lowborn Tumakuru District Police | Tumkur Police | Karnataka Police | Tumakuru District Police | Tumkur Police | Karnataka Police

Smt. ISHA PANT IPS,
Superintendent of Police,
Tumakuru Dt., Karnataka.

Message from SP

Report Archive

< March 2017 >
Mo Tu We Th Fr Sa Su
    1 2 3 4 5
6 7 9 10 11 12
13 14 15 16 17 18 19
20 21 22 23 24 25 26
27 28 29 30 31    
Wednesday, 08 March 2017
Crime Incidents 08-03-17

ತುಮಕೂರು ನಗರ ಪೊಲೀಸ್ ಠಾಣಾ ಮೊ.ನಂ. 42/2017 ಕಲಂ 3,14(A) Child Labour Act (prohibition and Regulation )1986  Amandment 2016

ದಿನಾಂಕ:07/03/2017 ರಂದು ರಾತ್ರಿ 9-15 ಗಂಟೆಗೆ ಪಿರ್ಯಾದಿ ನಾಗರತ್ನ ಸಿ.ಡಿ. ಕಾರ್ಮಿಕ ನಿರೀಕ್ಷಕರು, 1ನೇ ವೃತ್ತ, ತುಮಕೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೆನೆಂದರೆ  ಮನೆ ನಂ.05 ಬಸವ ಸದನ, ರೂಪ ಶಾಮಿಯಾನ ಹೌಸ್ ರಸ್ತೆ, ಪುಟ್ಟಸ್ವಾಮಯ್ಯನಪಾಳ್ಯ ಶಿರಾ ಗೇಟ್ ಎಕ್ಸ್ ಟೆನ್ಷನ್ , ಸಂಪಿಗೆ ಲೇಔಟ್, ತುಮಕೂರು ಈ ಮನೆಯಲ್ಲಿ  1) ಯೋಜನಾ ನಿದೇಶಕರು  ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೋಸೈಟಿ ತುಮಕೂರು ಜಿಲ್ಲೆ , 2)ಮಕ್ಕಳರಕ್ಷಣಾ ಅಧಿಕಾರಿ ಜಿಲ್ಲಾ ಮಕ್ಕಳ ಸಕ್ಷಣಾ ಘಟಕ, ತುಮಕೂರು , 3)ದಿನೇಶ್ ಪೊಲೀಸ್ ಹೆಡ್ ಕಾನ್ಸ್‌ ಟೇಬಲ್ ತುಮಕೂರು ನಗರ ಠಾಣೆ , ತುಮಕೂರು ಇವರೊಂದಿಗೆ ದಿನಾಂಕ:07/03/2017 ರಂದು ಅಪರಾಹ್ನ 1-40 ಸಮಯದಲ್ಲಿ ಬಾಲಾವಸ್ಥೆ ಮತ್ತು ಕಿರೋರಾವಸ್ಥೆ ಕಾರ್ಮಿಕ (ನಿಷೇದ ಮತ್ತು ನಿಯಂತ್ರಣ) ಕಾಯ್ದೆ 1986 ತಿದ್ದುಪಡಿ 2016 ರಡಿ ತಪಾಸಣೆ ನಡೆಸಿದಾಗ ಸದರಿ ಮನೆಯಲ್ಲಿ ಕುಮಾರಿ ಅನುರಾಧ ತಂದೆ ಹನುಮಂತ(12 ರಿಂದ 14 ವರ್ಷ) ಎಂಬ ಬಾಲ ಕಾರ್ಮಿಕಳು ಮನೆ ಕೆಲಸ ನಿರ್ವಹಿಸುತ್ತಿದ್ದು ಕಂಡು ಬಂದಿದ್ದು, ತಪಾಸಣಾ ಸಮಯದಲ್ಲಿ ಸದರಿ ಮನೆಯ ಮಾಲೀಕರಾದ ಶ್ರೀ ಶಿವಶಂಕರ ಬಿನ್ ಶ್ರೀ ಕಾಳಪ್ಪ ಭದ್ರಪ್ಪನವರ್‌ ನವರ ಮಕ್ಕಳಾದ ಮಾ: ತೇಜಸ್ ಮತ್ತು ಮಾ:ಧನುಷ್ ಹಾಗೂ ಬಾಲ ಕಾರ್ಮಿಕಳಾದ ಕು: ಅನುರಾಧ ಈ ಮಕ್ಕಳನ್ನು ಹೊರತುಪಡಿಸಿ ಬೇರೆ ಯಾರೂ ಹಾಜರಿಲ್ಲದ ಕಾರಣ ನಿರೀಕ್ಷಣಾ ಟಿಪ್ಪಣಿಯನ್ನು ಸ್ಥಳದಲ್ಲಿಯೇ ಜಾರಿ ಮಾಡಲು ಸಾಧ್ಯವಾಗಿರುವುದಿಲ್ಲ. ಬಾಲ ಕಾರ್ಮಿಕಳ ವಯಸ್ಸಿನ ಬಗ್ಗೆ ತುಮಕೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಉಕೀಯ ತಪಾಸಣೆ ಮಾಡಿಸಿದಾಗ ಶ್ರೀ ಶಶಿಕಿರಣ್ ಜೆ ಹಿರಿಯ ದಂತ ವೈದ್ಯಾಧಿಕಾರಿಗಳು ಜಿಲ್ಲಾ ಆಸ್ಪತ್ರೆ ತುಮಕೂರು ಇವರು ಸದರಿ ಬಾಲಕಿಯು 12 ರಿಂದ 14 ವರ್ಷದೊಳಗಿನ ಬಾಲಕಿ ಎಂದು ವಯಸ್ಸಿನ ದೃಢೀಕರಣ ಪತ್ರ ನೀಡಿರುತ್ತಾರೆ. ಸದರಿ ಬಾಲ ಕಾರ್ಮಿಕಳಿಗೆ ಪುನರ್ ವಸತಿ ಕಲ್ಪಿಸುವ ಸಲುವಾಗಿ ಮಕ್ಕಳ ಕಲ್ಯಾಣ ಸಮಿತಿ ತುಮಕೂರು ಇಲ್ಲಿ ಇಂದೇ ದಾಖಲು ಮಾಡಲಗಿರುತ್ತೆ. ಇತ್ತೀಚಿನ ಬಾಲ ಕಾರ್ಮಿಕ (ನಿಷೇದ ಮತ್ತು ನಿಯಂತ್ರಣ) ಕಾಯ್ದೆ 1986 ತಿದ್ದುಪಡಿ 2016 ರ ಆದೇಶದಂತೆ ಸದರಿ ಕಾಯ್ದೆಯ ಕಲಂ 3 ರ ಉಲ್ಲಂಘನೆಗೆ ಕಲಂ 14ಎ ರಲ್ಲಿ  Cognizable Offences ಎಂದು ತಿದ್ದುಪಡಿ ಮಾಡಿರುವುದರಿಂದ ಮನೆಯ ಮಾಲೀಕರಾದ ಶ್ರೀ ಶಿವಶಂಕರ ಬಿನ್ ಶ್ರೀ ಕಾಳಪ್ಪ ಭದ್ರಪ್ಪನವರ್‌ ವಿರುದ್ದ ಕಾಯ್ದೆಯನ್ವಯ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ; 43/2017 ಕಲಂ; 341, 323, 324, 504, 506 ರೆ/ವಿ 34 ಐಪಿಸಿ

ದಿನಾಂಕ-07-03-2017 ರಂದು ಬೆಳಿಗ್ಗೆ 11-50 ಗಂಟೆ ಸಮಯದಲ್ಲಿ ಪಿರ್ಯಾದಿ ವೆಂಕಟೇಶ ಬಿನ್‌ ರಾಮಕೃಷ್ಣಯ್ಯ, 30 ವರ್ಷ, ಮಡಿವಾಳರು, ಬೆಣಚಕಲ್ಲು ಗ್ರಾಮ, ಹುಲಿಯೂರುದುರ್ಗ ಹೋಬಳಿ, ಕುಣಿಗಲ್‌ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ-06-03-2017 ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ನಮ್ಮ ದೊಡ್ಡಪ್ಪ ರವರರಾದ ವೆಂಕಟರಾಮಯ್ಯ ರವರು ನಮಗೆ ಸೇರಿದ ಸರ್ವೇ ನಂ;75 ರ ಜಮೀನಿನಲ್ಲಿ ಇರುವ ಹಾಲದ ಮರದಲ್ಲಿ ಆಡುಗಳಿಗೆ ಸೊಪ್ಪನ್ನು ತರಲು ಹೋಗಿರುವಾಗ್ಗೆ ವಡ್ಡರಾಳು ಗ್ರಾಮದ ಗೋವಿಂದಯ್ಯ ಬಿನ್‌ ತಿಮ್ಮಯ್ಯ, ಆತನ ಹೆಂಡತಿ  ಮರಿಲಿಂಗಮ್ಮ, ಪುಟ್ಟಸ್ವಾಮಯ್ಯ ಬಿನ್‌ ತಿಮ್ಮಯ್ಯ, ಆತನ ಹೆಂಡತಿ ಚಿಕ್ಕತಾಯಮ್ಮ ರವರು ಅಕ್ರಮವಾಗಿ ಗುಂಪು ಕಟ್ಟಿಕೊಂಡು ಏಕಾಏಕಿ ನಮ್ಮ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಲು ಪ್ರಯತ್ನಿಸಿದ್ದಲ್ಲದೆ, ಏಕಾಏಕಿ ನಮ್ಮ ಬಳಿ ಬಂದು ಬೋಳಿ ಮಕ್ಕಳಾ, ನಮ್ಮ ಮೇಲೆ ಕೇಸುಹಾಕುತ್ತೀರಾ ಎಂತ ಬೈಯ್ಯುತ್ತಾ ಗೋವಿಂದಯ್ಯ ಮತ್ತು ಪುಟ್ಟಸ್ವಾಮಯ್ಯ ರವರು ತಾವು ತಂದಿದ್ದ ನೀಲಗಿರಿ ದೊಣ್ಣೆಯಿಂದ ನಮ್ಮ ದೊಡ್ಡಪ್ಪನ ಬಲಗೈ ಮೇಲೆ ಜೋರಾಗಿ ಹೊಡೆದರು. ಆಗ ನಮ್ಮ ದೊಡ್ಡಪ್ಪ ನೋವನ್ನು ತಾಳಲಾರದೆ ಕೆಳಕ್ಕೆ ಬಿದ್ದರು. ಆಗ ಗೋವಿಂದಯ್ಯ ನಮ್ಮ ದೊಡ್ಡಪ್ಪನ ಬಲಗೈಯನ್ನು ತಿರುಚಿದನು. ನಂತರ ಗೋವಿಂದಯ್ಯ ಬಿನ್‌ ತಿಮ್ಮಯ್ಯ, ಆತನ ಹೆಂಡತಿ  ಮರಿಲಿಂಗಮ್ಮ, ಪುಟ್ಟಸ್ವಾಮಯ್ಯ ಬಿನ್‌ ತಿಮ್ಮಯ್ಯ, ಆತನ ಹೆಂಡತಿ ಚಿಕ್ಕತಾಯಮ್ಮ ರವರು ಕೈ ಕಾಲುಗಳಿಂದ ನಮ್ಮ ದೊಡ್ಡಪ್ಪನ ಮೇಲೆ ಹಲ್ಲೆ ಮಾಡಿದರು. ಆಗ ನಾನು ಓಡಿ ಬಂದು ಅವರುಗಳಿಂದ ನಮ್ಮ ದೊಡ್ಡಪ್ಪನನ್ನು ಬಿಡಿಸಲು ಹೋದಾಗ ನನ್ನ ಮೇಲೂ ಹಲ್ಲೆ ಮಾಡಲು ಬಂದರು. ಆ ಸಮಯಕ್ಕೆ ವಡ್ಡರಾಳು ಗ್ರಾಮದ ರಾಜಣ್ಣ ಬಿನ್‌ ಕರಿಯಪ್ಪ ರವರು ಬಂದು ಜಗಳ ಬಿಡಿಸಿದರು. ನಂತರ ಸದರಿ ರವರು, ನಮ್ಮ ಮೇಲೆ ಹಾಕಿರುವ ಕೇಸನ್ನು ವಾಪಾಸ್‌ ತೆಗೆದುಕೊಳ್ಳದಿದ್ದರೆ, ನಿಮ್ಮನ್ನು ಇದೇ ಜಾಗದಲ್ಲಿ ಕೊಲೆ ಮಾಡುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಿ, ಇಂದಲ್ಲಾ ನಾಳೆ ನಾವು ನಿಮ್ಮನ್ನು ಮುಗಿಸಿಯಾದರೂ ಜಮೀನನ್ನು ಪಡೆದೇ ತೀರುತ್ತೇವೆ ಎಂದು ಹೇಳಿ ಹೊರಟು ಹೋದರು. ನಂತರ ನಾನು ನಮ್ಮ ದೊಡ್ಡಪ್ಪರವರನ್ನು ಚಿಕಿತ್ಸೆಗಾಗಿ ಹುಲಿಯೂರುದುರ್ಗ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದೆನು. ಆದರೆ ಅಲ್ಲಿ ಡಾಕ್ಟರ್‌ ಇಲ್ಲದಿರುವುದರಿಂದ ಕೂಡಲೇ ಕುಣಿಗಲ್‌ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ವೈಧ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಆದಿ ಚುಂಚನಗಿರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗಾಗಿ ದಾಖಲಿಸಿರುತ್ತೇನೆ. ಅಲ್ಲಿನ ವೈಧ್ಯರು ಕೈ ಮುರಿದು ಹೋಗಿರುವುದಾಗಿ ಚಿಕಿತ್ಸೆ ನೀಡುತ್ತಿರುತ್ತಾರೆ. ಆದ್ದರಿಂದ ಗೋವಿಂದಯ್ಯ ಬಿನ್‌ ತಿಮ್ಮಯ್ಯ, ಆತನ ಹೆಂಡತಿ  ಮರಿಲಿಂಗಮ್ಮ, ಪುಟ್ಟಸ್ವಾಮಯ್ಯ ಬಿನ್‌ ತಿಮ್ಮಯ್ಯ, ಆತನ ಹೆಂಡತಿ ಚಿಕ್ಕತಾಯಮ್ಮ ರವರ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಂಡು ನಮಗೆ ರಕ್ಷಣೆಯನ್ನು ಒದಗಿಸುವಂತೆ ನೀಡಿದ ದೂರಿನ ಅಂಶವಾಗಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ; 44/2017 ಕಲಂ; 279, 337 ಐಪಿಸಿ

ಹುಲಿಯೂರುದುರ್ಗ ಪೊಲೀಸ್‌ ಠಾಣೆಗೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀನಿವಾಸ್‌.ಹೆಚ್‌ ಎಎಸ್‌ಐ ಆದ ನಾನು ದಿನಾಂಕ-07-03-2017 ರಂದು ಮಧ್ಯಾಹ್ನ 3-00 ಗಂಟೆ ಯಿಂದ 3-30 ಗಂಟೆಯ ವರೆಗೆ ಮೈಸೂರಿನ ಕೆ.ಆರ್‌ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ರಮೇಶ್‌ ಬಿನ್‌ ಲೇಟ್‌ ಕರಿಯಪ್ಪ, 38 ವರ್ಷ, ನಾಯಕ ಜನಾಂಗ, ಗಾರೆ ಕೆಲಸ, ತರೀಕೆರೆ, ಕೊಪ್ಪ ಹೋಬಳಿ, ಮದ್ದೂರು ತಾಲ್ಲೋಕು, ಮಂಡ್ಯ ಜಿಲ್ಲೆ ರವರ ಹೇಳಿಕೆಯನ್ನು ಪಡೆದು ದಿನಾಂಕ-07-03-2017 ರಂದು ಸಂಜೆ 6-45 ಗಂಟೆ ಸಮಯದಲ್ಲಿ ಠಾಣೆಗೆ ಹಾಜರಾಗಿ ಪ್ರಕರಣ ದಾಖಲಿಸಿದ ಗಾಯಾಳುವಿನ ಹೇಳಿಕೆಯ ಸಾರಾಂಶವೇನೆಂದರೆ, ನಾನು ಸುಮಾರು 02 ವರ್ಷಗಳಿಂದ ಹುಲಿಯೂರುದುರ್ಗದ ಹತ್ತಿರವಿರುವ ಕಂಪ್ಲಾಪುರದಲ್ಲಿ ನನ್ನ ನಾದಿನಿ ಪಾರ್ವತಿ ರವರ ಮನೆಯಲ್ಲಿದ್ದು ಗಾರೆಕೆಲಸ ಮಾಡಿಕೊಂಡು ವಾರಕ್ಕೊಂದು ಬಾರಿ ಊರಿಗೆ ಹೋಗಿಬರುತ್ತಿದ್ದೆನು. ದಿನಾಂಕ-05-03-2017 ರಂದು ನಾನು ಎಂದಿನಂತೆ ಗಾರೆಕೆಲಸಕ್ಕೆ ಹುಲಿಯೂರುದುರ್ಗಕ್ಕೆ ಹೋಗಿ ನಂತರ ಗಾರೆಕೆಲಸವನ್ನು ಮುಗಿಸಿಕೊಂಡು ವಾಪಾಸ್‌ ಕಂಪ್ಲಾಪುರಕ್ಕೆ ಬರಲು ಕೊಡವತ್ತಿ ರಸ್ತೆಯಲ್ಲಿ ರುದ್ರೇಶ್‌ ರವರ ಅಂಗಡಿ ಮುಂದಿನ ರಸ್ತೆಯ ಎಡಭಾಗದಲ್ಲಿ ಸಂಜೆ 6-30 ಗಂಟೆ ಸಮಯದಲ್ಲಿ ಕಂಪ್ಲಾಪುರದ ನಾಗರಾಜು ರವರ ಜೊತೆ ನಡೆದುಕೊಂಡು ಬರುತ್ತಿರುವಾಗ್ಗೆ ಎದುರುಗಡೆಯಿಂದ ಒಂದು ಲಾರಿಯ ಚಾಲಕ ತನ್ನ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ನಾನು ಕೆಳಕ್ಕೆ ಬಿದ್ದಾಗ ಲಾರಿಯ ಚಕ್ರ ನನ್ನ ಬಲಗೈ ಮತ್ತು ಬಲಕಾಲಿನ ಮೇಲೆ ಹರಿಸು ರಕ್ತಗಾಯವಾಯಿತು. ಜೊತೆಯಲ್ಲಿದ್ದ ನಾಗರಾಜು ನನ್ನನ್ನು ಉಪಚರಿಸಿ ನಂತರ ಲಾರಿಯ ನಂಬರ್‌ ನೋಡಲಾಗಿ ಎಪಿ-24-ಟಿ.ಬಿ-6337 ಆಗಿರುತ್ತೆ. ನಾಗರಾಜು ರವರು ಕೂಡಲೇ ನನ್ನನ್ನು ಮೈಸೂರಿನ ಸಂತ ಜೋಸೆಫ್‌ ಆಸ್ಪತ್ರೆಗೆ ಸೇರಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ದಿನಾಂಕ-06-03-2017 ರಂದು ಮೈಸೂರಿನ ಕೆ.ಆರ್‌ ಆಸ್ಪತ್ರೆಗೆ ಸೇರಿಸಿರುತ್ತಾರೆ. ಆದ್ದರಿಂದ ನನಗೆ ಅಪಘಾತಪಡಿಸಿದ ಲಾರಿ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕೆಂದು ನೀಡಿದ ಹೇಳಿಕೆಯ ಅಂಶವನ್ನು ದಾಖಲಿಸಿಕೊಂಡು ಪ್ರಕರಣ ದಾಖಲಿಸಿದ ಅಂಶವಾಗಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 43/2017 ಕಲಂ 324, 504, 506,ಪಿ,ಸಿ

ದಿನಾಂಕ:07-03-2017 ರಂದು ಮದ್ಯಾಹ್ನ 03-00 ಗಂಟೆಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಬಿ,ಜಿ,ರಂಗಣ್ಣ ಬಿನ್ ಲೇ|| ಗಂಗಯ್ಯ, 47 ವರ್ಷ, ಒಕ್ಕಲಿಗರು, ಜಿರಾಯ್ತಿ, ಬೇಗೂರು, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು ಮತ್ತು ಜಿಲ್ಲೆ ರವರ ಹೇಳಿಕೆಯ ಅಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ಇದೇ ದಿವಸ ಅಂದರೆ ದಿನಾಂಕ;07-03-2017 ರಂದು ಮದ್ಯಾಹ್ನ 12-00 ಗಂಟೆ ಸಮಯದಲ್ಲಿ ನಮ್ಮ ಗ್ರಾಮದ ಭೀಮೇಶ್ ರವರ ಮನೆ ಮುಂಭಾಗದಲ್ಲಿ ನಾನು ನಿಂತಿರುವಾಗ್ಗೆ, ಬೀಮೇಶ್‌ಹಾಗೂ ಶ್ರೀನಿವಾಸ್‌ರವರ ಟಾಯ್ಲೆಟ್‌‌ರೂಮ್‌ಅನ್ನು ಸಿ,ಸಿ ರಸ್ತೆಯನ್ನು ನಿರ್ಮಿಸುವ ಸಲುವಾಗಿ ತೆರವುಗೊಳಿಸುವ ವಿಚಾರಕ್ಕೆ ಭೀಮೇಶ್‌ನು ಏಕಾಏಕಿ ನನ್ನನ್ನು ಬೋಳಿ ಮಗನೇ, ಸೂಳೇ ಮಗನೇ ನಿನಗೆ ಯಾಕೋ ಬೇಕು ಈ ವಿಚಾರ ಎಂತಾ ಏಕಾಏಕಿ ಒಂದು ಕಲ್ಲನ್ನು ತೆಗೆದುಕೊಂಡು ನನ್ನ ತಲೆಗೆ ಎಸೆದು ರಕ್ತಗಾಯಪಡಿಸಿದನು. ನಂತರ ಸ್ಥಳದಲ್ಲಿಯೇ ಇದ್ದ ನಮ್ಮ ಗ್ರಾಮದ ವಾಸಿಗಳಾದ ಸೋಮಶೇಖರ್ ಹಾಗೂ ಬಿದರಕಟ್ಟೆ ಗ್ರಾಮದ ಸಿದ್ದೇಗೌಡ ರವರು ನನ್ನನ್ನು ಉಪಚರಿಸಿದರು. ನಂತರ ಭೀಮೇಶ್‌ನು ತನ್ನ ಕೈಯಲ್ಲಿದ್ದ ಕಲ್ಲನ್ನು ಸ್ಥಳದಲ್ಲಿಯೇ ಬಿಸಾಡಿ ನಿನ್ನನ್ನು ಇಷ್ಟಕ್ಕೆ ಸುಮ್ಮನೆ ಬಿಡುವುದಿಲ್ಲ ನಿನಗೆ ಒಂದು ಗತಿ ಕಾಣಿಸುತ್ತೇನೆ ಎಂತಾ ಪ್ರಾಣ ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋದನು. ಆದ್ದರಿಂದ ನನ್ನ ಮೇಲೆ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯಪಡಿಸಿ, ಪ್ರಾಣ ಬೆದರಿಕೆ ಹಾಕಿದ ಭೀಮೇಶ್‌ರವರ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ನಾನು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಯಲ್ಲಿ ಈ ನನ್ನ ಹೇಳಿಕೆಯನ್ನು ನೀಡಿರುತ್ತೇನೆ ಎಂದು ಹೇಳಿದ ಹೇಳಿಕೆಯನ್ನು ಪಡೆದು ವಾಪಸ್‌ ಸಾಯಂಕಾಲ 05-00 ಗಂಟೆಗೆ ಠಾಣೆಗೆ ಬಂದು ಪ್ರಕರಣವನ್ನು ದಾಖಲಿಸಿರುತ್ತೆ.

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 34/2017, ಕಲಂ 436, 427 ಐ.ಪಿ.ಸಿ

ದಿನಾಂಕ:07.03.2017 ರಂದು ಸಂಜೆ 07:00 ಗಂಟೆಗೆ ವಿನಯ್ ಬಿನ್ ದುರ್ಗರಾಜು, ಗುರುವಾಪುರ ಹುಳಿಯಾರು ಹೋಬಳಿ, ಚಿ ನಾ ಹಳ್ಳಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ತಿಪಟೂರು ಟೌನ್ ವಾಸಿಯಾದ ಡಿ.ಶಿವಪ್ರಸಾದ್ ಬಿನ್  ದೊಡ್ಡಯ್ಯ ರವರಿಗೆ ಸೇರಿದ ಚಿ. ನಾ ಹಳ್ಳಿ ತಾಲ್ಲೂಕು ಹುಳಿಯಾರು ಹೋಬಳಿ ದಸೂಡಿ ಗ್ರಾಮದಲ್ಲಿರುವ ಶ್ರೀ ಬಾಲಾಜಿ ವೈನ್ಸ್ ಇಲ್ಲಿ ನೌಕರನಾಗಿ ಕಾರ್ಯ ನಿರ್ವಹಿಸುತ್ತಿದ್ದು ದಿನಾಂಕ:05.03.2017 ರ ರಾತ್ರಿ 10:00 ಗಂಟೆಗೆ ನಮ್ಮ ಅಂಗಡಿಯ ಬಾಗಿಲು ಮುಚ್ಚಿಕೊಂಡು ಅಂಗಡಿಗೆ ಬೀಗ ಹಾಕಿ ಅಂಗಡಿಯ ಹಿಂಭಾಗದಲ್ಲಿರುವ ರೂಮ್ ನಲ್ಲಿ ಮಲಗಿಕೊಂಡೆ ನಂತರ ಸುಮಾರು 2:00 ಗಂಟೆ ಸಮಯದಲ್ಲಿ ನಾನು ರೂಮ್ ನಿಂದ ಹೊರಗೆ ಬಂದು ನಮ್ಮ ಅಂಗಡಿಯನ್ನು ನೋಡಿಕೊಂಡು ಬಂದು ರೂಮ್ ನಲ್ಲಿ ಮಲಗಿಕೊಂಡೆ ಸ್ವಲ್ಪ ಸಮಯದ ನಂತರ ನಮ್ಮ ಅಂಗಡಿಯ ಪಕ್ಕದಲ್ಲಿರುವ ಮನೆಯ ಹಸುಗಳು ಮತ್ತು ಕೆಲವು ನಾಯಿಗಳು ಬೊಗಳುವ ಶಬ್ದ ಕೇಳಿ ಬಂದಿತು. ಎಚ್ಚರಗೊಂಡ ನಾನು ಹೊರಗೆ ಬಂದು ನೋಡಿದಾಗ ನಮ್ಮ ಅಂಗಡಿಗೆ ಬೆಂಕಿ ಹತ್ತಿಕೊಂಡಿತ್ತು ಈ ಸಮಯದಲ್ಲಿ ನಮ್ಮ ಅಂಗಡಿಯ ಹತ್ತಿರದಿಂದ ಯಾರೋ ಒಬ್ಬ ಆಸಾಮಿ ಓಡಿ ಹೋದನು ಆಗ ನಾನು ಗಾಬರಿಯಿಂದ ನನಗೆ ಪರಿಚಯಸ್ಥರಾದ ದಯಾನಂದ್ ಬಿನ್ ಸಿದ್ದಯ್ಯ ದಸೂಡಿ ಇವರ ಮನೆಯ ಹತ್ತಿರ ಹೋಗಿ ಅವರನ್ನು ಕರೆದುಕೊಂಡು ಬಂದು ಅಂಗಡಿಯ ಬಾಗಿಲು ತೆರೆದೆವು ಆಗ ಅಂಗಡಿಯ ಒಳಗಿನಿಂದ ಬೆಂಕಿಯು ಜೋರಾಗಿ ಹೊರಗೆ ಬಂದಿದ್ದರಿಂದ ಅಂಗಡಿಯಿಂದ ದೂರ ಹೋಗಿ ನಮ್ಮ ಅಂಗಡಿಯ ಮಾಲೀಕರ ಆಪ್ತರಾದ ರಂಗಸ್ವಾಮಿ ಟಿ.ಆರ್ ಬಿನ್ ತ್ಯಾಗರಾಜ ಯಗಚೀಹಳ್ಳಿ ಇವರಿಗೆ ದೂರವಾಣಿ ಮೂಲಕ ನಡೆದ ವಿಚಾರವನ್ನು ತಿಳಿಸಿ ನಂತರ ಸ್ಥಳೀಯರ ಸಹಾಯದಿಂದ ಅಂಗಡಿಗೆ ಬಿದ್ದ ಬೆಂಕಿಯನ್ನು ಕೆಡಿಸಲು ಪ್ರಯತ್ನಿಸಿದೆವು. ಆದರೆ ಬೆಂಕಿಯು ಅಂಗಡಿಯನ್ನು ಸಂಪೂರ್ಣ ಆವರಿಸಿದ್ದರಿಂದ ಕೆಡಿಸಲು ಸಾಧ್ಯವಾಗಲಿಲ್ಲ ಆ ಸಮಯದ ವೇಳೆಗೆ ರಂಗಸ್ವಾಮಿ ಟಿ. ಆರ್ ರವರು ಸ್ಥಳಕ್ಕೆ ಆಗಮಿಸಿ ಅಗ್ನಿ ಶಾಮಕ ವಾಹನದ ಇಲಾಖೆಗೆ ತಿಳಿಸಿದ್ದು ಅಗ್ನಿ ಶಾಮಕ ವಾಹನ  ಸ್ಥಳಕ್ಕೆ ಬಂದು ಅಂಗಡಿಗೆ ಬಿದ್ದ ಬೆಂಕಿಯನ್ನು ಕೆಡಿಸಿದರು ಅಂಗಡಿಗೆ ಬೆಂಕಿ ಬಿದ್ದಿದ್ದರಿಂದ ಅಂಗಡಿಯಲ್ಲಿದ್ದ ಮದ್ಯದ ಬಾಟಲಿಗಳು, ಇತರೆ ವಸ್ತುಗಳು, ಬಾರ್ ನ ಕಟ್ಟಡ, ಇತರೆ ದಾಖಲಾತಿಗಳು ಸುಟ್ಟು ಹೋಗಿದ್ದವು ಇದರಿಂದ ಸುಮಾರು 19 ರಿಂದ 20 ಲಕ್ಷ ರೂ ಗಳು ನಷ್ಟವಾಗಿದೆ ಆದ್ದರಿಂದ ನಮ್ಮ ವೈನ್ಸ್ ಅಂಗಡಿಗೆ ಬೆಂಕಿ ಇಟ್ಟು ಓಡಿ ಹೋದವರ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಈ ವಿಚಾರವನ್ನು ನಮ್ಮ ಅಂಗಡಿಯ ಮಾಲೀಕರಿಗೆ ತಿಳಿಸಿ ಅಬಕಾರಿ ಇಲಾಖೆಗೆ ತಿಳಿಸಿ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ ಎಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ-31/2017 ಕಲಂ: 379 ಐ.ಪಿ.ಸಿ

ದಿನಾಂಕ:07-03-2017 ರಂದು ಬೆಳಿಗ್ಗೆ 11-45 ಗಂಟೆಗೆ ಪಿರ್ಯಾಧಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ:15-05-2016 ರಂದು ರಾತ್ರಿ 1-00 ಗಂಟೆಯ ನಂತರ ಶಾರದಾನಗರದ ತನ್ನ ಮನೆಯ ಮುಂದೆ ತನ್ನ ಬಾಬ್ತು KA06T4172-KA06T4173 ನೇ ಟ್ರಾಕ್ಟರ್ ಮತ್ತು ಟ್ರೈಲರ್ ನ್ನು ನಿಲ್ಲಿಸಿ ಹೋಗಿದ್ದು ಮಾರನೇ ದಿನ ಬಂದು ನೋಡಿದಾಗ ಟ್ರಾಕ್ಟರ್ ಮತ್ತು ಟ್ರೈಲರ್ ಕಾಣೆದೆ ಇದ್ದು  ಯಾರೋ ಕಳ್ಳರು ರಾತ್ರಿ 1-00 ಗಂಟೆಯ ನಂತರ ಕಳವು ಮಾಡಿಕೊಂಡು ಹೋಗಿರುತ್ತಾರೆ ಇದರ ಬೆಲೆ ಸುಮಾರು 1,50,000-00 ರೂ ಗಳಾಗುತ್ತದೆ ನಾವು ಎಲ್ಲಾ ಕಡೆ ಹುಡುಕಾಡಿದರೂ ಟ್ರಾಕ್ಟರ್ ಮತ್ತು ಟ್ರೈಲರ್ ಪತ್ತೆಯಾಗಿರುವುದಿಲ್ಲ. ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೆ.

 


Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 42 guests online
Content View Hits : 112867