lowborn Tumakuru District Police | Tumkur Police | Karnataka Police | Tumakuru District Police | Tumkur Police | Karnataka Police

Dr. Divya V. Gopinath IPS,
Superintendent of Police,
Tumakuru Dt., Karnataka.

Message from SP

ಪತ್ರಿಕಾ ಪ್ರಕಟಣೆ :: ದಿನಾಂಕ 12-12-2017  :: ತುಮಕೂರು ನಗರದಲ್ಲಿ ಮೂಲ ಆ.ಐ. ಸ್ಮಾಟ್‌ ಕಾರ್ಡಗಳ... >> ಪತ್ರಿಕಾ ಪ್ರಕಟಣೆ : ದಿನಾಂಕ:-05-12-2017 : ಚಾಳಿಬಿದ್ದ ಅಪರಾಧಿಗಳಿಂದ ಸುಮಾರು ಒಟ್ಟು 5, 00, 100/- ರೂ... >> ಜಯನಗರ ಪೊಲೀಸ್ ಠಾಣಾ ಮೊ.ನಂ. 156/2017 ಕಲಂ 20 (ಬಿ) ಎನ್‌.ಡಿ.ಪಿ.ಎಸ್ ಆಕ್ಟ್‌ ದಿನಾಂಕ: 25-11-2017 ರಂದು... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ   ತುಮಕೂರು ನಗರದಲ್ಲಿ ಒಂಟಿಯಾಗಿ... >>   New BEAT BEST STAFF AND BEST CRIME DETECTION BEST STAFF >> NEW BEAT BEST STAFF AND BEST CRIME DETECTION STAFF >> ಶಿರಾ ಗೇಟ್ ರಸ್ತೆಯ ಆಗಲೀಕರಣ ಹಿನ್ನಲೆ ಸಂಚಾರ ಮಾರ್ಗದಲ್ಲಿ ಬದಲಾವಣೆ. >> ಪತ್ರಿಕಾ ಪ್ರಕಟಣೆ ದಿನಾಂಕ:19-11-2017. ಅಕ್ರಮವಾಗಿ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದ... >> ಪತ್ರಿಕಾ ಪ್ರಕಟಣೆ ದಿನಾಂಕ:17-11-2017. ಮೂರು ಜನ ಅಂತರ ರಾಜ್ಯ ಕಳ್ಳರ ಬಂಧನ : 8 ಲಕ್ಷದ 50 ಸಾವಿರ... >> ದಿನಾಂಕ.17.11.2017. ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲೆ ಕಳ್ಳಂಬೆಳ್ಳ ಪೊಲೀಸ್... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ
Tuesday, 07 March 2017
Crime Incidents 07-03-17

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ; 42/2017 ಕಲಂ; 379 ಐಪಿಸಿ ರೆ/ವಿ 21(1) ಎಂ ಎಂ ಆರ್ ಡಿ ಆಕ್ಟ್-1957 ರೆ/ವಿ 44(1) ಕೆ ಎಂ ಎಂ ಸಿ ಆರ್-1994.

ದಿನಾಂಕ-06-03-2017 ರಂದು ಸಂಜೆ 5-10 ಗಂಟೆ ಸಮಯದಲ್ಲಿ ಹುಲಿಯೂರುದುರ್ಗ ಪೊಲೀಸ್ ಠಾಣಾ ಪಿಎಸ್‌ಐ-ಅನಿಲ್‌ಕುಮಾರ್‌.ಎಂ.ಎಸ್‌ ರವರು ಠಾಣಾ ಪಿಸಿ-426 ರಂಗಸ್ವಾಮಿ ರವರ ಮುಖೇನ ಕಳುಹಿಸಿಕೊಟ್ಟ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ-06-03-2017 ರಂದು ನಾನು ಹುಲಿಯೂರುದುರ್ಗ ಟೌನ್‌ ಬಂದೋಬಸ್ತ್‌ ಕರ್ತವ್ಯದಲ್ಲಿರುವಾಗ್ಗೆ ಮಾನ್ಯ ಕುಣಿಗಲ್‌ ಸಿಪಿಐ ರವರಿಗೆ ಬಂದ ಮಾಹಿತಿಯೇನೆಂದರೆ, ನಮ್ಮ ಪೊಲೀಸ್‌ ಠಾಣಾ ಸರಹದ್ದು ಕಗ್ಗನಹಳ್ಳಿ ಗ್ರಾಮದ ವಾಸಿಯಾದ ತಿಮ್ಮೇಗೌಡ ಎಂಬುವವನು ಅವನ ಬಾಬ್ತು ಟ್ರಾಕ್ಟರ್‌ನಲ್ಲಿ ಮರಳನ್ನು ತುಂಬಿಕೊಂಡು ಬರುತ್ತಾನೆ. ಸದರಿ ಟ್ರಾಕ್ಟರ್‌ ಚಾಲಕ ಮತ್ತು ಮಾಲೀಕನ ಮೇಲೆ ಕಾನೂನು ರೀತ್ಯ ಕ್ರಮವನ್ನು ಕೈಗೊಳ್ಳುವಂತೆ ಸೂಚಿಸಿದ್ದು, ಅದರಂತೆ ನಾನು ನಮ್ಮ ಠಾಣಾ  ಪಿಸಿ-426 ರಂಗಸ್ವಾಮಿ ಮತ್ತು ಪಿಸಿ-935 ರಾಜಣ್ಣ, ಜೀಪ್ ಚಾಲಕ ಎಪಿಸಿ-211 ಪರಮೇಶ್‌ ರವರನ್ನು ಕರೆದುಕೊಂಡು ಇಲಾಖಾ ಜೀಪ್‌ ನಂ; ಕೆಎ-06-ಜಿ-352 ರಲ್ಲಿ ಬ್ಯಾಡಗೆರೆ ರಸ್ತೆಯಲ್ಲಿ ಕಾಯುತ್ತಿರುವಾಗ್ಗೆ ಸಂಜೆ 4-30 ಗಂಟೆ ಸಮಯದಲ್ಲಿ ಒಬ್ಬ ವ್ಯಕ್ತಿಯು ಕಗ್ಗನಹಳ್ಳಿ ಗ್ರಾಮದ ಕಡೆಯಿಂದ ಬ್ಯಾಡಗೆರೆ ಗ್ರಾಮದ ಕಡೆಗೆ ಹೋಗಲು ರಸ್ತೆಯಲ್ಲಿ ಒಂದು ಮರಳನ್ನು ತುಂಬಿರುವ ಟ್ರಾಕ್ಟರ್‌ನ್ನು ಓಡಿಸಿಕೊಂಡು ಬಂದನು. ಆಗ ನಾನು ಮತ್ತು ನಮ್ಮ ಸಿಬ್ಬಂದಿಗಳು ರಸ್ತೆಗೆ ಅಡ್ಡಲಾಗಿ ನಿಂತು ಟ್ರಾಕ್ಟರ್‌ನ್ನು ನಿಲ್ಲಿಸುವಂತೆ ಟ್ರಾಕ್ಟರ್‌ ಚಾಲಕನಿಗೆ ಸೂಚಿಸುವಸ್ಟರಲ್ಲಿ ಸಮವಸ್ತ್ರದಲ್ಲಿ ನಿಂತಿದ್ದ ನಮ್ಮನ್ನು ಮತ್ತು ಪೊಲೀಸ್‌ ಜೀಪನ್ನುನೋಡಿ ಟ್ರಾಕ್ಟರ್‌ನ್ನು ಅಲ್ಲಿಯೇ ಬಿಟ್ಟು ಓಡಿಹೋಗುವಾಗ್ಗೆ ನಾವು ಆತನನ್ನು ಹಿಡಿಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ನಂತರ ಟ್ರಾಕ್ಟರ್‌ನ್ನು ಪರಿಶೀಲಿಸಲಾಗಿ ನಂಬರ್‌ ಪ್ಲೇಟ್‌ ಇರುವುದಿಲ್ಲ. ಟ್ರಾಕ್ಟರ್‌ ಮಹೇಂದ್ರ ಸರ್‌ ಪಂಚ್‌ 47ಎಸ್‌ಡಿಐ ಕಂಪನಿಯದಾಗಿದ್ದು, ENGINE NO; ZJJS00820, CHACISS NO; 006500901A4 ಅಂತ ಬರೆದಿರುತ್ತದೆ. ಟ್ರಾಕ್ಟರ್ ನ ಟ್ರೇಲರ್‌ ನಲ್ಲಿ ಪೂರ್ಣ ಪ್ರಮಾಣದಲ್ಲಿ ಮರಳನ್ನು ತುಂಬಿರುತ್ತೆ. ಟ್ರಾಕ್ಟರ್‌ ಇಂಜಿನ್‌ ಕೆಂಪು ಬಣ್ಣದ್ದಾಗಿದ್ದು ಟ್ರೇಲರ್‌ ನೀಲಿ ಬಣ್ಣದ್ದಾಗಿರತ್ತೆ. ಈ ಮೇಲ್ಕಂಡ ಟ್ರಾಕ್ಟರ್‌-ಟ್ರೈಲರ್‌ ಚಾಲಕ ಮತ್ತು ಮಾಲೀಕ ಸೇರಿಕೊಂಡು ಸರ್ಕಾರದಿಂದ ಯಾವುದೇ ಪರವಾನಗಿಯನ್ನು ಪಡೆಯದೇ ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕಳ್ಳತನದಿಂದ ಮರಳನ್ನು ತೆಗದು ಟ್ರಾಕ್ಟರ್‌ನಲ್ಲಿ ತುಂಬಿಕೊಂಡು ಸಾಗಾಣಿಕೆಯಲ್ಲಿ ತೊಡಗಿರುತ್ತಾರೆ. ಆದ್ದರಿಂದ ಮೇಲ್ಕಂಡ ಟ್ರಾಕ್ಟರ್‌ ಚಾಲಕ ಮತ್ತು  ಮಾಲೀಕನ ಮೇಲೆ ಪ್ರಕರಣ ದಾಖಲು ಮಾಡಲು ಸೂಚಿಸಿ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 42/2017 ಕಲಂ 87 ಕೆ.ಪಿ.ಆಕ್ಟ್

ದಿನಾಂಕ-05/03/2017 ರಂದು ಮಧ್ಯಾಹ್ನ 12-00 ಗಂಟೆಗೆ ತುಮಕೂರು ಜಿಲ್ಲಾ ಪೊಲೀಸ್ ಕಛೇರಿಯ ಡಿಸಿಬಿ ವಿಭಾಗದ ಮಾನ್ಯ ಪಿಐ ಶ್ರೀ ಗೌತಮ್ ಸಾಹೇಬರವರು ಮತ್ತು ಸಿಬ್ಬಂದಿಯವರು ಠಾಣೆಗೆ ಹಾಜರಾಗಿ ಹೊನ್ನುಡಿಕೆಯ ಕೋಡಿಪಾಳ್ಯದ ಹತ್ತಿರ ಲಿಂಗಾಪುರ ಮಾವಿನ ತೋಪಿನ ಬಳಿ ನೆಲಮಂಗಲ ಮೂಲದ ಕೃಷ್ಣಪ್ಪ @ ಕಿಟ್ಟಿ @ ಡೈರೆಕ್ಟರ್ ಎಂಬುವವನು ಹಾಗೂ ಇತರರು ಸಾರ್ವಜನಿಕ ಸ್ಥಳದಲ್ಲಿ ಜೂಜಾಟವಾಡುತ್ತಿದ್ದಾರೆ ಎಂತಾ ಮೌಖಿಕವಾಗಿ ತಿಳಿಸಿದ್ದರ ಮೇರೆಗೆ ಠಾಣಾ ಎನ್ ಸಿ ಆರ್ ನಂ 46/2017 ರಲ್ಲಿ ದಾಖಲಿಸಿರುತ್ತೆ, ಸದರಿ ಠಾಣಾ ಎನ್ ಸಿ ಆರ್ 46/2017 ರಲ್ಲಿ ಠಾಣಾ ಹೆಚ್ ಸಿ 37 ಶ್ರೀ ದೇವರಾಜು ರವರು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಈ ದಿನಾಂಕ-05/03/2017 ರಂದು ಮಧ್ಯಾಹ್ನ 2-00 ಗಂಟೆಗೆ ಹಾಜರುಪಡಿಸಿದ ವರದಿಯನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೆ.

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಮೊ ನಂ ನಂ:31/2017 ಕಲಂ 279,337 ಐಪಿಸಿ

ದಿನಾಂಕ:-06-03-17 ರಂದು ಮದ್ಯಾಹ್ನ 03:30 ಗಂಟೆಗೆ ಪಿರ್ಯಾದಿ ಬಿ.ಕೆ ತಿಪ್ಪೇಶ ಮೂರ್ತಿ  ಬಿನ್ ಬಿ ಕೆ ಪುಟ್ಟಣ್ಣ ಶೇಟ್ರು, ಶಿವನಗರ (ಕುಂದಲಗುರ) ಗ್ರಾಮ,ಹಿರಿಯೂರು ತಾಲ್ಲೋಕ್, ಚಿತ್ರದುರ್ಗ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ  ಲಿಖಿತ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿ ಮಗ ದರ್ಶನ ಪ್ರಭು 6ವರ್ಷ, ಮತ್ತು ಪಿರ್ಯಾದಿ ರವರ ಭಾವ ಮೈದುನನಾದ  ಶ್ರೀಧರ ಬಿನ್ ಪರಮೇಶ್ವರಪ್ಪ ರವರು  ಶಿರಾ ತಾಲ್ಲೋಕ್ , ಹುಲಿಕುಂಟೆ ಹೋಬಳಿ, ಎಲ್ಪೇನಹಳ್ಳಿ ಗ್ರಾಮದ ವಾಸಿ ನಾಗಭೂಷಣ್ ರವರ ಮನಗೆ ದಿನಾಂಕ:16-02-17 ರಂದು ಸಂಜೆ 05:30 ಗಂಟೆಗೆ ಬಸ್ಸಿನಿಂದ ಇಳಿದು ನಾಗಭೂಷಣ್ ರವರ ಮನೆಗೆ ಹೋಗಲು ರಸ್ತೆ ಎಡಬದಿಯಲ್ಲಿ ನಡೆದುಕೊಂಡು  ಹೋಗುತ್ತಿರುವಾಗ ಬರಗೂರು ಕಡೆಯಿಂದ ಬಂದ ಕೆಎ-04-ಜೆಜಿ-1613 ನೇ ವಾಹನದ ಚಾಲಕ ಸಣ್ಣಹಾರಪ್ಪ ಬಿನ್ ಕರಿಯಣ್ಣ, ಜೀರಿಗೆಹಳ್ಳಿ ತನ್ನ ಬಾಬ್ತು ದ್ವಿ ಚಕ್ರವಾಹನವನ್ನು ಅತಿವೇಗ ಮತ್ತು  ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು  ಬಂದು ರಸ್ತೆ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿ ಮಗ ದರ್ಶನ್ ಪ್ರಭು ರವರಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದರ ಪರಿಣಾಮ ತೀವ್ತರವಾದ ಪೆಟ್ಟುಗಳು ಬಿದ್ದು ಪ್ರಜ್ಞಾ ಹೀನನಾಗಿದ್ದು, ತಕ್ಷಣ ಮೋಟಾರು ಸೈಕಲ್ ಸವಾರ ಸಣ್ಣಹಾರಪ್ಪ, ಬಾವ ಮೈದುನ ಶ್ರೀಧರ್   ರವರು  ಗಾಯಾಳುವನ್ನು  ಚಿಕಿತ್ಸೆ ಬಗ್ಗೆ  ಶಿರಾ  ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ  ವೈದ್ಯರ ಸಲಹೆ ಮೇರೆಗೆ  ಹೆಚ್ಚಿನ ಚಿಕಿತ್ಸೆಗಾಗಿ  ತುಮಕೂರು ಜನರಲ್ ಆಸ್ಪತ್ರೆ,  ಬೆಂಗಳೂರಿನ ನಿಮ್ದಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ  ಚಿಕಿತ್ಸೆ ಕೊಡಿಸಿ ನಂತರ ವೈದ್ಯರ ಸಲಹೆ ಮೇರೆಗೆ ದಿ:25-02-17 ರಂದು ತುಮಕೂರು ಆಸ್ಪತ್ರೆಗೆ ಕರೆದುಕೊಂಡು ಬಂದು ಒಳ ರೋಗಿಯಾಗಿ ದಾಖಲಿಸಿ  ಚಿಕಿತ್ಸೆ ಕೊಡಿಸಿದ್ದು, ಈ  ಅಪಘಾತಕ್ಕೆ ಕಾರಣನಾದ ಕೆಎ-04-ಜೆಜಿ-1613 ನೇ  ಮೋಟಾರು ಸೈಕಲ್ ಸವಾರನ ಮೇಲೆ ಕಾನೂನು  ರೀತ್ಯಾ ಕ್ರಮ ಕೈಗೊಳ್ಳಲು   ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ

 


Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 81 guests online
Content View Hits : 212387