lowborn Tumakuru District Police | Tumkur Police | Karnataka Police | Tumakuru District Police | Tumkur Police | Karnataka Police

Dr. Divya V. Gopinath IPS,
Superintendent of Police,
Tumakuru Dt., Karnataka.

Message from SP

ಪತ್ರಿಕಾ ಪ್ರಕಟಣೆ :: ದಿನಾಂಕ 12-12-2017  :: ತುಮಕೂರು ನಗರದಲ್ಲಿ ಮೂಲ ಆ.ಐ. ಸ್ಮಾಟ್‌ ಕಾರ್ಡಗಳ... >> ಪತ್ರಿಕಾ ಪ್ರಕಟಣೆ : ದಿನಾಂಕ:-05-12-2017 : ಚಾಳಿಬಿದ್ದ ಅಪರಾಧಿಗಳಿಂದ ಸುಮಾರು ಒಟ್ಟು 5, 00, 100/- ರೂ... >> ಜಯನಗರ ಪೊಲೀಸ್ ಠಾಣಾ ಮೊ.ನಂ. 156/2017 ಕಲಂ 20 (ಬಿ) ಎನ್‌.ಡಿ.ಪಿ.ಎಸ್ ಆಕ್ಟ್‌ ದಿನಾಂಕ: 25-11-2017 ರಂದು... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ   ತುಮಕೂರು ನಗರದಲ್ಲಿ ಒಂಟಿಯಾಗಿ... >>   New BEAT BEST STAFF AND BEST CRIME DETECTION BEST STAFF >> NEW BEAT BEST STAFF AND BEST CRIME DETECTION STAFF >> ಶಿರಾ ಗೇಟ್ ರಸ್ತೆಯ ಆಗಲೀಕರಣ ಹಿನ್ನಲೆ ಸಂಚಾರ ಮಾರ್ಗದಲ್ಲಿ ಬದಲಾವಣೆ. >> ಪತ್ರಿಕಾ ಪ್ರಕಟಣೆ ದಿನಾಂಕ:19-11-2017. ಅಕ್ರಮವಾಗಿ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದ... >> ಪತ್ರಿಕಾ ಪ್ರಕಟಣೆ ದಿನಾಂಕ:17-11-2017. ಮೂರು ಜನ ಅಂತರ ರಾಜ್ಯ ಕಳ್ಳರ ಬಂಧನ : 8 ಲಕ್ಷದ 50 ಸಾವಿರ... >> ದಿನಾಂಕ.17.11.2017. ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲೆ ಕಳ್ಳಂಬೆಳ್ಳ ಪೊಲೀಸ್... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ
Saturday, 04 March 2017
Crime Incidents 04-03-17

ಹೊನ್ನವಳ್ಳಿ ಪೊಲೀಸ್ ಠಾಣೆ ಮೊ ನಂ  25/2017  ಕಲಂ:279, 304(ಎ) ಐಪಿಸಿ

ದಿನಾಂಕ-03/03/2017 ರಂದು ಬೆಳಿಗ್ಗೆ 9-30 ಗಂಟೆಗೆ ಪಿರ್ಯಾದಿ ಶ್ರೀ ರವಿ ಬಿನ್ ಸಣ್ಣ ತಮ್ಮ ಶೆಟ್ಟಿ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ಪಿರ್ಯಾದಿಯ ಅಕ್ಕನ ಮಗನಾದ 20 ವರ್ಷದ ಕೀರ್ತಿ ರವರು ಆತನ ಸ್ನೇಹಿತನಾದ ಹೊಳೇನರಸಿಪುರದ ವಿಜಯಕುಮಾರನ ಜೊತೆ ಮದುವೆಗೆ ತಿಪಟೂರು ತಾ. ಕಾಳಮ್ಮ,ನಗುಡ್ಡಕ್ಕೆ ಹೋಗಲು ದಿನಾಂಕ 02-03-2017 ರಂದು ರಾತ್ರಿ 11-45 ಗಂಟೆ ಸಮಯದಲ್ಲಿ    ಕೆಎ 09 ಹೆಚ್‌ಬಿ 6254 ನೇ ಬೈಕ್‌‌ನಲ್ಲಿ ಹಿಂಬದಿಯಲ್ಲಿ ಕುಳಿತುಕೊಂಡು ಹೊನ್ನವಳ್ಳಿ ಬಸ್‌ ನಿಲ್ದಾಣ ಬಳಿ ಬಿದರೆಗುಡಿ ಹುಳಿಯಾರು ರಸ್ತೆಯ ಹುಳಿಯಾರು ಕಡೆಗೆ ಹೋಗುತ್ತಿದ್ದು ಬೈಕ್‌ನ ಚಾಲಕನಾದ ವಿಜಯಕುಮಾರನು ಬೈಕ್‌ ಅನ್ನು  ಅತೀ ಜೊರಾಗಿ ಮತ್ತು ಅಜಾಗರೂಕತೆಯಿಂದ ರಸ್ತೆಯ ಎಡ ಬದಿಯಿಂದ ಬಲ ಬದಿಗೆ ಚಾಲನೇ ಮಾಡಿ ಮೈಲು ಕಲ್ಲಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಕೀರ್ತಿಯ ತಲೆಗೆ ಬಲವಾದ ಪೆಟ್ಟು ಬಿದ್ದವನನ್ನು ಆತನ ಸ್ನೇಹಿತರಾದ ಸುನಿಲ್‌ ಮತ್ತು ಪ್ರಸನ್ನ ರವರು  108 ವಾಹನದಲ್ಲಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಅಲ್ಲಿಂದ ಕೀರ್ತಿಯನ್ನ  ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆದಲ್ಲಿ ಮೃತ ಪಟ್ಟಿರುತ್ತಾನೆ, ಈ ಅಪಘಾತಕ್ಕೆ ಕಾರಣನಾದ ಕೆಎ 09 ಹೆಚ್‌ಬಿ 6254 ಬೈಕ್‌ನ ಚಾಲಕ ವಿಜಯಕುಮಾರನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಪಾವಗಡ ಪೊಲೀಸ್ ಠಾಣಾ ಮೊ,ನಂ 42/2017 ಕಲಂ 279,304(A) IPC.

ದಿನಾಂಕ:03/03/2017 ರಂದು ಬೆಳಿಗ್ಗೆ 08-50 ಗಂಟೆಗೆ ಪಿರ್ಯಾದುದಾರರಾದ ಕೊರಟಗೆರೆ ತಾಲ್ಲೂಕ್, ತೊವಿನಕೆರೆ ಗ್ರಾಮದ ಬಸವರಾಜು ಸಿ,ಎಂ ಬಿನ್  ಮೈಲಾರಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನನ್ನ ತಮ್ಮನಾದ 26 ವರ್ಷದ ಮಂಜುನಾಥನು ದಿ:02/03/2017 ರಂದು ಆಂಧ್ರದ ಅನಂತಪುರಂ ಜಿಲ್ಲೆ, ಕೊಂಡೂರಿನ ಬಳಿ ಅವನ ಸ್ನೇಹಿತನ ಮದುವೆಗೆ ಹೋಗಲು ನಮ್ಮೂರಿನ ಹರೀಶ T R ರವರ KA06-EL-7060 Passion Pro ಬೈಕ್ ನಲ್ಲಿ ಹರೀಶನ ಜೊತೆಯಲ್ಲಿ ಹೊರಟಿದ್ದು, ಇವರ ಜೊತೆಯಲ್ಲಿ ವೆಂಕಟೇಶಮೂರ್ತಿ ಸಹ ಇನ್ನೊಂದು ಮೋಟಾರ್ ಸೈಕಲ್ ನಲ್ಲಿ ಹೋದರು. ದಿನಾಂಕ:02/03/2017 ರಂದು ವೆಂಕಟೇಶಮೂರ್ತಿ ನನಗೆ ಫೊನ್ ಮಾಡಿ ಹರೀಶ ಮತ್ತು ಮಂಜುನಾಥ ಮದುವೆ ಮುಗಿಸಿಕೊಂಡು ಪಾವಗಡ ಬಳಿ ಸ್ನೇಹಿತನ ಮನೆಗೆ ಹೋಗಲು ಹೋಗುತ್ತಿದ್ದಾಗ, ಹರೀಶ ಮೋಟಾರ್ ಸೈಕಲ್ ಓಡಿಸುತ್ತಿದ್ದು, ಮಂಜುನಾಥನು ಹಿಂದೆ ಕುಳಿತಿದ್ದನು. ಪಾವಗಡ ತಾಲ್ಲೂಕ್ ಕೊಡಮಡುಗು ಗೇಟ್ ಬಳಿ ಸಂಜೆ 5-00 ಗಂಟೆಯಲ್ಲಿ ರಸ್ತೆ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ಬೈಕ್ ರಸ್ತೆ ಬದಿಯಲ್ಲಿದ್ದ ಕಲ್ಲಿಗೆ ಗುದ್ದಿ ಅಪಘಾತವಾಗಿದ್ದು, ಮಂಜುನಾಥನಿಗೆ ತುಂಬಾ ಪೆಟ್ಟ ಬಿದ್ದು ಮೃತಪಟ್ಟಿದ್ದಾನೆ. ಮಂಜುನಾಥನ ಶವ ಪಾವಗಡ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿರುತ್ತೆ. ಎಂತ ತಿಳಿಸಿದ್ದು, ಕೂಡಲೇ ನಾನು ನನ್ನ ಸಂಭಂದಿಕರೊಂದಿಗೆ ಪಾವಗಡಕ್ಕೆ ಆಸ್ಪತ್ರೆಗೆ ಬಂದು ನೋಡಲಾಗಿ ಮಂಜುನಾಥನ ಎದೆಯ ಭಾಗಕ್ಕೆ ತುಂಭಾ ಪೆಟ್ಟು ಬಿದ್ದು ಮೂಗಿನಲ್ಲಿ ರಕ್ತ ಬಂದಿದ್ದು, ಎಡಮೊಣಕಾಲಿಗೆ ರಕ್ತಗಾಯವಾಗಿತ್ತು. ಮೇಲ್ಕಂಡ ಸ್ಥಳದಲ್ಲಿ ಹರೀಶನು ಮೋಟಾರ್ ಸೈಕಲ್ ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿ ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ಅಪಘಾತವುಂಟಾಗಿರುತ್ತೆ.  ಈ ಅಪಘಾತ ಪಡಿಸಿ ಮಂಜುನಾಥನ ಸಾವಿಗೆ ಕಾರಣನಾದ ಹರೀಶನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂತ  ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.18/2017,ಕಲಂ:279,304(A) IPC r/w 134(A&B), 187 IMV Act.

ದಿನಾಂಕ:03/03/2017 ರಂದು ಮದ್ಯಾಹ್ನ 02:30 ಗಂಟೆಗೆ ಪಿರ್ಯಾದಿ ಡಿ.ಹೆಚ್.ಉದ್ದಪ್ಪ ಬಿನ್ ಲೇ||ಮೋಟಹನುಮಂತಪ್ಪ, 50 ವರ್ಷ, ವಕ್ಕಲಿಗರು, ದವಡಬೆಟ್ಟ ಗ್ರಾಮ, ನಿಡಗಲ್ ಹೋಬಳಿ, ಪಾವಗಡ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ:03/03/2017 ರಂದು ಸುಮಾರು ಬೆಳಿಗ್ಗೆ 11:45 ಗಂಟೆಯ ಸಮಯದಲ್ಲಿ  ಚಿನ್ನೇನಹಳ್ಳಿ ಗ್ರಾಮದ ನಾಗೇಂದ್ರ ಎನ್ನುವವರು ಅಪಘಾತವನ್ನು ನೋಡಿ, ಅಪಘಾತದ ವಿಚಾರವನ್ನು ನನ್ನ ಮೊಬೈಲ್‌ ಗೆ ಪೋನ್ ಮಾಡಿ ನಿಮ್ಮ ತಮ್ಮನಾದ ನಾಗಪ್ಪನವರು ಹಾಗೂ ಲಂಬಾಣಿ ಜನಾಂಗ ತಿಮ್ಮನಾಯ್ಕನ ಮಗ ಸುಮಾರು 35 ವರ್ಷ ವಯಸ್ಸುಳ್ಳ ಗೋಪಿನಾಯ್ಕ ರವರ ಬಾಬ್ತು ಟಿವಿಎಸ್ ವಿಕ್ಟರ್ ದ್ವಿ ಚಕ್ರ ವಾಹನದಲ್ಲಿ ಮಧುಗಿರಿ-ಪಾವಗಡ ರಸ್ತೆಯಲ್ಲಿ ಮಧುಗಿರಿ ಕಡೆಗೆ ಹೋಗುತ್ತಿರುವಾಗ ಚಿನ್ನೇನಹಳ್ಳಿ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಹೋಗುತ್ತಿರುವಾಗ ಅವರಿಗೆ ಎದುರಾಗಿ ಒಂದು ಲಾರಿ ಅತಿವೇಗ ಹಾಗೂ ಅಜಾಗರುಕತೆಯಿಂದ ಓಡಿಸಿಕೊಂಡು ಬಂದು ನಿಮ್ಮ ತಮ್ಮನು ಹಾಗೂ ಗೋಪಿನಾಯ್ಕ ರವರು ಹೋಗುತ್ತಿದ್ದ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತ ಉಂಟಾಗಿದ್ದು ಸದರಿ ಅಪಘಾತದಲ್ಲಿ ಗೋಪಿನಾಯ್ಕನಿಗೆ ತಲೆಗೆ, ಮೈಕೈಗೆ ಮತ್ತು ಬಲಗಾಲಿಗೆ ತಿರ್ವ ತರದ ಪೆಟ್ಟಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದು, ಅವರ ಹಿಂಬದಿಯ ಸವಾರನಾದ ನಾಗಪ್ಪನಿಗೂ ತಲೆಗೂ, ಮೈಕೈಗೂ, ಮೊಣಕಾಲಿಗೂ ಮತ್ತೇ ಎದೆಗೂ ಮತ್ತಿತರ ಕಡೆ ತಿರ್ವ ಸ್ವರೂಪದ ಗಾಯವಾಗಿದ್ದು ಸದರಿ ಗಾಯಾಳುವನ್ನು ಚಿಕಿತ್ಸೆಗಾಗಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತೇವೆ. ಕೂಡಲೇ ಬನ್ನಿ, ಗೋಪಿನಾಯ್ಕ ರವರ ಸಂಬಂಧಿಕರಿಗೆ ಅಪಘಾತದ ವಿಷಯ ತಿಳಿಸಿ ಎಂದು ಹೇಳಿದ ಮೇರೆಗೆ ಕೂಡಲೆ ನಾನು ನಮ್ಮ ಗ್ರಾಮದ ನಾಗರಾಜು ಬಿನ್ ಹನುಮಂತಪ್ಪ ಹಾಗೂ ಚಿತ್ತಪ್ಪ ಬಿನ್ ಸಣ್ಣಪ್ಪ ಆದ ನಾವುಗಳು ಘಟನಾ ಸ್ಥಳಕ್ಕೆ ಬಂದು ನೋಡಲಾಗಿ ಗೋಪಿನಾಯ್ಕ ಸ್ಥಳದಲ್ಲಿಯೇ ಮೃತಪಟ್ಟಿರುವುದು, ಹಾಗೂ ನನ್ನ ತಮ್ಮನಾದ ನಾಗಪ್ಪನನ್ನು ಚಿಕಿತ್ಸೆಗಾಗಿ ಮಧುಗಿರಿಗೆ ಯಾವುದೋ ವಾಹನದಲ್ಲಿ ಕಳುಹಿಸಿಕೊಟ್ಟಿರುವುದು ನಿಜವಾಗಿತ್ತು ನಾನು ಅಲ್ಲಿಯೇ ಸ್ಥಳದಲ್ಲಿ ನಿಂತಿದ್ದ ಅಪಘಾತ ಉಂಟುಮಾಡಿದ ಲಾರಿ ನಂಬರ್ ನೋಡಲಾಗಿ ಸದರಿ ಲಾರಿ ನಂ.RJ-23-GA-4247 ಆಗಿತ್ತು. ಅದರ ಚಾಲಕ ವಾಹನವನ್ನು ಬಿಟ್ಟು ಪರಾರಿಯಾಗಿದ್ದು, ಕೂಡಲೇ ನಾವುಗಳು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಪೊಲೀಸರ ಸಹಾಯದಿಂದ ಗೋಪಿನಾಯ್ಕನ ಶವವನ್ನು ತಂದು ಶವಗಾರದಲ್ಲಿಟ್ಟು ಗಾಯಾಳುವಾಗಿದ್ದ ನನ್ನ ತಮ್ಮನಾದ ನಾಗಪ್ಪನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಧುಗಿರಿ ಸರ್ಕಾರಿ ವೈದ್ಯರ ಸಲಹೆ ಮೇರೆಗೆ ತುಮಕೂರಿನ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು. ನಂತರ ತುಮಕೂರು ಆಸ್ಪತ್ರೆಗೆ ಹೋಗಿದ್ದ ನನ್ನ ತಮ್ಮನಾದ ನಾಗಪ್ಪನನ್ನು ಅಲ್ಲಿನ ವೈದ್ಯರು ಪರೀಕ್ಷಿಸಿ ನಾಗಪ್ಪ ಮೃತಪಟ್ಟಿರುತ್ತಾರೆಂದು ಧೃಡೀಕರಿಸಿದರು. ಸದರಿ ಅಪಘಾತವು ಲಾರಿ ಚಾಲಕನ ಅತಿವೇಗ ಹಾಗೂ ಅಜಾಗರುಕತೆಯಿಂದಲೇ ಈ ಅಪಘಾತ ಉಂಟಾಗಿದ್ದು ಆದ್ದರಿಂದ ಮೇಲ್ಕಂಡ ಲಾರಿ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಇತ್ಯಾದಿ ದೂರಿನ ಅಂಶವಾಗಿರುತ್ತೆ.

ಹುಳಿಯಾರು ಪೊಲೀಸ್ ಠಾಣಾ ಯು.ಡಿ.ಆರ್.ನಂ 02/2017, ಕಲಂ 174 ಸಿ.ಆರ್.ಪಿ.ಸಿ.

ದಿನಾಂಕ 03/03/2017 ರಂದು ಬೆಳಿಗ್ಗೆ 10-00 ಗಂಟೆಗೆ ಪಿರ್ಯಾದಿ ನಾಗರಾಜು ಬಿನ್ ಪಾತಯ್ಯ, ಉಪ್ಪಿನಕಟ್ಟೆ, ಹಂದನಕೆರೆ ಹೋಬಳಿ, ಚಿ.ನಾ ಹಳ್ಳಿ ತಾಲ್ಲೂಕು ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ದಿನಾಂಕ 02/03/2017 ರಂದು ಸಂಜೆ ಸುಮಾರು 06-30 ಗಂಟೆ ಸಮಯದಲ್ಲಿ ನಮ್ಮ ತೋಟಕ್ಕೆ ಹೋಗಲು ಮೋಟಿಹಳ್ಳಿ ಕೆರೆಯ ಅಂಗಳದಲ್ಲಿ ಹೋಗುತ್ತಿದ್ದಾಗ ಯಾರೋ ಅಪರಿಚಿತ ವ್ಯಕ್ತಿಯು ಕೆರೆಯ ಅಂಗಳದಲ್ಲಿ ಮಲಗಿದ್ದು ಹತ್ತಿರ ಹೋಗಿ ನೋಡಲಾಗಿ ಈ ವ್ಯಕ್ತಿಯು ಮೃತಪಟ್ಟಿದ್ದು, ಈತನು ಈಗ್ಗೆ ದಿನಗಳಿಂದ ನಮ್ಮ ಗ್ರಾಮದಲ್ಲಿ  ಓಡಾಡಿಕೊಂಡಿದ್ದು ಅಲ್ಲಿ ಇಲ್ಲಿ ಮನೆಗಳಲ್ಲಿ ಊಟ ಮಾಡಿಕೊಂಡು ಎಲ್ಲೆಂದರಲ್ಲಿ ಮಲಗುತ್ತಿದ್ದನು. ಈತನು ಇದೇ ದಿನ ದಿ:02/03/2017 ರಂದು ಬೆಳಿಗ್ಗೆ 07-00 ಗಂಟೆ ಸಮಯದಲ್ಲಿ ನಮ್ಮ ತೋಟಕ್ಕೆ ಬಂದು ಎಳನೀರು ಕುಡಿದಿದ್ದು ಈತನ ಹೆಸರು ವಿಳಾಸ ದೇವರಾಜ ಜಾವಗಲ್ ಎಂತ ತಿಳಿಸಿದ್ದು ಈತನು ಬಿಳಿ ಬಣ್ಣದ ಶರ್ಟ್, ಬಿಳಿ ಬನಿಯನ್, ಕಾಫಿ ಕಲರ್ ಅಂಡರ್ ವೇರ್ & ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು, ಈತನು ಯಾವುದೋ ಖಾಯಿಲೆಯಿಂದ ನರಳಿ ಸರಿಯಾಗಿ ಊಟ ತಿಂಡಿ ತಿನ್ನದೇ ಮೃತಪಟ್ಟಿದ್ದು ಈತನ ಸಾವಿನಲ್ಲಿ ಬೇರೆ ಯಾವುದೇ ಅನುಮಾನಗಳು ಇರುವುದಿಲ್ಲ. ಆದ್ದರಿಂದ ತಾವುಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವಾರಸುದಾರರ ಪತ್ತೆಮಾಡಿ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಈ ದಿನ ತಡವಾಗಿ ನೀಡಿದ ಲಿಖಿತ ದೂರಿನ ಮೇರೆಗೆ ಯು.ಡಿ ಪ್ರಕರಣ ದಾಖಲಿಸಿರುತ್ತೆ.

ಕಳ್ಳಂಬೆಳ್ಳ ಪೊಲೀಸ್ ಠಾಣಾ ಮೊ.ನಂ.54/2017  ಕಲಂ: 279, 337 IPC R/W 187 IMV Act

ದಿನಾಂಕ: 03/03/2017 ರಂದು ರಾತ್ರಿ 7-15 ಗಂಟೆಯಲ್ಲಿ ಪಿರ್ಯಾದಿ ಸತೀಶ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ಈದಿನ ದಿನಾಂಕ: 03/03/2017 ರಂದು ಸಾಯಂಕಾಲ ಸುಮಾರು 5-15 ಗಂಟೆಯಲ್ಲಿ ಬೆಂಚೆಗ್ರಾಮಕ್ಕೆ ಹೋಗಿ ಮನೆಸಾಮಾನು ತರಲು ಕಾಟಮಾಳ ಗೇಟ್ ನಲ್ಲಿ ನಾನು ಮತ್ತು ನಮ್ಮ ಊರಿನ ಲೇಟ್ ಕದರಪ್ಪ ರವರ ಮಗ ನಾಗರಾಜು ಬಸ್ಸಿಗಾಗಿ ಕಾಯುತ್ತಾ ನಿಂತಿರುವಾಗ್ಗೆ, ಇದೇ ಸಮಯದಲ್ಲಿ ಸಿರಾ-ಮೈಸೂರು ರಸ್ತೆಯಲ್ಲಿ  ಸಿರಾ ಕಡೆಯಿಂದ ಒಂದು ಕಾರನ್ನು  ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ಶಿಡ್ಲೇಕೋಣ ಕಡೆಯಿಂದ ಸಿರಾ-ಮೈಸೂರು ರಸ್ತೆಯ ಪಕ್ಕದ ಎಡಬದಿಯಲ್ಲಿ ಕಾಟಮಾಳಕ್ಕೆ ಬರಲು ಕಾಟಮಾಳ ಗೇಟ್ ಹತ್ತಿರ ನಡೆದುಕೊಂಡು ಬರುತ್ತಿದ್ದ ನಮ್ಮ ಊರಿನ ಲೇಟ್ ಗಂಗಣ್ಣ ರವರ ಮಗ ಮೃತ್ಯುಂಜಯ ನಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದನು.  ಇದನ್ನು ನೋಡಿದ ನಾನು ಮತ್ತು ನಾಗರಾಜು ರವರು ಹತ್ತಿರ ಹೋಗಿ ನೋಡಲಾಗಿ ಈ ಅಪಘಾತದಿಂದ ಮೃತುಂಜಯನ ತಲೆಗೆ, ಮೈಕೈ ಕಾಲುಗಳಿಗೆ ಪೆಟ್ಟುಬಿದ್ದು ತಲೆ ಮತ್ತು ಬಾಯಿಯಲ್ಲಿ ರಕ್ತ ಬರುತ್ತಿತ್ತು.  ಮೃತ್ಯುಂಜಯನಿಗೆ ಅಪಘಾತಪಡಿಸಿದ ಕಾರನ್ನು ನೋಡಲಾಗಿ KA-03-AE-0939 ನೇ ನಂಬರಿನ ಟಾಟಾ ಇಂಡಿಕಾ ಕಾರಾಗಿತ್ತು.  ಕಾರಿನ ಚಾಲಕನ ಹೆಸರು ತಿಳಿಯಲಾಗಿ ಜಗದೀಶ, ಶೇಷನಹಳ್ಳಿ, ಗುಬ್ಬಿ ತಾಲ್ಲೂಕ್  ಅಂತ ತಿಳಿಸಿದ.  ನಾವುಗಳು ಮೃತ್ಯುಂಜಯ್ಯನನ್ನು ಉಪಚರಿಸುತ್ತಿರುವಾಗ್ಗೆ ಕಾರನ್ನು ಚಾಲಕ ತೆಗೆದುಕೊಂಡು ಹೋದನು.  ನಂತರ ನಾನು 108 ಆಂಬ್ಯುಲೆನ್ಸ್ ಗೆ ಪೋನ್ ಮಾಡಿ ಮೃತ್ಯುಂಜಯನನ್ನು ಸಿರಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ಸೇರಿಸಿ ಮೃತ್ಯುಂಜಯ್ಯನ ಸಂಬಂದಿಕರಿಗೆ ವಿಷಯ ತಿಳಿಸಿ ಠಾಣೆಗೆ ಬಂದು ಮೃತ್ಯುಂಜಯನಿಗೆ ಅಪಘಾತಪಡಿಸಿದ KA-03-AE-0939 ನೇ ನಂಬರಿನ ಟಾಟಾ ಇಂಡಿಕಾ ಕಾರಿನ ಚಾಲಕ ಜಗದೀಶ ನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಕೋರಿಕೊಂಡಿರುತ್ತೇನೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಸಿ.ಎಸ್.ಪುರ ಪೊಲೀಸ್ ಠಾಣೆ ಮೊ.ನಂ: 17/2017,ಕಲಂ:15(ಎ) 32(3) ಕೆ.ಇ ಆಕ್ಟ್

ದಿನಾಂಕ: 03.03.2017 ರಂದು ಸಂಜೆ 04.30 ಗಂಟೆ ಸಮಯದಲ್ಲಿ ಪಿ.ಎಸ್.ಐ ರವರಿಗೆ  ಬಂದ ಖಚಿತ ಮಾಹಿತಿಯ ಮೇರೆಗೆ ಠಾಣಾ ಸಿಬ್ಬಂದಿಗಳು ಹಾಗೂ ಪಂಚಾಯ್ತುದಾರರೊಂದಿಗೆ ಸಿ.ಎಸ್.ಪುರ ಪೊಲೀಸ್ ಠಾಣಾ ಸರಹದ್ದು, ಗುಬ್ಬಿ ತಾಲ್ಲೋಕು, ಸಿ.ಎಸ್.ಪುರ ಹೋಬಳಿ, ಚಿಕ್ಕ ಚೆಂಗಾವಿ ಗ್ರಾಮದ ಬುಕ್ಕಸಾಗರ – ಕೆ.ಜಿ.ಟೆಂಪಲ್ ರಸ್ತೆಯಲ್ಲಿ ಇರುವ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಅಸಹ್ಯವಾಗುವ ರೀತಿಯಲ್ಲಿ ಮದ್ಯಪಾನ ಮಾಡುತ್ತಿದ್ದ ಆಸಾಮಿಯ ಮೇಲೆ ದಾಳಿ ಮಾಡಿ ಹಿಡಿದುಕೊಂಡು, ಆರೋಪಿ ಬಗ್ಗೆ ವಿಚಾರ ಮಾಡಲಾಗಿ  ರವಿಕುಮಾರ್ ಬಿನ್ ಕರಿಯಪ್ಪ, 48 ವರ್ಷ, ಮಡಿವಾಳರು, ಅಂಗಡಿ ವ್ಯಾಪಾರ, ಕಾಳೇನಹಳ್ಳಿ, ಕಸಬಾ ಹೋಬಳಿ, ಗುಬ್ಬಿ  ತಾಲ್ಲೂಕು ಎಂತ ತಿಳಿಯಿತು.   ಆರೋಪಿಯು ಕೃತ್ಯಕ್ಕೆ ಬಳಸಿದ್ದ ಒಂದು ಪ್ಲಾಸ್ಟಿಕ್ ಲೋಟ, ಅರ್ಧ ನೀರು ಇರುವ ಒಂದು ಲೀಟರ್ ನೀರಿನ ಬಾಟಲ್, ಅರ್ಧ ಮದ್ಯ ಇರುವ 90 ಎಂ.ಎಲ್. ನ ಒರಿಜಿನಲ್ ಚಾಯ್ಸ್ ನ  ಟೆಟ್ರಾ ಪ್ಯಾಕ್ ಅನ್ನು ಹಾಗೂ ಹೊಡೆದಿಲ್ಲದ 90 ಎಂ.ಎಲ್. ನ ಒರಿಜಿನಲ್ ಚಾಯ್ಸ್ ನ  ಟೆಟ್ರಾ ಪ್ಯಾಕ್ ಅನ್ನು  ಅಮಾನತ್ತುಪಡಿಸಿಕೊಂಡು ಆರೋಪಿ ಮತ್ತು ಮಾಲುಗಳೊಂದಿಗೆ ಠಾಣೆಗೆ ಬಂದು ಪ್ರಕರಣ ದಾಖಲಿಸಿರುತ್ತೆ.

ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ 54/2017 ಕಲಂ 21(1) ಎಂ.ಎಂ.ಆರ್.ಡಿ ಆಕ್ಟ್, 44(1) ಕೆ.ಎಂ.ಎಂ.ಸಿ. ರೂಲ್ಸ್ & 379 ಐಪಿಸಿ.

ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀ ಕೆ.ಕಾಂತರಾಜ್ ರವರು ದಿನಾಂಕ:03/03/2017 ರಂದು ಬೆಳಿಗ್ಗೆ 8-00 ಗಂಟೆಯಲ್ಲಿ ಠಾಣಾ ಸಿಬ್ಬಂದಿಯಾದ ಪಿ.ಸಿ.183, ಪಿಸಿ 533, ಪಿಸಿ 228 ರವರೊಂದಿಗೆ, ಸರ್ಕಾರಿ ವಾಹನದಲ್ಲಿ ಠಾಣಾ ಸರಹದ್ದು ಕುಮ್ಮಂಜಿಪಾಳ್ಯ ಕಡೆ ಗಸ್ತು ಮಾಡಿಕೊಂಡು ಕಂಬತ್ತನಹಳ್ಳಿ ಕಡೆ ಹೋಗುತ್ತಿರುವಾಗ್ಗೆ ಎದರುಗಡೆಯಿಂದ ಅಂದರೆ ಒಂದು ಟ್ರಾಕ್ಟರ್ ಬಂದಿದ್ದು, ಅನುಮಾನ ಬಂದು ಸದರಿ ಟ್ರಾಕ್ಟರ್‌ನ್ನು ತಡೆದು ಚಾಲಕನಿಗೆ ನಿಲ್ಲುವಂತೆ ಸೂಚನೆ ನೀಡಿದಾಗ ಸದರಿ ಟ್ರಾಕ್ಟರ್ ಚಾಲಕ ತನ್ನ ಟ್ರಾಕ್ಟರ್‌ನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಇಳಿದು ಪರಾರಿಯಾಗಿದ್ದು, ಟ್ರಾಕ್ಟರ್ ಮತ್ತು ಟ್ರೈಲರ್‌ನ್ನು ಪರಿಶೀಲಿಸಿ ನಂಬರ್ ನೋಡಲಾಗಿ KA-06-TB-7381ನೇ ಟ್ರಾಕ್ಟರ್ ಮತ್ತು KA-06-TB-7382ನೇ ಟ್ರೈಲರ್ ಆಗಿದ್ದು ಟ್ರೈಲರ್‌ನಲ್ಲಿ ಏನಿದೆ ಎಂದು ನೋಡಲಾಗಿ ಬಾಡಿಯಲ್ಲಿ ಮರಳು ತುಂಬಿದ್ದು ಕಂಡುಬಂದಿದ್ದು ಟ್ರಾಕ್ಟರ್‌ನಲ್ಲಿ ಅಕ್ರಮವಾಗಿ ಎಲ್ಲಿಂದಲೋ ಕಳುವಿನಿಂದ ಮರಳು ತುಂಬಿಕೊಂಡು ಸರ್ಕಾರಕ್ಕೆ ಯಾವುದೇ ರಾಜಧನವನ್ನು ಕಟ್ಟದೇ, ಸರ್ಕಾರದಿಂದ ಯಾವುದೇ ಪರವಾನಗಿ ಇಲ್ಲದೆ ತೆಗೆದುಕೊಂಡು ಹೋಗಿ ಹೆಚ್ಚಿನ ಹಣಕ್ಕಾಗಿ ಮಾರಾಟ ಮಾಡುವ ಸಲುವಾಗಿ ಸಾಗಾಟದಲ್ಲಿ ತೊಡಗಿದ್ದ ಮರಳು ಸಮೇತ ಟ್ರಾಕ್ಟರ್ & ಟ್ರೈಲರ್‌ನ್ನು ವಶಕ್ಕೆ ತೆಗೆದುಕೊಂಡು ಟ್ರಾಕ್ಟರ್ ಚಾಲಕ ಮತ್ತು ಮಾಲೀಕರ ವಿರುದ್ದ ಪ್ರಕರಣ ದಾಖಲು ಮಾಡಲು ಸ್ಥಳದಲ್ಲಿ ಸ್ವತಹ ವರದಿ ತಯಾರಿಸಿ ಜೊತೆಯಲ್ಲಿದ್ದ ಪಿ.ಸಿ.183 ಗೋಮುನಿಯಪ್ಪ ರವರ ಮೂಲಕ  ಕಳುಹಿಸಿದ ದೂರನ್ನು ಬೆಳಿಗ್ಗೆ 9-00 ಗಂಟೆಗೆ ಪಡೆದು ಪ್ರಕರಣ ದಾಖಲಿಸಿದೆ.

ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ 55/2017 ಕಲಂ 21(1) ಎಂ.ಎಂ.ಆರ್.ಡಿ ಆಕ್ಟ್, 44(1) ಕೆ.ಎಂ.ಎಂ.ಸಿ. ರೂಲ್ಸ್ & 379 ಐಪಿಸಿ.

ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀ ಕೆ.ಕಾಂತರಾಜ್ ರವರು ಈ ದಿನ ದಿನಾಂಕ:03/03/2017 ರಂದು ಬೆಳಿಗ್ಗೆ 11-45 ಗಂಟೆ ಸಮಯದಲ್ಲಿ ಠಾಣೆಯಲ್ಲಿರುವಾಗ ತುಮಕೂರು ಕಡೆಗೆ ಒಂದು ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿರುತ್ತಾರೆಂತಾ ಬಾತ್ಮೀ ಬಂದ ಮೇರೆಗೆ ಪಿಸಿ 936 ರವರನ್ನು ಕರೆದುಕೊಂಡು ತುಮಕೂರು-ಮಧುಗಿರಿ ರಸ್ತೆಯಲ್ಲಿ ಮದ್ಯಾಹ್ನ 12-00 ಗಂಟೆ ಸಮಯದಲ್ಲಿ ತುಮಕೂರು-ಮಧುಗಿರಿ ರಸ್ತೆಯ ಸಿದ್ದಗಿರಿ ನಗರದ ಸಮೀಪ ಹೋಗುತ್ತಿರುವಾಗ್ಗೆ ಯಲ್ಲಾಪುರ ಕಡೆಯಿಂದ ಒಂದು ಲಾರಿ ಬಂದಿದ್ದು, ಲಾರಿಯನ್ನು ತಡೆದು ಚಾಲಕನಿಗೆ ನಿಲ್ಲುವಂತೆ ಸೂಚನೆ ನೀಡಿದಾಗ ಸದರಿ ಲಾರಿ ಚಾಲಕ ಲಾರಿಯನ್ನು ರಸ್ತೆ ಬದಿ ನಿಲ್ಲಿಸಿ ಇಳಿದು ಪರಾರಿಯಾಗಿದ್ದು, ಲಾರಿಯನ್ನು ಪರಿಶೀಲಿಸಿ ನಂಬರ್ ನೋಡಲಾಗಿ KA-34-A-6857 ನೇ ಲಾರಿಯಾಗಿದ್ದು ಆಗಿದ್ದು ಬಾಡಿಯಲ್ಲಿ ಮರಳು ತುಂಬಿದ್ದು ಕಂಡುಬಂದಿದ್ದು ಲಾರಿಯಲ್ಲಿ ಅಕ್ರಮವಾಗಿ ಎಲ್ಲಿಂದಲೋ ಕಳುವಿನಿಂದ ಮರಳು ತುಂಬಿಕೊಂಡು ಸರ್ಕಾರಕ್ಕೆ ಯಾವುದೇ ರಾಜಧನವನ್ನು ಕಟ್ಟದೇ, ಸರ್ಕಾರದಿಂದ ಯಾವುದೇ ಪರವಾನಗಿ ಇಲ್ಲದೆ ತೆಗೆದುಕೊಂಡು ಹೋಗಿ ಹೆಚ್ಚಿನ ಹಣಕ್ಕಾಗಿ ಮಾರಾಟ ಮಾಡುವ ಸಲುವಾಗಿ ಸಾಗಾಟದಲ್ಲಿ ತೊಡಗಿದ್ದ ಮರಳು ಸಮೇತ ಲಾರಿಯನ್ನು ವಶಕ್ಕೆ ತೆಗೆದುಕೊಂಡು ಲಾರಿ ಚಾಲಕ ಮತ್ತು ಮಾಲೀಕರ ವಿರುದ್ದ ಪ್ರಕರಣ ದಾಖಲು ಮಾಡಲು ಸ್ಥಳದಲ್ಲಿ ಸ್ವತಹ ವರದಿ ತಯಾರಿಸಿ ಜೊತೆಯಲ್ಲಿದ್ದ  ಪಿ.ಸಿ.936 ವೆಂಕಟೇಶಪ್ಪ ರವರ ಮೂಲಕ ಕಳುಹಿಸಿದ ದೂರನ್ನು ಪಡೆದು ಪ್ರಕರಣ ದಾಖಲಿಸಿದೆ.


Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 84 guests online
Content View Hits : 212390