lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ : 17-03-2018 -: ಚೂರಿಯಿಂದ ಇರಿದು ದರೋಡೆ ಮಾಡುತ್ತಿದ್ದ ಆರೋಪಿಗಳ... >> ಪ್ರತಿಕಾ ಪ್ರಕಟಣೆ. ದಿ: 16/03/18 ಮೂವರು ಮನೆ ಕಳ್ಳರ ಬಂಧನ, 5 ಲಕ್ಷ ಮೌಲ್ಯದ... >> ಪತ್ರಿಕಾ ಪ್ರಕಟಣೆ ದಿನಾಂಕ: 15-03-2018 ಎ.ಟಿ.ಎಂ ನಲ್ಲಿ ಹಣ ಡ್ರಾ ಮಾಡಿಕೊಡುವುದಾಗಿ ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ ದಿ: 15-03-2018 ತುಮಕೂರು ಜಿಲ್ಲಾ ಪೊಲೀಸ್... >> ಪತ್ರಿಕಾ ಪ್ರಕಟಣೆ. ದಿನಾಂಕ. 07.03.2018. ಕೊಡಗೇನಹಳ್ಳಿ ಠಾಣಾ ಸರಹದ್ದು ಸಿಂಗನಹಳ್ಳಿ... >> ಪತ್ರಿಕಾ ಪ್ರಕಟಣೆ ದಿನಾಕ : 27/02/2018 ಒಂಟಿ ಮನೆ ಡಕಾಯಿತಿ ಮಾಡುತ್ತಿದ್ದ ಕುಖ್ಯಾತ... >> : ಪತ್ರಿಕಾ ಪ್ರಕಟಣೆ : : ದಿನಾಂಕ: 24-02-2018 :     ದಿನಾಂಕ 19-02-2018 ರಂದು ಪಿರ್ಯಾದಿ ಲೀಲಾವತಿ... >> ಪತ್ರಿಕಾ ಪ್ರಕಟಣೆ ದಿನಾಂಕ:14-02-2018. : : ಇಬ್ಬರು ಬ್ಯಾಂಕ್ ಕಳ್ಳರ ಬಂಧನ : 20,11,950=00 ಮಾಲು ಜಪ್ತು : :... >> ಜಿಲ್ಲಾ ಪೊಲೀಸ್ ಕಛೇರಿ, ತುಮಕೂರು. ದಿ:12.02.2018 :  ಪತ್ರಿಕಾ ಪ್ರಕಟಣೆ  : ದಿನಾಂಕ 12.02.2018... >> ಪತ್ರಿಕಾ ಪ್ರಕಟಣೆ. ದಿನಾಂಕ: 12/02/2018 ರಂದು ತುಮಕೂರು ಜಿಲ್ಲೆ, ತುರುವೇಕೆರೆ ಪೊಲೀಸ್ ಠಾಣೆಯ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< March 2017 >
Mo Tu We Th Fr Sa Su
    1 2 4 5
6 7 8 9 10 11 12
13 14 15 16 17 18 19
20 21 22 23 24 25 26
27 28 29 30 31    
Friday, 03 March 2017
Crime Incidents 03-03-17

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ; 40/2017 ಕಲಂ; 379 ಐಪಿಸಿ ರೆ/ವಿ 21(1), 4(1), ಎಂ ಎಂ ಆರ್ ಡಿ ಆಕ್ಟ್-1957 ರೆ/ವಿ 44(1) ಕೆ ಎಂ ಎಂ ಸಿ ಆರ್-1994.

ದಿನಾಂಕ-01-03-2017 ರಂದು ಬೆಳಿಗ್ಗೆ 8-15 ಗಂಟೆ ಸಮಯದಲ್ಲಿ ಹುಲಿಯೂರುದುರ್ಗ ಪೊಲೀಸ್ ಠಾಣಾ ಎಎಸ್‌ಐ-ಶ್ರೀನಿವಾಸ್‌. ಹೆಚ್‌ ರವರು ಠಾಣಾ ಪಿಸಿ-426 ರಂಗಸ್ವಾಮಿ ರವರ ಮುಖೇನ ಕಳುಹಿಸಿಕೊಟ್ಟ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ-01-03-2017 ರಂದು ನಾನು, ಪಿಸಿ-426 ರಂಗಸ್ವಾಮಿ ಮತ್ತು ಪಿಸಿ-935 ರಾಜಣ್ಣ ರವರನ್ನು ಕರೆದುಕೊಂಡು ಇಲಾಖಾ ಜೀಪ್‌ ನಂ; ಕೆಎ-06-ಜಿ-352 ರಲ್ಲಿ ಬೆಳಗಿನ ಗಸ್ತು ಮಾಡುತ್ತಿರುವಾಗ್ಗೆ, ಬೆಳಿಗ್ಗೆ 6-00 ಗಂಟೆ ಸಮಯದಲ್ಲಿ ಪೋನ್‌ ಮೂಲಕ ಬಂದ ಖಚಿತ ಮಾಹಿತಿ ಏನೆಂದರೆ, ಚಿಕ್ಕಮಾವತ್ತೂರು ಗ್ರಾಮದ ಶಿವಕುಮಾರ @ ಕುಮಾರ ಎಂಬುವವನು ಚೌಟರ ಕೆರೆಯಲ್ಲಿ ಅವರ ಟ್ರಾಕ್ಟರ್‌ನಲ್ಲಿ ಅಕ್ರಮವಾಗಿ ಮರಳನ್ನು ತುಂಬುತ್ತಿದ್ದು ಸದರಿ ಮಾಹಿತಿಯಾಧರಿಸಿ ನಾನು ಬೆಳಿಗ್ಗೆ 6-30 ಗಂಟೆಗೆ ಸಿಬ್ಬಂದಿಯೊಂದಿಗೆ ಸರ್ಕಾರಿ ಜೀಪಿನಲ್ಲಿ ಹೋಗಿ ಚೌಟರ ಕರೆಯಲ್ಲಿ ಮರೆಯಲ್ಲಿನಿಂತು ನೋಡಲಾಗಿ ಆಸಾಮಿಗಳು ಕೆರೆಯಲ್ಲಿ ಟ್ರಾಕ್ಟರ್‌ಗೆ ಮರಳನ್ನು ತುಂಬುತ್ತಿರುವುದು ಕಂಡು ಬಂದಿತು. ನಂತರ ನಾವು ಆಸಾಮಿಗಳನ್ನು ಮತ್ತು ಟ್ರಾಕ್ಟರ್‌ನ್ನು ಸುತ್ತುವರೆದು ಹಿಡಿಯುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಟ್ರಾಕ್ಟರ್‌ನ್ನು ಅಲ್ಲಿಯೇ ಬಿಟ್ಟು ಓಡಿಹೋಗುವಾಗ್ಗೆ, ಒಬ್ಬನನ್ನು ಹಿಡಿದು ಹೆಸರು ವಿಳಾಸವನ್ನು ಕೇಳಲಾಗಿ ಶಿವಕುಮಾರ @ ಕುಮಾರ ಬಿನ್‌ ರುದ್ರಯ್ಯ, 38 ವರ್ಷ, ವಕ್ಕಲಿಗರು, ಟ್ರಾಕ್ಟರ್ ಚಾಲಕ, ಚಿಕ್ಕಮಾವತ್ತೂರು ಎಂತ ತಿಳಿಸಿದನು. ಸದರಿ ಆಸಾಮಿಯನ್ನು ಮರಳು ತುಂಬಲು ಪರವಾನಗಿ ಇರುವ ಬಗ್ಗೆ ವಿಚಾರಮಾಡಲಾಗಿ ಅವನ ಬಳಿಯಲ್ಲಿ ಯಾವುದೇ ಪರವಾನಗಿ ಇಲ್ಲದಿರುವುದು ಕಂಡು ಬಂದಿತು. ನಂತರ ಟ್ರಾಕ್ಟರ್‌ನ್ನು ಪರಿಶೀಲಿಸಲಾಗಿ ನಂಬರ್‌ ಪ್ಲೇಟ್‌ ಇರುವುದಿಲ್ಲ. ಟ್ರಾಕ್ಟರ್‌ ಮಹೇಂದ್ರ ಸರ್‌ ಪಂಚ್‌ 47ಎಸ್‌ಡಿಐ ಕಂಪನಿಯದಾಗಿದ್ದು, ENGINE NO; ZJJS01097, CHACISS NO; ZJJS01097 ಅಂತ ಬರೆದಿರುತ್ತದೆ. ಟ್ರಾಕ್ಟರ್ ಟ್ರೇಲರ್‌ ನಲ್ಲಿ ಅರ್ಧಕ್ಕಿಂತ ಕಡಿಮೆ ಪ್ರಮಾಣ ಮರಳನ್ನು ತುಂಬಿರುತ್ತೆ. ಟ್ರಾಕ್ಟರ್‌ ಇಂಜಿನ್‌ ಕೆಂಪು ಬಣ್ಣದ್ದಾಗಿದ್ದು ಟ್ರೇಲರ್‌ ನೀಲಿ ಬಣ್ಣದ್ದಾಗಿರತ್ತೆ. ಈ ಮೇಲ್ಕಂಡ ಟ್ರಾಕ್ಟರ್‌,ಟ್ರೈಲರ್‌ ಚಾಲಕ ಮತ್ತು ಮಾಲೀಕ ಸೇರಿಕೊಂಡು ಸರ್ಕಾರದಿಂದ ಯಾವುದೇ ಪರವಾನಗಿಯನ್ನು ಪಡೆಯದೇ ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕಳ್ಳತನದಿಂದ ಚೌಡರ ಕೆರೆಯಲ್ಲಿ ಮರಳನ್ನು ತೆಗದು ಟ್ರಾಕ್ಟರ್‌ನಲ್ಲಿ ತುಂಬಿಕೊಂಡು ಸಾಗಾಣಿಕೆಯಲ್ಲಿ ತೊಡಗಿರುತ್ತಾರೆ. ಆದ್ದರಿಂದ ಮೇಲ್ಕಂಡ ಟ್ರಾಕ್ಟರ್‌ ಚಾಲಕ ಮತ್ತು  ಮಾಲೀಕನ ಮೇಲೆ ಪ್ರಕರಣ ದಾಖಲು ಮಾಡಲು ಸೂಚಿಸಿ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ.   

ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ 53/2017 ಕಲಂ 279 ಐಪಿಸಿ.

ದಿನಾಂಕ:02/03/2017 ರಂದು ಮದ್ಯಾಹ್ನ 3-00 ಗಂಟೆಗೆ ಪಿರ್ಯಾದುದಾರರಾದ ಮುನೀರ್ ಅಹಮದ್ ಬಿನ್ ಅನ್ಸರ್, ದೇವನಹಳ್ಳಿ, ಬೆಂಗಳುರು ಗ್ರಾಮಾಂತರ ಜಿಲ್ಲೆ.  ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ತಮ್ಮ ಅಣ್ಣ ದಾದಾಪೀರ್ ರವರ ಬಾಬ್ತು KA-19-A-1830 ನೇ ಕ್ಯಾಂಟರ್‌ನಲ್ಲಿ ಚಾಲಕ ಮೈಲಪ್ಪ ಹಾಗೂ ಕ್ಲೀನರ್ ಶಹಬಾಜ್ ರವರು ದಿನಾಂಕ:01/03/2017ರಂದು ದಾವಣಗೆರೆಯಲ್ಲಿ ಮೆಕ್ಕೆಜೋಳವನ್ನು ಲೋಡ್ ಮಾಡಿಕೊಂಡು ನೆಲಮಂಗಲಕ್ಕೆ ಎನ್ ಹೆಚ್ 48 ರಸ್ತೆಯಲ್ಲಿ ತುಮಕೂರು ಸಮೀಪ ರಂಗಾಪುರ ಬಳಿ ರಾತ್ರಿ ಹೋಗುವಾಗ ಟೈರ್ ಪಂಕ್ಚರ್ ಆಗಿದ್ದರಿಂದ ರಾತ್ರಿ 11-30 ಗಂಟೆ ಸಮಯದಲ್ಲಿ ರಸ್ತೆಯ ಎಡಬದಿಯಲ್ಲಿ ಕ್ಯಾಂಟರ್ ನಿಲ್ಲಿಸಿ ಟೈರ್ ಬದಲಾಯಿಸುತ್ತಿರುವಾಗ್ಗೆ ಶಿರಾ ಕಡೆಯಿಂದ ಬಂದ TN-29-AS-9574ನೇ ಲಾರಿ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಮ್ಮ ವಾಹನಕ್ಕೆ ಡಿಕ್ಕಿಹೊಡೆಸಿದ್ದರಿಂದ ಕ್ಯಾಂಟರ್ ವಾಹನದ ಹಿಂಭಾಗ ಜಖಂಗೊಂಡು ಸ್ವಲ್ಪ ಮೆಕ್ಕೆಜೋಳ ಬಿದ್ದಿರುತ್ತದೆ. ಎಂದು ದೂರವಾಣಿ ಮೂಲಕ ತಿಳಿಸಿದ್ದನ್ನು ಈ ದಿನ ಸ್ಥಳಕ್ಕೆ ಬಂದು ನೋಡಿ ಅಪಘಾತ ಉಂಟು ಮಾಡಿರುವ TN-29-AS-9574ನೇ ಲಾರಿ ಚಾಲಕ ಪಶುಪತಿ ರವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿದೆ.

ಕಳ್ಳಂಬೆಳ್ಳ ಪೊಲೀಸ್ ಠಾಣಾ ಮೊ.ನಂ. 52/2017 ಕಲಂ: 279, 337 IPC

ದಿನಾಂಕ:02/03/2017 ರಂದು ರಾತ್ರಿ 8-30 ಗಂಟೆ ಈ ಕೇಸಿನ ಪಿರ್ಯಾದಿ ಅಪ್ಪಾಸಾಬ್ ಬಿನ್ ಸಿದ್ದರಾಮೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ಈ ದಿನ ದಿನಾಂಕ02/03/2017 ರಂದು ನನಗೆ ವಾರದೆ ರಜೆ ಇರುವುದರಿಂದ ನನ್ನ ಸ್ವಂತ ಗ್ರಾಮಕ್ಕೆ ಹೋಗಿ ಬರೋಣ ಅಂತ ಈ ದಿನ ಮದ್ಯಾಹ್ನ 3-10 ನಿಮಿಷಕ್ಕೆ ಬೆಂಗಳೂರಿನ ಕೆ ಎಸ್ ಆರ್ ಟಿ ಸಿ ಬಸ್ ಸ್ಟಾಂಡನಲ್ಲಿ ಕೆಎ-28-ಎಪ್-2123 ನೇ ಬಸ್ಸಿಗೆ ಹತ್ತಿಕೋಂಡು ಎನ್ ಹೆಚ್ 48 ರಸ್ತೆಯಲ್ಲಿ ಬೆಂಗಳೂರು ಕಡೆಯಿಂದ ಶಿರಾ ಮಾರ್ಗವಾಗಿ ಎನ್ ಹೆಚ್ 48 ರಸ್ತೆ ಈಡಿಗರ ದಾಸರಹಳ್ಳಿ ಗೇಟಿನ ಸಮೀಪ ಸಂಜೆ ಸುಮಾರು 6-00 ಗಂಟೆ ಸಮಯಕ್ಕೆ  ನಾನು ಕುಳಿತ್ತಿದ್ದ ಬಸ್ಸಿನ ಚಾಲಕ ಚಾಲನೆ ಮಾಡಿಕೊಂಡು ಬಸ್ಸಿನಲ್ಲಿ ಕೆಲ ಪ್ರಯಾಣಿಕರು ಇದ್ದು ಬಸ್ಸಿನ ಎಡ ಮಗ್ಗಲಿನಲ್ಲಿ ಒಬ್ಬ ಆಟೊ ಚಾಲಕನು ತನ್ನ ಆಟೊವನ್ನು ಅತೀ ಜೋರಾಗಿ ಅಜಾಗರುಕತೆಯಿಂದ ಒಡಿಸಿಕೊಂಡು ಹೋಗಿ ಆಟೊ ಚಾಲಕನು ಆಟೊವನ್ನು ಉರುಳಿಸಿ ಬಿದ್ದ ಆಟೊ ಉರುಳಿ ಬಿದ್ದ ಶಬ್ದ ಕೇಳಿ ನಾವು ಪ್ರಯಾಣಿಸುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಚಾಲಕನು ಸ್ವಲ್ಪ ಮುಂದೆ ಹೋಗಿ ಬಸ್ ನಿಲ್ಲಿಸಿ ನಾನು ಪ್ರಯಾಣಿಸುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಚಾಲಕ ಮತು ಬಸ್ಸಿನ ನಿರ್ವಾಹಕರು ಆದ ಜಿ ಗಜಕೋಶ ಮತು ಕೆಲ ಪ್ರಯಾಣಿಕರು ಪಲ್ಟಿ ಹೊಡಿದಿದ್ದ ಆಟೊ ಚಾಲಕನನ್ನು ಮೆಲೆ ಎತ್ತಿ ಉಪಚರಿಸಿದವು ಆಟೊ ಚಾಲಕನಿಗೆ ಎರಡು ಮೊಣ ಕೈ ಎರಡು ಕಾಲು ಮಂಡಿಗಳಿಗೆ ತರೆಚಿದ ಗಾಯಗಳಾಗಿದ್ದು ಈತನನ್ನು ಕಳ್ಳಂಬೆಳ್ಳ ಸರ್ಕಾರಿ ಆಸ್ಪತ್ರೆಗೆ ತೋರಿಸಿರುತ್ತೆ. ಮತ್ತು ಮದ್ಯಪಾನ ಮಾಡಿದಂತೆ ಕಂಡುಬಂದಿರುತ್ತೆ. ಆಟೊ ನಂಬರ್ ನೊಡಲಾಗಿ ಕೆಎ-02-ಎಸಿ-7724 ನೇ ನಂಬರಿನ ಆಟೊ ಆಗಿತ್ತು ಆಟೊ ಮುಂಬಾಗದ ಗ್ಲಾಸ್ ಆಟೊದಿಂದ ಕೇಳಗೆ ಬಿದ್ದಿರುತ್ತೆ ಆಟೊ ಚಾಲಕನ ಹೆಸರು ಕೇಳಲಾಗಿ ವೆಂಕಟೇಶ ತಂದೆ ತಿಮ್ಮಯ್ಯ ಅಂತ ತಿಳಿಸಿದ ಅಪಘಾತ ಪಡಿಸಿದ ಕೆಎ-02-ಎಸಿ-7724 ನೇ ಆಟೊ ಚಾಲಕ ವೆಂಕಟೇಶ ಮೇಲೆ ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಜಯನಗರ ಪೊಲೀಸ್ ಠಾಣಾ ಯುಡಿಆರ್ ನಂ. 07/2017 ಕಲಂ 174 ಸಿಆರ್‌ಪಿಸಿ .

ದಿನಾಂಕ: 02-03-2017 ರಂದು ರಾತ್ರಿ 7-30 ಗಂಟೆಗೆ ತುಮಕೂರು ಜಿಲ್ಲೆ ಮದುಗಿರಿ ಟೌನ್‌ ಕೆ.ಹೆಚ್.ರಸ್ತೆಯಲ್ಲಿ ಅನುಪಮ ಕ್ಲೀನಿಕ್ ಇಟ್ಟುಕೊಂಡಿರುವ ಡಾ|| ಟಿ.ಡಿ. ಕಾಮರಾಜು ಬಿನ್ ಲೇ|| ಸಿ.ದೊಡ್ಡಪಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ಮುದ್ರಿತ ದೂರಿನ ಅಂಶವೇನೆಂದರೆ,  ನಮ್ಮ ತಂದೆ ಲೇ|| ಸಿ.ದೊಡ್ಡಪ್ಪಯ್ಯ ಹಾಗೂ ತಾಯಿ ಲೇಟ್‌ ಜಯಲಕ್ಷ್ಮಮ್ಮ ರವರಿಗೆ 3 ಜನರು ಗಂಡು ಹಾಗೂ 3 ಜನ ಹೆಣ್ಣು ಮಕ್ಕಳಿರುತ್ತೇವೆ, ನನ್ನ ಕಿರಿಯ ತಮ್ಮ ಟಿ.ಡಿ. ಕೃಷ್ಣ ತುಮಕೂರು ಟೌನ್‌ ಸಪ್ತಗಿರಿ ಬಡಾವಣೆಯಲ್ಲಿ ಸ್ವಂತ ಮನೆ ಮಾಡಿಕೊಂಡು ಮೆಡಿಕಲ್‌ ರೆಪ್ರಸೆಂಟಿಟಿವ್ ಕೆಲಸ ಮಾಡಿಕೊಂಡು ಆತನ ಹೆಂಡತಿ ವಿಜಯ ಹಾಗು ಮಗ ಪ್ರೀತಮ್ ಜೊತೆ ಅನ್ಯೋನ್ಯವಾಗಿ ವಾಸವಾಗಿದ್ದರು. ನನ್ನ ತಮ್ಮ ಟಿ.ಡಿ. ಕೃಷ್ಣ ಇತ್ತೀಚೆಗೆ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಈತನಿಗೆ ತುಮಕೂರು ಮತ್ತು ಬೆಂಗಳೂರು ಖಾಸಗಿ ವೈದ್ಯರ ಬಳಿ ಚಿಕಿತ್ಸೆ ಕೊಡಿಸುತ್ತಿದ್ದರು. ದಿನಾಂಕ: 02/03/2017 ರಂದು ಮದ್ಯಾಹ್ನ ಸುಮಾರು 3.00 ಗಂಟೆಯ ಸಮಯದಲ್ಲಿ ನನ್ನ ತಂಗಿ ಡಾ|| ಅನುಪಮ ತುಮಕೂರಿನಿಂದ ಪೋನ್‌ ಮಾಡಿ ನಮ್ಮ ಸಹೋದರ ಟಿ.ಡಿ ಕೃಷ್ಣ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯಲ್ಲಿ ಯಾವುದೋ ವಿಷ ಸೇವಿಸಿ ಮನೆಯ ಹತ್ತಿರ ವಾಂತಿ ಮಾಡಿಕೊಳ್ಳುತ್ತಿದ್ದಾರಂತ ಪಕ್ಕದ ಮನೆಯವರು ನನಗೆ ಮದ್ಯಾಹ್ನ ಸುಮಾರು 2.15 ಗಂಟೆಯಲ್ಲಿ ವಿಚಾರ ತಿಳಿಸಿದ್ದರಿಂದ ನಾನು ಟಿ.ಡಿ. ಕೃಷ್ಣರವರ ಮನೆಯ ಹತ್ತಿರ ಹೋಗಿ ಪ್ರಜ್ನಾಹೀನರಾಗಿದ್ದ ಟಿ.ಡಿ ಕೃಷ್ಣಾರವರನ್ನು ತುಮಕೂರಿನ ಭಾರತಿ ನರ್‌ಸಿಂಗ್‌ಹೋಂಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗುತ್ತಿದ್ದೇನೆಂತ ವಿಚಾರ ತಿಳಿಸಿದರು.  ಪುನಃ ಸಾಯಂಕಾಲ 5.10 ಗಂಟೆಯ ಸಮಯದಲ್ಲಿ ನನ್ನ ತಂಗಿ ಡಾ|| ಅನುಪಮ ಮತ್ತೆ ಫೋನ್ ಮಾಡಿ ಭಾರತಿ ನರಸಿಂಗ್‌ ಹೋಂನ ವೈದ್ಯರ ಸಲಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದಾಗ ನೆಲಮಂಗಳ ಸಮೀಪ ಮಾರ್ಗ ಮದ್ಯೆ ನನ್ನ ಸಹೋದರ ಮೃತಪಟ್ಟಿರುತ್ತಾರಂತೆ ವಾಪಸ್‌ ತುಮಕೂರಿಗೆ ತರುತ್ತಿದ್ದೇವೆಂತ ವಿಚಾರ ತಿಳಿಸಿದ್ದರಿಂದ ನಾನು ತಕ್ಷಣ ಮದುಗಿರಿಯಿಂದ ತುಮಕೂರಿಗೆ ಬಂದು ನನ್ನ ತಮ್ಮ ಟಿ.ಡಿ ಕೃಷ್ಣ ರವರ ಶವವನ್ನು  ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆ ಶವಾಗಾರದಲ್ಲಿ ಇರಿಸಿ ಪೊಲೀಸ್ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ. ನನ್ನ ತಮ್ಮ ಮಾನಸಿಕವಾಗಿ ಅಸ್ವಸ್ಥನಿದ್ದು ಈತ ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೇಗೊಂಡು ಸಾಯಬೇಕೆಂಬ ತನ್ಮೂಲಕ ತಾನೆ ಯಾವುದೋ ವಿಷ ಸೇವನೆ ಮಾಡಿ ಮೃತಪಟ್ಟಿರುತ್ತಾನೆ.  ನನ್ನ ತಮ್ಮನ ಸಾವಿನ ಬಗ್ಗೆ ಬೇರೆ ಯಾವುದೇ ಅನುಮಾನವಿರುವುದಿಲ್ಲ. ತಾವು ಶವಗಾರದ ಬಳಿಗೆ ಭೇಟಿ ನೀಡಿ ಮುಂದಿನ ಕ್ರಮ ಜರುಗಿಸಿ ನನ್ನ ತಮ್ಮನ ಸಾವಿನ ಸ್ಪಸ್ಟ ಕಾರಣವನ್ನು ವೈದ್ಯರಿಂದ ತಿಳಿದು ಅಂತಿಮ ಸಂಸ್ಕಾರ ಮಾಡಲು ಅನುವು ಮಾಡಿಕೊಡಲು ಕೋರಿ ನೀಡಿದ ಪಿರ್ಯಾದು ಅಂಶವಾಗಿರುತ್ತೆ.

ಬಡವನಹಳ್ಳಿ ಪೊಲೀಸ್ ಠಾಣಾ ಯು ಡಿ ಆರ್‌‌ ನಂ 04/2017 ಕಲಂ 174 ಸಿ ಆರ್‌ ಪಿ ಸಿ

ದಿನಾಂಕ:02-03-2017 ರಂದು ಬೆಳಗ್ಗೆ 11:00 ಗಂಟೆಗೆ ರವಿಕುಮಾರ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ  ದಿನಾಂಕ;02-03-2017 ರಂದು ಬೆಳಗ್ಗೆ ಸುಮಾರು 07:30 ಗಂಟೆ ಸಮಯದಲ್ಲಿ ನನ್ನ ತಾಯಿ ಗಂಗಮ್ಮ ರವರು ನಮ್ಮ  ಗ್ರಾಮದ ಬಸವನ  ಕೆರೆಗೆ ಬಟ್ಟೆ ತೊಳೆಯಲು  ಹೋಗಿದ್ದು , ಬಟ್ಟೆ ತೊಳೆಯುವಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ  ಮುಳುಗುತ್ತಾ ಕೂಗಿಕೊಂಡಾಗ ಅದೇ ಸಮಯದಲ್ಲಿ   ಕೆರೆಯಲ್ಲಿ  ದನಗಳಿಗೆ  ಮೈ ತೊಳೆಯುತ್ತಿದ್ದ  ನನ್ನ ಚಿಕ್ಕಪ್ಪ  ಕೂಗಿಕೊಂಡ ಶಬ್ದದಿಂದ  ಹತ್ತಿರ ಹೋಗಿ ನೋಡಲಾಗಿ ನೀರಿನಲ್ಲಿ ಮುಳುಗಿತ್ತಿದ್ದವರನ್ನು ಎಳೆದುಕೊಳ್ಳು ಈಜು  ಬಾರದ ನನ್ನ ಚಿಕ್ಕಪ್ಪ ಮನೆಯ ಬಳಿಗೆ ಬಂದು ವಿಚಾರ ತಿಳಿಸಿದರು. ನಾನು ಮತ್ತು ಸಿದ್ದಪ್ಪ ಹೋಗಿ ನೋಡಲಾಗಿ ನನ್ನ ತಾಯಿ ನೀರಿನಲ್ಲಿ ಮುಳುಗಿ  ಮರಣ ಹೊಂದಿದ್ದರು.  ಮರಣ ಹೊಂದಿದ್ದ ನನ್ನ ತಾಯಿಯನ್ನು  ನೀರಿನಿಂದ ಮೇಲಕ್ಕೆ  ತೆಗೆದು ಕೆರೆಯ ಪಕ್ಕದಲ್ಲಿ ಮಲಗಿಸಿರುತ್ತೆ.  ನನ್ನ ತಾಯಿಯ ಸಾವಿನಲ್ಲಿ ಬೇರೆ ಅನುಮಾನ ಇರುವುದಿಲ್ಲ.  ತಾವು  ಸ್ಥಳಕ್ಕೆ ಬಂದು ಕಾನೂನು ರೀತಿ ಕ್ರಮ ಜರುಗಿಸಿ ಶವ ಸಂಸ್ಕಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಇತ್ಯಾದಿಯಾಗಿ ನೀಡಿದ ಪಿರ್ಯಾದು ಅಂಶವಾಗಿರುತ್ತೆ.

 

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 45 guests online
Content View Hits : 258550