lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< March 2017 >
Mo Tu We Th Fr Sa Su
    1 2 3 4 5
7 8 9 10 11 12
13 14 15 16 17 18 19
20 21 22 23 24 25 26
27 28 29 30 31    
Monday, 06 March 2017
Crime Incidents 06-03-17

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.20/2017,ಕಲಂ:279,337 IPC .

ದಿನಾಂಕ:05/03/2017 ರಂದು ಮದ್ಯಾಹ್ನ 01:30 ಗಂಟೆಗೆ ಪಿರ್ಯಾದಿ ರಂಗನಾಥ ಬಿನ್ ಹರಿಯಪ್ಪ, 18 ವರ್ಷ, ಆದಿಕರ್ನಾಟಕ ಜನಾಂಗ, ಹೆಚ್.ಬಸವನಹಳ್ಳಿ ಗ್ರಾಮ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ:05/03/2017 ರಂದು ನಾನು, ನನ್ನ ತಂದೆ ಹರಿಯಪ್ಪನವರು ನನ್ನ ತಂಗಿಯ ಮದುವೆ ಇದ್ದುದ್ದರಿಂದ ಹಾಲು ತರಲು ನಮ್ಮ ಗ್ರಾಮದದಿಂದ ನಾನು ಮತ್ತು ನಮ್ಮ  ತಂದೆ ಹೊಸಕೆರೆಗೆ ಹೋಗುತ್ತಿರುವಾಗ ಮಧುಗಿರಿ-ಪಾವಗಡ ರಸ್ತೆಯಲ್ಲಿ ಹೊಸಕೆರೆ ಸೇತುವೆ ಹತ್ತಿರ ಬೆಳಿಗ್ಗೆ 06:00 ಗಂಟೆಗೆ ಮಧುಗಿರಿ ಕಡೆಯಿಂದ ಹಿಂಬದಿಯಿಂದ ಬರುತ್ತಿದ್ದ ವಾಹನದ ಚಾಲಕ ಅತಿವೇಗ ಮತ್ತು ಅಜಾಗರುಕತೆಯಿಂದ ಓಡಿಸಿಕೊಂಡು ಬಂದು ನನ್ನ ತಂದೆಯಾದ ಹರಿಯಪ್ಪನಿಗೆ ಡಿಕ್ಕಿ ಹೊಡೆಸಿದ ಪರಿಣಾಮವಾಗಿ ನನ್ನ ತಂದೆಗೆ ತಲೆಯ ಹಿಂಭಾಗಕ್ಕೆ, ಬಲ ಮುಖಕ್ಕೆ, ಎಡಕೈ ಮೊಣಕೈಗೆ ಹಾಗೂ ಬಲ ಮಂಡಿಗೆ, ಮಂಡಿಯಿಂದ ಕೆಳಭಾಗಕ್ಕೆ, ಎಡ ಹಿಂಡಿಗೆ, ಎಡ ಭುಜಕ್ಕೆ ಪೆಟ್ಟುಬಿದ್ದು ರಕ್ತಗಾಯಗಳಾಗಿರುತ್ತವೆ. ಸದರಿ ಹಿರೋ ಹೊಂಡ ಬೈಕ್ ನಂಬರ್ ನೋಡಲಾಗಿ ಕೆಎ-64-ಕೆ-2160 ರ ಚಾಲಕ ಡಿಕ್ಕಿ ಹೊಡೆಸಿದ ಪರಿಣಾಮವಾಗಿ ನಮ್ಮ ತಂದೆಗೆ ಗಾಯಗಳು ಉಂಟಾಗಿರುತ್ತದೆ. ಸದರಿ ಬೈಕ್ ಚಾಲಕನಿಗೂ ಸಹ ತಲೆಗೆ, ಮುಖಕ್ಕೆ, ಎರಡು ಕೈಗಳಿಗೂ ಪೆಟ್ಟು ಬಿದ್ದು ಗಾಯಗಳಾಗಿರುತ್ತವೆ. ಸದರಿ ಬೈಕ್ ಚಾಲಕನನ್ನು ನಮ್ಮ ಗ್ರಾಮದ ಬಿ.ಪಿ.ನಾಗರಾಜು ಬಿನ್ ಪಾತಯ್ಯ ರವರು ಸದರಿ ಗಾಯಾಳುವನ್ನು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ನಮ್ಮ ತಂದೆಯನ್ನು ನಾನು ಹೊಸಕೆರೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿರುತ್ತೇನೆ. ಬೈಕ್ ಚಾಲಕನ ಹೆಸರು, ವಿಳಾಸ ಗೊತ್ತಿರುವುದಿಲ್ಲ. ಆದ್ದರಿಂದ ಮೇಲ್ಕಂಡ ವಾಹನದ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ನೀಡಿದ ಪಿರ್ಯಾದು ಅಂಶವಾಗಿರುತ್ತೆ.

 

ಸಿ.ಎಸ್.ಪುರ ಠಾಣಾ ಯು.ಡಿ.ಆರ್ ನಂ:03/2017. ಕಲಂ:174 ಸಿ.ಆರ್.ಪಿ,.ಸಿ

ದಿನಾಂಕ:05.03.2017 ರಂದು ಪಿರ್ಯಾದುದಾರರಾದ ಕಾಡಯ್ಯ  ಬಿನ್ ಲೇಟ್ ತಿಮ್ಮಯ್ಯ, ಹನುಮಂತಪುರ ಗ್ರಾಮ, ಗುಬ್ಬಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ಬೆಳಗ್ಗೆ 8.30 ಗಂಟೆಗೆ ನೀಡಿದ ದೂರಿನ ಸಾರಾಶವೆಂದರೆ, ನನಗೆ 4 ಜನ ಮಕ್ಕಳಿದ್ದು, 3 ಜನ  ಗಂಡು ಹಾಗೂ ಒಂದು ಹೆಣ್ಣು ಮಗಳಿದ್ದು, ನಾನು ಮೊದಲನೇ ಮಗನಾದ  ವೆಂಕಟೇಶ್ ನಿಗೆ ಸುಮಾರು 12 ವರ್ಷಗಳಿಂದ ಮನಸ್ಥಿತಿ ಸರಿಯಾಗಿ ಇಲ್ಲದಿರುವುದರಿಂದ  ಹಾಗೂ ಸರಿಯಾಗಿ ಕೆಲಸ ಕಾರ್ಯ ಮಾಡುತಿಲ್ಲಾವಾದ್ದರಿಂದ  ಹಾಗೂ ಬುದ್ದಿ ಸರಿಯಾಗಿ ಇಲ್ಲದೇ ಇದ್ದುದರಿಂದ ಇವನಿಗೆ ಮದುವೆ ಮಾಡಿರಲಿಲ್ಲಾ, ಈಗಿರುವಾಗ  ದಿನಾಂಕ:04..03.2017 ರಂದು ಬೆಳಗ್ಗೆ 10.00 ಗಂಟೆ ಸಮಯದಲ್ಲಿ  ಮನೆಯಲ್ಲಿ ಕಾಳುಗಳಿಗೆ ಹುಳು ಬೀಳದಂತೆ ಹಾಕಲು ತಂದಿದ್ದ  ಮಾತ್ರೆಯನ್ನು  ಅವನು ನುಂಗಿದ್ದು, ಮಧ್ಯಾಹ್ನ 2 ಗಂಟೆ ಸಮಯದಲ್ಲಿ  ನಮ್ಮ ಮಗನಾದ ವೆಂಕಟೇಶನು ಮನೆಯ ಮುಂದೆ ವಾಂತಿಯನ್ನು ಮಾಡಿಕೊಳ್ಳುತಿದ್ದನ್ನು ನಾವುಗಳು ನೋಡಿ ವಿಚಾರ ಮಾಡಲಾಗಿ ನಾನು  ಮನೆಯಲ್ಲಿ ತಂದಿಟ್ಟಂತಹ ಕಾಳುಗಳಿಗೆ ಹಾಕಲು ತಂದಿದ್ದ ಮಾತ್ರೆಗಳನ್ನು ನುಂಗಿರುವುದಾಗಿ ತಿಳಿಸಿದ್ದು, ತಕ್ಷಣ ನನ್ನ ಅಣ್ಣನ ಮಗನಾದ ನರಸಿಂಹ ಮೂರ್ತಿ , ನಮ್ಮ  ಗ್ರಾಮದದ ನಾಗೇಶ & ನಾಗ ಇವರುಗಳು ಯಾವುದೋ  ಒಂದು ವಾಹನದಲ್ಲಿ ತುಮಕೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ  ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ವೆಂಕಟೇಶನು ದಿ:05.03.2017 ರಂದು 1.45 AM. ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾರೆ ಇತ್ಯಾದಿಯಾಗಿ ದೂರಿನ ಮೇರೆಗೆ  ಪ್ರಕರಣ ದಾಖಲಿಸಿರುತ್ತೆ.

 

ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ ನಂ. 56/2017 ಕಲಂ 447, 504, 506, r/w 34 IPC ಜೊತೆಗೆ ಕಲಂ 3 ಕ್ಲಾಸ್ (1) (f), (r), (s), 3 ಕ್ಲಾಸ್ (2) (v.a) Sc/St Act 2015

ದಿನಾಂಕ:05/03/2017 ರಂಧು ಮದ್ಯಾಹ್ನ 2-15 ಗಂಟೆಗೆ ತುಮಕೂರು ತಾಲ್ಲೋಕ್ ಕೋರಾ ಹೋಬಳಿ, ಜಕ್ಕೇನಹಳ್ಳಿ ಗ್ರಾಮದ ಲೇಟ್ ಮುದ್ದೋಬಳಯ್ಯನವರ ಮಗ ಸುಮಾರು 56ವರ್ಷ ವಯಸ್ಸಿನ ಎಂ. ರಾಮಯ್ಯ ರವರು ನೀಡಿದ ದೂರಿನ ಅಂಶವೇನೆಂದರೆ, ಜಕ್ಕೇನಹಳ್ಳಿ ಗ್ರಾಮದ ಸರ್ವೆ ನಂ 62/1, 62/2, 62/4, 62/5, 62/7, 62/13, 62/14, 62/15 ರಲ್ಲಿ ಮತ್ತು 17/1, 17/13, 17/14, 17/10 ಈ ಜಮೀನುಗಳು ಅಂದಿನ ಮೈಸೂರು ಸರ್ಕಾರ ಇದ್ದಾಗ ಸ್ಪೇಷಲ್ ಪರ್ಮನಂಟ್ ಗ್ರಾಂಟ್ ಅಡಿಯಲ್ಲಿ ದರಖಾಸ್ತ ಮೂಲಕ ನಮ್ಮ ತಾತನವರಿಗೆ ಮಂಜೂರಾಗಿದ್ದು ಅದು ನಮ್ಮ ವಂಶಸ್ಥರ ಅನುಭವದಲ್ಲಿದ್ದ ಜಮೀನಾಗಿದ್ದು ಕಂದಾಯ ದಾಖಲೆಗಳಲ್ಲಿ ನಮ್ಮ ವಂಶದ ಪೂರ್ವಿಕರ ಹೆಸರು ಇದ್ದು, ಈಗ ನಾವುಗಳು ಅನುಭವಿಸಿಕೊಂಡು ಬರುತ್ತಿರುವಾಗ್ಗೆ ಇತ್ತೀಚೆಗೆ ನಮ್ಮ ಜಕ್ಕೇನಹಳ್ಳಿ ವಾಸಿಗಳಾದ 1) ಶಾಂತಕುಮಾರ ಬಿನ್ ಲೇಟ್ ರಾಮಚಂದ್ರಯ್ಯ 2) ಮುತ್ತುರಾಜು ಬಿನ್ ರಾಮಚಂದ್ರಯ್ಯ 3) ಮುತ್ತುರಾಮಯ್ಯ ಬಿನ್ ಸಿದ್ದರಾಮಯ್ಯ 4) ಪುಟ್ಟರಂಗಯ್ಯ ಬಿನ್ ಸಿದ್ದರಾಮಯ್ಯ 5) ಸಣ್ಣಪ್ಪ ಬಿನ್ ಲೇಟ್ ಸಿದ್ದರಾಮಯ್ಯ 6) ಶ್ರೀರಾಮಯ್ಯ ಬಿನ್ ಲೇಟ್ ಗವಿಸಿದ್ದಯ್ಯ 7) ಬಲರಾಮಯ್ಯ ಬಿನ್ ಲೇಟ್ ಗವಿಸಿದ್ದಯ್ಯ 8) ರಾಮಯ್ಯ ಬಿನ್ ಲೇಟ್ ಮುತ್ತುರಾಯಪ್ಪ 9) ಮೀನಯ್ಯ ಬಿನ್ ಲೇಟ್ ಮುತ್ತುರಾಯಪ್ಪ ಇವರೆಲ್ಲರೂ ಸೇರಿ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ಜಮೀನಿಗೆ ಸಂಭಂದಿಸಿದ ದಾಖಲಾತಿಗಳನ್ನು ದುರುದ್ದೇಶದಿಂದ ತಿದ್ದಿಕೊಂಡಿರುತ್ತಾರೆ. ಈ ಬಗ್ಗೆ ನಾವು ಜಮೀನಿಗೆ ಸಂಭಂದಪಟ್ಟ ದಾಖಲಾತಿಗಳನ್ನು ತೆಗೆದುಕೊಂಡು ದಿನಾಂಕ:06-08-2016 ರಂದು ಮದ್ಯಾಹ್ನ ಸುಮಾರು 12-00 ಗಂಟೆ ಸಮಯದಲ್ಲಿ ಮೇಲ್ಕಂಡ ನಮ್ಮ ಜಮೀನನ್ನು ನಮಗೆ ಬಿಟ್ಟುಕೊಡುವಂತೆ ಕೇಳಲಾಗಿ ಮೇಲ್ಕಂಡವರು ನಮ್ಮ ಜಮೀನಿಗೆ ಅಕ್ರಮ ಪ್ರವೇಶ ಮಾಡಿ, ನಮಗೆ ಅವಾಚ್ಯ ಶಬ್ದಗಳಿಂದ ಮಾದಿಗ ನನ್ನ ಮಕ್ಕಳು ಜಮೀನು ನಾವು ಉಳುಮೆ ಮಾಡುತ್ತೇವೆ ಎಂದು ದೌರ್ಜನ್ಯದಿಂದ ಹೆದರಿಸಿ ಕೊಲೆ ಬೆದರಿಕೆ ಹಾಕಿ ನಮ್ಮ ಸ್ವಾಧೀನಾನುಭವಕ್ಕೆ ತಂಟೆ ಮಾಡಿರುತ್ತಾರೆ. ಪಿರ್ಯಾದಿಯವರು ಜಮೀನಿಗೆ ಸಂಬಂದಿಸಿದ ದಾಖಲಾತಿಗಳನ್ನು ಸಂಬಂದಪಟ್ಟ ಕಛೇರಿಯಿಂದ ಪಡೆದು ಈ ದಿನ ತಡವಾಗಿ ಬಂದು ನೀಡಿದ ದೂರನ್ನು ಪಡೆದು  ಪ್ರಕರಣ ದಾಖಲಿಸಿದೆ.

 

ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ 57/2017 279, 337 ಐಪಿಸಿ.

ದಿನಾಂಕ:05/03/2017 ರಂದು ಮದ್ಯಾಹ್ನ 3-30 ಗಂಟೆಗೆ ತುಮಕೂರು ತಾಲ್ಲೋಕ್ ಬೆಳ್ಳಾವಿ ಹೋಬಳಿ ಲಿಂಗನಹಳ್ಳಿ ಗ್ರಾಮದ ಹರೀಶ ಎಲ್ ಕೆ ಬಿನ್ ಕರಿರಂಗಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಮ್ಮ ಸಂಬಂದಿ ಸಿದ್ದಗಂಗಯ್ಯ ಹೆಚ್ ಕೆ ಬಿನ್ ಕುಮಾರ್ ರವರು ದಿನಾಂಕ:28/02/2017 ರಂದು ಕೆಲಸದ ಪ್ರಯುಕ್ತ ಹಬ್ಬತ್ತನಹಳ್ಳಿಯಿಂದ ಮಲ್ಲಸಂದ್ರಕ್ಕೆ ಹೋಗಲು ಅವರ ಬಾಬ್ತು KA-06-EM-6944 ನೇ ದ್ವಿಚಕ್ರ ವಾಹನದಲ್ಲಿ ಹಬ್ಬತ್ತನಹಳ್ಳಿ ಗೇಟ್ ಸಮೀಪ ರಾತ್ರಿ 8-00 ಗಂಟೆ ಸಮಯದಲ್ಲಿ ಹೋಗುತ್ತಿರುವಾಗ್ಗೆ ಮಲ್ಲಸಂದ್ರ ಕಡೆಯಿಂದ KA-06-EX-0215 ನೇ ದ್ವಿಚಕ್ರ ವಾಹನದ ಸವಾರ ರಂಗಸ್ವಾಮಿ ರವರು ತನ್ನ ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಬಸ್‌ನ್ನು ಓವರ್‌ಟೇಕ್ ಮಾಡಲು ಹೋಗಿ ಸಿದ್ದಗಂಗಯ್ಯ ರವರು ಹೋಗುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆಸಿ ಅಪಘಾತ ಉಂಟುಮಾಡಿದ್ದರಿಂದ ಎರಡು ವಾಹನಗಳು ಜಖಂಗೊಂಡಿದ್ದು, ಸಿದ್ದಗಂಗಯ್ಯ ರವರಿಗೆ ದವಡೆಗೆ, ಮುಖಕ್ಕೆ, ಬಾಯಿಗೆ, ಹಲ್ಲುಗಳಿಗೆ, ತಲೆಗೆ, ಕೆನ್ನೆಗೆ ಏಟುಗಳು ಬಿದ್ದು ರಕ್ತಗಾಯಗಳಾಗಿದ್ದು, ನಾವು ಸಿದ್ದಗಂಗಯ್ಯ ರವರನ್ನು ಚಿಕಿತ್ಸೆ ಬಗ್ಗೆ ತುಮಕೂರಿನ ಟಿ.ಹೆಚ್.ಎಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ವಿನಾಯಕ ಆಸ್ಪತ್ರೆಗೆ ಒಳರೋಗಿಯಾಗಿ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದು ನಮ್ಮ ಮಾವನನ್ನು ನೋಡಿಕೊಳ್ಳಲು ಇರದ ಕಾರಣ ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ ಬಂದು KA-06-EX-0215 ನೇ ದ್ವಿಚಕ್ರ ವಾಹನದ ಸವಾರ ರಂಗಸ್ವಾಮಿ ರವರ ಮೇಲೆ ಕಾನೂನು ಕ್ರಮ ಜರುಗಿಸಲು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿದೆ.

ಜಯನಗರ ಪೊಲೀಸ್ ಠಾಣಾ ಮೊ.ನಂ. 32/2017 ಕಲಂ 4, 76 CHIT FUNDS ACT 1982 & 5, 37, 38 KARNATAKA MONEY LENDERS ACT 1961 ರೆ/ವಿ 406, 420 ರೆ.ವಿ 34 ಐಪಿಸಿ

ದಿನಾಂಕ: 05-03-2017 ರಂದು ಸಂಜೆ 4-30 ಗಂಟೆಗೆ ತುಮಕೂರು ಟೌನ್‌, ಜಯನಗರ ಪಶ್ಚಿಮದಲ್ಲಿ ವಾಸವಾಗಿರುವ ಕಾವ್ಯ ಎಸ್‌.ಪಿ ಕೋಂ ಮನು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ಶ್ರೀ ಮಹಾಲಕ್ಷ್ಮಿ ವೆಂಕಟೇಶ್ವರ ಗೋಲ್ಡ್‌ ಮತ್ತು ಲಕ್ಕಿ ಸ್ಕೀಂನ ಏಜೆಂಟ್‌‌ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ನಮ್ಮ ಬಡಾವಣೆಯಲ್ಲಿ ವಾಸವಾಗಿರುವ ನಿರ್ಮಲ ಕೋಂ. ಪುಟ್ಟಣ್ಣ ಎಂಬಾಕೆಯು ನಮಗೆ ಪರಿಚಯಸ್ತರಾಗಿ ಸದರಿ ನಿರ್ಮಲ ರವರು ನಮಗೆ ಪ್ರಭಾವತಿ ರವರನ್ನು ಪರಿಚಯಿಸಿ ನಮಗೆಲ್ಲಾ ವಿವಿಧ ರೀತಿಯ ಹಣ ಹೂಡಿಕೆಯ ಸ್ಕೀಂಗಳನ್ನು ಪರಿಚಯಿಸಿರುತ್ತಾರೆ.  ಸದರಿ ಹಣದ ಸ್ಕೀಂ ಯೋಜನೆಯಲ್ಲಿ 100/- ರೂಗಳಂತೆ 12 ತಿಂಗಳು ಕಟ್ಟಿದರೆ ಅಸಲು 1200=00 ಮತ್ತು ಬಡ್ಡಿ 300 ರೂಗಳನ್ನು ಸೇರಿಸಿ 1,500/- ರೂ. ಕೊಡುತ್ತೇವೆ.  ಇದೇ ರೀತಿ 200 ರೂ. 1000/- 5000/- ರೂ, 25,000/- ರೂಗಳನ್ನು ಕಟ್ಟಿದರೆ ಹಣಕ್ಕೆ ತಕ್ಕಂತೆ ಅಸಲು ಮತ್ತು ಬಡ್ಡಿಯನ್ನು ಕೊಡುತ್ತೇನೆ.  ನಾವು ಸಂಬಂಧಪಟ್ಟ ಇಲಾಖೆಯಿಂದ ಲೈಸೆನ್ಸ್‌‌‌ ಪಡೆದುಕೊಂಡಿರುತ್ತೇವೆ.  ಆದ್ದರಿಂದ ನೀನು ನಮ್ಮ ಲಕ್ಕಿ ಸ್ಕಿಂಗೆ ಏಜೆಂಟ್‌‌ ಆಗಿ ಜನರಿಂದ ಹಣವನ್ನು ಕಟ್ಟಿಸಿಕೊಂಡು ಪ್ರತಿಕಾರ್ಡಿಗೆ 500/- ರೂ.ಗಳಂತೆ ಕಮಿಷನ್‌‌ ಕೊಡುತ್ತೇವೆ  ಎಂತಾ ನನಗೆ ಪ್ರಭಾವತಿ ಹಾಗೂ ನಿರ್ಮಲ ರವರು ಬಲವಂತ ಮಾಡಿ ನನಗೆ ನಂಬಿಕೆ ಬರುವಂತೆ ಆಸೆ ಹುಟ್ಟಿಸಿ ನನ್ನನ್ನು ಏಜೆಂಟ್ ಮಾಡಿಸಿಕೊಂಡಿದ್ದರಿಂದ  ನಾನು ತುಮಕೂರು ಪಟ್ಟಣದಲ್ಲಿ ಶ್ರೀ ಮಹಾಲಕ್ಷ್ಮಿ ವೆಂಕಟೇಶ್ವರ ಗೋಲ್ಡ್‌‌ ಮತ್ತು ಲಕ್ಕೀ ಸ್ಕೀಂಗೆ ಸುಮಾರು ಜನರಿಂದ 100=00, 200=00, 1000=00, 5000=00, 20,000=00, 25,000=00 ರೂ.ಗಳಂತೆ ಕಾರ್ಡ್‌ಗಳನ್ನು ಮತ್ತು 2 ವರ್ಷದ ನಿಶ್ಚಿತ ಠೇವಣಿ ರೂಪದ ಕಾರ್ಡಗಳನ್ನು ನಿರ್ಮಲ ಹಾಗೂ ಪ್ರಭಾವತಿ ರವರು ಕಟ್ಟಿಸಿಕೊಂಡಿರುತ್ತಾರೆ.  ನನಗೆ ಪ್ರಭಾವತಿ ಹಾಗೂ ನಿರ್ಮಲ ರವರು ಮೊದ ಮೊದಲು ನನಗೆ ನಂಬಿಕೆ ಬರುವ ರೀತಿಯಲ್ಲಿ ಮೇಲ್ಕಂಡಂತೆ ಜನರಿಂದ ಸಂಗ್ರಹಿಸಿ ನೀಡಿರುವ ಅಸಲು ಮತ್ತು ಬಡ್ಡಿಯನ್ನು ನೀಡುತ್ತಿದ್ದರು.  ನಂತರ ಪ್ರಭಾವತಿ ರವರು 20,000=00 ರೂ.ಗಳನ್ನು ಒಂದೇ ಸಲ ಕಟ್ಟಿದ ನಂತರ 4 ತಿಂಗಳು ಪ್ರತಿ ತಿಂಗಳು ಸಾವಿರ ರೂ ಕಟ್ಟಿದ 5 ನೇ ತಿಂಗಳಲ್ಲಿ ಅಸಲು 24,000=00, ಬಡ್ಡಿ 12,000=00 ರೂ.ನಂತೆ ಒಟ್ಟು 36,000=00 ರೂ.ಗಳಂತೆ ಹಾಗೂ 20,000 ರೂ.ಗಳನ್ನು ಒಂದೇ ಸಲ ಕಟ್ಟಿದ ನಂತರ 11 ತಿಂಗಳು ಪ್ರತಿ ತಿಂಗಳು 1000 ರೂ. ಕಟ್ಟಿದ 12 ನೇ ತಿಂಗಳಲ್ಲಿ ಅಸಲು 31,000 ಬಡ್ಡಿ 21,000 ರೂ.ನಂತೆ ಒಟ್ಟು 52,000 ರೂ.ಗಳಂತೆ ಹಾಗೂ 25,000 ರೂ.ಗಳಲ್ಲಿ ಒಂದೇ ಸಲ ಕಟ್ಟಿದ ನಂತರ 6 ತಿಂಗಳು ಪ್ರತಿ ತಿಂಗಳು 1000 ರೂ ಕಟ್ಟಿದ 7 ನೇ ತಿಂಗಳಲ್ಲಿ ಅಸಲು 31,000 ಬಡ್ಡಿ 19,840 ರೂ ನಂತೆ ಒಟ್ಟು 50,840 ರೂ.ಗಳಂತೆ ಹಾಗೂ ಒಂದೇ ಸಲ 1,00,000 ರೂ ಕಟ್ಟಿದ 2 ತಿಂಗಳ ನಂತರ ಅಸಲು ಒಂದು ಲಕ್ಷ ಮತ್ತು ಬಡ್ಡಿ 25 ಸಾವಿರ ರೂ ಸೇರಿಸಿ ಒಟ್ಟು 1,25,000 ರೂ. ಹಣ ಕೊಡುವುದಾಗಿ ಹೇಳಿದ್ದರಿಂದ ನಾನು ನನ್ನ ಪರಿಚಯಸ್ಥ ಜನರಿಂದ ಹಣವನ್ನು ಸಂಗ್ರಹಿಸಿ ಪ್ರಭಾವತಿ ರವರನ್ನು ನಿರ್ಮಲ ರವರ ಮನೆಗೆ ಕರೆಸಿಕೊಂಡು ನಿರ್ಮಲ ರವರ ಮನೆಯಲ್ಲಿ ಸುಮಾರು 8-10 ವರ್ಷಗಳ ಕಾಲ ಈ ಸ್ಕೀಂ ನಡೆಯುತ್ತಾ ಬಂದಿದ್ದು, 4 ವರ್ಷಗಳಿಂದ ನಾನು ಈ ಸ್ಕೀಂ ಏಜೆಂಟಳಾಗಿರುತ್ತೇನೆ.  ಪ್ರತಿ ತಿಂಗಳು 11 ನೇ ತಾರೀಖು ಹಣವನ್ನು ನಮ್ಮಿಂದ ಕಟ್ಟಿಸಿಕೊಳ್ಳುವುದು ಹಾಗೂ 20 ನೇ ತಾರೀಖಿನಂದು ಮರು ಪಾವತಿಸುವುದು ಈ ರೀತಿಯ ವ್ಯವಹಾರಗಳನ್ನು ತುಮಕೂರು ಟೌನ್ ಜಯನಗರ ಪಶ್ಚಿಮ ಬಡಾವಣೆಯಲ್ಲಿ ವಾಸವಾಗಿರುವ ನಿರ್ಮಲ ಎಂಬುವರ ಮನೆಯಲ್ಲಿ ಪ್ರಭಾವತಿ ಹಾಗೂ ನಿರ್ಮಲ ಇಬ್ಬರೂ ಸೇರಿಕೊಂಡು ಮಾಡಿಕೊಂಡು ಬಂದಿರುತ್ತಾರೆ.  ಪ್ರಭಾವತಿ ಹಾಗೂ ನಿರ್ಮಲ ರವರುಗಳು 2016 ರಿಂದ ಯಾವುದೇ ಏಜೆಂಟ್‌‌‌ಗಳಿಗೂ ಮರು ಪಾವತಿಸಿರುವುದಿಲ್ಲ.  ನಂಬರ್‌‌ 2016 ರಿಂದ ನೀಡಬೇಕಾದ ಹಣವನ್ನು ಫೆಬ್ರವರಿ 2017 ರಲ್ಲಿ ನೀಡುವುದಾಗಿ ನಂಬಿಸಿ ಪ್ರಭಾವತಿ ರವರು ಏಕಾಏಕಿ ಕಾಣೆಯಾಗಿರುತ್ತಾರೆ.  ಈ ಬಗ್ಗೆ ನಿರ್ಮಲ ರವರನ್ನು ವಿಚಾರಿಸಿದಾಗ ಅವರು ನಿಮ್ಮ ಹಣಕ್ಕೆ ನಾನು ಹೊಣೆಯಲ್ಲ, ಪ್ರಭಾವತಿ ರವರೇ ಹೊಣೆ ಅವರನ್ನು ಹುಡುಕಿಕೊಂಡು ಹೋಗಿ ಎಂತಾ ಬೇಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುತ್ತಾರೆ.  ಈ ಬಗ್ಗೆ ನಾನು ಹಾಗೂ ಇತರೇ ಏಜೆಂಟರುಗಳು ನಿರ್ಮಲ ರವರ ಮನೆಗೆ ಮಾತುಕತೆಗೆ ಹೋದಾಗ ನಮ್ಮನ್ನು ನಿಂಧಿಸಿ ಹೆಚ್ಚು ಒತ್ತಾಯಿಸಿದರೆ ನಿಮ್ಮ ಹೆಸರುಗಳನ್ನು ಬರೆದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ನಮಗೆ ಬೆದರಿಕೆ ಒಡ್ಡಿರುತ್ತಾರೆ. ಇವರುಗಳನ್ನು ನಂಬಿ ನಮ್ಮ ಹಾಗೂ ಇತರರರ ಹಣವನ್ನು ಇವರುಗಳಲ್ಲಿ ಹೂಡಿದ ನಾವುಗಳು ಹಣವನ್ನು ಕಳೆದುಕೊಂಡು ಮೋಸ ಹೋಗಿದ್ದು, ನಮ್ಮ ಮೂಲಕ ಹೂಡಿಕೆ ಮಾಡಿರುವ ವ್ಯಕ್ತಿಗಳು ನಮ್ಮನ್ನು ಹಣ ಹಿಂದಿರುಗಿಸುವಂತೆ ಒತ್ತಾಯಿಸುತ್ತಿರುತ್ತಾರೆ.  ಹಾಗೂ ನಮ್ಮ ಮನೆಗಳಿಗೆ ಬಂದು ಗಲಾಟೆ ಮಾಡುತ್ತಿರುತ್ತಾರೆ. ನಾನು ಹಾಗೂ ವೇದಾವತಿ ಕೋಂ. ಮಹೇಶ್ ರವರು ಜನರಿಂದ   ಹಣ ಸಂಗ್ರಹಿಸಿ ನಿರ್ಮಲ ರವರ ಮನೆಯಲ್ಲಿ ಪ್ರಭಾವತಿ ರವರಿಗೆ ಹಣ ಕೊಟ್ಟಿದ್ದು, ನಾನು ಪ್ರಭಾವತಿ ರವರಿಗೆ ಕೊಟ್ಟಿರುವ ಹಣ 25,00,000/- ರೂ. ಬಡ್ಡಿ 10,00,000/- ರೂ. ಹಣ ಒಟ್ಟು 35,00,000/- ರೂ.  ವೇದಾವತಿ ರವರು 24,00,000/- ರೂ. ಬಡ್ಡಿ 10,00,000/- ಒಟ್ಟು 34,00,000/- ರೂ., ಇಬ್ಬರಿಂದ 69,00,000/- ರೂಗಳನ್ನು ನಮಗೆ ವಾಪಾಸ್ಸು ನೀಡದೆ ಮೋಸ ಮಾಡಿರುತ್ತಾರೆ. ನಮ್ಮಂತೆ ಇತರೇ ಸುಮಾರು 20 ರಿಂದ 25 ಜನರಿಗೆ ಸುಮಾರು 20 ಕೋಟಿಗೂ ಹೆಚ್ಚು ಹಣವನ್ನು ಕೊಡದೇ ಮೋಸ ಮಾಡಿರುತ್ತಾರೆ.  ಆದ್ದರಿಂದ ಪ್ರಭಾವತಿ ರವರು ಸರ್ಕಾರದಿಂದ ಯಾವುದೇ ಲೈಸನ್ಸ್‌‌‌‌ ಪಡೆಯದೆ ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ನಿರ್ಮಲ ರವರನ್ನು ಜೊತೆಗೆ ಹಾಕಿಕೊಂಡು ನಿರ್ಮಲ ರವರ ಮನೆಯಲ್ಲಿ ಸ್ಕೀಂ ಚೀಟಿ ವ್ಯವಹಾರ ನಡೆಸುತ್ತಾ ನಮಗೆ ಸುಳ್ಳು ಮಾಹಿತಿ ನೀಡಿ ಹಾಗೂ ನಮಗೆ ನಂಬಿಕೆ ಬರುವ ಹಾಗೆ ಆಸೆ ಹುಟ್ಟಿಸಿ ಮೋಸ ಮಾಡಿರುತ್ತಾರೆ.  ಈ ಘಟನೆಯು ತುಮಕೂರು ಟೌನ್ ಸಪ್ತಗಿರಿ ನಿಲಯ, 3 ನೇ ಅಡ್ಡರಸ್ತೆ, ಜಯನಗರ, ಪಶ್ಚಿಮದಲ್ಲಿರುವ ನಿರ್ಮಲ ರವರ ಮನೆಯಲ್ಲಿ ನಡೆದಿರುತ್ತೆ.  ಆದ್ದರಿಂದ ನಾವು ಜನರಿಂದ ಕಟ್ಟಿಸಿರುವ ಹಣವನ್ನು ಮೇಲ್ಕಂಡವರಿಂದ ವಾಪಾಸ್ಸು ಕೊಡಿಸಿಕೊಟ್ಟು ಇವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಪಿರ್ಯಾದು ಅಂಶವಾಗಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 41/2017 ಕಲಂ 279,337 ಐಪಿಸಿ ರೆ/ವಿ 134(ಎ&ಬಿ), 187 ಐಎಂವಿ ಆಕ್ಟ್

ದಿನಾಂಕ-05/03/2017 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದಿಯಾದ ಎಂ,ನಾಗರಾಜು ಬಿನ್‌ ಲೇ|| ಕೆ,ಮಲ್ಲಯ್ಯ, 43 ವರ್ಷ, ಒಕ್ಕಲಿಗರು, ಜಿರಾಯ್ತಿ, ಪುಲ್ಲಸಂದ್ರ, ಗೂಳೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್ ಮಾಡಿಸಿದ ಲಿಖಿತ ದೂರಿನ ಅಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ದಿನಾಂಕ: 03-03-2017 ರಂದು ನಾನು ಮತ್ತು ನನ್ನ ತಮ್ಮನಾದ ಎಂ,ಶಿವರಾಜು ಇಬ್ಬರೂ ನಮ್ಮ ಗ್ರಾಮವಾದ ಪುಲ್ಲಸಂದ್ರದಿಂದ ತುಮಕೂರಿಗೆ ಹೋಗಲೆಂದು ನಮ್ಮ ಗ್ರಾಮದ ಬಸ್‌ ಸ್ಟಾಪ್‌ನ ಬಳಿ ಶಿವಗಂಗೆ-ಹೊನ್ನುಡಿಕೆ ಟಾರ್‌ ರಸ್ತೆಯ ಪಕ್ಕ ಪುಟ್‌ಪಾತ್‌ನಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿರುವಾಗ್ಗೆ, ಸಾಯಂಕಾಲ ಸುಮಾರು 06-30 ಗಂಟೆ ಸಮಯದಲ್ಲಿ ಶಿವಗಂಗೆ ಕಡೆಯಿಂದ ಹೊನ್ನುಡಿಕೆ ಕಡೆಗೆ ಹೋಗಲು ಬಂದ ಒಂದು ದ್ವಿಚಕ್ರ ವಾಹನದ ಸವಾರ ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ರಸ್ತೆಯ ಎಡಭಾಗದಿಂದ ಎಡಭಾಗದ ಮಣ್ಣಿನ ಪುಟ್‌ಪಾತ್‌‌ಗೆ ಬಂದು ಪುಟ್‌ಪಾತ್‌‌ನಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ನನ್ನ ತಮ್ಮ ಎಂ,ಶಿವರಾಜು ರವರಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ನನ್ನ ತಮ್ಮ ಎಂ,ಶಿವರಾಜು ರವರಿಗೆ ಬಲಗಾಲಿಗೆ ಹಾಗೂ ದೇಹದ ಇತರೆ ಭಾಗಗಳಿಗೆ ಏಟು ಬಿದ್ದು ಗಾಯಗಳಾದವು. ಅಫಘಾತಪಡಿಸಿದ ದ್ವಿಚಕ್ರ ವಾಹನದ ಸವಾರನು ತನ್ನ ದ್ವಿಚಕ್ರ ವಾಹನವನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋದನು. ಅಪಘಾತಪಡಿಸಿದ ದ್ವಿಚಕ್ರ ವಾಹನದ ನಂಬರ್‌ ನೋಡಲಾಗಿ ಕೆಎ-06-ಇ.ಎನ್‌-7690 ನೇ ನಂಬರ್‌ನ ದ್ವಿಚಕ್ರ ವಾಹನವಾಗಿತ್ತು. ದ್ವಿಚಕ್ರ ವಾಹನದ ಸವಾರನ ಹೆಸರು ವಿಳಾಸ ತಿಳಿಯಲಾಗಿ ಚಿಕ್ಕಕೊರಟಗೆರೆ ಗ್ರಾಮದ ವಾಸಿಯಾದ ಕೆಂಪರಾಜು ಎಂತಾ ತಿಳಿಯಿತು. ನಂತರ ನಾನು ಹಾಗೂ ಸ್ಥಳದಲ್ಲಿಯೇ ಇದ್ದ ಚಿಕ್ಕಕೊರಟಗೆರೆ ಗ್ರಾಮದ ವಾಸಿಯಾದ ಎಲ್‌,ಗಂಗರಾಜು ಬಿನ್‌ ಲಿಂಗಪ್ಪ ಇಬ್ಬರೂ ಸೇರಿಕೊಂಡು ಗಾಯಗೊಂಡಿದ್ದ ನನ್ನ ತಮ್ಮ ಎಂ,ಶಿವರಾಜುನನ್ನು ಸ್ಥಳಕ್ಕೆ ಬಂದ 108 ಆಂಬುಲೆನ್ಸ್‌ ವಾಹನದಲ್ಲಿ ತುಮಕೂರಿನ ಹೇಮಾವತಿ ಆರ್ಥೋಪೆಡಿಕ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದೆವು. ಆದ್ದರಿಂದ ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿ ಈ ಅಪಘಾತಕ್ಕೆ ಕಾರಣನಾದ ಕೆಎ-06-ಇ.ಎನ್‌-7690 ನೇ ನಂಬರ್‌ನ ದ್ವಿಚಕ್ರ ವಾಹನದ ಸವಾರನಾದ ಕೆಂಪರಾಜು ರವರ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು, ನಾನು ನನ್ನ ತಮ್ಮ ಎಂ,ಶಿವರಾಜು ರವರಿಗೆ ಆಸ್ಪತ್ರೆಯಲ್ಲಿ ವೈದ್ಯರು ತುರ್ತಾಗಿ ಶಸ್ತ್ರ ಚಿಕಿತ್ಸೆ ಮಾಡಿಸಬೇಕೆಂದು ಹೇಳಿದ್ದರಿಂದ ನಾನು ಆಸ್ಪತ್ರೆಯಲ್ಲಿಯೇ ಇದ್ದು ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿ, ಈ ದಿವಸ ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ಅಪಘಾತಪಡಿಸಿದ ದ್ವಿಚಕ್ರ ವಾಹನ ಪುಲ್ಲಸಂದ್ರ ಗ್ರಾಮದ ಮಲ್ಲಯ್ಯ ರವರ ಮನೆಯ ಬಳಿ ನಿಲ್ಲಿಸಿರುತ್ತೆ. ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.


Crime Incidents 05-03-17

ಜಯನಗರ ಪೊಲೀಸ್ ಠಾಣಾ ಯುಡಿಆರ್ ನಂ. 08/2017 ಕಲಂ 174 ಸಿಆರ್‌ಪಿಸಿ .

ದಿನಾಂಕ: 04-03-2017 ರಂದು ರಾತ್ರಿ 7-30 ಗಂಟೆ ಸಮಯದಲ್ಲಿ ಪಿರ್ಯಾದಿ ಗುರುಶಾಂತಪ್ಪ ವಿ ಬಿನ್ ಲೇಟ್ ವೆಂಕಟಪ್ಪ, ಬಗಲಗುಂಟೆ, ಬೆಂಗಳೂರು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ,  ನನಗೆ 1 ನೇ ಶಾಲಿನಿ, 2 ನೇ ಕವಿತ ಜಿ. ರೆಡ್ಡಿ ಹಾಗೂ 3 ನೇ ವಿನಯ್‌‌ಕುಮಾರ್‌‌ ಎಂಬ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗನಿರುತ್ತಾನೆ.  ನನ್ನ 2 ನೇ ಮಗಳು ಕವಿತ ಜಿ. ರೆಡ್ಡಿಯನ್ನು ಈಗ್ಗೆ ಸುಮಾರು 12 ವರ್ಷಗಳ ಹಿಂದೆ ತುಮಕೂರು ಪಟ್ಟಣದ  ವಾಸಿ ರಂಗನಾಥ ರವರ 2 ನೇ ಮಗನಾದ ರವಿ ಆರ್‌‌ ಎಂಬುವರಿಗೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದು, ಇವರಿಗೆ ಈಗ ಸುಮಾರು 8 ವರ್ಷ ವಯಸ್ಸಿನ ಲಹರಿ @ ರಿಶು ಹಾಗೂ ಸುಮಾರು 3.1/4 ವರ್ಷ ವಯಸ್ಸಿನ ಅಂಶಿಕ ಎಂಬ ಇಬ್ಬರು ಹೆಣ್ಣು ಮಕ್ಕಳಿರುತ್ತಾರೆ. ನನ್ನ ಅಳಿಯ ಮಗಳು ಮದುವೆಯಾದಗಿನಿಂದ ಅನ್ಯೂನ್ಯವಾಗಿ ಸಂಸಾರ ಮಾಡಿಕೊಂಡಿರುತ್ತಾರೆ.  ನನ್ನ ಅಳಿಯ ಕಿರ್ಲೋಸ್ಕರ್‌‌ ಎಲೆಕ್ಟ್ರಿಕ್‌‌ ಕಂಪನಿ, ಹಿರೇಹಳ್ಳಿ ಇಂಡಸ್ಟ್ರಿಯಲ್‌‌‌ ಏರಿಯಾದಲ್ಲಿ ಕೆಲಸ ಮಾಡಿಕೊಂಡಿದ್ದರು.  ನನ್ನ ಮಗಳು ಈಗ್ಗೆ ಸುಮಾರು 2 ವರ್ಷಗಳಿಂದ ಸ್ವಂತವಾಗಿ ಕ್ರಿಸ್ಟ್ ಕಿಡ್ಸ್‌ ಎಂಬ ಹೆಸರಿನಲ್ಲಿ ಕಿಡ್ಸ್‌‌ ಕೇರ್‌‌ ಸ್ಕೂಲ್‌‌ ನಡೆಸುತ್ತಿದ್ದಳು. ನನ್ನ ಮಗಳು ಕವಿತ ಆಕೆಯ ಗಂಡ, ಮಕ್ಕಳು, ಅತ್ತೆ ಮಾವರೊಂದಿಗೆ ತುಮಕೂರು ಟೌನ್ ಬಡ್ಡಿಹಳ್ಳಿ 8 ನೇ ಕ್ರಾಸ್ ನಲ್ಲಿ ಪ್ರಕಾಶ್ ರವರ ಬಿಲ್ಡಿಂಗ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು.  ಈ ದಿನ ದಿನಾಂಕ: 04-03-2017 ರಂದು ಮದ್ಯಾಹ್ನ ಸುಮಾರು 2-45 ಗಂಟೆ ಸಮಯದಲ್ಲಿ ನನ್ನ ಅಳಿಯ ರವಿ ಆರ್‌‌‌ ನನಗೆ ಪೋನ್‌‌ ಮಾಡಿ, ನಿಮ್ಮ ಮಗಳು ಮನೆಯ ಬಾಗಿಲನ್ನು ಒಳಗಿನಿಂದ ಲಾಕ್‌‌ ಮಾಡಿಕೊಂಡು ಮನೆಯ ಒಳಗೆ ರೂಮಿನಲ್ಲಿ ಪ್ಯಾನಿಗೆ ನೇಣುಹಾಕಿಕೊಂಡು ಮೃತಪಟ್ಟು ನೇತಾಡುತ್ತಿದ್ದಾಳೆಂತಾ ವಿಚಾರ ತಿಳಿಸಿದ್ದು, ತಕ್ಷಣ ನನಗೆ ಗಾಬರಿಯಾಗಿ ನಾನು, ನನ್ನ ಹೆಂಡತಿ ಹಾಗೂ ನನ್ನ ಮಗ ವಿನಯ್‌‌ ಕುಮಾರ್‌‌ ರವರುಗಳು ತುಮಕೂರಿಗೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು, ನಮ್ಮ ಮಗಳು ಅವರ ವಾಸದ ಮನೆಯ ಮುಂಭಾಗಿಲಿನ ಕೊಲ್ಯಾಪ್ಸಬಲ್‌‌‌ ಕಬ್ಬಿಣದ ಡೋರ್‌‌ ಹಾಗೂ ಮರದ ಡೋರ್‌‌‌ ಎರಡನ್ನೂ ಒಳಗಿನಿಂದ ಲಾಕ್‌‌ ಮಾಡಿಕೊಂಡಿದ್ದು, ಮನೆಯ ಕಿಟಕಿಯ ಮೂಲಕ ರೂಮಿನಲ್ಲಿ ನೋಡಲಾಗಿ, ರೂಮಿನಲ್ಲಿ  ಪ್ಯಾನಿಗೆ ನನ್ನ ಮಗಳು ನೇಣು ಹಾಕಿಕೊಂಡು ಮೃತಪಟ್ಟು ನೇತಾಡುತ್ತಿದ್ದಳು. ಸ್ಥಳದಲ್ಲಿಯೇ ಇದ್ದ ನನ್ನ ಅಳಿಯ ರವಿಯನ್ನು ವಿಚಾರ ಮಾಡಲಾಗಿ, ನಾನು ಈ ದಿನ ಬೆಳಿಗ್ಗೆ 6-00 ಗಂಟೆಗೆ ನಾನು ಮಾಮೂಲಿನಂತೆ ಕೆಲಸಕ್ಕೆ ಹೋಗಿದ್ದು, ಕೆಲಸ ಮುಗಿಸಿಕೊಂಡು ಮದ್ಯಾಹ್ನ ಸುಮಾರು 2-30 ಗಂಟೆಗೆ ಮನೆಯ ಬಳಿಗೆ ಬಂದಾಗ ನನ್ನ ಹೆಂಡತಿಯ ದ್ವಿ ಚಕ್ರ ವಾಹನ ಮನೆಯ ಮುಂಭಾಗದಲ್ಲಿ ನಿಂತಿದ್ದು, ಮನೆಯ ಬಾಗಿಲು ಲಾಕ್‌‌ ಹಾಗಿದ್ದು, ಎಷ್ಟು ಸಾರಿ ನನ್ನ ಹೆಂಡತಿಯ ಮೊಬೈಲ್‌‌‌ಗೆ ಪೋನ್‌‌ ಮಾಡಿದರೂ ಸಹಾ ಪೋನ್‌‌ ರಿಸೀವ್‌‌ ಮಾಡಲಿಲ್ಲ ನಂತರ ಕಿಡ್ಸ್‌‌ ಸ್ಕೂಲ್‌‌ನಲ್ಲಿ ಕೆಲಸ ಮಾಡುವ ನಿರಂಜನ್‌‌ಗೆ ಪೋನ್‌ ಮಾಡಲಾಗಿ 12-30 ಗಂಟೆಗೆ ಸ್ಕೂಲ್‌‌ನಿಂದ ಹೋದರೆಂದು ತಿಳಿಸಿದ್ದು, ನಂತರ ನಾನು ಬಾಗಿಲು ತೆಗೆಯುವಂತೆ ಎಷ್ಟು ಕೂಗಿದರೂ ಸಹಾ ಬಾಗಿಲನ್ನು ತೆರೆಯದ ಕಾರಣ ಬೆಡ್‌‌ರೂಂ ನ ಕಿಟಕಿಯ ಬಳಿ ಹೋಗಿ ಯಾವುದೋ ಒಂದು ಚೂಪಾದ ಕಬ್ಬಿಣದ ಕಂಬಿಯಿಂದ ಕಿಟಕಿಯ ಲಾಕ್‌‌‌ ತೆಗೆದು ನೋಡಲಾಗಿ ನನ್ನ ಹೆಂಡತಿ ರೂಮಿನಲ್ಲಿರುವ ಪ್ಯಾನಿಗೆ ನೇಣುಹಾಕಿಕೊಂಡು ಮೃತಪಟ್ಟು ನೇತಾಡುತ್ತಿದ್ದಳೆಂತಾ ತಿಳಿಸಿದರು.  ನನ್ನ ಮಗಳು ಕವಿತಾ ಜಿ. ರೆಡ್ಡಿ ಗೆ ಆಗಾಗ ಹೊಟ್ಟೆ ನೋವು ಬರುತ್ತಿದ್ದು, ನಮ್ಮ ಬಳಿ ಹೇಳಿಕೊಳ್ಳುತ್ತಿದ್ದಳು.  ನಾವು ಆಕೆಗೆ ಒಳ್ಳೆಯ ಕಡೆ ತೋರಿಸಿಕೊಂಡು ಚಿಕಿತ್ಸೆ ಪಡೆಯುವಂತೆ ತಿಳಿಸಿದ್ದೆವು.  ನಮ್ಮ ಮಗಳು ಆಕೆಗೆ ಬರುತ್ತಿದ್ದ ಹೊಟ್ಟೆ ನೋವಿನಿಂದಲೋ ಅಥವಾ ಇನ್ಯಾವುದೋ ಕಾರಣಕ್ಕಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ ವಾಸದ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮದ್ಯಾಹ್ನ 12-30 ರಿಂದ ಮದ್ಯಾಹ್ನ 2-30 ಗಂಟೆಯ ನಡುವೆ ಮನೆಯ ಬಾಗಿಲನ್ನು ಒಳಗಿನಿಂದ ಲಾಕ್‌‌ ಮಾಡಿಕೊಂಡು ತನ್ಮೂಲಕ ತಾನೇ ಈ ರೀತಿ ನೇಣು ಹಾಕಿಕೊಂಡು ಮೃತಪಟ್ಟಿರುವಂತೆ ಕಂಡು ಬಂದಿರುತ್ತೆ. ನನ್ನ ಮಗಳ ಸಾವಿನಲ್ಲಿ ಯಾವುದೇ ಅನುಮಾನ ಇರುವುದಿಲ್ಲ.  ತಾವು ಸ್ಥಳಕ್ಕೆ ಭೇಟಿ ನೀಡಿ ಕೂಲಂಕುಶವಾಗಿ ಪರಿಶೀಲಿಸಿ, ನನ್ನ ಮಗಳ ಶವವನ್ನು ವೈದ್ಯಕೀಯ ಪರೀಕ್ಷೆ ಮಾಡಿಸಿ, ಸಾವಿನ ಬಗ್ಗೆ ಸ್ಪಷ್ಟ ಕಾರಣವನ್ನು ತಿಳಿದು ನನ್ನ ಮಗಳ ಶವವನ್ನು ಅಂತಿಮ ಸಂಸ್ಕಾರ ಮಾಡಲು ಅನುವು ಮಾಡಿಕೊಡಬೇಕೆಂದು ಪಿರ್ಯಾದು ಅಂಶವಾಗಿರುತ್ತೆ.

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 70 guests online
Content View Hits : 274838