಜು, ಗೋಕುಲ ಬಡಾವಣೆ, ತುಮಕೂರು ಮತ್ತು ಪತ್ರಬರಹಗಾರರಾದ ಬಿ.ದೊಡ್ಡಮಲ್ಲಯ್ಯ, ವಕೀಲರು ಮತ್ತು ನೋಟರಿ, ಸಿರಾ ಮತ್ತು ಇತರರೊಂದಿಗೆ ಶಾಮೀಲಾಗಿ ಮೇಲ್ಕಂಡ ದಿನಾಂಕ: 24-12-2016 ರಲ್ಲಿ ಕ್ರಯಪಪತ್ರವನ್ನು ಸೃಷ್ಟಿಸಿಕೊಂಡಿರುತ್ತಾರೆ.  ನಮ್ಮ ತಾತ ಮುದ್ದಯ್ಯ ಬಿನ್ ಬುಡ್ಡನಾಗಪ್ಪ ನವರು ದಿ: 16-02-1973 ರಂದು ಮೃತರಾಗಿರುತ್ತಾರೆ. ಮೂಲ ಖಾತೆದಾರರು ಮೃತರಾದಾಗ್ಯೂ ಖರೀದಿದಾರರು ಮತ್ತು ಮಾರಾಟಗಾರರು, ಸಾಕ್ಷಿದಾರರು ಬಿಕ್ಕಂಲದಾರರು ಇತರೆಯವರು ಪರಸ್ಪರ ಶರೀಖಾಗಿ ನಮಗೆ ಮೋಸ ಮತ್ತು ವಂಚೆನೆಮಾಡುವ ದುರುದ್ದೇಶದಿಂದ ಮಾರಾಟಗಾರರಿಗೆ ಮೇಲ್ಕಂಡ ಸ.ನಂ ನಲ್ಲಿ ಯಾವುದೇ ರೀತಿಯ ಹಕ್ಕು ಅಧಿಕಾರ ಸ್ವಾದೀನ ಇಲ್ಲದಿದ್ದರು ಸಹ ಕಾನೂನುಬಾಹಿರವಾಗಿ ಪತ್ರ ಸೃಷ್ಷಿಮಾಡಿಕೊಂಡಿರುತ್ತಾರೆ.  ನಾನು ಕಳ್ಳಂಬೆಳ್ಳ ವೃತ್ತ ನಿರೀಕ್ಷಕರ ಕಛೇರಿಗೆ ಕೆಲಸದ ನಿಮಿತ್ತ ಭೇಟಿ ನೀಡಿದಾಗ ಮೇಲ್ಕಂಡ ವಿಚಾರವು ನನ್ನ ಗಮನಕ್ಕೆ ಬಂದಿದ್ದು ತಕ್ಷಣ ಸಿರಾ ಉಪ ನೊಂದಣಾಧಿಕಾರಿಗಳ ಕಛೇರಿಗೆ ಭೇಟಿ ನೀಡಿ ಮೇಲ್ಕಂಡ ಕ್ರಯಪತ್ರದ ದೃಢೀಕೃತ ನಕಲನ್ನು ಪಡೆದುಕೊಂಡಾಗ ನನಗೆ ಈ ವಿಷಯ ತಿಳಿದುಬಂದು ನನ್ನ ಆಸ್ತಿಯನ್ನು ಬೇರೊಂದು ಊರಿನ ಮೇಲೆ ಹೇಳಿದ ವ್ಯಕ್ತಿ ಕಾನೂನು ಬಾಹಿರವಾಗಿ ಸೃಷ್ಟಿಸಿಕೊಂಡಿರುವ ವಿಚಾರ ದೃಡಪಟ್ಟಿರುತ್ತದೆ.  ಆದ್ದರಿಂದ ಕಾನೂನು ಬಾಹಿರವಾಗಿ ಮಾರಾಟಮಾಡಿರುವ ಮೇಲ್ಕಂಡ ಮುದ್ದಯ್ಯ ಬಿನ್ ಬುಡ್ಡನಾಗಪ್ಪ, ಇವರ ಜೋತೆಗೂಡಿ ಸಂಚು ರೂಪಿಸಿರುವ ಇತರರ ಮೇಲೆ ತನಿಖೆ ಮಾಡಿ ಆರೋಪಿತರನ್ನು ಪತ್ತೆಮಾಡಿ ಸದರಿ ಖರೀದಿದಾರರು, ಸಾಕ್ಷಿದಾರರು ಮತ್ತು ಬಿಕ್ಕಲಂದಾರರ ವಿರುದ್ದ ಕೇಸು ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಿ ನನಗೆ ನ್ಯಾಯ ದೊರಕಿಸಿಕೊಡಬೇಕೆಂದು ನೀಡಿದ ಪಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಜಯನಗರ ಪೊಲೀಸ್ ಠಾಣಾ ಮೊ.ನಂ. 36/2017 ಕಲಂ 454, 457, 380 ಐಪಿಸಿ

ದಿನಾಂಕ: 08/03/2017 ರಂದು ಮಧ್ಯಾಹ್ನ 12-45 ಗಂಟೆ ಸಮಯದಲ್ಲಿ, ಮಂಜುನಾಥನಗರ, 4ನೇ ಕ್ರಾಸ್ ವಾಸಿ ಪಿರ್ಯಾದಿ ಕೃಷ್ಣ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ದಿನಾಂಕ:06/03/2017 ರಂದು ಸಂಜೆ ಸುಮಾರು 6-30 ಗಂಟೆಯಲ್ಲಿ ಕುಟುಂಬ ಸಮೇತ ಸ್ವಂತ ಊರಾದ ಊರ್ಡಿಗೆರೆ ಹೋಬಳಿ ಕದರನಹಳ್ಳಿ ಗೊಲ್ಲರಹಟ್ಟಿಗೆ ಹೋಗಲು ತುಮಕೂರು ಮಂಜುನಾಥನಗರ 4ನೇ ಕ್ರಾಸ್‌ನಲ್ಲಿ ವಾಸವಿದ್ದ ಮನೆಗೆ ಬೀಗವನ್ನು ಹಾಕಿಕೊಂಡು ಹೋಗಿದ್ದು, ಊರಿನಲ್ಲಿಯೇ ಉಳಿದುಕೊಂಡು ಈ ದಿನ ದಿನಾಂಕ:08/03/2017 ರಂದು ಬೆಳಿಗ್ಗೆ ಸುಮಾರು 10-00 ಗಂಟೆಗೆ ಮನೆಗೆ ವಾಪಸ್ ಬಂದು ನೋಡಲಾಗಿ ಮನೆಯ ಬೀಗ ಚಿಲಕದ ಸಮೇತ ಕಿತ್ತು ಹಾಕಿದ್ದು, ಬಾಗಿಲು ತೆರೆದಿತ್ತು. ಒಳಗೆ ಹೋಗಿ ನೋಡಲಾಗಿ ಹಾಲ್‌ನಲ್ಲಿದ್ದ ಬೀರುವಿನ ಬಾಗಿಲು ಸಹ ತೆರೆದಿತ್ತು. ಅದರೊಳಗೆ ಲಾಕರ್‌ ಸಹ ಓಪನ್ ಆಗಿದ್ದು ಅದರಲ್ಲಿಟ್ಟಿದ್ದ 1) ಸುಮಾರು 5 ಗ್ರಾಂನ ಚಿನ್ನದ ಒಂದು ಜೊತೆ ಸಾದ ಓಲೆ, ಬೆಲೆ ಸುಮಾರು 5000/- ರೂ 2) ಸುಮಾರು 15 ಗ್ರಾಂನ ರೋಪ್ ಡಿಸೈನ್‌ನ ಒಂದು ಚಿನ್ನದ ಸರ, ಬೆಲೆ ಸುಮಾರು 16,000/- ಮತ್ತು 3) ಸುಮಾರು 3 ಗ್ರಾಂನ ಮಕ್ಕಳ 3 ಚಿನ್ನದ ಉಂಗುರಗಳು, ಬೆಲೆ ಸುಮಾರು 2000/- ರೂ  4) ಸುಮಾರು 50 ಗ್ರಾಂ ತೂಕದ ಒಂದು ಜೊತೆ ಬೆಳ್ಳಿಯ ಕಾಲು ಚೈನು ಬೆಲೆ ಸುಮಾರು 800/-ರೂ 5) ಸುಮಾರು 30 ಗ್ರಾಂನ 2 ದೊಡ್ಡ ಬೆಳ್ಳಿಯ ಕೈ ಕಡಗ, ಬೆಲೆ ಸುಮಾರು 500/-ರೂ 6) ಸುಮಾರು 15 ಗ್ರಾಂನ ಒಂದು ಚಿಕ್ಕ ಬೆಳ್ಳಿಯ ಕೈ ಕಡಗ, ಬೆಲೆ ಸುಮಾರು 200/-ರೂ ಇವುಗಳು ಕಳ್ಳತನವಾಗಿರುವುದು ಕಂಡು ಬಂತು. ಈ ಎಲ್ಲಾ ಒಡವೆಗಳು ಹಳೆಯ ಒಡವೆಗಳಾಗಿದ್ದು ಬೆಲೆ ಸುಮಾರು 24,500/-ರೂ ಗಳಾಗಿರುತ್ತೆ. ಇವುಗಳನ್ನು ಯಾರೋ ಕಳ್ಳರು ನಾವು ಮನೆಯಲ್ಲಿ ಇಲ್ಲದ ವೇಳೆಯಲ್ಲಿ ಯಾವಾಗಲೋ ಮನೆಯ ಬೀಗದ ಚಿಲಕವನ್ನು ಕಿತ್ತು ಹಾಕಿ ಒಳಗೆ ಪ್ರವೇಶಿಸಿ ಬೀರುವಿನ ಮೇಲೆ ಉಪಯೋಗಿಸಿ ಇಟ್ಟಿದ್ದ ಕೀಗಳ ಸಹಾಯದಿಂದ ಬೀರುವಿನ ಬಾಗಿಲನ್ನು ಹಾಗೂ ಲಾಕರ್ ನ್ನು ತೆರೆದು ಲಾಕರ್‌ನಲ್ಲಿಟ್ಟಿದ್ದ ಚಿನ್ನ ಮತ್ತು ಬೆಳ್ಳಿಯ ಒಡವೆಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಆದ್ದರಿಂದ ತಾವು ಸ್ಥಳಕ್ಕೆ ಬಂದು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ಕೋರುತ್ತೇನೆ ಎಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ-32/2017 ಕಲಂ: 392 ಐ.ಪಿ.ಸಿ

ದಿನಾಂಕ: 08/02/2017 ರಂದು ಮಧ್ಯಾಹ್ನ 12-50 ಗಂಟೆಗೆ ಪಿರ್ಯಾದಿ ಜಿ.ಆರ್ ಸುಶೀಲ ಕೋಂ ಮರುಳಸಿದ್ದಪ್ಪ ರಾಘವೇಂದ್ರ ಕಾಲೋನಿ, ವಿನಾಯಕನಗರ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ದಿನಾಂಕ: 04/03/2017 ರಂದು ತಿಪಟೂರು ನಗರದ ಎಸ್.ಬಿ.ಐ, ಖಾತೆಯಿಂದ 26000/- ರೂ ಹಾಗೂ ವಿಜಯಾ ಬ್ಯಾಂಕ್ ಖಾತೆಯಿಂದ 22000/- ರೂ ಗಳನ್ನು ಡ್ರಾ ಮಾಡಿಕೊಂಡು, ಹಣವನ್ನು ನನ್ನ ಪರ್ಸ್ ನಲ್ಲಿ ಹಾಕಿಕೊಂಡು ಮಧ್ಯಾಹ್ನ 03-45 ಗಂಟೆಯ ಸಮಯದಲ್ಲಿ ಮನೆಗೆ ಹೋಗಲು ಗುರುಲೀಲಾ ಕಲ್ಯಾಣ ಮಂಟಪ - ಇಂದಿರಾನಗರದ ರಸ್ತೆಯಲ್ಲಿ, ಗುರುಮುಖ ನಿವಾಸದ ಬಳಿ ಹೋಗುತ್ತಿರುವಾಗ ನನ್ನ ಬೆನ್ನಿನ ಬಳಿ ತುರಿಕೆಯಾಗಿ ಬೆನ್ನನ್ನು ತುರಿಸಿಕೊಳ್ಳುತ್ತಾ ಹೋಗುತ್ತಿರುವಾಗ ಹಿಂಭಾಗದಿಂದ ದ್ವಿಚಕ್ರ ವಾಹನದಲ್ಲಿ ಇಬ್ಬರು ಅಪರಿಚಿತ ಅಸಾಮಿಗಳ ಪೈಕಿ ಒಬ್ಬ ಅಸಾಮಿ ಬೈಕನ್ನು ದೂರದಲ್ಲಿ ನಿಲ್ಲಿಸಿಕೊಂಡಿದ್ದು, ಮೊತ್ತೊಬ್ಬ ನನ್ನ ಹಿಂದಿನಿಂದ ನಡೆದುಕೊಂಡು ಬಂದು ನನ್ನ ಎಡ ಕಂಕುಳದಲ್ಲಿ ಇದ್ದ ಪರ್ಸ್ ನ್ನು ಕಿತ್ತುಕೊಂಡು ಓಡಿಹೋಗಿ ಬೈಕ್ ನಿಲ್ಲಿಸಿಕೊಂಡು ನಿಂತಿದ್ದ ಅಸಾಮಿಯ ಬೈಕಿಗೆ ಹತ್ತಿಕೊಂಡು ಬಿ,ಹೆಚ್ ರಸ್ತೆಯ ಕಡೆಗೆ ಹೋಗಿ ಪರಾರಿಯಾಗಿರುತ್ತಾರೆ. ಸದರಿ ಅಸಾಮಿಗಳು 28 ರಿಂದ 30 ವರ್ಷ ವಯಸ್ಸಿನವರಾಗಿದ್ದು, ನಂತರ ಗಾಬರಿಯಿಂದ ನಾನು ಮನೆಗೆ ಹೋಗಿ ಈ ವಿಚಾರವನ್ನು ಮನೆಯವರಿಗೆ ತಿಳಿಸಿ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ಹಣವಿರುವ ನನ್ನ ಪರ್ಸ್ ನ್ನು ಕಿತ್ತುಕೊಂಡು ಹೋಗಿರುವ ಅಸಾಮಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಪಾವಗಡ ಪೊಲೀಸ್ ಠಾಣಾ ಮೊ,ನಂ 44/2017 ಕಲಂ 279,304(A) IPC & 134(a)(b) IMV Act.

ದಿನಾಂಕ:08/03/2017 ರಂದು ಬೆಳಿಗ್ಗೆ 10-15 ಗಂಟೆಗೆ ಪಿರ್ಯಾದುದಾರರಾದ ಪಾವಗಡ ತಾಲ್ಲೂಕ್, ಮೀನಕುಂಟನಹಳ್ಳಿ ವಾಸಿ ಪಿರ್ಯಾದುದಾರರಾದ ಮುತ್ಯಾಲಪ್ಪ ಬಿನ್ ಗೋಪಾಲಪ್ಪರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ:07/03/2017 ರಂದು ಸಂಜೆ ನಮ್ಮ ತಂದೆ ಗೋಪಾಲಪ್ಪನವರು ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಪಾವಗಡ ಟೌನ್ ಗೆ ಬಂದು ಕೆಲಸ ಮುಗಿಸಿಕೊಂಡು ವಾಪಾಸ್ ನಮ್ಮೂರಿಗೆ ಬರಲು KA05-V-6745 ನೇ ಮೋಟಾರ್ ಸೈಕಲ್ ನಲ್ಲಿ ಕೆಂಚಗಾನಹಳ್ಳಿ-ಬುಡ್ಡಾರೆಡ್ಡಿಹಳ್ಳಿ ಮಧ್ಯೆ ಲಕ್ಷ್ಮೀನಾರಾಯಣಪ್ಪರವರ ಜಮೀನಿನ ಬಳಿ ರಸ್ತೆಯಲ್ಲಿ ಬರುತ್ತಿದ್ದಾಗ ಎದುರುಗಡೆಯಿಂದ ಬಂದ KA64-K-4082 ದ್ವಿಚಕ್ರ ವಾಹನದ ಸವಾರನು ತನ್ನ ಬೈಕ್ ನ್ನು ಅತಿವೇಗವಾಗಿ ಓಡಿಸಿಕೊಂಡು ಬಂದು ನಮ್ಮ ತಂದೆ ಓಡಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆಸಿ ಅಪಘಾತಡಿಸಿದ್ದರಿಂದ ನಮ್ಮ ತಂದೆ ಬೈಕ್ ಸಮೇತ ಕೆಳಕ್ಕೆ ಬಿದ್ದು, ಬಲಗಾಲಿಗೆ ತುಂಬಾ ಪೆಟ್ಟು ಬಿದ್ದು ರಕ್ತಗಾಯವಾಗಿರುತ್ತೆ. ಮೈ,ಕೈಗೂ ಸಹ ಪೆಟ್ಟುಗಳಾಗಿರುತ್ತೆ. ಅದೇ ರಸ್ತೆಯಲ್ಲಿ ಬರುತ್ತಿದ್ದ ಬುಡ್ಡಾರೆಡ್ಡಿಹಳ್ಳಿಯ ವಾಸಿಯಾದ ವೆಂಕಟಸ್ವಾಮಿ ಬಿನ್ ಮುಸಲಪ್ಪ ಎಂಬುವರು ನಮ್ಮ ತಂದೆಗೆ ಉಪಚರಿಸಿ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದು, ನಾವು ಸ್ಥಳಕ್ಕೆ ಹೋಗಿ ಆಂಬುಲೆನ್ಸ್ ಕರೆಸಿಕೊಂಡು ಪಾವಗಡ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದು, ನಂತರ ವೈಧ್ಯಾಧಿಕಾರಿಗಳು ತುಮಕೂರು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು ನಾವು ನಮ್ಮ ತಂದೆಯನ್ನು ಹೇಮಾವತಿ ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ಕೊಡಿಸುತ್ತಿರುವಾಗ ಚಿಕಿತ್ಸೆ ಫಲಕಾರಿಯಾಗದೇ ನಮ್ಮ ತಂದೆಯವರು ಅದೇ ದಿನ ದಿ:07/03/2017 ರಾತ್ರಿ 10-50 ಗಂಟೆಯಲ್ಲಿ ಮೃತಪಟ್ಟಿರುತ್ತಾರೆ. ಈಗ ನಮ್ಮ ತಂದೆಯ ಮೃತದೇಹ ಪಾವಗಡ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿರುತ್ತೆ. ಈ ಅಪಘಾತಪಡಿಸಿ ನಮ್ಮ ತಂದೆಯ ಸಾವಿಗೆ ಕಾರಣರಾದ ಮೇಲ್ಕಂಡ KA64-K-4082 ಬೈಕ್ ಸವಾರನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 44/2017 ಕಲಂ 279.337 ಐಪಿಸಿ ರೆ/ವಿ 134(ಎ&ಬಿ), 187 ಐಎಂವಿ

ದಿನಾಂಕ-08/03/2017 ರಂದು ಮಧ್ಯಾಹ್ನ 2-00 ಗಂಟೆಗೆ ಪಿರ್ಯಾದಿಯಾದ ಸೈಫುಲ್ಲಾ ಬಿನ್ ನಾಜೀರ್ ಅಹಮದ್, 36 ವರ್ಷ, ಮುಸ್ಲಿಂ ಜನಾಂಗ, ಸಿದ್ದಪ್ಪ ಬಿಲ್ಡಿಂಗ್, 1 ನೇ ಕ್ರಾಸ್, ಮುಕಾಂಬಿಕ ನಗರ, ಉಪ್ಪಾರಳ್ಳಿ, ತುಮಕೂರು ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್ ಮಾಡಿಸಿದಿ ಲಿಖಿತ ದೂರಿನ ಅಂಶವೇನೆಂದರೆ ನಾನು ಮೇಲೆ ಹೇಳಿ ಬರೆಯಿಸಿದ ವಿಳಾಸದಲ್ಲಿ ವಾಸವಿರುತ್ತೇನೆ, ನನ್ನ ತಂದೆ ಆದ ನಜೀರ್ ಅಹಮದ್ ಬಿನ್ ಲೇಟ್ ಅಬ್ದುಲ್ ರೆಹಮಾನ್, ಸುಮಾರು 70 ವರ್ಷ, ರವರು ಕಲ್ಕೆರೆ ಕ್ರಾಸ್ ಹತ್ತಿರ ಇರುವ ಬಾಜೀಸಾಬ್ ರವರು ಮಗ ಮನೋವರ್ ರವರ ತೋಟದಲ್ಲಿ ಕೆಲಸ ಮಾಡಿಕೊಂಡು ಅಲ್ಲೇ ನಮ್ಮ ತಾಯಿಯ ಜೊತೆಯಲ್ಲಿ ವಾಸವಿದ್ದು, ದಿನಾಂಕ-03/03/2017 ರಂದು ರಾತ್ರಿ ಸುಮಾರು 7-00 ಗಂಟೆ ಸಮಯದಲ್ಲಿ ಬನ್ನಿಮರದ ಕಟ್ಟೆಯಲ್ಲಿ ಮನೆಗೆ ಸಾಮಾಗ್ರಿಗಳನ್ನು ತೆಗೆದುಕೊಂಡು ನಂತರ ವಾಪಸ್ ಸದರಿ ತೋಟದ ಕಡೆಗೆ ಅಂದರೆ ಬನ್ನಿಮರದಕಟ್ಟೆಯಿಂದ ಸ್ವಲ್ಪ ದೂರು ಹೆಬ್ಬೂರಿನ ಕಡೆಗೆ  ರಸ್ತೆಯ ಎಡಬಾಗದಲ್ಲಿ ನೆಡೆದುಕೊಂಡು ಬರುವಾಗ ನಮ್ಮ ತಂದೆಯ ಹಿಂಭಾಗದಿಂದ ಅಂದರೆ ಕುಣಿಗಲ್ ಕಡೆಯಿಂದ ಒಂದು ದ್ವಿಚಕ್ರವಾಹದ ಸವಾರನು ತನ್ನ ಕೆಎ-06-ಇಯು-3319 ನೇ ಟಿ.ವಿ.ಎಕ್ಷ್.ಎಲ್ ಹೆವಿದ್ಯೂಟಿ, ತನ್ನ ದ್ವಿಚಕ್ರ ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹಿಂಬಾಗದಿಂದ ಬಂದು ನಮ್ಮ ತಂದೆಗೆ ಡಿಕ್ಕಿ ಹೊಡೆದು ತನ್ನ ವಾಹನವನ್ನು ಸವಾರನು ಸ್ಥಳದಲ್ಲೆ ಬಿಟ್ಟು ಓಡಿಹೋಗಿದ್ದು, ಈ ಅಪಘಾತದಿಂದ ನಮ್ಮ ತಂದೆಯ ಎಡಗಾಲಿಗೆ ಗಾಯವಾಗಿ ಮತ್ತು ಮೈಕಾಲುಗಳಿಗೆ ತರಚಿದ ಗಾಯಗಳಾಗಿದ್ದು, ಇದರಿಂದ ಪ್ರಜ್ಙೆ ತಪ್ಪಿ ರಸ್ತೆಯ ಪಕ್ಕ ಬಿದ್ದಿದ್ದು ನಂತರ ಅಲ್ಲೆ ಇದ್ದ ಬನ್ನಿಮರದಕಟ್ಟೆ ಗ್ರಾಮದ ಉಮೇಶ್ ಬಿನ್ ಮಳ್ಳಚಿಕ್ಕಯ್ಯ ಮತ್ತು ರುದ್ರೇಶ್ ಬಿನ್ ಬಸವಯ್ಯರವರುಗಳು ಸದರಿ ನಮ್ಮ ತಂದೆಯನ್ನು ಉಪಚರಿಸಿ 108 ನೇ ವಾಹನದಲ್ಲಿ ತುಮಕೂರು ಜಿಲ್ಲಾ ಆಸ್ಪತ್ರೆಗೆ  ಸೇರಿಸಿ ಚಿಕಿತ್ಸೆ ಕೊಡಿಸಿರುತ್ತಾರೆ, ನಂತರ ಸದರಿ ವಿಚಾರವನ್ನು ನನಗೆ ತಿಳಿಸಲಾಗಿ ನಾನು ತುಮಕೂರು ಜಿಲ್ಲಾ ಆಸ್ಪತ್ರೆಗೆ ಬಂದು ನೋಡಲಾಗಿ ನಮ್ಮ ತಂದೆಗೆ ಗಾಯಗಳಾಗಿ ಚಿಕಿತ್ಸೆ ಪಡೆಯುತ್ತಿರುವುದು ನಿಜವಾಗಿದ್ದು, ಆದ್ದರಿಂದ ನಮ್ಮ ತಂದೆಗೆ ಅಪಘಾತ ಮಾಡಿದ ಸದರಿ ವಾನಹದ ನಂಬರ್ ನೋಡಲಾಗಿ ಕೆಎ-06-ಇಯು-3319 ನೇ ಟಿ.ವಿ.ಎಕ್ಷ್.ಎಲ್ ಹೆವಿದ್ಯೂಟಿ, ಯ ವಾಹನದ ಸವಾರ ಮೇಲೆ ಕಾನೂನು ರೀತ್ಯಾ  ಕ್ರಮ ತೆಗೆದುಕೊಳ್ಳಬೇಕೆಂದು  ನಮ್ಮ ತಂದೆಯವರಿಗೆ ಚಿಕಿತ್ಸೆ ಕೊಡಿಸಿದ್ದರಿಂದ ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ, ಸದರಿ ಅಪಘಾತ ಪಡಿಸದ ವಾಹನವು ಮನೋವರ್ ರವರ ತೋಟದ ರಸ್ತೆಯ ಪಕ್ಕ ನಿಲ್ಲಿಸಿರುತ್ತೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.


Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 79 guests online
Content View Hits : 194463
Hackguard Security Enabled